MUSTHAFA HASAN ALQADRI OFFICIAL : ಅಸೂಯೆಯಿಂದ ಬಸ್ಮವಾಗ ಬೇಡ ಮನುಜ-Don't be jealous

Translate

Sunday, June 28, 2020

ಅಸೂಯೆಯಿಂದ ಬಸ್ಮವಾಗ ಬೇಡ ಮನುಜ-Don't be jealous

ದ್ವೇಷ ಅಹಂಕಾರ ಅಸೂಯೆ  ಯಿಂದ ನಮ್ಮ ಹ್ರದಯ ಶುದ್ಧ ವಾದರೆ ಈ ಹ್ರದಯದಲ್ಲಿ ಸಾಹೋದರ್ಯದ ಸೌಂದರ್ಯ ಕಾಣುತ್ತದೆ ಆದರೆ ನಾವು ಹ್ರದಯದ ಕಣ್ಣನ್ನು ಹಾಳುಮಾಡಿದೆವು ಬೆಳಗ್ಗಿನಿಂದ ಸಂಜೆಯವರೆಗೆ ಎಂತಹಾ ಅಸೂಯೆ ಗಳನ್ನು ಹೊತ್ತು ತಿರುಗಾಡುತ್ತೇವೆ ನಮ್ಮ ಶಿಷ್ಟಾಚಾರ ವಿಭಿನ್ನ ನಮ್ಮ ಕುಟುಂಬ ವಿಭಿನ್ನ ಜನರೊಂದಿಗೆ ದ್ವೇಷದ ಲೋಕವನ್ನು ಸ್ರಷ್ಟಿಸಿ ಜೀವಿಸುತ್ತಿದ್ದೇವೆ ನಾವು ನಮ್ಮ  ಜೀವನದಲ್ಲಿ ಕಹಿ ಯನ್ನು ಧಾರಾಳವಾಗಿ ಶೇಕರಿಸಿ ಇಟ್ಟಿದ್ದೇವೆ ಆ ಕಹಿ ಮೊದಲು ನಮ್ಮ ಜೀವನ ವನ್ನೇ ನಾಶ ಮಾಡುತ್ತದೆ ನಮ್ಮ ಜೀವನ ಸುಖವಾಗಿ ಬಾಳಬೇಕೆಂದರೆ ಯಾವ ಸಮಸ್ಯೆಗಳಿಗೆ ಅವಕಾಶ ಇರಬಾರದು ಎಂದಾದರೆ ಮೊಟ್ಟ ಮೊದಲಿಗೆ ನಮ್ಮ ಹ್ರದಯವನ್ನು ಅಸೂಯೆ ಗಳಿಂದ ಶುದ್ದಿ ಕರಿಸ ಬೇಕು ಹ್ರದಯದ ಕನ್ನಡಿಯನ್ನು ಶುದ್ಧ ಮಾಡಬೇಕು ನಮ್ಮ ಆಂತರಿಕ ಲೋಕವನ್ನು ಉತ್ತಮ ಮಾಡಬೇಕು ಮನೆಯಲ್ಲಿ ಶುಚಿತ್ವ ವನ್ನು ಕಾಪಾಡುತ್ತೇವೆ ಆದರೆ ಹ್ರದಯದಲ್ಲಿ ಮಸಿ ಉಳಿಯಲು ಸ್ವೀಕಾರವೇ ಒಬ್ಬ ಸತ್ಯ ವಿಶ್ವಾಸಿಗೆ ನಿಮ್ಮ ಹ್ರದಯದಲ್ಲಿ ಅನುಕಂಪ ಉಂಟಾದರೆ ನೋಡಿ ಅಲ್ಲಾಹನು ನಿಮ್ಮ ಮೇಲೆ ಎಷ್ಟು ಕರುಣಿಯ ನೋಟ ಬೀರುವನು ಹೇಳತೀರದು 
ارحم من في الارض يرحمك من في السماء   
ಭೂಮಿಯಲ್ಲಿ ಇರುವವರಿಗೆ ಕರುಣೆ  ತೋರಿಸಿ ಆಕಾಶದಲ್ಲಿ ಇರುವವರು ನಿಮಗೆ ಕರುಣೆ ತೋರುವನು ಎಂಬ ಮಾತಿಗೆ ನಾವೆಷ್ಟು ಬೆಲೆ ನೀಡುತ್ತಿದ್ದೇವೆ. 
ಮೊಟ್ಟ ಮೊದಲಿಗೆ ನಾವು ನಮ್ಮ ಹ್ರದಯದ ಮನಸ್ಸಿನ ಶುದ್ಧಿಯ ಕೆಲಸ ನಿರ್ವಹಿಸಬೇಕಾಗಿದೆ ನಮ್ಮ ಮನಸ್ಸು ಹ್ರದಯ ಅಸೂಯೆ ಯಿಂದ ಶುದ್ಧವಾದರೆ ನಮ್ಮ ಶರೀರವೂ ಶುದ್ಧ ವಾಗುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು ನಮ್ಮ ಶರೀರದಲ್ಲಿ ಮಾಂಸದ ಒಂದು ತುಂಡು ಇದೆ ಅದು ಸರಿಯಾದರೆ ಎಲ್ಲವೂ ಸರಿಯಾಗುವುದು ಅದು ಹಾಳಾದರೆ ಪೂರ್ಣ ಶರೀರ ಹಾಳಾಗುತ್ತದೆ ಆವಾಗ ಪ್ರವಾದಿ ಯವರು ಹೇಳಿದರು ಕೇಳಿರಿ ಅದು ಹ್ರದಯ ವಾಗಿದೆ ಹ್ರದಯದ ತಿದ್ದುಪಡಿ ಅದು ಶರೀರದ ತಿದ್ದುಪಡಿ ಯಾಗಿದೆ ಹ್ರದಯದ ತಿದ್ದುಪಡಿ ಯಿಂದ ಒಬ್ಬನ ತಿದ್ದುಪಡಿ
ಒಬ್ಬನ ತಿದ್ದುಪಡಿ ಯಿಂದ ಸಮಾಜದ ತಿದ್ದುಪಡಿ ಸಮಾಜದ ತಿದ್ದುಪಡಿ ಯಿಂದ ಒಂದು ಸುಂದರ ವಾದ ಜೀವನದ ಚಿತ್ರಗಳು ಉಕ್ಕಿ ಬರುತ್ತದೆ ಅದೇ ನಮ್ಮ ಉದ್ದೇಶ ವಾಗಿದೆ ಆದರೆ ನಾವು ನಮ್ಮ ಹ್ರದಯವನ್ನು ಅಸೂಯೆಯಿಂದ ಗಟ್ಟಿ ಯಾಗಿಸಿದ್ದೇವೆ ಯಾರಿಗಾದರು ಅಲ್ಲಾಹು ಸಂಪತ್ತು ಗೌರವ ಮತ್ತು ಅಧಿಕಾರ ಅಥವಾ ಒಳ್ಳೆಯ ಸಾಮರ್ಥ್ಯ ನೀಡಿದರೆ ನಾವು ಸುಮ್ಮನೆ ಅವರಿಂದ ಅಸೂಯೆಯ ಬೆಂಕಿಯಲ್ಲಿ ಬಸ್ಮವಾಗುತ್ತೇವೆ. ಆದರಿಂದ ಹ್ರದಯದಲ್ಲಿ ಶುಚಿತ್ವ ವನ್ನು ಕಾಪಾಡಲು ಇಸ್ಲಾಮ್ ನಮಗೆ ಆದೇಶ ನೀಡಿದೆ .
ISLAMIC KANNADA

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...