MUSTHAFA HASAN ALQADRI OFFICIAL : Arrogance

Translate

Friday, May 8, 2020

Arrogance

ಗದೊಡೆಯನಾದ  ಅಲ್ಲಾಹನು ಒಂದು ಚಿಕ್ಕ ನಿಸಾರವಾದ  ನೊಣವನ್ಶು ಯಾಕಾಗಿ  ಸ್ರಷ್ಟಿಸಿದನು ನಾವೆಲ್ಲರೂ ತಿಳಿಯಲೇ ಬೇಕಾದ ವಿಷಯ  ಒಮ್ಮೆ ಅಲಿ ರ.ಅ ರವರ ಹತ್ತಿರ ಒಬ್ಬರು ಬಂದು ಕೇಳಿದರು ಓ ಅಲಿ ಅವರೇ ಅಲ್ಲಾಹು ಎಲ್ಲಾ ಸ್ರಷ್ಟಿ ಗಳನ್ನು ಒಂದಲ್ಲಾ ಒಂದು ಕಾರಣಾಂತರಗಳಿಂದ ಸ್ಲಷ್ಟಿಸಿದ್ದಾನೆ  ಆದರೆ ನೊಣವನ್ನು ಯಾತಕ್ಕಾಗಿ  ಸ್ಲಷ್ಟಿಸಲಾಯಿತು    ಎಂದು ಕೇಳಿದಾಗ ಅಲಿ ರ.ಅ.  ರವರು ಮರುತ್ತರ ನೀಡುತ್ತಾ ಹೇಳಿದರು ಓ ಮನುಷ್ಯ ಅಲ್ಲಾಹನು ಅವನ  ಈ ಲೋಕದಲ್ಲಿ ಸ್ರಷ್ಟಿಸಿದ   ಎಲ್ಲಾ ವಸ್ತುಗಳಲ್ಲಿ ಮಾನವ ನಿಗೆ ಕೆಲವು ಸೂತ್ರ ಗಳನ್ನು ಮರೆಮಾಡಲಾಗಿವೆ  ಏಕೆಂದರೆ ಮನುಷ್ಯನು ತನ್ನ ಸ್ಥಿತಿಯನ್ನು ಅರಿಯಲು ಹಾಗೂ  ತನ್ನ  ಸತ್ಯ  ಸ್ರಷ್ಟಿ ಕರ್ತಾವು ವನ್ನು ಗುತಿಸಲಿಕ್ಕಾಗಿದೆ ಆದರೆ  ವಿಪರ್ಯಾಸ ಇಡೀ     ಮಾನವ ಸಮೂಹ ನಷ್ಟದಲ್ಲಿದೆ ಆದಿಪಿತ ಆದಿಮಾನವ  ಆದಮ್ ನಬಿ ಅ.ಸ.ಅವರ ಮಗ ಕಿಯಾಮ್  ಅತೀ ಗಾಂಭೀರ್ಯ ಉಳ್ಳ  ತನ್ನ ಇಡೀ ಕುಟುಂಬ ದವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆಗಿದ್ದನು  ಎಲ್ಲರಿಗೂ ಸಹಾಯ ಮಾಡಲು ಮುಂದಾಗುವ ತನ್ನೆಲ್ಲರನ್ನು  ಸಮಾನ ವಾಗಿ ಕಾಣುವ ಒಬ್ಬ ಉತ್ತಮ ವ್ಯಕ್ತಿ ಆದರೆ  ಕೆಲವು ಸಮಯ ಗಳ ನಂತರ ಅವನಲ್ಲಿ ಅಹಂಕಾರ ಜನ್ಮ ನೀಡಿತು ತನ್ನನ್ನು ತಾನು ಶ್ರೇಷ್ಟ ಹಾಗೂ ಉನ್ನತಿ ಎಂಬ ಅಹಂಕಾರದ ಭಾವನೆಗಳು ಮನಸ್ಸಿನಲ್ಲಿ    ಮೂಡಿ  ಬರಲಾರಂಭಿಸಿದವು ನಾನು ಯಾವ ವಸ್ತುವನ್ನು ಕೂಡ  ತುಂಡರಿಸಿ ಬಿಡುವೆನು ನೆಲದಿಂದ ಕಿತ್ತೆಸೆಯಲು ನನ್ನಿಂದ ಸಾಧ್ಯ ನನ್ನಷ್ಟು ಬಲಶಾಲಿ ಈ ಭೂಮಿಯಲ್ಲಿ ಯಾರೂ ಇಲ್ಲ

ಎಂಬ ಜಂಭದ  ಮನ ಸ್ಥಿತಿ  ಇತ್ತು    ತಂದೆಯಾದ ಆದಮ್ ರವರು ಅವನ ಈ ಮಾತುಗಳನ್ನು ಆಲಿಸುತ್ತಾ ಅಲ್ಲಾಹನಲ್ಲಿ ಪ್ರಾರ್ತಿಸಿದರು ಓ ಅಲ್ಲಾಹುವೇ ನನ್ನ ಪ್ರತೀ ಪ್ರಾರ್ತನೆಯ ಫಲವಾಗಿ  ನನಗೆ ನೀನು  ಶಕ್ತಿಶಾಲಿ ಮಗನನ್ನು ಕೊಟ್ಟಿದ್ದಿಯ ಆದರೆ ಅವನು  ಆಹಂಕಾರಿ  ಯಾಗಿದ್ದಾನೆ ಓ ಅಲ್ಲಾಹು ಏನಾದರು ಒಂದು ಸ್ರಷ್ಟಿಯನ್ನು ಸ್ರಷ್ಟಿಸು ಯಾಕೆಂದರೆ ಅವನ ಸ್ಥಿತಿ ಸ್ಥಾನಮಾನ ಈ ಲೋಕದಲ್ಲಿ ಏನೂ ಅಲ್ಲ  ಎಂದರಿಯಬೇಕು     ಎಂದು ಪ್ರಾರ್ತಿಸಿದಾಗ ಅಲ್ಲಾಹನು ಅವರ ಪ್ರಾರ್ಥನೆ ಸ್ವೀಕರಿಸಿದನು ಆವಾಗ ಅಲ್ಲಾಹು ನೊಣವನ್ನು ಸ್ರಷ್ಟಿಸಿದನು ಕಿಯಾಮ್  ನಿದ್ರೆಗೆ ಜಾರಿದಾಗ ಆ ನೊಣವು ಅವನ ಮುಖದಲ್ಲಿ ಕುಳಿತು ಅವನನ್ನು ಹಿಂಸಿಸಲು ತೊಡಗಿತು ಅವನನ್ನು ಕಚ್ಚಲು ತೊಡಗಿದಾಗ ಅವನು ತನ್ನ ಎರಡು ಕೈ ಗಳನ್ನು ಮುಖದ ಮೇಲೇ ಬೀಸುತ್ತಾ ತುಂಬಾ ಹಿಂಸೆ ಪಡುತ್ತಿದ್ದನು ಆವಾಗ ತಂದೆ ಆದಮರು ತನ್ನ ಮಗನನ್ನು ಉದ್ದೇಶಿಸಿ ಹೇಳಿದರು ಓ ಕಿಯಾಮ್ ನೀನು ಇಷ್ಟು ಬಲಶಾಲಿಯಾಗಿಯೂ ಈ ನೊಣದ ಮೇಲೆಯೂ ತನ್ನ ಇಚ್ಚೆಯನ್ನು ತೋರಿಸಲಾರೆನು ಒಮ್ಮೆ ಯೋಚಿಸು ಇಷ್ಟ ದೊಡ್ಡ ಲೋಕವನ್ನು ಸ್ರಷ್ಟಿಸಿದವನು ಎಷ್ಟು ಬಲಶಾಲಿಯಾಗಿದ್ದಾನೆ ಈ ಮಾತನ್ನು ಕೇಳಿದ ಕಿಯಾಮ್ ಅಹಂಕಾರದಿಂದ ಪಶ್ಚಾತ್ತಾಪ ಪಟ್ಟನು ಸಹೋದರರೇ ಅಹಂಕಾರದಿಂದ ಏನನ್ನೂ ಸಾದಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಪಡೆಯಬಹುದು

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...