Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಝಕಾತ್ ನ ಸಂಕ್ಷಿಪ್ತ ವಿವರಣೆ

ಏಳುವರೆ ತೊಲ ಬಂಗಾರ ಅಥವಾ ಐವತ್ತ ಎರಡು ವರೆ ತೊಲ ಬೆಳ್ಳಿ ಅಥವಾ ಅದರಲ್ಲಿ ಕಮ್ಮಿ ಬೆಲೆಯ ಹಣ ಒಂದು ವರ್ಷಗಳಿಂದ ನಿಮ್ಮ ಬಳಿ ಇದ್ದರೆ ಅದರಲ್ಲಿ ಝಕಾತ್ ಕಡ್ಡಾಯವಾಗಿ ಕೊಡಬೇಕಾಗಿದೆ ಯಾರಾದರು ಕೊಡದೇ ವಿಳಂಬ ಮಾಡಿದರೆ ಪಾಪಿ ಯಾಗುವನು 
ಅಲ್ಲಾಹನ ಮುಂದೆ ಉತ್ತರ ನೀಡಬೇಕಾದಿತು  ಅಥವಾ ಯಾರಾದರೂ ಅಡ್ವಾನ್ಸ್ ಆಗಿ ಕೊಟ್ಟರೂ ಸಿಂದು ಆಗುವುದು ಎರಡು ವರ್ಷಗಳ ಅಡ್ವಾನ್ಸ್ ಆಗಿ ಕೊಡಬಹುದು ಯಾರಿಗೆಲ್ಲ ಕೊಡಬೇಕು ಎಂಬುವುದರ ಬಗ್ಗೆ ವಿವರಣೆ 
1)ದರಿದ್ರ ಅಥವಾ ಫಕೀರ್  ಎಂದೂ ಹೇಳಲಾಗುವುದು  ಅಂದರೆ ಅವನಲ್ಲಿ ಏನೂ ಇಲ್ಲ ಮನೆ ಮಠ ಇಲ್ಲದವನಿಗೆ ದರಿದ್ರ  ಎಂದು ಹೇಳಲಾಗುವುದು ಅವನಿಗೆ ಕೊಡಬಹುದು 
2) ಬಡವ ಅವನ ಹತ್ತಿರ ವಾಸಿಸುವ ಮನೆ ಇದೆ ಸಣ್ಣ ಪುಟ್ಟ ಕೆಲಸ ಗಳೂ ಇವೆ ಮಕ್ಕಳ ಆಹಾರದ ವ್ಯವಸ್ಥೆಯೂ ಇದೆ ಆದರೆ ಅವನಲ್ಲಿ ಝಕಾತ್ ಕೊಡಲು ಅರ್ಹ ನಾಗುವ ಯಾವ ಲಕ್ಷಣವೂ ಇಲ್ಲ ಅವನು ಬಡವ ಎಂಬ ವರ್ಗದಲ್ಲಿ ಬರುವನು ಅವನಿಗೂ ನಿಮ್ಮ ಝಕಾತ್ ಕೊಡಬಹುದು 
3) (عامل )ಝಕಾತ್  ನ ಹಣ ಸಂಗ್ರಹಿಸುವ ವ್ಯಕ್ತಿ ಅವನ ಸಂಬಳವೂ ಝಕಾತ್ ನ ಹಣ ದಿಂದ ನೀಡಬಹುದು 
4) ನಾಲ್ಕನೆ ಯವನು    ಅವರ ಬಗ್ಗೆ ಒಂದು ಒಳ್ಳೆಯ ವಿಚಾರ ಇದೆ ಅವರು ಕಾಲ ಕ್ರಮೇಣ ಇಸ್ಲಾಮ್ ಸತ್ಯ ದರ್ಮಅನುಸರಿಸಲು ಮುಂದಾಗುವ ನಿರೀಕ್ಷೆ ನಿಮ್ಮಲ್ಲಿ ಇದ್ದರೆ ಅವರಿಗೂ ಕೊಡ ಕೊಡಬಹುದು ಆದರೆ ಇವತ್ತು ಇಸ್ಲಾಮ್ ಲೋಕದಲ್ಲಿ ಮುಂದುವರಿಯುತ್ತಿದೆ ಆದರಿಂದ ಇದರ ಅವಶ್ಯಕತೆ ಇಲ್ಲವಾಗಿದೆ
5/
ಒಬ್ಬ ಗುಲಾಮ ಅವನನ್ನು ಅವನ ಮಾಲಿಕನಿಂದ ಸ್ವಾತಂತ್ರ್ಯ ದೊರಕಿಸಿ ಕೊಡಲು ಕರ್ಚಾಗುವ ಹಣ ಅವನಿಗೂ ಕೊಡಬಹುದು 
6]ಗಾರಿಮೀನ್    ಅಂದರೆ ಸಾಲಗಳ ಸಂಕೋಲೆಯಲ್ಲಿ ಬಿದ್ದು ಕಷ್ಟ ಪಡುವವನು  ಅವನ ಬಳಿ ಸಾಲ ತೀರಿಸುವ ಯಾವ ದಾರಿಯೂ ಇಲ್ಲ ವಾದ್ದರಿಂದ ಅವನಿಗೂ ಕೊಡಬಹುದು 
7في سبيل الله ಅಲ್ಲಾಹನ ಮಾರ್ಗದಲ್ಲಿ ಹೊರಟವನು ಧಾರ್ಮಿಕ ಇಲ್ಮ್ ಜ್ನಾನ ಕಲಿಯುವ ವಿದ್ಯಾರ್ಥಿಗಳು ಇವರ ವರ್ಗದಲ್ಲಿ ಬರುವರು ಅವರಿಗೂ ಕೊಡಬಹುದು 
8
 ابن السبيل )ಮುಸಾಫಿರ್  ಸಂಚಾರಿ ಅಥವಾ ಪ್ರಯಾಣಿಕ ಅಂತ ಹೇಳಬಹುದು ಅವನು ಹಣವಂತನಾದರೂ ಅವನಿಗೆ ಕೊಡಬಹುದು ಕಾರಣ ಅವನು ಪ್ರಯಾಣ ದಲ್ಲಿ ಇದ್ದವನು 

ಎಷ್ಟು ನೀಡಬೇಕು
ನಲವತ್ತನೇ ಒಂದು ಭಾಗ ನಿಮ್ಮ ಝಕಾತಿನ ಹಣ ಎಲ್ಲರಿಗೆ ವಿತರಿಸಿ ಕೊಡಬಹುದು ಅಥವಾ ಒಬ್ಬ ರಿಗೂ ಕೊಡಬಹುದು ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم ತಿಳಿಸುತ್ತಾರೆ  ನಾನು ಅಲ್ಲಾಹನ ಆಣೆ ಹಾಕಿ ಹೇಳುತ್ತಿದ್ದೇನೆ ಸದಕಾ ದಿಂದ ನಿಮ್ಮ ಸಂಪತ್ತು ಕಡಿಮೆಯಾಗುವುದಿಲ್ಲ ನಿಮ್ಮ ಲೆಕ್ಕ ನಿಮ್ಮ ಲೆಕ್ಕಾಚಾರದಿಂದ ಕಡಿಮೆ ಯಾಗಿದೆ ಎಂದು ಗಾಸ ವಾಗ ಬಹುದು ಆದರೆ ನಾನು ಹೇಳುತ್ತೇನೆ ನಿಮ್ಮ ಸಂಪತ್ತು ಅಧಿಕ ವಾಗುವುದು ಎಂದು ನುಡಿದರು ಅನುಭವಿಸುವವರು ಅನುಭವಿಸಿ ನೋಡಿ ಅಲ್ಲಾಹನ ಮಾರ್ಗದಲ್ಲಿ ನೀಡಿದ ಸಂಪತ್ತು ಯಾವಾಗಲೂ ಕಡಿಮೆ ಆಗ ಲಾರವು .......
ಮನುಷ್ಯನು ಹೇಳುವನು ನನ್ನ ಸಂಪತ್ತು ನನ್ನ ಸಂಪತ್ತು ಅಲ್ಲಾಹನ ರಸೂಲರು ಹೇಳುತ್ತಾರೆ ಮನುಷ್ಯನ ಸಂಪತ್ತು ಮೂರು ತರಹದ ಆಗಿರುತ್ತದೆ ಒಂದು ಅವನು ಸೇವಿಸಿದ ಆಹಾರ ತಿಂದು ನಷ್ಷಪೆಟ್ಟು  ಹೋಯಿತು ಮತ್ತೊಂದು ಅವನು ಧರಿಸಿದ ಬಟ್ಟೆ  ಹಳೆಯದಾಯಿತು ಮೂರನೆಯದು ಅವನು ಅಲ್ಲಾಹನ ಮಾರ್ಗದಲ್ಲಿ ನೀಡಿದ ಸಂಪತ್ತು ಆಗಿದೆ ನಿಮ್ಮ ಸಂಪತ್ತನ್ನು ಝಕಾತ್ ನೀಡಿ ಶುದ್ಧೀಕರಿಸಿ ನಿಮ್ಮ ಬಳಿ ಇರುವ ರೋಗಿಯನ್ನು ಸದಖಾ ನೀಡಿ ಚಿಕಿತ್ಸೆ ಕೊಡಿಸಿ ಮತ್ತು ನಿಮಗೆ ಆಫತ್ತು ಗಳು ಬರಲಾರಂಬಿಸಿದರೆ ಅಲ್ಲಾಹನ ಬಳಿ ಸಹಾಯ ಕೇಳಿರಿ ಇವತ್ತು ನಾವು ನಿಜವಾಗಿಯೂ ಸದಖಾ ದ ಗೌರವ ವನ್ನು ಕಡೆಗಣಿಸಿದ್ದೇವೆ ಆದಿ ಕಾಲದಲ್ಲಿ ಜನರು ಅವರಲ್ಲಿ ಯಾರಾದರೂ ರೋಗಿಯಾದರೆ ಮೊಟ್ಟ ಮೊದಲಿಗೆ ಸದಖಾ ನೀಡುತ್ತಿದ್ದರು ತದನಂತರ ವೈದ್ಯನನ್ನು ಸಂದರ್ಶಿಸುತ್ತಿದ್ದರು ಸದಖಾ ವು   ( ತಕ್ದೀರ್ )ಹಣೆಬರಹ ವನ್ನು ಬದಲಾಯಿಸುತ್ತೆ ಸದಖಾ ದಿಂದ ನಿಮ್ಮ ರೋಗಿಯನ್ನು  ಚಿಕ್ಕಿತ್ಸೆ ಮಾಡಿ ವೈದ್ಯರನ್ನು ಸಂದರ್ಶಿಸುವುದು ಸುನ್ನತ್ ಆಗಿದೆ ಇದರ ಯಾವ ತಡೆಯೂ ಇಲ್ಲ ಆದರೆ ಒಂದು ವಿಚಾರ ನೆನಪಿನಲ್ಲಿಡಬೇಕಾಗಿದೆ ವೈದ್ಯರ ಬಳಿ ಔಷದಿ ಇದೆ ಆದರೆ شفاء  ಶಿಫಾ ಅಲ್ಲಾಹನ ಬಳಿ ಮಾತ್ರ ವಾಗಿದೆ...
✒️MUSTHAFA HASAN ALIKHAN ALQADRI

Comments

Popular Posts