ಈ ಭೂಮಿಯ ಮೇಲೆ ಹುಟ್ಟಿ ಬಂದ ಪ್ರತಿಯೊಬ್ಬ ಮನುಷ್ಯನು ಸಾವಿನ ರುಚಿ ನೊಡಲೇ ಬೇಕು. ಇದು ನೂರಕ್ಕೆ ನೂರು ಸತ್ಯ.
ಆದರೆ ಇಂದಿನ ನಮ್ಮ ರಾಜ್ಯದ ಭಯ ಭೀತಿ ವಾತಾವರಣ ವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಯಾರಿಗೂ ಇಲ್ಲ ವೆಂದು ಹೇಳಬಹುದು. ಇಂದು ಅಸ್ತಿತ್ವ ದಲ್ಲಿರುವ ಸರ್ಕಾರ ಪ್ರಜೆಗಳ ಕಷ್ಟ ಸುಖ ಗಳಿಗೆ ಎಷ್ಟು ಸ್ಪಂದಿಸುತ್ತಿದೆ. ಬಡವರ ಪಾಡೇನು . ಸಾಧಾರಣ ಕೆಮ್ಮು ಜ್ವರ ಬಂದವರು ಆಸ್ಪತ್ರೆ ಗಳಿಗೆ ಬೇಟಿ ಕೊಡಲು ನೂರು ಸಲ ಯೋಚಿಸಬೇಕಾಗಿದೆ. ಹೋಗಬೇಕಾ ಬೇಡವೆ ಎಂಬ ಭ್ರಮೆ ಹೋದರೆ ನಮ್ಮನು ಕೊರೊನ ಎಂಬ ಸಾಂಕ್ರಾಮಿಕ ರೋಗ ಬೆನ್ನು ಹಿಡಿಯುವುದೇ ಅಥವಾ ಹರಡುವ ಭಯ ಇದಕ್ಕೆಲ್ಲ ಕಾರಣ ಕರ್ತ ರು ಯಾರು ಇಂತಹ ಪರಿಸ್ಥಿತಿ ಯನ್ನು ಶ್ರಷ್ಟಿಸಿದವರು ಯಾರು ಪ್ರಸ್ತುತ ಸರಕಾರ ಉತ್ತರಿಸುವರೇ ನಾನು ಮೂರು ದಿವಸ ಸರಕಾರಿ ಆಸ್ಪತ್ರೆ ಹೊರವಲಯದಲ್ಲಿ ತೇಲಾಡಿದೆ ಅಲ್ಲಿನ ವಾತಾವರಣ ನಿಜಕ್ಕೂ ಭಯಭೀತ ಇಂದು ನಮ್ಮ ದಕ್ಷಿಣ ಕನ್ನಡ ಒಂದು ಲೆಕ್ಕದ ಮಟ್ಟಿಗೆ ಸರಿ ಇದೆ ಎಂದು ಹೇಳಬಹುದು ಆದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಈ ಸರಕಾರ ಎಷ್ಟು ಸಂದಿಸಬಹುದು ಯಾವ ಮುಂಜಾಗ್ರತೆ ಯಾವ ಅನೂಕೂಲತೆಯನ್ನು ಈಗಾಗಲೆ ತಯಾರಿಸಿ ಇಟ್ಟಿವೆ ಎಂಬ ಪ್ರಶ್ನೆ ಕಾಡುತ್ತಿದೆ ಭಯ ಭೀತದಲ್ಲಿ ನಮ್ಮ ದಕ್ಷಿಣ ಕನ್ನಡ ಕೂಡ ಸೇರಿದೆ. ಈಗಾಗಲೇ ಆಸ್ಪತ್ರೆ ಗಳಲ್ಲಿ ಬೆಡ್ಡಿನ ಕೊರತೆ,ಆಕ್ಷಿಜನ್ ಕೊರತೆ ವೈದ್ಯ ರುಗಳ ಕೊರತೆ ಇದಕ್ಕೆಲ್ಲ ಹೊಣೆ ಯರು ನಾವು ಓಟು ಹಾಕಿ ಆರಿಸಿದ ಜನ ಪ್ರತಿ ನಿದಿಗಳು ಏನು ಮಾಡುತಿದ್ದಾರೆ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜವಾಬ್ದಾರಿ ಅವರದ್ದಲ್ಲವೆ ? ಇಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ
ಈ ವ್ಯತ್ಯಾಸ ಯಾವಾಗ ಸಮಾನತೆಯ ಮೆಟ್ಟಿಲೇರಬಹುದು ಇಂದೇ ಪೃತಿಯೊಬ್ಬ. ನಾಗರಿಕರು ಚಿಂತಿಸ ಬೇಕು ಇನ್ನು ಮುಂದಿನ ದಿನಗಳಲ್ಲಿ
ನಾವು ಯಾರನ್ನು ನಮ್ಮ ಪತಿನಿಧಿ ಯಾಗಿ ಆರಿಸಬೇಕು ನಮ್ಮ ಜೀವ ದೊಂದಿಗೆ ಆಟ ಆಡುವವರು ನಮಗೆ ಬೇಕೆ ಅಥವಾ ನಮ್ಮ ಕಷ್ಟಗಳಿಗೆ ಸ್ಪಂದಿಸುವ ನಾಯಕರು ಬೇಕೆ ಎಂದು ಚಿಂತಿಸ ಬೇಕು ಸಮಯ ಸಂದರ್ಬ ಮಿತಿ ಮೀರುವ ಮುನ್ನ ಎಚ್ಚೆತ್ತು ಗೊಳ್ಳಬೇಕು ಪ್ರತಿಯೊಂದು ಮನೆಯಲ್ಲಿ ಮುದುಕರಿದ್ದಾರೆ ಪತಿಯೊಂದು ಮನೆಯ ಪ್ರತಿಯೊಬ್ಬ ಪಜೆಯು ಚಿಂತಿಸಬೇಕು ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ನಾವು ನಮ್ಮ ಮುಂದಿನ ಜನಾಂಗವನು ನರಕ ವನ್ನಾಗಿಸಿ ಬಿಟ್ಟುಹೊಗುವುದೇ .ಉತ್ತಮ ಭಾರತ ಕಟ್ಟಲು ಯಾವ ಪ್ರತಿನಿದಿ ಬೇಕಾಗಿದೆ ಎಂದು ಚಿಂತಿಸಬೇಕು .
ಎಸ್ |ಎಮ್ ಮುಸ್ತಫಾ ಸಾಸ್ತಾನ
No comments:
Post a Comment