MUSTHAFA HASAN ALQADRI OFFICIAL : 06/04/20

Translate

Thursday, June 4, 2020

The flames of fire-ನಮ್ರೂದ್ ತಯಾರಿಸಿದ ಬೆಂಕಿಯ ಜ್ವಾಲೆ

ನಮ್ರೂದ್ ತಯಾರಿಸಿದ   ಬೆಂಕಿಯ  ಜ್ವಾಲೆಯಿಂದ  ಖಲೀಲುಲ್ಲಾಹಿ ಇಬ್ರಾಹಿಮ್    عليه السلام 
ರವರ ಮುಖದಲ್ಲಿ ಯಾವ ಭಯ ವಾಗಲಿ ದುಃಖ ವಾಗಲಿ ಕಾಣಲಾಗಲಿಲ್ಲ ಅವರು ಅಲ್ಲಾಹನ ಹೆಸರಿನ ಪ್ರೀತಿಯ ಮಸ್ತಿನಲ್ಲಿ ಸಮಯ ಕಳೆಯುತಿದ್ದರು ಒಂದು ವೇಳೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ವಾಗಿಸಿದರೂ ಇದು ನನ್ನ ಜಯವಾಗಿದೆ ಅಲ್ಲಾಹನ ಆಜ್ಞೆ ಯಾಗಿದೆ ಎಂಬುದಾಗಿತ್ತು ಅವರ ಮನಸ್ತಿತಿ   ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು ಆವಾಗ ಹಝ್ರತ್ ಜಿಬಿರೀಲ್ ಅ.ಸ.ಪ್ರತ್ಯಕ್ಷ ಪಟ್ಟು ಹೇಳಿದರು ಓ ಇಬ್ರಾಹಿಮರೆ ತಾವು ಇಚ್ಚಿಸಿದರೆ ನಾನು ಅಲ್ಲಾಹನಲ್ಲಿ ಶಿಫಾರಿಸು ಮಾಡಲೇ ನಿಮ್ಮ ಪರವಾಗಿ ನಿಮಗೆ ಈ ಪರೀಕ್ಷೆ ಯಿಂದ ಮುಕ್ತಿ ಸಿಗಲಿಕ್ಕಾಗಿ ಹೇಳಿದಾಗ ಇಬ್ರಾಹಿಮ್ عليه السلام 
ಹೇಳಿದರು ನಾನು ಅದರ ಬಗ್ಗೆ ಏನೂ ಹೇಳಲಾರೆ ಆದರೆ ತಾವು ಅಲ್ಲಾಹನಲ್ಲಿ ಹೇಳಿ ಈ ಸತ್ಯ ನಿಷೇದಿಗಳ ಮನಸ್ಸಿನಲ್ಲಿ ಈ ಕಾರ್ಯ ವೆಸಗಲು ಅಲ್ಲಾಹನು ಇಚ್ಚಿಸಿದರೆ ನನ್ನ ಇಚ್ಚೆಯೂ ಅದೇ ಆಗಿದೆ ಎಂದರು  ಅಲ್ಲಾಹನ    ಇಚ್ಛೆ ನಾನು ಬೆಂಕಿಯಲ್ಲಿ ಬಸ್ಮ ಆಗ ಬೇಕೆಂದಿದ್ದರೆ ನಾನು  ಅಲ್ಲಾಹನ ಆಜ್ನೆಗೆ ಪರಿಪೂರ್ಣ ವಾಗಿ ಸಮರ್ಪಿತನು ಜಿಬಿರೀಲರೇ ಎಂದು ಹೇಳಿದರು ಒಂದು ಹಕ್ಕಿಯೂ ಅದರ ಹತ್ತಿರ ದಿಂದ ಹಾರಿ ಹೋದರೂ ಅದೂ ಸುಟ್ಟು ಬೂದಿಯಾಗುವುದು ಅಂತಹ ಭೀಕರವಾದ ಬೆಂಕಿ ಯಾಗಿದೆ
ಪ್ರವಾದಿ ಇಬ್ರಾಹಿಮ್ عليه السلام ರವರನ್ನು ಸುಡಲು ತಯಾರಿಸಿದ ಬೆಂಕಿ ಅವರು ತದ ನಂತರ ಅಲ್ಲಾಹನು ಅವರನ್ನು ತನ್ನ ಅಪಾರ ಅನುಗ್ರಹ ಗಳಿಂದ ರಕ್ಶಿಸಿದನು ನಂತರ ಬೀವೀ ಸಾರ ರವರನ್ನು ವಿವಾಹ  ವಾದರು ಸಂತಾನ ಬಾಗ್ಯ ಲಬಿಸಲಿಲ್ಲ ಇದೂ ಒಂದು ಪರೀಕ್ಷೆ ಯಾಗಿತ್ತು   ಸಂತಾನ ಬಾಗ್ಯ ಅಂದರೆ ಅದು  ಮಾತಾ ಫಿತರ ಆತ್ಮದ ಶಾಂತಿ ಯಾಗಿದೆ ಜೀವಿಸುವ ಗುರಿಯಾಗಿದೆ ಮುದ್ದು ಮಕ್ಕಳನ್ನು ನೋಡಿ ಮತ್ತೊಮ್ಮೆ ಯೌವ್ವನಕ್ಕೆ ಮರಳುತ್ತಾರೆ ತಂದೆ ತಾಯಿಯವರು ಜೀವನದಲ್ಲಿ ಕಷ್ಟ ಗಳು ಮಕ್ಕಳನ್ನು ನೋಡಿ ಮಾಯ ವಾಗುತ್ತದೆ ಇನ್ನು ಮಕ್ಕಳು ವಯಸ್ಕರಾದರೆ ಆ ಸಮಯ ವನ್ನು ತನ್ನ ವಯಸ್ಸಾದ ತಂದೆಗೆ ಇರುವ ಸಂತೋಷ ಅದು ಹೇಳತೀರದು ನನ್ನಲ್ಲಿ ಶಬ್ದ ಗಳಿಲ್ಲ ನಾನು ಆ ಸಮಯ ವನ್ನು ಹೇಗೆ ವರ್ಣಿಸಲಿ ಅದೇ ಸಮಯದಲ್ಲಿ ಇಬ್ರಾಹಿಮ್ ರವರಿಗೆ ಬೀವಿ ಹಾಜರ ರವರಿಂದ   ಇಸ್ಮಾಯಿಲ್ ಎಂಬ ಸಂತಾನ ಬಾಗ್ಯ ಲಬಿಸುತ್ತದೆ ಆ ಮಗನನ್ನು ನೋಡಿ ನೋಡಿ ಜೀವಿಸುತ್ತಿದ್ದರು ಆದರೆ ಅಲ್ಲಾಹನು ಮತ್ತೊಂದು ಪರೀಕ್ಷೆಗೆ ಆಜ್ಞೆ ನೀಡುತ್ತಾನೆ ನಿನ್ನ ಈ ಹೆಂಡತಿ ಮತ್ತು ಮಗುವನ್ನು ನಿರ್ಜನ ಪ್ರದೇಶ ಕಾಡಿನಲ್ಲಿ ಬಯ ಪಡುವ ಪ್ರದೇಶದಲ್ಲಿ ಬಿಟ್ಟು ಬಿಡಲು ಆಜ್ಞೆ ನೀಡಿದನು ಈ ಮಾತು ಹೇಳಲೋ ಕೇಳಲೋ ಸುಲಭ ಆಗ ಬಹುದು ಆದರೆ ಮಾಡಲು ಎಷ್ಟು  ಕಷ್ಟ ವಾಗಿದೆ ಅಂದರೆ  ದಿನದ ಸಮಯದಲ್ಲಿ ನಕ್ಷತ್ರ ನೋಡುವುದು ಆದರೆ ಅಲ್ಲಾಹನ ಆಜ್ಞೆ ಯಂತೆ ತನ್ನ ಪತ್ನಿ ಹಾಗು ಮುದ್ದು ಕಂದಮ್ಮ ನನ್ನ ಹಿಡಿದು ವಾದಿ ಗೈರ್ ಝೀಝ್ರ ರವಾನೆ ಯಾದರು ಇಂದು ಮಕ್ಕಾ ಎಂಬ  ವಿಶಾಲ ವಾದ  ನಗರ ವಾಗಿದೆ  ಇಂದು ಅಲ್ಲಿ ಗಗನಕ್ಕೇರಿದ ಕಟ್ಟಡ ಗಳಿವೆ ಅಂದು ಬರೇ ನಿರ್ಜನ ಭಯಾನಕ ವಾದ ಕಾಡು ಆಗಿತ್ತು ಬೆಳಗ್ಗಿನ ಜಾವ ಅಲ್ಲಾಹನಲ್ಲಿ ಪ್ರಾರ್ತಿಸಿ ತನ್ನ ಹೆಂಡತಿ ಹಾಗು ಕಂದಮ್ಮ ನನ್ನ ಅಲ್ಲೇ ಬಿಟ್ಟು ತೊಲಗಲು ರಡಿಯಾದರು ಮುಂದೆ ನಡೆಯುತ್ತಿದ್ದ ವರು ತಿರಿಗಿ ನೋಡುವಾಗ ಅವರ ಪತ್ನಿ ಕೈ ಹಿಡಿದು ಕೇಳಿಯೇ ಬಿಟ್ಟರು ಓ ನನ್ನ ಪತಿಯವರೇ ಈ ನಿರ್ಜನ ಪ್ರದೇಶದಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೊರಡುತ್ತಿದ್ದೀರಿ ಅವರು ಏನೂ ಉತ್ತರ ನೀಡಲಿಲ್ಲ ನಿಶಬ್ದ ವಾದರು ಎರಡನೆ ಸಲ ನಡೆಯಲು ಮುಂದಾದಾಗ ಪತ್ನಿ ಮತ್ತೋಮ್ಮೆ ಕೈ ಹಿಡಿದರು ಅದೇ ಪ್ರಶ್ನೆ ಕೇಳಿದಾಗ ಯಾವ ಉತ್ತರವೂ ಇಬ್ರಾಹಿಮ್ عليه السلام 
ರವರು ನೀಡಲಿಲ್ಲ ಮೂರನೆ ಸಲ ಮತ್ತೊಮ್ಮೆ ನಡೆಯಲು ಮುಂದಾದಾಗ ಕೇಳಿದಾಗ ಯಾವ ಉತ್ತರವೂ ನೀಡಲಿಲ್ಲ ಆದರೆ ಆವಾಗ ಪತ್ನಿ ಕೇಳಿದರು ಇದು ಅಲ್ಲಾಹನ ಆಜ್ಞೆಯೇ ಆವಾಗ ಇಬ್ರಾಹಿಮ್ ಹೇಳಿದರು ಹೌದು ಅಲ್ಲಾಹನ ಆಜ್ಞೆ ಆಗಿದೆ ಆವಾಗ ಪತ್ನಿ ತನ್ನ ಕೈಯ್ಯನ್ಧು ಬಿಟ್ಟು ಹೇಳಿದರು ನಡೆಯಿರಿ ಅ ಅಲ್ಲಾಹನ ಆಜ್ಞೆ ಆದರೆ ನನ್ನನ್ನು ನೋಡುವವನು ಆವನಾಗಿದ್ದಾನೆ ತಾವು ಭಯ ಪಡ ಬೇಡಿ ಎಂದರು ಬೀವಿ ಹಾಜರ ಅಲ್ಲೇ ಸಾಷ್ಟಾಂಗ ದಲ್ಲಿ ಅಲ್ಲಾಹನನ್ನು ಪ್ರಾರ್ತಿಸುತ್ತಿದ್ದರು ಇಂತಹಾ ತ್ಯಾಗ ಗಳನ್ನು ಸಮರ್ಪಿಸಿ ತಂದು ಕೊಟ್ಟ ಇಸ್ಲಾಮ್ ನಲ್ಲಿ ಪರಿಪೂರ್ಣ ವಾಗಿ ಪ್ರವೇಶಿಸಿ 
يَا أَيُّهَا الَّذِينَ آمَنُوا ادْخُلُوا فِي السِّلْمِ كَافَّةً وَلَا تَتَّبِعُوا خُطُوَاتِ الشَّيْطَانِ ۚ إِنَّهُ لَكُمْ عَدُوٌّ مُبِينٌ

ವಿಶ್ವಾಸಿಗಳೇ, ಇಸ್ಲಾಮಿನೊಳಗೆ ಪೂರ್ಣವಾಗಿ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ಅವನು ನಿಮ್ಮ ಬಹಿರಂಗ ಶತ್ರು ಆಗಿದ್ದಾನೆ
S.M.MUSTHAFA SASTHANA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...