MUSTHAFA HASAN ALQADRI OFFICIAL : 05/28/20

Translate

Thursday, May 28, 2020

Muhammad - Prophet, Life & Story-ಲೋಕದ ನಾಯಕ ರಾದ ಪ್ರವಾದಿ

 
ಲೋಕದ ನಾಯಕ ರಾದ ಪ್ರವಾದಿ صلي الله عليه وسلم 
ಯವರನ್ನು  ಪಡೆದ ನಾವು ಧನ್ಯರು  ಅವರನ್ನು   ಪಡೆಯಲು ನಾವು ಜೀವನ ಪೂರ್ತಿ ಸಾಷ್ಟಾಂಗ ದಲ್ಲಿ  ಕಳೆದರೂ ನಮ್ಮ ನಾಯಕರಾದ ಪ್ರವಾದಿ  صلي الله عليه وسلم 
ಯವರ ರುಣ ತೀರಿಸಲಾರೆವು ನಮ್ಮ ಶರೀರದಲ್ಲಿರುವ ರೋಮ ಗಳ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ   ಪ್ರವಾದಿ ಯವರ ಧಯೆ ನಮ್ಮ ಮೇಲಿದೆ ನಮ್ಮ ಶರೀರದ  ಪ್ರತಿಯೊಂದು ರೋಮವು ಆ ಪ್ರವಾದಿಯ ದಯೆಯಲ್ಲಿ  ಮುಳುಗಿದೆ  ಜೀವನ ಪೂರ್ತಿ ಅವರ ಗುಣಗಾನ ಹೇಳಿದರೂ ಅಲ್ಲಾಹನ ಪ್ರಾರ್ಥನೆ ಮಾಡಿದರೂ ಅವರ ದಯೆಗೆ ಬೆಲೆ ಕಟ್ಟಲಾರೆವು ಎಲ್ಲಿಯವರೆಗೆ ಅಂದರೆ ಆ ಪ್ರವಾದಿصلي الله عليه وسلم 
ಈ ಲೋಕದಲ್ಲಿ ಬರದೇ ಇದ್ದರೆ ನಮ್ಮ ಬದುಕು ಇಷ್ಟು ಚನ್ನಾಗಿ  ಇರುತ್ತಿರಲಿಲ್ಲ ಜೀವನಕ್ಕೆ ಜೀವನದ ಗುರಿ ಸಿಗುತ್ತಿರಲಿಲ್ಲ     ಜೀವನಕ್ಕೆ ಜೀವನದ ಆತ್ಮ ಸಿಗುತ್ತಿರಲಿಲ್ಲ   ಪ್ರವಾದಿ ಯವರ ಆಗಮನ ದಿಂದ ಎಲ್ಲವೂ ಸಾಧ್ಯವಾಯಿತು  ಪ್ರವಾದಿ ಯವರು ತೋರಿಸಿಕೊಟ್ಟ     ಜೀವನ ಮಾರ್ಗ  ದರ್ಶನ  ಸಿಗದಿದ್ದರೆ ಈ ಲೋಕದ ಮನುಷ್ಯರ ದಿಕ್ಕು ತಪ್ಪುವ ಸಮೂಹ ಎಲ್ಲಿರಬಹುದಿತ್ತು ಬಹುಷ   ಮನುಷ್ಯ ಕರ್ಗತ್ತಲೆಯಲ್ಲಿ ಅಜ್ನಾನದ ಕೇಂದ್ರಗಳಲ್ಲಿ ಜೀವಿಸುತ್ತಿದ್ದನು 
ಸಂಬಂಧಗಳನ್ನು ಗೌರವಿಸದೇ ಜೀವಿಸುತ್ತಿದ್ದನು ಹೆಣ್ಣು ಹುಟ್ಟಿದರೆ ಜೀವಂತ ಹೂತು ಹಾಕುವ ಸಮೂಹದ ಸದಸ್ಯರಾಗಿರುತ್ತಿದ್ದನು   ಭೇದ ಬಾವ ಕರಿಯ ಬಿಳಿಯ ನೆಂಬ ಅಹಂಕಾರದಿಂದ ಜೀವಿಸ ಬೀಕಾಗಿತ್ತು ಲೋಕದ ಎಲ್ಲಾ ಸೌಂದರ್ಯವೂ ಇದೇ ಪ್ರವಾದಿ ಯವರ ಕಾಲಡಿಯಿಂದ ಹೊರಟಿತು ಅಂದಾಕಾರದ ಲೋಕದಿಂದ ಪ್ರಕಾಶ ದಡೆಗೆ ಕೋಂಡೊಯ್ದ ಆ ಪ್ರವಾದಿಯ ಜೀವನದ ಪ್ರತಿಯೊಂದು ರೂಪು ರೇಖೆಗಳಲ್ಲಿ ಮಾನವ ಕುಲದ ಜೀವನದ ಬ್ರಹತ್ ಆಕಾರದ ಶೈಲಿ ಅಡಗಿವೆ ಇಂದಿನ ಆಧುನಿಕ ಲೋಕದ ತಂತ್ರಜ್ಞಾನ ವೂ ಜೀವನ ಶೈಲಿ ಪದ್ಧತಿ ಗಳೂ ಚಿಕ್ಕಿತ್ಸೆ ಗಳೂ ನ್ಯಾಯ ದ ಮಂದಿರಗಳೂ ವಿಜ್ನಾನದ ಕೇಂದ್ರಗಳೂ ಅವರ ಆಶಯ ಆದರ್ಶ ದ ಕೊಡುಗೆ ಎಂಬುವುದು ನೂರಕ್ಕೆ ನೂರು ಸತ್ಯ ವಾಗಿದೆ ನಾವು ಇಹಲೋಕ ಹಾಗೂ ಪರಲೋಕ ದಲ್ಲಿ ವಿಜಯಿ ಗಳಾಗ ಬೇಕಾದರೆ ಪ್ರವಾದಿ صلي الله عليه وسلم   ರವರ ಆಶಯ ಗಳನ್ನು ಸುಂದರ ವಾಗಿ ಪಾಲಿಸಿ ಅದುವೇ ಅಲ್ಲಾಹನ ಮೆಚ್ಚಿನ ದಾಸನ ಗುರತು.                                    S.M.MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...