MUSTHAFA HASAN ALQADRI OFFICIAL : 05/01/21

Translate

Saturday, May 1, 2021

ಶೋಷಣೆಗಳಿಂದ ಮುಕ್ತಿ ಹೇಗೆ ?.*

 *ಶೋಷಣೆಗಳಿಂದ ಮುಕ್ತಿ ಹೇಗೆ ?.*

 ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

*


***************"****

*ಭಾಗ 1*

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 

ವಸಲ್ಲಮರ ಕಾಲದಲ್ಲಿ 

ಒಂದು ದಿನ ಸೂರ್ಯ 

ಗ್ರಹಣ ಸಂಭವಿಸಿತ್ತು.

ಅದೇ ದಿನ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪುಟ್ಟ ಮಗು ಇಬ್ರಾಹೀಮ್ ಕೂಡಾ ವಫಾತಾಗಿದ್ದರು.

ಕೆಲವು ಮುಗ್ದ ಮನಸ್ಸುಗಳು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅತಿಯಾದ ಗೌರವದ ಕಾರಣದಿಂದ ಈ ಗೃಹಣ ಸಂಭವಿಸಿರುವುದು ಅವರ ಮಗು ವಫಾತಾಗಿರುವುದಕ್ಕೆ ಎಂದು ಭಾವಿಸಿ ಬಿಟ್ಟವು.


ಇದನ್ನರಿತ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಕ್ಷಣ ಈ ಭಾವನೆಯನ್ನು ತಿದ್ದಿ ನಿಜಾಂಶವನ್ನು ತಿಳಿಸಿ ಕೊಡುವ ಪ್ರಯತ್ನ ಮಾಡಿದರು.

ಗೃಹಣದ ನೈಜತೆ ಬಗ್ಗೆ ತನ್ನ ಸುದೀರ್ಘವಾದ ಉಪದೇಶದಲ್ಲಿ ಈ ರೀತಿ ಹೇಳಿದರು.


*إِنَّ الشَّمْسَ وَالْقَمَرَ آيَتَانِ مِنْ آيَاتِ اللهِ، لَا يَخْسِفَانِ لِمَوْتِ أَحَدٍ، وَلَا لِحَيَاتِهِ*


ನಿಶ್ಚಯವಾಗಿಯೂ ಸೂರ್ಯ ಚಂದ್ರ ರು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ ಎರಡು ದೃಷ್ಟಾಂತಗಳಾಗಿವೆ.

ಯಾವ ವ್ಯಕ್ತಿಯ ಮರಣ ಅಥವಾ ಜೀವನಕ್ಕೆ ಬೇಕಾಗಿ ಅವುಗಳಿಗೆ ಗೃಹಣ ವುಂಟಾಗುವುದಿಲ್ಲ ಎಂದು ಸವಿಸ್ತಾರವಾಗಿ ವಿವರಿಸಿ 

ಮುಗ್ಧ ಮನಸ್ಸುಗಳ ತಪ್ಪು ಭಾವನೆಗಳನ್ನು ತಿದ್ದುವ 

ಪ್ರಯತ್ನ ಮಾಡಿದರು.


ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅನೇಕ ವಿಚಾರಗಳಿವೆ.  


ಅದೇನೆಂದರೆ ತನ್ನ ಪ್ರವಾದಿತ್ವವನ್ನು ನಖಶಿಖಾಂತ ವಿರೋಧಿಸುವ ಒಂದು ದೊಡ್ಡ ಸಮೂಹದ ಮುಂದೆ ತಾನೊಬ್ಬ ಸಾಮಾನ್ಯನಲ್ಲ ಎಂದು 

ತೋರಿಸಿ ಕೊಡಬೇಕಾದ ಅನಿವಾರ್ಯತೆಯ ಈ ಕಠಿಣ ಸವಾಲಿನ ಸಮಯದಲ್ಲೂ ಈ ಸುಸಂದರ್ಭವನ್ನು ಬಳಸಿ ಕೊಳ್ಳಬಹುದಾದ ಎಲ್ಲಾ ಅವಕಾಶಗಳಿದ್ದರೂ 

ಕೂಡಾ ಪ್ರವಾದಿಯವರು ಅದನ್ನು ಬಳಸಿಕೊಳ್ಳದೇ ಅಲ್ಲಿ ನೈಜತೆಯನ್ನು ಮಾತ್ರ ಅನಾವರಣ ಮಾಡಿದರು.


ಮುಗ್ಧ ಜನರಲ್ಲಿ ತಪ್ಪು ಭಾವನೆಗಳನ್ನು ತುಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ದೊಡ್ಡ ಶೋಷಣೆಯಾಗಿದ್ದು ಇಂತಹ ಪ್ರಯತ್ನ ಯಾವತ್ತೂ ಯಾರಿಂದಲೂ ಸಲ್ಲದು ಎಂಬ ಉದಾತ್ತ ತತ್ವವನ್ನು ಸಾರಲಿಕ್ಕೆ ಮಾತ್ರವಾಗಿತ್ತು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇಲ್ಲಿ ಪ್ರಯತ್ನ ಪಟ್ಟಿರುವುದು.


ಆದರೆ ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ ಅವಕಾಶಗಳು,ಸಂದರ್ಭಗಳು ಸಿಗಬೇಕಾಗಿಲ್ಲ. 

ಇಲ್ಲಸಲ್ಲದ ಯೋಗ್ಯತೆಗಳ ಅಂತೆಕಂತೆಗಳನ್ನು ಸೃಷ್ಟಿಸಿ ಅದನ್ನು ವೈಭವೀಕರಿಸಿ ಜನರನ್ನು ಮೂಡ ನಂಬಿಕೆಗಳ ಗುಲಾಮರನ್ನಾಗಿ ಮಾಡಲು ಸಾಧ್ಯವಾದ ಎಲ್ಲಾ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿದೆ.


ಇದು ಇಂದು ಮನುಷ್ಯ ಜೀವನದ ಎಲ್ಲಾ ವಲಯಗಳಲ್ಲೂ ದಾರಾಳವಾಗಿ ಕಾಣಬಹುದು.

ಇದಕ್ಕೆಲ್ಲಾ ಕಡಿವಾಣ ಹಾಕದೇ ಹೋದಲ್ಲಿ ಇಸ್ಲಾಮಿನ ಪೂರ್ವ ಕಾಲದ ಎಲ್ಲಾ ಅನಾಚಾರಗಳು ಮತ್ತೆ ಮರಳುವುದರಲ್ಲಿ ಯಾವ ಅನುಮಾನವೂ ಇಲ್ಲ.

ಆದ್ದರಿಂದಲೇ ಶೋಷಣೆ ಬಗ್ಗೆ ಚರ್ಚಿಸುವಾಗ ಅದರ ಹತ್ತು ಹಲವು ಮುಖಗಳು ಕಣ್ಮುಂದೆ ಅನಾವರಣ ಗೊಳ್ಳುತ್ತದೆ.

ಆದ್ದರಿಂದ ಎಲ್ಲಿಂದ ಪ್ರಾರಂಭಿಸಬೇಕು ಎಂದು ಅರ್ಥವಾಗುವುದೇ ಇಲ್ಲ.

ಮುಗ್ಧ ಮನುಷ್ಯ ಮನಸ್ಸುಗಳ ನಿಸ್ವಾರ್ಥತೆಯನ್ನು ದುರುಪಯೋಗ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಅನೇಕರು ಅಂತ್ಯ ದಿನ ಹತ್ತಿರವಾಗುವಾಗ ಪ್ರತ್ಯಕ್ಷ ಗೊಳ್ಳಲಿದ್ದಾರೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮುನ್ನೆಚ್ಚರಿಕೆಯೂ ನೀಡಿರುತ್ತಾರೆ.

*يَكُونُ فِي آخِرِ الزَّمَانِ دَجَّالُونَ كَذَّابُونَ، يَأْتُونَكُمْ مِنَ الْأَحَادِيثِ بِمَا لَمْ تَسْمَعُوا أَنْتُمْ، وَلَا آبَاؤُكُمْ، فَإِيَّاكُمْ وَإِيَّاهُمْ، لَا يُضِلُّونَكُمْ، وَلَا يَفْتِنُونَكُمْ*

ಇಲ್ಲಿ ಈ ಹದೀಸಿನಲ್ಲಿ ಉಪಯೋಗಿಸಲ್ಪಟ್ಟ"ದಜ್ಜಾಲೂನ" ಎಂಬ ಪದ ಗಮನಾರ್ಹ.

ಯಾಕೆಂದರೆ ಅದರ ಅರ್ಥವೇ ಸತ್ಯ ಮತ್ತು ಮಿತ್ಯೆಗಳ ಬಗ್ಗೆ ಮುಗ್ಧ ಮನಸ್ಸುಗಳಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡುವವರು ಎಂದಾಗಿದೆ ಅರ್ಥ.

ಇನ್ನು ಶೋಷಣೆಯು ತೌಹೀದ್, ಧಾರ್ಮಿಕ ವಿದ್ಯೆ,ಧಾರ್ಮಿಕ ಮಜ್ಲಿಸ್,ಮಂತ್ರವಾದ, ವೈದ್ಯಕೀಯ ಚಿಕಿತ್ಸೆ,ಆರಾಧನಾ ಕಾರ್ಯಗಳು ಹೀಗೆ ವಿಭಿನ್ನ ಮುಖಗಳಿವೆ.


ಒಂದೊಂದೇ ಚರ್ಚಿಸುತ್ತಾ ಹೋಗುವ.

ಮೊದಲು ತೌಹೀದ್ ನಲ್ಲಿರುವ ಶೋಷಣೆ ತೆಗೆದು ಕೊಳ್ಳೋಣ.


*1)* 

*ತೌಹೀದ್ ನಲ್ಲಿರುವ ಶೋಷಣೆ*


*ಮುಂದುವರಿಯುವುದು*

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...