MUSTHAFA HASAN ALQADRI OFFICIAL : The namaz and its significance to the Muslim-ನಮಾಜ್ ಮತ್ತು ಮುಸ್ಲಿಮರಿಗೆ ಅದರ ಮಹತ್ವ

Translate

Wednesday, May 20, 2020

The namaz and its significance to the Muslim-ನಮಾಜ್ ಮತ್ತು ಮುಸ್ಲಿಮರಿಗೆ ಅದರ ಮಹತ್ವ

  1. ನಮಾಝ್ (ದೀನಿನ)  ದರ್ಮದ  ಸ್ತಂಬ ಗಳು 
ಅಲ್ಲಾಹನು ತಾಳ್ಮೆಯಿಂದ ಹಾಗೂ ನಮಾಝ್ ನಿಂದ ಸಹಾಯ ಯಾಚಿಸಲು ಕಲ್ಪಿಸಿದ್ದಾನೆ    ಕಯಾಮತ್ ಅಂತ್ಯ ದಿವಸದಲ್ಲಿ ನರಕದ ಕಡೆಗೆ ಹೋಗುವ ಆ ಮನುಷ್ಯನ   ಸ್ಮರಣೆ ಯನ್ನು ಅಲ್ಲಾಹು ವಿವರಿಸುತ್ತಾನೆ ಕೆಲವರು ಕೇಳುವರು ಯಾಕಾಗಿ ನೀನು  ನರಕದ ಕಡೆಗೆ ಹೋಗುತ್ತಿದ್ದೀರಿ? ಆವಾಗ ಆ ಮನುಷ್ಯನು ಉತ್ತರಿಸುವನು ನಾವು ನಮಾಝ್ ನಿರ್ವಹಿಸುತ್ತಿರಲಿಲ್ಲ ನರಕ ಪ್ರವೇಶದ ವಿಶೇಷ ಕಾರಣ ಅದು ನಮಾಝ್ ತ್ಯಜಿಸುವುದಾಗಿದೆ ಐದು ಹೊತ್ತಿನ ನಮಾಝ್ ಪ್ರತಿಯೊಬ್ಬ ಪ್ರಾಯ ಪೂರ್ತಿಯಾದ ಬುದ್ಧಿವಂತ ರಾದ ಹೆಣ್ಣು ಗಂಡಸಿಗೆ ಕಡ್ಡಾಯವಾಗಿದೆ ಪರಿಶುದ್ಧ ಗ್ರಂಥ ವಾದ ಕುರಾನಿನಲ್ಲಿ ಏಳುನೂರು ಕ್ಕಿಂತ ಅಧಿಕ ಸ್ಥಳ ಗಳಲ್ಲಿ ಇದರ ಕಲ್ಪನೆ ನೀಡಲಾಗಿದೆ ಕೆಲವು ಹದೀಸ್ ಗಳಲ್ಲಿ ಇದರ ಮಹಿಮೆ ಹಾಗೂ ತ್ಯಜಿಸಿದರೆ ಆಗುವ ನಷ್ಟದ ಬಗ್ಗೆ ಯೂ ವಿವರಿಸಲಾಗಿದೆ ಯಾರಾದರೊಬ್ಬ ನಮಾಝ್ ಅನ್ನು ನಿಶೇದಿಸಿದರೆ ಇಸ್ಲಾಮಿನ ಚೌಕಟ್ಟಿ ನಿಂದ ಹೊರಗೆ ಹೋಗುವನು ಆದರೆ ಸೋಮಾರಿತನದಿಂದ ಯಾರಾದರು  ಅಲ್ಲಾಹನ ಆಜ್ಞೆ ಯ ವಿವರ ಇದ್ದೂ ಕೂಡ ಕಂಡಿಸದೇ ಅವಹೇಳಿಸದೆ ಉಪೇಕ್ಷಿಸಿದರೆ ಅವನ ಬಗ್ಗೆ ಧಾರ್ಮಿಕ ಪಂಡಿತರ ಹಲವು ಅಭಿಪ್ರಾಯವನ್ನು ಕಾಣಬಹುದು ಇಮಾಮ್ ಇಸ್ಹಾಕ್ ಇಮಾಮ್ ಅಹ್ಮದ್ ರ.ಅ  ಹೇಳಿದರು ಇಂತಹ ಮನುಷ್ಯ  ಸತ್ಯ ನಿಷೇದಿ  ಆಗಿದ್ದಾನೆ ಕೆಲವರು ಇಸ್ಲಾಮಿನಿಂದ ನಿರ್ಗಮನ ವಾದನು ಎಂದೂ ಕೆಲವರು ಜೈಲು ಶಿಕ್ಷೆ ನಿಗದಿ ಪಡಿಸ ಬೇಕೆಂಬ ಅಭಿಪ್ರಾಯ ಪಟ್ಟಿದ್ದಾರೆ  ಇಮಾಮ್ ಗೌಸುಲ್ ಆಲಮ್ ರ.ಅ  ಹೇಳಿದರು ಅವನನ್ನು ಮುಸಲ್ಮಾನರ ದಫನ ಭೂಮಿಯಲ್ಲಿ ಧಫನ್ ಮಾಡಬಾರದು ನಮಾಝ್ ಉಪೇಕ್ಷಿಸಿಸುವವನಿಂದ ಹಂದಿ ಕೂಡ   ಆಶ್ರಯ ಕೇಳುತ್ತದೆ ಎಂದು ಗ್ರಂಥ ಗಳಲ್ಲಿ ಕಾಣಬಹುದು   ಶೈಖ್ ಸಾಝಿ ಹೇಳಿದರು ನಮಾಝ್ ಉಪೇಕ್ಷಿಸಿಸುವವನಿಗೆ  ಸಾಲ ನೀಡಬೇಡಿ ಅಲ್ಲಾಹನ ಸಾಲ ತೀರಿಸದವನು ನಿಮ್ಮ ಸಾಲ ಹೇಗೆ ತೀರಿಸುವನು 
ನಮಾಝ್ ನಿರ್ವಹಿಸದ ಮನುಷ್ಯನ ಇಸ್ಲಾಮಿನಿಂದ ಯಾವ ಸ್ತಾನಮಾನವೂ  ಸಂಬದವೂ ಇಲ್ಲ ಧಾಗಿದೆ   ಇಸ್ಲಾಮಿನ ಎರಡನೇ ಸ್ತಂಬ ವಾದ ನಮಾಝ್ ಮನುಷ್ಯನಿಗೆ ಧೈಹಿಕ ಆತ್ಮೀಯ  ಮಾನಸಿಕವಾಗಿ ಸುಂದರ ವಾದ ಉಡುಗೊರೆ ಯಾಗಿದೆ ನಮಾಝ್ ಇಲ್ಲದವನು ದರ್ಮ ಬ್ರಷ್ಟನು ಎಂದು ಪ್ರವಾದಿ  صلي الله عليه وسلم 
ತಿಳಿಸಿದ್ದಾರೆ  ಇಮಾಮ್ ಬುಖಾರಿ ಉಲ್ಲೇಕಿಸಿದ ಹದೀಸ್  ಗಳಲ್ಲಿ  ಅಸರ್ ನಮಾಝ್ ಮಾಡದವನ ಎಲ್ಲಾ ಅಮಲ್ ಗಳು ನಷ್ಟ ಹೊಂದುವುದು ಮನುಷ್ಯರನ್ನು ಪರಲೋಕ ದಲ್ಲಿ ಮೊಟ್ಟ ಮೊದಲಿಗೆ ನಮಾಝ್ ನ ಬಗ್ಗೆ ಕೇಳಲ್ಪಡಲಾಗುವುದು ಅವನ ನಮಾಝ್ ಸರಿ ಆಗಿದ್ದರೆ ವಿಜಯಿ ಯಾದನು ಸರಿ ಆಗದಿದ್ದರೆ ಪರಾಜಯ ಪಡುವನು ಎಂದು ಉಲ್ಲೇಕಿಸಲಾಗಿದೆ
S.M.MUSTHAFA SASTHANA

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...