Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಕಳ್ಳ ತ್ವರೀಕತ್ ನವರಿಂದ ಸತ್ಯದ ನಿಷೇಧವೆ?

ಒಂದು ವಿಷಯ ನೆನಪಿನಲ್ಲಿಡಬೇಕಾಗಿದೆ ಏನೆಂದರೆ ಅಲ್ಲಾಹು ಎಲ್ಲಾ ಕಾಲ ಘಟ್ಟಗಳಲ್ಲಿ ಪ್ರವಾದಿ ಗಳ ಶುದ್ಧ ಅಸ್ತಿತ್ವ ವನ್ನು ಹಾಗೂ ಅಲ್ಲಾಹನ ಇಷ್ಟ ದಾಸರಾದ ವಲಿಯ್ ಗಳ ಅಸ್ತಿತ್ವವನ್ನು ಕೂಡ ಸ್ರಷ್ಟಿಸಿದ್ದಾನೆ ಲೋಕ ಮಾನವರ ಸನ್ಮಾರ್ಗ ಕ್ಕಾಗಿ ಹಾಗೂ ಮಾರ್ಗದರ್ಶನ ಕ್ಕಾಗಿ ... ಪ್ರತೀ  ಕಾಲಘಟ್ಟಗಳಲ್ಲಿ ಸಜ್ಜನರು  ಅಲ್ಲಾಹನಇಷ್ಟ ದಾಸರಾಗಿ ಜನರ ಹಿತವನ್ನು ಬಯಸುವ ಜನರಿಗೆ ಸತ್ಯ ದರ್ಮದ ಕಡೆಗೆ ಸಂದೇಶ ನೀಡುವ ಜನರು ಹುಟ್ಟಿ ಬರುತ್ತಾ ಇದ್ದಾರೆ ಒಂದು ವಸ್ತುವನ್ನು ಮಳಿಗೆ ಯಲ್ಲಿ ತುಂಬಾ ಬೇಡಿಕೆ  ಇದ್ದರೆ  ಅದರ ನಕಲಿ  ಕೂಡ ಮಾರಾಟ ವಾಗಲು ತಯಾರಾಗುತ್ತಿದೆ ಇದರಿಂದ ಸತ್ಯ ವನ್ನು ನಿಷೇಧಿಸುವ  ಹಾಗಿಲ್ಲ ಇಂದು ಲೋಕದಲ್ಲಿ ಜನರು ತುಂಬಾ ಧೈರ್ಯದಿಂದ ಅವಲಿಯಾಗಳನ್ನು ನಿಷೇದಿಸುತ್ತಾರೆ ಅದರ ಉದಾಹರಣೆ ಯನ್ನು  ಸುಳ್ಳು  ತರೀಕತ್ ನ ಹೆಸರಿನಲ್ಲಿ ಒಂದು ವ್ಯಾಪಾರ ವನ್ನು ಕಾರ್ಯ ನಿರ್ವಹಿಸುತ್ತಿರುವ ಕಪಟ ವಿಶ್ವಾಸಿಗಳನ್ನು ತೋರಿಸಿ ಸತ್ಯ ವಲಿಯ್ ಯನ್ನು ನಿಷೇಧಿಸುವ  ತಂತ್ರ ಮುಗ್ಧ ಜನರ ಮುಂದೆ ಪ್ರಕಟಿಸುತ್ತಾರೆ ಕುತಂತ್ರ  ಕ್ವಾಕರಿ ಅಸ್ತವ್ಯಸ್ತತೆ ವಂಚನೆ ಯಿಂದ ಜನರ ಭಾವನೆಗಳಿಂದ ಆಟ ಆಡುವ ಜನರು ಈ ಕಾಲಘಟ್ಟದಲ್ಲಿಯೂ ಇದ್ದಾರೆ ಎಂದರೆ ಅದರರ್ಥ ಸತ್ಯ ವನ್ನು ನಿಷೇದಿಸುವುದು ಅಲ್ಲ. ಕಳ್ಳ ಪ್ರವಾದಿತ್ವವನ್ವು ವಾದಿಸುವವರು ಮುಂದಿನಿಂದಲೂ ಪ್ರಕಟವಾಗಿದ್ದಾರೆ ಎಂದಾದರೆ ಪ್ರವಾದಿತ್ವದ ಸತ್ಯತೆಯನ್ನು ನಿಷೇದಿಸಬೇಕೆ ಕಳ್ಳ ಪ್ರವಾದಿತ್ವ ವನ್ನು ವಾದಿಸುವವರಿಂದ ಪ್ರವಾದಿತ್ವ ವನ್ನು ನಿಷೇಧಿಸುವ ಹಾಗಿಲ್ಲ ಅದೇ ತರಹ ಕಳ್ಳ ತ್ವರೀಕತ್ ಗಳ ಕುತಂತ್ರದಿಂದ ಸತ್ಯ ವನ್ನು ಮರೆಮಾಚಲು ಸಾಧ್ಯವಿಲ್ಲ..ಯಾಕೆಂದರೆ ಪ್ರವಾದಿ ಗಳ ಅಸ್ತಿತ್ವ ಕಾಲ ಕಾಲಗಳಲ್ಲಿ ಜನರ ಸನ್ಮಾನ ಕ್ಕಾಗಿ ಉಪಯುಕ್ತ ವಾಗಿತ್ತು ವಿಭಿನ್ನ ಕಾಲಘಟ್ಟದಲ್ಲಿ ಪ್ರವಾದಿ ಯವರು ಬರುತ್ತಿದ್ದರು ಕೊನೆಯದಾಗಿ ನಮ್ಮ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಬಂದರು ಅವರ ನಂತರ ಯಾವ ಪ್ರವಾದಿಯೂ ಬರುವ ಹಾಗಿಲ್ಲ 
ನಮ್ಮ ಪ್ರವಾದಿಯ ನಂತರ ಪ್ರವಾದಿತ್ವದ ಬಾಗಿಲು ಮುಚ್ಟಿದವು ಆದರೆ ವಲಿಯ್ ಗಳ ಆಗಮನ ಸಜೀವ ವಾಗಿದೆ ಎಲ್ಲಿಯ ವರೆಗೆ ಅಂದರೆ ಇಮಾಮ್ ಮಹ್ದಿ ಯವರ ಆಗಮನದ ವರೆಗೆ ಚಾಲನೆ ಯಲ್ಲಿರುತ್ತದೆ ಮತ್ತು ಅವರ ನಂತರ ಲೋಕದ ಎಲ್ಲಾ ಕಡೆ ಅಪನಂಬಿಕೆ ವ್ಯಾಪಕವಾಗಿ ಹರಡುತ್ತದೆ ಈ ವಲಿಯ್ ರವರ ಆಗಮನದ ಬಾಗಿಲು ಮುಚ್ಚಲ್ಪಡುತ್ತದೆ ಆದರೆ ಅವುಲಿಯಾ ಗಳು ವಿಭಿನ್ನ ಸಮಯ ಗಳಲ್ಲಿ ಜೀವಂತ ವಾಗಿದ್ದರು ಅದರ ಸಾಧ್ಯತೆಯೂ ಇದೆ ಇಂದು ಯಾವ ಕಾರ್ಯಗಳ ಸಾದ್ಯತೆ ಇರುತ್ತದೆ ಅದರ ನಕಲಿ  ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಪ್ರವಾದಿತ್ವದ ಬಾಗಿಲು ಮುಚ್ಚಿದರೂ ಪ್ರವಾದಿತ್ವ ವನ್ನು ವಾದಿಸುವವರೂ ಇಂದೂ ಇದ್ದಾರೆ ಅಂದರೆ ಅವುಲಿಯಾಗಳ ಆಗಮನದ ಬಾಗಿಲು ತೆರೆದಿರುವಾಗ ಅವರನ್ನು ವಾದಿಸುವವರು ಕಳ್ಳರು ಇದ್ದಾರೆ ಇದೊಂದು ಅವಸ್ಥೆ ಗಳನ್ನು ಎದುರಿಸುವುದಲ್ಲದೇ ಸತ್ಯ ಮತ್ತು ಅಸತ್ಯ ವನ್ನು ಮನದಟ್ಟು ಮಾಡಬೇಕಾಗಿದೆ ನಮಗೆ ರೋಗ ಬಾದಿಸಿದಾಗ ಅದರ ಔಷಧಿ ಯನ್ನು ತೆಗೆದು ಕೊಳ್ಳಲು ನಾವು ಅಂಗಡಿಗೆ ಹೋಗುತ್ತೇವೆ ಅಲ್ಲಿ ಅಸಲಿ ನಕಲಿ ಔಷದಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ನಾವು ಅಸಲಿ ಔಷದಿಯನ್ನೇ ಆಯ್ಕೆ ಮಾಡುತ್ತೇವೆ ಅದಲ್ಲದೆ ಬೇರೆ ಏನು ಪಡೆಯಲಾರೆವು ಎಂದಾದರೆ ಧರ್ಮದ ವಿಷಯದಲ್ಲಿಯೂ ಸತ್ಯ ವನ್ನು  ಅರಿತುಕೊಂಡು ಜೀವಿಸುವುದು ಮುಖ್ಯ ವಾಗಿದೆ.
ISLAMIC INFO

Comments

Popular Posts