Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

Marital Satisfaction-ಪತಿಯ ತ್ರಪ್ತಿ

ಒಬ್ಬ ಮಹಿಳೆಗೆ  ಸುನ್ನತ್ತಾದ   ಉಪವಾಸ ಅನುಷ್ಟಿಸಲು ಅವಳಿಗೆ ತನ್ನ   ಪತಿಯ ಸಮ್ಮತಿ ಮುಖ್ಯ ವಾಗಿದೆ ಅವಳು   ಪತಿಯ  ಸಮ್ಮತಿ ಇಲ್ಲದೆ ಉಪವಾಸ ಅನುಷ್ವಿಸುವ  ಹಾಗಿಲ್ಲ ಯಾಕೆಂದರೆ ಪತಿಯ ತ್ರಪ್ತಿ ಯನ್ನು ಪಡೆದು ಕೊಳ್ಳುವುದು ಒಂದು ಹೆಣ್ಣಿಗೆ ಉತ್ತಮ  ಇಬಾದತ್ ಆಗಿದೆ ಆದರಿಂದ ಪತಿಯ ಸಮ್ಮತಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ  ಪತಿಯ ಸಮ್ಮತಿ  ಇಲ್ಲ ವಾದರೆ ಉಪವಾಸ ಹಿಡಿಯುವ ಹಾಗಿಲ್ಲ ಪ್ರವಾದಿ صلي الله عليه وسلم 
ರವರು ಹೇಳಿದರು ಒಬ್ಬ ಮಹಿಳೆಯ ಪತಿ  ಅವನ   ಮನೆಯಲ್ಲಿ ಅವನು ಯಾರನ್ನು ಇಷ್ಟ ಪಡುವುದಿಲ್ಲವೋ ಅವರನ್ನು ಮನೆಗೆ ಪ್ರವೇಶಿಸಬೇಡಿ ಒಂದು ಹದೀಸ್ ನಲ್ಲಿ ಈ ತರಹ ಉಲ್ಲೇಖ ಇದೆ ಗಂಡನು ಯಾವ ಹಾಸಿಗೆ ಯಲ್ಲಿ  ನಿದ್ರೆ ಮಾಡುತ್ತಾನೋ ಅಲ್ಲಿ ಇನ್ನೊಬ್ಬರನ್ನು ಕುಳಿತು ಕೊಳ್ಳಲು ಅನುಮತಿಸಬೇಡಿ 
ಅಬೂ  ಸುಫ್ಯಾನ್  ರವರ ಮಗಳು ಉಮ್ಭು ಹಬೀಬ ರ.ಅ. ರವರ  ಚರಿತ್ರೆಯನ್ನು  ನಮ್ಮ  ಜೀವನದಲ್ಲಿ ಅನೇಕ ಪಾಠ ಕಲಿಸಿ ಕೊಡಲಾಗುತ್ತದೆ   ನಾವು ಕಾಣಬಹುದು ಉಮ್ಮು ಹಬೀಬ ರ.ಅ. ಹಾಗು ಅವರ ಪತಿ   ಪ್ರವಾದಿ صلي الله عليه وسلم 
ರವರ  ಮೇಲೇ  ಈಮಾನ್ ತಂದ ನಂತರ ಇಸ್ಲಾಮ್ ಗೆ ಪ್ರವೇಶಿಸಿದ ನಂತರ    ಇಬ್ಬರೂ ಹಬಷಾ ದೇಶದಲ್ಲಿ ನೆಲಸಿ ಕೆಲವು ಸಮಯ ಅಲ್ಲಿ ವಾಸಿಸಿದರು     ಅವರು  ಅಲ್ಲಿ  ಕೆಲವು ಸಮಯದ ನಂತರ  ಒಂದು ದಿವಸ ಉಮ್ಮು ಹಬೀಬ ನಿದ್ರೆ ಯಲ್ಲಿ ಇದ್ದಾಗ ಕನಸಿನಲ್ಲಿ ಅವರ ಪತಿಯನ್ನು ನೋಡುತ್ತಾರೆ ವಿಕ್ರತ  ವಾಗಿ ಅವರ  ಮುಕ ಬದಲಾಗಿರುವುದನ್ನು ಕಂಡರು ಕನಸಿನಿಂದ  ಎಚ್ಚೆತ್ತುಕೊಂಡರು    ತುಂಬಾ ಆತಂಕಕ್ಕೆ ಒಳಪಟ್ಟರು  ಬೆಳಿಗ್ಗೆ ಎದ್ದು ನೋಡುವಾಗ  ಅವರ  ಪತಿ ಈಸಾಯಿ  ಯಾಗಿದ್ದರು ತನ್ನ ಧರ್ಮ ಬದಲಾಯಿಸಿದ್ದರು ನಂತರ ಉಮ್ಮು ಹಬೀಬ ರವರು ಗಂಡನಿಂದ   ಬೇರ್ಪಟ್ಟು ಒಂಟಿಯಾಗಿ ಜೀವಿಸ ತೊಡಗಿದ್ದರು   ಕೆಲವು ಕಾಲ ಗಳ ನಂತರ ಪತಿಯೂ ತೀರಿಹೋದರು
ಎಲ್ಲರನ್ನೂ ಬಿಟ್ಟು ದೂರ ಇದ್ದವರು ಒಂಟಿಯಾಗಿ ತುಂಬಾ ಚಿಂತಾಜನಕ   ದಿಂದ  ಜೀವನ ನಡೆಸುತ್ತಾ ...   ಆವಾಗ ಪ್ರವಾದಿ ಯವರು   ಹಬಷಿನ ರಾಜನಾದ ನಜಾಷಿ ಮುಖಾಂತರ ಉಮ್ಮು ಹಬೀಬ ರವರ ಮದುವೆಯ ಆಮಂತ್ರಣ ಕಳುಹಿಸಿದರು ಆವಾಗ ನಜಾಷಿ ಯವರು ಒಬ್ಬ ಮಹಿಳೆ ಯನ್ನು ಕರೆಸಿ ಹೇಳಿದರು ಉಮ್ಮು ಹಬೀಬರ ಹತ್ತಿರ ತಿಳಿಸಿ ಪ್ರವಾದಿ ಯವರು ನಿಮ್ಮನ್ನು ನಿಕಾಹ್ ಮಾಡಲು ಇಚ್ಚಿಸಿದ್ದಾರೆ  ಈ ವಿಷಯ ವನ್ನು ತಿಳಿಸಲು ಆ ಮಹಿಳೆ  ಅಲ್ಲಿಂದ ಹೊರಟು    ಉಮ್ಮು ಹಬೀಬರ ಮನೆ ತಲುಪಿದಾಗ  ಆವಾಗ ಉಮ್ಮು ಹಬೀಬ ಹೇಳಿದರು ನಾನು ಮನೆಯ ಹೊರಗೆ ಕುಳಿತಿರುವಾಗ ಹೊರಗಿನಿಂದ ಯಾರೋ ಕರೆಯುವುದನ್ನು ಕೇಳಿದೆ  ಬಾಗಿಲು ತೆರೆದು ನೋಡುವಾಗ ಒಬ್ಬ ಮಹಿಳೆ ಯನ್ನು ನೋಡಿದೆ ಅವರನ್ನು ಕುರಿಸಿ ಕೇಳಿದೆ ಆವಾಗ ಆ ಮಹಿಳೆ ಎಲ್ಲಾ ವಿಷಯ ಗಳನ್ನು   ವಿವರವಾಗಿ  ತಿಳಿಸಿದರು ಆವಾಗ ಉಮ್ಮು ಹಬೀಬರು ಹೇಳಿದರು ಒಮ್ಮೆ ನಾನೂ ಅದ್ಭುತ ಪಟ್ಟೆ  ತದನಂತರ ನನ್ನ ಸತೋಷದ ಮಿತಿ ಜಾಸ್ತಿಯಾದವು  ಆ ಸಂತೋಷದಿಂದ ನನ್ನ ಮನೆಯಲ್ಲಿದ್ದ ಪ್ರತಿಯೊಂದು ವಸ್ತು ವನ್ನು ಆ ಮಹಿಳೆ ಗೆ ಉಡುಗೊರೆ ಯಾಗಿ   ನೀಡಿದೆ ನಂತರ ಪ್ರವಾದಿ ಯವರು ಅವರನ್ನು ನಿಖಾಹ್ ಮಾಡಿಕೊಂಡರು  ಅವರು ಮದೀನ ತಲುಪಿದರು   ಹಾಗೆ  ಕೆಲವು ಸಮಯದ ನಂತರ ತಂದೆ ಯಾದವರು  ಅಬೂಸುಫ್ಯಾನ್  ಅವರನ್ನು ಸಂದರ್ಶಿಸಲು ಮದೀನ ಬಂದರು ಪ್ರವಾದಿ ಯವರ ಮನೆಯಲ್ಲಿ ಚಾಪೆಯ  ಮೇಲೆ ಕುಳಿತು ಕೊಳ್ಳಲು  ಹೊರಟಾಗ       ತನ್ನ ಮಗಳಾದ  ಉಮ್ಮು  ಹಬೀಬ ಅವರು ಚಾಪೆ ಯನ್ನು  ಎಳೆದರು     ಆವಾಗ ಅಬೂ  ಸುಫ್ಯಾನ್   ಹೇಳಿದರು ರಮ್ಲಾ    ನಿನಗೇನಾಯೀತು ನಾನು ಈ  ಚಾಪೆಯಲ್ಲಿ ಕಳಿತು ಕೊಳ್ಳಲು ಅರ್ಹನಲ್ಲವೇ     ಎಂದು ಕೇಳಿದಾಗ ಉಮ್ಮು     ಹಭೀಭ ವಿವರಿಸುತ್ತಾರೆ ಈ ಚಾಪೆ ನನ್ನ  ಪತಿಯಾದ  ಅಲ್ಲಾಹನ ರಸೂಲರದ್ದು ಇದರ ಮೇಲೆ  ಒಬ್ಬ ಮುಶ್ರಿಕ್ ಕುಳಿತು ಕೊಳ್ಳಲು ನಾನು ಇಷ್ಟ ಪಡುವುದಿಲ್ಲ ಆವಾಗ ಅಬೂ  ಸುಫ್ಯಾನ್ ಹೇಳಿದರು ನೀನು ತುಂಬಾ ಬದಲಾಗಿದ್ದಿಯ ಮಗಳೇ ಕೆಲವು ಕಾಲ ಗಳ    ನಂತರ ಅವರೂ ಇಸ್ಲಾಮಿಗೆ ಪ್ರವೇಶಿಸಿದರು ಇದಾಗಿದೆ     ಒಂದು ಹೆಣ್ಣು ತನ್ನ ಗಂಡನ ಚಾಪೆಯಲ್ಲಿ ಯೂ  ಅನ್ಯ ಪುರುಷರಿಗೆ  ಕುಳಿತು ಕೊಳ್ಳಲು ಅವಕಾಶ ಕೊಡಬಾರದು ಪ್ರವಾದಿ ಯವರು ಹೇಳಿದರು ಒಂದು ಮಹಿಳೆ ಮ್ರತಪಟ್ಟು ಅವಳ ಗಂಡ ಅವಳಿಂದ ತ್ರಪ್ತಿ  ಯಾದಲ್ಲಿ ಅವಳು ಸ್ವರ್ಗ ಪ್ರವೇಶಿಸುವಳು  ಗಂಡನ ತ್ರಪ್ತಿಗಾಗಿ ಎಲ್ಲವನ್ನೂ ತ್ಯಾಗ ಮಾಡುವವಳು ಧನ್ಯಳು,,,
✒️MUSTHAFA HASAN ALIKHAN ALQADRI

Comments

Popular Posts