ನ್ಯಾಯ ನೀತಿ ಇಲ್ಲದ ದೇಶ ಅಕ್ರಮ ದರೋಡೆ ವ್ಯಾಪಕ ವಾದ ದೇಶ ಯಾವಾಗಲೂ ಮುಂದೆ ಸಾಗಲಾರದು ಅಲ್ಲಿ ಯಾವಾಗಲೂ ಐಕ್ಯತೆ ಶಾಂತಿ ಸಮಾಧಾನಾ ನೆಲೆ ನಿಲ್ಲಲು ಸಾಧ್ಯವಿಲ್ಲ ಆ ದೇಶ ಯಾವಾಗಲು ತನ್ನ ಕಾಲಲ್ಲಿ ನಿಲ್ಲುವ ಸಾಮರ್ಥ್ಯ ವಿರುವುದಿಲ್ಲ ಇಂದು ನಾವು ಅಧಿಕ ವಾಗಿ ಕೇಳಲ್ಪಡುವ ಒಂದು ವಾಕ್ಯ
ಕಡಿಮೆ ಬೆಲೆಯ ನ್ಯಾಯ. ಇಸ್ಲಾಮ್ ಯಾವಾಗಲೂ ಕಡಿಮೆ ಬೆಲೆಯ ಮಾತು ಆಡಲಾರವು ಇಸ್ಲಾಮ್ ಉಚಿತ ಬೆಲೆಯ ಮಾತು ಆಡುತ್ತದೆ ಪ್ರತಿಯೊಬ್ಬನ ಬಾಗಿಲ ಬಳಿ ನ್ಯಾಯ ದೊರಕಬೇಕು ಅದಾಗಿದೆ ಇಸ್ಲಾಮಿನ ನೈಜ್ಯತೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم
ರವರ ಕಾಲದಲ್ಲಿ ನಡೆದ ಒಂದು ಘಟನೆ ಅದು ಇಸ್ಲಾಮಿನ ನೀತಿಯನ್ನು ಎತ್ತಿ ಹಿಡಿದು ಲೋಕಕ್ಕೆ ಸಮರ್ಪಣಿ ಮಾಡಿದ ಸತ್ಯ ಘಟನೆ..ಬನೂ ಅಸ್ವದ್ ಎಂಬ ಗೋತ್ರದ ಒಬ್ಬ ಮಹಿಳೆ ಕಳ್ಳತನ ಮಾಡುತ್ತಾರೆ ಆ ಮಹಿಳೆಯ ಕೈ ಕಡಿಯುವ ಆದೇಶ ಹೊರಡಿದ ಸಂದರ್ಭದಲ್ಲಿ ಬಹು ಮಾನ್ಯರಾದ ಉಸಾಮ ಬಿನ್ ಝೈದ್ رضي الله عنه ರವರ ಮುಖಾಂತರ ಪ್ರವಾದಿ ಯವರಲ್ಲಿ ಶಿಫಾರಿಸು ಮಾಡಲಾಗುತ್ತದೆ ಏನೆಂದರೆ ಈ ಗೋತ್ರದ ಜನರು ಹೊಸತಾಗಿ ಇಸ್ಲಾಮಿನ ಪ್ರಕಾಶದತ್ತ ಬಂದವರು(ಇಸ್ಲಾಮ್ ಸ್ವೀಕರಿಸಿದವರು) ಆದರಿಂದ ಮಹಿಳೆಯ ಕೈ ಕಡಿದರೆ ಆ ಕಾರಣದಿಂದ ಇಸ್ಲಾಮಿನ ಬಗ್ಗೆ ತಪ್ಪು ಕಲ್ಪನೆ ಗಳು ಉದ್ಬವಿಸಬಹುದು ಅದು ಉತ್ತಮ ವಲ್ಲ ಆದರಿಂದ ಶಾಂತಿಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ಹೇಳಲಾಯಿತು ಆವಾಗ ಪ್ರವಾದಿ ಯವರು ಬಿಲಾಲ್ رضي الله عنه ರವರಿಗೆ ಸಭೆ ನಡೆಸಲು ಆದೇಶಿಸುತ್ತಾರೆ ಜನರು ಒಂದು ಗೂಡುತ್ತಾರೆ ಆವಾಗ ಪ್ರವಾದಿ ಯವರು ಮಿಂಬರಿನಲ್ಲಿ ನಿಂತು ಹೇಳಿದರು ನಿಮಗಿಂತ ಮುಂಚಿನ ಅನುಯಾಯಿಗಳು ಯಾಕೆ ನಾಷವಾದರು ಅಂದರೆ ಅವರಲ್ಲಿ ಬಡವರಿಗೆ .ಹಾಗೂ ಶ್ರೀಮಂತ ರಿಗೆ ವಿಭಿನ್ನ ವಾದ ನ್ಯಾಯಗಳಿದ್ದವು ಆವಾಗ ಹೇಳಲಾಯಿತು ನನ್ನ ಸಮುದಾಯ ದಲ್ಲಿ ಇದಕ್ಕೆ ನಾನು ಅವಕಾಶ ನೀಡಲಾರೆನು ಆವಾಗ ಹೇಳಿದರು ನನ್ನ ಪುತ್ರಿ ಯಾದ ಫಾತಿಮಾ ಕೂಡ ಕಳ್ಳ ತನ ಮಾಡಿದರೆ ನಾನು ಅವಳ ಕೈ ಕಡಿಯುವ ಆದೇಶ ನೀಡುವೆನು ಎಂಬ ಐತಿಹಾಸಿಕ ಹೇಳಿಕೆಯನ್ನು ನೀಡಿದರು ಎರಡು ನ್ಯಾಯ ನೀತಿ ಯಾವುದೇ ದೇಶ ಆಗಲಿ ರಾಷ್ಟ್ರ ಆಗಲಿ ಅಥವಾ ಯಾವುದೇ ಸಂಘ ಸಂಘಟನೆ ಯಾಗಲಿ ಅವರಲ್ಲಿ ಯಾವಾಗಲು (ಬರ್ಕತ್)ಅನುಗ್ರಹ ಇರುವುದಿಲ್ಲ ಇಂದು ಜೈಲಿನಲ್ಲಿಯೂ ವಿಧವಿಧ ವಾದ ವಿಭಿನ್ನ ಸೌಲಭ್ಯಗಳ ಸರಮಾಲೆ ಇದೆ ಬಡವರಿಗೊಂದು ಶ್ರೀಮಂತರಿಗೊಂದು ಎಂಬ ಬೇಧ ಬಾವದ ನೀತಿ ನಿಯಮಗಳು.ಹುಟ್ಟಿಕೊಂಡಿದೆ ಬಡವನ ಚರ್ಮ ಸುಳಿಯಲ್ಪಡುತ್ತದೆ ಬಡವನು ಸ್ವಾಸ ಕೂಡ ಸರಿಯಾಗಿ ಸ್ವಾಸಿಸಲಾರನು ಶ್ರೀಮಂತರು ಜೈಲಿನಲ್ಲಿಯೂ ರಾಜರ ಹಾಗೆ ವಾಸಿಸುತ್ತಾರೆ ಅವರಿಗೆ ನೆಂಟರ ಹಾಗೆ ಸುಖ ನೀಡಲಾಗುತ್ತದೆ ನ್ಯಾಯಾಲಯ ದಲ್ಲಿ ನಡೆಯುವ ಕಾರ್ಯ ಅಂದರೆ ಒಂದು ಕಾಲವಿತ್ತು ನಿನ್ನ ಕೇಸಿಗೆ ಒಬ್ಬ ವಕೀಲನನ್ನು ನೇಮಿಸಿಕೊಳ್ಳಿ ಇಂದು (ಜಡ್ಜ್)ನ್ಯಾಯಾಧೀಶ ನನ್ನು ಖರೀದಿಸು ಅಂತಾರೆ ನ್ಯಾಯದ ಕೊಲೆ ನ್ಯಾಯಾಲಯದಲ್ಲಿ ಯಾರಿಂದ ಮರೆಮಾಚಿದೆ ಇಂದು ತನ್ನ ಕಣ್ಣಿಗೆ ಕಪ್ಪು ವಸ್ತ್ರ ಕಟ್ಟುವುದರಿಂದ ಮೌನಿ ಯಾಗಿರುವುದರಿಂದ ಯಾವ ವ್ಯತ್ಯಾಸ ಇರಲಾರದು ಇಂದು ನಮ್ಮ ನ್ಯಾಯಾಲಯ ನೀತಿ ಮಾಡದೆ ಸುಮ್ಮನಿದೆ ನಾವು ನಮ್ಮ ಸಂಘಟನೆ ನಮ್ಮ ಸಮಾಜ ಮುಂದೆ ನಡೆಯಬೇಕಾದರೆ ನ್ಯಾಯ ಪಾಲಿಸಬೇಕು
ان الله بأمر بالعدل
ನಿಸ್ಸಂದೇಹವಾಗಿಯೂ ಅಲ್ಲಾಹನು ನ್ಯಾಯ ಪಾಲಿಸಲು ಆದೇಶಿಸುತ್ತಾನೆ ... ಎಂಬ ಮಾತು ಪ್ರತೀ ಶುಕ್ರವಾರ ಮಿಂಬರಿನಲ್ಲಿ ನಿಂತು ದರ್ಮ ಗುರುಗಳು ಸಾರಿ ಸಾರಿ ಹೇಳುವ ಮಾತು ನಾವು ಕೇಳದೆ ಹೋದೆವು ವಿಪರ್ಯಾಸ.
ISLAMIC KANNADA
No comments:
Post a Comment