Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ನಿರಂತರ ಪ್ರತಿಫಲ ಸಿಗುವ ಮೂರು ಕಾರ್ಯಗಳು-There are three tasks that get continuous reward


ಒಬ್ಬ ಮರಣ ಹೊಂದಿದರೆ ಅವನ ಕ್ರಿಯೆಗಳ ಸರಣಿ  ಕೊನೆಗೊಳ್ಳುತ್ತದೆ ನಾವು ಜೀವಂತ ವಿರುವಾಗ ನಮಾಝ್ ನಿರ್ವಹಿಸುತ್ತಿದ್ದೇವೆ ನಮ್ಮ ಕ್ರಿಯೆಗಳ ಹೆಸರಿನಲ್ಲಿ ಅದರ ಪ್ರತಿಫಲವು ಬರೆಯಲಾಗುತ್ತಿತ್ತು ನಾವು ಈ  ಲೋಕದಿಂದ ವಿದಾಯ ವಾದಮೇಲೆ ಕ್ರಿಯೆಗಳ ಸರಣಿಯೂ ಮುಕ್ತಾಯ ವಾದವು ನಾವು ಧಾನ ಮಾಡುತ್ತಿರುವಾಗ ಅದರ ಫ್ರತಿಫಲ ಲಬಿಸುತ್ತಿತ್ತು ನಾವು ಮರಣ ಹೊಂದಿದರೆ ಆ ಕಾರ್ಯ ಮಾಡಲಾರೆವು ನಾವು ಜನರ ಸಹಾಯಕ್ಕೆ ಮುಂದಾಗುತ್ತಿದ್ದೇವೆ ಜನರಿಗೆ ದಾರಿ ತೊರಿಸುತ್ತಿದ್ದೇವೆ ದಾರಿಯಲ್ಲಿರುವ ವಸ್ತುಗಳನ್ನು ಸರಿದು ದೂರವಿಡುತ್ತಿದ್ದೇವೆ ಬಾಯಾರಿಕೆ ಯಾದವನಿಗೆ ನೀರು ನೀಡುತ್ತಿದ್ದೇವೆ ಹಸಿದವನಿಗೆ ಊಟ ನೀಡತ್ತಿದ್ದೇವೆ ಒಬ್ಬ ನಗ್ನ ಅವಸ್ಥೆಯಲ್ಲಿ ಇದ್ದವನಿಗೆ ಬಟ್ಟೆ ನೀಡಿದೆವು ಜನರ ದುಖ ವನ್ನು ಆಲಿಸುತ್ತಾ ಜನರ ಸಹಾಯ ಮಾಡುತ್ತಿದ್ದೇವೆ ನೀವು ಹಜ್ ಕರ್ಮ ನಿರ್ವಹಿಸಿದಿರಿ ಉಮ್ರಾ ಮಾಡಿದಿರಿ ಕುರಾನ್ ಪಠಣ ಮಾಡಿದಿರಿ ಎಷ್ಟೊಂದು ಉತ್ತಮ ಕಾರ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ನಿರ್ವಹಿಸುತ್ತಿದ್ಥರು ಆದರೆ ಮರಣ ಸಂಬವಿಸಿದಾಗ ಇವೆಲ್ಲವೂ ಮುಕ್ತಾಯ ವಾದವು ಆದರೆ ಮೂರು ಕ್ರಿಯೆಗಳ ಪ್ರತಿಫಲ ನಿಮ್ಮ 
ಕ್ರಿಯೆಗಳ ಹೆಸರಿನಲ್ಲಿ ಸೇರಿಸಿ ಇಡಲಾಗುತ್ತದೆ ಈ ಮೂರು ಕಾರ್ಯ ನಿಮ್ಮ ಜೀವನದಲ್ಲಿ ಸದಾ  ಜೀವಂತವಾಗಿರಿಸಿ .ಮೊಟ್ಟ ಮೊದಲನೆಯದು( صدقه جاريه )
ಸದಖಾ ಜಾರಿಯ  (ನಡೆಯುತ್ತಿರುವ ದಾನ)ಮಸೀದಿ ನಿರ್ಮಾಣ ದಲ್ಲಿ ಧನ ಸಹಾಯ ಮಾಡುವುದು ಅಥವಾ ಆಸ್ಪತ್ರೆ ಅಥವಾ ನೀರಿನ ವ್ಯವಸ್ಥೆ ಇನ್ನಿತರ ಜನರಿಗೆ ಪ್ರಯೋಜನ ವಾಗುವ ಕಾರ್ಯಗಳಲ್ಲಿ ಧನ ಸಹಾಯ ಮಾಡುವುದು ಕೆಲವು ಕಾರ್ಯ ನೀವು ಮರಣ ಹೊಂದಿದ ನಂತರವೂ ಜನರು ಅದರಿಂದ ಪ್ರಯೋಜನ ಪಡೆಯಲು ಸುಲಭ ವಾಗುವ ಕಾರ್ಯಗಳು..ಇನ್ನೊಂದು
 (وعلم ينتفع به)
ಜನರಿಗೆ ಉಪಕಾರವಾಗುವ ಜ್ನಾನ  (ಇಲ್ಮ್)  ಇದು ಯಾವಾಗಲೂ ಮುಕ್ತಾಯ ಗೊಳ್ಳದ ನಿರಂತರವಾಗಿ ಕಾರ್ಯ ನಿರ್ವಹಿಸುವ ಒಂದು ಖಾತೆ  ಯಾಗಿದೆ ನಾನು ಇವತ್ತು ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರ ಭೋದನೆಯನ್ನು ನಿಮ್ಮ ಮುಂದೆ ಪ್ರಕಟಿಸುತ್ತಿದ್ದೇನೆ ಎಂದರೆ ನೀವು ಅದನು ಓದಿ ಕಲಿತು ಅಲ್ಲಾಹನ ಅನುಗ್ರಹ ದಿಂದ ನೀವು ಜೀವನದಲ್ಲಿ ಇಂತಹಾ ಒಳ್ಳೆಯ ಕಾರ್ಯ ಮಾಡಲು ಪ್ರಚೋದಿತರಾದರೆ ನನಗೆ ಅದರ ಪ್ರತಿಫಲ ಸಿಗುತ್ತದೆ ನನಗೆ ಕಲಿಸಿದ ನನ್ನ ಗುರುವಿನ ಆ  ಜ್ನಾನ ನೀವೆಷ್ಟು ಜನರು ಓದುತ್ತಿದ್ದೀರಿ ಅದರ ಒಂದು ಅಂಶವು ನನ್ನ ಗುರುವಿಗೆ ತಲುಪುವುದು ನನ್ನಂತಹ ಹಲವಾರು ಶಿಷ್ಯರ ಉತ್ತಮ ಕೆಲಸಗಳ ಪ್ರತಿಫಲವು ಗುರುವಿನ ಹೆಸರಿನಲ್ಲಿ ಬರೆಯಲ್ಪಡುತ್ತದೆ ಆ ಗುರುಗಳ ಪ್ರತಿಫಲ ಅವರ ಗುರುವಿಗೂ ಸಿಗುತ್ತದೆ ಹೀಗೆ ನಡೆಯತ್ತಾ ಕೊನೆಯದಾಗಿ ಅಬೂ ಹುರೈರ(رضي الله عنه (
ರವರ   ಖಾತೆಗೆ ಎಲ್ಲಾ ಪ್ರತಿಫಲ ಗಳು ಬರೆಯಲ್ಪಡುತ್ತದೆ ಮತ್ತು ಅವರ ಪ್ರತಿಫಲ ಲೋಕ ನಾಯಕರಾದ ಮುಹಮ್ಮದ್ ಮುಸ್ತಫ (صلي الله عليه وسلم )
ರವರ ಖಾತೆಗೆ ಜಮಾ ಆಗುವುದು ಹೀಗೆ ನೀವು ಕೂಡ ಇಂತಹಾ ಸಂದೇಶ ಗಳನ್ನು ಅನ್ಯರಿಗೆ ತಿಳಿಸಿದರೆ ಸರಣಿ ಮುಂದುವರಿಯುವುದು .ಮೂರನೆಯದು (وولد صالح يدعوا له)
ತನ್ನ ತಂದೆ ತಾಯಿಗೆ ಪ್ರಾರ್ತಿಸುವ ಸಜ್ಜನರಾದ (ಸಂತಾನ)ಮಕ್ಕಳು ಮಕ್ಕಳಿಂದ ತಂದೆ ತಾಯಿಗೆ ಸಿಗುವ ಪ್ರಾರ್ಥನೆ ಅದು (ಸದಖಾ ಜಾರಿಯ)(ನಡೆಯುತ್ತಿರುವ)ಧಾನ ವಾಗಿದೆ ಸಜ್ಜನರಾದ ಮಕ್ಕಳು ಯಾವಾಗಲು ತನ್ನ ತಂದೆ ತಾಯಿಯಂದಿರಿಗೆ ಪ್ರಾರ್ತಿಸದೆ ಇರಲಾರರು ಮಕ್ಕಳು ಐದು ಸಮಯದ ನಮಾಝ್ ನಿರ್ವಹಿಸುವಾಗಲೇ ಸಜ್ಜನರಾಗುವುದು  (ربنا اغفر لي ولوالديه(
ಅಲ್ಲಾಹುವೆ ನನಗೂ ನನ್ನ ತಂದೆ ತಾಯಿಗೆ ಕ್ಷಮಿಸು ಎಂಬ ಪ್ರಾರ್ಥನೆ ಯಾಗಿದೆ ..ಯೌವನ ವಯಸ್ಕ ಮುದುಕ ಎಲ್ಲಾ ವಯಸ್ಸಿನಲ್ಲಿಯೂ ಪ್ರಾರ್ಥನೆ ಸದಾ ನಿರಂತರವಾಗಿ ಪ್ರಾರ್ತಿಸುವುದು ಈ ಮೂರು ಕಾರ್ಯಗಳು ಮುಕ್ತಾಯ ಗೊಳ್ಳುವುದಿಲ್ಲ ಅಲ್ಲಾಹು ನಮಗೆ ಈ ಮೂರು ಕಾರ್ಯಗಳು ಮಾಡಲು ಅನುಗ್ರಹ ಲಬಿಸಲಿ.
ISLAMIC INFO

Comments

Popular Posts