Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ-The Rights of Relatives and Neighbors

ನಮ್ಮ ಸಮಾಜದಲ್ಲಿ ಕೆಲವರ ಅಭಿಪ್ರಾಯ ಹೀಗಿರುತ್ತದೆ  ನಾನು ಅಲ್ಲಾಹನ ಸ್ರಷ್ಟಿಗಳ ಸಹಾಯ ಮಾಡುತ್ತಿದ್ದೇನೆ ಅವರ ಕಷ್ಟ ಸುಖಗಳಲ್ಲಿ ನಾನು ಎಡೆ ಇಲ್ಲದೆ ಕಾರ್ಯ ನಿರತ ನಾಗಿದ್ದೇನೆ ನಾನು ಹಜ್ ಕರ್ಮ ಕೂಡ ನಿರ್ವಹಿಸಲಿಲ್ಲ ಅದರ ಹಣವನ್ನು ಬಡವರಿಗೆ ಧಾನ ಮಾಡಿದೆನು. ಜನರ ಮಧ್ಯೆ ಪ್ರಚಾರ ಮಾಡುತ್ತಾರೆ ಏನೆಂದರೆ ಕುರ್ಬಾನಿ ಮಾಡುವ ಹಣ ಕೂಡ ಬಡವರಿಗೆ ನೀಡಿದರೆ ಬಡವರಿಗೆ ನೆರವಾಗ ಬಹುದು ಅವರು ಜನರಿಗೆ ಸಹಾಯ ಮಾಡುವ ಭರದಲ್ಲಿ  ಇಸ್ಲಾಮಿನ ಸ್ಥಂಭ ಗಳನ್ನು   ಶರೀಅತಿನ ನಿಯಮ ವನ್ನು  ಅವಹೇಳಿ ಸುವರು. ಅಲ್ಲಾಹನ ಆರಾದನೆ ಯಲ್ಲಿ ತೊಡಗಿ ಕೊಂಡವರಿಗೆ ತನ್ನ ನೆರೆ ಹೊರೆಯವರನ್ನು ನೋಡುವ ಅವಕಾಶ ಕೂಡ ದೊರಕುವುದಿಲ್ಲ ನಿಮಗೆ ತಿಳಿದಿದೆಯೇ ಅಲ್ಲಾಹನು ಒಂದು ಗ್ರಾಮ  ವನ್ನು ನಾಶ ಮಾಡಲು ಇಚ್ಚಿಸಿದಾಗ ಆವಾಗ ಮಲಕ್ ಗಳೊಡನೆ  ಹೇಳಲಾಯಿತು ಈ ಗ್ರಾಮದಲ್ಲಿ ಒಬ್ಬ ನನ್ನ ಆರಾಧಕ ಇದ್ದಾನೆ ಪ್ರತಿ ಸಮಯದಲ್ಲಿಯೂ ಅವನು ನನಗೆ    ಸಾಷ್ಟಾಂಗ ದಲ್ಲಿ  ಕಳೆಯುವವನಾಗಿದ್ದಾನೆ ಅಲ್ಲಾಹು ಹೇಳುತ್ತಾನೆ  ಅವನ ನೆರೆ ಮನೆಯ ರಲ್ಲಿ  ನನ್ನ ದಾಸರು ಕಷ್ಟ ಗಳಿಂದ ಜೀವಿಸುತ್ತಿರುವಾಗ ಅವರ ಕಡೆ ತಿರುಗಿ ಕೂಡ ನೋಡದೆ ಇವನಿಗೆ ಕಿಂಚಿತ್ತೂ ಅವರ ಬಗ್ಗೆ ಕಾಳಜಿ ಇಲ್ಲದೇ ಬರೇ ಆರಾಧನೆ ಯಲ್ಲಿಯೇ ಜೀವಿಸುತ್ತಾನೆ ಆವಾಗ ಅಲ್ಲಾಹನು ಹೇಳುತ್ತಾನೆ  ಆ ಗ್ರಾಮ ಸಮೇತ ಇವನನ್ನು ಕೂಡ  ನಾಶ ಗೊಳಿಸಿರಿ ಎಂದು ಮಲಕ್ ಗಳಿಗೆ ಆಜ್ಞೆ ನೀಡುವನು ಅಲ್ಲಾಹನಿಗೆ ಆರಾಧನೆ ಯಲ್ಲಿ ಮಗ್ನರಾದರೆ ತನ್ನ ನೆರೆ ಮನೆಯವರನ್ನು ಕೂಡ ವಿಚಾರಿಸಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم  ರವರ ಪ್ರೀತಿಯಲ್ಲಿ ಅವರ ಅನುಯಾಯಿಗಳು ಹಲವು ತರಹದ ಪ್ರೀತಿಯನ್ನು ಪ್ರಕಟಿಸುತ್ತಿದ್ದರು ಅವರು ವುಲೂ (ಅಂಗಶುದ್ದಿ)ಮಾಡಿದ ನೀರನ್ನು ಕೂಡ ಬರ್ಕತ್ ಗಾಗಿ ಸೂಕ್ಷಿಸುತ್ತಿದ್ದರು ಆವಾಗ ಪ್ರವಾದಿ ಕೇಳಿದರು ನಿಮಗೆ ಹೀಗೆ ಮಾಡಲು ಯಾರು ಕಲ್ಪಿಸಿದರು ಆವಾಗ ಅನುಯಾಯಿಗಳು ಹೇಳುವರು ಓ ಪ್ರವಾದಿ ಯವರೆ  ಇದು ನಮ್ಮ ನಿಮ್ಮ ಮೇಲಿರುವ ಪ್ರೀತಿಯ ಸಂಕೇತ ವಾಗಿದೆ ಎಂದು. ಆದರೆ ಪ್ರವಾದಿ ಯವರು ಅದನ್ನು ನಿಶೇದಿಸಲಿಲ್ಲ      ಆವಾಗ ಪ್ರವಾದಿ ಯವರು ಹೇಳುತ್ತಾರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸಲು ಯೋಚಿಸಿದರೆ ಮತ್ತು ಅಲ್ಲಾಹು ಹಾಗು ಅವನ ರಸೂಲ್ ಅವರನ್ನು ಪ್ರೀತಿಸ ಬೇಕೆಂದರೆ ನೆರೆ ಮನೆಯವರ ಹಕ್ಕು ಬಾದ್ಯತೆ ಗಳನ್ನು ಪೂರೈಸಿರಿ ನಿಮ್ಮ ಮನೆಯಲ್ಲಿ ಪ್ರವಾದಿ ಯವರ ಗುಣಗಾನ ನಡೆಸಲಾಗುತ್ತದೆ ಆದರೆ ನೆರೆ   ಮನೆಯವನ ಮನೆಯಲ್ಲಿ ಕತ್ತಲೆ ಯಾಗಿದ್ದರೆ ನೀವು ಈ ವರ್ಷ ಸಮಾರಂಭ ಮಾಡಲಾಗದೆ ನೆರೆ ಮನೆಯವರ ವಿದ್ಯುತ್ ಬಿಲ್ ನೀವು ಪಾವತಿಸಿದರೆ ರಸೂಲರು ನಿಮ್ಮಿಂದ ಬಹಳ ಸಂತೋಷ ಪಡುವರು  ಆದರಿಂದ ಜೀವನದ   ಎರಡೂ   ಬಾಗ ವನ್ನು ಸಮಾನ ವಾಗಿರಿಸಿ ಬರೇ ಆರಾಧನೆಯ ನೆಪದಲ್ಲಿ ನೀವು ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ ಅಥವಾ ಜನರ ಸಹಾಯದ ಹೆಸರಿನಲ್ಲಿ ಶರೀಅತಿನ ನಿಯಮ ಗಳನ್ನು ಹಿಯಾಳಿಸಿರಿ )

وَكَذَٰلِكَ جَعَلْنَاكُمْ أُمَّةً وَسَطًا 
ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ)
ನೀವು ನಿಮ್ಮ ಜೀವನವನ್ನು ಮಧ್ಯಮ ವರ್ಗದಲ್ಲಿಡಿ 
ನಿಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಅಲ್ಲಾಹು ಸ್ಪಂದಿಸುವನ
ISLAMIC KANNADA

Comments

Popular Posts