MUSTHAFA HASAN ALQADRI OFFICIAL : 06/24/20

Translate

Wednesday, June 24, 2020

ಕೊರೋನ ಅಂದರೆ ಏನ-What is Corona

ಈ ಮಾತು ಸಂಭಾಷಣೆಯಾಗಿ ಹೇಳಲಾಗುತ್ತದೆ ಅಂದರೆ ಈ ರೋಗ ಎಲ್ಲಿಂದ ಬಂತು ಆದರೆ ಒಬ್ಬ ಸತ್ಯ ವಿಶ್ವಾಸಿಯ ನಂಬಿಕೆ   ಅಂದರೆ ಅದು ತಾನಾಗಿಯೇ ಹುಟ್ಟಿ ಬಂದ ಒಂದು ರೋಗವಲ್ಲ ಇದು ಅಲ್ಲಾಹನ ಬಳಿಯಿಂದ ಪರೀಕ್ಷೆ ಸಂಕಟ ಪ್ರಯೋಗ ವಾಗಿದೆ ಮತ್ತು ಎಚ್ಚರಿಕೆಯ ಗಂಟೆ ಯಾಗಿದೆ ನಮಗೆ ನಮ್ಮ ವ್ಯವಹಾರ ಗಳನ್ನು ಸರಿಪಡಿಸಲು ಉತ್ತಮ ರಾಗಿ ಬಾಳಲು ಇದರಲ್ಲಿ ವಿಶೇಷ ವಾದ ಒಂದು ಸಂದೇಶ ನೀಡಲಾಗಿದೆ  ಲೋಕವು ಅಸಹಾಯಕ ವಾಗಿದೆ ಲೋಕದ ಪ್ರತಿಯೊಂದು ವೈದ್ಯರ  ದಾವೆಗಳು ಮೂಕ ಪ್ರೇತವಾಗಿ ಬದಿಗೆ ಸರಿದವು ಅಲ್ಲಾಹನ ಕಾರ್ಯಗಳಲ್ಲಿ ತಲೆ ಹಾಕುವವರು ಇಂದು ತಮ್ಮ  ಪರಾಜಯ ವನ್ನು ಎದುರಿಸುತ್ತಿದ್ದಾರೆ ಇವತ್ತು ಒಂದು ಸಣ್ಣ ವಯರಸ್ ನಿಂದ ಕಠಿಣ ಸಂಕಟದಿಂದ ಅಸಹಾಯಕತೆಯ ಚಿತ್ರಣ ನಮ್ಮ ಮುಂದಿದೆ ಪ್ರತಿಯೊಬ್ಬರಿಗೂ ತನ್ನ ಹಲವಾರು ಹಕ್ಕು ಬಾದ್ಯತೆ ಗಳ ಮದ್ಯೆ ಪ್ರಾಣದ ಭಯವು ಕಾಡುತ್ತಿದೆ ನಮ್ಮ ಇಸ್ಲಾಮ್ ದರ್ಮ ಇಂತಹಾ ಸಂದರ್ಭದಲ್ಲಿ ಕಾಳಜಿ ಮತ್ತು ಎಚ್ಚರಿಕೆಯ ಉಪದೇಶ ನೀಡಲಾಗಿದೆ.  ಆರೋಗ್ಯ ಇಲಾಖೆಯಿಂದ ನೀಡಿದ      ಮುನ್ನಚ್ಚರಿಕೆಗಳು  ನಿಭಾಯಿಸಲು ಮುಂದಾಗಬೇಕು ತಮ್ಮ ಮಕ್ಕಳನ್ನು ಮನೆಯಲ್ಲಿ ಸುರಕ್ಷಿತವಾಗಿರಿಸಿ ಐದು ಸಮಯದ ನಮಾಝ್ ನ ವ್ಯವಸ್ಥೆ ಮಾಡಿದರೆ ಐದು ಸಲ (ವುಲೂ)ಅಂಗ ಶುದ್ದಿಯ ಸಮಯವು ಒದಗಿ ಬರುತ್ತದೆ ಸ್ಥಳ ಗಳನ್ನು ಶುದ್ಧ ವಾಗಿಡಿ ಕಸಗಳನ್ನು ಜನರು ಸಂಚರಿಸುವ ಸ್ಥಳಗಳಲ್ಲಿ ಎಸೆಯದೆ.ದೂರದಲ್ಲಿ ಇಡಿ ಈ ಕಾರ್ಯಗಳು ಕಷ್ಟ ಹಾಗು ಸಾಂಕ್ರಾಮಿಕ  ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ ಅಲ್ಲಾಹು ನಮ್ಮೆಲ್ಲರನ್ನು ಕಾಪಾಡಲಿ ಲೋಕದ ಶ್ರೀಮಂತ ದೇಶಗಳಲ್ಲಿ ಈ ರೋಗ   ಹರಡಿದಾಗ ಅಲ್ಲಿನ ಅಸಾಯಕತೆಯ ಚಿತ್ರ ನಿಮಗೆ ನೋಡಲು ಸಿಗಬಹುದು ನಿಜವಾಗಿ ಹ್ರದಯದಲ್ಲಿ ಬೂಕಂಪ ಉಂಟಾಗುತ್ತದೆ ನಾವು ಈ ಕಷ್ಟ ವನ್ನು ಹೊರೆಯಲು ಅಸಾಧ್ಯ ರಾಗದೆ ಇರಲು ಅಲ್ಲಾಹನಲ್ಲಿ ಪ್ರಾರ್ತಿಸಿ ಮತ್ತು ನಮ್ಮಲ್ಲಿ ಯಾರಾದರೂ ಒಬ್ಬ ರೋಗಿಯಾಗಿ ಅವನನ್ನು ಪರಿಗಣಿಸುವವರು ಇರಲಾರರು ಅದು ಎಷ್ಟೊಂದು ಭೀಕರವಾದ ಸನ್ನಿವೇಶ ಇರಬಹುದು ಇಲ್ಲಿ ಇನ್ನು ನಾವು ಸುಖವಾಗಿದ್ದೇವೆ ಏನಾಗಬಹುದು ಫೆಲಸ್ತೀನ್ ನಲ್ಲಿ ಗಾಯಾಳುವಾಗಿ ಚಡಪಡಿಸುವ ಆ ಮಕ್ಕಳ ವೇದನೆ ನೋವು ಕಠಿಣವಾಗಿರ ಬಹುದು ರಕ್ತ ಚೆಲ್ಲುತ್ತಿರಬಹುದು ತಾಯಂದಿರು ಪ್ರಜ್ನೆಯನ್ನು ಕಳೆದು ಕೊಂಡಿರಬಹುದು ಒಮ್ಮೆ  ಯೋಚಿಸಿ ನನ್ನ ಸಹೋದರರೆ ಆ ಫೆಲಸ್ತೀನ್ ಮಕ್ಕಳನ್ನು ಹಿಡಿದು ಹೊರಗೆ ಹೋಗಲು ಅಸಾಧ್ಯ ಕಾರಣ ಹೊರಗೆ ಗುಂಡುಗಳ ಸುರಿಮಳೆ ಆ ತಾಯಿಯು ಆ ಮಕ್ಕಳು ತಾಯಿಯ ಕಯ್ಯಲ್ಲೇ ಕೊನೆಯುಸಿರು ಎಳೆಯುವರು ಇವತ್ತು ಲೋಕಕ್ಕೆ ಅವರನ್ನು ನೋಡುವ ಸಮಯ ಇದೆಯೇ ಲೋಕದಲ್ಲಿ ಶಾಂತಿ ನೆಲೆಸುವ ಪ್ರಯತ್ನ ನಡೆಯುತ್ತಿದೆ ರೋಗಗಳು  ಇದಕ್ಕಿಂತ ಮುಂಚೆಯೂ  ಬರುತ್ತಿದ್ದವು 
ಮುಂದೆಯೂ ಬರುತ್ತದೆ ಅಲ್ಲಾಹನಲ್ಲಿ ನಮ್ಮ ಪಾಪದ ಕ್ಷಮೆ ಯಾಚಿಸಿ ಇವತ್ತು ನಾವೆಲ್ಲರೂ ಕೇಳುವ ಒಂದು ಮಾತು   ನಾವೆಲ್ಲರೂ ಸೇರಿ ಯುದ್ಧ ಮಾಡುತ್ತೇವೆ ಕೊರೋನ ಎಂಬ ಮಹಾಮಾರಿಯ ವಿರುದ್ಧ ನಿಜವಾಗಿ ಅಲ್ಲಾಹನು ಕಳುಹಿಸಿದ ಶ್ರಷ್ಟಿಯೊಂದಿಗೆ ಯುದ್ಧ ಸಾಧ್ಯವಿಲ್ಲ ಅವನಲ್ಲಿ ಕ್ಷಮೆ ಯಾಚಿಸಿ ಅದೊಂದೇ ದಾರಿಯಾಗಿದೆ ನಮ್ಮ ವಿಜಯಕ್ಕೆ ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬಹುದು ಅದು  ನಮ್ಮ ದೀನಿನ ಒಂದು ಭಾಗವಾಗಿದೆ ಅಲ್ಲಾಹನಿಂದ ಯಾವಾಗಲೂ ನಿರಾಶೆ ಆಗಬೇಡಿ ರೋಗ ಕಷ್ಟ ಸಂಕಟ ಎಲ್ಲವು ಜೀವನದ ಅಂಗ ವಾಗಿದೆ ಅದರ ಪರಿಹಾರವೂ ಅಲ್ಲಾಹನೆ ಪರಿಹರಿಸುವನು 

وَإِذَا مَرِضْتُ فَهُوَ يَشْفِينِ

(ನಾನು ರೋಗಿಯಾದಾಗ ಅವನೇ ನನ್ನನ್ನು ಗುಣಪಡಿಸುವವನು.)
ಎಂಬ ಕುರ್ಆನ್ ವಚನಗಳು ನಮಗೆ ಸಾಕ್ಷಿ ಯಾಗಿದೆ .
ISLAMIC INFO

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...