Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಪ್ರೀತಿ ಬರೇ ಹಕ್ಕುಗಳ ಹೆಸರಲ್ಲ-Love is not the name of a claim

ಪ್ರೀತಿ ಬರೇ ಹಕ್ಕುಗಳ  ಹೆಸರಲ್ಲ ಅದು ಪುರಾವೆಗಳಿವೆ ಅವಕಾಶ ನೀಡುತ್ತದೆ ನಾವು ಪ್ರೇಮದ ಬಗ್ಗೆ ಕಲಿತಿದ್ದೇವೆ 
العشق نار يحرق ما سوا الحبيب 

ಪ್ರೇಮ ಪ್ರೇಮಿಯ ಹೊರತು ಎಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ಬಿಡುತ್ತದೆ ಯಾವ ಆಸೆ  ಆಕಾಂಶೆ ಗಳು ಇರುವುದಿಲ್ಲ ತಾನು ತಾನಾಗಿಯೂ ಇರಲ್ಲ ಪ್ರೀತಿ ಇದೆ ಆದರೆ ನಾನಿರಲ್ಲ ಎಲ್ಲವೂ ನೀನೆ ಇರುವುದು ಎಲ್ಲಿ ನೋಡಿದರೂ ನೀನೆ ಅದೇ ತರಹ ಎಲ್ಲವನ್ನೂ ಬಿಟ್ಟು ಲೋಕ ನಾಯಕರಾದ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ಚೌಕಟ್ಟಿನಲ್ಲಿ  ಇಳಿದು ಬಾ ಒಮ್ಮೆ ಪ್ರವಾದಿಯ ಗುಲಾಮನಾಗಿ ನೋಡು ಪ್ರೀತಿಯ ಅರ್ಥ ಪೂರ್ಣ ಗೊಳ್ಳುತ್ತದೆ ನಿನ್ನ ಪ್ರೀತಿ ನಿನ್ನ ಸ್ನೇಹ ನಿನ್ನಿಂದ ನಿನ್ನ ಪ್ರವರ್ತಿ ಕೇಳುತ್ತದೆ ನಿನ್ನಲ್ಲಿ ನಿನ್ನ ಹಬೀಬರ ಜೊತೆ ನಿಷ್ಠೆ  ಕೇಳುತ್ತದೆ ಯಾರನ್ನು ಪ್ರೀತಿಸುತ್ತೀರೋ ಅವರ ಅನುಸರಣೆ ಪ್ರಾಮುಖ್ಯ ವಾಗಿದೆ ನಾನು ಮತ್ತು ನೀವು ಪ್ರವಾದಿ ಯವರನ್ನು ಪ್ರೀತಿಸು ವವರಾದರೆ ನಿಜವಾಗಿಯೂ ಪ್ರೀತಿಸುತ್ತೇವೆ ಇದರಲ್ಲಿ ಯಾವ ಸಂದೇಹವೂ ಇಲ್ಲ ಆದರೆ ಪ್ರೀತಿಯ ವಾಸ್ತವದ ಫಲ ಯಾವಾಗ ತಲುಪುತ್ತದೆ ಆವಾಗಲೇ ಪ್ರೀತಿ ಪರಿಪೂರ್ಣ ವಾಗುವುದು ಯಾಕೆಂದರೆ ಹಬೀಬರ ಇತಾಅತ್ ನಲ್ಲಿ ಜೀವನ ನಡೆಸಬೇಕು ಜನ ನಿಮ್ಮಲ್ಲಿ ಕೇಳಿ ನೀವು ಯಾರೆಂದು ಉತ್ತರಿಸುವುದಕ್ಕಿಂತ ನಿಮ್ಮ ಹಾವ ಬಾವ ನಿಮ್ಮ ಜೀವನ ಶೈಲಿ ನೋಡಿ ಜನ ಹೇಳಬೇಕಾಗಿದೆ ಪ್ರವಾದಿಯ ಗುಲಾಮ ಅಶಿಕೇ ರಸೂಲ್ ಬರುತ್ತಿದ್ದಾರೆ ಎಂದು ಹೇಳಬೇಕಾಗಿದೆ ಪ್ರಕಾಶ ಕಣ್ಣಲ್ಲಿಯಾದರೆ ಬೆಳಕು ಮುಖದಲ್ಲಾಗಿದೆ ಪ್ರವಾದಿ ಯವರ ಅನುಯಾಯಿಯ ಸ್ವಬಾವ ಎಂಥಹಾ ಸುಂದರ ವಾಗಿದೆ ಇಹದಲ್ಲೂ ಅವರ ಕಾರಣದಿಂದ ಬಾಗ್ಯ ವಂತ ರಾದರು ಪರಲೋಕ ದಲ್ಲಿಯೂ ಅವರ ಕರುಣೆಯ ಮಡಿಲಲ್ಲಿರುವರು ನೀವು ಪ್ರೀತಿಸುವವರ ಆಲೋಚನೆಯನ್ನು 
ಆಯ್ಕೆ ಮಾಡಿ ಅವರ ಆಲೋಚನೆಯೊಂದಿಗೆ ನೀವು ಸಂಬಂಧ ಬೆಳೆಸುವಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಪ್ರೀತಿಯ ಸಂಕೇತ ಅದು ನಾವು ದೀನಿಗಾಗಿ ನಮ್ಮನ್ನು ನಾವು ಸಿದ್ಧ ಪಡಿಸಿ ಕೊಳ್ಳಬೇಕಾಗಿದೆ ತನ ಮನ ಧನ ಗಳಿಂದ ನಾವು ಅವರಿಗಾಗಿ ಅರ್ಪಿತ ನಾಗಬೇಕಾಗಿದೆ ತನ್ನ ಜೀವನದ ಪ್ರತಿಯೊಂದು ಸಮಯವನ್ನು ಪ್ರವಾದಿ ಯವರಿಗಾಗಿ ಮುಡಿಪಾಗಿಸಿ ದೂರದಿಂದಲೆ ನೀವು ಪ್ರವಾದಿಯವರ ಒಬ್ಬ ನಿಷ್ಠಾವಂತ ಅನುಯಾಯಿ ಎಂದು ಭಾಸವಾಗ ಬೇಕಾಗಿದೆ.
ISLAMIC KANNADA

Comments

Popular Posts