MUSTHAFA HASAN ALQADRI OFFICIAL : 05/22/20

Translate

Friday, May 22, 2020

Dowry-free marriages- ವರದಕ್ಷಿಣೆ

كَلَّا ۖ بَلْ لَا تُكْرِمُونَ الْيَتِيمَ

(ಹಾಗಲ್ಲ, ನಿಜವಾಗಿ ನೀವು ಅನಾಥನನ್ನು ಗೌರವಿಸುವುದಿಲ್ಲ.)
ಇಂದು ನಾಲ್ಕು ಹೆಣ್ಣು ಹೆತ್ತವರ     ತಂದೆ ತಾಯಿಯ ನಿದ್ರೆ ಮಾಯವಾಗಿದೆ ಒಳ್ಳೆಯ ಸಂಬಂಧಗಳನ್ನು ಕಂಡು ಹಿಡಿಯುವುದು  ಅಸಾಧ್ಯ  ವಾಗಿದೆ  ಗಂಡಿನ ಕಡೆಯವರ ಉದ್ದದ ವಿನಂತಿ ಗಳು ಆದರೆ ಮಾತಿನಲ್ಲಿ ಹೇಳದೆ ಇದ್ದರು ಸೂಚನೆ ಗಳಿಂದ ಪೂರ್ತಿಗೊಳಿಸುವ ಸಲಹೆ ಗಳನ್ನು  ನೀಡಿ ಪೀಡಿಸುವ ಸಂಪ್ರದಾಯಕ್ಕೆ ಕೊನೆ ಇಲ್ಲವೇ   ಹೆಣ್ಣು ಪತಿಯ ಮನೆಯಲ್ಲಿ ಸುಖವಾದ ಸಂಸಾರ ಮಾಡಲಾರಳು
ಸಮಾಜದಲ್ಲಿ ಅತೀ ಹೆಚ್ಚು ನೀಚನಾದವನು ಅಂದರೆ ಒಂದು ತಂದೆಯ ಮಗಳನ್ನು ವರದಕ್ಷಿಣೆ ಗಾಗಿ ಪೀಡಿಸುವವನು ಆಗಿದ್ದಾನೆ  ಇಸ್ಲಾಮಿಯ ಶರೀಅತ್ ನಲ್ಲಿ (ನಿಕಾಹ್)ಮದುವೆ ಯನ್ನು   ಸುಲಭ ವಾಗಿ ನಡೆಸಲು ಕಲ್ಪಿಸಲಾಗಿದೆ   ಸಾವಿರಾರು ಜನರನ್ನು ಒಟ್ಟು ಗೂಡಿಸಿ ಹೆಣ್ಣಿನ ಮನೆಗೆ ದಾವಿಸುವ  ಸಂಪ್ರದಾಯ ಅನಿಸ್ಲಾಮಿಕ ವಾಗಿದೆ ಪ್ರಾರ್ಥನಾ(ಮಸೀದಿ) ಕೇಂದ್ರ ಗಳಲ್ಲಿ ನಿಕಾಹ್ ಮಾಡಿಸಿದರೆ ನಮ್ಮ ಸಮಾಜ ಉತ್ತಮ ಸಮಾಜ ವಾಗುವುದರಲ್ಲಿ ಎರಡು ಮಾತಿಲ್ಲ ಇಂತಹಾ ನೀಚ ಕ್ರತ್ಯಗಳಿಂದ ಬಡವರಿಗೆ ತೊಂದರೆ ಯಾಗುವುದು ಶ್ರೀಮಂತರು ಕೂಡ ಸುಖವಾಗಿಲ್ಲ    ಇಂದು ಕೋಟಿಗಟ್ಟಲೆ ಹಣ ಮದುವೆಗೆ ಕರ್ಚುಮಾಡಲಾಗುತ್ತದೆ ಬಡ ಹೆಣ್ಣು ಸುಂದರಿಯೂ ಸುಶಿಲೆಯೂ ವಿಧ್ಯಾವಂತಳಾಗಿಯೂ ಮನೆಯ ನಾಲ್ಕು ಗೋಡೆಯ ಒಳಗೆ ಯಾಕಾಗಿ ಕೂತು ಬಿಟ್ಟಳು ಅಂದರೆ ಅವರಲ್ಲಿ ಗಂಡಿನ ಕಡೆಯವರಿಗೆ ನೀಡಲು ವರದಕ್ಷಿಣೆ ಯ ಕೊರತೆ ಇದೆ ಆದರೆ ಇಂದು ನಮ್ಮಲ್ಲಿ ಕೆಲವು ಸಂಘಟನೆಗಳು ಹುಟ್ಟಿ ಕೊಂಡವು ಇದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯ ಸಮಾಜ ವಾಗಿ ಮುಂದುವರಿಯುತ್ತಿದೆ ಮನುಷ್ಯನ ಜೀವನ ದಲ್ಲಿ ಮೂರು ಸಮಯ  ಅತೀ ಮುಖ್ಯ ವಾಗಿ  ಬರುತ್ತದೆ    ಒಂದು ಅವನು ಇನ್ನೊಬ್ಬರ  ಪ್ರತ್ಯೇಕ ವಾದ ಅತಿಥಿ ಯಾಗುವುದು ಎಲ್ಲರ ಗಮನ  ಅವನ ಕಡೆ ಯಾಗಿರುತ್ತದೆ ಇನ್ನೊಂದು ಅವನ ಜನನ ಸಮಯ ಅವನ ಸೌಂದರ್ಯ ಹೇಗಿದ್ದರೂ ಊರಿನವರೆಲ್ಲ ನೋಡಲು ಬಂದೇ ಬರುತ್ತಾರೆ ಆ ಜನಿಸಿದ ಮಗು ಕಪ್ಪಾಗಿದ್ದರೂ ಜನರು ಚಂದ್ರನ ತುಂಡು ಎಂದು ಕರೆಯುತ್ತಾರೆ ಮೂರನೆಯ  ಸಮಯ ಅಂದರೆ ಅವನು ಮದುವೆಯ ದಿವಸ  ಮದುಮಗನಾಗುವ ಸಮಯ ಆ ದಿವಸ ಎಲ್ಲರೂ ಅವನನ್ನೇ ನೋಡುವುದು ಅವನು  ಪ್ರತ್ಯೇಕ  ಅತಿಥಿ ಆಗಿರುತ್ತಾನೆ  ಅಂದರೆ ಅವನು ಸುಂದರ ವಾದ ಬೆಲೆ ಬಾಳುವ ವಸ್ತ್ರ ದರಿಸುವನು ಜನರು ಅವನ ಕಡೆ ಗಮನ ಬೀರುವರು ಆದರೆ    ಬಡವರಿಂದ ಅವರ ಈ ಹಕ್ಕನ್ನು ಕೂಡ ನೀನು ಕಬಳಿಸಿ ಕೊಂಡೆ ಮನುಜ  ಇಂದು ಬಡವರನ್ನು ಜನರ ಮುಂದೆ ತಂದು ಅವರನ್ನು ಅವಹೇಳನ ಮಾಡುವುದಕ್ಕಿಂತ ರಾತ್ರಿಯ ಕತ್ತಲೆಯಲ್ಲಿ ಬಡವರಿಗೆ ಏನಾದರೂ ನೀಡುತ್ತಿದ್ದರೆ  ಆಕಾಶ ದಲ್ಲಿ ರುವ ಅಲ್ಲಾಹು ನಿನ್ನಿಂದ ತ್ರಪ್ತಿ ಪಡುತ್ತಿದ್ದನು  ಆದರೆ   ಇಂದು ಬಡವರು ಕ್ಯಾಮೆರ ಗಳ ಮುಂದೆ ನಿಂತು ಸಹಾಯ ಪಡೆಯುವ ದ್ರಷ್ಯಗಳು ನಾವು ಕಾಣುತ್ತಿರಲಿಲ್ಲ ಇಲ್ಲಿ ಯಾರು ಏನೇ ನೀಡಿದರೂ  ಅವನ ಹೆಸರಿಗಾಗಿ ಅಥವಾ ಜನರ ಮುಂದೆ ಹೆಸರು ಗಿಟ್ಟಿಸುವ ಬರದದಲ್ಲಿ ಬಡವನ ಮಾನ ಹರಾಜು  ಆಗುತ್ತಲೇ  ಇದೆ ಪ್ರವಾದಿ  صلي الله عليه وسلم    ಯವರು ತಿಳಿಸುತ್ತಾರೆ ನೀನು ಬಡವರಿಗೆ  ಬಲ ಕೈಯಿಂದ   ನೀಡಿದ ಹಣ 
ಎಡ ಕೈ ಗೆ ತಿಳಿಯಕೂಡದು ಎಂದು ಆ ಮಾತಿಗೆ ಬೆಲೆ ಎಷ್ಟು ಜನರು ನೀಡುತ್ತಿದ್ದಾರೆ ಒಮ್ಮೆ ಮನಸ್ಸು ಮುಟ್ಟೆ ಕೇಳಿ  ಇಂದು ಬಡವರ  ಹೆಣ್ಣು  ಪ್ರದರ್ಶನದ ವಸ್ತು ಆಗಿ ಮಾರ್ಪಟ್ಟಿದ್ದಾಳೆ  ಪ್ರದರ್ಶನ ಮಾಡಿ ಬಡವರ ಅವಹೇಳನ ಮಾಡುವ ಪದ್ಧತಿ ಪ್ರತಿಯೊಬ್ಬರೂ ನಿಷೇಧಿಸ ಬೇಕು 
كَلَّا ۖ بَل لَّا تُكْرِمُونَ الْيَتِيمَ
ಧಾನ ನೀಡಿ ಅಲ್ಲಾಹನ ಸಂತ್ರಪ್ತಿಗಾಗಿ ಪ್ರಚಾರಕ್ಕಾಗಿ ಅಲ್ಲ 
ವರದಕ್ಷಿಣೆ ನಿಲ್ಲಿಸಿ ಬಡವರನ್ನು ಗೌರವಿಸಿ
S..MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...