MUSTHAFA HASAN ALQADRI OFFICIAL : Glory To The Lord

Translate

Saturday, May 9, 2020

Glory To The Lord

  • ನಾಲಿಗೆಯಿಂದ ಏಕ ದೈವ ವೀಶ್ವಾಸದ ಕೆಲವು ಪದಗಳು ಉಚ್ಚರಿಸಿದರೆ  ಸಾರ್ಥಕ ವಾಗ ಲಾರವು 
 ಅವುಗಳ  ಮೌಲ್ಯ ಗಳನ್ನು ಕೂಡ  ನಿಬಾಯಿಸಲು ಅತ್ಯಾವಶ್ಯಕತೆ ನಾವು ಯಾವಾಗ ಕಲಿಮತುತ್ತೌಹೀದ್ ಉಚ್ಚರಿಸುತ್ತೇವೆಯೋ ನಮ್ಮ  ಆಸೆ ಆಕಾಂಷಕಮಗಳೆಲ್ಲಾ  ನಮ್ಮ ಇಚ್ಛೆಗೆ ತಕ್ಕದಾಗದು  ಧರ್ಮ ನಮಗೆ ಯಾವುದನ್ನು ಉಪದೇಶಿಸಿಸುವುದೋ ಅದೇ ನಮ್ಮ ಜೀವನದ ರೂಪು ರೇಖೆಗಳು ಯಾರಾದರೂ ಒಬ್ಬ  ಅಲ್ಲಾಹು ಮತ್ತು ಅವನ ಪ್ರವಾದಿಯರ ಮೇಲೆ ವಿಶ್ವಾಸ ವಿಟ್ಟು  ಅವರ ಆಜ್ಞೆ ಗಳನ್ನ ಪಾಲಿಸದಿದ್ದರೆ ಮತ್ತೆ ವಿಶ್ವಾಸದಲ್ಲಿ   ಯಾವ    ಪ್ರಯೋಜನವೂ  ಇರಲಾರದು ಆದರಿಂದ ನಮ್ಮ ಶರೀಅತಿನ ಪ್ರಕಾರ ಅಲ್ಲಾಹ್ ಮತ್ತು ಅವನ ಹಬೀಬರ ಚರ್ಯೆಯನ್ನು ಹಿಂಬಾಲಿಸುವುದು ದರ್ಮ ಆಗಿದೆ ಇಂದು ನೀವು ಲೋಕದಲ್ಲಿ ಯಾವುದೇ ಒಂದು  ಸಂಸ್ಥೆಯ ಅಧೀನದಲ್ಲಿ ಕೆಲಸ ಮಾಡುವವರಾದರೆ ಅಲ್ಲಿನ  ನಿಯಮ ಕಾಯ್ದೆ ಕಾನೂನು ಗಳನ್ನು ಪಾಲಿಸಲು ಕಡ್ಡಾಯ ವಾಗಿರುತ್ತದೆ  ನೀವು ಬಾರತಿಯರಾಗಿ ಇನ್ನೊಂದು ದೇಶಕ್ಕೆ ಪ್ರಯಾಣಿಕರಾಗಿ ಹೋಗಿ ಎಷ್ಟು ಕಾಲ ಅಲ್ಲಿ ವಾಸಿಸುತ್ತೀರೋ ಅಷ್ಟು ಕಾಲ ಅಲ್ಲಿನ ನಿಯಮಾನುಸಾರ ಜೀವಿಸ ಬೇಕಾಗುತ್ತದೆ  ಈ ಮಾತು ಯಾವಾಗಲೂ ನೆನಪಿ ನಲ್ಲಿಡಿ ಇಸ್ಲಾಮ್ ಬರೇ ವಿಶ್ವಾಸದ ಹೆಸರು ಅಲ್ಲ ಬದಲು ನಮ್ಮ ಜೀವನದ ಪರಿಪೂರ್ಣ ಆರ್ಥಿಕ ಜೀವನ ಸ್ವಾಭಾವಿಕವಾದ ಕಟ್ಟು ನಿಟ್ಟಿನ ಜೀವನದ ಪ್ರತಿಯೊಂದು ಹೆಜ್ಜೆಗಳಲ್ಲೂ ಪರಿಪೂರ್ಣ ವಾದ ಮಾರ್ಗದರ್ಶನ ನೀಡುತ್ತದೆ ನಾವು ವಿಶ್ವಾಸದ ಸೌಭಾಗ್ಯ ದಲ್ಲಿ ಜೀವಿಸುವಾಗ ಇಸ್ಲಾಮ್ ನೀಡಿದಂತಹ ನಿಯಮ ಗಳನ್ನು ಅಕ್ಷರತ ನಿಬಾಯಿಸಬೇಕು

 ಯಾರಾದರೂ ಇಸ್ಲಾಮಿನ ನಿಯಮಾವಳಿಗಳಿಗೆ ಬದ್ಧವಾಗಿ ಜೀವಿಸಿದರೆ ಒಳ್ಳೆಯ ಕಾರ್ಯಗಳು ಅವನ ಜೀವನದ ಕನ್ನಡಿ ಯಾಗಿ ರೂಪುಗೊಳ್ಳುತ್ತದೆ ಅವನಿಗೆ ಪರಲೋಕದಲ್ಲಿ ಪ್ರತಿಫಲ ಇದ್ದೇ ಇದೆ ಬೂಲೋಕದಲ್ಲೂ ಶಾಂತಿಯ ಸ್ವಚ್ಛದ ಒಳ್ಳೆಯ ಜೀವನ ನೀಡುವನು  ಅಲ್ಲಾಹು ಅವನಿಗೆ ಹಲಾಲ್ ಜೀವನೋಪಾಯದ ಕಾರಣಗಳನ್ನು ಸ್ರಷ್ಟಿಸುವನು ನಮ್ಮೆಲ್ಲರ ಹಣೆಬರಹ ದಲ್ಲಿರುವ ಎಲ್ಲವೂ ಸಿಕ್ಕಿಯೇ ಸಿಗುವುದು ಮಗು ತಾಯಿಯ ಗರ್ಭದಲ್ಲಿ ನೂರ ಇಪ್ಪತ್ತು ದಿವಸ ಪೂರ್ತಿಯಾದಾಗ    ಆ ಶಿಸುವಿನ ಆಹಾರಗಳು ವಯಸ್ಸು ಮತ್ತು ಸ್ವಭಾವ ಗಳೆಲ್ಲ    ಬರೆಯಲ್ಪಡುತ್ತವೆ    ಎಂದು ಹದೀಸ್  ಗ್ರಂಥಗಳಲ್ಲಿ ಉಲ್ಲೇಕಿಸಲಾಗಿದೆ 
ಅಲ್ಲಾಹು ಯಾರೊಬ್ಬನಿಗೆ ಉತ್ತಮವನಾಗಿಸ ಬೇಕೆಂದರೆ ಅವನನ್ನು ಜೇನಿನ ಹಾಗೆ ಸಿಹಿ ಯಾಗಿಸುವನು ಸಹಾಬಿವರ್ಯರು ಕೇಳಿದರು ಅಲ್ಲಾಹು ಹೇಗೆ ಸಿಹಿಯಾಗಿಸುವುದು ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಅವನ ಮರಣದ ಮುಂಚೆ ಒಳ್ಳೆಯ ಕಾರ್ಯಗಳಿಂದ ಸಮ್ಮಾನಿಸುವನು ಅವನು ಒಳಿತು ಮಾಡುತ್ತಲೇ ಮರಣ ಹೊಂದುವನು ಇದು ಉತ್ತಮ ವ್ಯಕ್ತಿಯ ಲಕ್ಷಣಗಳು

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...