MUSTHAFA HASAN ALQADRI OFFICIAL : 07/30/20

Translate

Thursday, July 30, 2020

ನಾವು ಎಡವಿದ್ದೆಲ್ಲಿ?

ನಾವು ಎಡವಿದ್ದೆಲ್ಲಿ? 
____________

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
_____________

ಹಝ್ರತ್ ಸುಲೈಮಾನ್ ನೆಬಿ  ಅಲೈಹಿಸ್ಸಲಾಮ್ ರ ಕಾಲದಲ್ಲಿ  ನೀರಿಲ್ಲದೆ ಒಂದು ದೊಡ್ಡ ಬರಗಾಲ ತಲೆದೋರಿತ್ತು. 
ಸುಲೈಮಾನ್ ನೆಬಿ ಅಲೈಹಿಸ್ಸಲಾಮರು ಎಲ್ಲಾ ಜೀವಿಗಳ ಭಾಷೆಗಳನ್ನು ತಿಳಿದ ಸರಿಸಾಟಿ ಇಲ್ಲದ ಆಗರ್ಭ ಶ್ರೀಮಂತರೂ ಜಾಗತಿಕ ಚಕ್ರವರ್ತಿಯೂ ಆಗಿದ್ದರು.

ಬರಗಾಲದಿಂದ ರಕ್ಷಣೆ ಪಡೆಯಲು ಬೇಕಾದ ಪ್ರತ್ಯೇಕ ಪ್ರಾರ್ಥನೆ ನಡೆಸಲು ಎಲ್ಲರನ್ನೂ ಸೇರಿಸಿ ಮೈದಾನಕ್ಕೆ ಹೊರಟಿದ್ದರು.

ಹೋಗುವ ದಾರಿ ಮಧ್ಯೆ ಒಂದು ಇರುವೆ ತನ್ನ ಕೈಕಾಲುಗಳನ್ನು ಆಕಾಶಕ್ಕೆ ಎತ್ತಿ ಮಲಗಿ ಪ್ರಾರ್ಥಿಸುವುದನ್ನು ದೂರದಿಂದ ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಕಂಡರು.
ಆ ಪ್ರಾರ್ಥನೆ ಹೀಗಿತ್ತು.

اللهم، إنا خَلْقٌ مِن خلقِك، ليس بنا غنًى عن سُقيَاك

ಯಾ ಅಲ್ಲಾಹ್ ನಾವು ನಿನ್ನ ಸೃಷ್ಟಿಗಳಲ್ಲಿ ಸೇರಿದ ಒಂದು ವಿಭಾಗ ಸೃಷ್ಟಿಗಳು.ನಮಗೂ ನಿನ್ನ ನೀರಿನ ಅವಶ್ಯಕತೆ ಇದೆ ಎಂದಾಗಿತ್ತು ಅದರ ಅರ್ಥ.

ಇದನ್ನು ಕಂಡ ಸುಲೈಮಾನ್ ಅಲೈಹಿಸ್ಸಲಾಮರು ತನ್ನ ಅನುಚರರಲ್ಲಿ ಹೇಳಿದರು.
ಎಲ್ಲರೂ ಹಿಂತಿರುಗಿ ಹೋಗಿರಿ.ನಾವು ಪ್ರಾರ್ಥಿಸಬೇಕಾದ ಅವಶ್ಯಕತೆ ಇಲ್ಲ.
ಸೃಷ್ಟಿಗಳಲ್ಲಿ ನಾವಲ್ಲದ ವಿಭಾಗವಾದ ಇರುವೆಗಳ ಪ್ರಾರ್ಥನೆಯಿಂದ ನಮ್ಮ ಬೇಡಿಕೆಗಳು ಸೇರಿ ಈಡೇರಿವೆ.

ಹಝ್ರತ್ ಮೂಸಾ ಅಲೈಹಸ್ಸಲಾಮರ ಕಾಲದಲ್ಲಿ ಅತ್ಯಂತ ದೊಡ್ಡ ಕ್ಷಾಮ ತಲೆದೋರಿತ್ತು.ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮೂಸಾ ಅಲೈಹಿಸ್ಸಲಾಮರು ದುಆ ನಡೆಸಿದರು.ಆದರೆ ಮಳೆ ಬರಲೇ ಇಲ್ಲ. 
ಕ್ಷಾಮ ಮತ್ತಷ್ಟು ಬಿಗುಡಾಯಿಸಿತು.
ಮೂಸಾ ಅಲೈಹಿಸ್ಸಲಾಮರು ಅಲ್ಲಾಹನಲ್ಲಿ ಕೇಳಿದರು.ಯಾ ಅಲ್ಲಾಹ್ ಯಾಕೆ ನಮ್ಮ ದುಆ ಸ್ವೀಕರಿಸಿಲ್ಲ.
ನಿಮ್ಮ ಸಮೂಹದಲ್ಲಿರುವ ಒಬ್ಬ ವ್ಯಕ್ತಿ ಕಳೆದ ನಲ್ವತ್ತು ವರ್ಷಗಳಿಂದ ನನ್ನನ್ನು 
ದಿಕ್ಕರಿಸಿ ತಪ್ಪುಗಳನ್ನು ಮಾಡುತ್ತಿದ್ದಾನೆ.ಅವನನ್ನು ಹೊರಹಾಕುವ ವರೆಗೆ ನಿಮ್ಮ ದುಆ ಸ್ವೀಕರಿಸಲಾಗದು.
ಮೂಸಾ ಅಲೈಹಿಸ್ಸಲಾಮರು ಸಮೂಹದೊಂದಿಗೆ ಹೇಳಿದರು.ಈ ಸಮೂಹದಲ್ಲಿ ಅಲ್ಲಾಹನ ವಿರುದ್ಧ ತಪ್ಪುಗಳನ್ನು ಮಾಡುವ ವ್ಯಕ್ತಿ ಇದ್ದು ಅವನು ಇಲ್ಲಿಂದ ಹೊರಟು ಹೋಗುವವರೆಗೆ ನಮ್ಮ ದುಆ ಸ್ವೀಕರಿಸಲ್ಪಡದು.ಆದ್ದರಿಂದ ಆ ವ್ಯಕ್ತಿ ಇಲ್ಲಿಂದ ಹೊರಟು ಹೋಗಬೇಕೆಂದರು.
ಆ ಸಭೆಯಲ್ಲೇ ಇದ್ದ ಆ ತಪ್ಪುಮಾಡುತ್ತಿದ್ದ ವ್ಯಕ್ತಿ ತನ್ನ ಸುತ್ತ ಮುತ್ತ ನೋಡಿದ. ಯಾರೂ ಈ ಸಭೆಯಿಂದ ಹೊರಟು ಹೋಗುವುದು ಕಾಣದಿದ್ದಾಗ ಇದು ನನ್ನನ್ನು ಉದ್ದೇಶಿಸಯಾಗಿದೆ ಎಂದು ಅವನಿಗೆ ಖಾತ್ರಿಯಾಯಿತು. ಆಗ ಅವನು ತಲೆ ತಗ್ಗಿಸಿ ಅಲ್ಲಾಹನಲ್ಲಿ ಮನಸ್ಸಾರೆ ಪಶ್ಚಾತ್ತಾಪ ಪಟ್ಟು ಹೇಳುತ್ತಾನೆ.
ಓ ಅಲ್ಲಾ ನಾನು ತಪ್ಪು ಮಾಡುತ್ತಿದ್ದುದು ನಿಜ.ಈಗ ಈ ಸಭೆಯಿಂದ ನಾನು ಹೊರಟು ಹೋದರೆ ನಾನು ಈ ಜನಮಧ್ಯೆ ಅವಮಾನಿತನಾಗುವುದು ಖಂಡಿತ.
ಹೊರಟು ಹೋಗದೇ ಇದ್ದಲ್ಲಿ ನನ್ನ ಕಾರಣದಿಂದ ಇಡೀ ಸಮೂಹವೇ ತೊಂದರೆ ಅನುಭವಿಸಬೇಕಾಗುತ್ತದೆ.
ಆದ್ದರಿಂದ ನಾನು ಮುಂದೆ ಯಾವುದೇ ತಪ್ಪು ಮಾಡಲಾರೆ ಖಂಡಿತ.ನನ್ನನ್ನು ಕ್ಷಮಿಸು ಎಂದು ಅಂಗಲಾಚಿದ.
ತಕ್ಷಣವೇ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಯಲಾರಂಭವಾಯ್ತು.
ಮೂಸಾ ಅಲೈಹಿಸ್ಸಲಾಮರು ಕೇಳಿದರು.ಓ ಅಲ್ಲಾಹ್ ನಿನಗೆ ತಪ್ಪು ಮಾಡಿದ ಈ ಸಭೆಯಿಂದ ಹೊರಟು ಹೋಗಿಲ್ಲ.
ಮತ್ತೆ ಹೇಗೆ ನೀನು ಮಳೆ ಸುರಿಸಿರುವುದು.
ಓ ಮೂಸಾರವರೇ ಯಾವ ವ್ಯಕ್ತಿಯ ಪಾಪದಿಂದ ನಿಮಗೆ ಮಳೆಯನ್ನು ತಡೆ ಹಿಡಿಯಲ್ಪಟ್ಟಿತ್ತೋ ಅದೇ ವ್ಯಕ್ತಿಯ ತೌಬಾದಿಂದ ಇದೀಗ ನಿಮಗೆ ಮಳೆ ನೀಡಲ್ಪಟ್ಟಿತು ಎಂದು ಅಲ್ಲಾಹು ಉತ್ತರಿಸಿದ.
ಮೂಸಾ ಅಲೈಹಿಸ್ಸಲಾಮರು ಕೇಳಿದರು. 
ಹಾಗಾದರೆ ಈಗ  ಸಜ್ಜನನಾಗಿ ಬದಲಾದ ಆ ವ್ಯಕ್ತಿ ಯಾರಿರಬಹುದು.
ಅವನು ತಪ್ಪು ಮಾಡುತ್ತಿದ್ದಾಗ ಅವನನ್ನು ಅವಮಾನಿಸದ ನಾನು ಇದೀಗ ತಪ್ಪುಗಳೆನ್ನೆಲ್ಲಾ ಬಿಟ್ಟು ಸಜ್ಜನನಾದಾಗ ಅವಮಾನಿಸ ಬೇಕೇ.
ಆದ್ದರಿಂದ ಆ ವ್ಯಕ್ತಿ ಯಾರೆಂದು ಹೇಳಲಿಕ್ಕಾಗದು ಎಂದು ಅಲ್ಲಾಹು ಉತ್ತರಿಸಿದ.

ಒಂದು ಶುಕ್ರವಾರ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮದೀನಾ ಮಸ್ಜಿದ್ ನಲ್ಲಿ ಖುತ್ಬಾ ನಿರ್ವಹಿಸುತ್ತಿದ್ದರು.
ಗ್ರಾಮವಾಸಿಯಾದ ಒಬ್ಬ ವ್ಯಕ್ತಿ ಬಂದು ಹೇಳುತ್ತಾರೆ.
ಓ ಪ್ರವಾದಿಯವರೇ ನೀರಿಲ್ಲದೆ ಬರಗಾಲದಿಂದ ಕೃಷಿ, ಜಾನುವಾರು,ಸಂಪತ್ತೆಲ್ಲಾ ನಾಶವಾಗುತ್ತಿದೆ.
ಮಕ್ಕಳು ಮರಣ ಹೊಂದಲಾರಂಭಿಸಿದರು.
ಆದ್ದರಿಂದ ಮಳೆ ಬೇಕು.ಮಳೆಗಾಗಿ ಪ್ರಾರ್ಥಿಸ ಬೇಕು.
ಅಷ್ಟರಲ್ಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಓ ಅಲ್ಲಾಹ್ ನಮಗೆ ಮಳೆ ಬೇಕು.
ನಮಗೆ ಮಳೆ ನೀಡು.
ಅಷ್ಟು ಹೇಳಿದ್ದು ತಡ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.
ಸಹಾಬಿಗಳು ಹೇಳಿದರು. ನಡುಬಿಸಿಲಲ್ಲಿ ಅಂದು ಮಸೀದಿಗೆ ಬಂದ ನಾವು ಮಳೆಯಲ್ಲಿ ನೆನೆದು ಮನೆಗೆ ಮರಳಿದೆವು.
ಧಾರಾಕಾರ ಮಳೆ ಮುಂದುವರಿದಿತ್ತು.
ಒಂದು ವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಅತಿವೃಷ್ಟಿ ತಲೆದೋರಿತು.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೇಳಿ ಪಡೆದ ಮಳೆಯಾಗಿರುವುದರಿಂದ ಅವರು ಹೇಳದೆ ನಿಲ್ಲದು ಎಂಬ ಮಟ್ಟದಲ್ಲಿ ಮುಂದು ವರಿಯುತ್ತಲೇ ಇತ್ತು.
ಮರು ಶುಕ್ರವಾರ ಅದೇ ವ್ಯಕ್ತಿ ಅಥವಾ ಬೇರೆ ವ್ಯಕ್ತಿ ಹೇಳುತ್ತಾರೆ. 
ಓ ಪ್ರವಾದಿವರ್ಯರೇ ಮಳೆ ಜಾಸ್ತಿ ಆಯಿತು. ಅತಿವೃಷ್ಟಿಯಿಂದ ನಾಶ ನಷ್ಟಗಳು ಸಂಭವಿಸಿದೆ.

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೈ ತೋರಿಸಿ ಯಾ ಅಲ್ಲಾಹ್ ಇಲ್ಲಿ ನಮಗೆ ಮಳೆ ಸಾಕು.ನಮ್ಮ ಸುತ್ತ ಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಬರಲಿ ಎಂದರು.ಅಷ್ಟರಲ್ಲೇ ಮದೀನಾ ಪಟ್ಟಣ ಮಳೆ ಮುಕ್ತವಾಯಿತು.

ಇದೆಲ್ಲಾ ಇತಿಹಾಸದಲ್ಲಿ ನಡೆದು ಹೋದ ಘಟನೆಗಳು.
ಮಾನವ ಸಮೂಹವನ್ನು ಅಲ್ಲಾಹನು ಅನೇಕ ವಿಪತ್ತುಗಳಿಂದ ಪರೀಕ್ಷೆಗೆ ಒಳಪಡಿಸಿದ್ದಾನೆ.
ಆದರೆ ಅದೆಲ್ಲವೂ ಒಂದು ಸಮಯ ಮಿತಿಯೊಳಗೆ ಪ್ರವಾದಿಗಳ,ಸಜ್ಜನರ ಮದ್ಯಪ್ರವೇಶಗಳಿಂದ ಕೊನೆಗಾಣಿಸಿದ ಅನುಭವಗಳು ಬೇಕಾದಷ್ಟಿದೆ.

ಆದರೆ ಇದೀಗ ಕೋವಿಡ್ 19 ನಿಂದ ಜಗತ್ತು ನಲುಗಿ ಹೋಗಿದೆ.ಪರಿಹಾರೋಪಾಯಗಳು ಭರದಿಂದ ಸಾಗುತ್ತಿದೆ.ಪ್ರಾರ್ಥನೆಗಳು,ದುಆಗಳು ನಿರಂತರ ನಡೆಯುತ್ತಲೇ ಇದೆ.ಆದರೆ ಪರಿಹಾರ ಮಾತ್ರ ಶೂನ್ಯಾತಿಶೂನ್ಯ.

ಹಾಗಾದರೆ ನಾವು ಎಡವಿದ್ದೆಲ್ಲಿ ?????

ಮುಂದುವರಿಯುವುದು

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...