Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು

 


*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು*


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

************************************


ಇತ್ತೀಚೆಗೆ ಸಾಮಾಜಿಕ  ಜಾಲ ತಾಣಗಳಲ್ಲಿ ಕೆಲವು ಬೆಳವಣಿಗೆಗಳನ್ನು ಕಂಡು ಆಶ್ಚರ್ಯವಾಯಿತು ಮತ್ತು ನಂಬಲೂ ಕಷ್ಟವಾದಂತೆ ಅನಿಸಿತು.

ಯಾಕೆಂದರೆ ಯಾವಾಗಲೂ ಕಟ್ಟಾ ಮುಸ್ಲಿಂ ವಿರೋಧವನ್ನೇ ಮೈಗೂಡಿಸಿಕೊಂಡು ಕಿಡಿಕಾರುತ್ತಿದ್ದ ಕೆಲವು ಶಕ್ತಿಗಳು ಸಂಪೂರ್ಣವಾಗಿ ಬದಲಾದ ವರ್ತಮಾನಗಳು.

ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಇಲ್ಲಿಯವರೆಗೆ ತಾವು ತಾಳಿದ್ದ ಕುರುಡು ನಿಲುವುಗಳ ಬಗ್ಗೆ ಪಶ್ಚಾತಾಪ ಪಡುತ್ತಿದ್ದವು.


ಕಾರಣವೇನೆಂದು ಪರಾಮರ್ಶಿಸಿ ನೋಡಿದಾಗ ಜಗತ್ತು ಇಂದು ಎದುರಿಸುವ ಸಂಕೀರ್ಣ ಸಂಕಷ್ಟ ಸಮಯದಲ್ಲಿ ಮುಸ್ಲಿಮರು, ಮುಸ್ಲಿಂ ರಾಷ್ಟ್ರಗಳು ಹಾಗೂ ಮುಸ್ಲಿಂ ಸಂಘಟನೆಗಳು ಕೈಗೊಂಡ ಕಾರ್ಯಕ್ರಮಗಳು ಎಂತಹ ಕಲ್ಲು ಮನಸ್ಸುಗಳನ್ನು ಕೂಡಾ ಕರಗಿಸುವಂತಿತ್ತು.


ಹಣ್ಣು ತುಂಬಿದ ಮಾವಿನ ಮರಕ್ಕೆ ಎಲ್ಲರೂ ಸೇರಿ ಎಷ್ಟೇ ಬಲಪ್ರಯೋಗಿಸಿ ಕಲ್ಲು ತೂರಿದರೂ ಕರುಣಾಮಯಿ  ಮಾವಿನ ಮರವು ಎಲ್ಲಾ ಏಟುಗಳನ್ನು ಶಾಂತಚಿತ್ತವಾಗಿ ಸಹಿಸುತ್ತಲೇ ರುಚಿಯಾದ ಹಣ್ಣುಗಳನ್ನು 

ಕಲ್ಲು ತೂರಿದವರಿಗೇ ತುರುತುರಾ ಸುರಿಯುತ್ತಲೇ ಇರುತ್ತದೆ.


ಇದೇ ರೀತಿ ಇಸ್ಲಾಮ್ ಎಂಬ ಕರುಣಾಮಯಿ ಧರ್ಮದ ಆಶಯ ಆದರ್ಶಗಳನ್ನು ನೇರಾನೇರ ಎದುರಿಸಲು ಸಾಮರ್ಥ್ಯವಿಲ್ಲದ ಕೆಲವು ಶಕ್ತಿಗಳು ಅಥವಾ ಇಸ್ಲಾಮಿನ ಮತ್ತು ಮುಸ್ಲಿಮರ ಬಗ್ಗೆ ತಪ್ಪು ಗ್ರಹಿಕೆಗಳಿಗೊಳಗಾದವರು ಎಲ್ಲರೂ ಒಗ್ಗೂಡಿ ತಮ್ಮ ಜೀವನದುದ್ದಕ್ಕೂ ಇಲ್ಲಸಲ್ಲದ ಅಪಪ್ರಚಾರ ಹಾಗೂ ಆರೋಪಗಳ ಮೂಲಕ ಕಸರೆರಚಿ ಇಸ್ಲಾಮ್ ಎಂಬ ಜ್ಯೋತಿಯನ್ನು ನಂದಿಸಲು ವಿಫಲ ಪ್ರಯತ್ನ ಪಟ್ಟರೂ ಕರುಣಾಮಯಿ ಇಸ್ಲಾಮ್ ಮಾತ್ರ ತನ್ನ ಕಾರುಣ್ಯದ ಕೈಗಳನ್ನು ಚಾಚುತ್ತಾ ಇರುತ್ತದೆಯೇ ಹೊರತು ಯಾವುದೇ ಪ್ರತೀಕಾರದ ಗೋಜಿಗೇ ಹೋಗುವುದಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರು ಗೊಂಡಿದೆ.


ಇಸ್ಲಾಂ ಪ್ರತಿಪಾದಿಸುವ ಏಕ ದೇವನಾದ ಅಲ್ಲಾಹು (ಅರ್ಹಮುರ್ರಾಹಿಮೀನ್) ಕರುಣಾಮಯಿಗಳಲ್ಲಿ 

ಅತ್ಯಂತ ದೊಡ್ಡ ಕರುಣಾಮಯಿಯಾಗಿರುತ್ತಾನೆ.

ಅದರ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು (ರಹ್ಮತುನ್ ಲಿಲ್ ಆಲಮೀನ್) ಇಡೀ ಪ್ರಪಂಚಕ್ಕೇ ಕಾರುಣ್ಯರಾಗಿರುತ್ತಾರೆ.


ಅಲ್ಲದೆ ಇಸ್ಲಾಮಿನ ಪ್ರತಿಯೊಂದು ತತ್ವಾದರ್ಶಗಳು ಮಾನವನ ಒಳಿತಿಗೆ ಹಾಗೂ ಮನುಷ್ಯ ಸ್ನೇಹಿಯಾಗಿರುತ್ತದೆ.

ಮಾನವ ಸಮೂಹದ ಇಹ ಪರ ವಿಜಯವನ್ನು ಗುರಿಯಾಗಿಟ್ಟು ಕೊಂಡು ಮಾತ್ರವಾಗಿದೆ ಸಾವಿರಾರು ವರ್ಷಗಳಿಂದ ಇಸ್ಲಾಂ ಈ ಭೂಮಿಯಲ್ಲಿ ಕಾರ್ಯಾಚರಿಸುವುದು.

ಅದರಲ್ಲಿ ಪರಸ್ಪರ ವೈರಾಗ್ಯ,ಹಗೆತನ, ಸಂಘರ್ಷ,ಕಚ್ಚಾಟ ಮುಂತಾದ ಮನುಷ್ಯನ ಸುಗಮ ಜೀವನಕ್ಕೆ ಮಾರಕವಾದ ಗುಣಗಳಿಗೆ ಅವಕಾಶವೇ ಇಲ್ಲ ಎಂದು ಅದನ್ನು ನಿಷ್ಪಕ್ಷಪಾತ ಪರಾಮರ್ಶೆ ಮಾಡುವವರಿಗೆ ಮನದಟ್ಟಾಗದಿರಲು ಸಾದ್ಯವೇ ಇಲ್ಲ.


ಆದ್ದರಿಂದಲೇ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಜಗತ್ತಿನಿಂದಲೇ ಕಿತ್ತೊಗೆಯ ಹೊರಟವರು,

ದೇಶಗಳಿಂದ ಗಡೀಪಾರು ಮಾಡಬೇಕೆಂದವರು, ಮುಸ್ಲಿಮರನ್ನು ದೇಶದ್ರೋಹಿಗಳೆಂದು ಭಾಷಣ ಬಿಗಿದು ಮುಗ್ಧ ಮನಸ್ಸುಗಳನ್ನು  ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಪರಸ್ಪರ ಕಚ್ಚಾಡಿಸಿ ಆನಂದ ಪಟ್ಟವರು, ನಡುರಸ್ತೆಯಲ್ಲಿ ಮುಸ್ಲಿಮರನ್ನು ಅತ್ಯಂತ ಹೀನವಾಗಿ ಹಿಂಸಿಸಿ ಮಾರಣಹೋಮ ನಡೆಸಿ ಕ್ರೂರತೆ ಮೆರೆದವರು ಎಲ್ಲರೂ ನಿಬ್ಬೆರಗಾಗ ಬೇಕಾಯ್ತು. 


ಜಗತ್ತಿನ ಸುಮಾರು 40 ರಷ್ಟು ಮುಸ್ಲಿಂ ರಾಷ್ಟ್ರಗಳು ಜಾತಿ,ಧರ್ಮ,ಭಾಷೆ,ಬಣ್ಣ,

ವರ್ಣ ವರ್ಗ ಯಾವುದೂ ನೋಡದೆ ಕೇವಲ ಮಾನವೀಯ ದೃಷ್ಟಿಯಲ್ಲಿ ಮಾತ್ರ ಭಾರತಕ್ಕೆ ತಮ್ಮ ಉದಾರ ಸಹಾಯ ಹಸ್ತ ಚಾಚಿದೆ.


ಅಲ್ಲದೆ ಭಾರತೀಯ ಮುಸ್ಲಿಮರು, ಮುಸ್ಲಿಂ ಸಂಘಟನೆಗಳು ಹಿಂದೆ ತಮಗುಂಟಾದ ಎಲ್ಲಾ ಕಹಿ ಅನುಭವಗಳನ್ನು ಮರೆತು ಬಿಟ್ಟು ತಮ್ಮ ಅಸಾಮಾನ್ಯ ಮಾನವೀಯತೆಯ ಮೂಲಕ ತಮ್ಮ ಮಸ್ಜಿದ್ಗಳನ್ನು, ಮದ್ರಸಗಳನ್ನು ಕಾರಂಟೈನ್ ಮತ್ತು ಆಸ್ಪತ್ರೆಗಳಾಗಿ ಪರಿವರ್ತಿಸಿಕೊಟ್ಟರು.

ರಕ್ತ ಬೇಕಾದವರಿಗೆ ರಕ್ತ ಅನ್ನಪಾನೀಯ ಬೇಕಾದವರಿಗೆ ಅನ್ನಪಾನೀಯ ಶಿಸ್ರೂಶೆ ಬೇಕಾದವರಿಗೆ ಶಿಸ್ರೂಶೆ ಆಕ್ಸಿಜನ್ ಬೇಕಾದವರಿಗೆ ಆಕ್ಸಿಜನ್ ನೀಡಿ ಸಮಾನತೆಯಿಲ್ಲದ ಮಾದರಿಯಾದರು.

ಎಲ್ಲಿಯ ತನಕ ವೆಂದರೆ ಸತ್ತ ಹೆಣಗಳ ಅಂತ್ಯ ಸಂಸ್ಕಾರ ನಡೆಸಲು ತಮ್ಮವರು,ತಮ್ಮ ಜಾತಿಯವರು,ಕುಟುಂಬಸ್ಥರು ಹತ್ತಿರ ಸುಳಿಯದೆ ದೂರ ಸರಿದು ಅನಾಥವಾದ ಶವಶರೀರಗಳಿಗೆ ಹೆಗಲು ಕೊಟ್ಟು ಶವಸಂಸ್ಕಾರ ವನ್ನು ಅವರವರ ರೀತಿ ರಿವಾಜುಗಳಂತೆ ನಡೆಸಿ ಕೊಟ್ಟು ಅಚ್ಚರಿ ಮೂಡಿಸಿದರು.


ಇದೆಲ್ಲಾ ನೋಡುವಾಗ ನೆನಪುಗಳು ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದ ಘಟನೆಗಳಿಗೆ ಕೊಂಡೊಯ್ಯುತ್ತದೆ.


ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಭೂಮಿಗೆ ಹುಟ್ಟಿ ಬರುವಾಗ ತನ್ನ ತಂದೆಯ ಮುಖವನ್ನು ನೋಡುವ ಭಾಗ್ಯ ಲಭಿಸಿರಲಿಲ್ಲ. 

ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಬ್ದುಲ್ಲಾ ರವರು ಮರಣ ಹೊಂದಿದ್ದರು.

ತಾತ,ದೊಡ್ಡಪ್ಪ,ಚಿಕ್ಕಪ್ಪಂದಿರನ್ನು ಮಾತ್ರವಾಗಿತ್ತು ನೋಡಿರುವುದು.

ಆದ್ದರಿಂದಲೇ ಪ್ರವಾದಿಯವರಿಗೆ ಅವರೊಂದಿಗೆ ಅತಿಯಾದ ಪ್ರೀತಿ ಮತ್ತು ಸ್ನೇಹ ಇದ್ದಿದ್ದು.


ಅವರಲ್ಲೊಬ್ಬ ಚಿಕ್ಕಪ್ಪ ರಾಗಿದ್ದರು ಬಹು ಹಂಝತಿಬಿನ್ ಅಬ್ದುಲ್ ಮುತ್ತಲಿಬ್ ರವರು.

ತನ್ನ ಚಿಕ್ಕಪ್ಪ ರಾಗಿದ್ದು ಕೊಂಡೇ ಹತ್ತಿರದ ಒಡನಾಡಿಯಾಗಿ ತನ್ನೆಲ್ಲಾ ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ಜೀವಿಸಿದ್ದ ಹಂಝ ರಳಿಯಲ್ಲಾಹು ಅನ್ಹುರವರು ಉಹ್ದು ಯುದ್ಧದಲ್ಲಿ ಅತ್ಯಂತ ನಿಕೃಷ್ಟವಾಗಿ ನಿಷ್ಟೂರವಾಗಿ ಶತ್ರುಗಳಿಂದ ವದಿಸಲ್ಪಟ್ಟಿದ್ದರು.


ವಹ್ಶೀ ಎಂಬ ವ್ಯಕ್ತಿಯ ಮೂಲಕ ಹಿಂದ್ ಎಂಬ ಮಹಿಳೆಯ ಆಜ್ಞೆಯಂತೆ ಕೊಲೆಮಾಡಲ್ಪಟ್ಟಿದ್ದರು.

ಆದರೆ ಅತ್ಯಂತ ವಿಕೃತವಾಗಿ ಕೊಲೆ ಮಾಡಲ್ಪಟ್ಟು ಚಿತ್ರ ಹಿಂಸೆ ನೀಡಲ್ಪಟ್ಟ ತನ್ನ ಚಿಕ್ಕಪ್ಪರ ಮೃತ ಶರೀರವನ್ನು ಕಂಡ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಜೀವನದಲ್ಲಿ ಅತ್ಯಂತ ನೋವನುಭವಿಸಿದ ದಿನವಾಗಿತ್ತದು.


ಆದರೆ ಸ್ವಲ್ಪ ಸಮಯಗಳ ನಂತರ ತನ್ನ ಚಿಕ್ಕಪ್ಪರನ್ನು ಅತ್ಯಂತ ನಿಕೃಷ್ಟವಾಗಿ ಕೊಲೆ ಮಾಡಿದ ಅದೇ ವಹ್ಶೀ ಎಂಬ ವ್ಯಕ್ತಿಯು ಪಶ್ಚಾತಾಪ ಪಟ್ಟು ಪ್ರವಾದಿಯವರ ಸನ್ನಿಧಿಗೆ ಬಂದಾಗ ಕಾರುಣ್ಯದ ಸಾಗರವಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ಕ್ಷಮಿಸಿ ಇಸ್ಲಾಮಿನ ಸದಸ್ಯರಾಗಿ 

ಸ್ವೀಕರಿಸಿ

ವಹ್ಶೀರವರಲ್ಲಿ ಹೇಳಿದರು. ಸ್ವಲ್ಪ ಸಮಯ ನೀನು ನನ್ನ ಹತ್ತಿರ ಬರಬೇಡ.ಯಾಕೆಂದರೆ ನಿನ್ನನ್ನು ನೋಡುವಾಗ ಯುದ್ಧ ಭೂಮಿಯಲ್ಲಿ ಅತ್ಯಂತ ವಿಕೃತಗೊಳಿಸಲ್ಪಟ್ಟ ನನ್ನ ಚಿಕ್ಕಪ್ಪ ಹಂಝರವರ ಮೃತಶರೀರವು ನನ್ನ ಕಣ್ಣಮುಂದೆ ತೇಲಿ ಬರುತ್ತದೆ. 

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಈ ಮಾತಿನಿಂದ ಈ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಅದೆಷ್ಚು ನೋವು ಅನುಭವಿಸಿದ್ದರೆಂದು ಅರ್ಥ ಮಾಡಿಕೊಳ್ಳಬಹುದು.


ಹೀಗಿದ್ದೂ ಪಶ್ಚಾತಾಪ ಪಟ್ಟು ಬಂದ ವಹ್ಶೀರವರನ್ನು ಕ್ಷಮಿಸಿದ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಘಟನೆಯು ಇಲ್ಲಿ ಸ್ಮರಣೀಯ ವಾಗಿದೆ.

ಈ ಮಾದರಿಯಾಗಿದೆ ಮುಸ್ಲಿಮರಿಗಿರುವುದು.

ಇದು ಜಗತ್ತಿನಲ್ಲಿ ಪುಣರಾವರ್ತನೆಯಾಗಿದೆ ಆಗುತ್ತಲೇ ಇದೆ.


*يُرِيدُونَ لِيُطْفِئُوا نُورَ اللَّهِ بِأَفْوَاهِهِمْ وَاللَّهُ مُتِمُّ نُورِهِ وَلَوْ كَرِهَ الْكَافِرُونَ*


ಮಾನವೀಯತೆ ಉಳಿಯಲಿ ಅಮಾನವೀಯತೆ ಅಳಿಯಲಿ

Comments

Popular Posts