Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?

ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?
*************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
*************

ಮರಣ ಹೊಂದಿದ 
ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ 
ಮನಸ್ಸು ಹಾತೊರೆಯುವುದು ಆ ಮೃತ ಶರೀರವನ್ನು ಕೊನೆಯ ಒಂದು ನೋಟ ನೋಡ ಬೇಕೆಂದಾಗಿರುತ್ತದೆ.

ಮೃತ ಶರೀರವನ್ನುನೋಡುವುದಕ್ಕೆ 
ಇಸ್ಲಾಮಿನಲ್ಲಿ ವಿಶೇಷ ಪುಣ್ಯವೇನೂ ಇಲ್ಲದಿದ್ದರೂ ಕೂಡಾ ಪ್ರತಿಯೊಂದು 
ಕರುಣೆಯಿರುವ ಮನಸ್ಸಿನ ಅಭಿಲಾಷೆ ಮಾತ್ರ ಇದೇ ಆಗಿರುತ್ತದೆ.
ಮಾತ್ರವಲ್ಲ ತಾನೆಲ್ಲಿದ್ದರೂ ತನ್ನವರ ಮೃತ ಶರೀರವನ್ನು ತಲುಪಲು ಎಷ್ಟೇ ಕಷ್ಟನಷ್ಟ 
ಅನುಭವಿಸಿಯಾದರೂ ಹರಸಾಹಸ 
ಪಡುವುದು ಸಾಮಾನ್ಯ.

ಮೃತ ಶರೀರಗಳೊಂದಿಗೆ ಅತ್ಯಂತ ಗೌರವದಿಂದ ವರ್ತಿಸಬೇಕೆಂದು ಆಜ್ಞಾಪಿಸಿದ 
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 
ವಸಲ್ಲಮರು ಸ್ವತಃ ಮೃತ ಶರೀರಗಳನ್ನು ಜಾತಿ ಮತ ಭೇದವಿಲ್ಲದೆ ಅತ್ಯಂತ ಗೌರವದಿಂದ ಕಾಣುತ್ತಿದ್ದರು.
ಸೃಷ್ಟಿಗಳಲ್ಲಿ ಶ್ರೇಷ್ಠ ಸೃಷ್ಟಿ ಮನುಷ್ಯ.ಆಮನುಷ್ಯನಿಗೆ ಬೇಕಾಗಿ ಆಗಿದೆ ಇತರ ಎಲ್ಲಾ 
ಸೃಷ್ಟಿಗಳನ್ನು ಸೃಷ್ಟಿಸಲ್ಪಟ್ಟಿತೆಂದು ಖುರ್ಆನ್ ಹೇಳುತ್ತದೆ.
ಮನುಷ್ಯನು ಹೇಗೆ ಮರಣಹೊಂದಿದರೂ ಅವನಿಗೆ ಮಾನವೀಯತೆಯನ್ನು ನಿಷೇದಿಸಲ್ಪಡ ಬಾರದು.
ಜೀವಂತವಾಗಿರುವಾಗ ಅವನಿಗೆ ಲಭ್ಯವಾಗುತ್ತಿದ್ದ 
ಎಲ್ಲಾ ಗೌರವಾದರಗಳು ಮರಣ ಹೊಂದಿದ 
ನಂತರವೂ ಲಭಿಸಬೇಕು.

ಇದರಿಂದಾಗಿಯೇ ಎಲ್ಲಾ ಜಾತಿ ಧರ್ಮಗಳಲ್ಲಿಯೂ 
ಮೃತ ಶರೀರಗಳೊಂದಿಗೆ ಗೌರವ ಭಾವನೆಯಿರುವುದು.
ಇಸ್ಲಾಮಿನಲ್ಲಿ ಮೃತಪಟ್ಟ ವ್ಯಕ್ತಿಗೆ ಅವನು ಜೀವಂತವಾಗಿದ್ದಾಗ ಯಾವುದೆಲ್ಲಾಗೌರವಾದರಗಳಿದ್ದವೋ ಅದೆಲ್ಲವೂ ಅವನಿಗೆ ಈಗಲೂ ಲಭ್ಯವಾಗ ಬೇಕೆಂದಾಗಿದೆ. 
ಆದ್ದರಿಂದಲೇ ಮೃತಶರೀರವನ್ನು ನೆಲದಮೇಲೆ ಕೂಡಾ ಮಲಗಿಸದೆ ಎತ್ತರದ 
ಸ್ಥಳದಲ್ಲಿ ಮಲಗಿಸಬೇಕೆಂಬ ನಿಯಮವಿರುವುದು.
ಮಾತ್ರವಲ್ಲ ಸ್ನಾನ ಮಾಡಿಸುವುದು ಸೇರಿ ಎಲ್ಲಾ ಮರಣಾನಂತರ ಕ್ರಿಯೆಗಳನ್ನು ನಿರ್ವಹಿಸುವಾಗಲೂ ಯಾವುದೇ ರೀತಿ ಅವನ ಗೌರವಕ್ಕೆ ಚ್ಯುತಿ ಬರದಂತೆ ಜಾಗೃತೆ ಪಾಲಿಸಬೇಕೆಂದು ಹೇಳಿರುವುದು.

ಆದರೆ ಈಗ ಕೊರೋನದ  ಹೆಸರಿನಲ್ಲಿ ಎಲ್ಲಾ ಮಾನವೀಯತೆಗೆ ವಿದಾಯ ಹೇಳಲಾಗಿದೆ.
ರೋಗಿಗಳೊಂದಿಗೂ ಮೃತ ಶರೀರಗಳೊಂದಿಗೂ ಅತ್ಯಂತ ಹೀನಾಯವಾಗಿ ವರ್ತಿ‌ಸುವುದು ಮಾಮೂಲಿಯಾಗಿ ಬಿಟ್ಟಿದೆ.
ಕುಟುಂಬಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿ ಯಾರೂ ಹತ್ತಿರ ಸುಳಿಯದಂತೆ ಮಾಡಿ ತಮಗೆ ತೋಚಿದಂತೆ ವರ್ತಿಸುವ ಅಧಿಕಾರಿಗಳ ವರ್ತನೆ ಖಂಡನಾರ್ಹ.

ಇಲ್ಲಿ ಕೇಳುವವರು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿರುವುದು ಅತ್ಯಂತ ವಿಪರ್ಯಾಸ.ಪ್ರತಿರೋಧ ಶಕ್ತಿ ನಷ್ಟ ಹೊಂದಿದ ನರ ಸತ್ತ ವಿಭಾಗವಾಗಿ ಜನ ಮಾರ್ಪಟ್ಟಿರುವುದು ಖೇದಕರ ಎಂದು ಹೇಳದೆ ವಿಧಿಯಿಲ್ಲ

ಯಾಕೆಂದರೆ ಮರಣ ಹೊಂದಿದ ವ್ಯಕ್ತಿಗಳಿಂದ ರೋಗ ಹರಡಲು ಸಾಧ್ಯತೆನೇ ಇಲ್ಲ ಎಂದು 
ಆರೋಗ್ಯ ಇಲಾಖೆ,ವೈದ್ಯ ಸಮೂಹ ಎಲ್ಲರೂ ಒಕ್ಕೊರಲಿನಿಂದ ಹೇಳುವಾಗ ಮತ್ಯಾಕೆ ಮೃತ ಶರೀರಗಳೊಂದಿಗೆ 
ಇಷ್ಟೋಂದು ಅವಗಣನೆ. 

ವಾರೀಸುದಾರರಿಗಾಗಲಿ ಅಥವಾ ಸಂಭಂಧಪಟ್ಟವರಿಗಾಗಲೀ ತೋರಿಸದೆ ಧಾರ್ಮಿಕ ವಿಧಿವಿಧಾನಗಳಿಗೂ ಅವಕಾಶ ನೀಡದೆ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಆಸ್ಪತ್ರೆಗಳಿಂದ ನೇರವಾಗಿ ಸ್ಮಶಾನಗಳಿಗೆ ತಂದು ಒಂದು ರೀತಿಯ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಅತ್ಯಂತ ಹೀನಾಯವಾಗಿ ಮೃಗಗಳನ್ನು ಹೂತು ಹಾಕುವ ರೀತಿಯಲ್ಲಿ ಹೊಂಡಗಳಿಗೆ ಬೀಸಾಡುವ ಈ ಮೃಗೀಯ ವರ್ತನೆಯ ಹಿಂದಿರುವ ರಹಸ್ಯವೇನು?ಯಾವುದೂ ಅರ್ಥವಾಗುವುದಿಲ್ಲ.
ಅಲ್ಲದೆ ಇದು ಅನೇಕ ಅನುಮಾನಗಳಿಗೂ ಅವಕಾಶ ಮಾಡಿ ಕೊಟ್ಟಿದೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮಾಧ್ಯಮಗಳಲ್ಲಿ ಕೊರೋನ ಪೀಡಿತರು ಹಾಗೂ ಅದರಲ್ಲಿ ಮೃತರಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಆದರೆ ಸನ್ಮಾನ್ಯ ಜಿಲ್ಲಾಧಿಕಾರಿ ಯವರು ಕೊರೋನದಿಂದ ಸತ್ತವರು ಕೇವಲ ನಾಲ್ಕು ಜನ ಮಾತ್ರ ಎಂದು ಹೇಳುತ್ತಾರೆ.

ಇಲ್ಲಿ ಏನಾಗುತ್ತಿದೆಯೋ.
ಏನು ದಂಧೆ ನಡೆಯುತ್ತಿದೆಯೋ ಎಲ್ಲಾಗೊಂದಲಮಯ.
ಸರಕಾರ,ಪ್ರತಿಪಕ್ಷಗಳು ಎಲ್ಲಾ ದಿವ್ಯ ಮೌನ. 

ಮುಸ್ಲಿಮ್ ಸಂಘಟನೆಗಳು ಮೃತ ಶರೀರಗಳ ಅಂತ್ಯಕ್ರಿಯೆಯಲ್ಲಿ ಬಾಗವಹಿಸುವ ದೈರ್ಯ ತೋರಿರುವುದು ಮೆಚ್ಚಲೇ ಬೇಕು.
ಅದಕ್ಕೆ ಅವರನ್ನು ಅಭಿನಂದಿಸಲೇ ಬೇಕು.

ಆದರೆ ಇದು ಕೆಲವು ರಾಜಕಾರಣಿಗಳೆಂತೆ ಕೇವಲ ಪ್ರಚಾರಕ್ಕಾಗಿ ಮಾತ್ರ ಆಸ್ಪತ್ರೆಯವರು 
ಪ್ಯಾಕ್ ಮಾಡಿ ಕೊಟ್ಟ ಪ್ಯಾಕ್ ಗಳನ್ನು 
ತೆಗೊಂಡು ಹೋಗಿ ಗುಂಡಿಗೆ ಹಾಕುವುದರಲ್ಲಿ 
ಯಾವುದೇ ದೊಡ್ಡ ಸಾಹಸವಿಲ್ಲ ಎಂಬುದನ್ನು 
ಅರಿಯಬೇಕು.
ಯಾವಾಗಲೂ ಸಂಘಟನೆಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಿ 
ಹೆಸರು ಪಡೆಯಬೇಕು.
ಅಲ್ಲದೆ ಪ್ರಚಾರಕ್ಕಾಗಿ ಹಕ್ಕುಗಳನ್ನು 
ಕೈಬಿಡುವಂತಾಗ ಬಾರದು.

ಮೃತ ಶರೀರಗಳ ಅಂತ್ಯಕ್ರಿಯೆಯೆಲ್ಲಿ 
ಕೆಲವು ಸಂಘಟನೆಗಳು ಸಕ್ರಿಯವಾಗಿ 
ತೊಡಗಿಸಿ ಕೊಂಡಿವೆಯಲ್ಲಾ ಪರಸ್ಪರ ಸ್ಪರ್ಧೆ 
ಬೇಡ ಎಂಬ ದೃಷ್ಟಿಯಿಂದ ಒಂದು ವೇಳೆ ಇತರ 
ಸಂಘಟನೆಗಳು ಈ ವಿಷಯಕ್ಕೆ ಬರದೇ ಇರಲೂ ಬಹುದು.
ಆದ್ದರಿಂದ ಇದರಲ್ಲಿ ತೊಡಗಿಸಿ ಕೊಂಡ ಸಂಘಟನೆಗಳು  ಮೃತ ಶರೀರಗಳಿಗೆ ಲಭ್ಯವಾಗ 
ಬೇಕಾದ ಹಕ್ಕುಗಳನ್ನು ಪಡೆಯಲು ಶ್ರಮಿಸದೆ 
ಕೇವಲ ತೋರಿಕೆಯ ಕೆಲಸ ಮಾಡಿದರೆ ಅದು 
ಮೃತ ಶರೀರಗಳೊಂದಿಗೆ ತೋರುವ ಅತ್ಯಂತ ದೊಡ್ಡ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದ್ದರಿಂದ ಮೃತ ಶರೀರಗಳೊಂದಿಗೆ ನಡೆಯುವ ಈ ಅಮಾನವೀಯತೆಗೆ ಸಂಬಂಧಪಟ್ಟವರು ಕೊನೆ ಹಾಡಬೇಕು.ಗೊಂದಲಗಳನ್ನು ನಿವಾರಿಸಬೇಕು.
ಇಲ್ಲದಿದ್ದಲ್ಲಿ ಜನರ ಸಹನೆಯ ಕಟ್ಟೆಯೊಡೆದು ಬೀದಿಗಿಳಿದು ಪ್ರತಿಬಟಿಸಬೇಕಾಗುವುದು ಖಂಡಿತ.
P.P.AHMAD SAQAFI KASHIPATNA

Comments

Popular Posts