Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಪಿ.ಪಿ.ಅಹ್ಮದ್ ಸಖಾಫಿ, ಕಾಶಿಪಟ್ಣ

********************

ಅಂದು 1990 ಇಸವಿ. ಕನ್ನಡ ಮಣ್ಣಿನಲ್ಲಿ ಯಾವುದೇ ಸಂಘಟನೆ ಸಕ್ರಿಯವಾಗಿಲ್ಲ.

ಒಂದೇ ಒಂದು ವಿದ್ಯಾ ಸಂಸ್ಥೆ ಜನ್ಮ ತಾಳಿರಲಿಲ್ಲ.

ಸುನ್ನೀ ಸಾಹಿತ್ಯ ರಂಗದಲ್ಲಿ ಹುಟ್ಟಿದ  ಪತ್ರಿಕೆಗಳು ಹೆಚ್ಚು ಕಾಲ ಬಾಳಿಕೆ ಬಂದಿಲ್ಲ.


ಕೇರಳದ ಸಂಘಟನಾ ಸಕ್ರಿಯತೆಯಿಂದ ಪ್ರಚೋದನೆಗೊಂಡ 

ನವ ಬಿರುದುದಾರಿ ಯುವ ವಿದ್ವಾಂಸರು ಕನ್ನಡ ಮಣ್ಣಿನಲ್ಲಿ ಸಂಘಟನೆಯನ್ನು 

ಕಟ್ಟಿ ಬೆಳೆಸಲೇ ಬೇಕೆಂದು  ಪಣ ತೊಟ್ಟು ಕಾರ್ಯರಂಗಕ್ಕಿಳಿದಿದ್ದರು.


ಆದರೆ , ಅಂದು ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಏಕೆಂದರೆ, ಸಂಘಟನೆಯ ಪರಿಜ್ಞಾನದ ಕೊರತೆ, ಕಾರ್ಯಕರ್ತರ ಅಭಾವ, ಆರ್ಥಿಕ ಮುಗ್ಗಟ್ಟು ಇವೆಲ್ಲವೂ ಬಹಳವಾಗಿ ಕಾಡುತ್ತಿದ್ದ ಕಾಲವಾಗಿತ್ತದು. 

ಆದ್ದರಿಂದಲೇ ಹಲವು ಯುವ ವಿದ್ವಾಂಸರು ಮತ್ತು ನಾಯಕರು ಈ ಶೂನ್ಯತೆಯನ್ನು ತುಂಬುವ ಪ್ರಯತ್ನಕ್ಕೆ ಕೈ ಹಾಕಿ ವಿಫಲತೆಯನ್ನು ಕಂಡ ಅನುಭವಗಳೂ ಇವೆ. 


ಇಂತಹ ಸಂದರ್ಭದಲ್ಲಿ ಇಲ್ಲಿನ ಯುವ ವಿದ್ವಾಂಸರಲ್ಲಿ ದೈರ್ಯ ತುಂಬಿ ಪ್ರಥಮ ವಿದ್ಯಾಸಂಸ್ಥೆ ಎಂಬ ನೆಲೆಯಲ್ಲಿ ಝೀನತ್ ಬಕ್ಷ್ ಯತೀಂಕಾನ,ಅಲ್ ಅನ್ಸಾರ್ ವಾರಪತ್ರಿಕೆ ಹಾಗೂ ಎಸ್ಸೆಸ್ಸೆಫ್, SYS ಸಂಘಟನೆಗಳಿಗೆ ಅಡಿಪಾಯ ಹಾಕಿಸಿ ಕೊಟ್ಟವರಲ್ಲಿ ಬಾವ ಹಾಜಿಯೂ ಒಬ್ಬರು. ಯುವ ವಿದ್ವಾಂಸರು ಮುನ್ನುಗ್ಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದುದರ ಹಿಂದೆ ಮರ್ಹೂಮ್ ಬಾವಾ ಹಾಜಾರ್ ರವರ ಪಾತ್ರವೂ ಇತ್ತು. ಆ ಬೆಂಬಲ ಸಣ್ಣದೇನೂ ಆಗಿರಲಿಲ್ಲ.    


ಅಲ್ ಅನ್ಸಾರ್ ಪತ್ರಿಕೆ ತನ್ನ ಈ ಸುದೀರ್ಘವಾದ ಜೈತ್ರ ಯಾತ್ರೆಯನ್ನು ಮುಂದುವರಿಸಿದ್ದರೆ ಅದು ಅನೇಕಾರು ಏಳು ಬೀಳುಗಳನ್ನು ಕಂಡಿದೆ ಎಂಬುದು ಅದರಲ್ಲಿ ದುಡಿದವರಿಗೆ ಮಾತ್ರ ಗೊತ್ತು. 

 

 ಆದರೆ, ಈ ಎಲ್ಲಾ ಏಳು ಬೀಳುಗಳನ್ನು ಸಮರ್ಥವಾಗಿ ಎದುರಿಸಿ ಪತ್ರಿಕೆ ಯನ್ನು ಉಳಿಸಿ ಬೆಳಿಸಿದ ವ್ಯಕ್ತಿಯಾಗಿದ್ದರು ಬಾವಾ ಹಾಜಾರ್.


ಎಸ್ಸೆಸ್ಸೆಫ್ ಸಂಘಟನೆಯ ಆದಿಯಿಂದ ಇಂದಿನವರೆಗೂ ಸಂಪೂರ್ಣ ಬೆನ್ನೆಲುಬಾಗಿ ನಿಂತ ಮಾದರೀ ಉಮರಾ ನಾಯಕರಾಗಿದ್ದರು.

ಅನೇಕ ಸಂದರ್ಭಗಳಲ್ಲಿ ಅವರು ನೀಡಬೇಕಾದ ಎಲ್ಲಾ ಸಹಾಯಗಳ ಹೊರತಾಗಿಯೂ ಅಗತ್ಯ ಬಿದ್ದಾಗ ಸಾವಿರಾರು ರೂಪಾಯಿ ಸಾಲದ ರೂಪದಲ್ಲಿ ನೀಡಿ ಸಹಕರಿಸಿದ್ದರು. ಎಸ್ಸೆಸ್ಸೆಫ್ ಸಂಘಟನೆಯನ್ನು  ಕಟ್ಟಿ ಬೆಳೆಸುವುದಲ್ಲಿ ಅವರ ಶ್ರವ ಇದೆ ಎಂಬ ಸತ್ಯವು ಇಂದಿನ ತಲೆಮಾರಿನ ಅನೇಕರಿಗೆ ತಿಳಿದಿರಬೇಕೆಂದಿಲ್ಲ.

ಅವರ ಶೈಲಿ ಹಾಗಾಗಿತ್ತು.

ಯಾವು ವೇದಿಕೆ, ಪ್ರಚಾರ, ಪ್ರಶಸ್ತಿ ಬಯಸದೆ ಅತ್ಯಂತ ನಿಸ್ವಾರ್ಥ ಸೇವೆ ಗೈದಿದ್ದರು. ನಿಸ್ವಾರ್ಥ ಸೇವೆಯ  ಇನ್ನೊಂದು ಹೆಸರೇ ಬಾವಾ ಹಾಜಿ ಎಂದರೆ ಅತಿಶಯೋಕ್ತಿಯಾಗಲಾರದು.


ಅನೇಕ ಸಂದರ್ಭಗಳಲ್ಲಿ ಅವರಿಂದ ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ಅಂದಿನ ಪರಿಸ್ಥಿತಿಯ ಒತ್ತಡಗಳಿಂದ ಸಾಧ್ಯವಾಗದೇ ಅವರನ್ನು ಬೇಟಿಯಾಗಲು ಮುಜುಗುರ ಪಟ್ಟಿದ್ದ ಸಂದರ್ಭಗಳೂ ಉಂಟಾಗಿತ್ತು. 

ಅದನ್ನು ಅರ್ಥಮಾಡಿಕೊಂಡು ಕೆಲವೊಮ್ಮೆ ಅವರೇ ನಮ್ಮನ್ನು ಸಂಪರ್ಕಿಸಿ ಸಮಾಧಾನ ಪಡಿಸುತ್ತಿದ್ದರು.


ಒಂದು ಸಂದರ್ಭದಲ್ಲಿ ಸಂಘಟನೆಗೆ ಬೇಕಾಗಿ ಅವರಿಂದ ಪಡೆದ ಸಾಲದ ಒಂದು ಮೊತ್ತವನ್ನು ಒಂದು ಅವಧಿಗೆ ನೀಡಬೇಕಾಗಿತ್ತು.


ಕೊಟ್ಟ ಮಾತನ್ನು ಪಾಲಿಸಬೇಕೆಂಬ ಏಕೈಕ ಉದ್ದೇಶದಿಂದ ಬಹಳ ಕಷ್ಟಪಟ್ಟು ಎಲ್ಲಿಂದೆಲ್ಲಾ ಹಣವನ್ನು ಸರಿಹೊಂದಿಸಿ ಆ ಅವಧಿಗೆ  ಅವರಿಗೆ ನೀಡಿದೆವು.


ನೀಡಿದ ನಂತರ ಹಣ ಹೊಂದಿಸಿದ ಕಷ್ಟಪಾಡುಗಳ ಬಗ್ಗೆ ಅವರು ಅರಿತಾಗ ಅವರೇ ಆ ಹಣದ ಕಟ್ಟನ್ನು ಹಿಂತಿರುಗಿಸಿ ನೀವು ಸರಿಯಾಗಿ ಅನುಕೂಲವಾದ ನಂತರ ಕೊಟ್ಟರೆ ಸಾಕೆಂದು ಹೇಳಿ ಕಳುಹಿಸಿದರು.

ಇಂತಹ ಅದೆಷ್ಟೋ ಅವರ ಉದಾರತೆಯ ಉದಾಹರಣೆಗಳಿವೆ.

ಬರೆಯುತ್ತಾ ಹೋದರೆ ಮುಗಿಯದು.


ತನ್ನ ಖಾಸಗಿ ಜೀವನದಲ್ಲಿ ಶರೀಅತ್‌ನ ನಿಯಮಗಳನ್ನು ಬಹಳ ಎಚ್ಚರಿಕೆಯಿಂದ ಪಾಲಿಸುವುದರಲ್ಲಿ ಸಾಮಾನ್ಯ ವಿದ್ವಾಂಸರನ್ನೂ ನಾಚಿಸುವ ರೀತಿಯಲ್ಲಿ ಅತಿ ದೊಡ್ಡ ಮಾದರೀ ಜೀವನದ ವಕ್ತಾರರಾಗಿ ಎಲ್ಲಾ ಉಮರಾಗಳಿಗೂ ಅದ್ಬುತ ಮಾದರಿಯಾಗಿ ಜೀವಿಸಿದ ವರಾಗಿದ್ದರು ಬಾವಾ ಹಾಜಿಯವರು.


ಅವರ ಅಗಲಿಕೆಯು ನಮ್ಮನ್ನು ಅತ್ಯಂತ ದುಃಖ ತಪ್ತ ರನ್ನಾಗಿ ಮಾಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ , ಅಲ್ಲಾಹು ಅವರ ರೂಹನ್ನು ಹಿಡಿಯಲು ಆಯ್ಕೆ ಮಾಡಿದ ತಿಂಗಳು ಮತ್ತು ದಿನದ ಬಗ್ಗೆ ಚಿಂತಿಸುವಾಗ ನಮಗೆ ಸಮಾಧಾನವಾಗುತ್ತದೆ.ರಂಝಾನಿನ ಪವಿತ್ರ ಮುಸ್ಸಂಜೆಯ ಹೊತ್ತು ಅವರ ಪ್ರಾಣ ಪಕ್ಷಿ ಹೊರಟು ಹೋದ ಸಮಯ.


ಯಾ ಅಲ್ಲಾಹ್ ! ನಮ್ಮನ್ನೂ ,ನಮ್ಮ ಬಾವ ಹಾಜಿಯವರನ್ನು ಶೈಖುನಾ ತಾಜುಲ್ ಉಲಮಾರೊಂದಿಗೆ  ಸ್ವರ್ಗದಲ್ಲಿ ಒಟ್ಟು ಸೇರಿಸು.ಆಮೀನ್.

Comments

Popular Posts