MUSTHAFA HASAN ALQADRI OFFICIAL : 06/21/20

Translate

Sunday, June 21, 2020

ನಾವು ತುಂಡು ತುಂಡು ಗಳಾಗಿ ಮುರಿದು ಹೋದೆವು -We broke up into pieces

ನಮ್ಮ ಜೀವನದ ಅತ್ಯಂತ ದೊಡ್ಡ ತಪ್ಪು ನಾವು ತುಂಡು  ತುಂಡು ಗಳಾಗಿ ಮುರಿದು ಹೋದೆವು ಅದರ ಪರಿಣಾಮ ಎಲ್ಲಾ ಉಮ್ಮತ್ತಿಗಳು ಗಾಯ ಗಳಾದರು ನಾವು  ಅಲ್ಲಾಹನ ಬಳ್ಳಿ ಯನ್ನು ಬಿಟ್ಟು ಬಿಟ್ಟರೆ ನಮ್ಮ ಗಾಳಿ ಹೊರ ಹೋಗುವುದು ಎಂದು ಪವಿತ್ರ ಗ್ರಂಥ ನಮಗೆ ಕಲಿಸುತ್ತದೆ ನಾವು ಪ್ರವಾದಿ ಯವರ ಹಿಡಿತವನ್ನು ಬಿಟ್ಟು ಬಿಟ್ಟೆವು ನಾವು ಗುಂಪು ವಿತರಣೆ ಯಲ್ಲಿ ವಿಶ್ವಾಸ ವಿಡುವವರಾದೆವು  ವಿಶಾಲವಾದ ಮಸೀದಿಯನ್ನು ನಿರ್ಮಿಸಿದೆವು ನಾವು ಛಿದ್ರ ಛಿದ್ರ ಆಗುತ್ತಾ ಹೋದೆವು ನಾವು ಉಮ್ಮತ್ತಿನಿಂದ ವಿಭಜನೆಯಾಗಿ ಗುಂಪುಗಳಾಗಿ ತದನಂತರ ಸಾಲು ಸಾಲಾಗಿ ಬೀಕರತೆಯ ದಾರಿಯಲ್ಲಿ ನಾವು ತುಂಡು ತುಂಡು ಗಳಾದೆವು

وَكَذَٰلِكَ جَعَلْنَاكُمْ أُمَّةً  

ನಿಮ್ಮನ್ನು ನಾವು ಒಂದು ಸಮುದಾಯವಾಗಿಸಿದ್ದೇವೆ. 
ನೀವು ಒಬ್ಬರಿಗೊಬ್ಬರು ಛಿದ್ರ ವಾಗಿ ವಿಭಜನೆ ಯಾದಿರಿ ಒಬ್ಬರಿಗೊಬ್ಬರು ಅವಹೇಳನ ಮಾಡಿದಿರಿ ನೀವು ಒಬ್ಬರಿಗೊಬ್ಬರು ಇನ್ನೊಬ್ಬರ ಬಟ್ಟೆ ಎಳೆದಿರಿ ನೀವು ಪರಸ್ಪರ ದ್ವೇಷಗಳ ಬೀಜ ಬಿತ್ತಿಸಿದಿರಿ ನಿಮ್ಮ ನಾಲಿಗೆ ಯಲ್ಲಿ ಬೆಂಕಿ ದಹನ ವಾದವು ನೀವು ಮಿಂಬರ್ ಹಾಗೂ ಮೆಹರಾಬಿನ ಗೌರವವನ್ನು ಚದುರಿಸಲು ಪ್ರಾರಂಭಿಸಿದಿರಿ ನೀವು ಆಸೆಗಳ ಗುಲಾಮ ಅದಿರಿ ಆಸೆಯ ಸೇವಕರಾದಿರಿ ನೀವು ನಿಮ್ಮ ಆತ್ಮದ ಗುಲಾಮ ರಾದಿರಿ ನೀವು ಲೋಕ ನಾಯಕರಾದ ಮುಹಮ್ಮದ್ ಮುಸ್ತಫ
صلي الله عليه وسلم 
ರವರ ಗುಲಾಮತ್ವವನ್ನು ಸ್ವೀಕರಿಸಿದವರು ಏನಾಯಿತು ನಮಗೆ ನಾವು ಆತ್ಮದ ಗುಲಾಮರಾಗದೆ ಪ್ರವಾದಿಯ ಉತ್ತಮ ಉಮ್ಮತ್ ಆಗಬೇಕಾಗಿದೆ ನಮ್ಮ ಮಾತಾಡುವ ಶೈಲಿ ತೋರಿಸಬೇಕು ನಾವು ಪ್ರವಾದಿ ಯವರ ಉಮ್ಮತ್ ಎಂದು ನಮ್ಮ ಜೀವನದ ಶೈಲಿ ತೋರಿಸಿ ನಾವು ಪ್ರವಾದಿ ಯವರ ಉಮ್ಮತ್ ಎಂದು ನಾವು ತಕಡಿಯಲ್ಲಿ ತೂಕ ಮಾಡುವಾಗ ಜನರು ಬೇರೆ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಾರೆ ಕಾರಣ ನಾವು  ಪ್ರವಾದಿ ಯವರ ಉಮ್ಮತ್ ಆಗಿದ್ದೇವೆ  ಎಂಬ ದ್ರಡ ವಿಶ್ವಾಸ. ನಮ್ಮ ಏಕತೆ ನಮ್ಮ ಭಲ ವಾಗಿದೆ ಇವತ್ತು ಪ್ರವಾದಿ ಯವರ ಮನಸ್ಸಿಗೆ ಏನು ಸಂಭವಿಸ ಬಹುದು ಶಾಮ್ ಸಿರಿಯಾ ಅಥವಾ ಇರಾಕಿನ ಫೆಲಸ್ತೀನ್ ನ ಮಕ್ಕಳ ಮುಖಕ್ಕೆ ಉಗಿಯುವಾಗ ಲೋಕದ ನಾನಾ ಕಡೆಗಳಲ್ಲಿ ಮುಸಲ್ಮಾನರ ಮಾರಣ ಹೋಮ ನಡೆಯುತ್ತದೆ ಗ್ರಾಮ ಗ್ರಾಮ ರಕ್ತದಲ್ಲಿ ಮುಳುಗಿದಾಗ ನಾವು ಇನ್ನೂ ಗಾಢವಾದ ನಿದ್ರೆ ಯಲ್ಲಿ ಮಗ್ನರಾಗಿದ್ದೇವೆ ಯಾವ ಯಾವ ಉಮ್ಮತಿಯ ದುಖ ವಿವರಿಸಲಿ ಎಲ್ಲಿ ನೋಡಿದರೂ ಮುಸಲ್ಮಾನ ಕೈಗೊಂಬೆಯಂತೆ ಆಟ ಆಡುತ್ತಾ ಹೋಗುತ್ತಿದ್ದಾನೆ ಇಂದು ಮುಸಲ್ಮಾನ ರಕ್ತ ರಕ್ತ ವಾಗಿದ್ದಾನೆ ಈ ಬ್ರಹ್ಮಾಂಡದಲ್ಲಿ ಅಕ್ರಮದ ಜ್ವಾಲೆ ಇಳಿಯದ ಒಂದಿಂಚು ಸ್ಥಳ ಸಿಗಲಾರವು ಎಲ್ಲಿ ರಕ್ತ ಚೆಮ್ಮುತ್ತದೆ ಅದು ಮುಸಲ್ಮಾನರ ಗ್ರಾಮ ವಾಗಿದೆ ಎಲ್ಲಿ ಶವ ಬೀಳುತ್ತದೆ ಆ ಮನೆ ಮುಸಲ್ಮಾರದ್ದಾಗಿರುತ್ತದೆ ಬಾಗ್ಯ ಚಧರಿದವು ನಮ್ಮ ಪಾಪದ ಶಿಕ್ಷೆ ಯಾಗಿದೆ ನಾವು ಸ್ವೀಕರಿಸಲು 
ಬಲವಂತವಾಗಿದ್ದೇವೆ ಎಲ್ಲಿಯವರೆಗೆ ನಾವು ಉಮ್ಮತಿಗಳಾಗಿ ಇರುವುದಿಲ್ಲವೋ ನಾಚಿಕೆ ನಮ್ಮ ಹಣೆಬರಹವಾಗಿರುತ್ತದೆ ಪ್ರವಾದಿ ಯವರನ್ನು ಬಿಗಿಯಾಗಿ ಹಿಡಿದು ಉಮ್ಮತಿಗಳ ಏಕತೆಯ ಕಲ್ಪನೆಗಳನ್ನು ಹೈಲೈಟ್ ಮಾಡಿ  ಪ್ರವಾದಿ ಯವರ ಶುದ್ದತೆಯ ಅಸ್ತಿತ್ವ ವನ್ನು ದ್ರಡಪಡಿಸಿ ಮುನ್ನುಗ್ಗಿ ಒಂದಾಗಿ ಬಾಳದಿದ್ದರೆ ನಾವು ಯಾವಾಗಲೂ ವಿಜಯಿಗಳಾಗಲು ಸಾಧ್ಯವಿಲ್ಲ ಸಾವಿರಾರು ಫಿಲಾಸಪಿ ಗಳನ್ನು ಕೆತ್ತಿದರೂ ಯಾವ ಫಲಿತಾಂಶವೂ ಸಿಗಲಾರವು ಯಾವಾಗ ಪ್ರವಾದಿಯ ಶುದ್ಧೀಕರಿಸಿದ ಹ್ರದಯದಲ್ಲಿ ಶಾಂತಿ ಸಿಗುವುದೋ ಆವಾಗಲೇ ಫಲಿತಾಂಶ ಸಿಗುವುದು ನಾವು ಉಮ್ಮತಿಗಳಾಗಿ ಪ್ರವಾದಿ ಅವರೊಂದಿಗೆ ಆತ್ಮೀಯತೆ ಜೀವನದ ಘೋಷಣೆ   ಮಾಡುತ್ತೇವೆ ಆವಾಗ ಜೀವನದಲ್ಲಿ ಪ್ರಕಾಶ ಹಾಗೂ ಉಮ್ಮತಿಗಳಾಗಿ ನಾವು ಜೀವಿಸಬಹುದು. 
وَأَنْتُمُ الْأَعْلَوْنَ إِنْ كُنْتُمْ مُؤْمِنِينَ
ISLAMIC INFO

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...