Skip to main content

Featured

ನೀವು ಜೀವಿಸುವ ಪದ್ಧತಿ ಹೇಗೇ

  ಪ್ರತಿಯೊಬ್ಬ ಮಹಿಳೆಯೂ ಅಸಭ್ಯ ಉಡುಗೆ ತೊಡುಗೆ, ಬಟ್ಟೆ ತೆಗೆಯುವಿಕೆ ಮತ್ತು ಪ್ರಲೋಭನೆಯನ್ನು ಪ್ರಚೋದಿಸುವ ಯಾವುದೇ ವಿಷಯದ ಬಗ್ಗೆ ಎಚ್ಚರದಿಂದಿರಬೇಕು, ಏಕೆಂದರೆ ಒಬ್ಬ ಮಹಿಳೆಯನ್ನು ಆರತ್ ಎಂದು ಪರಿಗಣಿಸಲಾಗುತ್ತದೆ ಮತ್ತು ಪುರುಷರು ಸ್ವಾಭಾವಿಕವಾಗಿ ಅವಳ ಕಡೆಗೆ ಆಕರ್ಷಿತರಾಗುತ್ತಾರೆ,  ಅವಳು ಅವರ ಕಡೆಗೆ ಆಕರ್ಷಿತರಾಗುತ್ತಾಳೆ. ಅಲ್ಲಾಹನು ತಾನು ರಕ್ಷಿಸುವವರನ್ನು ಮಾತ್ರ ರಕ್ಷಿಸುತ್ತಾನೆ ಮತ್ತು ಅವನು ಸಂರಕ್ಷಿಸುವವರನ್ನು ಮಾತ್ರ ಸಂರಕ್ಷಿಸುತ್ತಾನೆ. ಆದ್ದರಿಂದ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಜಾಗರೂಕರಾಗಿರಬೇಕು. ಪುರುಷರು ತಮ್ಮ ನೋಟವನ್ನು ಕಡಿಮೆ ಮಾಡಬೇಕು, ಪುರುಷರೊಂದಿಗೆ ಏಕಾಂತತೆಯನ್ನು ತಪ್ಪಿಸಬೇಕು ಮತ್ತು ಪ್ರಲೋಭನೆಯ ಎಲ್ಲಾ ಕಾರಣಗಳ ಬಗ್ಗೆ ಎಚ್ಚರದಿಂದಿರಬೇಕು. ಅದೇ ರೀತಿ, ಮಹಿಳೆಯರು ಪುರುಷರೊಂದಿಗೆ ಏಕಾಂಗಿಯಾಗಿರುವುದು , ಸಾರ್ವಜನಿಕವಾಗಿ ತಮ್ಮ ಸೌಂದರ್ಯ ಮತ್ತು ಮೋಡಿಗಳನ್ನು ಪ್ರದರ್ಶಿಸುವುದು ಮತ್ತು ಸಂಬಂಧವಿಲ್ಲದ ಪುರುಷರ ಮುಂದೆ ತಮ್ಮನ್ನು ತಾವು ಬಹಿರಂಗಪಡಿಸುವಂತಹ ಪ್ರಲೋಭನೆಯ ಕಾರಣಗಳ ಬಗ್ಗೆ ಎಚ್ಚರದಿಂದಿರಬೇಕು. ಸರ್ವಶಕ್ತ ನಾದ ಅಲ್ಲಾಹನು ಹೇಳುತ್ತಾನೆ:  وقرن في بيوتكن ولا تبرجن تبرج الجاذبية التوليب ಮತ್ತು ನಿಮ್ಮ ಮನೆಗಳಲ್ಲಿ ಇರಿ, ಮತ್ತು ಹಿಂದಿನ ಅಜ್ಞಾನದ ಕಾಲದ ಪ್ರದರ್ಶನದಂತೆ ನಿಮ್ಮನ್ನು ಪ್ರದರ್ಶಿಸಬೇಡಿ " [ ಅಲ್-ಅಹ್ಜಾಬ್ : 33]. ಇಸ್ಲಾಮಿ ವಿದ್ವಾಂಸ...

ಕೆಟ್ಟ ಗೆಳೆಯನ ಸಹವಾಸ ವಿಷಕಾರಿ ಹಾವಿಗಿಂತ ಕ್ರೂರ-A bad friend's companion is brutal than a poisonous snake

ಮಕ್ಕಳ ಪಾಲನೆಯ ಮಟ್ಟ ಗಳನ್ನು ತಜ್ಞರು ಮೂರು ವಿಧಗಳಾಗಿ ವಿಂಗಡಿಸಿದ್ದಾರೆ   ಮೊದಲ   ಏಳು ವರ್ಷ ಮಕ್ಕಳನ್ನು ತಾಯಿ ತನ್ನ ಮಡಿಲಲ್ಲಿ ರಕ್ಷಣೆ ನೀಡುವಳು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿ ಸಾಕುವಳು  ಮೂರನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಸಹೋದರ ರಾಗಿ ಸಾಕಬೇಕಾಗಿದೆ ಮೊದಲನೆಯ ಏಳು ವರ್ಷದಲ್ಲಿ ಮಡಿಲಲ್ಲಿ ಸಾಕುವ ಉದ್ದೇಶ ಮಗು ನಮ್ಮಿಂದ ಕಲಿಯುವವ ರಾಗಬೇಕು
ಇಂದಿನ ಯುಗದಲ್ಲಿ ಮೂರು ವರ್ಷಗಳ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ತುಂಬಾ ಅಹಿತಕರ ಘಟನೆ ಇದು ತಾಯಿ ಮಗುವಿನಿಂದ ತನ್ನನ್ನು ತಾನು ಸ್ವಾತಂತ್ರ್ಯ ರಾಗಲು ಬಯಸುತ್ತಾಳೆ  ತಾಯಿಯಿಂದ ಕಲಿಯ ಬೇಕಾದ ಸಮಯದಲ್ಲಿ ಆ ಸಮಯವೂ ನಷ್ಟ ಪಡುತ್ತದೆ ಈ ಸಮಯ ಮನೆಯಲ್ಲಿ ಪಾಲನೆಯ ಸಮಯ ವಾಗಿದೆ ಒಬ್ಬ ತಂದೆ ಮಕ್ಕಳನ್ನು ಗಮನಿಸದಿದ್ದರೆ ತಾಯಿಯು ಪರಿಪೂರ್ಣ ವಾಗಿ ಗಮನ ಹರಿಸಬೇಕು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿಸುವ ಉದ್ದೇಶ ಅವರು ತಾನಾಗಿ ಯಾವ ಕಾರ್ಯಗಳನ್ನು ನಿರ್ಧರಿಸುವ ಸಾಮರ್ಥ್ಯ ಇರುವುದಿಲ್ಲ ವಾದರಿಂದ ತಂದೆ ತಾಯಿ ಯರಿಗೆ ಮಕ್ಕಳ ನಿರ್ದಾರ ಗಳನ್ನು ಕೈಗೊಳ್ಳಬೇಕು ಮೂರನೆಯ ಏಳು ವರ್ಷಗಳಲ್ಲಿ ಅವರನ್ನು ಸಹೋದರರ ಹಾಗೆ ಕಾಣುವ ಉದ್ದೇಶ ಅಂದರೆ ವಿಶ್ವಾಸಿಗ  ರಾದ  ಮಕ್ಕಳು   ಹದಿನಾಲ್ಕರಿಂದ ಇಪ್ಪತ್ತೊಂದು ವರ್ಷಗಳ ವರೆಗೆ  ಸಹೋದರರಿಂದ ಹಲವು ಕಡೆಗಳಿಂದ  ಕಲಿಯುತ್ತಾರೆ ಆ  ಸಮಯ ಗಳಲ್ಲಿ ತಂದೆ ತಾಯಂದಿರು ಬುದ್ಧಿವಂತಿಕೆ ಯಿಂದ ಮಕ್ಕಳನ್ನು ಗಮನ ಇಡಬೇಕಾಗಿದೆ ಯಾಕೆಂದರೆ ಮಕ್ಕಳ ಸಹವಾಸ ಕೆಟ್ಟ ಸ್ವಬಾವದ ಮಕ್ಕಳೊಂದಿಗೆ ಆಗದಿರಲು.ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು 
المرء علي دين خليله فالينظر أحدكم من يخالل 
ಪ್ರತಿಯೊಬ್ಬರೂ ಅವನ ಗೆಳೆಯನ  ದರ್ಮದಲ್ಲಾಗಿರುತ್ತಾನೆ  ನಮಗೆ ಇಲ್ಲಿ ನೋಡ ಬೇಕಾಗಿರೋದು   ನಾವು ಯಾರನ್ನು ಗೆಳೆಯರಾಗಿ
ಸಹೋದರರಾಗಿ ಸ್ವೀಕರಿಸುತ್ತೇವೆ ನಮ್ಮ ಗೆಳೆಯರೋಬ್ಬರ ದೀನ್ ದರ್ಮ ಹಾಳಾದರೆ ಅದರ ವರ್ಣ ಅದರ ಪರಿಣಾಮ ನಮ್ಮ ಮೇಲೆ ಬೀಳುತ್ತವೆ ಆದರಿಂದ ನಮಗೆ ಸಜ್ಜನರ ಸಹವಾಸ ಮಾಡಲು  ಕಲ್ಪಿಸಲಾಗಿದೆ  ಕೆಟ್ಟ ಗೆಳೆಯ  ಕೆಟ್ಟ ಹಾವಿಗಿಂತ ವಿಷಕಾರಿ ಯಾಗಿರುತ್ತಾರೆ ಯಾಕೆಂದರೆ ಹಾವು ನಮ್ಮೊಂದಿಗೆ ಜಗಳ ಮಾಡಿದರೆ ನಮ್ಮ ಜೀವ ಹೋಗ ಬಹುದು ಆದರೆ ಕೆಟ್ಟ ಗೆಳೆಯ ಜಗಳ ಆಡಿದರೆ ನಮ್ಮ( ಈಮಾನ್ ) ವಿಶ್ವಾಸ ನಷ್ಟ ಹೊಂದುವುದು ಇದರಿಂದ ಸಜ್ಜನರ ಸಹವಾಸ ನಿನಗೆ ಸಜ್ಜನನಾಗಿಸುತ್ತದೆ ಕೆಟ್ಟ ವರ ಸಹವಾಸ ನಿನ್ನನ್ನು ಕೆಟ್ಟವನಾಗಿಸುತ್ತದೆ  ಶೈಖ್ ಸಹ ದಿ 
رضي الله عنه 
ಹೇಳುತ್ತಾರೆ ನಾನು ಮೂತ್ರ ವಿಸರ್ಜನೆ ಗೆಂದು ಶೌಚಾಲಯಕ್ಕೆ ಹೋದೆ ಅಲ್ಲಿ ಯಾರೋ ಇಟ್ಟ ಮಣ್ಣನ್ನು ನೋಡಿದೆ ಎತ್ತಿ ನೋಡಿದಾಗ ಅದರಿಂದ ಸುಗಂದ ಪರಿಮಳ ಬೀಸುತ್ತಿತ್ತು ಆ ಮಣ್ಣಿನಲ್ಲಿ ಕೇಳಿದರು ನೀನು ಮಣ್ಣೋ  ಅಥವಾ ಸುಗಂದ ವಸ್ತು ಆಗಿದಿಯೋ ಯಾರು ನೀನು ಎಂದು ಕೇಳಿದಾಗ ಆ ಮಣ್ಣು ಉತ್ತರ ನೀಡಿತು ನಾನು ಮಣ್ಣಾಗಿದ್ದೇನೆ ಆದರೆ ಕೆಲವು ದಿನಗಳಿಂದ ನಾನು ಹೂವಿನ ಗೆಳೆತನದಲ್ಲಿ   ಕಾಲ ಕಳೆದೆ  ಗುಲಾಬಿ ಹೂವಿನ ಕಾಲಡಿಯಲ್ಲಿ ಕಾಲ ಕಳೆದೆ ಆದರಿಂದ ನನ್ನ ಗೆಳೆಯನ  ಸೌಂದರ್ಯ ನನ್ನಲ್ಲಿ ಪ್ರತ್ಯಕ್ಷ ವಾಯಿತು ಎಂದು ಹೇಳಿತು ಹೂವಿನೊಂದಿಗೆ ಗೆಳೆತನ ಬೆಳೆಸಿದ ಮಣ್ಣಿಗೆ ಪರಿಮಳ ಇದ್ದರೆ ಸಜ್ಜನರ ಸಹವಾಸದಲ್ಲಿ ಎಷ್ಟು ಸಾಮರ್ಥ್ಯ ಇದೆ ಎಂದು ಯೋಚಿಸಿ!
ISLAMIC KANNADA

Comments

Popular Posts