MUSTHAFA HASAN ALQADRI OFFICIAL : 05/05/20

Translate

Tuesday, May 5, 2020

The Stylish Man

 ಇವತ್ತು ನಾನು ನಿಮ್ಮಲ್ಲಿ ಪ್ರೀತಿಯ ಮಾತನಾಡಲು ಬಯಸುವೆನು .ಹೌದು ಇವತ್ತು ನಾನು  ಪ್ರೀತಿ ಪ್ರೇಮ ಕರುಣಿಯ ತ್ರಪ್ತಿಯ ಗೌರವದ ಸೌಹಾರ್ದತೆಯ ಮನಸ್ಸಿನ ಮಾತನಾಡಲು ಬಯಸುವೆನು  ತಾಯಿ ಸಹೋದರಿ ಪತ್ನಿ ಮಗಳ ಮಾತನಾಡಲು ಬಯಸುವೆನು ಅವರ  ಹಕ್ಕು ಬಾಧ್ಯತೆಗಳ ಬಗ್ಗೆ ಮಾತನಾಡುವೆನು ಜೀವನದ ಕಷ್ಟ ಸುಖಗಳಲ್ಲಿ ನಮ್ಮ ಜೀವನದಲ್ಲಿ ಸಂಭವಿಸುವ ತಪ್ಪು ಗಳ ಬಗ್ಗೆ ಮಾತನಾಡುವೆನು .ಇಂದು ಲಾಕ್ ಡೌನ್ ನಿಂದ ಸಂಭವಿಸುವುದು ಮಾನಸಿಕ ವಾಗಿ ಮನುಷ್ಯನು ಹದೆಗೆಟ್ಪಿದ್ದಾನೆ ಮಾನಸಿಕವಾಗಿ ಕೌಟುಂಬಿಕ ಹಿಂಸೆ ದಿನದಿಂದ ದಿನ ಅಧಿಕ ವಾಗುತ್ತಿದ್ದವು ಮಾನಸಿಕ ಒತ್ತಡ ದ ಗುರಿಯಾಗುತ್ತಿದ್ದಾನೆ ಇಂದು ನಮ್ಮ ಮುಂದೆ ಕಾಣಸಿಗುವಂತಹದು ತಾಯಿ ಮಗಳು ತಂಗಿ  ಸಹೋದರಿಯೊಂದಿಗೆ ಹಿಂಸೆ ಜಾಸ್ತಿ ಆಗುತ್ತಿದ್ದು ಮತ್ತೊಂದೆಡೆ ಹಲವು ಮಹಿಳೆಯರು ಮಾತಿನ ಚಕಮಕಿಗೆ ಗುರಿಯಾಗಿದ್ದಾರೆ ಇಂದು ಲೋಕದಲ್ಲಿ ರಂಝಾನ್ ಪವಿತ್ರ ಮಾಸ ನಮ್ಮಲ್ಲಿ ಇದ್ದರೂ ಒಂದು ವಿಭಿನ್ನ ವಾದ ವಾತಾವರಣ ನಮ್ಮಲ್ಲಿ ಅನೇಕರ ಮನೆಗಳಲ್ಲಿ ಸಂಬವಿಸುತ್ತಾ ಇದೆ ಇಂತಹಾ  ಹಲವಾರೂ ದೂರುಗಳು ನಮ್ಮ ಮುಂದೆ ಇವೆ ನಿಮಗೆಲ್ಲ ರಿಗೂ ಗೊತ್ತಿರುವ ವಿಷಯ ಇದರ ಮೂಲ ಪ್ರಶ್ನೆಗಳು 
ಏನಿದ್ದರೂ ಪತಿ ಪತ್ನಿಯರ ಹಕ್ಕು ಬಾದ್ಯತೆ ಗಳನ್ನು ಕಡೆಗಣಿಸುವುದು ಬಲು ದೊಡ್ಡ ತಪ್ಪು ಎನ್ನಬಹುದು ಕೌಟುಂಬಿಕ ಹಿಂಸೆ ಅಥವಾ ದಾರ್ಮಿಕವಾಗಿ ಹಿಂದುಳಿಯಲು ಅಥವಾ ಸರಿಯಾದ ಪಾಲನೆ  ಹೇಳಿದರೂ ಒಂದು ವೇಳೆ ತಪ್ಪಾಗಲಾರವು ಅಥವಾ ಇಸ್ಲಾಮ್ ಒಂದು ಹೆಣ್ಣಿಗೆ ಕೊಟ್ಟ ಹಕ್ಕುಗಳ ಅರಿವಿನ  ಆಜ್ನಾನವು ಒಂದು ಬಲು ದೊಡ್ಡ ಕಾರಣ ವಾಗಿದೆ ಇಂದು ಅಥವಾ ಸಾಧಾರಣ ದಿನಗಳಲ್ಲಿ ಮಹಿಳೆಯರಿಗೆ ಕೊಡುವ ಹಿಂಸೆಗಳು ಪ್ರಚಾರ ಪಟ್ಟಿದೆ ಒಂದು ಚಿಕ್ಕ ಸೈತಾನನ ಕತೆ ಹೇಳುವೆನು  ಒಮ್ಮೆ ಸೈತಾನ ಗಲ್ಲಿಗೇರಿಸುವ ಬಳ್ಳಿಯನ್ನು ತಯಾರಿಸುತಿದ್ದನು ಕೆಲವು ದಪ್ಪ ಹಾಗೂ ಸಪೂರ ವಾಗಿದ್ದವು ಒಂದು ದಿವಸ ದರ್ಮ ಗುರುವಿನ ಆಗಮನ ವಾಯಿತು ಸೈತಾನ ನನ್ನು ನೋಡಿ ಹೇಳಿದರು  ಏ ಶತ್ರು ನೀನೇನು ಮಾಡುತ್ತಿದ್ದಿಯಾ ಸೈತಾನನು ಗುರುಗಳನ್ನು ನೋಡುತ್ತಾ ಹೇಳುತ್ತಾನೆ ನೋಡುವುದಿಲ್ಲವೇ ನಾನೇನು ಮಾಡುತ್ತಿದ್ದೇನೆಂದು ನಾನು ಮನುಷ್ಯರನ್ನು ಗಲ್ಲಿಗೇರಿಸಲು ಹಗ್ಗಗಳನ್ನು ತಯಾರಿಸುತ್ತಿದ್ದೇನೆ ಗುರುಗಳು ಕೇಳಿದರು ಆದರೆ ಇದರಲ್ಲಿ ಬೇರೆ ಬೇರೆ ರೀತಿಯ ಹಗ್ಗ ಏಕೆ ಆವಾಗ ಸೈತಾನನು  ಉತ್ತರಿಸುತ್ತಾ  ಹೇಳಿದನು ಇದು ಸೈತಾನನ ಕುತಂತ್ರಕ್ಕೆ ಬೀಳದೇ ಪಾರಾಗುವ ಜನರಿಗಾಗಿದೆ ಆವಾಗ ಗುರುಗಳು ಯೋಚಿಸುತ್ತಾ ಕೇಳಿದರು ನನಗೂ ಏನಾದರು ಗಲ್ಲು ರೆಡಿಯಾಗಿದೆಯೇ ಸೈತಾನನು ಗುರುಗಳನ್ನು ನೋಡಿ ಮಗುಳ್ನಕ್ಕನು ಹೇಳಿದನು  ನಿಮಗೆ ಗಲ್ಲಿನ ಅವಶ್ಯಕತೆ ಇಲ್ಲ ನಿಮ್ಮಂತಹ ಜ್ನಾನಿಗಳನ್ನು ನಿಮಿಷದಲ್ಲಿ ನನ್ನ ವಶಕ್ಕೆ ಪಡೆದುಕೊಳ್ಳುವೆನು ಗುರುಗಳು ಕೇಳಿದರು ಅದು ಹೇಗೆ ಆವಾಗ ಸೈತಾನ ಉತ್ತರಿಸಿದನು ನಿಮ್ಮಂತಹ ವರಿಗೆ ಜ್ನಾನದ ಅಹಂಕಾರವೇ ಸಾಕು ಅಂದರೇ ಜ್ನಾನ ಕಲಿತ ಗುರುಗಳನ್ನು ವಶಕ್ಕೆ ಪಡೆದು ಕೊಳ್ಳಲು ಅಸಾಧ್ಯ ವೇನಲ್ಲ
ಮತ್ತೆ ಗುರುಗಳು ಕೇಳಿದರು ಈ ದಪ್ಪ ದಪ್ಪದ ಗಲ್ಲು ಯಾರಿಗಾಗಿ?ಸೈತಾನನು ಹೇಳಿದ ದಪ್ಪದ ಗಲ್ಲು ಒಳ್ಳೆಯ ಸ್ವಬಾವಿಗಳಿಗೆ ಸಜ್ಜನರಿಗೆ 
ಅವರನ್ನು ವಶೀಕರಣ ಮಾಡಲು ಅಸಾಧ್ಯ ಇದೊಂದು ಕಾಲ್ಪನಿಕ ಕಥೆಯಾಗಿದೆ. ಸಹೋದರರೆ ನಮ್ಮಲ್ಲಿ ಹಲವು ಜ್ನಾನಿ ಅಥವಾ ಅಜ್ನಾನಿ ಆಗಿರಲಿ ಸಮಾಜದ ಮುಂದೆ ಒಳ್ಳೆಯ ಸ್ವಭಾವದ ವ್ಯಕ್ತಿಯಾಗಿದ್ದಾರೆ ಗುರುತಿಸಲ್ಪಡುತ್ತಾರೆ  ಆದರೆ ಸತ್ಯ ಏನೆಂದರೆ ಅವರ ಸ್ವಭಾವ ತನ್ನ ಮನೆಯಲ್ಲಿ ಹೆಂಡತಿ ಮಕ್ಕಳೊಡನೆ ಭಯಂಕರ ಚಿಂತಾ ಜನಕ ವಾಗಿರುತ್ತದೆ ಅದಕ್ಕಾಗಿಯೇ ಮನೆಯಲ್ಲಿ ಒಳ್ಳೆಯ ಸ್ವಭಾವದ ವ್ಯಕ್ತಿ ಸಮಾಜದಲ್ಲೂ  ಉತ್ತರವಾಗಿ ಗುರುತಿಸಲ್ಪಡುವನು  ಆದರೆ ನಿಮ್ಮಲ್ಲಿ ಪ್ರತಿಯೊಬ್ಬರೂ ತನ್ನನ್ನು ತಾನು ನೋಡಿ ನಾವೆಲ್ಲಿದ್ದೇವೆ ನಿಮ್ಮ ಮನೆಯಲ್ಲಿ ಹಾಗೂ ಹೊರಗೆ ನೀವು ಎಷ್ಟು ಒಳ್ಳೆಯ ಸ್ವಬಾವದವರು ಆದರೆ ಸೂಟು ಬೂಟಿನಲ್ಲಿ ಇದ್ದ ವ್ಯಕ್ತಿ ಎಷ್ಟು ಬಿದ್ದವನು ಆದರೆ ಸಮಾಜದಲ್ಲಿ ಎಲ್ಲರೂ ನನ್ನನ್ನು ಹೊಗಳಬೇಕು ಎಂಬ ಬಯಕೆ ಆದರೆ ಕೌಟುಂಬಿಕ ವಾಗಿ ಏನು?  ಅವನ ಲೋಕ ನಷ್ಟ ಹೊಂದಿದೆ ನಿಮಗೆ ಗೊತ್ತಿದೆಯೇ ಮಹಿಳೆ ಈ ಲೋಕದಲ್ಲಿ ಮೊಟ್ಟ ಮೊದಲಿಗೆ ಯಾವ ರೂಪದಲ್ಲಿ ಬಂದಳು ಒಂದು ತಾಯಿಯೋ ತಂಗಿಯೋ ಮಗಳೋ ಅಲ್ಲ ಮೊಟ್ಟ ಮೊದಲು ಪತ್ನಿಯಾಗಿ ರೂಪ ತಾಳಿದಳು ಪರಮಾತ್ಮನು  ಮಹಿಳೆ ಯನ್ನು ಶ್ರಷ್ಟಿಸುವ ಮುಂಚೆಯೇ ಮಹಿಳೆಯ ಹ್ರದಯದಲ್ಲಿ ಪ್ರೀತಿಯ ಗುಣಗಳನ್ನು ಸ್ರಷ್ಟಿಸಿದನು ಅವಳ ಕಡೆಗೆ ಚಾಯಲು ಮನುಷ್ಯ ಅಸಹನೆ ಯಾಗುತ್ತಾನೆ ಆದ್ದರಿಂದ ಮಹಿಳೆ ಯನ್ನು ಗೌರವಿಸಿ ಯಾವ ರೂಪದಲ್ಲಾದರೂ ಸರಿ!

What is the real love

ಒಮ್ಮೆ  ಒಬ್ಬ ಪುರುಷ ತನ್ನ ಪತ್ನಿಯ ಜೊತೆ   ಅಲಿ ರಲಿಯಲ್ಲಾಹು ಅನ್ನು ರವರ ಸನ್ನಿದಿಯಲ್ಲಿ ಹಾಜರಾದರು! ಓ ಅಲಿ ಅವರೇ ಇವಳು ನನ್ನ ಪತ್ನಿ ನಾನು ಇವಳನ್ನು ತುಂಬಾ ಪ್ರಿತಿಸುತ್ತೇನೆ ಆದರೆ ಅವಳು ನನ್ನನ್ನು ಆನುಸರಿಸುವುದಿಲ್ಲ  ನನ್ನ  ಮಾತು ಕೇಳುವುದಿಲ್ಲ  ಎಂದು ಹೇಳೀದಾಗ .ಈ ಮಾತನ್ನು ಕೇಳುತ್ತಲೇ ಅಲಿ ಯವರು ಹೇಳಿದರು ಓ ಮನುಷ್ಯ ಹೇಗೇ ಹೇಳುತ್ತಿಯ ನೀನು ಅವಳನ್ನು ಪ್ರೀತಿಸುತ್ತೀಯ! ಎಂದು ಕೇಳಿದಾಗ ಆ ಮನುಷ್ಯ ಉತ್ತರ ನೀಡುತ್ತಾನೆ ಓ ಅಲಿಯವರೆ ನಾನು ಅವಳನ್ನು ಪ್ರೀತಿಸುತ್ತೇನೆ ಅದರ ಸಾಕ್ಷಿ ನಾನಾಗಿದ್ದೇನೆ ಆವಾಗ ಅಲಿ ಯವರು ಹೇಳಿದರು. ಪ್ರೀತಿ ಮತ್ತು ಇಷ್ಟ ದಲ್ಲಿ ವ್ಯತ್ಯಾಸ ಇದೆ ಒಬ್ಬ ಮನುಷ್ಯ ತನ್ನನ್ನು ತಾನು ಪ್ರೀತಿಸಿದರೆ ಅವನು ವಸ್ತು ಗಳನ್ನು ಇಷ್ಟ ಪಡುತ್ತಾನೆ ಮತ್ತು ಇಷ್ಟ ಪಟ್ಟ ನಂತರ ಅವನು ನಾನು ಇಷ್ಟ ಪಟ್ಟ ದೆಲ್ಲವೂ ನನ್ನ ಆಜ್ಞೆ ಪಾಲಿಸಬೇಕು .ನನ್ನ ಮಾತು ಕೇಳಬೇಕು ಎಂದು ಬಾವಿಸುವುದು ಸಹಜ   ಆದರೆ ಎಲ್ಲಿ ಪ್ರೀತಿ ಪ್ರೇಮ  ಇರುತ್ತದೆ ಅಲ್ಲಿ ಮನುಷ್ಯ ತನ್ನ ಇಚ್ಛೆಗೆ ನಾಂದಿ ಹೇಳುತ್ತಾನೆ ತನ್ನನ್ನು ತಾನು ವಿಭಿನ್ನ ವಾಗಿ ನೋಡುತ್ತಾನೆ.ಓ ಮನುಷ್ಯ ನೆನಪಿಡು ಪ್ರೀತಿ ಪ್ರೇಮದ ಶ್ರೇಷ್ಠ ವಾದ ಪುರಾವೆ  ಅದು  ಸಾಷ್ಟಾಂಗ ವಾಗಿದೆ ತಾನು ಬಾಗಲು  ತಗ್ಗಿ  ಬಗ್ಗಿ ನಡೆಯಲು ಪ್ರೀತಿ  ಅಂತಾರೆ   ಪ್ರೀತಿಯ ಮುಂದೆ ತನ್ನನ್ನು     ತಾನು ಸಂಪೂರ್ಣವಾಗಿ ಅರ್ಪಿಸಿ   ತನ್ನ ಪ್ರಿಯತಮೆಯ ತ್ರಪ್ತಿಯನ್ನು ಪಡೆಯಲು ಪ್ರೀತಿ ಅಂತಾರೆ ತನ್ನ ಇಚ್ಚೆಯನ್ನು ತ್ಯಾಗಮಾಡಿ ಅವಳ  ಸಂತೋಷ ದಲ್ಲಿ ಪಾಲ್ಗೊಳ್ಳಲು  ಪ್ರೀತಿ ಅಂತಾರೆ!  ಶೈತಾನ್ ಪರಮಾತ್ಮನನ್ನು ಇಷ್ಟ ಪಡುತ್ತಿದ್ದನು ಆದರೆ ಪ್ರೀತಿಸುತ್ತಿರಲಿಲ್ಲ ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಷ್ರಶ್ನೆಗಳಿಗೆ ಆವಕಾಶ ವಿಲ್ಲ ದೂರು ಗಳಿಗೆ ಅವಕಾಶ ವಿಲ್ಲ ಪರಮಾತ್ಮನು ಶೈತಾನನಿಗೆ ಕಲ್ಪಿಸಿದನು  ಆದಿ ಮಾನವ ಆದಮ್ ನಿಗೆ ಸಾಷ್ಟಾಂಗ ಮಾಡಲು ಎಲ್ಲಾ ದೇವ ದೂತರಿಗೆ ಪರಮಾತ್ಮನಲ್ಲಿ ಪ್ರೀತಿ ಇತ್ತು ಎಲ್ಲರೂ ಪರಮಾತ್ಮನ ಆಜ್ಞೆ ಯನ್ನು ಪಾಲಿಸಿದರು ಆದರೆ ಶೈತಾನ್ ಮಾತ್ರ ಪ್ರಶ್ನೆ ಕೇಳಿ ಬಿಟ್ಟ ಅಲ್ಲಿಂದಲೇ ಪ್ರೀತಿ  ಹಾಗೂ ಇಷ್ಟ ದ ವ್ಯತ್ಯಾಸ ಕಚಿತವಾಗಿದ್ದು

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...