MUSTHAFA HASAN ALQADRI OFFICIAL : 06/08/20

Translate

Monday, June 8, 2020

ನಾಲಿಗೆಯ ಹರಿತ ವಾದ ಮಾತಿನಿಂದಾಗುವ ಗಾಯ ಮಾಯ ವಾಗ ಲಾರವು.- Tongue Injury

ಶೈಖ್ ಸಹದಿ  رضي الله عنه   ಹೇಳುತ್ತಾರೆ  ಒಮ್ಮೆ  ನಾನು ನಿರ್ಜನ ವಾದ ಕಾಡಿನೊಳಗೆ ಇರುವಾಗ ಒಬ್ಬ ಚಿರತೆಯ ಮೇಲೆ ಸವಾರಿ ಯಾಗಿ ಕೈಯಲ್ಲಿ ಹಾವಿನ ಆಕಾರದ ಬೆತ್ತ ಹಿಡಿದುಕೊಂಡು  ನನ್ನ ಹತ್ತಿರ ಬಂದು ಒಮ್ಮೇಲೆ ನಿಂತು ಬಿಟ್ಟರು ನಾನು ಆಶ್ಚರ್ಯದಿಂದ ನೋಡಿದಾಗ ಆ ಮನುಷ್ಯ ಕೇಳಿದರು ಶೈಕ್ ಅವರೇ ನೀವು ಭಯ ಭೀತ ರಾಗಿದ್ದೀರ ಎಂದು  ಕೇಳಿದಾಗ ಶೈಕ್ ಸಹದಿ ಹೇಳಿದರು ನೀವು ಚಿರತೆ ಯಲ್ಲಿ ಸವಾರಿ ಮಾಡಿ ಅದ್ಭುತ ವಾದ ಬೆತ್ತ ಹಿಡಿದು ಬಂದರೆ ಭಯ ಭೀತಿ ಉಂಟಾಗುವುದಲ್ಲವೇ ಎಂದು ಹೇಳಿದಾಗ ಆ ಮನುಷ್ಯ ಮುಗುಳ್ನಗುತ್ತ ಹೇಳಿದರು ಸಹದಿ ನೀನು ಅಲ್ಲಾಹನದಾಗು ಅಲ್ಲಾಹು ನಿನ್ನ ದಾಗುವನು ಎಂದರು ಪ್ರವಾದಿ  صلي الله عليه وسلم   ರವರು ಒಮ್ಮೆ ಒಂದು ಹಾವನ್ನು ನೋಡಿದರು ಅದು ತನ್ನ ಬಿಲದಿಂದ ಹೊರಗೆ ಬಂದು ಮತ್ತೋಮ್ಮೆ ಒಳಗೆ ನುಗ್ಗಲು ಪ್ರಯತ್ನ ಪಡುತ್ತಿತ್ತು ಆದರೆ ಅದರಿಂದ ಒಳಗೆ ನುಗ್ಗಲು  ಸಾಧ್ಯ ವಾಗಲಿಲ್ಲ  ಆವಾಗ ಪ್ರವಾದಿ ಯವರು ಅಲ್ಲಾಹನ   ದೇವ ದೂತರಾದ ಜಿಬರೀಲ್ عليه السلام   ರೊಂದಿಗೆ ಕೇಳಿದರು ಇದೇನು ಎಂದು ಆವಾಗ ಜಿಬರೀಲ್ ಹೇಳಿದರು ಇದು ಆ ಮನುಷ್ಯನ ಉದಾಹರಣೆ ಯಾಗಿದೆ ತನ್ನ ಹರಿತವಾದ  ನಾಲಿಗೆ ಯಿಂದ ಕೆಲವು ಮಾತು ಗಳನ್ನು ಆಡಿ ನಂತರ ಹಿಂಪಡೆಯಲು ಆತುರ ಪಡುತ್ತಾನೆ ಅವನು ಒಮ್ಮೆ ಆಡಿದ ಮಾತು ಹಿಂಪಡೆಯ ಲಾರನು ಆದರಿಂದ ಮಾತನಾಡುವ ಮೊದಲು ಚಿಂತಿಸ ಬೇಕಾಗಿದೆ ಕೆಲವರು ಆತುರ ದಿಂದ ಮಾತನಾಡುವು ದುಂಟು ಇದರಿಂದ ಅನ್ಯರ ಮನಸ್ಸಿಗಾಗುವ ನೋವು ಅರಿಯಲಾರರು ಕೆಲವರು ತನ್ನನ್ನು ತಾನು ಹೀಗೆ ವರ್ಣಿಸುವುದುಂಟು ಸತ್ಯ ಯಾವತ್ತೂ ಕಹಿಯಾಗುತ್ತದೆ ನಾನು ಯಾವತ್ತೂ ಕಹಿಯಾಗಿಯೇ ಇರುವೆನೆಂದು  ಇದ್ಯಾವ ನ್ಯಾಯ   ಪ್ರವಾದಿ ಯವರಿಗಿಂತ ಸತ್ಯ ವಂತ ಅವರ ಸಿಹಿ ಯಾದ ಮಾತಿಗಿಂತ ಸಿಹಿ ಬೇರೆ  ಯಾರಿದ್ದಾರೆ ಈ ಲೋಕದಲ್ಲಿ? ಇದು ಯಾವ ಲೋಜಿಕ್ ನಾನು ಸತ್ಯ ವಂತ ಸತ್ಯ ವನ್ನೇ ಹೇಳುವೆನೆಂದು ಸದಾ ಮಾತಿನಿಂದ ವಿಷ ಕಾರುತ್ತಿರುವುದು ಜನರ ಗೌರವ ವನ್ನು ಮಣ್ಣು ಪಾಲಾಗಿಸಿ ಹರಿತ ವಾದ ಮಾತುಗಳನ್ನು ಆಡಿ ಜನರ ಮನಸ್ಸಿನಲ್ಲಿ ವೈರಾಗ್ಯ ಉಂಟು ಮಾಡುವುದು ಸರಿಯಲ್ಲ ಮಾತಿನಲ್ಲಿ ಮಿತಿ ಇರಲಿ ನೀವು ಆಡುವ ಮಾತು ಸತ್ಯ ವಾದರೂ  ಅನ್ಯರ ಗೌರವಕ್ಕೆ ದಕ್ಕೆ ಆಗದ ರೀತಿಯಲ್ಲಿ ಮಾತನಾಡುವುದು ಇದು ಪ್ರವಾದಿ ಯವರ ಚರ್ಯೆ ಯಾಗಿದೆ ಕಷ್ಟ ತನ್ನ ಹೆಗಲ ಮೇಲೆ ಹೊತ್ತು ಕೊಳ್ಳಿ ಆದರೆ ಅನ್ಯರ ಮುಂದೆ ಕೀಳಾಗಿ ತನ್ನನ್ನು ತಾನು ವರ್ಣಿಸಬೇಡಿ ಪ್ರವಾದಿ ಯವರು ಸಿಟ್ಟು  ಗೊಂಡರೆ ಅವರ ಅನುಯಾಯಿಗಳು ಅವರ ಮುಖ ದಿಂದಲೇ ಕಂಡು ಹಿಡಿಯುವರು ಪ್ರವಾದಿ ಯವರು ಏನು ಆಡದೆ ಇರಲು ಪ್ರಯತ್ನ ಪಡುತ್ತಾರೆ ಒಂದೊಮ್ಮೆ ಏನಾದರು ಹೇಳಲು ಬಯಸಿದರೆ ಸಾಮೂಹಿಕವಾಗಿ ಹೇಳುತ್ತಾರೆ ನಮ್ಮಲ್ಲಿ ಕೆಲವರು ಸಾಮೂಹಿಕವಾಗಿ ಜನ ಸಂದಣಿಯಲ್ಲಿ  ಗುರಿ ಯಾಗಿಸುತ್ತಾರೆ ಈ ತರಹ ಮಾಡುವುದರಿಂದ ಅವರ ಗೌರವಕ್ಕೆ ದಕ್ಕೆ ಯಾಗುವದು ತಾನು ಸತ್ಯ ವಂತ ನೆಂದು ಜನರ ಮದ್ಯೆ ತನ್ನನ್ನು ತಾನು ವರ್ಣಿಸುತ್ತಾ ನಡೆಯ ಬೇಡಿ ಅಲ್ಲಾಹು ಬಲ್ಲವ ನಾಗಿದ್ದಾನೆ 


يَعْلَمُ خَائِنَةَ الْأَعْيُنِ وَمَا تُخْفِي الصُّدُورُ

ಅವನು (ಅಲ್ಲಾಹನು), ಕಣ್ಣುಗಳು ಮಾಡುವ ಮೋಸವನ್ನೂ ಮನಸ್ಸುಗಳಲ್ಲಿ ಅಡಗಿರುವ ವಿಷಯಗಳನ್ನೂ ಬಲ್ಲನು.
ಶರೀರದ ಅಂಗಾಂಗ ಗಳಿಗೆ ಆದ ಗಾಯ ಗುಣ ವಾಗುತ್ತದೆ ಆದರೆ ನಾಲಿಗೆಯ ಹರಿತ ವಾದ ಮಾತಿನಿಂದಾಗುವ ಗಾಯ ಮಾಯ ವಾಗ ಲಾರವು.
IslamicKannada

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...