(ನಮಾಝ್ )ಪ್ರಾರ್ಥನೆ ಮಾಡುವವರು ನಮಾಝಿನ ಆತ್ಮೀಯತೆಯಿಂದ ಬಾಗ್ಯಶಾಲಿ ಯಾದರೆ ಇದೊಂದು ಕೇವಲ ಮೇಲಿಂದ ಕೆಳಗೆ ನಡೆದಾಡುವ ಒಂದು ಪ್ರವರ್ತಿ ಅಲ್ಲ. ಬದಲಾಗಿ ಅಲ್ಲಾಹನ ಸಾನಿದ್ಯ. ಹರಕೆ ನೀಡುವ ಒಂದು ಪ್ರಾರ್ಥನೆ ಯಾಗಿದೆ. ಮತ್ತು ಅವರಿಗೆ ಈ ನಮಾಝ್. ಆ ಸ್ತಾನಮಾನ ನೀಡುತ್ತದೆ ಅಂದರೆ ನಮಾಝ್ ಮಾಡುವವನಿಗೆ ಭಾವನೆಯ ಗೌರವದ ಸ್ತಾನಮಾನ ನೀಡುತ್ತದೆ. ಮನುಷ್ಯನ ಪವಿತ್ರ ಅಂಗ ತಲೆಯಾಗಿದೆ. ಮಾತಾಡುವ ಶಕ್ತಿ ನಾಲಿಗೆ ತಲೆಯಲ್ಲಿ ನೋಡುವ ಶಕ್ತಿ ಕಣ್ಣು ತಲೆಯಲ್ಲಿ .ಕೇಳುವ ಶಕ್ತಿ ಕಿವಿ ತಲೆಯಲ್ಲಿ ಆಲೋಚಿಸುವ ಶಕ್ತಿ ಮೆದುಳು ತಲೆಯಲ್ಲಿ. ಪರಿಮಳ ಆಸ್ವಾದಿಸುವ ಮೂಗು ತಲೆಯಲ್ಲಿ. ಮತ್ತು ಆ ತಲೆ ಜಗದೊಡೆಯನ ಸನ್ನಿದಿಯಲ್ಲಿ. ಎಷ್ಟೊಂದು ಸುಂದರ ಮಹಿಮೆ. ಸಾಷ್ಟಾಂಗದಲ್ಲಿ ನಾವು ಪ್ರಾರ್ತಿಸುವುದು
ನಾಲಿಗೆಯಲ್ಲಿ ಪಠಿಸುವ ಆ ದುವಾ. (ಪ್ರಾರ್ಥನೆ) ಅಲ್ಲಾಹನನ್ನು ಪರಿಶುದ್ದನಾಗಿಸುವ ದುವಾ ಆಗಿದೆ. ಮನುಷ್ಯನು ಅಲ್ಲಾಹನ ಸನ್ನಿದಿಯಲ್ಲಿ ಯಾವ ಪುರಾವೆ ನೀಡುತ್ತಾನೆ ಅಂದರೆ. ಅವನ ಮುಂದೆ ತಲೆಬಾಗಿ. ನಿನಗಿಂತ ಮೇಲೆಯಾದವನು ಬೇರೆ ಯಾರಿಲ್ಲ ನನಗಿಂತ ಕೀಳಾದವನೂ ಬೇರೆ ಯಾರಿಲ್ಲ ಎಂಬ ಬಾವನೆ ಯಾಗಿರುತ್ತದೆ. ಇನ್ನು ಅವನು ನಮಾಝಿನ ಆತ್ಮೀಯತೆಯಿಂದ ಬಾಗ್ಯಶಾಲಿ ಯಾದರೆ ಸಾಷ್ಟಾಂಗ ದಿಂದ ತಲೆ ಮೇಲಕ್ಕೆತ್ತುವ ಮುಂಚಿತವಾಗಿ ಅವನ ಎಲ್ಲಾ ಹೊರೆಗಳನ್ನು ಅಲ್ಲಾಹನು ಕೆಳಗಿಳಿಸುವನು. ಅಂದರೆ ಅವನ ಎಲ್ಲಾ ಪಾಪಗಳನ್ನು ಮನ್ನಿಸಲಾಗುವುದು. ಅವನ ಮನಸ್ಸಿನಲ್ಲಿ ಪ್ರಕಾಶ ನೀಡುವನು ನಮಾಝ್ ಗುಲಾಮಗಿರಿಯ ಭಾವನೆ ನೀಡುತ್ತದೆ. ಅಲ್ಲಾಹನ ಮುಂದೆ ತಲೆಬಾಗುವುದರಿಂದ ದಾಸ ಒಬ್ಬ ಪರಿಪೂರ್ಣ ನಾದ ಸತ್ಯ ವಿಶ್ವಾಸಿಗನಾಗಿ. ಬೇರೆ ಯಾರ ಮುಂದೆಯೂ ತಲೆ ಬಾಗುವ ಅವಶ್ಯಕತೆ ಇರಲಾರದು. ತನ್ನ ಮಕ್ಕಳಿಗೆ ನಮಾಝಿನ ಪ್ರೀತಿ ನೀಡಿ. ಅಭ್ಯಾಸ ಮಾಡಿಸಿ ಕುತೂಹಲ. ನೀಡಿ ಮತ್ತು ಕಲ್ಪನೆ ನೀಡಿ. ನಮಾಝ್ ಮಕ್ಕಳಿಗೆ ಅಭ್ಯಾಸ ದಿಂದ ಪರಿಚಯ ವಾದರೆ ಯುವಕರಾಗುವಾಗ ಅವರಿಗೆ ಅದರ ಪರಿಪೂರ್ಣ ವಾಗಿ ಸ್ವೀಕರಿಸುವ ಮನಸ್ಸು. ಅವರ ಪ್ರಕ್ರತಿ ಯಲ್ಲಿ ನೆಲೆ ನಿಲ್ಲುವುದು. ಅವರ ಆರೋಗ್ಯದ ಖಾತರಿ ಯಾಗುವುದು. ಅವರ ಆಂತರಿಕ ಶುದ್ದಿಯ ಕಾರಣ ವಾಗುವುದು ನಮಾಝ್ ನ ಪರಿಚಯ ತನ್ನಿಂದ ತಾನೆ ಇದೆ ಅದು ನಮ್ಮನ್ನು ಶುದ್ದಗೊಳಿಸತ್ತದೆ. ಅಲ್ಲಾಹನ ಸಾಮಿಪ್ಯಕ್ಕೆ ಒಂದು ಪ್ರಯತ್ನ ವಾಗಿದೆ. ದಾಸ ಮತ್ತು ಒಡೆಯನ ಜಂಟಿ ಯಾಗಿದೆ. ನಮಾಝ್ ಅಂದರೆ ಅಲ್ಲಾಹು ನನ್ನನ್ನು ನೋಡುತ್ತಿದ್ದಾನೆ ಎಂಬ ಭಾವನೆ ಇರುವುದರಿಂದ. ಆತ್ಮೀಯ ಗೌರವ ನೀಡುತ್ತದೆ. ಇಂತಹಾ ಸಂದರ್ಭದಲ್ಲಿ ಮನುಷ್ಯನು ಜೀವನದಲ್ಲಿ ತುಂಬಾ ಜಾಗರೂಕತೆ ಯಿಂದ ಹೆಜ್ಜೆ ಇಡುತ್ತಾನೆ. ನಮಾಝ್ ಮಾಡಲು ಬಾಗ್ಯ ಲಬಿಸಿದವನು ಧನ್ಯನು.
ISLAMIC KANNADA
No comments:
Post a Comment