MUSTHAFA HASAN ALQADRI OFFICIAL : Justice Policy-ನ್ಯಾಯ ನೀತಿ

Translate

Friday, May 15, 2020

Justice Policy-ನ್ಯಾಯ ನೀತಿ


ನಿಸ್ಸಂದೇಹವಾಗಿ ಅಲ್ಲಾಹನು ನೀತಿ ಗುಣ ಹಾಗು  ಕುಟುಂಬದ  ಸದಸ್ಯ  ರೊಂದಿಗೆ ಒಳ್ಳೆಯ ವರ್ತನೆಯನ್ನು ಪಾಲಿಸಲು ಆಜ್ಞೆ ನೀಡಿರುತ್ತಾನೆ ಅಶ್ಲೀಲತೆ ನಿರಾಕರಣೆ
ದಂಗೆ ಗಳಿಂದ ನಿರಾಕರಿಸಿದ್ದಾನೆ ಯಾಕೆಂದರೆ ನೀವು ಸಲಹೆಯನ್ನು ಪಡೆದು ಕೊಳ್ಳಲಿಕ್ಕಾಗಿದೆ ನಿಮ್ಮ ಹ್ರದಯ ಸನ್ಮಾರ್ಗ ದ ಬೆರಳಕಿನಿಂದ ಪ್ರಜ್ವಲ ಗೊಳಿಸಲಾಗಿದೆ ಅಲ್ಲಾಹನ ಪ್ರತಿಯೊಂದು ಅಜ್ನೆಯೂ ಮಾನವ ಕಲ್ಯಾಣ ಕ್ಕೆ ಶಾಂತಿಯ ಸಮಾಧಾನದ ಸಾಹೋದರತ್ಯದ ಬಿರುದಾಗಿದೆ  ಪ್ರತಿಯೊಂದು ಪಾಪದ ಮೂಲ ಮೂರು ಕಾರ್ಯಗಳಾಗಿವೆ  ಅಶ್ರೀಲತೆ ನಿರಾಕರಣೆ ವಿದ್ರೋಹ 
ಕುರ್ಆನ್ ಏನು ಕಲಿಸುತ್ತದೆ ನೋಡಿ 

إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَىٰ وَيَنْهَىٰ عَنِ الْفَحْشَاءِ وَالْمُنْكَرِ وَالْبَغْيِ ۚ يَعِظُكُمْ لَعَلَّكُمْ تَذَكَّرُونَ

ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ. ನೀವುಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.!!!
ನೀವು  ಜೀವನ ದಲ್ಲಿ ವಿಜಯಿ ಯಾಗ ಬೇಕಾದರೆ ನ್ಯಾಯ ಪಾಲಿಸಿ ಸಿಟ್ಟು ಬಂದರೂ ಬರದಿದ್ದರೂ ನ್ಯಾಯ ವನ್ನು ಪಾಲಿಸುವ  ಆಜ್ಞೆ ಇದೆ   ಅಂತ್ಯ ದಿವಸದಲ್ಲಿ  (ಕಿಯಾಮತ್) ಮಹ್ಷರದಲ್ಲಿ  ಸುಡು ಬಿಸಿಲಿನ  ತಾಪಕ್ಕೆ    ಏಳು ಜನರಿಗೆ  ಅಲ್ಲಾಹು  ತನ್ನ( ಅರ್ಷ್)ಬಾನಲೋಕದ ತಂಗಾಳಿಯಡಿಯಲ್ಲಿ ನಿಲ್ಲಿಸುವವರಲ್ಲಿ ಮೊದಲನೆಯವನು ನೀತಿವಂತನಾದ ಆಡಳಿತಗಾರ ನಾಗಿದ್ದಾನೆ ನ್ಯಾಯ ನೀತಿಯಿಂದ ಜನರೆಡೆಯಲ್ಲಿ ಬಾಳುವವನು ನಾಳೆ ಪರಲೋಕ ದಲ್ಲಿ ಬಾನಲೋಕದ (ಅರ್ಷಿನ)ತಂಪಿನಡಿ ಯಲ್ಲಿರುವನು
ಅಂತ್ಯ ( ಕಯಾಮತ್) ದಿವಸ ದಲ್ಲಿ ಆಡಳಿತ ಗಾರರ ಕೈಯನ್ನು ಸಂಕೊಲೆ ಗಳಿಂದ ಕಟ್ಟಲ್ಪಡುವವು ಅವರನ್ನು ಮಹ್ಷರ ಮೈದಾನ ದಲ್ಲಿ ಕರೆತರವಾಗುವುದು ಒಂದೊಮ್ಮೆ ನೀತಿ ಪಾಲಿಸಿದವರಾಗಿದ್ದರೆ ಅವರ ಸಂಕೋಲೆ ಗಳು ತುಂಡಾಗಿ ಕೆಳಗೆ ಬೀಳುವವು  ಅವರನ್ನು ಸ್ವರ್ಗ ದಲ್ಲಿ ಪ್ರವೇಶಿಸಲಾಗುವುದು ಲೋಕದಲ್ಲಿ ನೀತಿ ನ್ಯಾಯ ವನ್ನು ಪಾಲಿಸದೇ ಇದ್ದಲ್ಲಿ ಅವರನ್ನು ಸಂಕೋಲೆ ಯೊಂದಿಗೆ ನರಕಕ್ಕೆ ಎಸೆಯಲ್ಪಡುವುದು ನಮಗೆ ನೀತಿ ನ್ಯಾಯದ ಆಜ್ಞೆ ಕಲ್ಪಿಸಲಾಗಿದೆ ದೇಶ ದೊಳಗೆ ನಿಯಮಗಳು ನ್ಯಾಯದಿಂದ ಸ್ರಷ್ಟಿಯಾಗುತ್ತವೆ ದೇಶ ಅಪನಂಬಿಕೆ ಯಿಂದ ಉಳಿಯಬಹುದು ಆದರೆ ದಬ್ಬಾಳಿಕೆ ಯಿಂದಲ್ಲ ಜನರ ಪ್ರಾಮಾಣಿಕತೆಯನ್ನು ಪಾವತಿಸುವುದು ನ್ಯಾಯ ಎಂದು ಹೇಳಲಾಗುತ್ತದೆ ನಿನ್ನ ಪರಮಾತ್ಮನ ನಿನ್ನ ಮೇಲೆ ಬಾದ್ಯತೆ ಗಳಿವೆ ನಿನ್ನ ಮೇಲೆ ನಿನ್ನ ಕೆಲವು ಬಾದ್ಯತೆ ಗಳಿವೆ ನಿನ್ನ ಕುಟುಂಬದವರ ನಿನ್ನ ಮೇಲೆ ಬಾದ್ಯತೆ ಗಳಿವೆ ನಿನ್ನ ಪತ್ನಿಯ ನಿನ್ನ ಮೇಲೆ ಬಾದ್ಯತೆ ಗಳಿವೆ ಪ್ರತಿಯೊಬ್ಬ  ನಿನ್ನಿಂದ ಹಕ್ಕು  ಬಾದ್ಯತೆ ಪಡೆಯುವವನಿಗೆ ನಿನ್ನ ಹಕ್ಕು ಬಾದ್ಯತೆ ಗಳಿವೆ ಎಲ್ಲೆಲ್ಲಾ ನ್ಯಾಯ ನೀತಿಯ ಆಡಳಿತ ಇರುವುದೋ ಅಲ್ಲೆಲ್ಲ ಉತ್ತಮ  ಸಮಾಜ ನಿರ್ಮಾಣ ವಾಗುವುದು.
S.M.MUSTHAFA.SASTHANA 
 

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...