MUSTHAFA HASAN ALQADRI OFFICIAL : 05/07/20

Translate

Thursday, May 7, 2020

Offer offer low price

https://www.amazon.in/dp/B01MQZ7J8K/ref=cm_sw_r_apa_i_xrlTEbWBRVQDA

True Love

ಒಮ್ಮೆ  ಬಹುಮಾನ್ಯರಾದ  ಅಲಿ ರ .ಅ ರವರ ಹತ್ತಿರ ಒಬ್ಬ  ಪುರುಷ ಬಂದು ಕೇಳಿದರು ನಾನು ಯಾರನ್ನಾದ್ರು  ಒಬ್ಬರನ್ನು ನಿಜವಾದ ಪ್ರೀತಿ ಮಾಡಿದರೆ ನನಗೆ ಅದೂ ಸಾಕೇ ಎಂದು ಕೇಳಿದನು ಆವಾಗ  ಅಲಿ ರ.ಅ.ಹೇಳಿದರು ನೀನು ನಿನ್ನನ್ನು ಯಾರಿಗಾಗಿಯೂ ಒಗ್ಗಿಸಕೊಳ್ಳಬೇಡ ಯಾಕೆಂದರೆ ಮನುಷ್ಯ ಮೂಲಭೂತ ಸ್ವಾರ್ತಿ ಯಾಗಿದ್ದಾನೆ  ಅವನು  ಯಾರನ್ನಾದರು ಪ್ರೀತಿಸಿದರೆ ಅವನು  ಅವನ ತಪ್ಪುಗಳನ್ನು ಮರೆತು ಹೋಗುತ್ತಾನೆ ಮತ್ತು ಯಾರನ್ನಾದರು ದ್ವೇಶಿಸಲು ಪ್ರಾರಂಭಿಸಿದರೆ  ಅವರ ಒಳ್ಳೆಯತನ ವನ್ನು ಮರೆತು ಹೋಗುತ್ತಾನೆ ನೀನು ನಿಜವಾಗಿಯೂ  ಈ ಭೂಮಿಯಲ್ಲಿ ಸಂತೋಷವಾಗಿರಲು ಇಷ್ಟ ಪಡುಡುವುದಾದರೆ ಮನುಷ್ಯರನ್ನು ಗೌರವಿಸು ಆದರೆ ಪ್ರೀತಿ ಮಾಡುವುದಾದರೆ ಸತ್ಕರ್ಮದ ನಿಯ್ಯತ್ತಿನಲ್ಲಿ ಮಾಡು  ಭರವಸೆಯಿಂದಲ್ಲ  ಅವರಿಂದ ಪ್ರತೀಕಾರವಾಗಿ ಏನನ್ನೂ ಬಯಸಬೇಡ  ಆದರೆ ಈ ಲೋಕ ಪ್ರೀತಿ ಪ್ರೇಮ ಸಹಾನುಭೂತಿ ಯ ಬದಲಾಗಿ ನೋವು ಗಳೇ ಸಿಗುವುದು   ಒಮ್ಮೆ  ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಈ ಲೋಕದಲ್ಲಿ ಎರಡು ತರಹದ ಜನರಿದ್ದಾರೆ ಒಬ್ಬ ತನ್ಶ  ಲಾಬಕ್ಕಾಗಿ ಪ್ರೀತಿಸುವನು ಇನ್ನೊಬ್ಬ ತನ್ನ ಇಚ್ಛೆಗೆ ಅನುಸಾರವಾಗಿ ಪ್ರೀತಿಸುವನು ನಿನ್ನನ್ನು ಯಾರಾದರು ಪ್ರೀತಿಸಬೇಕೆಂದಿದ್ದರೆ ನೀನು ನಿನ್ನ ಬಯಕೆ ಗಳನ್ನು ತ್ಯಾಗಮಾಡಿ ನಿನ್ನ ಉದ್ದೇಶ ಗಳನ್ನು ಈಡೇರಿಸಲು ಪ್ರಯತ್ನ ಪಡು ಹಾಗೆ ಮಾಡಿದರೆ  ನಿನ್ನ ಉದ್ದೇಶ ಗಳೆಲ್ಲವೂ  ನಿನಗೆ ಸಿಗುವುದು ಲೋಕದ ಎಲ್ಲಾ ಸಂಪತ್ತು ನಿನ್ನ ಹಿಂದೆ ಬರುವುದು ನೀನು ನಿನ್ನ ಇಚ್ಚೆಗಳ ಹಿಂದೆ ಬಿದ್ದರೆ ಅದು ನಿನ್ನನ್ನು ಓಡಿಸುವ ಕಾರ್ಯ ಮಾಡುವುದು ಆವಾಗ ನಿನಗೆ ನಿನ್ನ ಪ್ರೀತಿ ಆಗಲಿ ಅಥವಾ ನಿನ್ನ ಜೀವನದ ಉದ್ದೇಶ ಸಿಗಲಾರದು ಓ ಮನುಷ್ಯ ಕೇಳು ಪ್ರೀತಿ ಮಾಡುವ ಉದ್ದೇಶ  ಅಂದರೆ  ನೀನು ಪ್ರೀತಿಸಿದವರು ನಿನ್ನ ಆಜ್ಞೆ ಯ ಪ್ರಕಾರ ತಲೆ ಬಾಗಿ ನಿಲ್ಲುವುದು ಅಂದರೆ ಪ್ರೀತಿಯ ಮಹತ್ತಾದ ಸಂತೋಷ ನೀನು ಪ್ರೀತಿಸಿದವರು ನಿನ್ನ ವ್ಯಕ್ತಿತ್ವ ನೋಡಿ ನಿನ್ನಲ್ಲಿ ಹೆಮ್ಮೆ ಪಡಬೇಕು ನಿನ್ನನ್ನು ಗೌರವಿಸ ಬೇಕು ಅದುವೇ ನಿಜವಾದ ಪ್ರೀತಿ

Haji Ali Dargah

 ಪರಮಾತ್ಮನು ಪ್ರತಿಯೊಂದು  ಸಮಯದಲ್ಲಿ ತನ್ನ ಪ್ರತ್ಯೇಕ ದಾಸರನ್ನು ಆಯ್ಕೆ ಮಾಡುತ್ತಾನೆ ಯಾಕೆಂದರೆ ಅವರು ಜನರಲ್ಲಿ ಪ್ರೀತಿ ಪ್ರೇಮ ಶಾಂತಿ ಯನ್ನು ಉಂಟು ಮಾಡಲು ! ಅಂತೆಯೇ ಸಮುದ್ರದ ರಾಜ ಅಲೆಗಳ ರಾಜಾದಿರಾಜ ಸೂಫಿವರ್ಯ ಎಂದೇ ಪ್ರಸಿದ್ಧಿ ಪಡೆದ  ಮುಂಬಯಿಯ ಹಾಜಿ ಅಲಿ ವಲಿಯಲ್ಲಾಹ್ ರನ್ನು ಪರಮಾತ್ಮನು ಆಯ್ಕೆ ಮಾಡಿ ಭಾರತದ ಮಣ್ಣಿಗೆ  ಕಳುಹಿಸಿದನು ಮನುಷ್ಯರಿಗೆ ಮನುಷ್ಯರನ್ನು ಪ್ರೀತಿಸಲು ಕಲಿಸಿದರು ತಾರೀಕು  15 ಡಿಸೆಂಬರ್ 850  ಹಿಜರಿಯಲ್ಲಿ ಬುಖಾರ ಎಂಬ ದೇಶದಲ್ಲಿ ಹುಟ್ಟಿದ ಅವರು ಹಝ್ರತ್  ಇಮಾಮ್ ಅಲಿ ರ.ಅ.ರವರ ಕುಟುಂಬದವರಾಗಿದ್ದರು ಅವರನ್ನು ಇಂದಿಗೂ ಲೋಕ ಸಮುದ್ರದ ರಾಜ ಅಲೆಗಳ ರಾಜ ಎಂದು ಕರೆಯಲ್ಪಡುತ್ತಾರೆ ಅವರ ತಂದೆ ಕಬೀರುದ್ದೀನ್ ತಾಯಿ ಬಿ ಬಿ ಝೈನಬ್ ರಾಗಿದ್ದರು ಅವರ ತಾಯಿ ಹೇಳಿದರು ಅಲ್ಲಾಹನ ರಸೂಲರು  ಸಲ್ಲಲ್ಲಾಹು ಅಲೈಹಿ ವಸಲ್ಲಮ್  ನನ್ನ ಕನಸಿನಲ್ಲಿ ಬಂದರು ಹೀಗೆ ಹೇಳಿದರು ಅವರು ನನ್ನ ಮಕ್ಕಳಲ್ಲಿ ಒಬ್ಬನನ್ನು ಜನರ ಒಳತಿಗಾಗಿ ಆಯ್ಕೆ ಮಾಡಿದ್ದಾರೆ ಹಾಜೀ ಅಲಿಯವರು ತನ್ನ ಧಾರ್ಮಿಕ ವಿದ್ಯಾಭ್ಯಾಸ ತಾಯಿಯಿಂದ ಪಡೆಯಲು ಆರಂಬಿಸಿದರು ಅವರ ತಾಯಿ ತನ್ನ ಕನಸಿನಲ್ಲಿ ಬರುವ ಪ್ರವಾದಿಯವರ ವಿಷಯ ಆಗಾಗ ಮಕ್ಕಳಿಗೆ ತಿಳಿಸುತ್ತಿದ್ದರು ಓ ಮಕ್ಕಳೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಹಾಗೆ  ಹಾಜಿ ಅರಿಯವರಿಗೆ ಇಪ್ಪತ್ತ ಎರಡು ವರ್ಷಗಳ ವಯಸ್ಸಿನಲ್ಲಿ ತಂದೆ ಇಹಲೋಕ ತ್ಯಜಿಸಿದರು ತಂದೆಯ ಮರಣದ ನಂತರ ತಾಯಿ ಆಗಾಗ ಕನಸಿನ ಬಗ್ಗೆ ನೆನೆಸುತ್ತಿದ್ದರು ಮಕ್ಕಳನ್ನು ಕರೆದು ಹೇಳಿದರು ಓ ಮಕ್ಕಳೇ ನಾನು ನನ್ನ ಜೀವನದಲ್ಲಿ   ಆ ಕಂಡ ಕನಸಿನ ವ್ಯಾಖ್ಯಾನ ವನ್ನು  ಈಡೇರುವುದನ್ನು ಕಾಣಲು ಹಾತೊರೆಯುತ್ತಿದ್ದೇನೆ .ಹಾಜಿ ಅಲಿಯವರು  ಎಲ್ಲಾ ಸಮಯ ಅಲ್ಲಾಹನ ಪ್ರಾರ್ಥನೆ ಯಲ್ಲಿ ಸಮಯ ಕಳಿಯುತ್ತಿದ್ದರು .ಒಮ್ಮೆ   ಪ್ರಾರ್ಥನೆ ಯಲ್ಲಿ ಇರುವಾಗ ಒಂದು ಮಹಿಳೆಯು ಜೋರಾಗಿ ಅಳುವುದನ್ನು  ಆಲಿಸಿದರು    ಮನೆಯ ಹೊರಗೆ ಬಂದು ನೋಡುವಾಗ ಒಬ್ಬ ಮಹಿಳೆ ಹೇಳಿದರು ಓ ಅಲ್ಲಾಹನ ಇಷ್ಟ ದಾಸರೇ ನನ್ನನ್ನು ಸಹಾಯ ಮಾಡಿ ನನ್ನ ಬಳಿ ಇದ್ದ ಎಣ್ಣೆಯ ಬಾಟಲಿ ಕೆಳಗೆ ಬಿದ್ದು ಎಲ್ಲವೂ ಚೆಲ್ಲಿ ಹೋದವು ಸಹಾಯ ಮಾಡಿ ಯಾಕೆಂದರೆ ನಾನು ಎಣ್ಣೆ ಪಡೆಯಬೇಕು ಇಲ್ಲ ಅಂದರೆ ನನ್ನ ಗಂಡನ ವಿರೋಧದ ಮಾತು ನಾನು ಕೇಳಲಾರೆನು ಏನು ಮಾಡಲಿ ಎಂದು ಹೇಳಿದಾಗ ಹಾಜಿ ಅಲಿ ಯವರು  ಮಹಿಳೆಯ ಮಾತು ಕೇಳಿ ಹೊರ ಬಂದರು ತನ್ನ ಎರಡು ಕೈ ಗಳನ್ನು ಭೂಮಿಯನ್ನು ಸ್ಪರ್ಷಿಸಿದರು ಆವಾಗ ಭೂಮಿಯಿಂದ ಎಣ್ಣೆಯು ಹೊರ ಚಿಮ್ಮಿದವು ಅಲ್ಲಾಹನ ವಲಿಯ್ ಹಾಜಿ ಅಲಿ ಹೇಳಿದರು ಓ ಮಹಿಳೆ ನಿನ್ನಿಂದ ಕೆಳಗೆ ಬಿದ್ದ ಎಣ್ಣೆ ಮರಳಿ ಪಡೆದುಕೋ ಮತ್ತು ಅಲ್ಲಾಹನನ್ನು ಸ್ಮರಿಸು .ಸಮಯಗಳು ಉರುಳತೊಡಗಿದವು ನೋಡುತ್ತಾ ನೋಡುತ್ತಾ ಬುಖಾರ ದಲ್ಲಿ ಹಾಜಿ ಅಲಿ ಯವರ ಚರ್ಚೆ ಗಳು ಎಲ್ಲರ ಮನಸ್ಸಿಗೂ ತಟ್ಟುತ್ತಿತ್ತು ಜನರೆಡೆಯಲ್ಲಿ ಪ್ರಚಲಿತರಾದರು ಆ ಸಮಯದಲ್ಲಿ ಒಂದು ವಿಶಯ ತನ್ನ ತಾಯಿಯ ಬಳಿ ಬಂತು ಭಾರತದಲ್ಲಿ ಜನರು ಜಾತಿ ಧರ್ಮ ಕೀಳು ಮೇಲು ಎಂಬ ವ್ಯತ್ಯಾಸಗಳ ನಡುವೆ ಜಗಳವಾಡುತ್ತಿದ್ದರು ಹಾಜಿ ಅಲಿ ಯವರ ತಾಯಿಗೆ ವಿಷಯಗಳು ಮನದಟ್ಟಾಗಲು ಆರಂಭವಾದವು ಅವರು ಕಂಡ ಕನಸು ನನಸಾಗುವ ಸಮಯ ಬಂದೊದಗಿತು ತನ್ನ ಎರಡು ಮಕ್ಕಳನ್ನು ಕರೆದು ಹೇಳಿದರು ನಡೆಯಿರಿ ಬಾರತದ ಮಣ್ಣಿಗೆ ತಮ್ಮನ್ನು ತಾವು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿರಿ ಎಂದು ಹೇಳಿದಾಗ ಮಕ್ಕಳು  ಅಲ್ಲಿಂದ ಹೊರಟು ಭಾರತದ ಮಣ್ಣಿನಲ್ಲಿ ಬಂದು ಬಾರತಿಯರ ಕಷ್ಟ  ಸುಖಗಳಲ್ಲಿ ಸಹಾಯ ಮಾಡಲು ತೊಡಗಿಕೊಂಡರು ಅವರು  ಬುಖಾರ ದೇಶದಿಂದ ಬಂದವರು ಬುಖಾರಿ ಎಂದು ಹೆಸರುವಾಸಿಯಾದರು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಮುಂಬಯಿ ತಲುಪಿದಾಗ ಅವರ ಅಣ್ಣ ಹೇಳಿದರು ನಾನು ನಿನ್ನೆ ಕನಸು ಕಂಡೆನು ಆ ಕನಸಿನಲ್ಲಿ ಒಂದು ಸುಳಿವು ಇತ್ತು ನಾನು ನಿಮ್ಮನ್ನು ಬಿಟ್ಟು ನನ್ನ ದೇಶಕ್ಕೆ ಹಿಂತಿರುಗುವ ಆಜ್ಞೆ ಆಗಿತ್ತು  ಆವಾಗ ಹಾಜಿ ಅಲಿ ಮುಗುಳ್ನಗೆ ಯೊಂದಿಗೆ ಹೇಳಿದರು ಹೌದು ನನ್ನ ಅಣ್ಣ ನಾನೂ ಕೂಡ ಅದೇ ಕನಸು ಕಂಡಿದ್ದೆ ಸಾಕು ನಮ್ಮ ಜೊತೆ ಇಲ್ಲಿಯವರೆಗೆ ಮಾತ್ರ ಇತ್ತು ಒಂದು ಕಾಗದ ದಲ್ಲಿ ಬರೆಯುತ್ತಾ .ಓ ನನ್ನ ತಾಯಿ ನಿಮ್ಮ ಮಗ ಹಾಜಿ ಅಲಿ ಯ ಸಲಾಮ್ ಸ್ವೀಕರಿಸಿ ನೀವು ಕಂಡ ಕನಸಿನ ವ್ಯಾಖ್ಯಾನ ಅಲ್ಲಾಹನು ನಿಮಗೆ ತಿಳಿಸಿಕೊಟ್ಟನು ಮತ್ತು ನನಗೆ ಅವನ ಆಜ್ಞೆ ಪ್ರಕಾರ ನಾನು ಇಲ್ಲೇ ಉಳಿಯಬೇಕೆಂದು ಪತ್ರದಲ್ಲಿ  ಬರೆದರು  ಜನರ ಸೇವೆ ಮಾಡುತ್ತಾ ಪರಮಾತ್ಮನ ಬಳಿ ಹೊರಡುವೆನು ದಿನ ರಾತ್ರಿ ಜನರ ಸೇವೆಯಲ್ಲಿ ತೊಡಗಿಕೊಂಡರು ಜಾತಿ ಧರ್ಮ ದಿಂದ ಹೊರಗೆ ಬಂದು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿಸಿದರು ಹಾಜಿ  ಅಲಿ ಯವರ ಸನ್ನಿದಿಯಲ್ಲಿ ಮನುಷ್ಯರು ಮಾತ್ರವಲ್ಲ ಬೇರೆ ಸ್ರಷ್ಟಿಗಳೂ ಕೂಡ ಬರಲಾರಂಭಿಸಿದರು ಅವರು ತನ್ನ ವಾಸ ಸ್ಥಳ ಸಮುದ್ರದ ಹತ್ತಿರ ಕಲ್ಲುಗಳನ್ನು ಶೇಖರಿಸಿಟ್ಟು ಅಲ್ಲಿ ಕುಳಿತಿರುವಾಗ ಜಿನ್ನ್ ಹಾಗು ಸಮುದ್ರದ ಮೀನು ಹಾಜಿ ಅಲಿ ಅವರ ಪಾದ ಸ್ಪರ್ಶ ಮಾಡುತ್ತಿದ್ದವು ಅವರು ತನ್ನ ಜೀವನದ ಕೆಲವು ಸಮಯ ಜನರನ್ನು ಸಹಾಯ ಮಾಡುತ್ತಿದ್ದರು ಅವರ ಹ್ರದಯ ಶುದ್ಧೀಕರಿಸುತ್ತಿದ್ದರು ಮತ್ತು ಕೆಲವು ಸಮಯ ಗಳಲ್ಲಿ  ಇವತ್ತು ನಾವು ಕಾಣುವ  ಮುಂಬಯಿಯ ಕಡಲ ಮದ್ಯ ತಲೆ ಎತ್ತಿ ನಿಂತಿರುವ ಅವರ ಅಂತಿಮ ಸ್ಥಳ ದಲ್ಲಿ ಮಗ್ನರಾಗಿ ಅಲ್ಲಾಹನ ಪ್ರಾರ್ಥನೆ ಯಲ್ಲಿ ತೊಡಗಿಕೊಳ್ಳುತ್ತಿದ್ದರು ಸಮುದ್ರದ ಸ್ಲಷ್ಟಿ ಮೀನು ಮತ್ತು ಜಿನ್ ಗಳಿಗೆ ಬೋಧನೆ ಮಾಡುತ್ತಿದ್ದರು ನಾಲ್ಕೈದು ದಿವಸ ಹಾಜಿ ಅಲಿ ಅವರನ್ನು ಕಾಣದೇ ಇದ್ದಲ್ಲಿ ಜನರು ಅವರ ವಾಸ ಸ್ಥಳ ಸಮುದ್ರದ ಹತ್ತಿರ ಬಂದು ಬೇಟಿಯಾಗುತ್ತಿದ್ದರು ಕಾಲ ಗಳು ಉರುಳುತ್ತಾ ಹಾಜಿ ಅಲಿ ಯವರ ಹೆಸರು ಸಮುದ್ರದ ರಾಜ ಎಂದು ಹೆಸರುವಾಸಿ ಯಾಯಿತು  ಕೆಲವು ಕಾಲ ಜನರಿಗೆ ಬೋಧನೆ ಮಾಡುತ್ತಿದ್ದರು ಅವರಿಗೆ ಎಂಬತ್ತು ವರ್ಷ ಪ್ರಾಯ ತಲುಪಿದಾಗ ಹೇಳಿದರು ನನಗೆ ಅಲ್ಲಾಹನ ಬಳಿಯಿಂದ ಕರೆ ಬಂದಿದೆ ಜಾಸ್ತಿ ಸಮಯ ನಿಮ್ಮೊಡನೆ ಇರಲಾರೆನು ಆದರೆ ನನ್ನ ವಿಜ್ಞಾನ ನನ್ನ ವ್ಯಕ್ತಿತ್ವ ನನ್ನ ಗುಣ ಸದಾ ನಿಮ್ಮ ಮನಸ್ಸಿನಲ್ಲಿ ಇರುವುದು ತಮ್ಮ ಅನುಯಾಯಿಗಳು ಎಲ್ಲರೂ ದುಖ:ಬರಿತರಾದರು ಕೆಲವು ದಿನ ಗಳ ನಂತರ ಅವರು ಹೇಳಿದರು ನನ್ನ ಅಂತಿಮ ಸಮಯದಲ್ಲಿ ಅಲ್ಲಾಹನ ಕಾಬಾ ಹಾಗೂ ರಸೂಲರ  ಮದೀನ ಸಂದರ್ಶಿಸಬೇಕು ಎಂಬ ಬಯಕೆ .ಹಜ್ಜಿನ ನಿಯತ್ತಿನೊಂದಿಗೆ ಕಡಲ ದಾರಿ  ಮೆಕ್ಕಾ ಮದೀನದ ಪ್ರಯಾಣ ಬೆಳೆಸಿದರು  ಹಜ್ ಮುಗಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರನ್ನು ಕನಸಿನಲ್ಲಿ ಕಾಣುತ್ತಾರೆ ಓ ಹಾಜಿ ಅಲಿ ನಾನು ನಿಮ್ಮನ್ನು ಭಾರತದ ಜನರಿಗಾಗಿ ಆಯ್ಕೆ ಮಾಡಿದ್ದು ನಡೆಯಿರಿ ಇಲ್ಲಿಂದ ನಿಮ್ಮ ಶರೀರದ ಮಣ್ಣು ಅಲ್ಲಿನದ್ದು ಹೋಗಿ ನಿಮ್ಮ ದೇಶ ಭಾರತಕ್ಕೆ ಮರಳಿರಿ ಎಂದು ಹೇಳಲಾಯಿತು ನಿದ್ರೆ ಯಿಂದ ಎಚ್ಚರ ವಾಗುತ್ತಲೇ  ತನ್ನ ಬಳಿಯಿದ್ದ ಸಾಮಾನುಗಳನ್ನು ಹಿಡಿದು ಭಾರತದ ಕಡೆ ಪ್ರಯಾಣ ಬೆಳಿಸಿದರು ಅದಾಗಲೇ ಮುಂಬಾಯಿಯ ಸ್ವಲ್ಪ ದೂರದಲ್ಲಿರುವಾಗಲೇ ಮರಣ ಹಿಡಿಯುವ ಮಲಕುಲ್ ಮೌತ್ ಹಾಜರಾದರು ಅಲ್ಲಾಹನ ಆಜ್ಞೆ ಯಂತೆ ನಿಮ್ಮ ಮರಣವನ್ನು ಹಿಡಿಯಲು ಬಂದಿದ್ದೇನೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದಾಗ ಹಾಜಿ ಅಲಿ ರ.ಆ ಅವರು ತನ್ನ ನೋಟವನ್ನು ಮೇಲೆತ್ತಿ ಮಲಕ್ (ದೇವದೂತ) ರೊಡನೆ ಹೇಳಿದರು ನಿನಗೆ ಸಿಕ್ಕ ಆಜ್ಞೆ ಯನ್ನು  ನೀನು ಪಾಲಿಸು ನನಗೆ ಸಿಕ್ಕ ಆಜ್ಞೆ ನಾನು ಪಾಲಿಸುತ್ತೇನೆ  ಸಮುದ್ರದ ಕಡೆ ನೋಡಿ ಹೇಳಿದರು ಅಲ್ಲಾಹನ ರಸೂಲರ ಆಜ್ಞೆ ನನ್ನ ಶರೀರ ನನ್ನ ಅನುಯಾಯಿಗಳಿರುವ ಜಾಗಕ್ಕೆ ತಲುಪಬೇಕೆಂದು ಅವರ ಅನುಯಾಯಿಗಳಿಗೆ ಆದೇಶಿಸಿದ್ದರು ನನ್ನ ಪ್ರಯಾಣದ ನಂತರ ನನ್ನ ಶರೀರ ನೀರಿನಲ್ಲಿ ಬಿಡಲು ಸಮುದ್ರವು ತಾನು ಸ್ವತಹಾ ನನ್ನನ್ನು ಅಲ್ಲಿಗೆ ಕರದೊಯ್ಯುತ್ತದೆ ಅದೇ ರಸೂಲರ ಆಜ್ಞೆ !ಅಷ್ಟು ಹೇಳುತ್ತಲೇ ಈ  ಲೋಕದಿಂದ ಹೊರಟೇ ಬಿಟ್ಟರು ತಮ್ಮ ಅನುಯಾಯಿಗಳು ತಮ್ಮ ಆಜ್ಞೆ ಪಾಲಿಸುತ್ತಾ ಅವರ ಶರೀರ    ಸಮುದ್ರದಲ್ಲಿ ಬಿಟ್ಟರು ಆವಾಗ ಸಮುದ್ರ ಮತ್ತು ಮೀನು ಹಾಗು ಜಿನ್ ಗಳು ಅವರ ಶರೀರ ವನ್ನು ಮುಂಬಯಿಯ ಅದೇ ಸ್ಥಳದಲ್ಲಿ ತಲುಪಿಸಿದರು    ಆವಾಗ ಅಲ್ಲಿ ನೆಲೆಸಿದ ಅವರ ಅನುಯಾಯಿಗಳು ಅವರ ಶರೀರವನ್ನು ಅದೇ ಸ್ಥಳದಲ್ಲಿ ದಫನ್ ಮಾಡಿದರು  ಅವರ ಕರಾಮತ್ ಗಳನ್ನು ಅಲ್ಲಿ ನೆರೆದ ಜನರು ಹೇಳತೂಡಗಿದರು ಆವಾಗ ಅವರ ಕಬರ್ ಸಂದರ್ಷನಕ್ಕೆ ಜನರು ಕಲ್ಲುಗಳನ್ನು ಸಮುದ್ರ ದಲ್ಲಿ  ಹಾಕಿ ಝಿಯಾರತ್ ಮಾಡಲು ಹೊರಡುತ್ತಿದ್ದರು 1944 ರಲ್ಲಿ ಮಹಮ್ಮದ್ ಅಬೀ ಬಕರ್ ರವರು ನೋಡಿದರು ಹಾಜಿ ಅಲಿ ರ.ಅ.ರವರ ಮುರೀದ್ ಗಳು ಸರಿಯಾದ ದಾರಿ ಇಲ್ಲದೇ ಕಷ್ಟ ಪಡುವುದನ್ನು ನೋಡಿ ಒಂದು ದಾರಿಯನ್ನು ಮಾಡಿಕೊಟ್ಟರು ಇಂದಿಗೂ ಸಾವಿರಾರು ಜನರು ದೇಶ ವಿದೇಶದಿಂದ ಜಾತಿ ಧರ್ಮಗಳ ವ್ಯತ್ಯಾಸ ಇಲ್ಲದೇ ಅವರ  ಸನ್ನಿದಿಗೆ ಬರುತ್ತಾರೆ!

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...