Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?

ಆಪತ್ಭಾಂದವರು  ಅಪನಂಬಿಗಸ್ತರಾದರೇ

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
************

ವಯಸ್ಸು ನೂರು ದಾಟಿದ ವಯೋವೃದ್ಧನೇ 
ಆಗಿರಬಹುದು. ಅಥವಾ ಮರಣ ಶೈಯ್ಯೆಯ
ಕೊನೆಯುಸಿರಿನಲ್ಲಿರುವ ವ್ಯಕ್ತಿಯೇ ಆಗಿರಬಹುದು.
ಅಥವಾ ಸುತ್ತು ಮುತ್ತ ತಾನೇ ಬೆವರು ಸುರಿಸಿ ಸಾಕಿ 
ಸಲಹಿದ ತನ್ನ ಪ್ರೀತಿಯ ಪರಿವಾರ ಪತ್ನಿ ಮಕ್ಕಳು 
ಮೊಮ್ಮಕ್ಕಳು ಸುತ್ತುವರಿದೇ ಇರಬಹುದು.
ಆದರೆ ಈ ರೋಗಿ ಮಾತ್ರ ಅವನ ಇಂತಹ ಆತಂಕದ ಸಮಯದಲ್ಲೂ ಅಂಗಲಾಚುವುದು ನನ್ನನ್ನು 
ಆಸ್ಪತ್ರೆಗೆ ದಾಖಲಿಸಿ ಎಂದಾಗಿರುತ್ತದೆ.

ಆಸ್ಪತ್ರೆಯಲ್ಲಿ ವೈದ್ಯರುಗಳ ಹಾಗೂ 
ಅವರ ಪರಿವಾರದ ಸುಪರ್ದಿಯಲ್ಲಿ 
ಇರುವಷ್ಟು ಕಾಲ ನಾನು ಸುರಕ್ಷಿತನಾಗಿರುತ್ತೇನೆಂಬ 
ಈ ರೋಗಿಯ ಅಚಲವಾದ ನಂಬಿಕೆಯಾಗಿದೆ 
ಇದಕ್ಕೆ ಮುಖ್ಯ ಕಾರಣ.

ಆಸ್ಪತ್ರೆಗಳೆಂದರೆ ರೋಗಿಗಳಿಗೆ ಕೊನೆಯುಸಿರಿನ ತನಕವೂ ಪವಿತ್ರ ದೇಗುಲಗಳಿದ್ದಂತೆ.
ವೈದ್ಯರುಗಳೆಂದರೆ ಅವರಿಗೆ ತಮ್ಮ ಈ ಅತ್ಯಂತ 
ಆತಂಕದ ಈ ಸಮಯದಲ್ಲೂ ತಮ್ಮ 
ಪ್ರೀತಿಯ ಪರಿವಾರಕ್ಕಿಂತಲೂ ಹೆಚ್ಚು ಕಾರುಣ್ಯದ ಪ್ರತೀಕವಾಗಿ ತೋರುತ್ತಾರೆ.

ಆದ್ದರಿಂದಲೇ ಒಬ್ಬ ವೈದ್ಯನ ಕರುಣೆಯ ಒಂದೇ 
ಒಂದು ಮಾತು ಕೆಲವೊಮ್ಮೆ ಸಾವಿರಾರು ರೂಪಾಯಿಯ ಔಷದಿಗಳಿಗಿಂತಲೂ ರೋಗಿಯ 
ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.ಅದು ರೋಗಿಗೆ ಅಷ್ಟೊಂದು ಆತ್ಮಸ್ಥೈರ್ಯವನ್ನು ಉಂಟುಮಾಡುವ ಕಾರ್ಯವಾಗಿದೆ.

ಇದೇ ರೀತಿ ಬಹುತೇಕ ವೈದ್ಯರು ಸಹ ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ 
ರೋಗಿಗಳ ಸೇವೆಯಲ್ಲಿಯೇ ಆತ್ಮಸಂತೃಪ್ತಿ ಕಂಡು ಕೊಳ್ಳುವವರಾಗಿರುತ್ತಾರೆ.
ಅವರ ಸ್ವಂತ ಅಗತ್ಯಗಳನ್ನು,ಕಷ್ಟ ಕಾರ್ಪಣ್ಯ
ಗಳನ್ನು ಬದಿಗಿಟ್ಟು ಯಾವುದೇ ಮಧ್ಯ ರಾತ್ರಿ ಹಗಲೆಂದು ವ್ಯತ್ಯಾಸವಿಲ್ಲದೆ ಮಳೆ ಚಲಿ 
ಬಿಸಿಲೆಂದು ನೋಡದೆ ರೋಗಿಗಳ ಸೇವೆ ಮಾಡುತ್ತಾ ಬಂದವರಾಗಿರುತ್ತಾರೆ.
ಶಿಸ್ರೂಸೆಯ ಸಮಯದಲ್ಲಿ ಸಾಮಾನ್ಯವಾಗಿ ರೋಗಿಯಿಂದ ಎದುರಾಗುವ ಯಾವುದೇ ರೀತಿಯ ಶಕ್ತವಾದ ಪ್ರತಿರೋಧಗಳನ್ನು ಅತ್ಯಂತ ಸಹನೆಯಿಂದ ಸಹಿಸಿ ಅವುಗಳನ್ನೆಲ್ಲಾ ಹೂಮಾಲೆಯಂತೆ ಸ್ವೀಕರಿಸಿ ಈ ವೈದ್ಯರು ಮಾಡುವ ಸೇವೆಯು ಸರಿಸಾಟಿಯಿಲ್ಲದ ಸೇವೆಯಾಗಿರುತ್ತದೆ.
ಇದರಿಂದಾಗಿಯೇ ವೈದ್ಯರೆಂದರೆ ಜನಸಾಮಾನ್ಯರಿಗೆ ಅತ್ಯಂತ 
ಗೌರವ ಭಾವನೆ.
ಮಾತ್ರವಲ್ಲ ಇದು ಒಂದು ಜೀವಿಯ ಜೀವದ ಬೆಲೆಯರಿತು ಜೀವವನ್ನು ಉಳಿಸುವ ಸಾಹಸಿಕ ಕಾರ್ಯವಾಗಿರುವುದರಿಂದ ಈ ಸೇವೆಯು ಅಸಾಮಾನ್ಯ ಸೇವೆಯೆನಿಸುತ್ತದೆ.

ಪವಿತ್ರ ಖುರ್ಆನ್ ಹೇಳುತ್ತದೆ.

أنه من قتل نفسا بغير نفس أو فساد في الأرض فكأنما قتل الناس جميعا ومن أحياها فكأنما أحيا الناس جميعا

ಭೂಮಿಯಲ್ಲಿ ಯಾವುದೇ ನಾಶವನ್ನು ಅಥವಾ  ಕೊಲೆಯನ್ನು ಮಾಡದ ಒಂದು ಶರೀರವನ್ನು ಯಾರಾದರೂ ಕೊಂದರೆ ಅವನು ಇಡೀ ಮಾನವ ಸಮೂಹವನ್ನು ಕೊಂದವನಂತೆ.
ಒಂದು ಜೀವವನ್ನು ಉಳಿಸಿದರೆ ಇಡೀ ಮಾನವ ಸಮೂಹದ ಜೀವವನ್ನು ಉಳಿಸಿದಂತೆ.

ಒಂದು ಜೀವಿಯ ಜೀವಕ್ಕೆ ಬಹಳಷ್ಟು ಬೆಲೆಯನ್ನು ಕಲ್ಪಿಸುವ ಒಂದು ಧರ್ಮವಾಗಿದೆ ಇಸ್ಲಾಮ್.
ಯಾವುದೇ ಬೆಲೆ ತೆತ್ತಾದರೂ ಒಂದು 
ಜೀವವನ್ನು ಉಳಿಸುವ ಪ್ರಯತ್ನ 
ಮಾಡಬೇಕೇ ಹೊರತು ಆ ಜೀವಕ್ಕೆ ಮಾರಕವಾಗುವ ಯಾವುದೇ ಕಾರ್ಯವನ್ನು ಯಾವತ್ತೂ ಮಾಡಬಾರದೆಂದಾಗಿದೆ ಇಸ್ಲಾಮ್ ಹೇಳುವುದು.
ಕೊನೆಯ ಹಂತದಲ್ಲಿ ಒಂದು ಮನುಷ್ಯ ಜೀವವನ್ನು ಉಳಿಸಲು ಅನ್ಯ ಮಾರ್ಗವಿಲ್ಲದೆ 
ಬಂದಲ್ಲಿ ಇಸ್ಲಾಮ್ ಕಠಿಣ ನಿಷಿದ್ಧಗೊಳಿಸಿದ ವಸ್ತುವನ್ನು ತಿನ್ನಬೇಕಾಗಿ ಬಂದಲ್ಲಿ ಅದು 
ತಿಂದಾದರೂ ಜೀವವನ್ನು ಉಳಿಸಬೇಕೆಂದಾಗಿದೆ.

ಆದ್ದರಿಂದಲೇ ವೈದ್ಯಶಾಸ್ತ್ರವನ್ನು ಇಸ್ಲಾಮ್ ಬಹಳ ಪ್ರೋತ್ಸಾಹಿಸಿರುವುದು.
ಅದೊಂದು ಉದ್ಯೋಗ ಎಂಬುವುದಕ್ಕಿಂತ ಮಿಗಿಲಾಗಿ ಮಾನವ ಸಮೂಹಕ್ಕಾಗಿ ಮಾಡುವ ಧರ್ಮ ಸಮರವಾಗಿದೆ.

ಇದರಿಂದಾಗಿಯೇ ಇಮಾಮ್ ಶಾಫೀ ರಳಿಯಲ್ಲಾಹು ಅನ್ಹುರವರು ಹೇಳಿದರು:- 
ಧಾರ್ಮಿಕ ಸಂಶಯಗಳನ್ನು ನಿವಾರಿಸುವ ಧಾರ್ಮಿಕ
ವಿದ್ವಾಂಸನಿಲ್ಲದ ಹಾಗೂ ಶಾರೀರಿಕ ಸಂಶಯಗಳನ್ನು ನಿವಾರಿಸುವ ವೈದ್ಯನಿಲ್ಲದ ರಾಜ್ಯದಲ್ಲಿ ವಾಸಿಸಲೇ ಬಾರದು. 

ಹೀಗೆ ನಿಸ್ವಾರ್ಥ ಮನೋಭಾವದೊಂದಿಗೆ 
ಸೇವಾ ನಿರತರಾದ ವೈದ್ಯರು ತಮ್ಮ ಈ ನಿಷ್ಕಳಂಕ ಸೇವೆಯನ್ನು ತಮ್ಮ ವಾರ್ದಕ್ಯವನ್ನೂ ಲೆಕ್ಕಿಸದೆ ಕೊನೆಯುಸಿರಿನ ತನಕವೂ ಮುಂದುವರಿಸ ಬಯಸುವವರಾಗಿದ್ದಾರೆ.
ಯಾಕೆಂದರೆ ಅವರು ಅದನ್ನು ಒಂದು ಉದ್ಯೋಗ
ಎಂದು ಕಾಣುವುದಕ್ಕಿಂತಲೂ ಹೆಚ್ಚಾಗಿ ಇದೊಂದು ಪವಿತ್ರ ಸೇವೆ ಎಂದು ಮನಗಂಡವರಾಗಿರುತ್ತಾರೆ.
ಇದುವೇ ನೈಜ ವೈದ್ಯ ಧರ್ಮ ಎಂಬುದು ತರ್ಕವಿಲ್ಲದ ವಿಷಯವಾಗಿದೆ.
ಮಾತ್ರವಲ್ಲ ಇಂತಹ ವೈದ್ಯರ ಸಾಹಸಿಕ ನಿಸ್ವಾರ್ಥ ಪ್ರಯತ್ನಗಳಿಂದ ಅದೆಷ್ಟೋ
ಜೀವಗಳು ರಕ್ಷಣೆ ಪಡೆದ ಹಾಗೂ ಪಡೆಯುತ್ತಿರುವ ಅನುಭವಗಳು ಯಾರಿಂದಲೂ ನಿಷೇದಿಸಲಸಾಧ್ಯ.

ಹೀಗೆ ರೋಗಿ ಮತ್ತು ವೈದ್ಯರ ಮದ್ಯೆ ಇರುವ ಈ ಅವಿನಾಭಾವ ಸಂಬಂಧ ನಿರಂತರ ಹಾಗೂ ನಿರಾತಂಕವಾಗಿ ನಡೆಯುವ ಹಾಗೂ ನಡೆಯಲೇ ಬೇಕಾದ ಒಂದು ಕಾರ್ಯವಾಗಿದೆ. ಮಾನವೀಯತೆ ಈ ಭೂಮಿ ಮೇಲೆ ಉಳಿಯ ಬೇಕಾದರೆ ಇದು ಅನಿವಾರ್ಯ ಕೂಡಾ.

ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ 
ಹಾಗೂ ವೈದ್ಯ ಪರಂಪರೆಗೆ ಕಳಂಕವೆಂಬಂತೆ ಇತ್ತೀಚೆಗಿನ ದಿನಗಳಲ್ಲಿ ನಡೆಯುವ ಕೆಲವು 
ಸಂಭವ ವಿಕಾಸಗಳು ರೋಗಿ ಮತ್ತು ವೈದ್ಯರ ನಡುವಿನ ಅಪಾರವಾದ ನಂಬಿಕೆಗಳಿಗೆ ಅಡ್ಡಿಯಾಗುತ್ತಿವೆಯೇ ಎಂಬ ಸಂಶಯ ಕಾಡಲಾರಂಭಿಸಿದೆ.
ಕೆಲವು ವೈದ್ಯರು ಮತ್ತು ಆಸ್ಪತ್ರೆಗಳು ರೋಗಿಗಳನ್ನು ಮಾಡುವ ಶೋಷಣೆಯಿಂದ ಹಾಗೂ ನಡೆದು ಕೊಳ್ಳುವ ರೀತಿಯಿಂದ ಈ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.ಇದನ್ನು ಪುಷ್ಟೀಕರಿಸುವ ಅನೇಕ ಉದಾಹರಣೆಗಳಿವೆ

ವಿದ್ಯಾಬ್ಯಾಸ ವ್ಯಪಾರೀಕರಣದಿಂದ 
ಪ್ರಾರಂಭವಾದ ಅಧಃಪತನ ಎಲ್ಲಾ ವಲಯಕ್ಕೂ ವ್ಯಾಪಿಸಿ ಬಿಟ್ಟಿದೆ.ಅದರಂತೆ ಇವತ್ತು ಕೋಟಿಗಟ್ಟಲೆ ವ್ಯಯಿಸಿ ವಿದ್ಯಾಬ್ಯಾಸ 
ಪಡೆದ ವೈದ್ಯರು,ಐಶಾರಾಮಿ ಹೈಟೆಕ್ 
ಆಸ್ಪತ್ರೆಗಳು ತಮ್ಮ ಬೇಕಾಬಿಟ್ಟಿ ವ್ಯಾಪಾರ ಮನೋಭಾವದಿಂದ ತಮ್ಮ ನೈತಿಕತೆಯನ್ನು ಸಂಪೂರ್ಣವಾಗಿ ಕಳೆದು ಕೊಳ್ಳುತ್ತಿವೆಯಾ ಜೀವಕಾರುಣ್ಯದ ಪ್ರತೀಕಗಳಾಗ ಬೇಕಾದ ಕೇಂದ್ರಗಳು ಕಮೀಷನ್ ದಂಧಾ ಕೇಂದ್ರ
ಗಳಾಗಿ ಮಾರ್ಪಡುತ್ತಿವೆಯಾ ರಕ್ಷಕರಾಗ ಬೇಕಾದವರು ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದಾರಾ ಎಂಬ ಗುಮಾನಿಗಳು ಗಟ್ಟಿಯಾಗುತ್ತಿದೆ.

ಒಂದು ವೇಳೆ ಈ ಗುಮಾನಿ ಗಳು ನಿಜವಾದಲ್ಲಿ ಮನುಷ್ಯ ಸಮೂಹವೇ ಅಪಾಯದಂಚಿಗೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆಸ್ಪತ್ರೆಗಳನ್ನು ಮತ್ತು ವೈದ್ಯರನ್ನು ತಮ್ಮ 
ಅಂತಿಮ ಅಭಯ ಕೇಂದ್ರಗಳಾಗಿ 
ಕಂಡಿದ್ದವರು ಭೀತಿಯ ಹಾಗೂ ಅನುಮಾನಗಳ ಕೇಂದ್ರಗಳಾಗಿ ಕಾಣುವುದರಲ್ಲಿ ಸಂಶಯವಿಲ್ಲ.
ಮತ್ತೆ ಇಲ್ಲಿ ಆತ್ಮವಿಶ್ವಾಸ,ನಂಬಿಕೆಗಳು 
ಯಾವುದೂ ಉಳಿಯಲು ಸಾಧ್ಯವಿಲ್ಲ.

ಈ ಸಂಶಯಗಳು ಇತ್ತೀಚಿನ ಕೆಲವು 
ಸಮಯಗಳಿಂದಲೇ ಇದ್ದರೂ ಇದೀಗ ಕೊರೋನ ಬಂದ ಮೇಲೆ ಅದು ಮತ್ತಷ್ಟು ಬಲಗೊಳ್ಳುತ್ತಿದೆ.ಈ ಕೊರೋನ ಎಂಬ ಮಹಾಮಾರಿ ಯಿಂದ ಕಂಗಾಲಾಗಿರುವ ಜನಸಮೂಹದಲ್ಲಿ ಧೈರ್ಯ ತುಂಬಿ ಈ ವಿಪತ್ತನ್ನು ಎದುರಿಸುವ ಸಾಮರ್ಥ್ಯ ವನ್ನು ಸೃಷ್ಟಿಸಬೇಕಾದ ವೈದ್ಯರೇ ಸಮೂಹದಲ್ಲಿ ಇದನ್ನು ಗೊಂದಲದ ಗೂಡಾಗಿ ನಿರ್ಮಾಣ ಮಾಡಿ ಜನರನ್ನು ಭಯಬೀತರನ್ನಾಗಿ ಮಾರ್ಪಡಿಸಿರುತ್ತಾರೆ.

ಈ ರೋಗವನ್ನು ಎದುರಿಸಲು ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆ ಸುಲಭವೂ ಸರಳವೂ ಆದ ಅನೇಕ ದಾರಿಗಳನ್ನು 
ನಿರ್ದೇಶಿಸುವಾಗ ಇವರು ಮಾತ್ರ ಅದನ್ನು ಕಠಿಣಗೊಳಿಸುತ್ತಿರುವುದರ ಹಿಂದೆ ಅಡಗಿರುವ ರಹಸ್ಯ ಅರ್ಥವಾಗುವುದೇ ಇಲ್ಲ.
ಮಾತ್ರವಲ್ಲ ಇದರಿಂದ ಇಡೀ ವೈದ್ಯ ಸಮೂಹವನ್ನೇ ಸಂಶಯದಿಂದ ನೋಡುವಂತಾಗಿದೆ.
ಇದರಿಂದ ತಮ್ಮ ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ 
ನಿಸ್ವಾರ್ಥ ವೈದ್ಯರುಗಳ ಸೇವೆಗೂ ಬೆಲೆಯಿಲ್ಲದಂತಾಗಿದೆ.

ಅಂತ್ಯ ದಿನ ಹತ್ತಿರವಾಗುವಾಗ ಜನರೆಡೆಯಲ್ಲಿ 
ಪರಸ್ಪರ ನಂಬಿಕೆ ಮಾಯವಾಗ ಬಹುದೆಂದು
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 
ವಸಲ್ಲಮರು ಹೇಳಿರುವುದು ಈ ಕಾಲದ ಬಗ್ಗೆಯಾಗಿರ ಬಹುದು.
ಇವತ್ತು ನಂಬಿಕೆಗಳು ಸಂಪೂರ್ಣ ಹೊರಟು ಹೋಗಿವೆ.
ಎಲ್ಲಾ ವಲಯಗಳಲ್ಲಿಯೂ ಯಾರೂ ಯಾರನ್ನೂ ನಂಬುವ ಪರಿಸ್ದಿಯಲ್ಲಿ ಇಲ್ಲ.
ಇದೀಗ ವೈದ್ಯ ಸಮೂಹವು ಇದಕ್ಕೆ ಹೊರತಾಗಿಲ್ಲ.
ಇದೊಂದು ಅಪಾಯಕಾರಿ 
ಬೆಳವಣಿಗೆ ಎಂದು ಪ್ರತ್ಯೇಕ ಹೇಳ ಬೇಕಾಗಿಲ್ಲ.

ಆದ್ದರಿಂದ ಕೊರೋನ ವಿಷಯದಲ್ಲಿ ಸಮೂಹದಲ್ಲಿ ಮನೆಮಾಡಿರುವ ಅನೇಕಾನೇಕ ಗೊಂದಲಗಳನ್ನು ನಿವಾರಿಸುವ ಕೆಲಸ ಬಹಳ ತುರ್ತಾಗಿ ನಡೆಯಬೇಕಿದೆ. ವೈದ್ಯರು ಈ ವಿಶಯದಲ್ಲಿ ಸರಳವೂ ಸುಲಭವೂ ಆದ ಮಾರ್ಗಗಳನ್ನು ಕಂಡು ಹಿಡಿಯುವಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಬೇಕು.
ಜನರ ಭಯಭೀತಿ ನಿವಾರಿಸಿ ದೈರ್ಯ ತುಂಬ ಬೇಕು.ವೈದ್ಯ ಸಮೂಹದೊಂದಿಗಿರುವ ವಿಶ್ವಾಸ ನಂಬಿಕೆಗಳನ್ನು ಸುಭದ್ರ ಗೊಳಿಸಬೇಕು.

ಕೊರೋನ ಪೀಡಿತರಾಗಿ ಮರಣ ಹೊಂದಿದ ಮೃತ ಶರೀಗಳನ್ನು ಅತ್ಯಂತ ಕೀಳಾಗಿ ಕಾಣುವುದನ್ನು ಕೊನೆಗಾಣಿಸಲೇಬೇಕು.
ಮರಣ ಹೊಂದಿದ ವ್ಯಕ್ತಿಯಿಂದ ವೈರಸ್ ಹರಡಲು ಸಾಧ್ಯವಿಲ್ಲ ಎಂದು ವೈದ್ಯಶಾಸ್ತ್ರ ಹೇಳುವಾಗ ಮತ್ಯಾಕೆ ಈ ಭಯಭೀತಿ.?

ಎಲ್ಲಾ ಕಡೆಗಳಲ್ಲೂ ಪ್ಲಾಸ್ಟಿಕ್ ಉಪಯೋಗವನ್ನು ನಿರುತ್ತೇಜನ ಗೊಳಿಸಿರುವಾಗ ಮೃತ ಶರೀರಗಳನ್ನು ಮಾತ್ರ ಪ್ಲಾಸ್ಟಿಕ್ ಪ್ಯಾಕ್ ಮಾಡುವ ಉದ್ದೇಶವೇನು.?

ಪಿಪಿ ಕಿಟ್ ಧರಿಸಿ ತರಬೇತು ಪಡೆದ ಪ್ರತ್ಯೇಕ ಸನ್ನದ್ಧ ವಿಭಾಗಗಳು ಹಾಗೂ ಸನ್ನದ್ಧ ಸಂಘಟನೆಗಳು ಸರಕಾರದ ಎಲ್ಲಾ ನಿರ್ದೇಶನಗಳನ್ನು ಸಂಪೂರ್ಣ ಪಾಲಿಸಿ ಅಂತ್ಯಕ್ರಿಯೆ ನಡೆಸಲು ಸದಾ ಸನ್ನದ್ಧವಾಗಿರುವಾಗ ಕುಟುಂಬಸ್ತರಿಗೆ ಅವರವರ ಧಾರ್ಮಿಕ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸುವ ಸ್ವಾತಂತ್ರವನ್ನು ಅವರಿಗೆ ನೀಡಲು ಇರುವ ಅಡ್ಡಿ ಆತಂಕಗಳೇನು.?
ಈ ಸ್ವಾತಂತ್ರ್ಯಗಳನ್ನು ನಿಷೇಧಿಸಿ ಮೃತ ಶರೀರಗಳನ್ನು ಮೃಗಸಮಾನವಾಗಿ ಹೂತು ಹಾಕುವ ರೀತಿಯಲ್ಲಿ ಅವಮಾನಿಸುವ ಉದ್ದೇಶವೇನು.?
ಮನುಷ್ಯ ಮನಸ್ಸುಗಳಲ್ಲಿರುವ ಈ ಸಂಶಯಗಳನ್ನು ನಿವಾರಣೆ ಮಾಡಬೇಕಾದ ತುರ್ತು ಅನಿವಾರ್ಯತೆ ಇದೆ.
ಮರಣ ಎಂಬ ಪಯಣ ಎಲ್ಲರೂ ಪ್ರಯಾಣಿಸಬೇಕಾದ ಪಯಣ ಎಂದು ಎಲ್ಲರ ಮನದಲ್ಲಿರ ಬೇಕಾಗಿದೆ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

Comments

Popular Posts