Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಸೌಂದರ್ಯ ಭರಿತ ಮೀನುಗಳ ಒಡನಾಟ



ಕನಸು ಯಾರು ಬೇಕಾದರೂ ಕಾಣ ಬಹುದು ನೀಲಿ ಬಾನಿನಲ್ಲಿ ಚಿಲಿಪಿಲಿ ಗುಟ್ಟುವ ಹಕ್ಕಿಗಳ ರಂಗು ರಂಗಿನ ರೆಕ್ಕೆ ಯನ್ನು ಚಡಪಡಿಸುತ್ತಾ ತೇಲಾಡುವ ಆ ಸುಂದರ ಮೈಮೆರಸುವ ದ್ರಷ್ಯ ಕಂಡು ತಾನೂ ಕೂಡ ಹಾರಬೇಕೆನಿಸಬಹುದು
ನದಿ ಸರೋವರ ಗಳ ಅಂಗಳದಲ್ಲಿ ಕಣ್ಣಿಗೆ ತಂಪು ನೀಡುವ ಸೌಂದರ್ಯ ಭರಿತ ಮೀನುಗಳ ಒಡನಾಟದಲ್ಲಿ ಮಗ್ನರಾಗಿ ತಾನೂ ಈಜ ಬೇಕೆನಿಸಬಹುದು ಸಾಯಂಕಾಲದ ಸಮಯದಲ್ಲಿ ಮಧುರ ಕಂಠ ಕೋಗಿಲೆಯ ಆ ಕೂಗುವ ಕುಹು ಕುಹು ಕೇಳಿ ತಾನೂ ಹಾಡ ಬೇಕೆನಿಸಬಹುದು ಆದರೆ ಇಂದು ಮನುಜ ಇವೆಲ್ಲಕ್ಕಿಂತ ಮಿಗಿಲಾಗಿ ಬಾನಿನಲಿ ತೇಲುತ್ತಾ ದೇಶ ವಿದೇಶದ ಪಯಣ ಕೆಲವು ಗಂಟೆ ಗಳಲ್ಲಿ ಸಾದಿಸಿಯಾನು ಆಧುನಿಕತೆಯ ಉಪಕರಣ ಬಳಸಿ ಸಮುದ್ರದ ತಳಬಾಗಕ್ಕೂ ತಲುಪಿದನು ಮೈ ಕೆರಳಿಸುವ    ಇಂಪಾದ  ಹಾಡುಗಳನ್ನು ಹಾಡಲು ಪ್ರಾರಂಬಿಸಿದನು
ಮನುಷ್ಯನು ಜೀವನದಲ್ಲಿ ಎಲ್ಲವನ್ನೂ ತನ್ನಿಚ್ಚೆಯಾನುಸಾರವಾಗಿ ಪಡ   ಕೊಂಡನು ಆದರೆ ಮನಸ್ಸಿನ ಶಾಂತಿಗಾಗಿ ಇನ್ನೂ ಕೂಡ ಅಧ್ಯಾಯನ ಮಾಡುತ್ತಲೇ ಇದ್ದಾನೆ
ಭೂಮಿಯ ಮೇಲೆ  ಇರುವವರಿಗೆ ಕರುಣೆ  ತೋರಿದರೆ  ಆಕಾಶದಲ್ಲಿ  ಇರುವವನು ನಿಮಗೆ ಕರುಣೆ ತೋರುವನು  ಎಂಬ ಪ್ರವಾದಿ   ನುಡಿಯ ನಾವು ಕಡೆಗಣಿಸದೇ ಇದ್ದಿದ್ದರೆ  ಇಂದು ನಾವು  ಶಾಂತಿ ಯನ್ನು ಹುಡುಕುತ್ತಾ ಹೋಗಲಾರೆವು  ನಾವು ಯಾವಾಗ ಅನ್ಯರ ಸುಖ ದುಖ ಗಳಲ್ಲಿ ಪಾಲ್ಗೊಂಡು ಅವರಿಗೆ ಸಹಾಯ ಹಸ್ತ ಚಾಚುತ್ತೇವೆ  ಅಲ್ಲೇ ನಮ್ಮ ಮನಶಾಂತಿಯ ರಹಸ್ಯಗಳು ಅಡಗಿಕೊಂಡಿವೆ



لَقَدْ خَلَقْنَا الْإِنْسَانَ فِي كَبَدٍ
ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ.ಎಂದು ಪರಮಾತ್ಮನು  ಆಣೆ ಹಿಡಿದು ಹೇಳುತ್ತಾನೆ ಅಂದರೆ ಮನುಷ್ಯನ ಜೀವನದಲ್ಲಿ ಕಷ್ಟ ಗಳು ನೋವು ಸಂಕಷ್ಟಗಳು ಬರುವುದು ಅದು ಜೀವನದ ಒಂದು ಭಾಗವಾಗಿದೆ ನಾವು ನಮ್ಮ ಜೀವನಕ್ಕೆ  ಒಂದು ಹೊಸ ರೂಪವನ್ನು ಕೊಟ್ಟು ಮುಂದೆ ಸಾಗಿದೆವು ಅದರಲ್ಲಿ  ವಿಜಯಿಯಾದರೆ ಧನ್ಯನು ಪರಾಜಯ ನಾದರೆ ಹಿಂದೆ ಸರಿಯುವನು ಒಂದು ಉನ್ನತ ಸ್ಥಾನ ವನ್ನು ತಲುಪಲು ಕಷ್ಟ ಗಳ ದಾರಿಯನ್ನು ಹಿಂಬಾಲಿಸಬೇಕು 
ಜೀವನ ಕಷ್ಟ ಗಳ ರೇಖೆಗಳಲ್ಲಿ ಮಂದೆ ಸಾಗುವ ಹೆಸರು ಆಗಿದೆ ತದನಂತರ ತನ್ನ ಗುರಿ ಮಟ್ಟಲಾಗುವುದು ದ್ವೇಷ ಅಹಂಕಾರ ವ್ಯಾಮೋಹ ಇದೆಲ್ಲಾ ಬದಿಗಿಟ್ಟು ವಿಜಯಿ ಯಾಗುವ ಲೋಕದ ಕಡೆಗೆ ಮುನ್ನುಗ್ಗಿರಿ ಓ ಮನುಷ್ಯ ನಿನ್ನ ಜೀವನದಲ್ಲಿ ಒಂದು ಸಮಯ ಬರಲಿದೆ ಆವಾಗ ನಿನ್ನ ಶ್ವಾಸವು ಚಡಪಡಿಸಲಿದೆ ವೈದ್ಯರು ಅಸಹಾಯಕರಾಗುವ ಸಮಯ ಬರಲಿದೆ ಶವಾಗ್ರಹದಲ್ಲಿ ಅಸಹಾಯಕನಾಗಿ ಮೂಕ ಪ್ರೇತನಾಗಿ ನಿನಗೆ ಮಯ್ಯತ್ ಅಥವಾ ಶವ ಎಂದು ಹೇಳುವ ಸಮಯ ಕೂಡ ಬರಲಿದೆ     ಹಲಾಲ್  ಹರಾಮ್  ಲೆಕ್ಕಿಸದೆ ಸಂಪತ್ತು ಗಳನ್ನು ಕ್ರೂಡಿಗರಿಸಲು  ಓಡಿದ ಆ ಓಟವು ನಿಲ್ಲುವ ಸಮಯ ಬರಲಿದೆ  ಸುಂದರ ವಾದ ಕಟ್ಟಿ ನಿಲ್ಲಿಸಿದ ತನ್ನ  ಬಂಗಲೆ ಯಲ್ಲಿ ಒಂದು ದಿವಸ ಕೂಡ ನಿನ್ನನ್ನು ಇಡಲು ಒಪ್ಪದ ನಿನ್ನ ಬಂದು ಬಳಗದವರ ಮುಂದೆ ಅಸಹಾಯಕನಾಗಿ  ಮೂಕ ಪ್ರಾಣಿಯಾಗಿ ನಿಲ್ಲುವ  ಆ ಸಮಯವೂ ಬರಲಿದೆ  ಓ ನಿನ್ನ ಸೌಂದರ್ಯವೇ ನಿನ್ನ ತುಟಿಯ
ಗುಲಾಬಿಯೇ  ಆ ನಿನ್ನ ಕಪ್ಪು ರೆಕ್ಕೆಯ ಕಣ್ಣುಗಳೇ ಆ ನಿನ್ನ ರೇಷ್ಮೆಯಂತ ಕೂದಲೇ ನಿನ್ನ ನಡತೆ ನೋಡಿದರೆ ಕಯಾಮತ್ ನಡೆಯುತಿದೆ ಎಂದು ಭಾಸವಾಗುತ್ತಿತ್ತು   ಇಷ್ಟು ಸುಂದರ ವಾದ ನಿನ್ನ  ಶರೀರವನ್ನು ತಾಯಿಯ ಗರ್ಭದಲ್ಲಿ ಸ್ರಷಿಸಿದವನಿಗೆ ನಿನ್ನನ್ನು ಮತ್ತೋಮ್ಮೆ ಸ್ರಷ್ಟಿಸಲು ಅಸಾಧ್ಯನೇ ನೀನು ಪುನರ್ಜನ್ಮ ಪಡೆದು ಜಗದೊಡೆಯನ ಮುಂದೆ ನಿಲ್ಲುವ ಆ ಸಮಯ ಯೋಚಿಸು ಮನುಜ ನಿನ್ನಲ್ಲಿ ಕೇಳಲ್ಪಡುವುದು   ನಿನ್ನ ವಯಸ್ಸು ಎಲ್ಲಿ ವ್ಯರ್ಥ ಮಾಡಿದಿಯಾ ನಾವೆಲ್ಲರೂ ಒಂದು ಗೂಡುವ ಸಮಯ ಬರಲಿದೆ..
ನನ್ನ ಈ ಲೇಖನ ಓದಿ ಇಷ್ಟ ವಾದರೆ ಕಮಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ!!!
✒️MUSTHAFA HASAN ALIKHAN ALQADRI

Comments

Popular Posts