MUSTHAFA HASAN ALQADRI OFFICIAL : 01/02/24

Translate

Tuesday, January 2, 2024

ನಂಜುಕಾರರಿಂದ ತಲೆಕೆಡಿಸಬೇಕಾಗಿಲ್ಲ

 

 ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ (ಅಧ್ಯಕ್ಷರು, ಸಖಾಫಿ ಕೌನ್ಸಿಲ್, ಕರ್ನಾಟಕ ರಾಜ್ಯ)


 ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ದಿನಗಳಲ್ಲಿ ಕೇಳಿ ಬರುತ್ತಿದ್ದ ಕೆಲವೊಂದು ವಾಯ್ಸ್ ಗಳ ಬಗ್ಗೆ ಕೆಲವು ಸ್ನೇಹಿತರು ಬೇಸರ ಹಂಚಿಕೊಂಡಿದ್ದರು. ಅದೇನೆಂದರೆ ಇಲ್ಲಿ ಉದ್ಭವಿಸುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಮುಖ್ಯ ಕಾರಣ ಮುಸ್ಲಿಂ ವಿದ್ವಾಂಸರು ಹಾಗೂ ಅವರ ದಿವ್ಯ ಮೌನ ಎಂದಾಗಿತ್ತು ಆ ವಾಯ್ಸ್ ಗಳ ಒಟ್ಟು ಸಾರಾಂಶ. ಈ ವಾಯ್ಸ್ ಗಳ ಬಗ್ಗೆ ಯಾರೂ ತಲೆಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ.ಯಾಕೆ!? ಮೊದಲನೆಯದಾಗಿ ಈ ಆಕ್ಷೇಪಗಳು ಇಡೀ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಶಬ್ದಗಳಲ್ಲ. ಪುರಾತನ ಕಾಲದಿಂದಲೂ ವಿದ್ವಾಂಸರಲ್ಲಿ ಸದಾ ನಂಜು ಕಾರುವ ಬೆರಳೆಣಿಕೆಯ ಒಂದು ಸಣ್ಣ ಗುಂಪು ನಡೆಸುವ ಕಸರತ್ತುಗಳು ಮಾತ್ರವಾಗಿವೆ ಇದು.

ಇವರಿಗೆ ಸಮಾಜದಲ್ಲಿ ಏನಾದರೊಂದು ಸಮಸ್ಯೆ ಉದ್ಭವಿಸಿದರೆ ಅಥವಾ ಎಲ್ಲೋ ಯಾರೋ ಒಬ್ಬ ಬಿಳಿ ವಸ್ತ್ರದಾರಿಯಿಂದ ಏನಾದರೊಂದು ತಪ್ಪು ಸಂಭವಿಸಿದರೆ ಸಾಕು ಮತ್ತೆ ಇವರಿಗೆ ಹಬ್ಬದ ವಾತಾವರಣ. ಉಲಮಾಗಳ ಹಸಿ ಮಾಂಸವೇ ಇವರ ಆಹಾರ. ಇವರ ಮಾತಿನ ದಾಟಿ ನೋಡಿದರೆ, ಇವರು ಇಡೀ ಮುಸ್ಲಿಂ ಸಮುದಾಯವನ್ನು ದತ್ತು ಪಡೆದವರಂತೆ ತೋರಬಹುದು. *ಲಕ್ಷಾಂತರ ಮೀನುಗಳಿರುವ ಒಂದು ಕೆರೆಯಲ್ಲಿ ಸತ್ತುಹೋದ ಅಲ್ಪಸ್ವಲ್ಪ ಮೀನುಗಳು ನೀರಿನ ಮೇಲೆ ತೇಲಾಡುವುದನ್ನು ನೋಡುಗರು ಈ ಕೆರೆಯ ಮೀನುಗಳೆಲ್ಲ ಸತ್ತು ಹೋಗಿದೆ ಎಂದು ಭಾವಿಸುವಂತಿದೆ.*

ವಾಸ್ತವದಲ್ಲಿ ಆ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಜೀವಂತವಾಗಿ ಅದರ ಪಾಡಿಗೆ ಸಂತೋಷದಿಂದ ವಾಸಿಸುತ್ತಿದೆ. 

ಅದೇ ರೀತಿ ಇವರ ಈ ಕೋಲಾಹಲಗಳ ನಡುವೆಯೇ ಮುಸ್ಲಿಂ ಉಮ್ಮತ್ ಉಲಮಾಗಳ ನಾಯಕತ್ವದಲ್ಲಿ ಶಾಂತವಾಗಿ ಹಾಗೂ ಅತ್ಯಂತ ಪ್ರಬುದ್ಧತಯಿಂದ ಜೀವನ ಮಾಡುತ್ತಿದೆ. ಇವರು ಈ ಮೊಸಳೆ ಕಣ್ಣೀರಿಗೆ ಮಾತ್ರ ಸೀಮಿತರೇ ಹೊರತು ಸಮುದಾಯಕ್ಕೆ ಬೇಕಾಗಿ ಏನೂ ಮಾಡಿದವರೋ ಮಾಡುವವರೋ ಅಲ್ಲವೇ ಅಲ್ಲ.

ಇಲ್ಲಿ ಉಲಮಾಗಳು ಯಾರೆಂದು ಹಾಗೂ ಅವರು ಏನು ಮಾಡಿದ್ದಾರೆ ಹಾಗೂ ಏನು ಮಾಡುತ್ತಾರೆ ಎಂದು ಸಮುದಾಯಕ್ಕೆ ಚನ್ನಾಗಿ ಗೊತ್ತಿದೆ.

ಉಲಮಾಗಳು ಮತ್ತು ಸಮುದಾಯದ ಮಧ್ಯೆ ಇರುವ ಸಂಬಂಧ ಅಷ್ಟೊಂದು ಅಭೇದ್ಯವಾದದ್ದಾಗಿದೆ. ಉಲಮಾಗಳನ್ನು ಸೃಷ್ಟಿ ಮಾಡಿದ್ದೇ ಈ ಸಮುದಾಯವಾಗಿದೆ. ಬಹಳ ಪುರಾತನ ಕಾಲದಿಂದ ಪಳ್ಳಿ ದರ್ಸುಗಳಲ್ಲಿ ಧಾರ್ಮಿಕ ವಿದ್ಯೆ ಕಲಿಯುತ್ತಿದ್ದ ಮುತಅಲ್ಲಿಮರನ್ನು ತಮ್ಮ ಸ್ವಂತ ಮಕ್ಕಳಂತೆ ಅತ್ಯಂತ ವಾತ್ಸಲ್ಯದಿಂದ ನೋಡಿ ಕೊಂಡು ಅವರಿಗೆ ಬೇಕಾದ ಅನ್ನ ಪಾನೀಯ ವಸ್ತ್ರಗಳನ್ನು ನೀಡಿ ವಿದ್ವಾಂಸರನ್ನು ಬೆಳೆಸಿದವರು ಈ ಸಮುದಾಯದ ದೀನೀ ಸ್ನೇಹಿಗಳಾದ ಮಹಿಳೆಯರು ಮತ್ತು ಹಿರಿಯರಾಗಿರುತ್ತಾರೆ.

ಅಂದು ಕೂಡಾ ಈ ನಂಜುಕಾರ ಗುಂಪು ನಂಜುಕಾರುವುದರಲ್ಲೇ ಮಗ್ನವಾಗಿತ್ತು.

ವಿದ್ವಾಂಸರು ಕೂಡಾ ಸಮುದಾಯ ತಮಗೆ ನೀಡಿದ ಈ ಸೇವೆಯನ್ನು ಮನಗಂಡು ಸಮುದಾಯದ ಅಭಿವೃದ್ಧಿಗೆ ಬೇಕಾಗಿ ಸದಾ ಸೇವಾ ಮಗ್ನರಾದವರು ಆಗಿರುತ್ತಾರೆ.*

ತಮ್ಮ ಅನೇಕ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಹಣ ಸಂಪಾದನೆಯ ವಿವಿಧ ವಲಯಗಳು ತೆರೆದಿಡಲ್ಪಟ್ಟಿದ್ದರೂ ಅದ್ಯಾವುದಕ್ಕೂ ಹೋಗದೆ ಈ ಸಮುದಾಯದ ಶಿಕ್ಷಣ ಮತ್ತು ಸಾಮಾಜಿಕ ರಂಗದಲ್ಲಿ ಅಗಾಧ ಪ್ರಮಾಣದ ಸೇವೆಯಲ್ಲಿ ಮುಂದುವರಿಯುತ್ತಿರುವವರಾಗಿರುತ್ತಾರೆ. ಅಲ್ಲದೆ ಇಸ್ಲಾಮಿನ ಆಶಯ ಆದರ್ಶಗಳಿಗೆ ಬಾಹ್ಯ ಹಾಗೂ ಆಂತರಿಕ ಶತ್ರುಗಳಿಂದ ಸವಾಲುಗಳು ಎದುರಾದಾಗಲೆಲ್ಲಾ ಅದರ ವಿರುದ್ಧ ಇಸ್ಲಾಮಿನ ನೈಜ ಆದರ್ಶದ ಕಾವಲು ಬಟರಾಗಿ ನೆಲೆನಿಂತವರಾಗಿರುತ್ತಾರೆ. ಪ್ರವಾದಿಗಳ ನಂತರ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಉಲಮಾಗಳು ನಿರ್ವಹಿಸಿರುವುದರಿಂದಲೇ ಪವಿತ್ರ ಇಸ್ಲಾಂ ಈ ಸುದೀರ್ಘ ಇತಿಹಾಸದಲ್ಲಿ ಒಂದು ಅಣುವಿನಷ್ಟೂ ಬದಲಾವಣೆಗೆ ಒಳಗಾಗದೆ ತಲೆಎತ್ತಿ ನಿಂತಿರುವುದು. ಅನೇಕ ಸಂಘಟನೆಗಳ ಮೂಲಕ ಧಾರ್ಮಿಕ ಲೌಕಿಕ ವಿದ್ಯಾಬ್ಯಾಸ ರಂಗದಲ್ಲಿ ಅಸಾಮಾನ್ಯ ಕ್ರಾಂತಿಯನ್ನೇ ಮಾಡಿರುತ್ತಾರೆ.! ಸರಕಾರಗಳನ್ನು ನಾಚಿಸುವ ರೀತಿಯಲ್ಲಿ ವಿದ್ಯಾಬ್ಯಾಸ ಪಠ್ಯ ಜಾರಿಗೊಳಿಸಿ ಏಕೀಕೃತ ಪರೀಕ್ಷಾ ಪದ್ಧತಿಯನ್ನೂ ಕೈಗೊಂಡಿರುತ್ತಾರೆ. ಮಾತ್ರವಲ್ಲ ರಾತ್ರಿ ಹಗಲು ನಿದ್ದೆ ಶ್ರದ್ಧೆ ಎಂಬ ವ್ಯತ್ಯಾಸವಿಲ್ಲದೆ ಸದಾ ಸಮಯ ಸಮುದಾಯದ ಬಗ್ಗೆ ಅತ್ಯಂತ ಕಾಳಜಿಯಿಂದ ಚಿಂತಿಸುವವರೂ ಇದಕ್ಕಾಗಿ ಸದಾ 

ಸಮಯ ಅಲ್ಲಾಹನಲ್ಲಿ ದುಆ ಮಾಡುವವರೂ ಆಗಿರುವರು.

ತಮ್ಮ ಪ್ರತಿಯೊಂದು ದುಆದಲ್ಲಿ ಸಮುದಾಯದ ಇಹಪರ ವಿಜಯಕ್ಕೆ ಬೇಕಾಗಿ ದುಆ ಮಾಡುವವರೂ ಆಗಿರುತ್ತಾರೆ.

ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅತ್ಯಂತ ಸೂಕ್ತ ಹಾಗೂ ಬಲಿಷ್ಠ ಆಯುದ ಅದು ಅಲ್ಲಾಹನಲ್ಲಿ ಮಾಡುವ ದುಆ ಆಗಿರುತ್ತದೆ.

ಹಾಗೂ ಅಲ್ಲಾಹನ ಸಹಾಯವಿಲ್ಲದೆ ಮಾಡುವ ಯಾವ ಸಾಧನೆಯೂ ಶೂನ್ಯ ಎಂದು ಅರಿತವರೂ ಅದರಲ್ಲಿ ದೃಢ ನಂಬಿಕೆ ಹೊಂದಿದವರೂ ಆಗಿರುತ್ತಾರೆ.

ಬಹುಮಾನ್ಯರಾದ ತಾಜುಶ್ಶರೀಅ ಆಲಿಕುಂಞಿ ಉಸ್ತಾದರು ನ.ಮ. ಹೇಳುತ್ತಿದ್ದರು : "ಒಮ್ಮೆ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರೊಂದಿಗೆ ಹಜ್ ಯಾತ್ರೆ ವೇಳೆಯಲ್ಲಿ ಪವಿತ್ರ ಮಿನಾದಲ್ಲಿ ವಾಸಿಸುತ್ತಿದ್ದೆ.ರಾತ್ರಿ ಎಲ್ಲರೂ ಡೇರೆಯೊಳಗೆ ನಿದ್ರಿಸುತ್ತಿದ್ದೆವು. ಮದ್ಯ ರಾತ್ರಿಯಲ್ಲಿ ಉಚ್ಚ ಸ್ವರದಲ್ಲಿ ಯಾರೋ ದುಆ ಮಾಡುವ ಶಬ್ದವನ್ನು ಕೇಳಿಸಿತು. ಎಚ್ಚರವಾಗಿ ಎದ್ದು ನೋಡಿದಾಗ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ನಿದ್ದೆಯಲ್ಲಿಯೇ ಈ ಉಮ್ಮತ್ತಿಗೆ ಬೇಕಾಗಿ ಸುದೀರ್ಘ ದುಆ ಮಾಡುತ್ತಿದ್ದರು.ನಾನು ಕೂಡಾ ತುಂಬಾ ಹೊತ್ತು ಆ ದುಆಕ್ಕೆ ಆಮೀನ್ ಹೇಳಿದೆನು. ಮರು ದಿವಸ ಉಸ್ತಾದರಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಉಸ್ತಾದರಿಗೆ ಇದರ ಅರಿವೇ ಇರಲಿಲ್ಲ".* ಇದಾಗಿದೆ ನಮ್ಮ ಉಲಮಾಗಳ ಸಮುದಾಯ ಕಾಳಜಿ. ಎಂತಹ ಸಂಕೀರ್ಣ ಸಂದರ್ಭಗಳಲ್ಲಿಯೂ ಹೊಡಿ ಬಡಿ ಸಂಸ್ಕೃತಿಯನ್ನು ಅನುಸರಿಸದೆ ಅತ್ಯಂತ ಪಕ್ವತೆಯಿಂದ ಯೋಗ್ಯವಾದ ತೀರ್ಮಾನಗಳನ್ನು ಯೋಗ್ಯವಾದ ಸಮಯಗಳಲ್ಲಿ ಕೈಗೊಂಡು ಸಮುದಾಯ ದಾರಿ ತಪ್ಪದಂತೆ ಅತಿ ಜಾಗ್ರತೆ ವಹಿಸುವವರಾಗಿರುತ್ತಾರೆ.! ಇದೇ ಆಗಿತ್ತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಹಿಡಿದು ಪೂರ್ವಿಕ ಇಮಾಮರುಗಳ ಶೈಲಿ. *ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪ್ರಭೋಧನೆಯ ರಂಗದಲ್ಲಿ ಎದುರಾದ ಎಲ್ಲ ರೀತಿಯ ಸವಾಲುಗಳನ್ನು ಶಾಂತಿ ಮತ್ತು ಸಹನೆಯಿಂದಲೇ ಎದುರಿಸುತ್ತಿದ್ದರು.*    ಸಮುದಾಯದ ಅಸ್ತಿತ್ವದ ವಿಷಯ ಬಂದಾಗ ಮಾತ್ರ ಗತ್ಯಂತರವಿಲ್ಲದೆ ಪ್ರತಿರೋದದ ಮಾರ್ಗವನ್ನು ಅವಲಂಬಿಸಿದ್ದರು. ಆ ಕಾಲದಲ್ಲಿ ನಡೆದ ಬದ್ರ್,ಉಹ್ದ್,ಖಂದಕ್ ಮುಂತಾದ ಅನೇಕ ಯುದ್ದಗಳು ಇದಕ್ಕಿರುವ ದೊಡ್ಡ ಉದಾಹರಣೆಗಳಾಗಿವೆ.

ಆದ್ದರಿಂದ ಉಲಮಾಗಳು ಅಂಬಿಯಾಗಳ ಸರಿಯಾದ ದಾರಿಯಲ್ಲಿಯೇ ಇದ್ದು ಆಧ್ಯಾತ್ಮಿಕ ವಾಗಿ ನೇತೃತ್ವ ನೀಡುವವರು ಆಗಿರುತ್ತಾರೆ. ಇದರ ಮದ್ಯೆ *ಉಲಮಾಗಳ ಸೇವೆಗಳನ್ನು ಕಡೆಗಣಿಸಿ ಸಮುದಾಯ ಉಲಮಾಗಳಿಗೆ ನೀಡುವ ಗೌರವಾದರಗಳಲ್ಲಿ ನಂಜು ಕಾರುವವರಿಂದ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲವೇ ಇಲ್ಲ.

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...