Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ತಂದೆ ತಾಯಿಯ ಸೇವೆ ಯಲ್ಲಿ ಜಗತ್ಪ್ರಸಿದ್ದ ರಾದ ಮಹಾನ್-:

ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಬಳಿ ಒಬ್ಬರು ಬಂದು ಹೇಳಿದರು ರಸೂಲರೆ ನಾನು ಜಿಹಾದ್ ಮಾಡಲು ಹೊರಡ ಬೇಕೆಂದಿದ್ದೇನೆ ತಾವು ನನಗೆ ಅನುಮತಿ ನೀಡಿ ಎಂದರು ಆವಾಗ ಪ್ರವಾದಿ ಯವರು ಕೇಳಿದರು ನಿನ್ನ ತಂದೆ ತಾಯಿ ಜೀವಂತವಾಗಿ ಇದ್ದಾರೆಯೇ ಎಂದು ಕೇಳಿದಾಗ ಆ ಮನುಷ್ಯ ಹೌದು ಎಂದು ಉತ್ತರಿಸಿದರು ಆವಾಗ ಪ್ರವಾದಿ ಯವರು ಹೇಳಿದರು  ففيهنا فجاهد 
ಅವರಿಬ್ಫರ ಸೇವೆ ಮಾಡು ಅದು ನಿನ್ನ ಜಿಹಾದ್ ಆಗಿದೆ ಎಂದರು ತಂದೆ ತಾಯಿ ಯವರು ಕಷ್ಟ ದಿಂದಿರುವಾಗ ಅವರಿಗೆ ಸಹಾಯಿ ಆಗ ಬೇಕಾದವನು ದೀನಿ ಬೋಧನೆ ಅಥವಾ ಅವುಲಿಯಾ ಗಳ ಸನ್ನಿದಿಯಲ್ಲಿ ನೀನು ಕಾಲ ಕಳೆದರೆ ಅಲ್ಲಾಹನು ಯಾವಾಗಲೂ ತ್ರಪ್ತಿ ಪಡಲಾರನು ಪ್ರವಾದಿ ಯವರು  ಶ್ರೇಷ್ಠವಾದ  ಅಲ್ಲಾಹನ ದಾಸ ಆಗಿದ್ದಾರೆ ಅವರಲ್ಲದೆ  ಈ ಲೋಕದಲ್ಲಿ ಬೇರೆ ಯಾರಿದ್ದಾರೆ ಆದರೆ ಯಮನ್ ನಲ್ಲಿರುವ ಉವೈಸ್ ಕರ್ನಿ ಅಲ್ಲಾಹನ ರಸೂಲರ ಬಳಿ ಬರಲಿಲ್ಲ ಪ್ರವಾದಿ ಯವರು ತನ್ನ ಉಡುಪಿನ ಮೊದಲ ಬಟನ್ ಅನ್ನು ತೆರೆದಿಟ್ಟು ಹೇಳುತ್ತಾರೆ ಯಮನ್ ಕಡೆ ತನ್ನ ಮುಖವನ್ನು ತಿರುಗಿಸಿ ನೀಳವಾದ ಸ್ವಾಸವನ್ನು ಎಳೆದು ಹೇಳಿದರು ನಾನು ರಹ್ಭಾನ್ ನ ಸುಗಂಧ ಅಸ್ವಾದಿಸುತ್ತಿದ್ದೇನೆ  ಒಮ್ಮೆ ಪ್ರವಾದಿ ಯವರ ಅನುಯಾಯಿ ಗಳು ಕೇಳಿದರು ತಾವು ಯಾವಾಗಲೂ ಆ ಸುಗಂಧ ಗಾಳಿ ಅಸ್ವಾದಿಸುತ್ತೀರಿ ಆ ಮನುಷ್ಯನು ಕೂಡ ನಿಮ್ಮನ್ನು ತುಂಬಾ ಪ್ರೀತಿಸ ಬಹುದಲ್ಲವೆ ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಹೌದು ನನ್ನನ್ನು  ತುಂಬಾ ಷ್ರೀತಿಸುತ್ತಾರೆ ಎಂದರು ಆವಾಗ ಅನುಯಾಯಿಗಳು ಹೇಳುತ್ತಾರೆ ರಸೂಲರೆ ನಿಮ್ಮ ಪ್ರೀತಿಯಲ್ಲಿ   ಬಿಲಾಲ್ ಆಫ್ರಿಕದ ಹಬಷಾ ದಿಂದ ಬಂದರು ಸಲ್ಮಾನ್  ಫಾರಿಸ್ ನಿಂದ ಬಂದರು ಶುಹೈಬ್ ರೋಮನ್ ನಿಂದ ಬಂದರು ಇವರು ಯಮನ್ ನಿಂದ ಬರಲು ಸಾದ್ಯ ವಾಗಲಿಲ್ಲವೇ ಆವಾಗ ಪ್ರವಾದಿ ಯವರು ಹೇಳಿದರು ಉವೈಸ್ ಗೆ ವಯಸ್ಸಾದ ಕುರುಡಿಯೂ ಆದ ಒಬ್ಬ ತಾಯಿ ಇದ್ದಾರೆ ಅವರ ಸೇವೆ ಅವರನ್ನು ಇಲ್ಲಿಗೆ ಬರುವುದನ್ನು ತಡೆಯುತ್ತದೆ ಎಂದರು ಉವೈಸ್ ಕರ್ನಿ   رضي الله عنه 
ಪ್ರವಾದಿ ಯವರನ್ನು ಕಾಣಲಾಗಲಿಲ್ಲ ಆದರೆ ಖೈರು ತಾಬಿಯೀನ್ ಎಂದೇ ಹೆಸರು ವಾಸಿ ಯಾದರು ಅವರು ಬರಲಿಲ್ಲ ಆದರೆ ಪ್ರವಾದಿ ಯವರು ಅವರ ನೆನಪಿನಲ್ಲಿ ದುಖಿತರಾಗಿದ್ದಾರೆ ಪ್ರವಾದಿ ಯವರು ಹೇಳುತ್ತಾರೆ ಯಾರಾದರು ಹೋಗಿ ಉವೈಸ್ ನನ್ನ ಭೇಟಿಯಾಗಿ ಈ ಉಮ್ಮತ್ತಿನ ಪಾಪ ವಿಮೋಚನೆ ಗಾಗಿ ಪ್ರಾರ್ತಿಸಲು  ತಿಳಿಸಿ ಎಂದರು ತಂದೆ ತಾಯಿಯ ಸೇವೆ ಯಲ್ಲಿ ತನ್ನನ್ನು ತಾನು ಪೂರ್ಣ ವಾಗಿ ಅರ್ಪಿತನಾದವನ ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಎಂದು ಇದರಿಂದ ಕಚಿತ ವಾಯಿತು  ಒಂದು ರಿಪೋರ್ಟಿನ ಪ್ರಕಾರ ಒಬ್ಬ ಪ್ರತೀದಿನ ತನ್ನ ತಂದೆ ತಾಯಿಯವರಿಗಾಗಿ ಪ್ರಾರ್ಥಿಸಿದರೆ ಜೀವಂತ ವಾಗಿದ್ದರೂ ಮರಣ ಹೊಂದಿದರೂ ಈ ಕೆಲಸ ವನ್ನು ರೂಡಿಯಾಗಿಸಿದರೆ ಅವನ ರಿಝ್ಕ್ ನಲ್ಲಿ ಯಾವಾಗಲು ಬರ್ಕತ್ ಇರುತ್ತದೆ ಸದಾ  ತಂದೆ ತಾಯಿಯವರಿಗೆ ಪ್ರಾರ್ಥಿಸದವನು ಅಲ್ಲಾಹನ ಅನುಗ್ರಹ ಗಳಿಂದ ವಂಚಿತ ನಾಗುತ್ತಾನೆ
ISLAMIC KANNADA

Comments

Popular Posts