Skip to main content

Featured

ಕಾಸ್ಟಲ್ ಕರ್ನಾಟಕದ ಮುಸ್ಲಿಂ ಸಮುದಾಯದಲ್ಲಿನ ಆತ್ಮಹತ್ಯೆ: ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನ

ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಒಂದು ತೀವ್ರ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿಬಿಟ್ಟಿದೆ, ದೈನಂದಿನ ಘಟನಗಳನ್ನು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ವರದಿ ಮಾಡಲಾಗುತ್ತಿದೆ. ಈ ಸಮಸ್ಯೆ ಬೇರೆ ಬೇರೆ ಸಮುದಾಯಗಳ  ಮೇಲೆ ಪರಿಣಾಮ ಬೀರುತ್ತಿದ್ದರೂ, ಮುಸ್ಲಿಂ ಸಮುದಾಯದ ಒಳಗಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಲು, ಈ ಪ್ರದೇಶದ ವಿಶಿಷ್ಟ ಸಾಮಾಜಿಕ ವಿನ್ಯಾಸ, ಆರ್ಥಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳನ್ನು ಪರಿಶೀಲಿಸಬೇಕು. ಲಭ್ಯವಿರುವ ವರದಿ  ಪ್ರಕಾರ ಆತ್ಮಹತ್ಯೆ ಡೇಟಾವನ್ನು ವಿಭಜಿಸುತ್ತಿಲ್ಲ, ಆದರೆ ವಿಸ್ತೃತ ಪ್ರದೇಶೀಯ ಪ್ರವೃತ್ತಿಗಳು ಅಡಗಿರುವ ಕಾರಣಗಳನ್ನು ಬೆಳಕಿಗೆಡಿಸುತ್ತವೆ. ಪ್ರದೇಶೀಯ ಸ್ಥಿತಿ: ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣದ ಏರಿಕೆ ಕಾಸ್ಟಲ್ ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ, ಪ್ರತಿದಿನ ಹಲವು ಘಟನಗಳನ್ನು ಜಿಲ್ಲೆಗಳಾದ್ಯಂತ ವರದಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹಣಕಾಸು ಚಿಂತೆ, ಕುಟುಂಬ ಕಲಹ, ಮಾನಸಿಕ ಆರೋಗ್ಯ ಹೋರಾಟಗಳು ಮತ್ತು ಸಾಮಾಜಿಕ ಕಲಹ ಎದುರಿಸುತ್ತಿರುವ ವ್ಯಕ್ತಿಗಳು ಸೇರಿದ್ದಾರೆ. ಹೆಚ್ಚಿನ ವಿವರಗಳಲ್ಲಿ ಧಾರ್ಮಿಕ ಗುರುತನ್ನು ಅಂದಾಜಿಸಲು ವರದಿಗಳು ನಿರ್ದೇಶಿಸುತ್ತಿಲ್ಲದಿದ್ದರೂ, ಈ ಪ್ರದೇಶದ ಮುಸ್ಲಿಂ ಕುಟುಂಬಗಳು ಒಂದು ಸಮಾನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿವೆ—ಮೀನುಧಾನ್ಯ, ಚಿ...

ಪ್ರವಾದಿ ರವರ ಸೌಂದರ್ಯ-The Beauty of Prophet Muhammad

ಮಕ್ಕಳಿಗೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರ ಸೌಂದರ್ಯದ   ಆತ್ಮೀಯತೆಯ  ಉತ್ತಮ ವರ್ತನೆಯ  ಉಲ್ಲೇಖ ತಿಳಿಸಿರಿ ಮನುಷ್ಯನ ಪ್ರಕ್ರತಿ ಯಲ್ಲಿ ಇರುವ ವಿಷಯ ಅದು ಮನುಷ್ಯನು ಸೌಂದರ್ಯದ ಕಡೆಗೆ ಸೆಳೆಯುವನು ಅದು ಪುಷ್ಪ ಗಳ ದಯೆ ಯಾಗಲಿ ಕಥೆಗಾರನ ವರ್ಣನೆಗಳಾಗಲಿ ಬೇಸಿಗೆಯ ಕಾರ್ಮೋಡ ಗಳಾಗಲಿ ಅಥವಾ ಗರುಡನ ಚಿಮ್ಮಿದ ಕಣ್ಣು ಗಳಿಂದಾಗಲಿ ಕೋಗಿಲೆಯ ಮಧುರ ಕಂಟ ಕೂಗಿನಲ್ಲಾಗಲಿ ಸೌಂದರ್ಯ ಎಲ್ಲೇ ಇರಲಿ ಹೇಗೆಯೇ ಇರಲಿ ಮನಸ್ಸಿನಲ್ಲಿ ತ್ರಪ್ತಿ ಉಂಟಾಗುತ್ತದೆ ಮನುಷ್ಯನು ಸ್ವಾಭಾವಿಕ ವಾಗಿ ಸೌಂದರ್ಯದ ಕಡೆಗೆ ಎಸೆಯಲ್ಪಡುತ್ತಾನೆ ಎಂದರೆ ಅವನು ಲೋಕ ನಾಯಕ ರಾದ ಪ್ರವಾದಿ ಮಹಮ್ಮದ್ ಮುಸ್ತಫ صلي الله عليه وسلم 
ರವರ ಕಡೆಗೆ ತನ್ನ ಮನಸ್ಸನ್ನು ತಿರುಗಿಸಲಿ ಲೋಕದಲ್ಲಿ ಸೌಂದರ್ಯ ಎಲ್ಲಾ ಕಡೆ ಇರ ಬಹುದು ಆದರೆ ಪ್ರವಾದಿ ಯವರಿಗೆ ನೀಡಲ್ಪಟ್ಟ ಸೌಂದರ್ಯ ನಾನು ವರ್ಣಿಸಲಾರೆನು ಪ್ರವಾದಿ ಯವರ ಕಾಲಡಿ ಯಲ್ಲಿರುವ  ಸೌಂದರ್ಯ ಕಾಲಡಿಯ ದೂಳಿನಿಂದ ಹೊರಡುವ ಆ ಸೌಂದರ್ಯ ನಕ್ಷತ್ರಪುಂಜ ಗಳಲ್ಲಿಯೂ ಸಿಗಲಾರವು ಬೀವಿ ಮೈಮೂನ ಬಿಂತ್ ಕರ್ದಮ್ رضي الله عنها 
ವಿವರಿಸುತ್ತಾರೆ ನನಗೆ ಪ್ರವಾದಿ ಮುಹಮ್ಮದ್ ಮುಸ್ತಫ  صلي الله عليه و سلم 
ರವರನ್ನು ನೋಡಲು ಆಸೆ ಆಯಿತು ನಾನು ನನ್ನ ತಂದೆಯೊಡನೆ ಪ್ರವಾದಿ ಯವರನ್ನು ನೋಡಲು ಹೊರಟೆ ಪ್ರವಾದಿ ಯವರು ಒಂಟೆಯ ಮೇಲೆ ಸವಾರಿ ಯಾಗಿದ್ದರು ಅವರ ಮುಖದಲ್ಲಿ ಸೌಂದರ್ಯ ವನ್ನು ನೋಡುತ್ತಾ ನನ್ನ ಕಣ್ಣುಗಳು ನೋಡುತ್ತಲೇ ಇತ್ತು ನನಗೆ ಅವರ ಸೌಂದರ್ಯ ನೋಡಲು ಸಾದ್ಯ ವಾಗಲಾಲಿಲ್ಲ   ನಾನು ನನ್ನ ದ್ರಷ್ಟಿಯನ್ನು ಅದಬ್  (ಮರ್ಯಾದೆ) ನಿಂದ ಕೆಳಗಿಳಿಸಿದೆ ನಾನು ಪ್ರವಾದಿ ಯವರ ಸೌಂದರ್ಯ ವನ್ನು ನೋಡದೆ ನನ್ನ ಕಣ್ಣುಗಳು ಅವರ ಪಾದದ ಕಡೆ ಬೀಸಿದವು ಬೀವಿ ಮೈಮೂನ 
رضي الله عنها 
ಹೇಳುತ್ತಾರೆ ಪ್ರವಾದಿ ಯವರ  ಕಾಲಿನ  ಬೆರಳಿನ ಸೌಂದರ್ಯ ವನ್ನು ನೋಡುತ್ತಾ ನೋಡುತ್ತಾ ಇಂದಿಗೂ ಆ ದ್ರಷ್ಯ ನನ್ನ ಮನಸ್ಸಿನಿಂದ ಇಳಿಯಲಿಲ್ಲ ಇದುವರೆಗೂ ಆ ನೆನಪು ಸದಾ ಭಾಕಿಯಾಗಿದೆ ಅವರ ಬೆರಳಿನ ಸೌಂದರ್ಯ ಇದಾದರೆ ಅವರ ಮುಖದ ಸೌಂದರ್ಯ ಹೇಗಿರ ಬಹುದು ನಿಮ್ಮ ಮಕ್ಕಳಿಗೆ ಪ್ರವಾದಿ ಯವರ ಪ್ರೀತಿ ಕಲಿಸಿ ಅವರಿಗೆ ಪ್ರವಾದಿ ಯವರ ಸೌಂದರ್ಯ ವಿವರಿಸಿ ಇದು ಪ್ರವಾದಿ ಯವರ ಸೌಂದರ್ಯದ ಒಂದು ಅಂಶ ಮಾತ್ರ ವಾಗಿದೆ ಇದು ಬರೇ ಬೆರಳಿನ ಸೌಂದರ್ಯದ ವಿವರ ವಾಗಿತ್ತು ಆ ಪ್ರಕಾಶಿಸುವ ಮುಖದ ವರ್ಣನೆ ಇನ್ನೂ ಮಾಡಲಿಲ್ಲ ಕೇಶದ ವರ್ಣನೆ ಆಗಲಿಲ್ಲ ಅಂಗಾಂಗಗಳು ಇನ್ನೂ ಬಾಕಿ ಇವೆ ಇಷ್ಟು ಕೇಳುವಾಗಲೇ ನಿಮ್ಮ( ಈಮಾನ್)ವಿಶ್ವಾಸದ ಈ ಪರಿ ಆದರೆ ಇನ್ನು ಪ್ರವಾದಿ ಯವರ ಶರೀರದ ಸೌಂದರ್ಯದ ಆ ವರ್ಣನೆ ಹೇಗಿರಬೇಕು.
ISLAMIC KANNADA

Comments

Popular Posts