
ಒಮ್ಮೆ ಬಹುಮಾನ್ಯರಾದ ಅಲಿ ರ .ಅ ರವರ ಹತ್ತಿರ ಒಬ್ಬ ಪುರುಷ ಬಂದು ಕೇಳಿದರು ನಾನು ಯಾರನ್ನಾದ್ರು ಒಬ್ಬರನ್ನು ನಿಜವಾದ ಪ್ರೀತಿ ಮಾಡಿದರೆ ನನಗೆ ಅದೂ ಸಾಕೇ ಎಂದು ಕೇಳಿದನು ಆವಾಗ ಅಲಿ ರ.ಅ.ಹೇಳಿದರು ನೀನು ನಿನ್ನನ್ನು ಯಾರಿಗಾಗಿಯೂ ಒಗ್ಗಿಸಕೊಳ್ಳಬೇಡ ಯಾಕೆಂದರೆ ಮನುಷ್ಯ ಮೂಲಭೂತ ಸ್ವಾರ್ತಿ ಯಾಗಿದ್ದಾನೆ ಅವನು ಯಾರನ್ನಾದರು ಪ್ರೀತಿಸಿದರೆ ಅವನು ಅವನ ತಪ್ಪುಗಳನ್ನು ಮರೆತು ಹೋಗುತ್ತಾನೆ ಮತ್ತು ಯಾರನ್ನಾದರು ದ್ವೇಶಿಸಲು ಪ್ರಾರಂಭಿಸಿದರೆ ಅವರ ಒಳ್ಳೆಯತನ ವನ್ನು ಮರೆತು ಹೋಗುತ್ತಾನೆ ನೀನು ನಿಜವಾಗಿಯೂ ಈ ಭೂಮಿಯಲ್ಲಿ ಸಂತೋಷವಾಗಿರಲು ಇಷ್ಟ ಪಡುಡುವುದಾದರೆ ಮನುಷ್ಯರನ್ನು ಗೌರವಿಸು ಆದರೆ ಪ್ರೀತಿ ಮಾಡುವುದಾದರೆ ಸತ್ಕರ್ಮದ ನಿಯ್ಯತ್ತಿನಲ್ಲಿ ಮಾಡು ಭರವಸೆಯಿಂದಲ್ಲ ಅವರಿಂದ ಪ್ರತೀಕಾರವಾಗಿ ಏನನ್ನೂ ಬಯಸಬೇಡ ಆದರೆ ಈ ಲೋಕ ಪ್ರೀತಿ ಪ್ರೇಮ ಸಹಾನುಭೂತಿ ಯ ಬದಲಾಗಿ ನೋವು ಗಳೇ ಸಿಗುವುದು ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಈ ಲೋಕದಲ್ಲಿ ಎರಡು ತರಹದ ಜನರಿದ್ದಾರೆ ಒಬ್ಬ ತನ್ಶ ಲಾಬಕ್ಕಾಗಿ ಪ್ರೀತಿಸುವನು ಇನ್ನೊಬ್ಬ ತನ್ನ ಇಚ್ಛೆಗೆ ಅನುಸಾರವಾಗಿ ಪ್ರೀತಿಸುವನು ನಿನ್ನನ್ನು ಯಾರಾದರು ಪ್ರೀತಿಸಬೇಕೆಂದಿದ್ದರೆ ನೀನು ನಿನ್ನ ಬಯಕೆ ಗಳನ್ನು ತ್ಯಾಗಮಾಡಿ ನಿನ್ನ ಉದ್ದೇಶ ಗಳನ್ನು ಈಡೇರಿಸಲು ಪ್ರಯತ್ನ ಪಡು ಹಾಗೆ ಮಾಡಿದರೆ ನಿನ್ನ ಉದ್ದೇಶ ಗಳೆಲ್ಲವೂ ನಿನಗೆ ಸಿಗುವುದು ಲೋಕದ ಎಲ್ಲಾ ಸಂಪತ್ತು ನಿನ್ನ ಹಿಂದೆ ಬರುವುದು ನೀನು ನಿನ್ನ ಇಚ್ಚೆಗಳ ಹಿಂದೆ ಬಿದ್ದರೆ ಅದು ನಿನ್ನನ್ನು ಓಡಿಸುವ ಕಾರ್ಯ ಮಾಡುವುದು ಆವಾಗ ನಿನಗೆ ನಿನ್ನ ಪ್ರೀತಿ ಆಗಲಿ ಅಥವಾ ನಿನ್ನ ಜೀವನದ ಉದ್ದೇಶ ಸಿಗಲಾರದು ಓ ಮನುಷ್ಯ ಕೇಳು ಪ್ರೀತಿ ಮಾಡುವ ಉದ್ದೇಶ ಅಂದರೆ ನೀನು ಪ್ರೀತಿಸಿದವರು ನಿನ್ನ ಆಜ್ಞೆ ಯ ಪ್ರಕಾರ ತಲೆ ಬಾಗಿ ನಿಲ್ಲುವುದು ಅಂದರೆ ಪ್ರೀತಿಯ ಮಹತ್ತಾದ ಸಂತೋಷ ನೀನು ಪ್ರೀತಿಸಿದವರು ನಿನ್ನ ವ್ಯಕ್ತಿತ್ವ ನೋಡಿ ನಿನ್ನಲ್ಲಿ ಹೆಮ್ಮೆ ಪಡಬೇಕು ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ✒️MUSTHAFA HASAN ALIKHAN ALQADRI
Comments