ಉಪವಾಸವು ನರಕ ದಿಂದ ವಿಮೋಚನೆಯ ಒಂದು ಪ್ರತ್ಯೇಕ ದಾರಿ ಯಾಗಿದೆ ಉಪವಾಸವು ಪರಮಾತ್ಮನ ಹಾಗೂ ಅವನ ದಾಸನ ಮದ್ಯೆ ಇರುವ ಒಂದು ರಹಸ್ಯ ವಾಗಿದೆ ಉಪವಾಸ ಬೆಳಕು ಹಾಗು ಕಿರಣ ವಾಗಿದೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಪ್ರತಿಯೊಂದು ವಸ್ತು ವಿನ (ಝಕಾತ್) ದಾನ ಇದೆ ಮನುಷ್ಯನ ಶರೀರದ (ಝಕಾತ್)ದಾನ ಅದು ಉಪವಾಸ ವಾಗಿದೆ ಮನುಷ್ಯನು ಉಪವಾಸಿಯಾದರೆ ಅವನ ಶರೀರ (ಝಕಾತ್)ದಾನ ನೀಡುತ್ತದೆ ಯಾವ ತರಹ (ಝಕಾತ್) ದಾನ ನೀಡುವುದರಿಂದ ಅವನ ಸಂಪತ್ತು ಶುದ್ದಿ ಆಗುವುದೋ ಅದೇ ತರಹ ಉಪವಾಸ ದಿಂದ ಉಪವಾಸಿಗನ ಶರೀರ ಶುದ್ದಿ ಆಗುವುದು ಉಪವಾಸವು ಮಾನವ ನಿಗೆ ಒಂದು ಶಮನ ಸಂಕೇತವಾಗಿದೆ ಯಾಕೆಂದರೆ ಪ್ರವಾದಿಯವರ (صلي الله عليه وسلم ) ನುಡಿಗಳು ಒಮ್ಮೆ ನೋಡಿರಿ ನೀವು ಸಹರಿ ಊಟ ಮಾಡಿರಿ ಸಹರಿ ಊಟದ ಪ್ರತಿಯೊಂದು ಕಣಗಳಲ್ಲಿ ಬರ್ಕತ್ ನೀಡಲಾಗಿದೆ ಈ ಪಾವನ ಮಾಸ ತನ್ನ ಅಧೀನದಲ್ಲಿ (ರಹ್ಮತ್)ಅನುಗ್ರಹ ( ಬರ್ಕತ್) ಗಳೊಂದಿಗೆ ಭೂಮಿ ಗೆ ಇಳಿಯಲ್ಪಟ್ಟಿದೆ ಇದರ ಮೊದಲನೆಯ ಭಾಗ ರಹ್ಮತ್ ಆಗಿಯೂ ಮಧ್ಯಭಾಗದಲ್ಲಿ ಮಗ್ಫಿರತ್ ಕೊನೆಯ ಭಾಗ ನರಕ ದಿಂದ ವಿಮೋಚನೆ ಪಡುವ ಭಾಗವಾಗಿದೆ ಹದೀಸ್ ಗ್ರಂಥಗಳಲ್ಲಿ ಉಲ್ತಿಲೇಕಿಸಲಾಖಿದೆ ಪ್ರವಾದಿ ಸ.ಅ.ರು ಹೇಳಿದರು ನನ್ನ ಉಮ್ಭತಿಗೆ ರಂಜಾನ್ ಉಪವಾಸ ದಿಂದಾಗಿ ನೀಡಲಾದ ಐದು ಕಾರ್ಯಗಳನ್ನು ಇದಕ್ಕಿಂತ ಮುಂಚೆ ಯಾವ ಪ್ರವಾದಿಗಳ ಅನುಯಾಯಿಗಳಿಗೂ ನೀಡಲಾಗಲಿಲ್ಲ
ಒಂದು ರಂಝಾನಿನಲ್ಲಿ ಉಪವಾಸಿಗನ ಹೊಟ್ಟೆಯ ಒಳಗಿನಿಂದ ಹೊರಬರುವ ಆ ವಾಸನೆ ಅಲ್ಲಾಹನ ಬಳಿ ಅತ್ಯಂತ ಶ್ರೇಷ್ಠ ವಾದದ್ದು ಎರಡನೆಯದಾಗಿ ರಂಝಾನ್ ಪಾವನ ಮಾಸ ದಲ್ಲಿ ಪಿಶಾಚಿ ಗಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಲಾಗುವುದು ಮೂರನೆಯದು ಉಪವಾಸಿಗ ಎಷ್ಟು ಕಾಲ ಉಪವಾಸಿಗ ನಾಗಿ ಇರುವನೋ ಆ ಸಮಯ ಗಳಲ್ಲಿ ದೇವ ದೂತರು ಅವನಿಗಾಗಿ ಪಾಪ ವಿಮೋಚನೆಯ ಪ್ರಾರ್ಥನೆ ಯಲ್ಲಿರುವರು ನಾಲ್ಕನೆಯದು ರಂಝಾನ್ ತಿಂಗಳಲ್ಲಿ ಕೊನೆಯ ರಾತ್ರಿಗಳಲ್ಲಿ ಅವನ ಎಲ್ಲಾ ಪಾಪ ಗಳನ್ನು ಮನ್ನಿಸಲಾಗುವುದು ಅವನಿಗೆ ನರಕ ದಿಂದ ವಿಮೋಚನೆಯ ಪ್ರಮಾಣಪತ್ರ ದೊರಕುವುದು ಅಂದರೆ ಒಬ್ಬ ಸಹಾಬಿ ವರ್ಯರು ಪ್ರವಾದಿ ಅವರಲ್ಲಿ ಕೇಳಿದರು ಓ ನಬಿಯವರೇ ಈ ನರಕ ದಿಂದ ವಿಮೋಚನೆಯ ದಾಖಲಾತಿ ಸಿಗುವುದು ಎಂದರೆ ಏನು ಅದು ಲೈಲತುಲ್ ಕದ್ರ್ ನ ರಾತ್ರಿಯೇ ಎಂದು ಕೇಳಿದಾಗ ಪ್ರವಾದಿ(صلي الله عليه وسلم( ಮರುತ್ತರ ನೀಡುತ್ತಾ ಹೇಳಿದರು ಇಲ್ಲ ಕೂಲಿ ಮಾಡುವ ಕೆಲಸದವರು ತನ್ನ ಕೆಲಸ ಪೂರ್ತಿಗೊಳಿಸಿದ ನಂತರ ಪಡೆದು ಕೊಳ್ಳುವ ಅವರ ವೇತನ ಯಾವ ತರಹದ್ದೋ ಅದೇ ತರಹ ಉಪವಾಸಿಗನಿಗೆ ನರಕ ದಿಂದ ವಿಮೋಚನೆಯ ಪ್ರತಿಫಲ ವಾಗಿದೆ ಇದಲ್ಲದೇ ಲೈಲತುಲ್ ಕದ್ರ್ ನ ಪ್ರತಿಫಲವೂ ನೀಡಲಾಗುವುದು ಈ ಉಮ್ಭತಿಗೆ ನೀಡಿದ ಆ ಲೈಲತುಲ್ ಕದ್ರ್ ನ ರಾತ್ರಿ ಗಳು ಈ ಉಮ್ಭತಿಗಲ್ಲದೆ ಬೇರೆ ಯಾರಿಗೂ ದೊರಕಲಿಲ್ಲ
ಆದರಿಂದ ಈ ರಾತ್ರಿ ಗಳಲ್ಲಿ ಅಲ್ಲಾಹನ ಪ್ರಾರ್ಥನೆ ಯಲ್ಲಿ ತೊಡಗಿಸಿಕೊಂಡು ಅವನ ಇಷ್ಟ ದಾಸರ ಪಟ್ಟಿಯಲ್ಲಿ ತನ್ನನ್ನು ಸೇರಿಸಿ ಕೊಳ್ಳಿರಿ
S.M.MUSTHAFA SASTHANA
No comments:
Post a Comment