Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ

ಒಮ್ಮೆ  ಒಬ್ಬ ಪುರುಷ ತನ್ನ ಪತ್ನಿಯ ಜೊತೆ   ಅಲಿ ರಲಿಯಲ್ಲಾಹು ಅನ್ನು ರವರ ಸನ್ನಿದಿಯಲ್ಲಿ ಹಾಜರಾದರು! ಓ ಅಲಿ ಅವರೇ ಇವಳು ನನ್ನ ಪತ್ನಿ ನಾನು ಇವಳನ್ನು ತುಂಬಾ ಪ್ರಿತಿಸುತ್ತೇನೆ ಆದರೆ ಅವಳು ನನ್ನನ್ನು ಆನುಸರಿಸುವುದಿಲ್ಲ  ನನ್ನ  ಮಾತು ಕೇಳುವುದಿಲ್ಲ  ಎಂದು ಹೇಳೀದಾಗ .ಈ ಮಾತನ್ನು ಕೇಳುತ್ತಲೇ ಅಲಿ ಯವರು ಹೇಳಿದರು ಓ ಮನುಷ್ಯ ಹೇಗೇ ಹೇಳುತ್ತಿಯ ನೀನು ಅವಳನ್ನು ಪ್ರೀತಿಸುತ್ತೀಯ! ಎಂದು ಕೇಳಿದಾಗ ಆ ಮನುಷ್ಯ ಉತ್ತರ ನೀಡುತ್ತಾನೆ ಓ ಅಲಿಯವರೆ ನಾನು ಅವಳನ್ನು ಪ್ರೀತಿಸುತ್ತೇನೆ ಅದರ ಸಾಕ್ಷಿ ನಾನಾಗಿದ್ದೇನೆ ಆವಾಗ ಅಲಿ ಯವರು ಹೇಳಿದರು. ಪ್ರೀತಿ ಮತ್ತು ಇಷ್ಟ ದಲ್ಲಿ ವ್ಯತ್ಯಾಸ ಇದೆ ಒಬ್ಬ ಮನುಷ್ಯ ತನ್ನನ್ನು ತಾನು ಪ್ರೀತಿಸಿದರೆ ಅವನು ವಸ್ತು ಗಳನ್ನು ಇಷ್ಟ ಪಡುತ್ತಾನೆ ಮತ್ತು ಇಷ್ಟ ಪಟ್ಟ ನಂತರ ಅವನು ನಾನು ಇಷ್ಟ ಪಟ್ಟ ದೆಲ್ಲವೂ ನನ್ನ ಆಜ್ಞೆ ಪಾಲಿಸಬೇಕು .ನನ್ನ ಮಾತು ಕೇಳಬೇಕು ಎಂದು ಬಾವಿಸುವುದು ಸಹಜ   ಆದರೆ ಎಲ್ಲಿ ಪ್ರೀತಿ ಪ್ರೇಮ  ಇರುತ್ತದೆ ಅಲ್ಲಿ ಮನುಷ್ಯ ತನ್ನ ಇಚ್ಛೆಗೆ ನಾಂದಿ ಹೇಳುತ್ತಾನೆ ತನ್ನನ್ನು ತಾನು ವಿಭಿನ್ನ ವಾಗಿ ನೋಡುತ್ತಾನೆ.ಓ ಮನುಷ್ಯ ನೆನಪಿಡು ಪ್ರೀತಿ ಪ್ರೇಮದ ಶ್ರೇಷ್ಠ ವಾದ ಪುರಾವೆ  ಅದು  ಸಾಷ್ಟಾಂಗ ವಾಗಿದೆ ತಾನು ಬಾಗಲು  ತಗ್ಗಿ  ಬಗ್ಗಿ ನಡೆಯಲು ಪ್ರೀತಿ  ಅಂತಾರೆ   ಪ್ರೀತಿಯ ಮುಂದೆ ತನ್ನನ್ನು     ತಾನು ಸಂಪೂರ್ಣವಾಗಿ ಅರ್ಪಿಸಿ   ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ ತನ್ನ ಇಚ್ಚೆಯನ್ನು ತ್ಯಾಗಮಾಡಿ ಅವಳ  ಸಂತೋಷ ದಲ್ಲಿ ಪಾಲ್ಗೊಳ್ಳಲು  ಪ್ರೀತಿ ಅಂತಾರೆ!  ಶೈತಾನ್ ಪರಮಾತ್ಮನನ್ನು ಇಷ್ಟ ಪಡುತ್ತಿದ್ದನು ಆದರೆ ಪ್ರೀತಿಸುತ್ತಿರಲಿಲ್ಲ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಷ್ರಶ್ನೆಗಳಿಗೆ ಆವಕಾಶ ವಿಲ್ಲ ದೂರು ಗಳಿಗೆ ಅವಕಾಶ ವಿಲ್ಲ ಪರಮಾತ್ಮನು ಶೈತಾನನಿಗೆ ಕಲ್ಪಿಸಿದನು  ಆದಿ ಮಾನವ ಆದಮ್ ನಿಗೆ ಸಾಷ್ಟಾಂಗ ಮಾಡಲು ಎಲ್ಲಾ ದೇವ ದೂತರಿಗೆ ಪರಮಾತ್ಮನಲ್ಲಿ ಪ್ರೀತಿ ಇತ್ತು ಎಲ್ಲರೂ ಪರಮಾತ್ಮನ ಆಜ್ಞೆ ಯನ್ನು ಪಾಲಿಸಿದರು ಆದರೆ ಶೈತಾನ್ ಮಾತ್ರ ಪ್ರಶ್ನೆ ಕೇಳಿ ಬಿಟ್ಟ ಅಲ್ಲಿಂದಲೇ ಪ್ರೀತಿ  ಹಾಗೂ ಇಷ್ಟ ದ ವ್ಯತ್ಯಾಸ ಕಚಿತವಾಗಿದ್ದು
✒️MUSTHAFA HASAN ALI KHAN ALQADRI 

Comments

Popular Posts