Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಬೀವಿ ಝೈನಬಾ ರವರ ಸಹಿಷ್ಣುತೆ ಯಾಗಿದೆ ಈ ಧುಖ ಬರಿತ ಕಾರವಾನ್ - Patience in Islam - The Story of Zainab bint Muhammad ...

ಕರ್ಬಲಾ ಯುದ್ಧ ಭೂಮಿಯಲ್ಲಿ ನಡೆದ ಒಂದು ಘಟನೆ ಮಹಿಳೆಯರಿಗೆ ಅತ್ಯಂತ ರೋಚಕ ವಾದ ಸಂದರ್ಭ ವಾಗಿದೆ ಅದು ಬೀವಿ ಝೈನಬಾ   رضي الله عنها   ರವರ ಸಹಿಷ್ಣುತೆ  ಯಾಗಿದೆ ಈ ಧುಖ ಬರಿತ ಕಾರವಾನ್ ವನ್ನು ಒಂದು ಗೂಡಿಸಿ ಕೂಫ ವರೆಗೂ ಮತ್ತು ಅಲ್ಲಿಂದ ಕಾದಿಸಿಯ್ಯ ಮತ್ತು ಅಲ್ಲಿಂದ ದಿಮಿಷ್ಕ್ ಮತ್ತು ಅಲ್ಲಿಂದ ಮದೀನತ್  ರಸೂಲುಲ್ಲಾಹ್ ವರೆಗೆ ತಲುಪುವುದು ಅವರಿಗೆ ನಾಯಕತ್ವ ನೀಡುವುದು ಅವರಿಗೆ ಅವಶ್ಯ ಸಾಮಾಗ್ರಿ ಗಳನ್ನು ಒದಗಿಸುವುದು ತುಂಬಾ ಕಷ್ಟ ಕರ ವಾದ ವಿಷಯ ವಾಗಿತ್ತು ಮಹಿಳೆಯರ ಸ್ತಾನಮಾನ ಇಸ್ಲಾಮಿನಲ್ಲಿ  ಮತ್ತು  ಮಹಾನ್  ಪುರುಷರ ಬಾಲ್ಯದಲ್ಲಿ ಅವರನ್ನು ಬೆಳೆಸುವ ಆ ಸಮಯ ತುಂಬಾ ವಿಶೇಷವಾದವು ಮೂಸಾ ನಬಿ عليه السلام 
ರವರ ಚರಿತ್ರೆಯನ್ನು ಓದಲು ಪ್ರಾರಂಭಿಸಿದರೆ ಮೊಟ್ಟ ಮೊದಲಿಗೆ ಅವರ ತಾಯಿಯಾದ  ಬೀವಿ  ಮರ್ಯಮ್ رضي الله عنها 
ರವರ ಹೆಸರು ಮುಂದೆ ಬರುತ್ತದೆ ಆ ಕಾಲದಲ್ಲಿ ಕ್ರೂರಿಯಾದ ಫಿರೋನ್ ಹುಟ್ಟಿದ ಮಕ್ಕಳನ್ನು ಕೊಂದು ಬಿಸಾಡುವ ಸಮಯ ದಲ್ಲಿ ಮೂಸಾ عليه السلام  ರವರ ಜೀವನ ಅಲ್ಲು ಚಲ್ಲಾಗಿರುತ್ತದೆ ಮೂಸಾ ರವರ ತಾಯಿಯಾದ ಮರ್ಯಮ್ ತನ್ನ ಕಂದಮ್ಮ ನನ್ನ ಒಂದು ಪೆಟ್ಟಿಗೆಯಲ್ಲಿ ಇಟ್ಟು ನೈಲ್ ನದಿಗೆ ಹಸ್ತಾಂತರಿಸುವ ಆ ದ್ರಷ್ಯ ಎಷ್ಟು ಕಠಿಣ ವಾಗಿರ ಬಹುದು ಮತ್ತೆ ನಂತರ ಮಗುವನ್ನು ತಾಯಿಯ ಮಡಿಲಿಗೆ ಕಳುಹಿಸಲ್ಪಡ ಲಾಗುತ್ತದೆ  ಈ  ಚರಿತ್ರೆಯನ್ನು ನೀವು ಅಲ್ಲಾಹನ ಪವಿತ್ರ ಗ್ರಂಥ ವಾದ ಕುರಾನ್ ನಲ್ಲಿ ಅನೇಕ ಸಲ ಓದಿರ ಬಹುದು ಅದೂ ಒಂದು ಮಹಿಳೆಯ ಸಾಧನೆ ಆಗಿತ್ತು .ಹಾಜರ ಬೀವಿ رضي الله عنها
ತನ್ನ ಪತಿಯನ್ನು ಬಿಟ್ಟು ಒಂಟಿಯಾಗಿದ್ದ ಸಮಯದಲ್ಲಿ ಯಾವ ತರಹ ತನ್ನ ಮಗನಾದ ಇಸ್ಮಾಯಿಲ್  عليه السلام 
ರವರನ್ನು ಬೆಳೆಸಿದರು ಆ ನಿರ್ಜನ ವಾದ ಕಾಡಿನೊಳಗೆ ಅವರ ಧೈರ್ಯಕ್ಕೆ ಸರಿ ಸಾಟಿ  ಇಂದಿಗೂ ಇಲ್ಲ ಅವರ ಆ ಚರಿತ್ರೆಯನ್ನು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚ ಅಕ್ಷರ ವಾಗಿ ಉಳಿದಿದೆ ಅವರೂ ಒಬ್ಬ ಮಹಿಳೆ ಯಾಗಿದ್ದರು ಆ ತಾಯಿ ಯಾಗಿದ್ದರು ತಂದೆಯ ಸ್ತಾನಮಾನ ವನ್ನು ಜಗಕ್ಕೆ ತಿಳಿಸಿ ಕೊಟ್ಟವರು ತಾಯಿ ತನ್ನ ಮಕ್ಕಳಿಗೆ ಗೌರವ ವನ್ನು ಕಲಿಸಿ ಕೊಟ್ಟಾಗ ಮಕ್ಕಳು ಲೋಕದ ನಾಯಕತ್ವ ವನ್ನು ಸ್ವೀಕರಿಸಲು ಮುಂದಾಗುವುದು ಈ ನನ್ನ ಮಾತನ್ನು ನೆನಪಿನಲ್ಲಿಡಿ ಮಹಿಳೆಯರ ಪಾತ್ರ ಇಸ್ಲಾಮಿನಲ್ಲಿ 
ಮರೆಯಲಾಗದ ಸವಿ ನೆನಪಾಗಿದೆ  ಪ್ರತಿಯೊಂದು ಸಫಲರಾದ ಪುರುಷರ ಹಿಂದೆ ಒಬ್ಬ ಮಹಿಳೆಯ ಕೈವಾಡ ಇದೆ ಎಂದು ಇಂದು ಹೇಳಲಾಗುತ್ತದೆ ಕರ್ಬಲಾ ಯುದ್ಧದ ಚರಿತ್ರೆ ಬೀವಿ    ಝೈನಬಾ   رضي الله عنها 
ರವರನ್ನು ನೆನೆಸದೆ ಆ ಚರಿತ್ರೆ ಪರಿಪೂರ್ಣ ವಾಗಲಾರವು  ಇಮಾಮ್ ಹುಸೈನ್ ಕರ್ಬಲಾ ಗೆದ್ದರು  ಝೈನಬಾ ರವರು ಶಾಮ್ ಗೆದ್ದರು ಝೈನಬಾ ರವರು ನಾಯಕತ್ವ ವನ್ನು ನಡೆಸಿದ ಆ ದ್ರಷ್ಯ ನಿಜಕ್ಕೂ ಅವರು ಅಲಿ ಯವರ ಪುತ್ರಿ ಯಾಗಿಯೂ  ಹಸನ್ ಹುಸೈನ್ ರವರ ಸಹೋದರಿಯಾಗಿಯೂ ನಿಭಾಯಿಸಿದರು ಪ್ರವಾದಿ صلي الله عليه وسلم 
ರವರ ರಕ್ತ
ವಾಗಿದೆ.  ಕರ್ಬಲಾ ಯುದ್ಧ ಭೂಮಿಯಲ್ಲಿ ನಡೆದ ಆ ಚರಿತ್ರೆಯನ್ನು ಯಾವಾಗಲೂ ನಾವು ಮರೆಯಕೂಡದು ಮಹಿಳೆಯರು ಯಾವಾಗ ವೆಲ್ಲ ತನ್ನ ಮುಂದಾಳುತ್ವ ವನ್ನು ಪ್ರದರ್ಶಿಸುತ್ತಾರೋ ಅಲ್ಲೆಲ್ಲ ಜನಾಂಗವೇ ಶ್ರಷ್ಟಿ ಯಾಗುವುದು ಕರ್ಬಲಾ ದಿಂದ ಮದೀನದ ವರೆಗೆ ಯಾವ ತರಹ ಜನರಿಗೆ ನಾಯಕಿ ಯಾಗಿ ತನ್ನ ಪರಿಚಯ ವನ್ನು ಲೋಕಕ್ಕೆ ಗುರುತು ಪಡಿಸಿ ಕೊಟ್ಟಿದ್ದು ಒಂದು ಸುಂದರ ವಾದ ಚರಿತ್ರೆಯಾಗಿದೆ.
ISLAMIC KANNADA

Comments

Popular Posts