MUSTHAFA HASAN ALQADRI OFFICIAL : ಇಸ್ಲಾಮಿನತ್ತ ಜಗತ್ತಿನ ಚಿತ್ತ. ಆದರೆ...?-The world's mood towards Islam. But ...

Translate

Sunday, July 12, 2020

ಇಸ್ಲಾಮಿನತ್ತ ಜಗತ್ತಿನ ಚಿತ್ತ. ಆದರೆ...?-The world's mood towards Islam. But ...

ಇಸ್ಲಾಮಿನತ್ತ ಜಗತ್ತಿನ ಚಿತ್ತ. ಆದರೆ...?
----------------------------------------

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
-----------------------------------------

ವಿಶ್ವದಲ್ಲಿ ವಿಸ್ಮಯಗಳನ್ನು ಸೃಷ್ಟಿಸಿದ ವಿಜ್ಞಾನಿಗಳು,ವಿಶ್ವ ಆರೋಗ್ಯ ಸಂಸ್ಥೆ.ವಿಶ್ವದ ವಿವಿಧ ರಾಷ್ಟ್ರ ಮೇಧಾವಿಗಳು ದಿನಕಳೆದಂತೆ ಇಸ್ಲಾಮಿನ ತತ್ವಸಿದ್ಧಾಂತಗಳೆಡೆಗೆ ಅಚ್ಚರಿಯಿಂದ ನೋಡುತ್ತಿರುವುದು ಕುತೂಹಲದ ಸಂಗತಿಯಾಗಿದೆ.
ಕಾಲಚಕ್ರದ ಉರುಳುವಿಕೆಯ ವೇಗಕ್ಕೆ ಸಮಾನವಾಗಿ ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ 
ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರತಿಪಾದಿಸಿದ ಪ್ರತಿಯೊಂದು ತತ್ವಗಳ ರಹಸ್ಯಗಳು ಒಂದೊಂದಾಗಿ ಹಗಲು ಬೆಳಕಿನಂತೆ ಬೆಳಕಿಗೆ ಬರುತ್ತಿರುವುದು ಯಾರಿಂದಲೂ ನಿಷೇಧಿಸಲಸಾಧ್ಯ.

ಇದೀಗ ಕೋವಿಡ್ 19 ಎಂಬ 
ಮಹಾಮಾರಿಯಿಂದ ಜಗತ್ತು 
ಕಂಗಾಲಾಗಿದೆ.
ಆರೋಗ್ಯ ಇಲಾಖೆ ಪರಿಹಾರ 
ಮಾರ್ಗೋಪಾಯಗಳ ಹುಡುಕಾಟದಲ್ಲಿ ರಾತ್ರಿ ಹಗಲು ಮಗ್ನವಾಗಿದೆ.
ಕೋಟಿಗಟ್ಟಲೆ ಹಣ ವ್ಯಯಿಸಿ ಅನೇಕ ಮಾರ್ಗಶೂಚಿಗಳನ್ನು ನಿರ್ದೇಶಿಸುತ್ತಿದೆ.
ಮಾನವನ ಆರೋಗ್ಯ ಹಾಗೂ 
ನೆಮ್ಮದಿಯನ್ನು ಗುರಿಯಾಗಿಟ್ಟು ಅನೇಕ ರೀತಿಯ ಪ್ರತಿರೋಧಕ ಮಾರ್ಗಗಳನ್ನು ಕಡ್ಡಾಯ ಗೊಳಿಸಿ ಮಹಾಮಾರಿಯ 
ನಿರ್ಮೂಲನೆಗೆ ಹರಸಾಹಸ ಪಡುತ್ತಿದೆ.

ಅವುಗಳಲ್ಲಿ ಮುಖ್ಯವಾದದ್ದು ಮಾಸ್ಕ್ ಧರಿಸುವುದು.
ಸ್ಯಾನಿಟೈಝರ್ ಉಪಯೋಗಿಸಿ 
ಆಗಾಗ ಕೈತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,
ಶುಚಿತ್ವ ಕಾಪಾಡುವುದು ಮೊದಲಾದವುಗಳಾಗಿವೆ.
ಅವುಗಳನ್ನೆಲ್ಲಾ ಕಟ್ಟುನಿಟ್ಟಾಗಿ ಪಾಲಿಸಬೇಕಾದದ್ದು ಜನಸಾಮಾನ್ಯರ ಮೇಲೆ ಕಡ್ಡಾಯವೂ ಅನಿವಾರ್ಯವೂ ಆಗಿರುತ್ತದೆ.ಇದರಲ್ಲಿ ತರ್ಕವಿಲ್ಲ.

ಆಗಾಗ ಕೈ ಮುಖಗಳನ್ನು ತೊಳೆಯುತ್ತಿರಲು ಮನೆಗಳ,ಮಾಲ್ ಗಳ,ಅಂಗಡಿ ಮುಂಗಟ್ಟುಗಳ,ಜನಸಂದಣಿ ಸ್ಥಳಗಳ 
ಪರಿಸರಗಳಲ್ಲಿ  ಸ್ಯಾನಿಟೈಝರ್ ಗಳನ್ನು ಅಳವಡಿಸಲಾಗಿದೆ.ಇದೆಲ್ಲಾ ಅಗತ್ಯ ತಾನೇ.

ಆದರೆ ಹದಿನಾಲ್ಕು ಶತಮಾನಗಳ ಹಿಂದೆ ಮನುಷ್ಯನ ಇಹಪರ ಸುಗಮ ಜೀವನ ಹಾಗೂ ಯಶಸ್ಸನ್ನು ಗುರಿಯಾಗಿಟ್ಟು ಪ್ರವಾದಿ ಮುಹಮ್ಮದ್ ಮುಸ್ತಫಾ ಪ್ರತಿಪಾದಿಸಿದ ಪ್ರತಿಯೊಂದು ಪ್ರತಿವಿಧಾನಗಳು ಪ್ರತಿ ಕಾಲದಲ್ಲೂ ಪ್ರಯೋಗಾರ್ಹ ಎಂಬುದು ಸಂಶಯಾತೀತ ಎಂದು ಈ ಅನುಭವಗಳು ಒತ್ತಿ ಹೇಳುತ್ತಿವೆ.

ವಾಸ್ತವದಲ್ಲಿ ಶುಚಿತ್ವ ಎಂಬ ಒಂದೇ ಒಂದು ವಿಷಯದಲ್ಲಿ ಇಸ್ಲಾಮಿನ ಪ್ರತಿಪಾದನೆಯನ್ನು ನಿಷ್ಪಕ್ಷ ಕಣ್ಣಿನಿಂದ ಸರಿಯಾಗಿ ಅವಲೋಕಿಸುವವರು ನಿಬ್ಬೆರಗಾಗದಿರಲು ಸಾಧ್ಯವೇ ಇಲ್ಲ.

ಮನುಷ್ಯನ ಇಹಪರ ಆರೋಗ್ಯದ ದೃಷ್ಟಿಯಿಂದ  ಇಸ್ಲಾಮಿನಲ್ಲಿ ಕಡ್ಡಾಯಗೊಳಿಸಲ್ಪಟ್ಟದ್ದಾಗಿರುತ್ತದೆ  ಐದು ಸಲದ ಕಡ್ಡಾಯ ನಮಾಝ್.   
ಇದು ನಿರ್ವಹಿಸ ಬೇಕಾದರೆ ಕಡ್ಡಾಯವಾಗಿ ಮಾಡಬೇಕಾದದ್ದಾಗಿದೆ ಅಂಗಶುದ್ಧಿ.

ಏನಿದು ಅಂಗಶುದ್ಧಿ?

ಮನುಷ್ಯ ಶರೀರದಲ್ಲಿ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಪ್ರತ್ಯಕ್ಷ ಗೊಳ್ಳುವ ಪ್ರತಿಯೊಂದು ಅಂಗಗಳನ್ನು ಸರಿಯಾಗಿ ನೀರು ಹರಿಸಿ ಮೂರು ಮೂರು ಬಾರಿ ತೊಳೆಯುದಕ್ಕಾಗಿದೆ ಅಂಗಶುದ್ಧಿ ಎನ್ನುವುದು. 

ಅಂದರೆ ದಿನದಲ್ಲಿ ಐದು ಸಲ ಪ್ರತ್ಯಕ್ಷ ಅಂಗಗಳನ್ನು ಕಡ್ಡಾಯವಾಗಿ ಸರಿಯಾಗಿ ನೀರು ಹರಿಸಿ ತೊಳೆಯಬೇಕು. ಅಲ್ಲದೆ ಪ್ರತಿಯೊಂದು ಅಂಗವನ್ನು ಮೂರು ಸಲ ತೊಳೆಯುವುದು ಪುಣ್ಯದಾಯಕ.

ಅಂಗಶುದ್ಧಿಯ ಪೂರ್ಣ ರೂಪ:-

ಮೊದಲು ಅಂಗಾಂಗಗಳಲ್ಲಿ ಇರುವ ಮಲಿನತೆ ಹಾಗೂ ಕೈಕಾಲುಗಳ ಉಗುರುಗಳ ಮಧ್ಯೆ ಸೇರಿಕೊಂಡಿರುವ ಮಾಲಿನ್ಯಗಳನ್ನು ಶುಚಿಗೊಳಿಸಬೇಕು.
ನಂತರ ಎರಡು ಅಂಗೈಗಳನ್ನು ಮಣಿಗಂಟಿನ ವರೆಗೆ ಮೂರು ಸಲ ತೊಳೆಯಬೇಕು. 
ನಂತರ ಹಲ್ಲುಗಳ ಒಳಹೊರ ಭಾಗಗಳನ್ನು 
ನಾಲಿಗೆಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಉಜ್ಜಿ ಶುಚಿಗೊಳಿಸಬೇಕು.
ನಂತರ ಬಾಯಿಯ ಒಳಭಾಗದಲ್ಲಿ 
ಸಂಪೂರ್ಣವಾಗಿ ನೀರು ಸರಿಸಿ 
ಉಗುಳುವುದರೊಂದಿಗೆ ಮೂಗಿನ ಒಳಭಾಗವನ್ನು ನೀರಿನಿಂದ ಶುಚಿಗೊಳಿಸಬೇಕು.
ಬಳಿಕ ಕಡ್ಡಾಯ ಶುದ್ಧಿಯ ನಿಯ್ಯತ್ತಿನೊಂದಿಗೆ ಮುಖದ ಎಲ್ಲಾ ಭಾಗಗಳನ್ನು ನೀರು ಸರಿಯಾಗಿ ಹರಿದು ಹೋಗುವ ರೀತಿಯಲ್ಲಿ ತೊಳೆಯಬೇಕು.ಆ ಬಳಿಕ ಎರಡೂ ಕೈಗಳನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ನೀರು ಸುರಿಸಿ ತೊಳೆಯಬೇಕು.ನಂತರ  ತಲೆಯನ್ನು ನೀರಿನಿಂದ ಸಂಪೂರ್ಣವಾಗಿ ಸವರಬೇಕು.ನಂತರ ಎರಡೂ ಕಿವಿಗಳನ್ನು ನೀರಿನಿಂದ ಸವರಬೇಕು.ಅದರ ಬಳಿಕ ಎರಡೂ ಕಾಲುಗಳನ್ನು ಮೊಣಕಾಲಿನ ವರೆಗೆ ನೀರು ಸುರಿದು ಚೆನ್ನಾಗಿ ತೊಳೆಯಬೇಕು.ಮೇಲೆ ಹೇಳಿರುವ ಪ್ರತಿಯೊಂದನ್ನೂ ಮೂರು ಮೂರು ಸಲ ಮಾಡಬೇಕು.
ಇದು ಒಂದು ಅಂಗಶುದ್ಧಿಯ ಸರಿಸಮಾರು ರೂಪವಾಗಿದೆ.

ಈ ಅಂಗಶುದ್ಧಿ ಐದು ಸಮಯದ ಕಡ್ಡಾಯ ನಮಾಝ್ ಗಳಲ್ಲಿ ಪ್ರತಿಯೊಂದು ನಮಾಝಿಗೆ ಕಡ್ಡಾಯವಾದರೆ ಒಂದು ದಿನದಲ್ಲಿ ಕನಿಷ್ಠ ಹದಿನೈದು 
ಸಲ ತೊಳೆಯಬೇಕಾಗುತ್ತದೆ.
ಇನ್ನು ಕಡ್ಡಾಯವಲ್ಲದ ಸುನ್ನತ್ 
ನಮಾಝ್ ಗಳು ಅದೆಷ್ಟೋ ಇವೆ.ಅದೆಲ್ಲವನ್ನು 
ಲೆಕ್ಕ ಹಾಕುವಾಗ ಇದರ ಲೆಕ್ಕ 
ಅದೆಷ್ಟೋ ದುಪ್ಪಟ್ಟಾಗುತ್ತದೆ.ಮಾತ್ರವಲ್ಲ 
ಈ ಅಂಗ ಶುದ್ಧಿಯಲ್ಲಿಯೇ ಎಲ್ಲಾ ಸಮಯದಲ್ಲೂ ಇರಬೇಕೆಂದಾಗಿದೆ ಇಸ್ಲಾಮ್ ಹೇಳುವುದು.
ಮಾಡಿದ ಈ ಅಂಗ ಶುದ್ದಿ ಭಂಗವಾದರೆ ಮತ್ತೆ 
ಅಂಗ ಶುದ್ಧಿ ಮಾಡಿ ಕೊಂಡೇ ಇರಬೇಕು..

ಇನ್ನು ಹಲ್ಲುಜ್ಜುವ ವಿಷಯಕ್ಕೆ ಬರುವುದಾದರೆ 
ಹಲ್ಲುಜ್ಜಲು ಮಿಸ್ವಾಕನ್ನು ಹಿಡಿಯುವ ರೀತಿಯಿಂದ ಹಿಡಿದು ಹಲ್ಲುಜ್ಜುವ ಪೂರ್ಣ ವಿಧಾನವನ್ನು ಇಸ್ಲಾಮ್ 
ಕಲಿಸಿ ಕೊಟ್ಟಿದೆ. 
ಮಾತ್ರವಲ್ಲ ಅಂಗ ಶುದ್ಧಿ ಸಮಯದಲ್ಲಿ ಹಲ್ಲುಜ್ಜಿದ್ದರೂ ಕೂಡಾ ಮತ್ತೆ ಪ್ರತಿಯೊಂದು ನಮಾಝ್ ಪ್ರಾರಂಭಿಸುವಾಗಲೂ ಹಲ್ಲುಜ್ಜ ಬೇಕು.ಅನ್ನಪಾನೀಯಗಳ ಮೊದಲೂ ನಂತರವೂ ಮನೆಯಿಂದ ಹೊರಹೋಗುವಾಗಲೂ ಒಳಬರುವಾಗಲೂ ನಿದ್ರಿಸುವಾಗಲೂ ನಿದ್ರೆಯಿಂದ ಎದ್ದಾಗಲೂ ಖುರ್ಆನ್ ಮುಂತಾದ ಉತ್ತಮ ಕಾರ್ಯಗಳನ್ನು ಪಠಿಸಲು ಪ್ರಾರಂಭಿಸುವಾಗಲೂ ಹೀಗೆ ಈ ಪಟ್ಟಿ ದೀರ್ಘವಾಗಿ ಹೋಗುತ್ತದೆ. ಒಂದು ದಿನದಲ್ಲಿ  ಲೆಕ್ಕವಿಲ್ಲದಷ್ಟು ಸಲ ಹಲ್ಲುಜ್ಜಬೇಕಾಗುತ್ತದೆ. 

ಹೀಗೆ ಹಲ್ಲುಜ್ಜಬೇಕೆಂದು ಮಾತ್ರವಲ್ಲ ಇದರಿಂದ ಅನೇಕ ರೋಗಗಳಿಂದ ಮುಕ್ತಿಯಿದೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುತ್ತಾರೆ.

ಇನ್ನು ಮಲಮೂತ್ರ ವಿಸರ್ಜನೆಗೆ ಕೂಡಾ ಸರಿಯಾದ ಕ್ರಮವನ್ನು ಇಸ್ಲಾಮ್ ಉಲ್ಲೇಖಿಸಿದೆ. ಮಲಮೂತ್ರ ವಿಸರ್ಜನೆಯಲ್ಲಿ ಎಲ್ಲಾ ಮಾಲಿನ್ಯಗಳು ಸುಗಮವಾಗಿ ಹೊರಹೋಗಲು ಸ್ವಲ್ಪ ಎಡಭಾಗಕ್ಕೆ ವಾಲಿ ಕೂರಬೇಕು.ಮಲಮೂತ್ರಗಳು ಸಂಪೂರ್ಣವಾಗಿ ಹೊರಟುಹೋಗಿದೆ ಎಂದು ಖಾತರಿಯಾದ ಮೇಲೆ ಮಲಮೂತ್ರ ದ್ವಾರಗಳನ್ನು ನೀರಿನಿಂದ ಸರಿಯಾಗಿ ತೊಳೆದು ಸ್ವಚ್ಛಗೊಳಿಸಬೇಕು.

ಇನ್ನು ಪತಿ ಪತ್ನಿಯರ ಲೈಂಗಿಕ ಕ್ರಿಯೆ,ಮಹಿಳೆಯರ ಋತು ಸ್ರಾವ,ಹಾಗೂ ನಂತರದ ಶುದ್ಧಿಗಳಲ್ಲಿಯೆಲ್ಲಾ ಬಹಳ ವೈಜ್ಞಾನಿಕ ರೂಪು ರೇಖೆಗಳನ್ನು ಇಸ್ಲಾಮ್ ನೀಡಿರುವುದು ಕಾಣಬಹುದು.ಅದೆಲ್ಲಾ ಬರೆದರೆ ಬರಹ ದೀರ್ಘವಾಗ ಬಹುದು.

ಹೀಗೆ ಶುಚಿತ್ವಕ್ಕೆ ಸಂಭಂದಿಸಿ ಇಸ್ಲಾಮಿನ ದೀರ್ಘದೃಷ್ಠಿ ಸರಿಸಾಟಿ ಇಲ್ಲದ್ದಾಗಿದೆ.
ಯಾಕೆಂದರೆ ಇಸ್ಲಾಮ್ ಎನ್ನುವುದು ಸೃಷ್ಟಿಕರ್ತನಾದ ಅಲ್ಲಾಹನ ನೀತಿ ಸಂಹಿತೆ ಯಾಗಿದೆ.ಮನುಷ್ಯನ ಸೃಷ್ಟಿಕರ್ತನೂ ಅಲ್ಲಾಹನಾಗಿರುತ್ತಾನೆ.ಒಂದು ವಸ್ತುವಿನ ನಿರ್ಮಾಪಕನೇ ಅದರ ನೀತಿ ನಿಯಮಗಳನ್ನು ಹೇಳಬೇಕಾದವನು. ಮನುಷ್ಯನ ಸೃಷ್ಟಿಕರ್ತ ಅಲ್ಲಾಹನು ಆಗಿರುವುದರಿಂದ ಮನುಷ್ಯನ ನೀತಿ ನಿಯಮಗಳನ್ನು ಅವನೇ ರೂಪಿಸಿದರೆ ಅದು ಪರಿಪೂರ್ಣ.

ಈ ಸುಂದರವೂ ಸರಳವೂ ಆರೋಗ್ಯ ಪೂರ್ಣವೂ ಆಗಿರುವ ಮಾರ್ಗಗಳನ್ನು ಸಂಪೂರ್ಣ ಅನುಕರಿಸುವ ಒಬ್ಬ ನೈಜ ಮುಸಲ್ಮಾನನ್ನು ಯಾವ ಮಹಾಮಾರಿ ವೈರಸ್ಸಿಗೂ ಸೋಲಿಸಲು ಸಾಧ್ಯವೇ ಇಲ್ಲ.

ಆದರೆ ಅಂತಹ ಮುಸಲ್ಮಾನ ಎಲ್ಲಿ ಎಂಬುದೇ 
ಕುತೂಹಲದ ಸಂಗತಿ.

ಮುಸಲ್ಮಾನನು ಪ್ರವಾದಿ ಮುಹಮ್ಮದ್ ಸಲ್ಲಾಹು 
ಅಲೈಹಿ ವಸಲ್ಲಮರನ್ನು 
ಅಕ್ಷರಶಃ ಅನುಸರಿಸುವವ ನಾಗಿರುತ್ತಿದ್ದರೆ 
ಇವತ್ತು ಸಮಸ್ಯೆಗಳೇ ಇರುತ್ತಿರಲಿಲ್ಲ.
ಮಾತ್ರವಲ್ಲ ಯಾವುದೇ ಮಡಿವಂತಿಕೆಯ ರೂಪುರೇಷೆಯಿಲ್ಲದೆ ಮಡಿವಂತಿಕೆಯ ವಕ್ತಾರರು ನಾವೆಂದು ಮೆರೆದಾಡುವ 
ಕೆಲವರಿಗೆ 
ಮುಸ್ಲಿಮರನ್ನು ಹಾಗೂ 
ಮುಸ್ಲಿಮ್ ಗಲ್ಲಿಗಳನ್ನು ಹೀಯಾಳಿಸುವ ಯಾವುದೇ ಅವಕಾಶ ಲಭಿಸುತ್ತಿರಲಿಲ್ಲ.
ಆದರೆ ಇಂದಿನ ಹೆಚ್ಚಿನ ಮುಸಲ್ಮಾನರು ಶುಚಿತ್ವವೂ
ಸೇರಿದಂತೆ ಇಸ್ಲಾಮಿನ ನೈಜ ತತ್ವಸಿದ್ಧಾಂತಗಳನ್ನು ಕೈಬಿಟ್ಟು ತಮಗೆ ಲಭಿಸಬೇಕಾದ ಕೀರ್ತಿಗಳನ್ನೆಲ್ಲಾ ಕೈಚೆಲ್ಲಿದವರಾಗಿರುತ್ತಾರೆ.
ಇದರಿಂದಾಗಿಯೇ  ಮುಸಲ್ಮಾನನನ್ನು ಎಲ್ಲಾ 
ಕಡೆಯಲ್ಲೂ ಗುರಿ ಮಾಡುವಂತಾಗಿದೆ.

وَلَا تَهِنُوا وَلَا تَحْزَنُوا وَأَنتُمُ الْأَعْلَوْنَ إِن كُنتُم مُّؤْمِنِينَ

 ಇದಾಗಿದೆ ಪವಿತ್ರ ಖುರ್ಆನ್ ಹೇಳುತ್ತಿರುವುದು. "ನೀವು ನೈಜ ಸತ್ಯವಿಶ್ವಾಗಳಾಗಿದ್ದರೆ ನೀವೇ ಅತ್ಯುನ್ನತರು.ನೀವು ನಿಂದನೆಗೆ ಒಳಗಾಗ ಬೇಕಾಗಿಲ್ಲ. ವ್ಯಸನ ಪಡಬೇಕಾಗಿಯೂ ಇಲ್ಲ "

ನೈಜ ಸತ್ಯ ವಿಶ್ವಾಸಿಯಾಗುವುದೆಂದರೆ ಇಸ್ಲಾಮಿನ ತತ್ವ ಸಿದ್ಧಾಂತಗಳನ್ನು ಹಾಗೂ ಆಚಾರವಿಚಾರ ಗಳನ್ನು ಸಂಪೂರ್ಣವಾಗಿ ಮೈಗೂಡಿಸಿ ಕೊಳ್ಳುವುದಾಗಿದೆ.

ಇದನ್ನೇ ಖ್ಯಾತ ಚಿಂತಕ ಜಾರ್ಜ್ ಬರ್ನಾರ್ಡ್ ಷಾ ಕೂಡಾ ಹೇಳಿದ್ದು.

Islam Is The Best Religion ; Muslims Are The Worst Followers ~    George Bernard Shaw

ಇಸ್ಲಾಮ್ ಅತ್ಯುತ್ತಮ ಧರ್ಮ ಅನುಯಾಯಿಗಳಾದ ಮುಸ್ಲಿಮರು ಮಾತ್ರ ಸರಿಯಿಲ್ಲ ಎಂದಾಗಿದೆ.

ಅಂದರೆ ಮುಸ್ಲಿಮ್ ನಾಮಧಾರಿಗಳಾಗಿ ಇಸ್ಲಾಮಿನ ಆಶಯ ಆದರ್ಶ ಗಳಿಂದ ಸಂಪೂರ್ಣವಾಗಿ ವಿಮುಖರಾದ ಅನುಯಾಯಿಗಳ ಕುರಿತಾಗಿದೆ ಈ ಹೇಳಿರುವುದು.


ಸಮಗ್ರವೂ ಸರ್ವಕಾಲಿಕವೂ ಆದ ಇಸ್ಲಾಮಿನ ತತ್ವ ಸಿದ್ಧಾಂತಗಳೆಡೆಗೆ ಜಗತ್ತು ಆಕರ್ಷಿತವಾಗುತ್ತಿರುವಾಗ ಈ ಇಸ್ಲಾಮನ್ನು ಸಂಪೂರ್ಣವಾಗಿ ಮೈಗೂಡಿಸಿ ಕೊಂಡ ನೈಜ ಮುಸಲ್ಮಾನನು ಎಲ್ಲಿ? 
ಎಂದು ಜಗತ್ತು ಹುಡುಕುತ್ತಿದೆ.
ಹೌದು
ಮುಸಲ್ಮಾನನೇ ನೀನೆಲ್ಲಿ???

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...