MUSTHAFA HASAN ALQADRI OFFICIAL : Heaven is under our mothers' feet-ತಾಯಿಯ ಕಾಲಡಿ ಸ್ವರ್ಗ ವಿದೆ

Translate

Tuesday, May 26, 2020

Heaven is under our mothers' feet-ತಾಯಿಯ ಕಾಲಡಿ ಸ್ವರ್ಗ ವಿದೆ

ಒಮ್ಮೆ ಪ್ರವಾದಿ صلي الله عليه وسلم  
ರ ಬಳಿ ಒಬ್ಬ ಬಂದು ಹೇಳಿದರು ಯಾ ರಸೂಲರೇ ನಾನು ನನ್ನ ತಂದೆ ತಾಯಿಯವರ  ಸೇವೆ ಸಲ್ಲಿಸಿದ್ದೇನೆ ನಾನು ನನ್ನ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿದ್ದೇನೆ ಅದೇ ಸಂಕಷ್ಟಗಳು  ನನ್ನ ತಂದೆ ತಾಯಿಯವರೂ ಎದುರಿಸಿದ್ದಾರೆ ನಾನು ಅವರ ಸೇವೆ ಸ್ವಂತವಾಗಿ ನಿಭಾಯಿಸಿದ್ದೇನೆ  ಆ ವ್ಯಕ್ತಿ ಹೇಳಿದರು ರಸೂಲರೇ ನನ್ನ ಬಾಲ್ಯದಲ್ಲಿ ಯಾವ ತರಹ ಆಹಾರದ ತುಂಡನ್ನು ನನಗೆ ತಿನಿಸುತ್ತಿದ್ದರೋ ಅದೇ ತರಹ ನಾನು ತಂದೆ ತಾಯಿಯವರಿಗೆ ನನ್ನ ಕೈಯಿಂದ ತಿನಿಸುತ್ತಿದ್ದೆ ನನ್ನ ತಾಯಿ ನನಗಾಗಿ ಎಷ್ಟು ರಾತ್ರಿ ಗಳನ್ನು ತ್ಯಾಗ ಮಾಡಿದರೋ ನಾನೂ ಕೂಡ ಅವರಿಗಾಗಿ ನನ್ನ ರಾತ್ರಿ ಗಳನ್ನು ತ್ಯಾಗ ಮಾಡಿದೆ ನನ್ನ ತಂದೆ ತಾಯಿ ಯಾವ ತರಹ ನನ್ನನ್ನು ಸಾಕಿದರು ಅದೇ ತರಹ ನಾನೂ ಕೂಡ ಅವರ ಸೇವೇ ಯಲ್ಲಿ ತೊಡಗಿ ಕೊಂಡೆ ಯಾ ರಸೂಲರೇ ನಾನು ನನ್ನ ಕರ್ತವ್ಯ ವನ್ನು ಪೂರ್ಣ ಗೊಳಿಸಿದ್ದೇನೆಯೇ?
ಎಂದು ಕೇಳಿದಾಗ ಪ್ರವಾದಿ  صلي الله عليه وسلم 
ಯವರು ನುಡಿದರು ನೀನು ಹೀಗೆಯೇ ಸೇವೆ ಮಾಡಿರ ಬಹುದು ಆದರೆ ನಿನ್ನ ತಾಯಿ ನಿನ್ನ ಪಾಲನೆ ಯೊಂದಿಗೆ ನಿನಗಾಗಿ ಪ್ರಾರ್ತಿಸುತ್ತಿದ್ದಳು ನಿನ್ನ ತಂದೆ ತಾಯಿ ವಯಸ್ಸಿಗೆ ಬಂದು ಮುಟ್ಟಿದಾಗ ಅವರ ಶರೀರ ಬಲಹೀನವಾದಾಗ ನೀನು ಅವರ ಜೀವನಕ್ಕಾಗಿ ಪ್ರಾರ್ತಿಸುತ್ತಿರಲಿಲ್ಲ ನೀನು ನಿನ್ನ ತಂದೆ ತಾಯಿಯ ಮರಣವನ್ನು ಕಾಯುತ್ತಿದ್ದೆ ನಿನ್ನ ತಾಯಿ ನೀನು ಕುರುಡ ನಾದರು ರೋಗಿಯಾದರೂ ನಿನ್ನ ಉಳಿವಿಗಾಗಿ ಸದಾ ಪ್ರಾರ್ತಿಸುತ್ತಿದ್ಧರು ಮಗನ ರೋಗ  ಶಮನಕ್ಕಾಗಿ ತನ್ನ ಎಲ್ಲಾ ಸಂಪತ್ತನ್ನು ಮಾರಿ ನಿನ್ನ ಜೀವ ರಕ್ಷಣೆ ಗಾಗಿ ಹಾತೊರೆಯುತ್ತಿದ್ದಳು ಪ್ರವಾದಿ صلي الله عليه وسلم 
ಹೇಳಿದರು ನೀನು ಅವರಿಗಾಗಿ ಸೇವೆ ಮಾಡಿ ಅವರ ಮರಣ ವನ್ನು ಕಾಯುತ್ತಿದೆ ಆದರೆ ನಿನ್ನ ತಂದೆ ತಾಯಿ ನಿನ್ನ ಉಳಿವಿಗಾಗಿ ಪ್ರಾರ್ತಿಸುತ್ತಿದ್ದರು  ಓ ಮನುಷ್ಯ ನೀನು ಎಷ್ಟು ಸೇವೆ ಸಲ್ಲಿಸಿದರೂ ತಂದೆ ತಾಯಿಯ ರುಣ ತೀರಿಸಲಾರೆನು ಉಲಮಾ ಗಳು  ಹೇಳುತ್ತಾರೆ ನೀನು ನಿನ್ನ ತಂದೆ ತಾಯಿಗಾಗಿ   ಸದಾ ಪ್ರಾರ್ತಿಸು ನಿನ್ನ ತಂದೆ ತಾಯಿ ಅಮುಸ್ಲಿಮ್ ಆದರೂ ಅವರನ್ನು ಗೌರವಿಸು ಅವರಿಗಾಗಿ ಸದಾ ಪ್ರಾರ್ತಿಸು ನಿನ್ನ ತಂದೆ ತಾಯಿ ಸಜ್ಜನರು ಆದರೂ ಮುಸಲ್ಮಾನ ಆದರೂ ಅಮುಸ್ಲಿಮ್ ಆದರೂ ದೋಷಿ ಆದರೂ ಸದಾ ಅವರಿಗಾಗಿ ಪ್ರಾರ್ತಿಸು ಎಂದು ಹೇಳಿದರು ಬಹು ಮಾನ್ಯರಾದ ಅಬೂ ಹುರೈರ ರ.ಅ ಹೇಳಿದರು ನನ್ನ ತಾಯಿ ಅಮುಸ್ಲಿಮ್ ನಾನು ಪ್ರವಾದಿ ಯವರ ಅನುಯಾಯಿ ತಂದೆ ಮರಣ ಹೊಂದಿದರು ತಂಗಿ ಇಲ್ಲ ತಾನು ಮದುವೆ ಆಗಲಿಲ್ಲ ತಾಯಿ ಅವರ ಧರ್ಮದಲ್ಲಿ ಇದ್ದರು ನಾನು ನನ್ನ ಧರ್ಮ ದಲ್ಲಿ  ಇದ್ದೆ  ಮನೆಯಲ್ಲಿ ನಾನು ಮತ್ತು ತಾಯಿ ಮಾತ್ರ  ಇರುವುದು  ತಾಯಿಯಲ್ಲಿ ಪ್ರವಾದಿ ಯವರ ವಿಷಯ ಆಗಾಗ  ತಿಳಿಸುತ್ತಿದ್ದರು ಆದರೆ ಒಮ್ಮೆ ಪ್ರವಾದಿ ಯವರ ಮಾತು ತನ್ನ ತಾಯಿಗೆ ಕೇಳಿಸುವಾಗ ತಾಯಿ ಸಿಟ್ಟಿನಿಂದ ಅವಾಚಕ ಮಾತು ಹೇಳಿದರು ಅಂದಿನಿಂದಲೇ ತಾಯಿಯ ಮುಂದೆ ಯಾವ ವಿಷಯವೂ ಮಾತನಾಡುತ್ತಾ ಇರಲಿಲ್ಲ ಮನಸ್ಸಿನಲ್ಲಿ ಬೇಜಾರು ಹೊತ್ತು ಕೊಂಡು ಪ್ರವಾದಿ ಯವರ ಸನ್ನಿದಿಯಲ್ಲಿ ಹಾಜರಾದರು ಆವಾಗ ಪ್ರವಾದಿ ಯವರು  ಕೇಳಿದರು  ಅಬೂ ಹುರೈರ ಏನಾಯ್ತು  ನಿನಗೆ ಆವಾಗ   ಸಹಾಬಿ ಹೇಳಿದರು ರಸೂಲರೆ ನನ್ನ ತಾಯಿಯ ಸನ್ಮಾರ್ಗ ಕ್ಕಾಗಿ ಪ್ರಾರ್ತಿಸಿ ಎಂದು ಹೇಳಿ ಕಣ್ಣಿನಿಂದ ಕಣ್ಣೀರು ಉದುರುತ್ತಿದ್ದವು ಆವಾಗ ಪ್ರವಾದಿ ಯವರು ತನ್ನ ಎರಡು ಕೈ ಗಳನ್ನು ಎತ್ತಿ ಪ್ರಾರ್ತಿಸಿದರು
ಓ ಅಲ್ಲಾಹುವೇ ಅಬೂ ಹುರೈರರ ಮಾತೆಗೆ ಸನ್ಮಾರ್ಗ ನೀಡು ಈ ಮಾತು ಕೇಳುತ್ತಲೇ ಸಹಾಬಿ ಯವರ ಮುಖದಲ್ಲಿ ಮಂದಹಾಸ ಬೀರಿತು ಮನೆಯತ್ತಾ ಓಡಿದರು ರಸ್ತೆ ಯಲ್ಲಿ ಒಬ್ಬರು ಕೇಳಿದಾಗ ಯಾಕಾಗಿ ಇಷ್ಟು ವೇಗವಾಗಿ ಓಡುತ್ತೀರಿ ಆವಾಗ ಸಹಾಬಿ ಹೇಳಿದರು ನಾನು ಇಂದು ನೋಡುವೆನು ಮೊದಲಿಗೆ ನಾನು ಮುಟ್ಟುತ್ತೇನೆಯೇ ಅಥವಾ ನನ್ನ ರಸೂಲರ ಪ್ರಾರ್ಥನೆ ಮುಟ್ಟುತ್ತದೆಯೇ  ಸಹಾಬಿ ಹೇಳಿದರು ನಾನು ಮನೆ ತಲುಪಿದಾಗ ಮನೆಯ ಬಾಗಿಲು ಮುಚ್ಚಿತ್ತು ನಾನು ಕರೆದು ನೋಡಿದಾಗ ಒಳಗಿನಿಂದ ತಾಯಿಯು ಹೇಳಿದರು ಮಗನೇ ನಾನು ಬರುತ್ತಿದ್ದೇನೆ ನಂತರ ಸ್ವಲ್ಪ ಸಮಯದ ನಂತರ ತಾಯಿ ಬಂದರು ಅವರ ನಾಲಿಗೆಯಲ್ಲಿ ಕಲಿಮ ಉಚ್ಛರಿಸುತ್ತಿರುವುದನ್ನು ನಾನು ಕಂಡೆ ಎಂದರು !  ಇದಾಗಿದೆ  ತಂದೆ  ತಾಯಿಯಾಗಿ ಪ್ರಾರ್ತಿಸ ಬೇಕಾಗಿದ್ದು  ಸದಾ ಅವರಿಗಾಗಿ ಪ್ರಾರ್ತಿಸಿ ತನ್ನ ಪರಲೋಕದ ಜೀವನ ವನ್ನು ಸುಂದರ ಗೊಳಿಸಿ
S.M.MUSTHAFA SASTHANA

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...