ಅಧ್ಯಾಯ 103: ಅಲ್ ಅಸ್ರ್ (ಕಾಲ), ಸೂಕ್ತ 2
إِنَّ الْإِنْسَانَ لَفِي خُسْرٍ
ಒಮ್ಮೆ ಬಹುಮಾನ್ಯ ರಾದ
ಅಲಿ ರ. ಅ.ಹೇಳಿದರು ತನ್ನ ಪ್ರಾರ್ಥನೆಯ ಮೇಲೆ ನಂಬಿಕೆ ಇಲ್ಲದೇ ಇರುವುದು ತಕ್ವಾ ಭಯಬಕ್ತಿ ಆಗಿದೆ ಒಮ್ಮೆ ಉಮರ್ ರವರು ಈದುಲ್ ಫಿತರ್ ನ ದಿವಸ ಧಾರಾಳ ವಾಗಿ ಅಳುತ್ತಿದ್ದರು ಅಲ್ಲಿ ಇದ್ದ ಒಬ್ಬರು ಕೇಳಿದರು ಓ ಉಮರ್ ರವರೇ ಎಲ್ಲರೂ ಸಂತೋಷದಿಂದ ಇರುವ ದಿವಸ ತಾವು ಏಕೆ ಅಳುತ್ತಿದ್ದೀರಿ?ಆವಾಗ ಉಮರ್ ರ.ಅ ಹೇಳಿದರು ನನಗೆ ಗೊತ್ತಿಲ್ಲ ನನ್ನ ಉಪವಾಸ ಅಲ್ಲಾಹನ ಬಳಿ ಸ್ವೀಕಾರ್ಯವೇ ಇಲ್ಲವೋ ಎಂದು ಸ್ವೀಕಾರ ವಾದರೆ ನಾನು ಸಂತೋಷ ಪಡುವೆನು ಇಲ್ಲವಾದರೆ ನನ್ನ ಮುಖಕ್ಕೆ ನನ್ನ ಉಪವಾಸವು ಎಸೆಯಲ್ಪಡ ಲಾಗುವುದು ನನಗೆ ಗೊತ್ತಿಲ್ಲ ನಾನು ಯಾವ ಜನರಲ್ಲಿ ಸೇರಿದವನು ಅದಕ್ಕಾಗಿ ಅಳುತ್ತಿದ್ದೇನೆ ಎಂದು ಹೇಳಿದರು ಅಲ್ಲಾಹನ ವಲಿಯ್ ಆದ ಬಾ ಯಝೀದ್ ಅಲ್ ಬಸ್ತಾಮಿ ರ.ಆ ಅವರಲ್ಲಿ ಒಮ್ಮೆ ಒಬ್ಬ ಮುದುಕಿ ಕೇಳಿದಾಗ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಶೈಕ್ ರವರೇ ನನ್ನ ಕತ್ತೆಯ ಬಾಲ ಉತ್ತಮ ವೋ ಅಥವಾ ನಿಮ್ಮ ಗಡ್ಡ ಉತ್ತಮ ವೋ ಆವಾಗ ಅವರು ಸಿಟ್ಟಾಗಲಿಲ್ಲ ಅವರ ಕಣ್ಣಿನಿಂದ ಕಣ್ಣೀರು ಸುರಿದವು ನಂತರ ಹೇಳಿದರು ನಿನ್ನ ಪ್ರಶ್ನೆಗಳಿಗೆ ಉತ್ತರ ಈವಾಗ ನನ್ನ ಬಳಿ ಇಲ್ಲ ನಾನು ಮರಣ ಹೊಂದಿದರೆ ಉತ್ತರ ಕೊಡುವೇ ಆದರೇ ನೀನು ಆವಾಗ ಎಲ್ಲಿರುವೆ ಎಂದು ಹೇಳಿದರು ಆವಾಗ ಮುದುಕಿ ಮರುತ್ತರವಾಗಿ ಹೇಳಿದರು ನನ್ನ ಪ್ರಶ್ನೆ ಅಲ್ಲೇ ಇದೆ ತಾವು ಉತ್ತರ ಕೊಡಬೇಕಾಗಿದೆ ಎಂದು ಹೇಳಿದರು ಆವಾಗ ಬಸ್ತಾಮಿ ರ.ಅ ರವರು ತಿಳಿಸುತ್ತಾರೆ ನನ್ನ ಗಡ್ಡ ನಿನ್ನ ಕತ್ತೆಗಿಂತ ಸಾವಿರ ಸಲ ಉತ್ತಮ ವಾಗಿದೆ ಯಾಕೆಂದರೆ ನನ್ನ ಮರಣ ಈಮಾನಿ ನಲ್ಲಿ ಆಗಲಿದೆ ಎಂದು ದ್ರಡವಾದ ವಿಶ್ವಾಸ ದೊಂದಿಗೆ ಮರುತ್ತರ ನೀಡಿದರು ಆದುದರಿಂದ ವಿಶ್ವಾಸ ವನ್ನು ದ್ರಡೀಕರಿಸ ಬೇಕಾಗಿರುವುದು ಪ್ರತಿಯೊಂದು ಮನುಷ್ಯನ ಕರ್ತವ್ಯ ವಾಗಿದೆ ಒಮ್ಮೆ ಶೈಕ್
ಸಹದಿ ರ.ಅ ಹೇಳಿದರು ಒಬ್ಬ ಸಫಾ ಮರ್ವ ದಲ್ಲಿ ತನ್ನ ತಲೆಯನ್ನು ಕಲ್ಲಿನ ಮೇಲೆ ಇಟ್ಟು ಅಳುತ್ತಿರುವುದನ್ನು ನಾ ಕಂಡೆನು ಅಲ್ಲಾಹನಲ್ಲಿ ಪ್ರಾರ್ತಿಸುತ್ತಿದ್ದರು ನನ್ನನ್ನು ಮಹ್ಷರ ದಲ್ಲಿ ಕುರುಡನಾಗಿ ಯಾತ್ರೆ ಮಾಡಿಸು ಕಾರಣ ನಿನ್ನ ದಾಸರನ್ನು ಎದುರಿಸುವ ಶಕ್ತಿ ನಿನ್ನನ್ನು ಎದುರಿಸುವ ಶಕ್ತಿ ನನ್ನ ಬಳಿ ಇಲ್ಲ ಅಲ್ಲಾಹುವೇ ಎಂದು ಪ್ರಾರ್ತಿಸುತ್ತಿದ್ದರು ಲೋಕದಲ್ಲಿ ಸಾಧಾರಣ ವಾಗಿ ಜನರು ತನ್ನ ಸಮುದಾಯ ದವರಿಗಾಗಿ ಎಲ್ಲಾ ಉಮ್ಮತ್ತಿಗಾಗಿ ತನಗಿಂತ ಜಾಸ್ತಿ ಪ್ರಾರ್ತಿಸುತ್ತಾರೆ ಆ ಮನುಷ್ಯ ಅಳುವುದನ್ನು ಕಂಡ ಜನರು ಅವರಿಗಾಗಿ ಪ್ರಾರ್ತಿಸುತ್ತಿದ್ದರು ಬಸ್ತಾಮಿ ರ.ಅ ರವರು ಹೇಳುತ್ತಾರೆ ನಾನು ನೋಡುತ್ತಿರುವಾಗಲೇ ಆ ಮನುಷ್ಯ ಎದ್ದು ನಿಂತು ಹೊರಟರು ನಾನು ಅವರ ಹಿಂದೆ ನಡೆದೆ ಅವರನ್ನು ಹಿಂಬಾಲಿಸಿದೆ ನೋಡುವಾಗ ಅವರು ಯಾರೆಂದು ತಿಳಿಯಲು ಮುಂದೆ ನಡೆದೆ ಆದರೆ ಅವರು ಗೌಸುಲ್ ಆಲಮ್ ಅಬ್ದುಲ್ ಕಾದರ್ ಜೈಲಾನಿ ರ .ಅ ಯಾಗಿದ್ದರು ಅವರಾಗಿದ್ದಾರೆ ಏಕಾಂಗಿ ಯಲ್ಲಿ ಅಲ್ಲಾಹನನು ಕರೆದು ಪ್ರಾರ್ತಿಸುವವರು ಸ್ವಾಲಿಹ್ ಆದ ಜನರು ಸದಾ ಏಕಾಂಗಿ ಯಲ್ಲಿ ಅಲ್ಲಾಹನನ್ನು ಕರೆದು ಪ್ರಾರ್ತಿಸುತ್ತಾರೆ ಪರಲೋಕ ವನ್ನು ಭಯಪಟ್ಟು ಜೀವಿಸುವವನಾಗಿದ್ದಾನೆ ವಿಜಯಿ ಯಾದವನು ತನಗಲ್ಲದೇ ತನ್ನವರಿಗಾಗಿ ಪ್ರಾರ್ತಿಸುವವನು ಅಲ್ಲಾಹನ ಇಷ್ಟ ದಾಸನು.
S.M.MUSTHAFA SASTHANA
No comments:
Post a Comment