MUSTHAFA HASAN ALQADRI OFFICIAL : 05/12/20

Translate

Tuesday, May 12, 2020

Secret Of Life Quotes-ಜೀವನದ ರಹಸ್ಯ

ಬ್ರಹ್ಮಾಂಡದಲ್ಲಿ ಮೊಟ್ಟ ಮೊದಲಿಗೆ  ಸಂಭವಿಸಿದ ಪಾಪ  
ನಾವು ಒಬ್ಬರನ್ನು    ಸಂದರ್ಶಿಸುವಾಗ  ನಮ್ಮ   ಮುಖದಲ್ಲಿ ಮಂದಹಾಸ ತರುವುದು  ಸುನ್ನತ್ ಆಗಿದೆ ಅಹಂಕಾರ ಅಹಂಬಾವ
ಇದು ಯಾವ ಮನುಷ್ಯನಿಗೂ ಒಳಿತಲ್ಲ ಕಿಬಿರಿಯತ್ಯ್ ಅದು ಜಗಲೊಡೆಯನಾದ ಅಲ್ಲಾಹನಿಗೆ ಮಾತ್ರ ಇರುವಂತಹದು ಅವನ ಸುಂದರ ಹೆಸರುಗಳಲ್ಲಿ ಒಂದು ಹೆಸರು متكبر ಎಂದಾಗಿದೆ ಕಿಬಿರಿಯಾಯಿ ಪರಮಾತ್ಮನ ಕಂಬಳಿ ಯಾಗಿದೆ ಅದನ್ನು ಯಾರಾದರೂ ಪಡಕೊಳ್ಳಲು ಮುಂದಾದರೆ ನರಕದ ಅಗ್ನಿ ಅವನ ಪಾಲಿಗೆ  ಸಿಗುವಂತಹುದು  ಈ ಬ್ರಹ್ಮಾಂಡದಲ್ಲಿ ಮೊಟ್ಟ ಮೊದಲಿಗೆ ಸಂಭವಿಸಿದ ಪಾಪ ಅದು ಅಹಂಕಾರದಿಂದ ವಾಗಿತ್ತು ಸೈತಾನನಾದ  ಇಬ್ಲೀಸನಿಗೆ ಕಲ್ಪಿಸಲಾಗಿತ್ತು  ಆದಿ ಪಿತ ಪ್ರವಾದಿ ಆದಮ್ ಅ.ಸ. ರವರಿಗೆ  ಸಾಷ್ಟಾಂಗ ಮಾಡಲು   ಆದರೆ ಅವನು ನಿರಾಕರಿಸಿದ ಅಹಂಕಾರದೊಂದಿಗೆ! ಅಹಂಕಾರವು ಅದು ಸಾಸಿವೆ ಕಾಳಿನಷ್ಟು ಆದರೂ ಪರಮಾತ್ಮನು ಮೆಚ್ಚಲಾರನು ಅಂತ್ಯ ದಿವಸದಲ್ಲಿ ಅಲ್ಲಾಹು ಜನರನ್ನು ಉದ್ದೇಶಿಸಿ ಮಾತನಾಡುವನು ಒಂದು ವಾಕ್ಯವನ್ನು ಕೇಳುವನು ಎಲ್ಲಿ ಅಹಂಕಾರಿಗಳು ಎಲ್ಲಿ ರಾಜರೂ ಯಾರೂ ಉತ್ತರಿಸಲಾರರು 

ಇವೆಲ್ಲವೂ ಪರಮಾತ್ಮನ ಸ್ವಂತದ್ದು ಅದು ಅವನಿಗೆ ಮಾತ್ರ ಸೀಮಿತ  ಜನರಿಗೆ   ಸಂದೇಶ  ಬೋಧನೆ ನೀಡೂವಾಗಲು  ಜನರ ಮುಂದೆ ತನ್ನ ಮುಖವನ್ನು ತಿರುಗಿಸಬೇಡಿ ಎಂಬ ಆಜ್ಞೆ ಇದೆ 
ಮತ್ತು ಭೂಮಿಯಲ್ಲಿ ದರ್ಪದ ನಡತೆ  ನಡೆಯಬೇಡಿ. ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ ಒಂಟೆಗೆ  ಒಂದು ಕಾಯಿಲೆ ತಗುಲುವ ಹಾಗೆ ನೀವು ಜನರ ಮುಂದೆ ತನ್ನ ಮುಖವನ್ನು ತಿರುಗಿಸಿ  ಊದಿಸಿ ಕೊಳ್ಳಬೇಡಿ ಮುಖದಲ್ಲಿ ಅಹಂಕಾರ ಸಿಟ್ಟು ಒಳಿತಲ್ಲ  ಮುಖದಲ್ಲಿ ಮಂದಹಾಸ ಹಾಗೂ ಮುಗುಳ್ನಗೆ ಸುಂದರವಾಗಿರುತ್ತದೆ ಈ ಮುಖ ಮುಗುಳ್ನಗುವ ಗುಲಾಬಿಯಂತೆ ನೋಡಲು ಚಂದ ತನ್ನ ಗಾಂಭೀರ್ಯಕ್ಕೆ ದಕ್ಕೆ ತರಬೇಡಿ ಉಚ್ಚಾರಣೆ ಸುಂದರ ವಾಗಿರಿಸಿ ನಿಮ್ಮ ಮನೆಗೆ ಬರುವವರನ್ನು ಸ್ವಾಗತಿಸಿ ಜನರೊಂದಿಗಿರುವ
ನಿಮ್ಮ ಸಹವಾಸ ನಿಮ್ಮ ಮುಖದ ಸೌಂದರ್ಯ ದೊಂದಿಗೆ ಪ್ರಕಟಿಸಿ ಕೆಲವೊಮ್ಮೆ ಮನುಷ್ಯ ತನ್ನವರ ಮುಂದೆ ಸಂಪೂರ್ಣ ಅರ್ಪಿತನಾಗುವನು ಅನ್ಯರ ಮುಂದೆ ತಗ್ಗಿ ತಗ್ಗಿ ನಡೆದು ತನ್ನ ಆತ್ಮ ವಿಶ್ವಾಸಕ್ಕೆ ದಕ್ಕೆ ಬರಲಾರಂಭಿಸಿದರೆ ಅದೂ ಕೂಡ ಒಳಿತಲ್ಲ


ಕೆಲವರು ರಾಜರ ಮುಂದೆ ಮಾಲಿಕರ ಮುಂದೆ ಎಷ್ಟರ ಮಟ್ಟಿಗೆ ತಲೆ ಬಾಗಿಸುತ್ತಾರೆ ಅಂದರೆ ಅವರಿಂದ ಗುಲಾಮ ಗಿರಿಯ ಮನಸ್ಥಿತಿಯುಳ್ಳ ಆ ವರ್ತನೆ ಕಾಣುವಂತಹುದು ಅನ್ಯರನ್ನು ಸಂದರ್ಷಿಸುವ ಬರದಲ್ಲಿ ತನ್ನನ್ನು ತಾನು ಗುಲಾಮನಾಗಿಯೋ ತನ್ನನ್ನು ತಾನು ಮಾರಿಯೋ ತನ್ನ ಗೌರವಕ್ಕೆ ದಕ್ಕೆ ಉಂಟಾಗುವ ರೂಪದಲ್ಲಿ ತನ್ನನ್ನು ತಾನು ಕೀಳಾಗಿಸಬೇಡ  ಇದರಿಂದಲೂ ತಡೆ ಇದೆ ಅಹಂಕಾರ ಮತ್ತು ಗುಲಾಮತ್ವ ಎರಡರ ಮಧ್ಯೆ ಸಮತೋಲನದ ದಾರಿ ಉತ್ತಮ ವಾಗಿದೆ ಪರಮಾತ್ಮನು ಹೇಳುತ್ತಾನೆ 
ನಿನ್ನ ನಡತೆಯಲ್ಲಿ ವಿನಯವನ್ನು ಪಾಲಿಸು ಮತ್ತು ನಿನ್ನ ಧ್ವನಿಯನ್ನು ತಗ್ಗಿಸಿಡು ಖಂಡಿತವಾಗಿಯೂ ಧ್ವನಿಗಳಲ್ಲಿ ಕತ್ತೆಯ ಧ್ವನಿಯು ಅತ್ಯಂತ ಕೆಟ್ಟದಾಗಿರುತ್ತದೆ.

ಮನುಷ್ಯನಿಗೆ ಮಾತಿನಲ್ಲಿ ಗಾಂಭೀರ್ಯತೆ
ಸಹನೆ ಶಾಂತಿ ಉತ್ತಮ ಸ್ವಭಾವದ ನುಡಿಗಳನ್ನೇ ಆಡಬೇಕು ತನ್ನ ಪರಿಸರ ತನ್ನ ಮನೆತನ ತನ್ನಿಂದ  ಸಂಬಂದಪಟ್ಟ ವರ ಮನಸ್ಸಿನಲ್ಲಿ  ಸಹೋದರತ್ವದ ಮುತ್ತುಗಳು ಉದುರಿಸುವ ನುಡಿಗಳಾಗ ಬೇಕು
ಪರಮಾತ್ಮನು  ಆಕಾಶ ಭೂಮಿಯಲ್ಲಿ  ಇರುವ ಎಲ್ಲವನ್ನೂ ಅಧೀನ ಗೊಳಿಸಿರುತ್ತಾನೆ ಅವನ ಅನುಗ್ರಹ ಗಳ ಲೆಕ್ಕ ಮನುಷ್ಯನಿಂದ ಅಸಾಧ್ಯ ಅದರ ಜ್ಞಾನ ಪಡೆದು ಮಾರ್ಗದರ್ಶನ ಪಡೆದು ತನ್ನ ಜೀವನದಲ್ಲಿ ಒಂದು ಸುಂದರ ವಾದ ಬಾಳು ತನ್ನದಾಗಿಸಿ ಕೊಳ್ಳಬೇಕಾಗಿದೆ ಪ್ರೀತಿ ಸ್ನೇಹ ಸಹಬಾಗಿತ್ವ.  ಇವೆಲ್ಲವೂ ಇಂದು ನಮ್ಮ ಮನೆ ಪರಿಸರ ದಿಂದ ಮಾಯ ವಾಗಿದೆ ಇಂದು ಉಪದೇಶ ದಿಂದ ಜನರ ಮನಸ್ಸಿನಲ್ಲಿ ಜಾಗ್ರತೆ ಮೂಡಿಸಲು ಪ್ರತಿಯೊಬ್ಬರೂ ಪ್ರಯತ್ನ ಪಡಬೇಕಾಗಿದೆ ಯಾಕೆಂದರೆ ಪ್ರಯತ್ನ ದಿಂದ ಬಾನೆತ್ತರದ ನಕಾರಾತ್ಮಕ ಚಿಂತನೆ ಯನ್ನು ಸಕಾರಾತ್ಮಕವಾಗಿರಿಸಿದ ಅನೇಕ ದ್ರಷ್ಯಗಳು ನಮ್ಮ ಮುಂದಿದೆ ಅವರೇ ಪರಮಾತ್ಮನ ಸತ್ಯ ದಾರಿಯಲ್ಲಿ ನಡೆಯುವ ವಿಜಯಿಗಳು.

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...