Featured
- Get link
- X
- Other Apps
ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?
ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?
~ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ
-------------------------
ಫೆಲೆಸ್ತೀನ್ ಬಿಕ್ಕಟ್ಟು ಮತ್ತೆ ಮುನ್ನಲೆಗೆ ಬಂದಿದೆ. ಕ್ರೌರ್ಯ ಮೆರೆದ ಇಸ್ರೇಲ್ ಈಗ ಕದನ ವಿರಾಮ ಘೋಷಿಸಿದೆ. ಭಾರತ ಸಮೇತ ಜಗತ್ತಿನ ಹಲವು ರಾಷ್ಟ್ರಗಳು ಫೆಲೆಸ್ತೀನ್ ಪರ ದನಿಯೆತ್ತಿದರೆ ಕೆಲವು ಹಿಂಸಾತ್ಮಕ ಸಿದ್ದಾಂತಿಗಳು ಇಸ್ರೇಲ್ ರಕ್ಕಸರಿಗೆ ಬೆಂಬಲ ಸೂಚಿಸಿದೆ. ಹಾಗೆ ನೋಡುವುದಾದರೆ ಈ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ನಮಗೆ ಹೊಸತಲ್ಲ. ಇಸ್ರೇಲ್ ಎಂಬ ಲಂಪಟ ದೇಶ ಜನ್ಮತಾಳಿದಾಗಲೇ ಜಗತ್ತಿನಲ್ಲಿ ನೆತ್ತರ ಭೂಪಟವೊಂದು ಅರಳಿ ನಿಂತಿತ್ತು. ಮಧ್ಯಪ್ರಾಚ್ಯದ ಸುದ್ದಿಗಳಲ್ಲಿ ಪ್ರಮುಖವಾಗಿ ತುಂಬಿ ನಿಲ್ಲುವುದೂ ಇದೇ ಭೂಪಟ.
ಇಸ್ರೇಲ್-ಫೆಲಸ್ತೀನ್ ಸಂಘರ್ಷ ತಾರಕಕ್ಕೇರಿದಾಗಲೆಲ್ಲಾ ಸಾಮಾನ್ಯವಾಗಿಯೇ ಜಗತ್ತು ಅರಬ್ ರಾಷ್ಟ್ರಗಳತ್ತ ನೋಡುತ್ತದೆ. ಸೌದಿ ಪ್ರಭುಗಳೇ ಮೌನ ಮುರಿಯಿರಿ ಎಂದು ಫೆಲೆಸ್ತೀನ್‌ನ ಕಂದಮ್ಮಗಳು ಮೊರೆಯಿಡುತ್ತಿದ್ದಾರೆ. ಜಗತ್ತಿನ ಅತಿ ಸಾಮಾನ್ಯ ದೇಶಗಳು ಸಂಕಷ್ಟಗಳಿಗೆ ಸಿಲುಕಿದಾಗಲೂ ಅರಬ್ ಜಗತ್ತು ಸ್ಪಂದಿಸುತ್ತದೆ, ಮೊನ್ನೆಯಷ್ಟೇ ಆಮ್ಲಜನಕದ ಕೊರತೆಯಿಂದ ಭಾರತ ಬಳಲಿದಾಗ ಟನ್ ಗಟ್ಟಲೇ ಆಕ್ಷಿಜನ್‌ನ್ನು ಸರಬರಾಜು ಮಾಡಿದ್ದು ಇದೇ ಅರಬ್ ರಾಷ್ಟ್ರಗಳು. ಯುದ್ಧ, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಅನೇಕ ರಾಷ್ಟ್ರಗಳು ಬಸವಳಿದಾಗ ಅಲ್ಲಿನ ಹಸಿವು, ದಣಿವನ್ನು ಅರಬ್ ರಾಷ್ಟ್ರಗಳು ತಣಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಅಂತಹಾ ಅರಬ್ ಪ್ರಭುಗಳು ಫೆಲೆಸ್ತೀನ್ ವಿಚಾರದಲ್ಲಿ ಮಾತ್ರ ಅಲಿಪ್ತ ನೀತಿಯನ್ನು ತಾಳುತ್ತಾರೆ. ಮೊನ್ನೆಯಷ್ಟೇ ಸುಡಾನ್ ಆಫ್ರಿಕಾ ಶೃಂಗಸಭೆಯಲ್ಲಿ ಮಾತನಾಡಿದ್ದ ಸೌದಿ ಅರೇಬಿಯಾದ ವಿದೇಶ ಸಚಿವ ಫೈಝಲ್ ಬಿನ್ ಫರ್ಹಾನ್, ಫೆಲೆಸ್ತೀನ್- ಸಂಘರ್ಷ ಮಧ್ಯಪ್ರಾಚ್ಯವನ್ನು ತಪ್ಪು ದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂಬ ಉಢಾಫೆಯ ಮಾತನ್ನಾಡಿದ್ದರು.
ಅಷ್ಟಕ್ಕೂ ಇವರ ತಟಸ್ಥ ನಿಲುವಿಗೆ ಕಾರಣವಾದರೂ ಏನು..?ಅಲ್ಲಿನ ನೋವು, ನರಳಾಟಗಳಿಗೆ ಅರಬ್ ಜಗತ್ತು ನೀಡಿದ ಕನಿಷ್ಟ ಸಾಂತ್ವನವಾದರೂ ಯಾವುದು..? ಅಲ್ಲಿನ ಆಕ್ರಂಧನ, ರೋಧನೆಗಳು ಇನ್ನೂ ಯಾಕೆ ಅರಬ್ ಪ್ರಭುಗಳನ್ನು ಎಚ್ಚರಿಸುತ್ತಿಲ್ಲ.? ಈ ಪ್ರಶ್ನೆಗಳ ಜಾಡು ಹಿಡಿದು ಹೊರಟರೆ ಎರಡು ರೀತಿಯಲ್ಲಿ ಉತ್ತರ ಲಭಿಸುತ್ತದೆ. ಒಂದು ಮಹಾಯುದ್ಧದ ಸಂಧರ್ಭದಲ್ಲಿ ತುರ್ಕಿಯ ಪತನಕ್ಕಾಗಿ ಬ್ರಿಟನ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ಎರಡನೇಯದ್ದು ಇರಾನ್ ವಿರುದ್ದವಾಗಿ ಇಸ್ರೇಲ್‌ನೊಂದಿಗೆ ಯುಎಇ ಮಾಡಿಕೊಂಡ ಒಪ್ಪಂದ.
* * *
ಅದು ಹತ್ತೊಂಬತ್ತನೇ ಶತಮಾನ. ಅರಬ್ ದೊರೆಗಳು ಅಧಿಕಾರದ ಲಾಲಸೆಗೆ ಜೋತು ಬಿದ್ದ ಸಮಯ. ಉಸ್ಮಾನಿಗಳ ಕೈಯ್ಯಲ್ಲಿದ್ದ ಅಧಿಕಾರವನ್ನು ಕಿತ್ತುಕೊಳ್ಳಲು ಹವಣಿಸಿದ ಈ ದೊರೆಗಳು ನಂಟು ಸ್ಥಾಪಿಸಿಕೊಂಡದ್ದು ಮಾತ್ರ ಬ್ರಿಟನ್‌ನಂಥ ಅಪಾಯಕಾರಿ ರಾಷ್ಟ್ರಗಳೊಂದಿಗೆ. ಫೆಲೆಸ್ತೀನ್ ಮತ್ತು ಬೈತುಲ್ ಮುಖದ್ದಸ್ ಮುಸ್ಲಿಮರ ಕೈ ತಪ್ಪಲು, ಕೃತಘ್ನ ಜೂದರು ಫೆಲೆಸ್ತೀನ್ ಸೇರಲು ಸೌದಿ ದೊರೆಗಳು ಪ್ರಮುಖ ಕಾರಣಕರ್ತರಾದರು. ಬ್ರಿಟನ್ ಜತೆಗಿನ ನಿರಂತರ ಸಂಬಂಧ, ಸ್ವಾಮಿನಿಷ್ಠೆ, ದೂರಗಾಮಿ ಪರಿಣಾಮವನ್ನು ಅರಿಯದೇ ಮಾಡಿಕೊಂಡ ಒಪ್ಪಂದ, ಇವೆಲ್ಲದರ ನಿಮಿತ್ತ ಫೆಲೆಸ್ತೀನ್, ಲೆಬನಾನ್ ಸಮೇತ ಹಲವು ಮುಸ್ಲಿಂ ರಾಷ್ಟ್ರಗಳು ದಿನಬೆಳಗಾಗುವುದರೊಳಗೆ ಬ್ರಿಟನ್ ಪಾಲಾದವು. ಇಲ್ಲದಿದ್ದರೆ ಈ ಪವಿತ್ರ ಭೂಮಿ ಇನ್ನೂ ಮುಸ್ಲಿಮರ ಕೈಯ್ಯಲ್ಲಿ ಭಧ್ರವಾಗಿರುತ್ತಿತ್ತು.
ಮುಸ್ಲಿಂ ರಾಷ್ಟ್ರಗಳ ಮೇಲೆ ಪಾರುಪತ್ಯ ಸ್ಥಾಪಿಸಲು ಹವಣಿಸಿದ್ದ ಬ್ರಿಟನ್‌ಗೆ ಅಲ್ಲಿನ ತುರ್ಕೀ ಕೇಂದ್ರೀಕೃತ ಪ್ರಾಂತೀಯ ಆಡಳಿತವನ್ನು ಬುಡಮೇಲುಗೊಳಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಸೌದೀ ದೊರೆಗಳನ್ನು ಬಗಲಿಗೆ ಹಾಕಿಕೊಂಡ ಬ್ರಿಟನ್ ಅರಬ್ ನಾಡಿನೆಲ್ಲೆಡೆ ಹಿಂಸಾಚಾರ ನಡೆಸಲು ಕುಮ್ಮಕ್ಕು ನೀಡಿತು. ಅಷ್ಟರಲ್ಲಿ ಅರಬರಲ್ಲಿ ದೇಶೀಯವಾದವೂ ಬೀಜಾಂಕುರವಾದವು. ದೂರದ ತುರ್ಕಿಗಳಿಂದ ಆಳಿಸಿಕೊಳ್ಳುವುದು ತಮ್ಮ ಪ್ರತಿಷ್ಟೆಗೆ ಭಂಗ ಎಂಬ ಮನೋಭಾವವನ್ನೂ ಬ್ರಿಟನ್ ಅರಬರಲ್ಲಿ ಮೂಡಿಸಿತು. ಭಾಷೆ, ಪ್ರಾದೇಶಿಕತೆ, ಸಂಸ್ಕೃತಿ, ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ಕಲಹಗಳು ಬುಗಿಲೆದ್ದವು. ತುರ್ಕಿಗಳ ವಿರುದ್ದ ದಂಗೆಯೇಳಲು ಮತ್ತು ಹಿಜಾಝ್‌ನಲ್ಲಿ ನರಮೇಧ ನಡೆಸಲೂ ಕೊನೆಯದಾಗಿ ಸ್ವತಂತ್ರವಾದ ಆಡಳಿತ ಸ್ಥಾಪಿಸಲು ಸರ್ವ ನೆರವನ್ನೂ ನೀಡಲಾಗುವುದೆಂದು ಬ್ರಿಟನ್‌ನ ಈಸ್ಟ್ ಇಂಡಿಯಾ ಕಂಪೆನಿ ಸೌದಿ ದೊರೆಗಳಿಗೆ ಆಶ್ವಾಸನೆಯನ್ನು ನೀಡಿತು. ತುರ್ಕಿಗಳ ವಿರುದ್ದ ನಡೆದ ದಂಗೆಯಲ್ಲಿ ಅರಬ್ ನಾಡಿನಾದ್ಯಂತ ಅಸ್ತಿತ್ವದಲ್ಲಿದ್ದ ಮುಹಮ್ಮದ್ ಪಾಶಾ ಸಾರಥ್ಯದ ಆಡಳಿತ ಕ್ಷಯಿಸತೊಡಗಿತು. ನಜ್ದ್, ಹಸ್ಸಾ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡ ಸೇನಾ ಮುಖ್ಯಸ್ಥನಾಗಿದ್ದ ಅಬ್ದುಲ್ ಅಝೀಝ್ ಬಿನ್ ಸುಊದ್ ಬಳಿಕ ಸೌದಿ ಅರೇಬ್ಯಾದ ಪ್ರಭುತ್ವಗಾದಿಗೆ ಹತ್ತಿದ.
1915ರಲ್ಲಿ ಬ್ರಿಟನ್‌ನ ಪೊಲಿಟಿಕಲ್ ರಾಯಭಾರಿಯಾಗಿದ್ದ ಸರ್ ಫೆರ್ಸಿ ಮತ್ತು ಇಬ್ನು ಸುಊದ್ ನಡುವೆ ಒಂದು ಮಹತ್ವದ ಮಾತುಕತೆ ನಡೆಯುತ್ತದೆ. ಈ ಮಾತುಕತೆ ಪ್ರಕಾರ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಉಸ್ಮಾನಿಗಳ ವಿರುದ್ದ ಬ್ರಿಟಿಷರಿಗೆ ನೆರವಾಗಬೇಕು ಮತ್ತು ಫೆಲೆಸ್ತೀನ್‌ನಲ್ಲಿ ಜೂದರಿಗೆ ನೆಲೆಸಲು ಒಂದಷ್ಟು ನೆಲ ನೀಡಬೇಕೆಂಬುದಾಗಿತ್ತು. ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಸುಊದ್ ಫೆಲೆಸ್ತೀನ್ ತನ್ನ ಆಡಳಿತ ವ್ಯಾಪ್ತಿಗೊಳಪಡದ ಸ್ಥಳವೆಂದೂ, ಅಲ್ಲಿ ಜೂದರಿಗೆ ನೆಲೆ ಒದಗಿಸುವುದರಲ್ಲಿ ತನಗೆ ಯಾವುದೇ ಅಭ್ಯಂತರವಿಲ್ಲವೆಂದೂ ಲಿಖಿತ ರೂಪದಲ್ಲಿ ಧೃಢಪಡಿಸಿದ. (ಚಿತ್ರದಲ್ಲಿ ಪತ್ರವನ್ನು ಕಾಣಬಹುದು) ಅದೇ ರೀತಿ ಮಹಾ ಯುದ್ದ ಸಮಯದಲ್ಲಿ ತಟಸ್ಥ ನಿಲುವನ್ನು ತಾಳುವುದಾಗಿಯೂ ಬ್ರಿಟನ್‌ಗೆ ಮಾತು ಕೊಟ್ಟ.
ಹತ್ತೊಂಬತ್ತನೇ ಶತಮಾನದವರೆಗೆ ಯುರೋಪ್‌ನಾದ್ಯಂತ ಹರಡಿ ಹೋದ ಜೂದನ್ನರು ಸಮಾಜದ ಆಯಕಟ್ಟಿನ ರಂಗಗಳಲ್ಲಿ ಗುರುತಿಸಿಕೊಳ್ಳತೊಡಗಿದರು. ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲೂ ಮೇಲುಗೈ ಸಾಧಿಸತೊಡಗಿದರು. ಇದು ಐರೋಪ್ಯನ್ನರ ಕಣ್ಣು ಕೆಂಪಾಗಿಸಿತು. ಜೂದ ವಿರೋಧಿ ಅಲೆಗಳು ಏಳತೊಡಗಿದವು. ಇದಕ್ಕೆ ಪ್ರತಿರೋಧ ಎಂಬಂತೆ ಜೂದ ಪತ್ರಕರ್ತನಾಗಿದ್ದ ಥಿಯೋಡರ್ ಹೆರ್ಸಲ್, ಯಹೂದ್ಯರ ಅಸ್ಮಿತೆಯನ್ನು ಎತ್ತಿ ಹಿಡಿಯಲು ಝಿಯೋನಿಸಂ ಎಂಬ ಹೊಸ ಪಂಥಕ್ಕೆ ರೂಪ ನೀಡುತ್ತಾನೆ. ಯಹೂದ್ಯರ ಮೇಲೆ ಶತಮಾನಗಳಿಂದ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆಯನ್ನು ಕೊನೆಗಾಣಿಸಬೇಕಾದರೆ ಒಂದು ಸ್ವತಂತ್ರ ರಾಷ್ಟ್ರ ಸ್ಥಾಪಿಸುವುದು ಅನಿವಾರ್ಯ ಎಂದು ಹೆರ್ಸೆಲ್ ಪ್ರತಿಪಾದಿಸುತ್ತಾನೆ. ಅದಕ್ಕೆಂದೇ ಆತ ಫೆಲೆಸ್ತೀನ್‌ನಲ್ಲಿ ಯಹೂದ್ಯನ್ನರಿಗೆ (ತೌರಾತ್‌ನಲ್ಲಿ) ವಾಗ್ದಾನ ಮಾಡಲ್ಪಟ್ಟ ಭೂಮಿಯೊಂದಿದೆ ಎಂಬ ವಿಚಿತ್ರ ಸುಳ್ಳೊಂದನ್ನು ಸೃಷ್ಟಿಸಿದ. ಒಂದು ಕಾಲಕ್ಕೆ ಧಿಕ್ಕಾರಿಗಳಾಗಿ ಫೆಲೆಸ್ತೀನ್‌ನಿಂದ ಹೊರದಬ್ಬಲ್ಪಟ್ಟ ಜೂದನ್ನರಿಗೆ ಮತ್ತೊಮ್ಮೆ ಆ ಪ್ರದೇಶವನ್ನು ಸೇರುವುದು ಕನಸಿನ ಮಾತಾಗಿತ್ತು. ಅವರಿಗೆ ಅಲ್ಲಿ ಯಾವುದೇ ಹಕ್ಕೂ ಇಲ್ಲವೆಂಬುದು ಅವರಿಗೆ ಖಾತರಿಯಿತ್ತು. ಆದರೆ ಬ್ರಿಟನ್‌ನ ಬೆಂಬಲದಿಂದಾಗಿ ಹೆರ್ಝಲ್‌ನ ಈ ವಾದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದವು.
ಕೆಲವೇ ಸಮಯದ ಅಂತರದಲ್ಲಿ ವಿಶ್ವ ಮಹಾ ಯುದ್ದ ಆಸ್ಪೋಟಗೊಂಡಿತು. ಸೌದಿದೊರೆಗಳು ಬ್ರಿಟನ್ ಪರವಾಗಿ ನಿಂತುಕೊಂಡರು. ಅಸ್ಥಿರಗೊಂಡ ತುರ್ಕಿ ಆಡಳಿತವನ್ನು ಕಿತ್ತೆಸೆದ ಬ್ರಿಟನ್ ಖಲೀಫಾರನ್ನು ಪದಚ್ಯುತಗೊಳಿಸಿ ಫೆಲೆಸ್ತೀನ್ ಸಮೇತ ಹಲವು ಮುಸ್ಲಿಂ ಪ್ರಾಂತ್ಯಗಳ ಮೇಲೆ ಆಧಿಪತ್ಯ ಸ್ಥಾಪಿಸಿಕೊಂಡಿತು. ಫೆಲೆಸ್ತೀನ್‌ನಲ್ಲಿ ಒಂದು ಸ್ವತಂತ್ರ ಜೂದ ರಾಷ್ಟ್ರ ನಿರ್ಮಿಸುವುದಾಗಿ ಬ್ರಿಟಿಷ್ ವಿದೇಶ ಕಾರ್ಯಾಂಗ ಕಾರ್ಯದರ್ಶಿ ಬಾಲ್ಫರ್ ಘೋಷಿಸಿದ. 1930ರಲ್ಲಿ ಸರ್ ಪೆರ್ಸಿ ಕೊಕ್ಸ್‌ನೊಂದಿಗೆ ಕಥಾಕಥಿತ 'ವಾಗ್ದಾನ ಭೂಮಿ'ಯನ್ನು ಸೌದಿ ದೊರೆ ಅಬ್ದುಲ್ ಅಝೀಝ್ ಸಂದರ್ಶಿಸಿದ. (ಎರಡನೇ ಚಿತ್ರದಲ್ಲಿದೆ) ಅಷ್ಟರಲ್ಲಿ ಯಹೂದ್ಯರ ವಲಸೆ ಆರಂಭವಾಯಿತು ನೋಡಿ. 1927ರಿಂದ 1945ರ ಅವಧಿಯಲ್ಲಿ ಫೆಲೆಸ್ತೀನ್‌ಗೆ ಠಳಾಯಿಸಿದ್ದು ಬರೋಬ್ಬರಿ 2,50,000 ಯಹೂದ್ಯರಾಗಿದ್ದರು. ಬ್ರಿಟನ್‌ನ ಈ ಎಲ್ಲಾ ಹರಕತ್ತನ್ನು ಸೌದಿ ಸರಕಾರ ಕೈಕಟ್ಟಿ ಬೆಂಬಲಿಸಿತು. ಇತಿಹಾಸದ ನಿರಾಕರಣೆ ಎಂಬಂತೆ ಇಸ್ರೇಲ್ ಫೆಲೆಸ್ತೀನನ್ನರ ಎದೆ ಮೇಲೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿಯೇ ಬಿಟ್ಟಿತು. ಇದರೊಂದಿಗೆ ಅಲ್ಲಿನ ಮೂಲ ನಿವಾಸಿಗಳ ಬದುಕಿಗೆ ಬೆಂಕಿ ಬಿತ್ತು. ಫೆಲೆಸ್ತೀನ್ ಜಗತ್ತಿನ ರಕ್ತ ರಂಜಿತ ಅಧ್ಯಾಯವಾಗಿ ಮಾರ್ಪಟ್ಟಿತು. ಇಡೀ ಜಗತ್ತೇ ಈ ಪುಟ್ಟ ದೇಶಕ್ಕಾಗಿ ಮಮ್ಮಲ ಮರುಗಿದರೆ ಅರಬ್ ದೊರೆಗಳ ಕನಿಷ್ಠ ಕನಿಕರವೂ ಫೆಲೆಸ್ತೀನ್‌ಗೆ ಸಿಗದೇ ಹೋದವು.
ಇಸ್ರೇಲ್ ವಿರುದ್ದ ಅರಬ್ ಜಗತ್ತು ನಿರ್ಲಿಪ್ತವಾಗಿರಲು ಇನ್ನೊಂದು ಕಾರಣ ಸೆಮೆಟಿಕ್ ವಂಶೀಯ ನಂಟು. ಈ ವಿಕ್ಷಿಪ್ತ ವಂಶೀಯತೆ ಮುನ್ನಲೆಗೆ ಬಂದದ್ದೇ ಇರಾನ್ ಅರಬ್ ನಡುವೆ ಶೀತಲ ಸಮರ ಭುಗಿಲೆದ್ದಾಗ. ಈ ಸಮಯಕ್ಕೆ ಇರಾನ್ ವಿರುದ್ಧವಾಗಿ ಇಸ್ರೇಲ್‌ನೊಂದಿಗೆ ಯು.ಎ.ಇ ಅಬ್ರಹಾಂ ಎಂಬ ಹೆಸರಲ್ಲಿ ಒಪ್ಪಂದವೊಂದನ್ನು ಮಾಡುತ್ತದೆ. ಇರಾನನ್ನರು ಮುಸ್ಲಿಮರಾದರೂ ಜನಾಂಗೀಯವಾಗಿ ಆರ್ಯನ್ನರು. ಅರಬರು ಮತ್ತು ಜೂದನ್ನರು ಮೂಲತಃ ಇಬ್ರಾಹಿಂ ನಬಿಯವರ ವಂಶಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಸೆಮೆಟಿಕ್ ಪರಂಪರೆಯಿತ್ತು.
ಒಂದು ಕಡೆ ಬಲಿಷ್ಠ ಅಮೇರಿಕಾವನ್ನೇ ಕೊಡವಿ ಹಾಕುವ ಮಟ್ಟಿಗೆ ಇರಾನ್ ಬೆಳೆದು ನಿಂತಿದೆ. ಮುಂದೊಂದು ದಿನ ಅರಬ್ ರಾಷ್ಟ್ರಗಳೂ ಫೆಲೆಸ್ತೀನ್ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ಇಂಥದ್ದೊಂದು ಪ್ರಕ್ರಿಯೆ ನಡೆದೇ ಹೋದರೆ ಇಸ್ರೇಲ್ ಏಕಾಂಗಿಯಾಗುವ ಭೀತಿ ಅವರನ್ನು ಕಾಡತೊಡಗಿದವು. ಈ ಕಾರಣಕ್ಕೆ ಇಸ್ರೇಲ್, ನಾವು ಒಂದೇ ಜನಾಂಗಕ್ಕೆ ಸೇರಿದವರಾಗಿದ್ದು ಜಾಗತಿಕವಾಗಿ ಒಂದು ಶಕ್ತಿಯಾಗಿ ನಿಲ್ಲಬೇಕೆಂದು ಯುಎಇಯ ಕಿವಿಯೂದಿತು. ಪರಿಣಾಮ ನಡೆದ ಒಪ್ಪಂದವೇ ಅಬ್ರಹಾಂ ಒಪ್ಪಂದ. ಜನಾಂಗೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದ ಈ ಒಪ್ಪಂದ ಅರಬ್ ಜೂದರ ನಡುವೆ ಮತ್ತೆ ಮೈತ್ರಿ ಸ್ಥಾಪನೆಯಾಗಲು ಪ್ರೇರಣೆಯಾದವು. ಬಳಿಕ ನಡೆದ ವಿದ್ಯಾಮಾನಗಳೆಲ್ಲಾ ಇಸ್ರೇಲ್ ವಿರುದ್ಧ ಕಠಿಣ ನಿರ್ಣಯವನ್ನು ತೆಗೆದುಕೊಳ್ಳಲು ಯುಎಇಗೆ ತೊಡಕಾಯಿತು. ಫೆಲೆಸ್ತೀನ್ ವಿಚಾರದಲ್ಲಿ ಅರಬ್ ದೊರೆಗಳು ತಟಸ್ಥ ನಿಲುವು ತಾಳಲು ಈ ಎರಡು ಒಪ್ಪಂದಗಳೇ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ.
Popular Posts
ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?
- Get link
- X
- Other Apps
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?
- Get link
- X
- Other Apps
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ
- Get link
- X
- Other Apps
ಅನೈತಿಕತೆ ಹಾಗೂ ಕೆಟ್ಟದ್ದನ್ನು ನಿಷೇಧಿಸುವ ವಿಶೇಷ ಪ್ರಾರ್ಥನೆ ಗಳಲ್ಲಿ ಒಂದಾಗಿದೆ
- Get link
- X
- Other Apps
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen
- Get link
- X
- Other Apps
ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ
- Get link
- X
- Other Apps
Comments