MUSTHAFA HASAN ALQADRI OFFICIAL : July 2020

Translate

Thursday, July 30, 2020

ನಾವು ಎಡವಿದ್ದೆಲ್ಲಿ?

ನಾವು ಎಡವಿದ್ದೆಲ್ಲಿ? 
____________

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
_____________

ಹಝ್ರತ್ ಸುಲೈಮಾನ್ ನೆಬಿ  ಅಲೈಹಿಸ್ಸಲಾಮ್ ರ ಕಾಲದಲ್ಲಿ  ನೀರಿಲ್ಲದೆ ಒಂದು ದೊಡ್ಡ ಬರಗಾಲ ತಲೆದೋರಿತ್ತು. 
ಸುಲೈಮಾನ್ ನೆಬಿ ಅಲೈಹಿಸ್ಸಲಾಮರು ಎಲ್ಲಾ ಜೀವಿಗಳ ಭಾಷೆಗಳನ್ನು ತಿಳಿದ ಸರಿಸಾಟಿ ಇಲ್ಲದ ಆಗರ್ಭ ಶ್ರೀಮಂತರೂ ಜಾಗತಿಕ ಚಕ್ರವರ್ತಿಯೂ ಆಗಿದ್ದರು.

ಬರಗಾಲದಿಂದ ರಕ್ಷಣೆ ಪಡೆಯಲು ಬೇಕಾದ ಪ್ರತ್ಯೇಕ ಪ್ರಾರ್ಥನೆ ನಡೆಸಲು ಎಲ್ಲರನ್ನೂ ಸೇರಿಸಿ ಮೈದಾನಕ್ಕೆ ಹೊರಟಿದ್ದರು.

ಹೋಗುವ ದಾರಿ ಮಧ್ಯೆ ಒಂದು ಇರುವೆ ತನ್ನ ಕೈಕಾಲುಗಳನ್ನು ಆಕಾಶಕ್ಕೆ ಎತ್ತಿ ಮಲಗಿ ಪ್ರಾರ್ಥಿಸುವುದನ್ನು ದೂರದಿಂದ ಸುಲೈಮಾನ್ ನೆಬಿ ಅಲೈಹಿಸ್ಸಲಾಮ್ ಕಂಡರು.
ಆ ಪ್ರಾರ್ಥನೆ ಹೀಗಿತ್ತು.

اللهم، إنا خَلْقٌ مِن خلقِك، ليس بنا غنًى عن سُقيَاك

ಯಾ ಅಲ್ಲಾಹ್ ನಾವು ನಿನ್ನ ಸೃಷ್ಟಿಗಳಲ್ಲಿ ಸೇರಿದ ಒಂದು ವಿಭಾಗ ಸೃಷ್ಟಿಗಳು.ನಮಗೂ ನಿನ್ನ ನೀರಿನ ಅವಶ್ಯಕತೆ ಇದೆ ಎಂದಾಗಿತ್ತು ಅದರ ಅರ್ಥ.

ಇದನ್ನು ಕಂಡ ಸುಲೈಮಾನ್ ಅಲೈಹಿಸ್ಸಲಾಮರು ತನ್ನ ಅನುಚರರಲ್ಲಿ ಹೇಳಿದರು.
ಎಲ್ಲರೂ ಹಿಂತಿರುಗಿ ಹೋಗಿರಿ.ನಾವು ಪ್ರಾರ್ಥಿಸಬೇಕಾದ ಅವಶ್ಯಕತೆ ಇಲ್ಲ.
ಸೃಷ್ಟಿಗಳಲ್ಲಿ ನಾವಲ್ಲದ ವಿಭಾಗವಾದ ಇರುವೆಗಳ ಪ್ರಾರ್ಥನೆಯಿಂದ ನಮ್ಮ ಬೇಡಿಕೆಗಳು ಸೇರಿ ಈಡೇರಿವೆ.

ಹಝ್ರತ್ ಮೂಸಾ ಅಲೈಹಸ್ಸಲಾಮರ ಕಾಲದಲ್ಲಿ ಅತ್ಯಂತ ದೊಡ್ಡ ಕ್ಷಾಮ ತಲೆದೋರಿತ್ತು.ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮೂಸಾ ಅಲೈಹಿಸ್ಸಲಾಮರು ದುಆ ನಡೆಸಿದರು.ಆದರೆ ಮಳೆ ಬರಲೇ ಇಲ್ಲ. 
ಕ್ಷಾಮ ಮತ್ತಷ್ಟು ಬಿಗುಡಾಯಿಸಿತು.
ಮೂಸಾ ಅಲೈಹಿಸ್ಸಲಾಮರು ಅಲ್ಲಾಹನಲ್ಲಿ ಕೇಳಿದರು.ಯಾ ಅಲ್ಲಾಹ್ ಯಾಕೆ ನಮ್ಮ ದುಆ ಸ್ವೀಕರಿಸಿಲ್ಲ.
ನಿಮ್ಮ ಸಮೂಹದಲ್ಲಿರುವ ಒಬ್ಬ ವ್ಯಕ್ತಿ ಕಳೆದ ನಲ್ವತ್ತು ವರ್ಷಗಳಿಂದ ನನ್ನನ್ನು 
ದಿಕ್ಕರಿಸಿ ತಪ್ಪುಗಳನ್ನು ಮಾಡುತ್ತಿದ್ದಾನೆ.ಅವನನ್ನು ಹೊರಹಾಕುವ ವರೆಗೆ ನಿಮ್ಮ ದುಆ ಸ್ವೀಕರಿಸಲಾಗದು.
ಮೂಸಾ ಅಲೈಹಿಸ್ಸಲಾಮರು ಸಮೂಹದೊಂದಿಗೆ ಹೇಳಿದರು.ಈ ಸಮೂಹದಲ್ಲಿ ಅಲ್ಲಾಹನ ವಿರುದ್ಧ ತಪ್ಪುಗಳನ್ನು ಮಾಡುವ ವ್ಯಕ್ತಿ ಇದ್ದು ಅವನು ಇಲ್ಲಿಂದ ಹೊರಟು ಹೋಗುವವರೆಗೆ ನಮ್ಮ ದುಆ ಸ್ವೀಕರಿಸಲ್ಪಡದು.ಆದ್ದರಿಂದ ಆ ವ್ಯಕ್ತಿ ಇಲ್ಲಿಂದ ಹೊರಟು ಹೋಗಬೇಕೆಂದರು.
ಆ ಸಭೆಯಲ್ಲೇ ಇದ್ದ ಆ ತಪ್ಪುಮಾಡುತ್ತಿದ್ದ ವ್ಯಕ್ತಿ ತನ್ನ ಸುತ್ತ ಮುತ್ತ ನೋಡಿದ. ಯಾರೂ ಈ ಸಭೆಯಿಂದ ಹೊರಟು ಹೋಗುವುದು ಕಾಣದಿದ್ದಾಗ ಇದು ನನ್ನನ್ನು ಉದ್ದೇಶಿಸಯಾಗಿದೆ ಎಂದು ಅವನಿಗೆ ಖಾತ್ರಿಯಾಯಿತು. ಆಗ ಅವನು ತಲೆ ತಗ್ಗಿಸಿ ಅಲ್ಲಾಹನಲ್ಲಿ ಮನಸ್ಸಾರೆ ಪಶ್ಚಾತ್ತಾಪ ಪಟ್ಟು ಹೇಳುತ್ತಾನೆ.
ಓ ಅಲ್ಲಾ ನಾನು ತಪ್ಪು ಮಾಡುತ್ತಿದ್ದುದು ನಿಜ.ಈಗ ಈ ಸಭೆಯಿಂದ ನಾನು ಹೊರಟು ಹೋದರೆ ನಾನು ಈ ಜನಮಧ್ಯೆ ಅವಮಾನಿತನಾಗುವುದು ಖಂಡಿತ.
ಹೊರಟು ಹೋಗದೇ ಇದ್ದಲ್ಲಿ ನನ್ನ ಕಾರಣದಿಂದ ಇಡೀ ಸಮೂಹವೇ ತೊಂದರೆ ಅನುಭವಿಸಬೇಕಾಗುತ್ತದೆ.
ಆದ್ದರಿಂದ ನಾನು ಮುಂದೆ ಯಾವುದೇ ತಪ್ಪು ಮಾಡಲಾರೆ ಖಂಡಿತ.ನನ್ನನ್ನು ಕ್ಷಮಿಸು ಎಂದು ಅಂಗಲಾಚಿದ.
ತಕ್ಷಣವೇ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಯಲಾರಂಭವಾಯ್ತು.
ಮೂಸಾ ಅಲೈಹಿಸ್ಸಲಾಮರು ಕೇಳಿದರು.ಓ ಅಲ್ಲಾಹ್ ನಿನಗೆ ತಪ್ಪು ಮಾಡಿದ ಈ ಸಭೆಯಿಂದ ಹೊರಟು ಹೋಗಿಲ್ಲ.
ಮತ್ತೆ ಹೇಗೆ ನೀನು ಮಳೆ ಸುರಿಸಿರುವುದು.
ಓ ಮೂಸಾರವರೇ ಯಾವ ವ್ಯಕ್ತಿಯ ಪಾಪದಿಂದ ನಿಮಗೆ ಮಳೆಯನ್ನು ತಡೆ ಹಿಡಿಯಲ್ಪಟ್ಟಿತ್ತೋ ಅದೇ ವ್ಯಕ್ತಿಯ ತೌಬಾದಿಂದ ಇದೀಗ ನಿಮಗೆ ಮಳೆ ನೀಡಲ್ಪಟ್ಟಿತು ಎಂದು ಅಲ್ಲಾಹು ಉತ್ತರಿಸಿದ.
ಮೂಸಾ ಅಲೈಹಿಸ್ಸಲಾಮರು ಕೇಳಿದರು. 
ಹಾಗಾದರೆ ಈಗ  ಸಜ್ಜನನಾಗಿ ಬದಲಾದ ಆ ವ್ಯಕ್ತಿ ಯಾರಿರಬಹುದು.
ಅವನು ತಪ್ಪು ಮಾಡುತ್ತಿದ್ದಾಗ ಅವನನ್ನು ಅವಮಾನಿಸದ ನಾನು ಇದೀಗ ತಪ್ಪುಗಳೆನ್ನೆಲ್ಲಾ ಬಿಟ್ಟು ಸಜ್ಜನನಾದಾಗ ಅವಮಾನಿಸ ಬೇಕೇ.
ಆದ್ದರಿಂದ ಆ ವ್ಯಕ್ತಿ ಯಾರೆಂದು ಹೇಳಲಿಕ್ಕಾಗದು ಎಂದು ಅಲ್ಲಾಹು ಉತ್ತರಿಸಿದ.

ಒಂದು ಶುಕ್ರವಾರ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮದೀನಾ ಮಸ್ಜಿದ್ ನಲ್ಲಿ ಖುತ್ಬಾ ನಿರ್ವಹಿಸುತ್ತಿದ್ದರು.
ಗ್ರಾಮವಾಸಿಯಾದ ಒಬ್ಬ ವ್ಯಕ್ತಿ ಬಂದು ಹೇಳುತ್ತಾರೆ.
ಓ ಪ್ರವಾದಿಯವರೇ ನೀರಿಲ್ಲದೆ ಬರಗಾಲದಿಂದ ಕೃಷಿ, ಜಾನುವಾರು,ಸಂಪತ್ತೆಲ್ಲಾ ನಾಶವಾಗುತ್ತಿದೆ.
ಮಕ್ಕಳು ಮರಣ ಹೊಂದಲಾರಂಭಿಸಿದರು.
ಆದ್ದರಿಂದ ಮಳೆ ಬೇಕು.ಮಳೆಗಾಗಿ ಪ್ರಾರ್ಥಿಸ ಬೇಕು.
ಅಷ್ಟರಲ್ಲಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಓ ಅಲ್ಲಾಹ್ ನಮಗೆ ಮಳೆ ಬೇಕು.
ನಮಗೆ ಮಳೆ ನೀಡು.
ಅಷ್ಟು ಹೇಳಿದ್ದು ತಡ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.
ಸಹಾಬಿಗಳು ಹೇಳಿದರು. ನಡುಬಿಸಿಲಲ್ಲಿ ಅಂದು ಮಸೀದಿಗೆ ಬಂದ ನಾವು ಮಳೆಯಲ್ಲಿ ನೆನೆದು ಮನೆಗೆ ಮರಳಿದೆವು.
ಧಾರಾಕಾರ ಮಳೆ ಮುಂದುವರಿದಿತ್ತು.
ಒಂದು ವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಅತಿವೃಷ್ಟಿ ತಲೆದೋರಿತು.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೇಳಿ ಪಡೆದ ಮಳೆಯಾಗಿರುವುದರಿಂದ ಅವರು ಹೇಳದೆ ನಿಲ್ಲದು ಎಂಬ ಮಟ್ಟದಲ್ಲಿ ಮುಂದು ವರಿಯುತ್ತಲೇ ಇತ್ತು.
ಮರು ಶುಕ್ರವಾರ ಅದೇ ವ್ಯಕ್ತಿ ಅಥವಾ ಬೇರೆ ವ್ಯಕ್ತಿ ಹೇಳುತ್ತಾರೆ. 
ಓ ಪ್ರವಾದಿವರ್ಯರೇ ಮಳೆ ಜಾಸ್ತಿ ಆಯಿತು. ಅತಿವೃಷ್ಟಿಯಿಂದ ನಾಶ ನಷ್ಟಗಳು ಸಂಭವಿಸಿದೆ.

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕೈ ತೋರಿಸಿ ಯಾ ಅಲ್ಲಾಹ್ ಇಲ್ಲಿ ನಮಗೆ ಮಳೆ ಸಾಕು.ನಮ್ಮ ಸುತ್ತ ಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಬರಲಿ ಎಂದರು.ಅಷ್ಟರಲ್ಲೇ ಮದೀನಾ ಪಟ್ಟಣ ಮಳೆ ಮುಕ್ತವಾಯಿತು.

ಇದೆಲ್ಲಾ ಇತಿಹಾಸದಲ್ಲಿ ನಡೆದು ಹೋದ ಘಟನೆಗಳು.
ಮಾನವ ಸಮೂಹವನ್ನು ಅಲ್ಲಾಹನು ಅನೇಕ ವಿಪತ್ತುಗಳಿಂದ ಪರೀಕ್ಷೆಗೆ ಒಳಪಡಿಸಿದ್ದಾನೆ.
ಆದರೆ ಅದೆಲ್ಲವೂ ಒಂದು ಸಮಯ ಮಿತಿಯೊಳಗೆ ಪ್ರವಾದಿಗಳ,ಸಜ್ಜನರ ಮದ್ಯಪ್ರವೇಶಗಳಿಂದ ಕೊನೆಗಾಣಿಸಿದ ಅನುಭವಗಳು ಬೇಕಾದಷ್ಟಿದೆ.

ಆದರೆ ಇದೀಗ ಕೋವಿಡ್ 19 ನಿಂದ ಜಗತ್ತು ನಲುಗಿ ಹೋಗಿದೆ.ಪರಿಹಾರೋಪಾಯಗಳು ಭರದಿಂದ ಸಾಗುತ್ತಿದೆ.ಪ್ರಾರ್ಥನೆಗಳು,ದುಆಗಳು ನಿರಂತರ ನಡೆಯುತ್ತಲೇ ಇದೆ.ಆದರೆ ಪರಿಹಾರ ಮಾತ್ರ ಶೂನ್ಯಾತಿಶೂನ್ಯ.

ಹಾಗಾದರೆ ನಾವು ಎಡವಿದ್ದೆಲ್ಲಿ ?????

ಮುಂದುವರಿಯುವುದು

Thursday, July 23, 2020

ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ

ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ 
************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
************
ಮೊನ್ನೆ ಒಬ್ಬ ಒಂದು ಬೆಕ್ಕನ್ನು ಹಿಂಸಿಸುವ ದೃಶ್ಯ ವೈರಲಾಯ್ತು.ಆ ದೃಶ್ಯ ಹೇಗಿತ್ತೆಂದರೆ ಹೃದಯದಲ್ಲಿ ಒಂದು ಅಣು ವಿನಷ್ಟಾದರೂ ಕರುಣೆಯಿರುವ ಮನಸ್ಸಿಗೆ ಆ ದೃಶ್ಯವನ್ನು ನೋಡಿ ಮುಗಿಸಲು ಕೂಡಾ ಸಾಧ್ಯವಾಗದು.ಅದು ಅಷ್ಟೊಂದು ವಿಕೃತ ರೀತಿಯಲ್ಲಾಗಿತ್ತು.
ಇನ್ನು ನೋಡಿದವರಿಗೂ ಆ ಬೆಕ್ಕಿನ ನರಳಾಟ ನೋಡಿ ಕಣ್ಣೀರಿಡದಿರಲು ಸಾಧ್ಯವಿಲ್ಲ
ಮತ್ತೊಂದು ಕಡೆ ಒಂದು ಮನೆಯಲ್ಲಿ ಹಿರಿಯ ವಯಸ್ಸಿನ ಒಂದು ಅಜ್ಜಿಯನ್ನು ಸ್ವಂತ ಮಗ ಮತ್ತು ಮೊಮ್ಮಗ ಸೇರಿ ಅತಿ ಕ್ರೂರವಾಗಿ ಹಿಂಸಿಸುತ್ತಿರುವ ದೃಶ್ಯವೂ ವೈರಲಾಯ್ತು.
ತಮಿಳುನಾಡಿನಲ್ಲಿ ಪೋಲೀಸರಿಂದ ಅತಿಕ್ರೂರವಾಗಿ ಹಿಂಸೆಗೊಳಗಾಗಿ ಮೃತಪಟ್ಟ ಎರಡು ಜೀವಗಳ ದೃಶ್ಯ.
ಅದೇ ರೀತಿ ಲಾಕ್ ಡೌನ್ ಸಮಯದಲ್ಲಿ ಕೆಲವು ಕಡೆ ಪೋಲೀಸರು ತೋರಿದ ಹಿಂಸೆಯ ರುದ್ರಾವತಾರ.
ಅದೇ ರೀತಿ ಕೋಮುವಾದ,ಭಯೋತ್ಪಾದನೆ,ರಾಜಕೀಯ ವೈರಾಗ್ಯಗಳ ಅಮಲಿನಲ್ಲಿ ನಡೆಯುವ ಅತಿಕ್ರೂರವಾದ ಹಿಂಸೆಯ ಬೇರೆ ಬೇರೆ ದೃಶ್ಯಾವಳಿಗಳು.

ಇದೆಲ್ಲವನ್ನು ವೀಕ್ಷಿಸುವಾಗ ಇಲ್ಲಿ ಮಾಹಾಮಾರಿಯಂತಹ ಪಿಡುಗು ಬರದೇ ಇದ್ದರೆ ಅದ್ಬುತವೆಂದು ಎನಿಸದಿರದು.
ಈ ಸಂದರ್ಭದಲ್ಲಿ ನೆನಪಿಗೆ ಬರುವುದು ಕಾರುಣ್ಯದ ಸಮುದ್ರವಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸಾಗಿದೆ.

الراحمون يرحمهم الرحمن ارحموا من في الأرض يرحمكم من في السماء
ಪರಸ್ಪರ ಕರುಣೆಯಿರುವವರಿಗೆ ಕರುಣಾನಿಧಿಯಾದ ಅಲ್ಲಾಹು ಕರುಣೆ ನೀಡುವವನು.ಭೂಮಿಯಲ್ಲಿರುವವರಿಗೆ ಕರುಣೆ ನೀಡಿರಿ.ಆಕಾಶದ ಅಧಿಪತಿಯಾದ ಅಲ್ಲಾಹು ನಿಮಗೆ ಕರುಣೆ ನೀಡುವನು.ಅಂದರೆ ಅಲ್ಲಾಹನ ಕರುಣೆ ಈ ಭೂಮಿಗೆ ವರ್ಷಿಸುತ್ತಿರ ಬೇಕಾದರೆ ಭೂಮಿಯಲ್ಲಿರುವವರು ಪರಸ್ಪರ ಕರುಣಾಮಯಿಗಳಾಗ ಬೇಕು ಎಂದಾಗಿದೆ 
ಇವತ್ತಿನ ಕೆಲವು ಘಟನೆಗಳನ್ನು ನೋಡುವಾಗ ಈ ಹದೀಸ್ ಬಹಳ ಪ್ರಸ್ತುತವೆನಿಸುತ್ತದೆ.
ಕರುಣೆಯಿರುವ ಮನುಷ್ಯ ಮನಸ್ಸುಗಳು ಪ್ರೀತಿಯಿಂದ ಮುದ್ದಿಸುವ ಹಾಗೂ ಹಸಿದಾಗ ಮಾತ್ರ ತನ್ನದೇ ಭಾಷೆಯಲ್ಲಿ ಸೂಚನೆ ನೀಡುವ ತನ್ನ ಸಾಕುಗಾರರೊಂದಿಗೆ ಅತ್ಯಂತ ವಿನಯದಿಂದ ವರ್ತಿಸುವ ಎಲ್ಲರ ಅಚ್ಚುಮೆಚ್ಚಿನ ನಿರುಪದ್ರವಿ ಪ್ರಾಣಿಯಾಗಿದೆ ಬೆಕ್ಕು.
ಇಂತಹ ಮೂಕ ಪ್ರಾಣಿಯನ್ನು ಅತ್ಯಂತ ನಿಷ್ಕರುಣೆಯಿಂದ ಹಿಂಸಿಸಿ ಅದರ ವೀಡಿಯೋ ವೈರಲ್ ಮಾಡಿ ಮಜಾ ಉಡಾಯಿಸುವ ಮನಸ್ಸು ಎಂತಹ ನಿಕೃಷ್ಟ ಮನಸ್ಸಾಗಿರ ಬಹುದು ಎಂಬುದೇ ಅರ್ಥವಾಗದ ವಿಚಾರ.
ಆ ಬೆಕ್ಕು ಆ ಸಮಯದಲ್ಲಿ ಎಷ್ಟೊಂದು ವೇದನೆ ಯಾತನೆ ಅನುಭವಿಸಿರ ಬಹುದು ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ.

ಮನುಷ್ರ ಬಕ್ಷ್ಯಕ್ಕಾಗಿಯೇ ಸೃಷ್ಟಿಸಲ್ಪಟ್ಟ ಕೆಲವು ಬಕ್ಷ್ಯಯೋಗ್ಯ ಪ್ರಾಣಿ ಪಕ್ಷಿಗಳನ್ನು ಕೂಡಾ ಬಕ್ಷ್ಯಕ್ಕಾಗಿ ಉಪಯೋಗಿಸುವಾಗ ಅತ್ಯಂತ ಎಚ್ಚರಿಕೆಯಿಂದ ಧಬಹ್ ಮಾಡ ಬೇಕೆಂದಾಗಿದೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟಿರುವುದು.
ಮಾತ್ರವಲ್ಲ ಧಬಹ್ ಮಾಡುವಾಗ ಆ ಪ್ರಾಣಿಪಕ್ಷಿಗಳಿಗೆ ಯಾವುದೇ ನೋವು ಅನುಭವವಾಗದಿರಲು  ಅತ್ಯಂತ ಹರಿತವಾದ ಚಾಕುವಿನಿಂದ ಅನ್ನ ಮತ್ತು ಶ್ವಾಸ ನಾಳಗಳನ್ನು ತಕ್ಷಣ ಕತ್ತರಿಸಬೇಕು.ಯಾಕೆಂದರೆ ಈ ಎರಡು ನಾಳಗಳು ಕತ್ತರಿಸಲ್ಪಡುವುದರೊಂದಿಗೆ ಅದರ ಮೆದುಳಿನ ಸಂಪರ್ಕ ಕಡಿತಗೊಳ್ಳುತ್ತದೆ. 
ನಂತರ ಆ ಪ್ರಾಣಿಗೆ ಯಾವುದೇ ನೋವಿನ ಅನುಭವವಾಗುವುದಿಲ್ಲ.
ಇದು ಯಾವುದೇ ಹಿಂಸೆಯಾಗದಂತೆ ಧಬಹ್ ಮಾಡುವ ರೀತಿಯಾಗಿದೆ.

ಆದರೆ ಇದಕ್ಕೆ ವಿರುದ್ಧವಾಗಿ ಪ್ರಾಣಿಪಕ್ಷಿಗಳೊಂದಿಗೆ ಕರುಣೆಯಿಲ್ಲದ ರೀತಿಯಲ್ಲಿ ಕಂಡು ಬರುವ ಯಾವುದೇ ಧಬಹ್ ಗಳು ಅದು ಯಾರೇ ನಡೆಸಲಿ ಇಸ್ಲಾಮ್ ಕಲಿಸಿ ಕೊಟ್ಟಿದ್ದಲ್ಲ.
ಅದಕ್ಕೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಇಸ್ಲಾಮ್ ಯಾವುದೇ ಪ್ರಾಣಿಪಕ್ಷಿ ಗಳೊಂದಿಗೂ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದೇ ಇಲ್ಲ.
ಆದ್ದರಿಂದಲೇ ಪ್ರಾಣಿಪಕ್ಷಿಗಳಿಗೆ ಹಿಂಸೆಗೆ ಕಾರಣವಾಗುವ ಕಂಬಳ,ಕೋಳಿ ಅಂಕದಂತಹ ಕಾರ್ಯಗಳನ್ನು ಇಸ್ಲಾಮ್ ವಿರೋಧಿಸಿರುವುದು.

عبد الله بن مسعود رضي الله عنه  قال كنا مع النبى صلى الله عليه وسلم فى سفر فانطلق لحاجته، فرأينا حُمَّرةً  معها فرخان، فأخذنا فرخيها، فجاءت الحمرة فجعلت تفرش من الأرض، فجاء النبي ـ صلى الله عليه وسلم ـ فقال: من فجع هذه بولدها؟، ردوا ولدها إليها  رواه أبو داود

ಅಬ್ದುಲ್ಲಾಹಿಬ್ನ್ ಮಸ್ಊದ್ ರಳಿಯಲ್ಲಾಹು ಅನ್ಹುರವರು ಹೇಳುತ್ತಾರೆ:- ನಾವು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಒಂದು ಯಾತ್ರೆ ಹೋಗುತ್ತಾ ಇದ್ದೆವು.ದಾರಿ ಮದ್ಯೆ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಅಗತ್ಯ ನಿರ್ವಹಣೆಗೆ ಹೋಗಿದ್ದರು.
ನಾವು ಒಂದು ಸಣ್ಣ ಪಕ್ಷಿ ಮತ್ತು ಅದರ ಎರಡು ಮರಿಗಳನ್ನು ಕಂಡೆವು.ಆ ಪಕ್ಷಿಯ ಎರಡು ಮರಿಗಳನ್ನು ಹಿಡಿದು ತಂದೆವು.ಇದನ್ನರಿತ ತಾಯಿಪಕ್ಷಿಯು ಬಂದು ಆ ಮರಿಗಳೊಂದಿಗಿನ ಪ್ರೀತಿಯಿಂದ ನಮ್ಮೊಂದಿಗೆ ಅತ್ಯಂತ ವಿನಯ ಪ್ರಕಟಿಸುತ್ತಿತ್ತು.
ಆಗ ಅಲ್ಲಿಗೆ ದಾವಿಸಿ ಬಂದ ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇದನ್ನು ಕಂಡಾಗ ಕೇಳಿದರು. ಯಾರು ಈ ಪಕ್ಷಿ ಮತ್ತು ಅದರ ಮರಿಗಳನ್ನು ಬೇರ್ಪಡಿಸಿದ್ದು ತಕ್ಷಣ ಹಿಂತಿರುಗಿಸಿ ಎಂದು ಆಜ್ಞಾಪಿಸಿದರು.

ಈ ರೀತಿ ಮನುಷ್ಯರು ಮಾತ್ರವಲ್ಲ ಯಾವುದೇ ಪ್ರಾಣಿಪಕ್ಷಿಗಳೊಂದಿಗೆ ಕರುಣೆಗೆ ವಿರುದ್ಧವಾದ ಯಾವುದೇ ವರ್ತನೆಯನ್ನು ಇಷ್ಟಪಡುತ್ತಿರಲಿಲ್ಲ.

ಒಂದು ತಾಯಿ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಎಲ್ಲಾ ನೋವು ನಲಿವುಗಳನ್ನು ಸಮನಾಗಿ ಸಹಿಸಿ ಅವಳು ಅತ್ಯಂತ ಸಂತೋಷಪಡುವ ಸಮಯ ಒಂದು ಮಗುವಿಗೆ ಜನ್ಮ ನೀಡಿದ ಸಮಯದಲ್ಲಾಗಿದೆ.ಆ ಮಗುವಿನ ಮುಖ ದರ್ಶನದೊಂದಿಗೆ ಇದು ವರೆಗೆ ತಾನು ಸಹಿಸಿದ ಎಲ್ಲಾ ನೋವು ನಲಿವುಗಳನ್ನು ಆ ಕರುಣಾಮಯಿ ಮಹಾತಾಯಿ ತಕ್ಷಣ ಮರೆತು ಬಿಡುತ್ತಾಳೆ.

ಇದೇ ತಾಯಿ ಇದೇ ರೀತಿಯ ಇನ್ನೊಂದು ಸಂತೋಷ ಪಡುವ ಸಮಯವಿದೆ.ಅದು ಯಾವುದೆಂದರೆ ಇದೇ ಮಗು ದೊಡ್ಡವನಾಗಿ ಮದುವೆಯಾಗಿ ಅವನಿಗೊಂದು ಮಗು ಹುಟ್ಟುವಾಗಲೂ ಈ ಮಹಾತಾಯಿ ತನ್ನ ಹಿಂದಿನ ಸಂತೋಷಕ್ಕೆ ಸಮಾನವಾದ ಸಂತೋಷ ಗೊಳ್ಳುತ್ತಾಳೆ.ಅಂದು ಮಗುವಾದ ಸಂತೋಷವಾದರೆ ಇಂದು ಮೊಮ್ಮಗನಾದ ಸಂತೋಷವಾಗಿದೆ.ಅಂದರೆ ತಾಯಿಯ ಕರುಣೆಗೆ ಸಮಾನವಾಗಿ ತಾಯಿ ಮಾತ್ರ.
ಇದರಿಂದಾಗಿಯೇ

الجنة تحت اقدام الامهات

ಸ್ವರ್ಗವು ತಾಯಂದಿರ ಕಾಲಿನಡಿಯಲ್ಲಾಗಿದೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುವುದು.

ಇವತ್ತು ಅದೇ ತಾಯಿ ವಯಸ್ಸಾಗಿ ತನ್ನೆಲ್ಲಾ ಶಕ್ತಿಯನ್ನು ಕಳೆದು ಕೊಂಡು ಹಾಸಿಗೆ ಹಿಡಿದು ಮಕ್ಕಳು ಮೊಮ್ಮಕ್ಕಳಿಂದ ಆಸರೆಯನ್ನು ಬಯಸುವ ಈ ಸಮಯದಲ್ಲಿ ಮಗ ಮತ್ತು ಮೊಮ್ಮಗ ಒಟ್ಟು ಸೇರಿ ಸಮಾನವಾಗಿ ನಿಷ್ಠುರವಾಗಿ ಹಿಂಸಿಸುವುದನ್ನು ಈ ಭೂಮಿ ಸಹಿಸಲು ಸಾಧ್ಯವಾ. ಈ ಆಕಾಶಗಳು ಸಹಿಸಲು ಸಾಧ್ಯವಾ.
ಇಲ್ಲಿ ಮಹಾಮಾರಿ ಬಾರದೇ ಇದ್ದರಲ್ಲವೇ ಆಶ್ಚರ್ಯ.

ಅದೇ ರೀತಿ ಕೊಮುವಾದ ಭೀತಿವಾದ ರಾಜಕೀಯ ವೈರಾಗ್ಯಗಳ ಅಮಲುಗಳು ನೆತ್ತಿಗೇರಿಸಿ ಕೊಂಡವರು ಮನುಷ್ಯ ಜೀವಗಳನ್ನು ಜೀವಂತ ಸುಟ್ಟು ಹಾಕುವುದು ಇತರ ಹಿಂಸಾಚಾರ ಚಟುವಟಿಕೆಗಳನ್ನು ನಡೆಸುವುದೆಲ್ಲಾ ಈ ಭೂಮಿಯಲ್ಲಿ ಅಲ್ಲಾಹನ ಶಾಪವೆರಗಲು ಕಾರಣವಾಗಬಹುದು ಎಂಬುದರಲ್ಲಿ ತರ್ಕವಿಲ್ಲ.

ಇನ್ನು ಪೋಲೀಸರಾಗಲೀ ಯಾರೇ ಆಗಲಿ ಮನುಷ್ಯತ್ವವನ್ನು ಮರೆತು ವರ್ತಿಸುವ ಎಲ್ಲಾ ವರ್ತನೆಗಳು ಅಕ್ಷಮ್ಯ ಎಂಬುದರಲ್ಲಿ ತರ್ಕವಿಲ್ಲ.

ಇಡೀ ಜಗತ್ತು ಕಂಗಾಲಾಗಿ ಶಾಂತಿ ಸಮಾಧಾನ ನೆಮ್ಮದಿಗಾಗಿ ಪೋಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಹರಸಾಹಸ ಪಡುತ್ತಿದ್ದಾರೆ.

ಇದೇ ಸಮಯದಲ್ಲಿ ಸಿಕ್ಕಿದ್ದು ಮಕ್ಕಳ ಪುಣ್ಯ ಎಂಬಂತೆ ಕೆಲವು ಮನುಷ್ಯತ್ವವಿಲ್ಲದ ಪೋಲೀಸರು ಮನುಷ್ಯತ್ವದ ಎಲ್ಲಾ ಎಲ್ಲೆಗಳನ್ನು ಮೀರಿ ಸಣ್ಣ ಮಕ್ಕಳು,ಯುವಕರು,ಮುದುಕರು,ಮಹಿಳೆಯರು ಎಂಬ ಯಾವುದೇ ವ್ಯತ್ಯಾಸವಿಲ್ಲದೆ ತೋರಿದ ಹಿಂಸೆಯ ರುದ್ರಾವತಾರ ನೋಡಿದರೆ ಸಹಿಸಲಾಗದು.

ಹೌದು.ಕೆಲವು ಪುಂಡಪುಕಾರಿಗಳನ್ನು ನಿಯಂತ್ರಿಸಲು ಲಾಟಿಯ ಬಿಸಿ ತೋರಿಸ ಬೇಕಾಗಿ ಬರಬಹುದು.

ಅಲ್ಲದೆ ಅವರೇನಾದರೂ ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನಾತ್ಮಕವಾಗಿ ಅದರದೇ ಆದ ರೀತಿ ರಿವಾಜುಗಳಿವೆ.ಆದರೆ ಈ ರೀತಿಯ ಹಿಂಸೆಗೆ ಅವಕಾಶವಿಲ್ಲ.

ಆದರೆ ಅದರ ಹೆಸರಿನಲ್ಲಿ ಮನುಷ್ಯ ಜೀವಗಳನ್ನು ಯಾವುದೇ ಮರ್ಮ ನೋಡದೆ ಹೊಡೆದು ಬಡಿದು ಹಿಂಸಿಸುವುದು ಬಹಳ ದೊಡ್ಡ ಶಾಪಕ್ಕೆ ಕಾರಣವಾದೀತೆಂಬುದನ್ನು ಪೋಲೀಸರೂ ಸೇರಿ ಎಲ್ಲರೂ ಅರಿಯಲೇ ಬೇಕು..
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

Tuesday, July 21, 2020

ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen

ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ 
*************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
*************

ಮೊನ್ನೆ ಒಂದು ಬರಹವನ್ನು ಕಾಣಲು ಸಾಧ್ಯವಾಯ್ತು.ಅದರಲ್ಲಿ ನಾನು ಹಿಂದೆ ಬರೆದ ಬರಹಗಳನ್ನು ಪರಾಮರ್ಶಿಸಿರುವುದು ನೋಡಿ ಬಹಳ ಸಂತೋಷವಾಯಿತು.
ಒಂದನೆಯದಾಗಿ 
ಇದು ಈ ದೇಶದ ಪರಮೋನ್ನತ ಸಂವಿಧಾನ ನೀಡಿದ ವ್ಯಕ್ತಿ ಸ್ವಾತಂತ್ರ್ಯ.
ಒಬ್ಬ ವ್ಯಕ್ತಿ ತಾನು ನಂಬಿದ ಆಶಯವನ್ನು ಹಾಗೂ 
ಆಚಾರ ವಿಚಾರಗಳನ್ನು ಮುಕ್ತವಾಗಿ ಹಾಗೂ ಮಾನ್ಯವಾಗಿ ಸಂವಿಧಾನಕ್ಕೆ ಅನುಗುಣವಾಗಿ ವ್ಯಕ್ತಪಡಿಸುವ ಸ್ವಾತಂತ್ರವಾಗಿರುತ್ತದೆ. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಒಂದು ವಿಚಾರದಲ್ಲಿ ಒಬ್ಬರು ಒಂದು ಅಭಿಪ್ರಾಯ ಅಥವಾ ತನ್ನ ಆಶಯ ವ್ಯಕ್ತಪಡಿಸಿದರೆ ಅದರಲ್ಲಿ ತನಗೆ ವಿರುದ್ಧ ಅಭಿಪ್ರಾಯವಿದ್ದಲ್ಲಿ ಅದನ್ನು ಮಾನ್ಯವಾಗಿ ಪ್ರಕಟಿಸಬೇಕು.
ಅದು ಮಾನ್ಯತೆ.
ಅದು ಬಿಟ್ಟು ನನ್ನ ಮತ್ತು ನನ್ನ ಸಂಘಟನೆಯ ಅನಿಸಿಕೆ ಅಭಿಪ್ರಾಯಗಳನ್ನು ಯಾರೂ ಪ್ರಶ್ನಿಸಬಾರದು.ನಾವು ಮಾಡಿದ್ದೇ ಸರಿ.ನಾವು ಹೇಳಿದ್ದೇ ಪರಮ ಸತ್ಯ ಎಂಬ ನಿಲುವು ಮಾತ್ರ ಒಪ್ಪಲಿಕ್ಕಾಗಲ್ಲ.ಅದು ತುಘಲಕ್ ಮತ್ತು ಹಿಟ್ಲರ್ ಮನೋಭಾವವಾಗುತ್ತದೆ.
ಅದು ಇಲ್ಲಿ ನಡೆಯುವುದಿಲ್ಲ ಉಳಿಯುವುದೂ ಇಲ್ಲ.

ಎರಡನೆಯ ಸಂತೋಷ ಏನೆಂದರೆ ಈ ಪ್ರತಿಕ್ರಿಯೆಯ ಬರಹಗಳಿಂದ ನಮ್ಮ ಬರಹಗಳು ತಲುಪಬೇಕಾದ ಮರ್ಮಗಳಿಗೆ ತಲುಪುತ್ತಿದೆ ಎಂದು ನಮಗೆ ಖಾತ್ರಿಯಾಗುತ್ತಿದೆ. ನಮ್ಮ ಬರಹದ ಉದ್ದೇಶವೂ ಅದುವೇ ತಾನೇ.

ಆದರೆ ಪ್ರಸ್ತುತ ಬರಹದಲ್ಲಿ ಉದ್ಭವಿಸಿದ ಕೆಲವು ಪ್ರಶ್ನೆಗಳಿಗೆ ಮುಂದಿನ ಬರಹದಲ್ಲಿ ಅವರು ಉತ್ತರಿಸುವರು ಎಂಬ ನಿರೀಕ್ಷೆಯೊಂದಿಗೆ ಕೇಳುತ್ತೇನೆ.

 
ನಾನು ನನ್ನ ಬರಹದಲ್ಲಿ ಎಲ್ಲಿಯೂ ಯಾವುದೇ 
ಒಂದು ಸಂಘಟನೆಯ 
ಹೆಸರು ಪ್ರಸ್ತಾಪಿಸಲೇ ಇಲ್ಲ.ಅದರ ಅಗತ್ಯವೂ ಇಲ್ಲ.ನಮ್ಮ ಚರ್ಚೆ ಏನಿದ್ದರೂ ವಿಷಯಾಧಾರಿತ ಮಾತ್ರವಾಗಿತ್ತು.
ಮಾತ್ರವಲ್ಲ ಕೋವಿಡ್ ಪೀಡಿತ ಮೃತ ಶರೀರಗಳ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸುವ ಧೈರ್ಯ ತೋರಿದ ಮುಸ್ಲಿಮ್ 
ಸಂಘಟನೆ ಗಳನ್ನು ಅದೇ ಬರಹದಲ್ಲಿ ಮೊದಲು ಅಭಿನಂದಿಸಿ ಬರೆದಿದ್ದೇನೆ.
ಅಲ್ಲದೆ ನಮಗೆ ಯಾವುದೇ ಸಂಘಟನೆಯೊಂದಿಗೆ ಪೂರ್ವಾಗ್ರಹ ಪೀಡಿತ ವಿರೋಧವೇನೂ ಇಲ್ಲ.
ಯಾವುದೇ ಸಂಘಟನೆ ನೈಜ ಇಸ್ಲಾಮಿನ ತತ್ವಸಿದ್ಧಾಂತಗಳಿಗೆ ಅನುಗುಣವಾಗಿದ್ದು ಸಮಾಜಕ್ಕೂ ದೀನಿಗೂ ದೇಶಕ್ಕೂ ಒಳಿತಾಗಿದ್ದಲ್ಲಿ ಅಲ್ಲಾಹು ಉನ್ನತಿಗೇರಿಸಲಿ.
ಒಂದು ವೇಳೆ ಮಾರಕವಾಗಿದ್ದಲ್ಲಿ ಅಲ್ಲಾಹು ಪರಾಭವಗೊಳಿಸಲಿ.
ಇದು ನಾವು ಹಿಂದಿನಿಂದಲೂ ತಾಳಿದ ನಿಲುವು ಹಾಗೂ ನಮ್ಮ ದುಆ.

(ಅಲ್ಲಾಹನಲ್ಲಿ ಹೀಗೆ ದುಆ ಮಾಡ ಬಾರದು ಎಂಬ ಅಭಿಪ್ರಾಯ ಈ ಬರಹಗಾರನಿಗೆ ಇದ್ದಲ್ಲಿ ಮುಂದಿನ ಉತ್ತರದಲ್ಲಿ ತಿಳಿಸಬಹುದು)

ಹೀಗಿರುವಾಗ ಸುಖಾಸುಮ್ಮನೆ ಸಂಘಟನೆಗಳ ಹೆಸರು ಎಳೆದು ತಂದು ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕಾದ ಈ ಸಂದಿಗ್ಧ ಹಾಗೂ ಸಂಕೀರ್ಣ ಸಮಯದಲ್ಲಿ ಸಂಘಟನೆಗಳನ್ನು ಪರಸ್ಪರ ಎತ್ತಿಕಟ್ಟಿ ಕಚ್ಚಾಡಿಸಿ ಆನಂದ ಪಡುವ ಇಂತಹ ವಿಕೃತ ಮನಸ್ಸಿನ ಉದ್ದೇಶವಾದರೂ ಏನಿರ ಬಹುದು?

ಇನ್ನೊಂದು ವಿಷಯವೇನೆಂದರೆ ಪ್ರಸ್ತುತ ಬರಹದುದ್ದಕ್ಕೂ ತಲ್ಕೀನ್,ಜಾಮ ಖತ,ದುಆ ಮುಂತಾದ ಸುನ್ನೀ ಆಚಾರವಿಚಾರಗಳ ಬಗ್ಗೆ ಒಂದು ತರ ಕೀಳಾಗಿ ಬರೆದಿರುವುದು ಕಾಣುತ್ತದೆ.ಇದರಿಂದ ನಮಗೆ ಇಲ್ಲಿ ಹುಟ್ಟುವ ಬಲವಾದ ಅನುಮಾನವೇನೆಂದರೆ ಈ ಬರಹಗಾರ ಯಾವುದೋ ನೂತನವಾದಿ ಆಗಿದ್ದು 
ಸುನ್ನೀ ಆಶಯಗಳನ್ನು ನಾಶಪಡಿಸಲು ಸಂಘಟನೆಯ ಮುಖವಾಡದೊಂದಿಗೆ ಬಂದಿರುವುದಾಗಿರ ಬಹುದೋ?
ಒಂದು ವೇಳೆ ಹಾಗೇನಾದರೂ ಸುನ್ನತ್ ಜಮಾಅತಿನ ಆಶಯಗಳನ್ನು ನಾಶಪಡಿಸುವ ಉದ್ದೇಶದಿಂದ ಸಂಘಟನೆಯ ಮುಖವಾಡದೊಂದಿಗೆ ಬಂದಿರುವುದಾದರೆ ಅದನ್ನು ಮನಸ್ಸಿಲ್ಲೇ ಇಟ್ಟು ಕೊಳ್ಳುವುದೊಳ್ಳೆಯದು.
ಯಾಕೆಂದರೆ ಅದು ಇಲ್ಲಿ ನಡೆಯುವ ಕಾರ್ಯವಲ್ಲ.
ಈ ಹಿಂದೆ ಅನೇಕರು ಅನೇಕ ಮುಖವಾಡಗಳೊಂದಿಗೆ ಬಂದು ಈ ಸುನ್ನೀ ಆಶಯವನ್ನು ನಾಶಪಡಿಸುವ ಪ್ರಯತ್ನಕ್ಕೆ ಕೈಹಾಕಿ ಅವರೇ ನಾಮಾವಶೇಷ ಗೊಂಡಿದ್ದಾರೆಯೇ ಹೊರತು ಸುನ್ನೀ ಆಶಯವನ್ನು ಯಾರಿಂದಲೂ 
ಏನೂ ಮಾಡಲು ಸಾಧ್ಯವಾಗಿಲ್ಲ.
ಸಾದ್ಯವಾಗುವುದೂ ಇಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೊಳಿತು.


"لَا يَزَالُ مِنْ أُمَّتِي أُمَّةٌ قَائِمَةٌ بِأَمْرِ اللَّهِ لَا يَضُرُّهُمْ مَنْ خَذَلَهُمْ وَلَا مَنْ خَالَفَهُمْ حَتَّى يَأْتِيَهُمْ أَمْرُ اللَّهِ وَهُمْ عَلَى ذَلِكَ

ಎಲ್ಲಾ ವಿರೋಧ ಪ್ರತಿರೋಧಗಳನ್ನು ಹಿಮ್ಮೆಟ್ಟಿಸಿ ಸತ್ಯಪಥದಲ್ಲಿ ನೆಲೆನಿಂತಿರುವ ಒಂದು ವಿಭಾಗವು ಅಂತ್ಯದಿನದ ತನಕ ಈ ಭೂಮಿಯಲ್ಲಿದ್ದೇ ಇರುತ್ತದೆಂದು ನೆಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹದಿನಾಲ್ಕು ಶತಮಾನಗಳ ಹಿಂದೆಯೇ ಘಂಟಾಘೋಷವಾಗಿ ಹೇಳಿರುತ್ತಾರೆ. ಅದನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ ತಾನೇ.
ಆದ್ದರಿಂದ ಈ ಬರಹಗಾರನ  ಮನಸ್ಸಿನ ಆಡೀಯಲ್ಲಿ ಏನಾದರೂ ಇಂತಹ  ಒಂದು ಸಣ್ಣ ಭಾವನೆ ಇದ್ದರೆ ಅದನ್ನು ಈಗಲೇ ಬಿಟ್ಟು ಬಿಡುವುದೊಳ್ಳೆಯದು.
ಅದು ನಡೆಯದ ನಾಣ್ಯವೆಂಬುದರಲ್ಲಿ ಸಂಶಯವೇ ಇಲ್ಲ.

ಮತ್ತೆ ಕೈ ಮಡಕ್ ಬಗ್ಗೆ ಬಹಳ ಗೇಳಿ ಮಾಡಿ ಬರೆದಿರುವುದು ಕಾಣುತ್ತದೆ. 
ಹೌದು ಅದು ಉಸ್ತಾದ್ ಗಳಿಗೆ ಅದರಷ್ಟು ಸಂತೃಪ್ತಿಯಿರುವ ವಸ್ತು ಬೇರೆ ಇಲ್ಲವೇ ಇಲ್ಲ.
ಕಾರಣವೇನೆಂದರೆ ಕೈ ಮಡಕ್ ಎಂಬುದು ಸಂತೋಷದಿಂದ ಸತ್ಯವಿಶ್ವಾಸಿಗಳು ನೀಡುವ ಒಂದು ಹದಿಯಯಾಗಿರುತ್ತದೆ. ಅದರಷ್ಟು ಹಲಾಲಾದ ಸಂಪತ್ತು ಬೇರೊಂದಿರಲಿಕ್ಕೆ ಸಾಧ್ಯವಿಲ್ಲ.
ಉಲಮಾಗಳನ್ನು ಸೃಷ್ಟಿ ಮಾಡುವುದು ಹಾಗೂ ಅವರಿಗೆ ಬೇರೆ ಬೇರೆ ರೀತಿಯಲ್ಲಿ ತಮ್ಮ ಸಂಪತ್ತಿನ ಒಂದು ಪಾಲನ್ನು ನೀಡಿ ಮರಣದ ವರೆಗೂ ಅವರನ್ನು ನೋಡಿ ಕೊಳ್ಳುವುದು ಈ ಸಮುದಾಯದ ಉತ್ತಮ ಮನಸ್ಸುಗಳಾಗಿದೆ.
ಅದರಲ್ಲಿ ಯಾರೂ ಯಾವುದೇ ಅಸೂಯೆ ಪಟ್ಟು ಪ್ರಯೋಜನವಿಲ್ಲ.

ಅಲ್ಲದೆ ಮನೆಮನೆಗೆ ಹೋಗಿ ಜನರನ್ನು ಮಂಕು ಮರಳು ಮಾಡಿ ಝಕಾತ್ ಹಣವನ್ನು ಲಪಟಾಯಿಸುವುದೊ ಅಥವಾ ಮಸೀದಿ ಮದ್ರಸಗಳ ಬಾಗಿಲಲ್ಲಿ ನಿಂತು ಬ್ಯಾನರ್ ಹಿಡಿದು ಹಣ ಸಂಗ್ರಹಿಸಿ ಅದರ ಲೆಕ್ಕವನ್ನು ಸಂಘಟನೆಗೂ ಕೊಡದೆ ಶುದ್ದ ಹರಾಮನ್ನು ನುಂಗಣ್ಣರಾಗಲು ಉಸ್ತಾದರಿಗೆ ಸಾಧ್ಯವಿಲ್ಲ ತಾನೇ.

ಇಂತಹ ಕಾಲದಲ್ಲಿ ಉಸ್ತಾದರಿಗೆ ಸಮುದಾಯದ ಜನರು ಶುದ್ಧವಾದ ಹಲಾಲ್ ಕೈಮಡಕ್ ಹದಿಯಗಳನ್ನು ನೀಡುವುದನ್ನು ಸಹಿಸಲು ಬೇಕಾದ ವಿಶಾಲ ಮನಸ್ಸು ಇಂತಹ ವ್ಯಕ್ತಿಗಳಿಗೆ ಇಲ್ಲದೇ ಹೋದಲ್ಲಿ ಅದು ಸಮುದಾಯದ ತಪ್ಪಲ್ಲ.ಅದು ಆ ವ್ಯಕ್ತಿಗಳ ಬಲಹೀನತೆ ತಾನೇ.

ಮಾತ್ರವಲ್ಲ ಒಂದು ಸೂರತ್ ಫಾತಿಹ ಓದಿ ಮಂತ್ರಿಸಿದ್ದಕ್ಕೆ ಆಡುಗಳ ಸಮೂಹವನ್ನೇ ಹದಿಯಯಾಗಿ ನೀಡಿದ್ದು ಸಹಾಬಿಗಳು ಆ ಹದಿಯವನ್ನು ಸ್ವೀಕರಿಸಿದ್ದು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದು ಇದೆಲ್ಲಾ ಸಹೀಹಾದ ಹದೀಸಿನಲ್ಲಿರುವುದನ್ನು ಈಗ ವಿವರಿಸಲು ಬಯಸುವುದಿಲ್ಲ.ಬೇಕಾದಾಗ ವಿವರಿಸುವ.ಇನ್ಷಾ ಅಲ್ಲಾಹ್.

ಇನ್ನು ಈ ತಲ್ಕೀನ್,ಜಾಮ ಖತಂ,ದುಆ ಹಾಗೂ ಕೈಮಡಕ್ ಗಳನ್ನು ಗೇಲಿ ಮಾಡಿರುವುದು ಈ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯಗಳೇ ಅಥವಾ ಇವರಿಗೆ ಸಂಬಂಧ ಪಟ್ಟ ಸಂಘಟನೆಗೂ ಇದೇ ಅಭಿಪ್ರಾಯವೇ ಎಂಬುದನ್ನು ಸಂಘಟನೆಯ ಮುಖಂಡರು ಸ್ಪಷ್ಟಪಡಿಸುವುದು ಒಳ್ಳೆಯದು.
ಇಲ್ಲದಿದ್ದಲ್ಲಿ ತಪ್ಪು ಭಾವನೆ ಹುಟ್ಟುವ ಸಾಧ್ಯತೆ ಇದೆ.

ಇನ್ನು ಮೃತ ಶರೀಗಳ ಅಂತ್ಯಸಂಸ್ಕಾರದ ವಿಷಯಕ್ಕೆ ಬರುವುದಾದರೆ ಇಸ್ಲಾಮಿನಲ್ಲಿ ಒಂದು ಮಯ್ಯಿತಿನ ದಫನದಲ್ಲಿ ಪಾಲಿಸಬೇಕಾದ ಕಡ್ಡಾಯ ಕಾರ್ಯಗಳಿವೆ.
ಸುನ್ನತ್ತಾದ ಕಾರ್ಯಗಳಿವೆ.ಜಾಇಝ್ ಆದ ಕಾರ್ಯಗಳಿವೆ. ಸುನ್ನತ್ ಮತ್ತು ಜಾಇಝ್ ಗಳನ್ನು ಒಂದು ವೇಳೆ ಅನಿವಾರ್ಯತೆಗೆ ಬಿಡಬೇಕಾಗಿ ಬರಬಹುದು ಎಂದು ಇಟ್ಟು ಕೊಳ್ಳೋಣ.
ಕಡ್ಡಾಯವಾದ ಕಾರ್ಯಗಳಲ್ಲಿ ಕೆಲವು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಬೇಕಾದುದಿದೆ. ಉದಾಹರಣೆಗೆ ಮೃತ ಶರೀರವನ್ನು ಖಬ್ರಿನ ಒಳಗೆ ಖಿಬ್ಲಾಕ್ಕೆ ನೇರ ಮುಖ ಮಾಡಿ ಸರಿಯಾಗಿ ಮಲಗಿಸ ಬೇಕೆಂದಾಗಿದೆ.
ಎಷ್ಟರ ವರೆಗೆಂದರೆ ಒಂದು ವೇಳೆ ಎಲ್ಲಿಯಾದರೂ ದಫನವೆಲ್ಲಾ ಮುಗಿದ ಮೇಲೆ ಮೃತ ಶರೀರವನ್ನು ಮಲಗಿಸಿದ್ದು ಸರಿಯಾಗಿಲ್ಲ ಎಂದು ತಿಳಿದು ಬಂದರೆ ಪುನಃ ಖಬ್ರನ್ನು ಅಗೆದು ಮಯ್ಯಿತನ್ನು ಸರಿಯಾಗಿ ಖಿಬ್ಲಾಕ್ಕೆ ಮುಖ ಮಾಡಿಸಿ ಮಲಗಿಸ ಬೇಕೆಂದಾಗಿದೆ ನಿಬಂಧನೆ. ಇಷ್ಟೆಲ್ಲಾ ನಿಬಂಧನೆಗಳು ಇರುವಾಗ ಈ ವ್ಯಕ್ತಿಗಳಂತವರ ಪ್ರಚಾರದ ಅತ್ಯಾಶೆಗೆ ಬೇಕಾಗಿ ದೀನಿನ ಈ ಗಂಭೀರ ನಿಯಮಗಳೆನ್ನೆಲ್ಲಾ ಗಾಳಿಗೆ ತೂರಿ ಅತ್ಯಂತ ಗೌರವಯುತವಾಗಿ ನಡೆಯಬೇಕಾದ ದಫನವನ್ನು ಅತ್ಯಂತ ಮೃಗೀಯವಾಗಿ ನಡೆಸುವುದನ್ನು ಕಂಡೂ ಕಾಣದಂತೆ ನಟಿಸಿ ಮೌನವಹಿಸ ಬೇಕೆಂದಾದರೆ ಇದನ್ನು ಯಾರಿಗೆ ಒಪ್ಪಲು ಸಾಧ್ಯ? 
ಈ ಮಯ್ಯಿತಿನೊಂದಿಗೆ ತೋರುವ ಈ ಅನ್ಯಾಯದ ವಿರುದ್ಧ ಮಾತಾಡುವುದು  ಇಂತವರ ಭಾಷೆಯಲ್ಲಿ ಫಿತ್ನ ಎಂದಾದರೆ ಆ ಫಿತ್ನವನ್ನು ಸಾವಿರ ಸಾವಿರ ಸಲ ಆವರ್ತಿಸಲು ನಾವು ಸಿದ್ಧರೆಂದು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ.

ಇನ್ನು ಫಿತ್ನ,ಮುನಾಫಿಖ್ ಪದಗಳ ಅರ್ಥಗಳನ್ನು ಸರಿಯಾಗಿ ತಿಳಿಯದಿದ್ದಲ್ಲಿ ತಿಳಿದವರಲ್ಲಿ ಕೇಳಿ ತಿಳಿದು ಕೊಳ್ಳುವುದೊಳಿತು.ಇಲ್ಲದಿದ್ದರೆ ತಾನರಿಯದೇ ತನಗೇ ತಿರುಗು ಬಾಣವಾಗಿ ಪರಿಣಮಿಸಿ ಅಪಾಯಕ್ಕೆ ಸಿಲುಕುವುದು ಖಂಡಿತ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 

Saturday, July 18, 2020

ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?

ಆಪತ್ಭಾಂದವರು  ಅಪನಂಬಿಗಸ್ತರಾದರೇ

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
************

ವಯಸ್ಸು ನೂರು ದಾಟಿದ ವಯೋವೃದ್ಧನೇ 
ಆಗಿರಬಹುದು. ಅಥವಾ ಮರಣ ಶೈಯ್ಯೆಯ
ಕೊನೆಯುಸಿರಿನಲ್ಲಿರುವ ವ್ಯಕ್ತಿಯೇ ಆಗಿರಬಹುದು.
ಅಥವಾ ಸುತ್ತು ಮುತ್ತ ತಾನೇ ಬೆವರು ಸುರಿಸಿ ಸಾಕಿ 
ಸಲಹಿದ ತನ್ನ ಪ್ರೀತಿಯ ಪರಿವಾರ ಪತ್ನಿ ಮಕ್ಕಳು 
ಮೊಮ್ಮಕ್ಕಳು ಸುತ್ತುವರಿದೇ ಇರಬಹುದು.
ಆದರೆ ಈ ರೋಗಿ ಮಾತ್ರ ಅವನ ಇಂತಹ ಆತಂಕದ ಸಮಯದಲ್ಲೂ ಅಂಗಲಾಚುವುದು ನನ್ನನ್ನು 
ಆಸ್ಪತ್ರೆಗೆ ದಾಖಲಿಸಿ ಎಂದಾಗಿರುತ್ತದೆ.

ಆಸ್ಪತ್ರೆಯಲ್ಲಿ ವೈದ್ಯರುಗಳ ಹಾಗೂ 
ಅವರ ಪರಿವಾರದ ಸುಪರ್ದಿಯಲ್ಲಿ 
ಇರುವಷ್ಟು ಕಾಲ ನಾನು ಸುರಕ್ಷಿತನಾಗಿರುತ್ತೇನೆಂಬ 
ಈ ರೋಗಿಯ ಅಚಲವಾದ ನಂಬಿಕೆಯಾಗಿದೆ 
ಇದಕ್ಕೆ ಮುಖ್ಯ ಕಾರಣ.

ಆಸ್ಪತ್ರೆಗಳೆಂದರೆ ರೋಗಿಗಳಿಗೆ ಕೊನೆಯುಸಿರಿನ ತನಕವೂ ಪವಿತ್ರ ದೇಗುಲಗಳಿದ್ದಂತೆ.
ವೈದ್ಯರುಗಳೆಂದರೆ ಅವರಿಗೆ ತಮ್ಮ ಈ ಅತ್ಯಂತ 
ಆತಂಕದ ಈ ಸಮಯದಲ್ಲೂ ತಮ್ಮ 
ಪ್ರೀತಿಯ ಪರಿವಾರಕ್ಕಿಂತಲೂ ಹೆಚ್ಚು ಕಾರುಣ್ಯದ ಪ್ರತೀಕವಾಗಿ ತೋರುತ್ತಾರೆ.

ಆದ್ದರಿಂದಲೇ ಒಬ್ಬ ವೈದ್ಯನ ಕರುಣೆಯ ಒಂದೇ 
ಒಂದು ಮಾತು ಕೆಲವೊಮ್ಮೆ ಸಾವಿರಾರು ರೂಪಾಯಿಯ ಔಷದಿಗಳಿಗಿಂತಲೂ ರೋಗಿಯ 
ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.ಅದು ರೋಗಿಗೆ ಅಷ್ಟೊಂದು ಆತ್ಮಸ್ಥೈರ್ಯವನ್ನು ಉಂಟುಮಾಡುವ ಕಾರ್ಯವಾಗಿದೆ.

ಇದೇ ರೀತಿ ಬಹುತೇಕ ವೈದ್ಯರು ಸಹ ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ 
ರೋಗಿಗಳ ಸೇವೆಯಲ್ಲಿಯೇ ಆತ್ಮಸಂತೃಪ್ತಿ ಕಂಡು ಕೊಳ್ಳುವವರಾಗಿರುತ್ತಾರೆ.
ಅವರ ಸ್ವಂತ ಅಗತ್ಯಗಳನ್ನು,ಕಷ್ಟ ಕಾರ್ಪಣ್ಯ
ಗಳನ್ನು ಬದಿಗಿಟ್ಟು ಯಾವುದೇ ಮಧ್ಯ ರಾತ್ರಿ ಹಗಲೆಂದು ವ್ಯತ್ಯಾಸವಿಲ್ಲದೆ ಮಳೆ ಚಲಿ 
ಬಿಸಿಲೆಂದು ನೋಡದೆ ರೋಗಿಗಳ ಸೇವೆ ಮಾಡುತ್ತಾ ಬಂದವರಾಗಿರುತ್ತಾರೆ.
ಶಿಸ್ರೂಸೆಯ ಸಮಯದಲ್ಲಿ ಸಾಮಾನ್ಯವಾಗಿ ರೋಗಿಯಿಂದ ಎದುರಾಗುವ ಯಾವುದೇ ರೀತಿಯ ಶಕ್ತವಾದ ಪ್ರತಿರೋಧಗಳನ್ನು ಅತ್ಯಂತ ಸಹನೆಯಿಂದ ಸಹಿಸಿ ಅವುಗಳನ್ನೆಲ್ಲಾ ಹೂಮಾಲೆಯಂತೆ ಸ್ವೀಕರಿಸಿ ಈ ವೈದ್ಯರು ಮಾಡುವ ಸೇವೆಯು ಸರಿಸಾಟಿಯಿಲ್ಲದ ಸೇವೆಯಾಗಿರುತ್ತದೆ.
ಇದರಿಂದಾಗಿಯೇ ವೈದ್ಯರೆಂದರೆ ಜನಸಾಮಾನ್ಯರಿಗೆ ಅತ್ಯಂತ 
ಗೌರವ ಭಾವನೆ.
ಮಾತ್ರವಲ್ಲ ಇದು ಒಂದು ಜೀವಿಯ ಜೀವದ ಬೆಲೆಯರಿತು ಜೀವವನ್ನು ಉಳಿಸುವ ಸಾಹಸಿಕ ಕಾರ್ಯವಾಗಿರುವುದರಿಂದ ಈ ಸೇವೆಯು ಅಸಾಮಾನ್ಯ ಸೇವೆಯೆನಿಸುತ್ತದೆ.

ಪವಿತ್ರ ಖುರ್ಆನ್ ಹೇಳುತ್ತದೆ.

أنه من قتل نفسا بغير نفس أو فساد في الأرض فكأنما قتل الناس جميعا ومن أحياها فكأنما أحيا الناس جميعا

ಭೂಮಿಯಲ್ಲಿ ಯಾವುದೇ ನಾಶವನ್ನು ಅಥವಾ  ಕೊಲೆಯನ್ನು ಮಾಡದ ಒಂದು ಶರೀರವನ್ನು ಯಾರಾದರೂ ಕೊಂದರೆ ಅವನು ಇಡೀ ಮಾನವ ಸಮೂಹವನ್ನು ಕೊಂದವನಂತೆ.
ಒಂದು ಜೀವವನ್ನು ಉಳಿಸಿದರೆ ಇಡೀ ಮಾನವ ಸಮೂಹದ ಜೀವವನ್ನು ಉಳಿಸಿದಂತೆ.

ಒಂದು ಜೀವಿಯ ಜೀವಕ್ಕೆ ಬಹಳಷ್ಟು ಬೆಲೆಯನ್ನು ಕಲ್ಪಿಸುವ ಒಂದು ಧರ್ಮವಾಗಿದೆ ಇಸ್ಲಾಮ್.
ಯಾವುದೇ ಬೆಲೆ ತೆತ್ತಾದರೂ ಒಂದು 
ಜೀವವನ್ನು ಉಳಿಸುವ ಪ್ರಯತ್ನ 
ಮಾಡಬೇಕೇ ಹೊರತು ಆ ಜೀವಕ್ಕೆ ಮಾರಕವಾಗುವ ಯಾವುದೇ ಕಾರ್ಯವನ್ನು ಯಾವತ್ತೂ ಮಾಡಬಾರದೆಂದಾಗಿದೆ ಇಸ್ಲಾಮ್ ಹೇಳುವುದು.
ಕೊನೆಯ ಹಂತದಲ್ಲಿ ಒಂದು ಮನುಷ್ಯ ಜೀವವನ್ನು ಉಳಿಸಲು ಅನ್ಯ ಮಾರ್ಗವಿಲ್ಲದೆ 
ಬಂದಲ್ಲಿ ಇಸ್ಲಾಮ್ ಕಠಿಣ ನಿಷಿದ್ಧಗೊಳಿಸಿದ ವಸ್ತುವನ್ನು ತಿನ್ನಬೇಕಾಗಿ ಬಂದಲ್ಲಿ ಅದು 
ತಿಂದಾದರೂ ಜೀವವನ್ನು ಉಳಿಸಬೇಕೆಂದಾಗಿದೆ.

ಆದ್ದರಿಂದಲೇ ವೈದ್ಯಶಾಸ್ತ್ರವನ್ನು ಇಸ್ಲಾಮ್ ಬಹಳ ಪ್ರೋತ್ಸಾಹಿಸಿರುವುದು.
ಅದೊಂದು ಉದ್ಯೋಗ ಎಂಬುವುದಕ್ಕಿಂತ ಮಿಗಿಲಾಗಿ ಮಾನವ ಸಮೂಹಕ್ಕಾಗಿ ಮಾಡುವ ಧರ್ಮ ಸಮರವಾಗಿದೆ.

ಇದರಿಂದಾಗಿಯೇ ಇಮಾಮ್ ಶಾಫೀ ರಳಿಯಲ್ಲಾಹು ಅನ್ಹುರವರು ಹೇಳಿದರು:- 
ಧಾರ್ಮಿಕ ಸಂಶಯಗಳನ್ನು ನಿವಾರಿಸುವ ಧಾರ್ಮಿಕ
ವಿದ್ವಾಂಸನಿಲ್ಲದ ಹಾಗೂ ಶಾರೀರಿಕ ಸಂಶಯಗಳನ್ನು ನಿವಾರಿಸುವ ವೈದ್ಯನಿಲ್ಲದ ರಾಜ್ಯದಲ್ಲಿ ವಾಸಿಸಲೇ ಬಾರದು. 

ಹೀಗೆ ನಿಸ್ವಾರ್ಥ ಮನೋಭಾವದೊಂದಿಗೆ 
ಸೇವಾ ನಿರತರಾದ ವೈದ್ಯರು ತಮ್ಮ ಈ ನಿಷ್ಕಳಂಕ ಸೇವೆಯನ್ನು ತಮ್ಮ ವಾರ್ದಕ್ಯವನ್ನೂ ಲೆಕ್ಕಿಸದೆ ಕೊನೆಯುಸಿರಿನ ತನಕವೂ ಮುಂದುವರಿಸ ಬಯಸುವವರಾಗಿದ್ದಾರೆ.
ಯಾಕೆಂದರೆ ಅವರು ಅದನ್ನು ಒಂದು ಉದ್ಯೋಗ
ಎಂದು ಕಾಣುವುದಕ್ಕಿಂತಲೂ ಹೆಚ್ಚಾಗಿ ಇದೊಂದು ಪವಿತ್ರ ಸೇವೆ ಎಂದು ಮನಗಂಡವರಾಗಿರುತ್ತಾರೆ.
ಇದುವೇ ನೈಜ ವೈದ್ಯ ಧರ್ಮ ಎಂಬುದು ತರ್ಕವಿಲ್ಲದ ವಿಷಯವಾಗಿದೆ.
ಮಾತ್ರವಲ್ಲ ಇಂತಹ ವೈದ್ಯರ ಸಾಹಸಿಕ ನಿಸ್ವಾರ್ಥ ಪ್ರಯತ್ನಗಳಿಂದ ಅದೆಷ್ಟೋ
ಜೀವಗಳು ರಕ್ಷಣೆ ಪಡೆದ ಹಾಗೂ ಪಡೆಯುತ್ತಿರುವ ಅನುಭವಗಳು ಯಾರಿಂದಲೂ ನಿಷೇದಿಸಲಸಾಧ್ಯ.

ಹೀಗೆ ರೋಗಿ ಮತ್ತು ವೈದ್ಯರ ಮದ್ಯೆ ಇರುವ ಈ ಅವಿನಾಭಾವ ಸಂಬಂಧ ನಿರಂತರ ಹಾಗೂ ನಿರಾತಂಕವಾಗಿ ನಡೆಯುವ ಹಾಗೂ ನಡೆಯಲೇ ಬೇಕಾದ ಒಂದು ಕಾರ್ಯವಾಗಿದೆ. ಮಾನವೀಯತೆ ಈ ಭೂಮಿ ಮೇಲೆ ಉಳಿಯ ಬೇಕಾದರೆ ಇದು ಅನಿವಾರ್ಯ ಕೂಡಾ.

ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ 
ಹಾಗೂ ವೈದ್ಯ ಪರಂಪರೆಗೆ ಕಳಂಕವೆಂಬಂತೆ ಇತ್ತೀಚೆಗಿನ ದಿನಗಳಲ್ಲಿ ನಡೆಯುವ ಕೆಲವು 
ಸಂಭವ ವಿಕಾಸಗಳು ರೋಗಿ ಮತ್ತು ವೈದ್ಯರ ನಡುವಿನ ಅಪಾರವಾದ ನಂಬಿಕೆಗಳಿಗೆ ಅಡ್ಡಿಯಾಗುತ್ತಿವೆಯೇ ಎಂಬ ಸಂಶಯ ಕಾಡಲಾರಂಭಿಸಿದೆ.
ಕೆಲವು ವೈದ್ಯರು ಮತ್ತು ಆಸ್ಪತ್ರೆಗಳು ರೋಗಿಗಳನ್ನು ಮಾಡುವ ಶೋಷಣೆಯಿಂದ ಹಾಗೂ ನಡೆದು ಕೊಳ್ಳುವ ರೀತಿಯಿಂದ ಈ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.ಇದನ್ನು ಪುಷ್ಟೀಕರಿಸುವ ಅನೇಕ ಉದಾಹರಣೆಗಳಿವೆ

ವಿದ್ಯಾಬ್ಯಾಸ ವ್ಯಪಾರೀಕರಣದಿಂದ 
ಪ್ರಾರಂಭವಾದ ಅಧಃಪತನ ಎಲ್ಲಾ ವಲಯಕ್ಕೂ ವ್ಯಾಪಿಸಿ ಬಿಟ್ಟಿದೆ.ಅದರಂತೆ ಇವತ್ತು ಕೋಟಿಗಟ್ಟಲೆ ವ್ಯಯಿಸಿ ವಿದ್ಯಾಬ್ಯಾಸ 
ಪಡೆದ ವೈದ್ಯರು,ಐಶಾರಾಮಿ ಹೈಟೆಕ್ 
ಆಸ್ಪತ್ರೆಗಳು ತಮ್ಮ ಬೇಕಾಬಿಟ್ಟಿ ವ್ಯಾಪಾರ ಮನೋಭಾವದಿಂದ ತಮ್ಮ ನೈತಿಕತೆಯನ್ನು ಸಂಪೂರ್ಣವಾಗಿ ಕಳೆದು ಕೊಳ್ಳುತ್ತಿವೆಯಾ ಜೀವಕಾರುಣ್ಯದ ಪ್ರತೀಕಗಳಾಗ ಬೇಕಾದ ಕೇಂದ್ರಗಳು ಕಮೀಷನ್ ದಂಧಾ ಕೇಂದ್ರ
ಗಳಾಗಿ ಮಾರ್ಪಡುತ್ತಿವೆಯಾ ರಕ್ಷಕರಾಗ ಬೇಕಾದವರು ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದಾರಾ ಎಂಬ ಗುಮಾನಿಗಳು ಗಟ್ಟಿಯಾಗುತ್ತಿದೆ.

ಒಂದು ವೇಳೆ ಈ ಗುಮಾನಿ ಗಳು ನಿಜವಾದಲ್ಲಿ ಮನುಷ್ಯ ಸಮೂಹವೇ ಅಪಾಯದಂಚಿಗೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆಸ್ಪತ್ರೆಗಳನ್ನು ಮತ್ತು ವೈದ್ಯರನ್ನು ತಮ್ಮ 
ಅಂತಿಮ ಅಭಯ ಕೇಂದ್ರಗಳಾಗಿ 
ಕಂಡಿದ್ದವರು ಭೀತಿಯ ಹಾಗೂ ಅನುಮಾನಗಳ ಕೇಂದ್ರಗಳಾಗಿ ಕಾಣುವುದರಲ್ಲಿ ಸಂಶಯವಿಲ್ಲ.
ಮತ್ತೆ ಇಲ್ಲಿ ಆತ್ಮವಿಶ್ವಾಸ,ನಂಬಿಕೆಗಳು 
ಯಾವುದೂ ಉಳಿಯಲು ಸಾಧ್ಯವಿಲ್ಲ.

ಈ ಸಂಶಯಗಳು ಇತ್ತೀಚಿನ ಕೆಲವು 
ಸಮಯಗಳಿಂದಲೇ ಇದ್ದರೂ ಇದೀಗ ಕೊರೋನ ಬಂದ ಮೇಲೆ ಅದು ಮತ್ತಷ್ಟು ಬಲಗೊಳ್ಳುತ್ತಿದೆ.ಈ ಕೊರೋನ ಎಂಬ ಮಹಾಮಾರಿ ಯಿಂದ ಕಂಗಾಲಾಗಿರುವ ಜನಸಮೂಹದಲ್ಲಿ ಧೈರ್ಯ ತುಂಬಿ ಈ ವಿಪತ್ತನ್ನು ಎದುರಿಸುವ ಸಾಮರ್ಥ್ಯ ವನ್ನು ಸೃಷ್ಟಿಸಬೇಕಾದ ವೈದ್ಯರೇ ಸಮೂಹದಲ್ಲಿ ಇದನ್ನು ಗೊಂದಲದ ಗೂಡಾಗಿ ನಿರ್ಮಾಣ ಮಾಡಿ ಜನರನ್ನು ಭಯಬೀತರನ್ನಾಗಿ ಮಾರ್ಪಡಿಸಿರುತ್ತಾರೆ.

ಈ ರೋಗವನ್ನು ಎದುರಿಸಲು ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆ ಸುಲಭವೂ ಸರಳವೂ ಆದ ಅನೇಕ ದಾರಿಗಳನ್ನು 
ನಿರ್ದೇಶಿಸುವಾಗ ಇವರು ಮಾತ್ರ ಅದನ್ನು ಕಠಿಣಗೊಳಿಸುತ್ತಿರುವುದರ ಹಿಂದೆ ಅಡಗಿರುವ ರಹಸ್ಯ ಅರ್ಥವಾಗುವುದೇ ಇಲ್ಲ.
ಮಾತ್ರವಲ್ಲ ಇದರಿಂದ ಇಡೀ ವೈದ್ಯ ಸಮೂಹವನ್ನೇ ಸಂಶಯದಿಂದ ನೋಡುವಂತಾಗಿದೆ.
ಇದರಿಂದ ತಮ್ಮ ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ 
ನಿಸ್ವಾರ್ಥ ವೈದ್ಯರುಗಳ ಸೇವೆಗೂ ಬೆಲೆಯಿಲ್ಲದಂತಾಗಿದೆ.

ಅಂತ್ಯ ದಿನ ಹತ್ತಿರವಾಗುವಾಗ ಜನರೆಡೆಯಲ್ಲಿ 
ಪರಸ್ಪರ ನಂಬಿಕೆ ಮಾಯವಾಗ ಬಹುದೆಂದು
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 
ವಸಲ್ಲಮರು ಹೇಳಿರುವುದು ಈ ಕಾಲದ ಬಗ್ಗೆಯಾಗಿರ ಬಹುದು.
ಇವತ್ತು ನಂಬಿಕೆಗಳು ಸಂಪೂರ್ಣ ಹೊರಟು ಹೋಗಿವೆ.
ಎಲ್ಲಾ ವಲಯಗಳಲ್ಲಿಯೂ ಯಾರೂ ಯಾರನ್ನೂ ನಂಬುವ ಪರಿಸ್ದಿಯಲ್ಲಿ ಇಲ್ಲ.
ಇದೀಗ ವೈದ್ಯ ಸಮೂಹವು ಇದಕ್ಕೆ ಹೊರತಾಗಿಲ್ಲ.
ಇದೊಂದು ಅಪಾಯಕಾರಿ 
ಬೆಳವಣಿಗೆ ಎಂದು ಪ್ರತ್ಯೇಕ ಹೇಳ ಬೇಕಾಗಿಲ್ಲ.

ಆದ್ದರಿಂದ ಕೊರೋನ ವಿಷಯದಲ್ಲಿ ಸಮೂಹದಲ್ಲಿ ಮನೆಮಾಡಿರುವ ಅನೇಕಾನೇಕ ಗೊಂದಲಗಳನ್ನು ನಿವಾರಿಸುವ ಕೆಲಸ ಬಹಳ ತುರ್ತಾಗಿ ನಡೆಯಬೇಕಿದೆ. ವೈದ್ಯರು ಈ ವಿಶಯದಲ್ಲಿ ಸರಳವೂ ಸುಲಭವೂ ಆದ ಮಾರ್ಗಗಳನ್ನು ಕಂಡು ಹಿಡಿಯುವಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಬೇಕು.
ಜನರ ಭಯಭೀತಿ ನಿವಾರಿಸಿ ದೈರ್ಯ ತುಂಬ ಬೇಕು.ವೈದ್ಯ ಸಮೂಹದೊಂದಿಗಿರುವ ವಿಶ್ವಾಸ ನಂಬಿಕೆಗಳನ್ನು ಸುಭದ್ರ ಗೊಳಿಸಬೇಕು.

ಕೊರೋನ ಪೀಡಿತರಾಗಿ ಮರಣ ಹೊಂದಿದ ಮೃತ ಶರೀಗಳನ್ನು ಅತ್ಯಂತ ಕೀಳಾಗಿ ಕಾಣುವುದನ್ನು ಕೊನೆಗಾಣಿಸಲೇಬೇಕು.
ಮರಣ ಹೊಂದಿದ ವ್ಯಕ್ತಿಯಿಂದ ವೈರಸ್ ಹರಡಲು ಸಾಧ್ಯವಿಲ್ಲ ಎಂದು ವೈದ್ಯಶಾಸ್ತ್ರ ಹೇಳುವಾಗ ಮತ್ಯಾಕೆ ಈ ಭಯಭೀತಿ.?

ಎಲ್ಲಾ ಕಡೆಗಳಲ್ಲೂ ಪ್ಲಾಸ್ಟಿಕ್ ಉಪಯೋಗವನ್ನು ನಿರುತ್ತೇಜನ ಗೊಳಿಸಿರುವಾಗ ಮೃತ ಶರೀರಗಳನ್ನು ಮಾತ್ರ ಪ್ಲಾಸ್ಟಿಕ್ ಪ್ಯಾಕ್ ಮಾಡುವ ಉದ್ದೇಶವೇನು.?

ಪಿಪಿ ಕಿಟ್ ಧರಿಸಿ ತರಬೇತು ಪಡೆದ ಪ್ರತ್ಯೇಕ ಸನ್ನದ್ಧ ವಿಭಾಗಗಳು ಹಾಗೂ ಸನ್ನದ್ಧ ಸಂಘಟನೆಗಳು ಸರಕಾರದ ಎಲ್ಲಾ ನಿರ್ದೇಶನಗಳನ್ನು ಸಂಪೂರ್ಣ ಪಾಲಿಸಿ ಅಂತ್ಯಕ್ರಿಯೆ ನಡೆಸಲು ಸದಾ ಸನ್ನದ್ಧವಾಗಿರುವಾಗ ಕುಟುಂಬಸ್ತರಿಗೆ ಅವರವರ ಧಾರ್ಮಿಕ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸುವ ಸ್ವಾತಂತ್ರವನ್ನು ಅವರಿಗೆ ನೀಡಲು ಇರುವ ಅಡ್ಡಿ ಆತಂಕಗಳೇನು.?
ಈ ಸ್ವಾತಂತ್ರ್ಯಗಳನ್ನು ನಿಷೇಧಿಸಿ ಮೃತ ಶರೀರಗಳನ್ನು ಮೃಗಸಮಾನವಾಗಿ ಹೂತು ಹಾಕುವ ರೀತಿಯಲ್ಲಿ ಅವಮಾನಿಸುವ ಉದ್ದೇಶವೇನು.?
ಮನುಷ್ಯ ಮನಸ್ಸುಗಳಲ್ಲಿರುವ ಈ ಸಂಶಯಗಳನ್ನು ನಿವಾರಣೆ ಮಾಡಬೇಕಾದ ತುರ್ತು ಅನಿವಾರ್ಯತೆ ಇದೆ.
ಮರಣ ಎಂಬ ಪಯಣ ಎಲ್ಲರೂ ಪ್ರಯಾಣಿಸಬೇಕಾದ ಪಯಣ ಎಂದು ಎಲ್ಲರ ಮನದಲ್ಲಿರ ಬೇಕಾಗಿದೆ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

Friday, July 17, 2020

ಬೆಂಕಿಯಲ್ಲಿ ಅರಳಿದ ಹೂವು-A flower that bloomed in fire

ಪ್ರವಾದಿ ಗಳ ಪಟ್ಟಿಯಲ್ಲಿ ಇಬ್ರಾಹಿಮ್ عليه السلام ಅತ್ಯಂತ ಪ್ರಮುಖ ಪ್ರವಾದಿ ಯಾಗಿದ್ದರು ಏಕೆಂದರೆ ಅವರ ದ್ರಷ್ಟಾಂತ ಗಳು ಎಲ್ಲಾ ಪ್ರವಾದಿ ಗಳಿಗೆ ಆಧಾರ ವಾಗಿದೆ ಪವಿತ್ರ ಕುರ್ಆನ್ ತೀಳಿಸಿದ ಹಾಗೆ ಬುಡಕಟ್ಟು ಜನಾಂಗ ಪ್ರವಾದಿ ಇಬ್ರಾಹಿಮ್ ಅ.ಸ.ರವರ ಜನಾಂಗ ದಿಂದ ಬಂದವರಾಗಿದ್ದಾರೆ    ಅಲ್ಲಾಹನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದಾನೆ ಅದರಲ್ಲಿ ಒಂದು ಬೆಂಕಿಯ ಜ್ವಾಲೆ.  ಗದಗದಿಸುವ ಬೆಂಕಿಯಲ್ಲಿ ಪ್ರವೇಶಿಸುವ ಮುನ್ನ ಇಬ್ರಾಹಿಮ್ عليه السلام 
ರವರ ಮುಖದಲ್ಲಿ ಮಂದಹಾಸ ವಿತ್ತು ನನ್ನನ್ನು ಬೆಂಕಿಯಲ್ಲಿ ಎಸೆದು ಬಸ್ಮವಾಗಿರಿಸುವರು ಎಂಬ ಯಾವ ಭಯವೂ ಇರಲಿಲ್ಲ  ಇವೆಲ್ಲವೂ ನನ್ನ ಪರಮಾತ್ಮನ ಬಯಕೆ ಯಂತೆ ನಡೆಯುತ್ತಿದೆ ಎಂಬ ಮನೋಭಾವ ವಿತ್ತು ಒಂದೊಮ್ಮೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ಮಾಡಿದರೂ ಇದು ನನ್ನ ವಿಜಯ ವಾಗಿರುತ್ತದೆ ಎಂದು ಯೋಚಿಸುತ್ತಾ  ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು  ಕ್ಷಣಾರ್ಧದಲ್ಲಿ ಜಿಬ್ರೀಲ್ عليه السلام ಪ್ರತ್ಯಕ್ಷ ಗೊಂಡು ಹೇಳಿದರು ಓ ಪ್ರವಾದಿ ಯವರೇ ತಾವು ಸಮ್ಮತಿಸಿದರೆ ನಾನು ಅಲ್ಲಾಹನ ಸಾನಿದ್ಯ ದಲ್ಲಿ ನಿಮ್ಮ ಅಹವಾಲು ಗಳನ್ನು ಹೇಳುವೆನು ಎಂದಾಗ ಇಬ್ರಾಹಿಮ್ عليه السلام ಹೇಳಿದರು ನಾನು ಏನೂ ಹೇಳಲಾರೆ ತಾವು ಅಲ್ಲಾಹನಲ್ಲಿ ಹೇಳಿ ಈ ಅವಿಶ್ವಾಸಿಗಳ ಮನಸ್ಸಿನಲ್ಲಿ ಇಂತಹಾ ಕ್ರತ್ಯಗಳನ್ನು  ಎಸೆಯಲು  ಉದ್ಬವಿಸಿದವರು ಯಾರು ಅಲ್ಲಾಹನು ಎಂದಾದರೆ ಅವನ ದಾಸನ ಇಚ್ಚೆಯೂ ಅದೇ ಆಗಿದೆ ಎಂದರು ಅಲ್ಲಾಹನ ಇಚ್ಛೆಗಳಲ್ಲಿ ಹಲವಾರು ತಂತ್ರ ಗಳು ಅಡಗಿದೆ ಮಾನವನ ಕಲ್ಯಾಣ ಕ್ಕಾಗಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುತ್ತಾ ಇರುತ್ತಾನೆ.
islamic kannada

Monday, July 13, 2020

ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?

ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?
*************
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
*************

ಮರಣ ಹೊಂದಿದ 
ವಿವರ ಲಭಿಸಿದರೆ ಮನುಷ್ಯತ್ವ ಇರುವ ಯಾವುದೇ 
ಮನಸ್ಸು ಹಾತೊರೆಯುವುದು ಆ ಮೃತ ಶರೀರವನ್ನು ಕೊನೆಯ ಒಂದು ನೋಟ ನೋಡ ಬೇಕೆಂದಾಗಿರುತ್ತದೆ.

ಮೃತ ಶರೀರವನ್ನುನೋಡುವುದಕ್ಕೆ 
ಇಸ್ಲಾಮಿನಲ್ಲಿ ವಿಶೇಷ ಪುಣ್ಯವೇನೂ ಇಲ್ಲದಿದ್ದರೂ ಕೂಡಾ ಪ್ರತಿಯೊಂದು 
ಕರುಣೆಯಿರುವ ಮನಸ್ಸಿನ ಅಭಿಲಾಷೆ ಮಾತ್ರ ಇದೇ ಆಗಿರುತ್ತದೆ.
ಮಾತ್ರವಲ್ಲ ತಾನೆಲ್ಲಿದ್ದರೂ ತನ್ನವರ ಮೃತ ಶರೀರವನ್ನು ತಲುಪಲು ಎಷ್ಟೇ ಕಷ್ಟನಷ್ಟ 
ಅನುಭವಿಸಿಯಾದರೂ ಹರಸಾಹಸ 
ಪಡುವುದು ಸಾಮಾನ್ಯ.

ಮೃತ ಶರೀರಗಳೊಂದಿಗೆ ಅತ್ಯಂತ ಗೌರವದಿಂದ ವರ್ತಿಸಬೇಕೆಂದು ಆಜ್ಞಾಪಿಸಿದ 
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 
ವಸಲ್ಲಮರು ಸ್ವತಃ ಮೃತ ಶರೀರಗಳನ್ನು ಜಾತಿ ಮತ ಭೇದವಿಲ್ಲದೆ ಅತ್ಯಂತ ಗೌರವದಿಂದ ಕಾಣುತ್ತಿದ್ದರು.
ಸೃಷ್ಟಿಗಳಲ್ಲಿ ಶ್ರೇಷ್ಠ ಸೃಷ್ಟಿ ಮನುಷ್ಯ.ಆಮನುಷ್ಯನಿಗೆ ಬೇಕಾಗಿ ಆಗಿದೆ ಇತರ ಎಲ್ಲಾ 
ಸೃಷ್ಟಿಗಳನ್ನು ಸೃಷ್ಟಿಸಲ್ಪಟ್ಟಿತೆಂದು ಖುರ್ಆನ್ ಹೇಳುತ್ತದೆ.
ಮನುಷ್ಯನು ಹೇಗೆ ಮರಣಹೊಂದಿದರೂ ಅವನಿಗೆ ಮಾನವೀಯತೆಯನ್ನು ನಿಷೇದಿಸಲ್ಪಡ ಬಾರದು.
ಜೀವಂತವಾಗಿರುವಾಗ ಅವನಿಗೆ ಲಭ್ಯವಾಗುತ್ತಿದ್ದ 
ಎಲ್ಲಾ ಗೌರವಾದರಗಳು ಮರಣ ಹೊಂದಿದ 
ನಂತರವೂ ಲಭಿಸಬೇಕು.

ಇದರಿಂದಾಗಿಯೇ ಎಲ್ಲಾ ಜಾತಿ ಧರ್ಮಗಳಲ್ಲಿಯೂ 
ಮೃತ ಶರೀರಗಳೊಂದಿಗೆ ಗೌರವ ಭಾವನೆಯಿರುವುದು.
ಇಸ್ಲಾಮಿನಲ್ಲಿ ಮೃತಪಟ್ಟ ವ್ಯಕ್ತಿಗೆ ಅವನು ಜೀವಂತವಾಗಿದ್ದಾಗ ಯಾವುದೆಲ್ಲಾಗೌರವಾದರಗಳಿದ್ದವೋ ಅದೆಲ್ಲವೂ ಅವನಿಗೆ ಈಗಲೂ ಲಭ್ಯವಾಗ ಬೇಕೆಂದಾಗಿದೆ. 
ಆದ್ದರಿಂದಲೇ ಮೃತಶರೀರವನ್ನು ನೆಲದಮೇಲೆ ಕೂಡಾ ಮಲಗಿಸದೆ ಎತ್ತರದ 
ಸ್ಥಳದಲ್ಲಿ ಮಲಗಿಸಬೇಕೆಂಬ ನಿಯಮವಿರುವುದು.
ಮಾತ್ರವಲ್ಲ ಸ್ನಾನ ಮಾಡಿಸುವುದು ಸೇರಿ ಎಲ್ಲಾ ಮರಣಾನಂತರ ಕ್ರಿಯೆಗಳನ್ನು ನಿರ್ವಹಿಸುವಾಗಲೂ ಯಾವುದೇ ರೀತಿ ಅವನ ಗೌರವಕ್ಕೆ ಚ್ಯುತಿ ಬರದಂತೆ ಜಾಗೃತೆ ಪಾಲಿಸಬೇಕೆಂದು ಹೇಳಿರುವುದು.

ಆದರೆ ಈಗ ಕೊರೋನದ  ಹೆಸರಿನಲ್ಲಿ ಎಲ್ಲಾ ಮಾನವೀಯತೆಗೆ ವಿದಾಯ ಹೇಳಲಾಗಿದೆ.
ರೋಗಿಗಳೊಂದಿಗೂ ಮೃತ ಶರೀರಗಳೊಂದಿಗೂ ಅತ್ಯಂತ ಹೀನಾಯವಾಗಿ ವರ್ತಿ‌ಸುವುದು ಮಾಮೂಲಿಯಾಗಿ ಬಿಟ್ಟಿದೆ.
ಕುಟುಂಬಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿ ಯಾರೂ ಹತ್ತಿರ ಸುಳಿಯದಂತೆ ಮಾಡಿ ತಮಗೆ ತೋಚಿದಂತೆ ವರ್ತಿಸುವ ಅಧಿಕಾರಿಗಳ ವರ್ತನೆ ಖಂಡನಾರ್ಹ.

ಇಲ್ಲಿ ಕೇಳುವವರು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿರುವುದು ಅತ್ಯಂತ ವಿಪರ್ಯಾಸ.ಪ್ರತಿರೋಧ ಶಕ್ತಿ ನಷ್ಟ ಹೊಂದಿದ ನರ ಸತ್ತ ವಿಭಾಗವಾಗಿ ಜನ ಮಾರ್ಪಟ್ಟಿರುವುದು ಖೇದಕರ ಎಂದು ಹೇಳದೆ ವಿಧಿಯಿಲ್ಲ

ಯಾಕೆಂದರೆ ಮರಣ ಹೊಂದಿದ ವ್ಯಕ್ತಿಗಳಿಂದ ರೋಗ ಹರಡಲು ಸಾಧ್ಯತೆನೇ ಇಲ್ಲ ಎಂದು 
ಆರೋಗ್ಯ ಇಲಾಖೆ,ವೈದ್ಯ ಸಮೂಹ ಎಲ್ಲರೂ ಒಕ್ಕೊರಲಿನಿಂದ ಹೇಳುವಾಗ ಮತ್ಯಾಕೆ ಮೃತ ಶರೀರಗಳೊಂದಿಗೆ 
ಇಷ್ಟೋಂದು ಅವಗಣನೆ. 

ವಾರೀಸುದಾರರಿಗಾಗಲಿ ಅಥವಾ ಸಂಭಂಧಪಟ್ಟವರಿಗಾಗಲೀ ತೋರಿಸದೆ ಧಾರ್ಮಿಕ ವಿಧಿವಿಧಾನಗಳಿಗೂ ಅವಕಾಶ ನೀಡದೆ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಆಸ್ಪತ್ರೆಗಳಿಂದ ನೇರವಾಗಿ ಸ್ಮಶಾನಗಳಿಗೆ ತಂದು ಒಂದು ರೀತಿಯ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಅತ್ಯಂತ ಹೀನಾಯವಾಗಿ ಮೃಗಗಳನ್ನು ಹೂತು ಹಾಕುವ ರೀತಿಯಲ್ಲಿ ಹೊಂಡಗಳಿಗೆ ಬೀಸಾಡುವ ಈ ಮೃಗೀಯ ವರ್ತನೆಯ ಹಿಂದಿರುವ ರಹಸ್ಯವೇನು?ಯಾವುದೂ ಅರ್ಥವಾಗುವುದಿಲ್ಲ.
ಅಲ್ಲದೆ ಇದು ಅನೇಕ ಅನುಮಾನಗಳಿಗೂ ಅವಕಾಶ ಮಾಡಿ ಕೊಟ್ಟಿದೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮಾಧ್ಯಮಗಳಲ್ಲಿ ಕೊರೋನ ಪೀಡಿತರು ಹಾಗೂ ಅದರಲ್ಲಿ ಮೃತರಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಆದರೆ ಸನ್ಮಾನ್ಯ ಜಿಲ್ಲಾಧಿಕಾರಿ ಯವರು ಕೊರೋನದಿಂದ ಸತ್ತವರು ಕೇವಲ ನಾಲ್ಕು ಜನ ಮಾತ್ರ ಎಂದು ಹೇಳುತ್ತಾರೆ.

ಇಲ್ಲಿ ಏನಾಗುತ್ತಿದೆಯೋ.
ಏನು ದಂಧೆ ನಡೆಯುತ್ತಿದೆಯೋ ಎಲ್ಲಾಗೊಂದಲಮಯ.
ಸರಕಾರ,ಪ್ರತಿಪಕ್ಷಗಳು ಎಲ್ಲಾ ದಿವ್ಯ ಮೌನ. 

ಮುಸ್ಲಿಮ್ ಸಂಘಟನೆಗಳು ಮೃತ ಶರೀರಗಳ ಅಂತ್ಯಕ್ರಿಯೆಯಲ್ಲಿ ಬಾಗವಹಿಸುವ ದೈರ್ಯ ತೋರಿರುವುದು ಮೆಚ್ಚಲೇ ಬೇಕು.
ಅದಕ್ಕೆ ಅವರನ್ನು ಅಭಿನಂದಿಸಲೇ ಬೇಕು.

ಆದರೆ ಇದು ಕೆಲವು ರಾಜಕಾರಣಿಗಳೆಂತೆ ಕೇವಲ ಪ್ರಚಾರಕ್ಕಾಗಿ ಮಾತ್ರ ಆಸ್ಪತ್ರೆಯವರು 
ಪ್ಯಾಕ್ ಮಾಡಿ ಕೊಟ್ಟ ಪ್ಯಾಕ್ ಗಳನ್ನು 
ತೆಗೊಂಡು ಹೋಗಿ ಗುಂಡಿಗೆ ಹಾಕುವುದರಲ್ಲಿ 
ಯಾವುದೇ ದೊಡ್ಡ ಸಾಹಸವಿಲ್ಲ ಎಂಬುದನ್ನು 
ಅರಿಯಬೇಕು.
ಯಾವಾಗಲೂ ಸಂಘಟನೆಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಿ 
ಹೆಸರು ಪಡೆಯಬೇಕು.
ಅಲ್ಲದೆ ಪ್ರಚಾರಕ್ಕಾಗಿ ಹಕ್ಕುಗಳನ್ನು 
ಕೈಬಿಡುವಂತಾಗ ಬಾರದು.

ಮೃತ ಶರೀರಗಳ ಅಂತ್ಯಕ್ರಿಯೆಯೆಲ್ಲಿ 
ಕೆಲವು ಸಂಘಟನೆಗಳು ಸಕ್ರಿಯವಾಗಿ 
ತೊಡಗಿಸಿ ಕೊಂಡಿವೆಯಲ್ಲಾ ಪರಸ್ಪರ ಸ್ಪರ್ಧೆ 
ಬೇಡ ಎಂಬ ದೃಷ್ಟಿಯಿಂದ ಒಂದು ವೇಳೆ ಇತರ 
ಸಂಘಟನೆಗಳು ಈ ವಿಷಯಕ್ಕೆ ಬರದೇ ಇರಲೂ ಬಹುದು.
ಆದ್ದರಿಂದ ಇದರಲ್ಲಿ ತೊಡಗಿಸಿ ಕೊಂಡ ಸಂಘಟನೆಗಳು  ಮೃತ ಶರೀರಗಳಿಗೆ ಲಭ್ಯವಾಗ 
ಬೇಕಾದ ಹಕ್ಕುಗಳನ್ನು ಪಡೆಯಲು ಶ್ರಮಿಸದೆ 
ಕೇವಲ ತೋರಿಕೆಯ ಕೆಲಸ ಮಾಡಿದರೆ ಅದು 
ಮೃತ ಶರೀರಗಳೊಂದಿಗೆ ತೋರುವ ಅತ್ಯಂತ ದೊಡ್ಡ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದ್ದರಿಂದ ಮೃತ ಶರೀರಗಳೊಂದಿಗೆ ನಡೆಯುವ ಈ ಅಮಾನವೀಯತೆಗೆ ಸಂಬಂಧಪಟ್ಟವರು ಕೊನೆ ಹಾಡಬೇಕು.ಗೊಂದಲಗಳನ್ನು ನಿವಾರಿಸಬೇಕು.
ಇಲ್ಲದಿದ್ದಲ್ಲಿ ಜನರ ಸಹನೆಯ ಕಟ್ಟೆಯೊಡೆದು ಬೀದಿಗಿಳಿದು ಪ್ರತಿಬಟಿಸಬೇಕಾಗುವುದು ಖಂಡಿತ.
P.P.AHMAD SAQAFI KASHIPATNA

ಇಸ್ಲಾಮಿನ ಪುರಾತನ ವಿದ್ಯಾಲಯಅಲ್ ಅಝ್‌ಹರ್ ಯುನಿವರ್ಸಿಟಿ.

ಇಸ್ಲಾಮಿನ ಪುರಾತನ ವಿದ್ಯಾಲಯಗಳ ಪೈಕಿ ಅತ್ಯಂತ ಪ್ರಸಿದ್ದವೂ, ಜಗತ್ತಿನ ಬೌಧ್ದಿಕ ವಲಯದ ಪಥ ಬದಲಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ ವಿದ್ಯಾಲಯವೂ ಆಗಿದೆ ಅಲ್ ಅಝ್‌ಹರ್ ಯುನಿವರ್ಸಿಟಿ. ಇದು ಈಜಿಪ್ಟ್‌ನ ಕೈರೋದಲ್ಲಿದೆ.
ಫಾತ್ವಿಮೀ ಖಲೀಫಾ ಅಲ್ ಮುಇಸ್ಸ್‌, ಸಿಸಿಲಿಯಾ ಮೂಲದ ಜೌಹರ್ ಎಂಬ ಸೇನಾ ಮೇಧಾವಿಯನ್ನು ಕಳುಹಿಸಿ ಈಜಿಪ್ಟ್ ವಶಪಡಿಸಲು ಆದೇಶಿಸಿದರು. ಹಾಗೂ ತಮ್ಮ ತೆಕ್ಕೆಗೆ ಬಂದ ಆ ಪ್ರದೇಶದಲ್ಲಿ ಒಂದು ಪಟ್ಟಣ ಮತ್ತು ಮಸೀದಿಯನ್ನು ನಿರ್ಮಿಸುವಂತೆ ಅಜ್ಞಾಪಿಸಿದರು. ಹಾಗೆ ಹಿಜ್ರಾ 358(ಕ್ರಿ.ಶ 969)ರಲ್ಲಿ ಕೈರೋ ನಗರವನ್ನು ಮತ್ತು ಅದರ ಪಕ್ಕದಲ್ಲೇ ಒಂದು ಮಸೀದಿಯನ್ನೂ ಜೌಹರ್ ನಿರ್ಮಿಸಿದರು. ಅಂದಾಜು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡ ಮಸೀದಿಯು ಹಿ. 361 ರಮಳಾನ್ 7(ಜೂನ್ 22 972)ಕ್ಕೆ ನಮಾಜಿಗೆ ಸಜ್ಜೀಕೃತಗೊಂಡಿತು. ಅಂದಿನಿಂದ ಮುಸ್ಲಿಂ ಜಗತ್ತಿನ ಪ್ರಸಿದ್ದ ಮಸೀದಿಗಳ ಸಾಲಿಗೆ ಅಲ್ ಅಝ್‌ಹರ್ ಸೇರಿಕೊಂಡಿತು.
ಈ ಮಸೀದಿಯ ಸುತ್ತಲೂ ಮನೋಹರವಾದ ಹೂದೋಟಗಳಿದ್ದರಿಂದ ಇದಕ್ಕೆ ಅಲ್ ಅಝ್‌ಹರ್ ಎಂಬ ಹೆಸರು ಲಭಿಸಿತ್ತೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಣದ ಉದ್ಯಾನವಾಗಿ, ಉದ್ಯಾನಗಳು ಚಿಟ್ಟೆ-ಪತಂಗಗಳನ್ನು ತನ್ನತ್ತ ಸೆಳೆಯುವಂತೆ ಈ ವಿದ್ಯಾಲಯವೂ ವಿದ್ಯಾದಾಹಿಗಳನ್ನು ತನ್ನತ್ತ ಸೆಳೆಯಲಿದೆಯೆಂಬ ಅಂದಿನ ವಿಧ್ವಾಂಸರ ದೂರಧೃಷ್ಟಿಯಿಂದಲೇ ಈ ಹೆಸರು ಬರಲು ಕಾರಣವೆಂದೂ ಮತ್ತೊಂದು ವಿಭಾಗ ಚರಿತ್ರೆಗಾರರು ಅಭಿಪ್ರಾಯ ತಾಳುತ್ತಾರೆ. ಇವೆರಡೂ ಅಭಿಪ್ರಾಯಕ್ಕೆ ಮೂರನೇ ವಿಭಾಗದ ನಿಗಮನವು ವ್ಯತಿರಿಕ್ತವಾಗುತ್ತದೆ. ಪ್ರವಾದಿ ಪುತ್ರಿ ಫಾತಿಮಾರ ಇನ್ನೊಂದು ಹೆಸರಾಗಿತ್ತು ಝಹ್‌ರಾ ಬತೂಲ್. ಈ ನಾಮದ ಸ್ಮರಣೆಗಾಗಿ ಅಲ್ ಅಝ್‌ಹರ್ ಎಂದು ನಾಮಾಂಕಿತಗೊಳಿಸಲಾಯಿ ತೆಂಬುದು ಮೂರನೇ ವಿಭಾಗದ ಆಂಬೋಣ. ಫಾತ್ವಿಮೀ ಖಿಲಾಫತ್‌ನ ಅವಧಿಯಲ್ಲೇ ಇದರ ನಿರ್ಮಾಣವಾದ್ದರಿಂದ ಮೂರನೇ ಅಭಿಪ್ರಾಯಕ್ಕೆ ಹೆಚ್ಚಿನ ಬಲವಿದ್ದಂತೆ ಕಾಣುತ್ತದೆ. ಕಾರಣ ಫಾತ್ವಿಮೀ ಎಂಬ ಹೆಸರನ್ನು ಅವರು ತಮ್ಮ ಖಿಲಾಫತ್‌ಗೆ ಸ್ವೀಕರಿಸಿ ಕೊಂಡದ್ದೂ ಫಾತ್ವಿಮಾ ಬೀವಿಯವರ ಸ್ಮರಿಸುವ ಉದ್ದೇಶದಿಂದಾಗಿತ್ತು. ಹೀಗೆ ವ್ಯತ್ಯಸ್ಥ ಅಭಿಪ್ರಾಯಗಳು ಈ ಹೆಸರಿನ ಹಿಂದಿದ್ದರೂ ಇದು ಮಾತ್ರ ತನ್ನ ವಿದ್ಯಾ ಸಂಚಯದ ಮೂಲಕ ಕಾಲಾಂತರದಲ್ಲಿ ತನ್ನ ಹೆಸರನ್ನು ಅನ್ವರ್ಥಗೊಳಿಸಿರುವುದರಲ್ಲಿ ಸಂಶಯವಿಲ್ಲ.
ಮೊದಲು ಮಸೀದಿಯಾಗಿ ತಲೆಯೆತ್ತಿದ್ದರೂ ಮಿಕ್ಕ ವಿದ್ಯಾಲಯಗಳಂತೆ ನಮಾಜಿನ ಹೊರತಾದ ಸಮಯದಲ್ಲಿ ಇದು ಕಾರ್ಯಾಚರಿಸುತ್ತಿದ್ದುದು ಜ್ಞಾನ ಕಲಿಕೆಗಾಗಿತ್ತು. ಈ ಮಸೀದಿಗಳ ಪ್ರತಿಯೊಂದು ಸ್ಥಂಭದಲ್ಲೂ ಒಬ್ಬ ವಿಧ್ವಾಂಸ ಕುಳಿತು ವಿದ್ಯಾರ್ಥಿಗಳಿಗೆ ಭೋಧನೆ ಮಾಡುತ್ತಿದ್ದರು. ಪ್ರತಿಯೊಂದು ಸ್ಥಂಭಗಳೂ ಆ ಕಾಲದ ವಿವಿಧ ವಿಷಯಗಳ ತರಗತಿಗಳಾಗಿತ್ತು. ಈ ಪದ್ದತಿಯೇ ನಂತರ ಆಧುನೀಕರಣಗೊಂಡು ಪ್ರತ್ಯೇಕ ತರಗತಿಗಳಾಗಿ ರೂಪಾಂತರ ಪಡೆದದ್ದು. ಸಾಮೂಹಿಕವಾಗಿ ನಮಾಜು ಮಾಡುವ ಮಸೀದಿಗಳನ್ನು ಜಾಮಿಅ ಎನ್ನಲಾಗುತ್ತಿತ್ತು. ನಂತರ ಮಸೀದಿಯ ಸ್ಥಂಭಗಳಲ್ಲಿ ನಡೆಯುತ್ತಿದ್ದ ಭೋಧನೆಗಳು ಕಟ್ಟಡಗಳಿಗೆ ವರ್ಗಾವಣೆಯಾದಾಗ ಅದಕ್ಕೂ ಕೂಡಾ ಜಾಮಿಅ ಎಂಬ ಹೆಸರೇ ಲಭಿಸಿತು. ಆದ್ದರಿಂದಲೇ ಇಂದು ಪ್ರಸಿದ್ದ ವಿದ್ಯಾಲಯಗಳು ಜಾಮಿ‌ಅ ಎಂಬ ಹೆಸರಿನಲ್ಲಿ ಅರಿಯಲ್ಪಡುವುದನ್ನು ಕಾಣಬಹುದು.
ಮಸೀದಿಯಾಗಿ ತಲೆಯೆತ್ತಿದ ಅಲ್‌ ಅಝ್‌ಹರ್‌ ವಿದ್ಯಾರ್ಥಿಗಳಿಂದಲೂ, ವಿಧ್ವಾಂಸರಿಂದಲೂ ನಿಬಿಡವಾದವು. ಹಾಗೆ ಅಲ್‌ಹಝ‌ಹರ್ ನಂತರದ ಕಾಲದಲ್ಲಿ ಮಸೀದಿಯೆಂಬುದಕ್ಕಿಂತ ವಿದ್ಯಾಲಯವೆಂದೇ ಜನಜನಿತವಾಯಿತು. ನಿರ್ಮಾಣದ ಮೂರನೇ ವರ್ಷದಲ್ಲೇ ಅಲ್‌ಅಝ್‌ಹರ್‌ ಶೈಕ್ಷಣಿಕವಾಗಿ ಉಛ್ರಾಯತೆಯನ್ನು ಕಾಣಲಾರಂಭಿಸಿತು.
ಹಿ.365(ಕ್ರಿ.ಶ 975)ರಲ್ಲಿ ಅಲ್‌ಅಝ್‌ಹರ್‌ನ ಅಂಗಳದಲ್ಲಿ ಒಂದು ವಿಶೇಷ ಸಂವಾದವೊಂದು ನಡೆಯಿತು. ಸುಲ್ತಾನ್ ಅಲ್‌ಮುಇಸ್ಸ್‌ರವರ ಸಮ್ಮುಖದಲ್ಲಿ ಚೀಫ್ ಜಸ್ಟೀಸ್ ಹಸನ್ ಅಲಿ ಬಿನ್ ಅಲ್ ನುಅ್‌ಮಾನ್ ಖೈರವಾನಿ ಎಂಬ ವಿಧ್ವಾಂಸರು, ಇಮಾಂ ಅಬೂ ಹನೀಫಾರವರ 'ಅಲ್ ಇಖ್ತಿಸ್ವಾರ್' ಎಂಬ ಕರ್ಮಶಾಸ್ತ್ರ ಗ್ರಂಥವನ್ನು ಮಂಡಿಸಿದರು. ಹಲವಾರು ವಿದ್ವಾಂಸರು, ವಿದ್ಯಾರ್ಥಿಗಳನ್ನೊಳಗೊಂಡ ಈ ಸಂವಾದದಲ್ಲಿ ಮುಸ್ಲಿಮೇತರ ಜ್ಞಾನ ದಾಹಿಗಳು, ಚಿಂತಕರೂ ಕೂಡಾ ಭಾಗವಹಿಸಿದ್ದರು. ಈ ಸಂವಾದ ಕಾರ್ಯಕ್ರಮವೇ ನಂತರದ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸೆಮಿನಾರ್‌ಗಳ ಆಯಾಮವನ್ನು ಪಡೆದದ್ದು. ಚೀಫ್ ಜಸ್ಟೀಸ್ ಎಂಬ ಹೆಸರು ಮೊದಲು ಲಭಿಸಿದ್ದೂ ನುಅ್‌ಮಾನ್ ಖೈರವಾನಿಯವರಿಗೆ ಎನ್ನಲಾಗುತ್ತದೆ.
ಅಲ್‌ ಅಝ್‌ಹರ್‌ನಲ್ಲಿ ನಡೆಯುತ್ತಿದ್ದ ತರಗತಿಗಳು ಧಾರ್ಮಿಕವೇ ಆಗಿದ್ದರೂ ಸಾಮಾಜಿಕ, ರಾಜಕೀಯ, ಮತ್ತು ಬೌಧ್ದಿಕ ನೆಲಗಟ್ಟುಗಳೊಂದಿಗೆ ಕೂಡಿದ್ದಾಗಿತ್ತು. ಅಝೀಝ್ ಬಿಲ್ಲಾಹಿಯವರ ಕಾಲದಲ್ಲಿ ಅಲ್ ಅಝ್‌ಹರ್ ಶಿಕ್ಷಣ ಕ್ಷೇತ್ರದಲ್ಲಿ ಔನ್ನತ್ಯವನ್ನು ಪಡೆಯಿತು. ಅಲ್ ಮುಇಸ್ಸ್ ಮತ್ತು ಅಲ್ ಅಝೀಝ್ ಬಿಲ್ಲಾಹಿಯವರ ಮಂತ್ರಿಯಾಗಿದ್ದ ಜಾಕಬ್ ಬಿನ್ ಕಿಲ್ಲೀಸ್ (Jacob bin killis) ರವರ ರಿಸಾಲತುಲ್ ಅಝೀಝಿಯಾ ಎಂಬ ಕಾನೂನು ಗ್ರಂಥವನ್ನು ಇಲ್ಲಿ ಪಠ್ಯಕ್ರಮಕ್ಕೆ ಸೇರಿಸಲಾಗಿತ್ತು. 37ಕಾನೂನು ತಜ್ಞರನ್ನು ಇಲ್ಲಿ ಉಪನ್ಯಾಸಕ್ಕಾಗಿ ನೇಮಿಸಲಾಗಿತ್ತು.! ಅವರಿಗೆ ವೇತನ ಮತ್ತು ವಸತಿ ಸೌಕರ್ಯವನ್ನು ಅಂದಿನ ಖಿಲಾಫತ್ ಒದಗಿಸುತ್ತಿದ್ದವು. ಆ ಕಾಲದಲ್ಲೇ ಬೌಧ್ದಿಕವಾಗಿ ಈ ವಿದ್ಯಾಲಯವು ಎಷ್ಟು ಔನ್ನತ್ಯವನ್ನು ಪಡೆದಿತ್ತೆಂಬುದು ಇದರಿಂದ ಶ್ರುತವಾಗುತ್ತದೆ.
ಫಾತ್ವಿಮೀ ಕಾಲಘಟ್ಟದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಪ್ರೌಢ ಸಾನಿಧ್ಯವಾಗಿತ್ತು ಅಲ್‌ಅಝ್‌ಹರ್. ಇತರ ತರಗತಿಗಳ ಹೊರತಾಗಿ ಮಹಿಳೆಯರಿಗೆ ವಿಶೇಷ ಧಾರ್ಮಿಕ ತರಬೇತಿಗಳೂ ಇಲ್ಲಿ ನಡೆಯುತ್ತಿದ್ದವು. ಅಂದಾಜು ಎರಡು ಶತಮಾನಗಳ ಕಾಲ ಜಗತ್ತಿನ ವಿಖ್ಯಾತ ನ್ಯಾಯಾಧೀಶರ, ಗಣಿತ ತಜ್ಞರ, ಚೀಫ್ ಟಾಕ್ಸ್ ಕಲಕ್ಟರ್‌ಗಳ ಕೇಂದ್ರವೂ ಆಗಿತ್ತು ಅಲ್ ಅಝ್‌ಹರ್.
ಅಯ್ಯೂಬಿ ಕಾಲಘಟ್ಟದಲ್ಲಿ ಅಲ್‌ಅಝ್‌ಹರ್‌ನ ಬೆಳವಣಿಗೆ ಕುಂಠಿತಗೊಳ್ಳಲಾರಂಭಿಸಿತು. ಸ್ವಲಾಹುದ್ದೀನ್ ಅಯ್ಯೂಬಿಯವರ ನಂತರ ಅಯ್ಯೂಬೀ ಆಡಳಿತಗಾರರು ಮಿಕ್ಕವರೂ ಸ್ವಾರ್ಥಿಗಳೂ, ಧನ ಮೋಹಿಗಳೂ ಆಗಿದ್ದರು. ಅವರು ಜ್ಞಾನಕ್ಕೆ ಮತ್ತು ವಿದ್ಯಾಲಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಿಲ್ಲ. ಒಂದು ಶತಮಾನಗಳ ಅವಧಿಗೆ ವಿದ್ಯಾಲಯವು ಚಲನಾತ್ಮಕವಾಗಿ ಶುಷ್ಕತೆಯನ್ನು ಕಂಡಿತ್ತು. ಆದರೂ ತನ್ನ ಪ್ರೌಢಿ, ಹಿರಿಮೆ, ಧಾರ್ಮಿಕ ಶ್ರೇಯಸ್ಸು, ಭಾಷಾ ಸಂಪನ್ನತೆಯನ್ನು ಅಲ್‌ಅಝ್‌ಹರ್‌ ಕಾಪಾಡಿಕೊಂಡಿತ್ತು.
ಮಾಂಗೋಲಿಯನ್ನರು ಇಸ್ಲಾಮೀ ರಾಷ್ಟ್ರಗಳ ಸರಹದ್ದು ದಾಟಿ ಹಲವು ಖಿಲಾಫತ್‌ನ್ನು ಮಕಾಡೆ ಮಲಗಿಸಿ, ಹಲವು ಪಟ್ಟಣಗಳನ್ನು ಸ್ಮಶಾನಗೊಳಿಸಿ, ಹಲವು ವಿದ್ಯಾಲಯಗಳನ್ನು ಧ್ವಂಸ ಮಾಡಿ, ಸಂಹಾರ ತಾಂಡವ ನಡೆಸಿದರೆ ಈಜಿಪ್ಟಿನಲ್ಲಿ ಮಾತ್ರ ಅದು ಸಾಧ್ಯವಾಗಲಿಲ್ಲ. ಅಂದಿನ ವಿಶ್ವವಿಖ್ಯಾತ ವಿಧ್ವಾಂಸರಾಗಿದ್ದ ಅಬ್ದುಲ್ಲಾಹಿಬ್ನು ಅಬ್ದುಸ್ಸಲಾಂರವರ ನಾಯಕತ್ವದಲ್ಲಿ ಅಲ್ ಅಝ್‌ಹರ್‌ನ ವಿಧ್ವಾಂಸರು ಮತ್ತು ವಿದ್ಯಾರ್ಥಿಗಳು ಮಾಂಗೋಲಿಯನ್ನರ ವಿರುದ್ದ ಬೀದಿಗಿಳಿದಿದ್ದರು. ಜನರಲ್ಲಿ ಜಿಹಾದ್‌ನ ಬಗ್ಗೆ ಜಾಗೃತಿ ಮೂಡಿಸಿ ಮಾಂಗೋಲಿಯನ್ನರ ವಿರುದ್ದ ಬಡಿದೆಬ್ಬಿಸಿದರು. ಮಾಂಗೋಲಿಯನ್ನರನ್ನು ಸಮರ್ಥವಾಗಿ ಬಗ್ಗು ಬಡಿಯಲು ಅಂದಿನ ಖಲೀಫಾ ಸೈಫ್‌ಬ್ನು ಖುತ್ವ್‌ಸ್‌ರಿಗೆ ಸಾಧ್ಯವಾದದ್ದು ಈ ವಿಧ್ವಾಂಸರ ಸಂಪೂರ್ಣ ಸಹಕಾರದಿಂದಾಗಿತ್ತು.
ಮಂಮ್ಲೂಕ್‌ಗಳ ಕಾಲದಲ್ಲಾಗಿತ್ತು (ಹಿ.648-922 /ಕ್ರಿ.ಶ 1250-1517) ಮೊಘಲರ ಮಧ್ಯೇಶ್ಯಾ ಪ್ರವೇಶ ಮತ್ತು ಸ್ಪೈನ್‌ನ ಮುಸ್ಲಿಂ ಆಡಳಿತದ ಪತನ. ಈ ಸಂದರ್ಭದಲ್ಲಿ ಗಡಿಪಾರು ಮಾಡಲ್ಪಟ್ಟು ಮನೆ, ಸೂರು ಕಳೆದುಕೊಂಡ ವಿಧ್ವಾಂಸರಿಗೆ ಅಭಯ ನೀಡಬೇಕಾದ ಬಾಧ್ಯತೆಯು ಅಲ್‌ಅಝ್‌ಹರ್‌ನ ಹೆಗಲಿಗೆ ಬಿತ್ತು‌‌. ಹಿಜ್ರಾ 8-9 (ಕ್ರಿ.ಶ 14-15)ನೇ ಶತಮಾನದಲ್ಲಿ ಅಲ್ ಅಝ್‌ಹರನ್ನು ಔನ್ನತ್ಯದ ತುತ್ತತುದಿಗೇರಿಸುವಲ್ಲಿ ಈ ವಿಧ್ವಾಂಸರ ಪ್ರಯತ್ನ ಮತ್ತು ಪಾತ್ರಗಳು ನಿರ್ಣಾಯಕವಾಗಿತ್ತು.
ಖಗೋಳ ಮತ್ತು ಭೂಗೋಳ ಕ್ಷೇತ್ರಗಳಿಗೂ ಅಲ್‌ಅಝ್‌ಹರ್‌ ಪ್ರಧಾನ ಕೊಡುಗೆಯನ್ನು ನೀಡಿದೆ. ವೈದ್ಯಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ಹೀಗೆ ಲೌಕಿಕ ಕ್ಷೇತ್ರದ ಹಲವು ಆಯಾಮಗಳಲ್ಲಿ ಖ್ಯಾತನಾಮರೆನಿಸಿಕೊಂಡ ವಿಧ್ವಾಂಸರು ಇಲ್ಲಿ ಬೋಧನೆ ನಡೆಸುತ್ತಿದ್ದರು. ಮುಸ್ಲಿಂ ರಾಜಕೀಯ ಮತ್ತು ಬೌದ್ಧಿಕ ಶಿಕ್ಷಣ ಕ್ಷೇತ್ರದ ನಿಷ್ಕ್ರಿಯತೆಯ ಕಾಲದಲ್ಲಿ ಮೇಲೆ ಉಲ್ಲೇಖಿಸಲ್ಪಟ್ಟ ವಿಜ್ಞಾನ ಕ್ಷೇತ್ರಗಳ ಉಳಿವಿಗಾಗಿ ವಿದ್ವಾಂಸರು ಅಜಸ್ರ ಪ್ರಯತ್ನ ನಡೆಸಿದ್ದರು.
ಜಗತ್ತಿನಾದ್ಯಂತ ವಿದ್ಯಾದಾಹಿಗಳು ಪುರಾತನ ಕಾಲದಲ್ಲೇ ಅಝ್‌ಹರ್‌ಗೆ ವಿದ್ಯಾರ್ಜನೆಗಾಗಿ ತೆರಳುತ್ತಿದ್ದರು. ಆ ಪೈಕಿ ಭಾರತದ ಪ್ರಪ್ರಥಮ ವಿದ್ಯಾರ್ಥಿಯೆಂದರೆ ಫತುಹುಲ್ ಮುಈನ್ ಕರ್ತೃ ಝೈನುದ್ದೀನ್ ಮುಖ್ದೂಮರು. ಮಕ್ಕಾದಲ್ಲಿ ವಿದ್ಯಾರ್ಜನೆ ನಡೆಸಿದ ಮಖ್ದೂಮರು ಉನ್ನತ ವ್ಯಾಸಂಗಕ್ಕಾಗಿ ಮಕ್ಕಾದಿಂದ ಕಾಲ್ನಡಿಗೆಯ ಮೂಲಕ ಈಜಿಪ್ಟಿನ ಅಲ್‌ಅಝ್‌ಹರ್‌‌ಗೆ ತೆರಳಿದ್ದರು.! ಅಂದಿನ ಉದ್ದಾಮ ವಿಧ್ವಾಂಸರೂ, ಖಾಝಿಯೂ ಆಗಿದ್ದ ಅಬ್ದುರ್ರಹ್ಮಾನ್ ಅಲ್ ಹದಬಿಯವರಿಂದ ಹದೀಸ್‌ನಲ್ಲಿ ಹೆಚ್ಚಿನ ಜ್ಞಾನವನ್ನು ಕರಗತಗೊಳಿಸಿಕೊಂಡರು.
ವಿವಿಧ ಖಿಲಾಫತ್ತಿನ ಉನ್ನತಿ ಮತ್ತು ಅವನತಿಯನುಸಾರ ಅಲ್ ಅಝ್‌ಹರ್ ಕೂಡಾ ಉಚ್ಚ್ರಾಯ ಮತ್ತು ತಟಸ್ಥತೆಯನ್ನು ಕಂಡಿದೆ. ಕಾಲದ ಏಳು ಬೀಳುಗಳ ಏಟು ಈ ವಿದ್ಯಾಲಯದ ಮೇಲೆ ಚೆನ್ನಾಗಿಯೇ ಬಿದ್ದಿದೆ. ಉಸ್ಮಾನಿಯಾ ಖಿಲಾಫತ್‌ನ ಸಮಯದಲ್ಲಿ ವಿದ್ವಾಂಸರಿಗೆ ಅಧ್ಯಯನ, ಅನ್ವೇಷಣೆ, ಪ್ರಯೋಗಗಳಿಗೆ ಬೇಕಾದ ಸರ್ವ ಸಲಕರಣೆಗಳು ವಖ್ಫ್‌ನ ಹಣದಿಂದ ಖರೀದಿಸಲಾಗುತ್ತಿತ್ತು. ಉಸ್ಮಾನಿಯ ಖಿಲಾಪತ್ ತುರ್ಕೀ ಕೇಂದ್ರೀಕೃತವಾಗಿ ನಡೆಯುತ್ತಿದ್ದರೂ ಆ ಕಾಲಕ್ಕೆ ಪ್ರತಿಷ್ಟಿತ ವಿದ್ಯಾಲಯವಾಗಿದ್ದ ಅಲ್‌ ಅಝ್‌ಹರ್‌ನ 'ಇಮಾಂ'ನ ಸ್ಥಾನವನ್ನು ಈಜಿಪ್ಟಿನ ವಿದ್ವಾಂಸರಿಗೇ ಮೀಸಲಿರಿಸಿದ್ದರು.
1789ರ ಜುಲೈಯಲ್ಲಿ ನೆಪೊಲಿಯನ್ ಈ ನಗರವನ್ನು ವಶಪಡಿಸಿಕೊಂಡ. ಸಮಕಾಲೀನ ಮುಸ್ಲಿಂ ಜಗತ್ತಿನ ಅತ್ಯಂತ ಪ್ರಸಿದ್ದ ವಿಶ್ವವಿದ್ಯಾಲಯವಾಗಿ ಆತ ಇದನ್ನು ಘೋಷಿಸಿದ. ಕಾಲಾಂತರದಲ್ಲಿ ಈಜಿಪ್ಟಿನ ವೈಭವಕ್ಕೆ ಮರುಳಾದ ಫ್ರೆಂಚರು ಅಲ್ಲಿ ಮೆಲ್ಲಗೆ ವಸಾಹತು ಸ್ಥಾಪಿಸುವ ಚಿಂತನೆ ನಡೆಸಿದರು. ಫ್ರೆಂಚರ ವಲಸೆ ಮೆಲ್ಲನೆ ತಾರಕಕ್ಕೇರಿ ಆ ನಾಡಿನ ಸಂಸ್ಕೃತಿ, ಸಂಸ್ಕಾರದ ಮೇಲೆ ಪರಿಣಾಮ ಬೀರುತ್ತದೆಯೆಂದರಿತಾಗ ಸ್ವದೇಶೀ ಆಸ್ಮಿತೆಯನ್ನು ನಾಡಿನಾದ್ಯಂತ ಎಚ್ಚರಿಸಿದ್ದೂ ಅಲ್‌ಹಝ್‌ಹರ್‌ನ ವಿದ್ವಾಂಸರಾಗಿದ್ದರು. ಫ್ರೆಂಚ್ ವಲಸೆಯ ವಿರುದ್ದ ಪ್ರಪ್ರಥಮ ಪ್ರತಿರೋಧದ ಕಹಳೆ ಮೊಳಗಿದ್ದೂ ಅಲ್‌ಅಝ್‌ಹರ್‌ನಲ್ಲಾಗಿತ್ತು. ಫ್ರೆಂಚ್ ವಲಸೆ ವಿರೋಧಿಗಳ ಸಂಗಮಸ್ಥಾನ ಮತ್ತು ಪ್ರತಿಭಟನಾಕಾರರ ಆಸ್ಥಾನವೂ ಆಗಿತ್ತು ಆ ಕಾಲಕ್ಕೆ ಅಲ್‌ಅಝ್‌ಹರ್‌. ಶೇಖ್ ಮುಹಮ್ಮದ್ ಸಾದಾತ್‌ರ ನೇತೃತ್ವದಲ್ಲಿ ಒಂದು ಕ್ರಾಂತಿಕಾರಿ ಪಡೆಯೇ ಫ್ರೆಂಚ್ ವಲಸೆಯ ವಿರುದ್ದ ಬೀದಿಗಿಳಿಯಿತು. ಆದರೆ ಫ್ರೆಂಚ್ ವಲಸೆ ವಿರುದ್ದದ ಈ ಹೋರಾಟಗಳೆಲ್ಲಾ ವಿಫಲಗೊಂಡ ಮೇಲೆ ಫ್ರೆಂಚರ ಆಧಿಕ್ಯದಿಂದಾಗಿ ಅಲ್ಲಿ ಅಧ್ಯಯನ, ಮತ್ತು ಶಿಕ್ಷಣ ನಡೆಸುವುದು ಅಸಾಧ್ಯವೆಂದು ಅಲ್ಲಿನ ವಿಧ್ವಾಂಸರು ಮಸೀದಿ ಮತ್ತು ವಿದ್ಯಾಲಯವನ್ನು ಮುಚ್ಚಿದರು. ಅಲ್ ಅಝ್‌ಹರ್‌ನ ಸುಧೀರ್ಘ ಚರಿತ್ರೆಯಲ್ಲಿ ಮುಚ್ಚಲ್ಪಟ್ಟದ್ದು ಅದು ಪ್ರಥಮ ಬಾರಿಗೆಯಾಗಿತ್ತು. ಈ ತಾತ್ವಿಕ ಪ್ರತಿರೋಧದ ಬಳಿಕ ಅಂದರೆ ಮೂರು ವರ್ಷಗಳ ನಂತರ ಫ್ರೆಂಚರನ್ನು ಗಡಿಪಾರು ಮಾಡಿದ ಮೇಲೆ ಅಲ್ ಅಝ್‌ಹರ್ ಪೂರ್ವ ಸ್ಥಿತಿಗೆ ಬಂದು, ವಿದ್ಯಾರ್ಥಿಗಳನ್ನೂ ಅಧ್ಯಾಪಕರನ್ನೂ ಮೊದಲಿನಂತೆ ಸ್ವೀಕರಿಸಲಾರಂಭಿಸಿತು.
ಹೀಗೆ ಚರಿತ್ರೆಯಲ್ಲಿ ಹಲವು ಏಳು ಬೀಳುಗಳನ್ನು ಕಂಡ ಈ ವಿದ್ಯಾಲಯ ಇಂದು ಜಗತ್ತಿನ ಪುರಾತನ ವಿಶ್ವವಿದ್ಯಾಲಯಗಳ ಪೈಕಿ ಅಗ್ರಪಂಕ್ತಿಗೆ ಸೇರಿದೆ. ಹಲವು ವಿದ್ಯಾದಾಹಿಗಳಿಗೆ ಜ್ಞಾನ ಸಿಂಚನವನ್ನು ನೀಡಿದ ಅಲ್ ಅಝಹರ್ ಈಗಲೂ ತನ್ನ ಹಳೆಯ ಅದೇ ಪ್ರೌಢಿ-ಪ್ರತಾಪವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ ಈಜಿಪ್ಟಿನಾದ್ಯಂತ ಭಾಧಿಸಿದ ನೂತನ ವಿಚಾರಧಾರೆಗಳಿಂದ ಅಂತರ ಕಾಪಾಡಿಕೊಂಡ ಈ ವಿದ್ಯಾಲಯವು ಈಗಲೂ ಅಹ್ಲುಸ್ಸುನ್ನದ ಬುನಾದಿಯಲ್ಲೇ ಭಧ್ರವಾಗಿ ನೆಲೆಯೂರಿದೆ‌. ಮತ್ತು ಜಾಗತಿಕ ಅಹ್ಲುಸ್ಸುನ್ನದ ಪ್ರಭರ ಕೇಂದ್ರಗಳಲ್ಲೊಂದೂ ಆಗಿದೆ.
(ಕಳೆದ ಜುಲೈ ತಿಂಗಳಲ್ಲಿ ಸುನ್ನತ್ ಮಾಸಿಕದಲ್ಲಿ ಪ್ರಕಟವಾದ ಲೇಖನ)
-ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Sunday, July 12, 2020

ಇಸ್ಲಾಮಿನತ್ತ ಜಗತ್ತಿನ ಚಿತ್ತ. ಆದರೆ...?-The world's mood towards Islam. But ...

ಇಸ್ಲಾಮಿನತ್ತ ಜಗತ್ತಿನ ಚಿತ್ತ. ಆದರೆ...?
----------------------------------------

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ 
-----------------------------------------

ವಿಶ್ವದಲ್ಲಿ ವಿಸ್ಮಯಗಳನ್ನು ಸೃಷ್ಟಿಸಿದ ವಿಜ್ಞಾನಿಗಳು,ವಿಶ್ವ ಆರೋಗ್ಯ ಸಂಸ್ಥೆ.ವಿಶ್ವದ ವಿವಿಧ ರಾಷ್ಟ್ರ ಮೇಧಾವಿಗಳು ದಿನಕಳೆದಂತೆ ಇಸ್ಲಾಮಿನ ತತ್ವಸಿದ್ಧಾಂತಗಳೆಡೆಗೆ ಅಚ್ಚರಿಯಿಂದ ನೋಡುತ್ತಿರುವುದು ಕುತೂಹಲದ ಸಂಗತಿಯಾಗಿದೆ.
ಕಾಲಚಕ್ರದ ಉರುಳುವಿಕೆಯ ವೇಗಕ್ಕೆ ಸಮಾನವಾಗಿ ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ 
ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರತಿಪಾದಿಸಿದ ಪ್ರತಿಯೊಂದು ತತ್ವಗಳ ರಹಸ್ಯಗಳು ಒಂದೊಂದಾಗಿ ಹಗಲು ಬೆಳಕಿನಂತೆ ಬೆಳಕಿಗೆ ಬರುತ್ತಿರುವುದು ಯಾರಿಂದಲೂ ನಿಷೇಧಿಸಲಸಾಧ್ಯ.

ಇದೀಗ ಕೋವಿಡ್ 19 ಎಂಬ 
ಮಹಾಮಾರಿಯಿಂದ ಜಗತ್ತು 
ಕಂಗಾಲಾಗಿದೆ.
ಆರೋಗ್ಯ ಇಲಾಖೆ ಪರಿಹಾರ 
ಮಾರ್ಗೋಪಾಯಗಳ ಹುಡುಕಾಟದಲ್ಲಿ ರಾತ್ರಿ ಹಗಲು ಮಗ್ನವಾಗಿದೆ.
ಕೋಟಿಗಟ್ಟಲೆ ಹಣ ವ್ಯಯಿಸಿ ಅನೇಕ ಮಾರ್ಗಶೂಚಿಗಳನ್ನು ನಿರ್ದೇಶಿಸುತ್ತಿದೆ.
ಮಾನವನ ಆರೋಗ್ಯ ಹಾಗೂ 
ನೆಮ್ಮದಿಯನ್ನು ಗುರಿಯಾಗಿಟ್ಟು ಅನೇಕ ರೀತಿಯ ಪ್ರತಿರೋಧಕ ಮಾರ್ಗಗಳನ್ನು ಕಡ್ಡಾಯ ಗೊಳಿಸಿ ಮಹಾಮಾರಿಯ 
ನಿರ್ಮೂಲನೆಗೆ ಹರಸಾಹಸ ಪಡುತ್ತಿದೆ.

ಅವುಗಳಲ್ಲಿ ಮುಖ್ಯವಾದದ್ದು ಮಾಸ್ಕ್ ಧರಿಸುವುದು.
ಸ್ಯಾನಿಟೈಝರ್ ಉಪಯೋಗಿಸಿ 
ಆಗಾಗ ಕೈತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,
ಶುಚಿತ್ವ ಕಾಪಾಡುವುದು ಮೊದಲಾದವುಗಳಾಗಿವೆ.
ಅವುಗಳನ್ನೆಲ್ಲಾ ಕಟ್ಟುನಿಟ್ಟಾಗಿ ಪಾಲಿಸಬೇಕಾದದ್ದು ಜನಸಾಮಾನ್ಯರ ಮೇಲೆ ಕಡ್ಡಾಯವೂ ಅನಿವಾರ್ಯವೂ ಆಗಿರುತ್ತದೆ.ಇದರಲ್ಲಿ ತರ್ಕವಿಲ್ಲ.

ಆಗಾಗ ಕೈ ಮುಖಗಳನ್ನು ತೊಳೆಯುತ್ತಿರಲು ಮನೆಗಳ,ಮಾಲ್ ಗಳ,ಅಂಗಡಿ ಮುಂಗಟ್ಟುಗಳ,ಜನಸಂದಣಿ ಸ್ಥಳಗಳ 
ಪರಿಸರಗಳಲ್ಲಿ  ಸ್ಯಾನಿಟೈಝರ್ ಗಳನ್ನು ಅಳವಡಿಸಲಾಗಿದೆ.ಇದೆಲ್ಲಾ ಅಗತ್ಯ ತಾನೇ.

ಆದರೆ ಹದಿನಾಲ್ಕು ಶತಮಾನಗಳ ಹಿಂದೆ ಮನುಷ್ಯನ ಇಹಪರ ಸುಗಮ ಜೀವನ ಹಾಗೂ ಯಶಸ್ಸನ್ನು ಗುರಿಯಾಗಿಟ್ಟು ಪ್ರವಾದಿ ಮುಹಮ್ಮದ್ ಮುಸ್ತಫಾ ಪ್ರತಿಪಾದಿಸಿದ ಪ್ರತಿಯೊಂದು ಪ್ರತಿವಿಧಾನಗಳು ಪ್ರತಿ ಕಾಲದಲ್ಲೂ ಪ್ರಯೋಗಾರ್ಹ ಎಂಬುದು ಸಂಶಯಾತೀತ ಎಂದು ಈ ಅನುಭವಗಳು ಒತ್ತಿ ಹೇಳುತ್ತಿವೆ.

ವಾಸ್ತವದಲ್ಲಿ ಶುಚಿತ್ವ ಎಂಬ ಒಂದೇ ಒಂದು ವಿಷಯದಲ್ಲಿ ಇಸ್ಲಾಮಿನ ಪ್ರತಿಪಾದನೆಯನ್ನು ನಿಷ್ಪಕ್ಷ ಕಣ್ಣಿನಿಂದ ಸರಿಯಾಗಿ ಅವಲೋಕಿಸುವವರು ನಿಬ್ಬೆರಗಾಗದಿರಲು ಸಾಧ್ಯವೇ ಇಲ್ಲ.

ಮನುಷ್ಯನ ಇಹಪರ ಆರೋಗ್ಯದ ದೃಷ್ಟಿಯಿಂದ  ಇಸ್ಲಾಮಿನಲ್ಲಿ ಕಡ್ಡಾಯಗೊಳಿಸಲ್ಪಟ್ಟದ್ದಾಗಿರುತ್ತದೆ  ಐದು ಸಲದ ಕಡ್ಡಾಯ ನಮಾಝ್.   
ಇದು ನಿರ್ವಹಿಸ ಬೇಕಾದರೆ ಕಡ್ಡಾಯವಾಗಿ ಮಾಡಬೇಕಾದದ್ದಾಗಿದೆ ಅಂಗಶುದ್ಧಿ.

ಏನಿದು ಅಂಗಶುದ್ಧಿ?

ಮನುಷ್ಯ ಶರೀರದಲ್ಲಿ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಪ್ರತ್ಯಕ್ಷ ಗೊಳ್ಳುವ ಪ್ರತಿಯೊಂದು ಅಂಗಗಳನ್ನು ಸರಿಯಾಗಿ ನೀರು ಹರಿಸಿ ಮೂರು ಮೂರು ಬಾರಿ ತೊಳೆಯುದಕ್ಕಾಗಿದೆ ಅಂಗಶುದ್ಧಿ ಎನ್ನುವುದು. 

ಅಂದರೆ ದಿನದಲ್ಲಿ ಐದು ಸಲ ಪ್ರತ್ಯಕ್ಷ ಅಂಗಗಳನ್ನು ಕಡ್ಡಾಯವಾಗಿ ಸರಿಯಾಗಿ ನೀರು ಹರಿಸಿ ತೊಳೆಯಬೇಕು. ಅಲ್ಲದೆ ಪ್ರತಿಯೊಂದು ಅಂಗವನ್ನು ಮೂರು ಸಲ ತೊಳೆಯುವುದು ಪುಣ್ಯದಾಯಕ.

ಅಂಗಶುದ್ಧಿಯ ಪೂರ್ಣ ರೂಪ:-

ಮೊದಲು ಅಂಗಾಂಗಗಳಲ್ಲಿ ಇರುವ ಮಲಿನತೆ ಹಾಗೂ ಕೈಕಾಲುಗಳ ಉಗುರುಗಳ ಮಧ್ಯೆ ಸೇರಿಕೊಂಡಿರುವ ಮಾಲಿನ್ಯಗಳನ್ನು ಶುಚಿಗೊಳಿಸಬೇಕು.
ನಂತರ ಎರಡು ಅಂಗೈಗಳನ್ನು ಮಣಿಗಂಟಿನ ವರೆಗೆ ಮೂರು ಸಲ ತೊಳೆಯಬೇಕು. 
ನಂತರ ಹಲ್ಲುಗಳ ಒಳಹೊರ ಭಾಗಗಳನ್ನು 
ನಾಲಿಗೆಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಉಜ್ಜಿ ಶುಚಿಗೊಳಿಸಬೇಕು.
ನಂತರ ಬಾಯಿಯ ಒಳಭಾಗದಲ್ಲಿ 
ಸಂಪೂರ್ಣವಾಗಿ ನೀರು ಸರಿಸಿ 
ಉಗುಳುವುದರೊಂದಿಗೆ ಮೂಗಿನ ಒಳಭಾಗವನ್ನು ನೀರಿನಿಂದ ಶುಚಿಗೊಳಿಸಬೇಕು.
ಬಳಿಕ ಕಡ್ಡಾಯ ಶುದ್ಧಿಯ ನಿಯ್ಯತ್ತಿನೊಂದಿಗೆ ಮುಖದ ಎಲ್ಲಾ ಭಾಗಗಳನ್ನು ನೀರು ಸರಿಯಾಗಿ ಹರಿದು ಹೋಗುವ ರೀತಿಯಲ್ಲಿ ತೊಳೆಯಬೇಕು.ಆ ಬಳಿಕ ಎರಡೂ ಕೈಗಳನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ನೀರು ಸುರಿಸಿ ತೊಳೆಯಬೇಕು.ನಂತರ  ತಲೆಯನ್ನು ನೀರಿನಿಂದ ಸಂಪೂರ್ಣವಾಗಿ ಸವರಬೇಕು.ನಂತರ ಎರಡೂ ಕಿವಿಗಳನ್ನು ನೀರಿನಿಂದ ಸವರಬೇಕು.ಅದರ ಬಳಿಕ ಎರಡೂ ಕಾಲುಗಳನ್ನು ಮೊಣಕಾಲಿನ ವರೆಗೆ ನೀರು ಸುರಿದು ಚೆನ್ನಾಗಿ ತೊಳೆಯಬೇಕು.ಮೇಲೆ ಹೇಳಿರುವ ಪ್ರತಿಯೊಂದನ್ನೂ ಮೂರು ಮೂರು ಸಲ ಮಾಡಬೇಕು.
ಇದು ಒಂದು ಅಂಗಶುದ್ಧಿಯ ಸರಿಸಮಾರು ರೂಪವಾಗಿದೆ.

ಈ ಅಂಗಶುದ್ಧಿ ಐದು ಸಮಯದ ಕಡ್ಡಾಯ ನಮಾಝ್ ಗಳಲ್ಲಿ ಪ್ರತಿಯೊಂದು ನಮಾಝಿಗೆ ಕಡ್ಡಾಯವಾದರೆ ಒಂದು ದಿನದಲ್ಲಿ ಕನಿಷ್ಠ ಹದಿನೈದು 
ಸಲ ತೊಳೆಯಬೇಕಾಗುತ್ತದೆ.
ಇನ್ನು ಕಡ್ಡಾಯವಲ್ಲದ ಸುನ್ನತ್ 
ನಮಾಝ್ ಗಳು ಅದೆಷ್ಟೋ ಇವೆ.ಅದೆಲ್ಲವನ್ನು 
ಲೆಕ್ಕ ಹಾಕುವಾಗ ಇದರ ಲೆಕ್ಕ 
ಅದೆಷ್ಟೋ ದುಪ್ಪಟ್ಟಾಗುತ್ತದೆ.ಮಾತ್ರವಲ್ಲ 
ಈ ಅಂಗ ಶುದ್ಧಿಯಲ್ಲಿಯೇ ಎಲ್ಲಾ ಸಮಯದಲ್ಲೂ ಇರಬೇಕೆಂದಾಗಿದೆ ಇಸ್ಲಾಮ್ ಹೇಳುವುದು.
ಮಾಡಿದ ಈ ಅಂಗ ಶುದ್ದಿ ಭಂಗವಾದರೆ ಮತ್ತೆ 
ಅಂಗ ಶುದ್ಧಿ ಮಾಡಿ ಕೊಂಡೇ ಇರಬೇಕು..

ಇನ್ನು ಹಲ್ಲುಜ್ಜುವ ವಿಷಯಕ್ಕೆ ಬರುವುದಾದರೆ 
ಹಲ್ಲುಜ್ಜಲು ಮಿಸ್ವಾಕನ್ನು ಹಿಡಿಯುವ ರೀತಿಯಿಂದ ಹಿಡಿದು ಹಲ್ಲುಜ್ಜುವ ಪೂರ್ಣ ವಿಧಾನವನ್ನು ಇಸ್ಲಾಮ್ 
ಕಲಿಸಿ ಕೊಟ್ಟಿದೆ. 
ಮಾತ್ರವಲ್ಲ ಅಂಗ ಶುದ್ಧಿ ಸಮಯದಲ್ಲಿ ಹಲ್ಲುಜ್ಜಿದ್ದರೂ ಕೂಡಾ ಮತ್ತೆ ಪ್ರತಿಯೊಂದು ನಮಾಝ್ ಪ್ರಾರಂಭಿಸುವಾಗಲೂ ಹಲ್ಲುಜ್ಜ ಬೇಕು.ಅನ್ನಪಾನೀಯಗಳ ಮೊದಲೂ ನಂತರವೂ ಮನೆಯಿಂದ ಹೊರಹೋಗುವಾಗಲೂ ಒಳಬರುವಾಗಲೂ ನಿದ್ರಿಸುವಾಗಲೂ ನಿದ್ರೆಯಿಂದ ಎದ್ದಾಗಲೂ ಖುರ್ಆನ್ ಮುಂತಾದ ಉತ್ತಮ ಕಾರ್ಯಗಳನ್ನು ಪಠಿಸಲು ಪ್ರಾರಂಭಿಸುವಾಗಲೂ ಹೀಗೆ ಈ ಪಟ್ಟಿ ದೀರ್ಘವಾಗಿ ಹೋಗುತ್ತದೆ. ಒಂದು ದಿನದಲ್ಲಿ  ಲೆಕ್ಕವಿಲ್ಲದಷ್ಟು ಸಲ ಹಲ್ಲುಜ್ಜಬೇಕಾಗುತ್ತದೆ. 

ಹೀಗೆ ಹಲ್ಲುಜ್ಜಬೇಕೆಂದು ಮಾತ್ರವಲ್ಲ ಇದರಿಂದ ಅನೇಕ ರೋಗಗಳಿಂದ ಮುಕ್ತಿಯಿದೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುತ್ತಾರೆ.

ಇನ್ನು ಮಲಮೂತ್ರ ವಿಸರ್ಜನೆಗೆ ಕೂಡಾ ಸರಿಯಾದ ಕ್ರಮವನ್ನು ಇಸ್ಲಾಮ್ ಉಲ್ಲೇಖಿಸಿದೆ. ಮಲಮೂತ್ರ ವಿಸರ್ಜನೆಯಲ್ಲಿ ಎಲ್ಲಾ ಮಾಲಿನ್ಯಗಳು ಸುಗಮವಾಗಿ ಹೊರಹೋಗಲು ಸ್ವಲ್ಪ ಎಡಭಾಗಕ್ಕೆ ವಾಲಿ ಕೂರಬೇಕು.ಮಲಮೂತ್ರಗಳು ಸಂಪೂರ್ಣವಾಗಿ ಹೊರಟುಹೋಗಿದೆ ಎಂದು ಖಾತರಿಯಾದ ಮೇಲೆ ಮಲಮೂತ್ರ ದ್ವಾರಗಳನ್ನು ನೀರಿನಿಂದ ಸರಿಯಾಗಿ ತೊಳೆದು ಸ್ವಚ್ಛಗೊಳಿಸಬೇಕು.

ಇನ್ನು ಪತಿ ಪತ್ನಿಯರ ಲೈಂಗಿಕ ಕ್ರಿಯೆ,ಮಹಿಳೆಯರ ಋತು ಸ್ರಾವ,ಹಾಗೂ ನಂತರದ ಶುದ್ಧಿಗಳಲ್ಲಿಯೆಲ್ಲಾ ಬಹಳ ವೈಜ್ಞಾನಿಕ ರೂಪು ರೇಖೆಗಳನ್ನು ಇಸ್ಲಾಮ್ ನೀಡಿರುವುದು ಕಾಣಬಹುದು.ಅದೆಲ್ಲಾ ಬರೆದರೆ ಬರಹ ದೀರ್ಘವಾಗ ಬಹುದು.

ಹೀಗೆ ಶುಚಿತ್ವಕ್ಕೆ ಸಂಭಂದಿಸಿ ಇಸ್ಲಾಮಿನ ದೀರ್ಘದೃಷ್ಠಿ ಸರಿಸಾಟಿ ಇಲ್ಲದ್ದಾಗಿದೆ.
ಯಾಕೆಂದರೆ ಇಸ್ಲಾಮ್ ಎನ್ನುವುದು ಸೃಷ್ಟಿಕರ್ತನಾದ ಅಲ್ಲಾಹನ ನೀತಿ ಸಂಹಿತೆ ಯಾಗಿದೆ.ಮನುಷ್ಯನ ಸೃಷ್ಟಿಕರ್ತನೂ ಅಲ್ಲಾಹನಾಗಿರುತ್ತಾನೆ.ಒಂದು ವಸ್ತುವಿನ ನಿರ್ಮಾಪಕನೇ ಅದರ ನೀತಿ ನಿಯಮಗಳನ್ನು ಹೇಳಬೇಕಾದವನು. ಮನುಷ್ಯನ ಸೃಷ್ಟಿಕರ್ತ ಅಲ್ಲಾಹನು ಆಗಿರುವುದರಿಂದ ಮನುಷ್ಯನ ನೀತಿ ನಿಯಮಗಳನ್ನು ಅವನೇ ರೂಪಿಸಿದರೆ ಅದು ಪರಿಪೂರ್ಣ.

ಈ ಸುಂದರವೂ ಸರಳವೂ ಆರೋಗ್ಯ ಪೂರ್ಣವೂ ಆಗಿರುವ ಮಾರ್ಗಗಳನ್ನು ಸಂಪೂರ್ಣ ಅನುಕರಿಸುವ ಒಬ್ಬ ನೈಜ ಮುಸಲ್ಮಾನನ್ನು ಯಾವ ಮಹಾಮಾರಿ ವೈರಸ್ಸಿಗೂ ಸೋಲಿಸಲು ಸಾಧ್ಯವೇ ಇಲ್ಲ.

ಆದರೆ ಅಂತಹ ಮುಸಲ್ಮಾನ ಎಲ್ಲಿ ಎಂಬುದೇ 
ಕುತೂಹಲದ ಸಂಗತಿ.

ಮುಸಲ್ಮಾನನು ಪ್ರವಾದಿ ಮುಹಮ್ಮದ್ ಸಲ್ಲಾಹು 
ಅಲೈಹಿ ವಸಲ್ಲಮರನ್ನು 
ಅಕ್ಷರಶಃ ಅನುಸರಿಸುವವ ನಾಗಿರುತ್ತಿದ್ದರೆ 
ಇವತ್ತು ಸಮಸ್ಯೆಗಳೇ ಇರುತ್ತಿರಲಿಲ್ಲ.
ಮಾತ್ರವಲ್ಲ ಯಾವುದೇ ಮಡಿವಂತಿಕೆಯ ರೂಪುರೇಷೆಯಿಲ್ಲದೆ ಮಡಿವಂತಿಕೆಯ ವಕ್ತಾರರು ನಾವೆಂದು ಮೆರೆದಾಡುವ 
ಕೆಲವರಿಗೆ 
ಮುಸ್ಲಿಮರನ್ನು ಹಾಗೂ 
ಮುಸ್ಲಿಮ್ ಗಲ್ಲಿಗಳನ್ನು ಹೀಯಾಳಿಸುವ ಯಾವುದೇ ಅವಕಾಶ ಲಭಿಸುತ್ತಿರಲಿಲ್ಲ.
ಆದರೆ ಇಂದಿನ ಹೆಚ್ಚಿನ ಮುಸಲ್ಮಾನರು ಶುಚಿತ್ವವೂ
ಸೇರಿದಂತೆ ಇಸ್ಲಾಮಿನ ನೈಜ ತತ್ವಸಿದ್ಧಾಂತಗಳನ್ನು ಕೈಬಿಟ್ಟು ತಮಗೆ ಲಭಿಸಬೇಕಾದ ಕೀರ್ತಿಗಳನ್ನೆಲ್ಲಾ ಕೈಚೆಲ್ಲಿದವರಾಗಿರುತ್ತಾರೆ.
ಇದರಿಂದಾಗಿಯೇ  ಮುಸಲ್ಮಾನನನ್ನು ಎಲ್ಲಾ 
ಕಡೆಯಲ್ಲೂ ಗುರಿ ಮಾಡುವಂತಾಗಿದೆ.

وَلَا تَهِنُوا وَلَا تَحْزَنُوا وَأَنتُمُ الْأَعْلَوْنَ إِن كُنتُم مُّؤْمِنِينَ

 ಇದಾಗಿದೆ ಪವಿತ್ರ ಖುರ್ಆನ್ ಹೇಳುತ್ತಿರುವುದು. "ನೀವು ನೈಜ ಸತ್ಯವಿಶ್ವಾಗಳಾಗಿದ್ದರೆ ನೀವೇ ಅತ್ಯುನ್ನತರು.ನೀವು ನಿಂದನೆಗೆ ಒಳಗಾಗ ಬೇಕಾಗಿಲ್ಲ. ವ್ಯಸನ ಪಡಬೇಕಾಗಿಯೂ ಇಲ್ಲ "

ನೈಜ ಸತ್ಯ ವಿಶ್ವಾಸಿಯಾಗುವುದೆಂದರೆ ಇಸ್ಲಾಮಿನ ತತ್ವ ಸಿದ್ಧಾಂತಗಳನ್ನು ಹಾಗೂ ಆಚಾರವಿಚಾರ ಗಳನ್ನು ಸಂಪೂರ್ಣವಾಗಿ ಮೈಗೂಡಿಸಿ ಕೊಳ್ಳುವುದಾಗಿದೆ.

ಇದನ್ನೇ ಖ್ಯಾತ ಚಿಂತಕ ಜಾರ್ಜ್ ಬರ್ನಾರ್ಡ್ ಷಾ ಕೂಡಾ ಹೇಳಿದ್ದು.

Islam Is The Best Religion ; Muslims Are The Worst Followers ~    George Bernard Shaw

ಇಸ್ಲಾಮ್ ಅತ್ಯುತ್ತಮ ಧರ್ಮ ಅನುಯಾಯಿಗಳಾದ ಮುಸ್ಲಿಮರು ಮಾತ್ರ ಸರಿಯಿಲ್ಲ ಎಂದಾಗಿದೆ.

ಅಂದರೆ ಮುಸ್ಲಿಮ್ ನಾಮಧಾರಿಗಳಾಗಿ ಇಸ್ಲಾಮಿನ ಆಶಯ ಆದರ್ಶ ಗಳಿಂದ ಸಂಪೂರ್ಣವಾಗಿ ವಿಮುಖರಾದ ಅನುಯಾಯಿಗಳ ಕುರಿತಾಗಿದೆ ಈ ಹೇಳಿರುವುದು.


ಸಮಗ್ರವೂ ಸರ್ವಕಾಲಿಕವೂ ಆದ ಇಸ್ಲಾಮಿನ ತತ್ವ ಸಿದ್ಧಾಂತಗಳೆಡೆಗೆ ಜಗತ್ತು ಆಕರ್ಷಿತವಾಗುತ್ತಿರುವಾಗ ಈ ಇಸ್ಲಾಮನ್ನು ಸಂಪೂರ್ಣವಾಗಿ ಮೈಗೂಡಿಸಿ ಕೊಂಡ ನೈಜ ಮುಸಲ್ಮಾನನು ಎಲ್ಲಿ? 
ಎಂದು ಜಗತ್ತು ಹುಡುಕುತ್ತಿದೆ.
ಹೌದು
ಮುಸಲ್ಮಾನನೇ ನೀನೆಲ್ಲಿ???

ಕೆಟ್ಟ ಗೆಳೆಯನ ಸಹವಾಸ ವಿಷಕಾರಿ ಹಾವಿಗಿಂತ ಕ್ರೂರ-A bad friend's companion is brutal than a poisonous snake

ಮಕ್ಕಳ ಪಾಲನೆಯ ಮಟ್ಟ ಗಳನ್ನು ತಜ್ಞರು ಮೂರು ವಿಧಗಳಾಗಿ ವಿಂಗಡಿಸಿದ್ದಾರೆ   ಮೊದಲ   ಏಳು ವರ್ಷ ಮಕ್ಕಳನ್ನು ತಾಯಿ ತನ್ನ ಮಡಿಲಲ್ಲಿ ರಕ್ಷಣೆ ನೀಡುವಳು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿ ಸಾಕುವಳು  ಮೂರನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಸಹೋದರ ರಾಗಿ ಸಾಕಬೇಕಾಗಿದೆ ಮೊದಲನೆಯ ಏಳು ವರ್ಷದಲ್ಲಿ ಮಡಿಲಲ್ಲಿ ಸಾಕುವ ಉದ್ದೇಶ ಮಗು ನಮ್ಮಿಂದ ಕಲಿಯುವವ ರಾಗಬೇಕು
ಇಂದಿನ ಯುಗದಲ್ಲಿ ಮೂರು ವರ್ಷಗಳ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ತುಂಬಾ ಅಹಿತಕರ ಘಟನೆ ಇದು ತಾಯಿ ಮಗುವಿನಿಂದ ತನ್ನನ್ನು ತಾನು ಸ್ವಾತಂತ್ರ್ಯ ರಾಗಲು ಬಯಸುತ್ತಾಳೆ  ತಾಯಿಯಿಂದ ಕಲಿಯ ಬೇಕಾದ ಸಮಯದಲ್ಲಿ ಆ ಸಮಯವೂ ನಷ್ಟ ಪಡುತ್ತದೆ ಈ ಸಮಯ ಮನೆಯಲ್ಲಿ ಪಾಲನೆಯ ಸಮಯ ವಾಗಿದೆ ಒಬ್ಬ ತಂದೆ ಮಕ್ಕಳನ್ನು ಗಮನಿಸದಿದ್ದರೆ ತಾಯಿಯು ಪರಿಪೂರ್ಣ ವಾಗಿ ಗಮನ ಹರಿಸಬೇಕು ಎರಡನೆಯ ಏಳು ವರ್ಷಗಳಲ್ಲಿ ಮಕ್ಕಳನ್ನು ಗುಲಾಮರಾಗಿಸುವ ಉದ್ದೇಶ ಅವರು ತಾನಾಗಿ ಯಾವ ಕಾರ್ಯಗಳನ್ನು ನಿರ್ಧರಿಸುವ ಸಾಮರ್ಥ್ಯ ಇರುವುದಿಲ್ಲ ವಾದರಿಂದ ತಂದೆ ತಾಯಿ ಯರಿಗೆ ಮಕ್ಕಳ ನಿರ್ದಾರ ಗಳನ್ನು ಕೈಗೊಳ್ಳಬೇಕು ಮೂರನೆಯ ಏಳು ವರ್ಷಗಳಲ್ಲಿ ಅವರನ್ನು ಸಹೋದರರ ಹಾಗೆ ಕಾಣುವ ಉದ್ದೇಶ ಅಂದರೆ ವಿಶ್ವಾಸಿಗ  ರಾದ  ಮಕ್ಕಳು   ಹದಿನಾಲ್ಕರಿಂದ ಇಪ್ಪತ್ತೊಂದು ವರ್ಷಗಳ ವರೆಗೆ  ಸಹೋದರರಿಂದ ಹಲವು ಕಡೆಗಳಿಂದ  ಕಲಿಯುತ್ತಾರೆ ಆ  ಸಮಯ ಗಳಲ್ಲಿ ತಂದೆ ತಾಯಂದಿರು ಬುದ್ಧಿವಂತಿಕೆ ಯಿಂದ ಮಕ್ಕಳನ್ನು ಗಮನ ಇಡಬೇಕಾಗಿದೆ ಯಾಕೆಂದರೆ ಮಕ್ಕಳ ಸಹವಾಸ ಕೆಟ್ಟ ಸ್ವಬಾವದ ಮಕ್ಕಳೊಂದಿಗೆ ಆಗದಿರಲು.ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು 
المرء علي دين خليله فالينظر أحدكم من يخالل 
ಪ್ರತಿಯೊಬ್ಬರೂ ಅವನ ಗೆಳೆಯನ  ದರ್ಮದಲ್ಲಾಗಿರುತ್ತಾನೆ  ನಮಗೆ ಇಲ್ಲಿ ನೋಡ ಬೇಕಾಗಿರೋದು   ನಾವು ಯಾರನ್ನು ಗೆಳೆಯರಾಗಿ
ಸಹೋದರರಾಗಿ ಸ್ವೀಕರಿಸುತ್ತೇವೆ ನಮ್ಮ ಗೆಳೆಯರೋಬ್ಬರ ದೀನ್ ದರ್ಮ ಹಾಳಾದರೆ ಅದರ ವರ್ಣ ಅದರ ಪರಿಣಾಮ ನಮ್ಮ ಮೇಲೆ ಬೀಳುತ್ತವೆ ಆದರಿಂದ ನಮಗೆ ಸಜ್ಜನರ ಸಹವಾಸ ಮಾಡಲು  ಕಲ್ಪಿಸಲಾಗಿದೆ  ಕೆಟ್ಟ ಗೆಳೆಯ  ಕೆಟ್ಟ ಹಾವಿಗಿಂತ ವಿಷಕಾರಿ ಯಾಗಿರುತ್ತಾರೆ ಯಾಕೆಂದರೆ ಹಾವು ನಮ್ಮೊಂದಿಗೆ ಜಗಳ ಮಾಡಿದರೆ ನಮ್ಮ ಜೀವ ಹೋಗ ಬಹುದು ಆದರೆ ಕೆಟ್ಟ ಗೆಳೆಯ ಜಗಳ ಆಡಿದರೆ ನಮ್ಮ( ಈಮಾನ್ ) ವಿಶ್ವಾಸ ನಷ್ಟ ಹೊಂದುವುದು ಇದರಿಂದ ಸಜ್ಜನರ ಸಹವಾಸ ನಿನಗೆ ಸಜ್ಜನನಾಗಿಸುತ್ತದೆ ಕೆಟ್ಟ ವರ ಸಹವಾಸ ನಿನ್ನನ್ನು ಕೆಟ್ಟವನಾಗಿಸುತ್ತದೆ  ಶೈಖ್ ಸಹ ದಿ 
رضي الله عنه 
ಹೇಳುತ್ತಾರೆ ನಾನು ಮೂತ್ರ ವಿಸರ್ಜನೆ ಗೆಂದು ಶೌಚಾಲಯಕ್ಕೆ ಹೋದೆ ಅಲ್ಲಿ ಯಾರೋ ಇಟ್ಟ ಮಣ್ಣನ್ನು ನೋಡಿದೆ ಎತ್ತಿ ನೋಡಿದಾಗ ಅದರಿಂದ ಸುಗಂದ ಪರಿಮಳ ಬೀಸುತ್ತಿತ್ತು ಆ ಮಣ್ಣಿನಲ್ಲಿ ಕೇಳಿದರು ನೀನು ಮಣ್ಣೋ  ಅಥವಾ ಸುಗಂದ ವಸ್ತು ಆಗಿದಿಯೋ ಯಾರು ನೀನು ಎಂದು ಕೇಳಿದಾಗ ಆ ಮಣ್ಣು ಉತ್ತರ ನೀಡಿತು ನಾನು ಮಣ್ಣಾಗಿದ್ದೇನೆ ಆದರೆ ಕೆಲವು ದಿನಗಳಿಂದ ನಾನು ಹೂವಿನ ಗೆಳೆತನದಲ್ಲಿ   ಕಾಲ ಕಳೆದೆ  ಗುಲಾಬಿ ಹೂವಿನ ಕಾಲಡಿಯಲ್ಲಿ ಕಾಲ ಕಳೆದೆ ಆದರಿಂದ ನನ್ನ ಗೆಳೆಯನ  ಸೌಂದರ್ಯ ನನ್ನಲ್ಲಿ ಪ್ರತ್ಯಕ್ಷ ವಾಯಿತು ಎಂದು ಹೇಳಿತು ಹೂವಿನೊಂದಿಗೆ ಗೆಳೆತನ ಬೆಳೆಸಿದ ಮಣ್ಣಿಗೆ ಪರಿಮಳ ಇದ್ದರೆ ಸಜ್ಜನರ ಸಹವಾಸದಲ್ಲಿ ಎಷ್ಟು ಸಾಮರ್ಥ್ಯ ಇದೆ ಎಂದು ಯೋಚಿಸಿ!
ISLAMIC KANNADA

Saturday, July 11, 2020

ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ

ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರು ಹೇಳುತ್ತಾರೆ( ಕಯಾಮತ್)ಅಂತ್ಯ ದಿವಸದಲ್ಲಿ ನನಗೆ ಅತೀ ಹತ್ತಿರದ ಮನುಷ್ಯ. ಅವನು ನನಗೆ ಅಧಿಕವಾಗಿ ನನ್ನ ಮೇಲೆ (ಸ್ವಲಾತ್)  ಹೇಳುವವನಾಗಿದ್ದಾನೆ. ಇದು ಪ್ರವಾದಿ ಯವರ ಸಾಮಿಪ್ಯದ ಖಾತರಿ  ಯಾಗಿದೆ ಸ್ವಲಾತ್.  ಇದರಿಂದ ತಮ್ಮ ಮಕ್ಕಳಿಗೆ ಪ್ರವಾದಿ ಯವರ ಮೇಲೆ ಸ್ವಲಾತ್ ಹೇಳಲು ಪ್ರೇರಿಸಿ. ಬಾಲ್ಯದಲ್ಲಿಯೇ ತಮ್ಮ ತಮ್ಮ ಮನೆಗಳಲ್ಲಿ ಸ್ವಲಾತ್ ಮಜ್ಲಿಸ್ ಸಂಗಡಿಸಿ. ಪ್ರತೀ ದಿವಸ ವಾದರೆ ಉತ್ತಮ ಇಲ್ಲದಿದ್ದರೆ ಪ್ರತೀ ವಾರಕ್ಕೊಮ್ಮೆ ಒಂದು ದಿವಸ ನಿಗದಿ ಪಡಿಸಿ. ಆ ದಿವಸ ಸ್ವಲಾತ್ ಗಾಗಿ ಮೀಸಲಿಡಿ. ಶುಕ್ರವಾರ ದಂದು
ಅಧಿಕ ವಾಗಿ ಸ್ವಲಾತ್ ಹೇಳಲು ನಮಗೆ ಕಲ್ಪಿಸಲಾಗಿದೆ. ಪ್ರವಾದಿ ಯವರು ಹೇಳುತ್ತಾರೆ ಆ ದಿವಸ ಮಲಕ್ ಗಳು ಪ್ರತ್ಯಕ್ಷ ಪಡುವರು. ಬಹು ಮಾನ್ಯರಾದ ಅಬೂ ದರ್ದಾಹ್ رضي الله عنه ಹೇಳುತ್ತಾರೆ ಯಾ ರಸೂಲಲ್ಲಾಹ್. ನಿಮ್ಮ ಜೀವಂತ ಕಾಲದಲ್ಲಿ ಮಾಡಬಹುದು ಆದರೆ ತಮ್ಮ ಜೀವನದ ನಂತರ ಈ ಪ್ರವರ್ತಿ ಜಾರಿಗೊಳಿಸ ಬೇಕೇ.  ಎಂದು ಕೇಳಿದಾಗ (ಇಬ್ನೇ ಮಾಜಾ ದಲ್ಲಿ ಇದನ್ನು ಉಲ್ಲೇಕಿಸಲಾಗಿದೆ )ಪ್ರವಾದಿ ಯವರು ಹೇಳಿದರು ಹೌದು ನನ್ನ ಮರಣದ ನಂತರವೂ ಈ ಕಾರ್ಯವನ್ನು ಜಾರಿಗೊಳಿಸಿರಿ. ಮತ್ತು ಹೇಳಿದರು 
ان الله حرم علي الارض ان تاكل أجساد الانبياء فنبي الله حي يرزق 
ಅಲ್ಲಾಹನು ಪ್ರವಾದಿ ಗಳ ಶರೀ
ರವನ್ನು ತಿನ್ನಲು ಮಣ್ಣಿಗೆ ಹರಾಮ್ ಮಾಡಿದ್ದಾನೆ. ಅವರು ಕಬರಿನಲ್ಲಿ ಜೀವಂತ ವಾಗಿರುತ್ತಾರೆ. ಅವರಿಗೆ ಆಹಾರ ನೀಡಲಾಗುತ್ತದೆ. ಪ್ರವಾದಿ ಯವರು ಹೇಳುತ್ತಾರೆ ನನ್ನ ಮರಣದ ನಂತರವೂ ನೀವು ಸ್ವಲಾತ್ ಕಾರ್ಯಗಳನ್ನು ಜಾರಿ ಗೊಳಿಸಿ. ಒಬ್ಬ ಸತ್ಯ ವಿಶ್ವಾಸಿ ಸ್ವಲಾತ್ ನೊಂದಿಗೆ ಸದಾ ಸಂಪರ್ಕ ದಲ್ಲಿರುತ್ತಾನೆ. ಸ್ವಲಾತ್ ಇಲ್ಲದೇ ಅವನ ದಿವಸ ಪೂರ್ತಿ ಆಗಲಾರದು. ನಮಾಝಿನಲ್ಲಾದರೂ ಓದಲೇ ಬೇಕು ಸ್ವಲಾತ್ ಇಬ್ರಾಹೀಮಿಗೆ ನಮಾಝಿನ ಅಂಗ ವಾಗಿ ಕಲ್ಪಿಸಲಾಗಿದೆ.  ಸ್ವಲಾತ್ ಒಂದೇ ವಿಭಿನ್ನ ಪ್ರವರ್ತಿ ಯಾಗಿದೆ. ನೀವು ನಿಮ್ಮ ಜೀವನದಲ್ಲಿ ಎಷ್ಟು ಬೇಕಾದರೂ ಮಾಡಬಹುದು. ಸ್ವಲಾತ್ ಹೇಳುವುದರಿಂದ ಮಕ್ಕಳಲ್ಲಿ  ಪಾವಿತ್ರ್ಯತೆ  ಉಂಟಾಗುತ್ತದೆ. ಮಕ್ಕಳು ಶುದ್ಧ ಹಾಗು ಉತ್ತಮ ಮಕ್ಕಳಾಗುವರು. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಗುಣವಂತರಾಗಲು ಬಯಸುತ್ತಾರೆ. ಇಂದು ಲೋಕದಲ್ಲಿ ಸ್ತಿರವಾಗಿ ನಿಂತ ಫಿತ್ನಗಳ ಮದ್ಯೆ ಮಕ್ಕಳು ಪಾವಿತ್ರ್ಯ ವಾಗಿ ಇರುವುದು ಆಲೋಚಿಸುವಂತಹ ವಿಷಯ ವಾಗಿದೆ. ಅವರಿಗೆ ಸ್ವಲಾತ್ ನ ಮಹಿಮೆ ತಿಳಿಸಿ ಅದರ ಪರಿಣಾಮ ದಿಂದ ಅವರಲ್ಲಿ ಪಾವಿತ್ರ್ಯ ಉಂಟಾಗುತ್ತದೆ. ಸ್ವಲಾತ್ ಹೇಳುವ ಮಕ್ಕಳು ಮತ್ತು ಹೇಳದೆ ಇರುವ ಮಕ್ಕಳ ಅಭ್ಯಾಸ ಗಳಲ್ಲಿ ವ್ಯತ್ಯಾಸ ಇರುತ್ತದೆ. ಸ್ವಲಾತ್ ಹೇಳುವವರಲ್ಲಿ ಪ್ರೀತಿ ಪ್ರೇಮ ಸೌಹಾರ್ದ ಸಜ್ಜನಶೀಲ ಮತ್ತು ಅನುಕಂಪ ಗಳ ಸರಮಾಲೆ ಅಧಿಕ ವಾಗಿ ಇರುತ್ತದೆ. ಇದು ಸ್ವಲಾತಿನ ಮಹಿಮೆ ಯಾಗಿದೆ ಕೆಲವರಿಗೆ ಮಕ್ಕಳ ಕೆಟ್ಟ  ವರ್ತನೆಯ ಬಗ್ಗೆ  ತುಂಬಾ ಮನಸ್ತಾಪ ಗಳಿರುತ್ತದೆ. ಅದರ ಶಮನ ಸ್ವಲಾತ್ ಮಾತ್ರ ವಾಗಿದೆ ಮಕ್ಕಳಲ್ಲಿ ಸ್ವಲಾತಿನ ಬಗ್ಗೆ ಒಳ್ಳೆಯ ಧಾರಣೆ ಪ್ರೇರೇಪಿಸಿ.  ಸ್ವಲಾತ್ ನಮ್ಮ ಅಹಂಕಾರ ವನ್ನು ಮುರಿಯುತ್ತದೆ ಮುಹಮ್ಮದ್ ಅರಬೀ صلي الله عليه وسلم ರವರ ಹೆಸರಿನ ಸಿಹಿ ಉಂಟಾಗಿಸುತ್ತದೆ. ಪ್ರವಾದಿ ಯವರ ಹೆಸರು ಅದು ಜೇನಿಗಿಂತ ಸಿಹಿಯಾಗಿದೆ ಸಕ್ಕರೆ ಹಾಗು ಜೇನಿನಲ್ಲಿಲ್ಲದ ಸಿಹಿ ಪ್ರವಾದಿ ಯವರ ಹೆಸರಿನಲ್ಲಿದೆ .
اللهم صلي علي سيدنا محمد
ISLAMIC KANNADA

Friday, July 10, 2020

ಮದೀನದ ಮಣ್ಣಿನಲ್ಲಿಯೂ ಶಿಫಾ ಅಡಗಿದೆ-Shifa also lies in the soil of Medina

ತುಂಬಾ ದೂರದ ಪ್ರಯಾಣ  ತಭೂಕ್ ನಿಂದ ಪ್ರವಾದಿ ಮುಹಮ್ಮದ್ ಮುಸ್ತಫ 
ضلي الله عليه وسلم 
ರವರು ವಾಪಸ್ ಮದೀನ ಪಟ್ಟಣಕ್ಕೆ  ತಲುಪುವ ಸಂದರ್ಭ  ಅದು     ಪ್ರವಾದಿ ಯವರ ಅನುಯಾಯಿಗಳು ಪ್ರವಾದಿ ಯವರ   ಆಗಮನದ ದಾರಿ ಕಾಯುತ್ತಿದ್ದರು   ಜನರು ಪ್ರವಾದಿ ಯವರನ್ನು ನೋಡಲು ಚಡಪಡಿಸುತ್ತಿದ್ದರು ಪ್ರವಾದಿ ಯವರ ಮುತ್ತಿನಂತ ಮಾತುಗಳನ್ನು ಆಲಿಸಲು ಕಾಯತ್ತಿದ್ದರು ಅನುಯಾಯಿಗಳು ಪ್ರತೀ ದಿವಸ ಪ್ರವಾದಿ  ಅವರನ್ನು ಆಲಿಸುವವರಾಗಿದ್ದರು ಮನಸ್ಸಿನಲ್ಲಿ ಅಶಾಂತಿ ಉಂಟಾದರೆ ಪ್ರವಾದಿ ಯವರ ಸನ್ನಿದಿಯಲ್ಲಿ ಕಾಲ ಕಳೆಯುತ್ತಿದ್ದರು  ಪ್ರವಾದಿ ಯವರ ತಬೂಕ್ ಪ್ರಯಾಣ ದಿಂದ ಮದೀನ ದಲ್ಲಿ ಅಸಮಾಧಾನದ ಕಾರ್ಮೋಡಗಳು ತಲೆ ಎತ್ತಿ ನಿಂತಿದ್ದವು ಪ್ರವಾದಿ  ಯವರು ಇಲ್ಲದ ಮದೀನ ನೀರಿಲ್ಲದ ಬಾವಿಯ ಹಾಗೆ  ಸುಗಂಧ ವಿಲ್ಲದ ಪುಷ್ಪ ಗಳ ಹಾಗೆ   ಅಲೆಗಳಿಲ್ಲದ ಸಮುದ್ರದ ಹಾಗೆ ನಕ್ಷತ್ರ ಗಳಿಲ್ಲದ ಆಕಾಶ      ಆಗಿಧ್ಧವು  ಉಪ್ಪಿಲ್ಲದ ಊಟದ ಹಾಗೆ ದಿವಸ ಗಳು ಉರುಳುತ್ತಿದ್ದವು  ಎಷ್ಟೋ ದಿವಸ ಗಳಿಂದ ಪ್ರವಾದಿ ಯವರನ್ನು ನೋಡಿರಲಿಲ್ಲಾ ಪ್ರವಾದಿ ಯವರು ವಾಪಸ್ ಮದೀನಕ್ಕೆ ತೆರೆಳಿದಾಗ ಅಲ್ಲಿನ ಜನರು ಅವರ ಸ್ವಾಗತಕ್ಕಾಗಿ ಸಜ್ಜಾಗಿ ನಿಂತರು ಮದೀನದ ಬೋಂಡರಿಯಲ್ಲಿ ಜನರು ಕಾಯುತ್ತಿದ್ದರು ಪ್ರವಾದಿ ಯವರು ಆ ಕಡೆಯಿಂದ ತೆರಳುತ್ತಿದ್ದರು ಗಾಳಿ ಮದೀನದ ದಿಕ್ಕಿನಿಂದ ಪ್ರವಾದಿ ಯವರ ಕಡೆಗೆ ಬೀಸಲು ಆರಂಬಿಸಿತು ಮದೀನದ ಜನರ ಕುದುರೆಯ ಕಾಲಿನ ಮಣ್ಣು ಪ್ರವಾದಿ ಯವರ ಕಡೆಗೆ ಬೀಸುತ್ತಿತ್ತು  ಗಾಳಿಯು   ತನ್ನ ದಿಕ್ಕು ಬದಲಿಸುತ್ತಾ   ಪ್ರವಾದಿ ಯವರ ಬರುವಿಕೆಯ  ಕಡೆ ಹಾರುತ್ತಿತ್ತು ಪ್ರವಾದಿಯವರೊಂದಿಗೆ ಇದ್ದ ಸಹಾಬಿಗಳು ದೂಳಿನ ಕಾರಣ ಮುಖಕ್ಕೆ ಬಟ್ಟೆ ಗಳಿಂದ ಮರೆಮಾಚಿದರು ಆವಾಗ  ಪ್ರವಾದಿ ಯವರು ಹೇಳುತ್ತಾರೆ ನಿಮ್ಮ ಮುಖದಿಂದ ಬಟ್ಟೆ ಗಳನ್ನು ತೆಗೆಯಿರಿ ನಿಮಗೆ ಗೊತ್ತಿಲ್ಲವೆ ಮದೀನದ ಮಣ್ಣಿನಲ್ಲಿಯೂ ಶಿಫಾ ಇದೆ ಎಂದು  ಆ ಮಣ್ಣಿನಲ್ಲಿ ಯಾಕಾಗಿ ಶಿಫಾ ಬಂತು ಅದು ಪ್ರವಾದಿ ಯವರ ಕಾಲು ಆ ಮಣ್ಣಿನಲ್ಲಿ ನಡೆದಾಡಿದ್ದವು ಎಂದು ಉಲ್ಲೇಖ ಗಳಲ್ಲಿ ಕಾಣಲು ಸಿಗುತ್ತದೆ ಪ್ರವಾದಿ ಯವರ ವಾಸ ಸ್ಥಳ   ಮದೀನ ಆಗಿದ್ದರಿಂದ ಅಲ್ಲಿ ಬರ್ಕತ್ ನೀಡಲಾಗಿದೆ ಮದೀನದ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಪ್ರವಾದಿ ಯವರ ಝಿಯಾರತ್ ಮಾಡದಿದ್ದರೆ ಅವನಿಗಿಂತ ಅಬಾಗ್ಯವಂತ ಬೇರೆ ಯಾರೂ ಇರಲಾರನು  ಪ್ರವಾದಿ ಯವರ ಕಬರ್ ಸಂದರ್ಶಿಸುವವನು ನಾನು ಪ್ರವಾದಿ ಯವರನ್ನು ಸಂದರ್ಶಿಸಿದೆ ಎಂದು ಹೇಳಲಿ ಜ್ನಾನದ ಸಾಗರ ವಿರುವ ದಿಕ್ಕಿನಲ್ಲಿ ಅನುಗ್ರಹ ಗಳ ಮಳೆ ಸುರಿಯುತದೆ ಒಬ್ಬ ಸತ್ಯ ವಿಶ್ಶಾಸಿಗೆ ಮಾತ್ರ    ಮದೀನ ತಲುಪಲು ಸಾಧ್ಯ ವಾಗುತ್ತದೆ ಪ್ರತಿಯೊಬ್ಬರೂ ಮದೀನದ ಮಣ್ಣಿನಲ್ಲಿ ಧಫನ್ ಆಗಲು ಆಗ್ರಹಿಸುತ್ತಾನೆ ಹಬೀಬರ ಬಳಿ ಕಾಲ ಕಳೆಯಲು ಆಗ್ರಹಿಸುತ್ತಾನೆ ಓ ಅಲ್ಲಾಹುವೆ  ಈ ಪಾಪಿಯಾದ ನಮಗೆಲ್ಲರಿಗೆ ಹಬೀಬರ  ಶಫಾಅತ್ ನೀಡಿ ಅನುಗ್ರಹಿಸು ರಬ್ಬೇ  ಆಮೀನ್.
islamic kannada

Monday, July 6, 2020

ಬಡವ ಶ್ರೀಮಂತ ಎಂದ ದ್ವಿಮುಖ ನ್ಯಾಯ-The two-pronged justice of the poor

ನ್ಯಾಯ  ನೀತಿ  ಇಲ್ಲದ ದೇಶ ಅಕ್ರಮ  ದರೋಡೆ   ವ್ಯಾಪಕ ವಾದ ದೇಶ ಯಾವಾಗಲೂ ಮುಂದೆ ಸಾಗಲಾರದು ಅಲ್ಲಿ ಯಾವಾಗಲೂ ಐಕ್ಯತೆ ಶಾಂತಿ ಸಮಾಧಾನಾ ನೆಲೆ ನಿಲ್ಲಲು ಸಾಧ್ಯವಿಲ್ಲ ಆ ದೇಶ ಯಾವಾಗಲು ತನ್ನ ಕಾಲಲ್ಲಿ  ನಿಲ್ಲುವ ಸಾಮರ್ಥ್ಯ ವಿರುವುದಿಲ್ಲ ಇಂದು ನಾವು ಅಧಿಕ ವಾಗಿ ಕೇಳಲ್ಪಡುವ ಒಂದು  ವಾಕ್ಯ 
ಕಡಿಮೆ ಬೆಲೆಯ ನ್ಯಾಯ. ಇಸ್ಲಾಮ್ ಯಾವಾಗಲೂ ಕಡಿಮೆ ಬೆಲೆಯ ಮಾತು ಆಡಲಾರವು ಇಸ್ಲಾಮ್ ಉಚಿತ ಬೆಲೆಯ ಮಾತು ಆಡುತ್ತದೆ  ಪ್ರತಿಯೊಬ್ಬನ ಬಾಗಿಲ ಬಳಿ ನ್ಯಾಯ ದೊರಕಬೇಕು ಅದಾಗಿದೆ ಇಸ್ಲಾಮಿನ ನೈಜ್ಯತೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರ ಕಾಲದಲ್ಲಿ ನಡೆದ ಒಂದು ಘಟನೆ ಅದು ಇಸ್ಲಾಮಿನ ನೀತಿಯನ್ನು ಎತ್ತಿ ಹಿಡಿದು ಲೋಕಕ್ಕೆ ಸಮರ್ಪಣಿ ಮಾಡಿದ  ಸತ್ಯ
ಘಟನೆ..ಬನೂ ಅಸ್ವದ್ ಎಂಬ ಗೋತ್ರದ ಒಬ್ಬ ಮಹಿಳೆ ಕಳ್ಳತನ ಮಾಡುತ್ತಾರೆ ಆ ಮಹಿಳೆಯ ಕೈ ಕಡಿಯುವ ಆದೇಶ ಹೊರಡಿದ ಸಂದರ್ಭದಲ್ಲಿ ಬಹು ಮಾನ್ಯರಾದ ಉಸಾಮ ಬಿನ್ ಝೈದ್ رضي الله عنه  ರವರ ಮುಖಾಂತರ ಪ್ರವಾದಿ ಯವರಲ್ಲಿ ಶಿಫಾರಿಸು ಮಾಡಲಾಗುತ್ತದೆ ಏನೆಂದರೆ ಈ ಗೋತ್ರದ ಜನರು ಹೊಸತಾಗಿ ಇಸ್ಲಾಮಿನ ಪ್ರಕಾಶದತ್ತ ಬಂದವರು(ಇಸ್ಲಾಮ್ ಸ್ವೀಕರಿಸಿದವರು) ಆದರಿಂದ ಮಹಿಳೆಯ ಕೈ  ಕಡಿದರೆ ಆ ಕಾರಣದಿಂದ  ಇಸ್ಲಾಮಿನ ಬಗ್ಗೆ ತಪ್ಪು  ಕಲ್ಪನೆ ಗಳು ಉದ್ಬವಿಸಬಹುದು  ಅದು ಉತ್ತಮ ವಲ್ಲ   ಆದರಿಂದ ಶಾಂತಿಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ಹೇಳಲಾಯಿತು ಆವಾಗ  ಪ್ರವಾದಿ ಯವರು ಬಿಲಾಲ್ رضي الله عنه  ರವರಿಗೆ ಸಭೆ ನಡೆಸಲು ಆದೇಶಿಸುತ್ತಾರೆ    ಜನರು ಒಂದು ಗೂಡುತ್ತಾರೆ ಆವಾಗ ಪ್ರವಾದಿ ಯವರು ಮಿಂಬರಿನಲ್ಲಿ ನಿಂತು ಹೇಳಿದರು ನಿಮಗಿಂತ ಮುಂಚಿನ ಅನುಯಾಯಿಗಳು ಯಾಕೆ ನಾಷವಾದರು ಅಂದರೆ ಅವರಲ್ಲಿ ಬಡವರಿಗೆ .ಹಾಗೂ ಶ್ರೀಮಂತ ರಿಗೆ ವಿಭಿನ್ನ ವಾದ ನ್ಯಾಯಗಳಿದ್ದವು ಆವಾಗ ಹೇಳಲಾಯಿತು ನನ್ನ ಸಮುದಾಯ ದಲ್ಲಿ ಇದಕ್ಕೆ ನಾನು ಅವಕಾಶ ನೀಡಲಾರೆನು ಆವಾಗ ಹೇಳಿದರು ನನ್ನ ಪುತ್ರಿ ಯಾದ ಫಾತಿಮಾ ಕೂಡ ಕಳ್ಳ ತನ ಮಾಡಿದರೆ ನಾನು ಅವಳ ಕೈ ಕಡಿಯುವ ಆದೇಶ ನೀಡುವೆನು ಎಂಬ ಐತಿಹಾಸಿಕ ಹೇಳಿಕೆಯನ್ನು ನೀಡಿದರು ಎರಡು ನ್ಯಾಯ ನೀತಿ ಯಾವುದೇ ದೇಶ ಆಗಲಿ ರಾಷ್ಟ್ರ ಆಗಲಿ ಅಥವಾ ಯಾವುದೇ ಸಂಘ ಸಂಘಟನೆ ಯಾಗಲಿ  ಅವರಲ್ಲಿ ಯಾವಾಗಲು (ಬರ್ಕತ್)ಅನುಗ್ರಹ ಇರುವುದಿಲ್ಲ ಇಂದು ಜೈಲಿನಲ್ಲಿಯೂ ವಿಧವಿಧ ವಾದ ವಿಭಿನ್ನ ಸೌಲಭ್ಯಗಳ ಸರಮಾಲೆ ಇದೆ ಬಡವರಿಗೊಂದು ಶ್ರೀಮಂತರಿಗೊಂದು ಎಂಬ ಬೇಧ ಬಾವದ ನೀತಿ ನಿಯಮಗಳು.ಹುಟ್ಟಿಕೊಂಡಿದೆ  ಬಡವನ ಚರ್ಮ ಸುಳಿಯಲ್ಪಡುತ್ತದೆ   ಬಡವನು ಸ್ವಾಸ ಕೂಡ ಸರಿಯಾಗಿ  ಸ್ವಾಸಿಸಲಾರನು ಶ್ರೀಮಂತರು ಜೈಲಿನಲ್ಲಿಯೂ ರಾಜರ ಹಾಗೆ ವಾಸಿಸುತ್ತಾರೆ ಅವರಿಗೆ ನೆಂಟರ ಹಾಗೆ ಸುಖ ನೀಡಲಾಗುತ್ತದೆ ನ್ಯಾಯಾಲಯ ದಲ್ಲಿ ನಡೆಯುವ ಕಾರ್ಯ ಅಂದರೆ ಒಂದು ಕಾಲವಿತ್ತು ನಿನ್ನ ಕೇಸಿಗೆ ಒಬ್ಬ ವಕೀಲನನ್ನು ನೇಮಿಸಿಕೊಳ್ಳಿ ಇಂದು (ಜಡ್ಜ್)ನ್ಯಾಯಾಧೀಶ ನನ್ನು ಖರೀದಿಸು    ಅಂತಾರೆ ನ್ಯಾಯದ ಕೊಲೆ ನ್ಯಾಯಾಲಯದಲ್ಲಿ ಯಾರಿಂದ ಮರೆಮಾಚಿದೆ ಇಂದು ತನ್ನ ಕಣ್ಣಿಗೆ ಕಪ್ಪು ವಸ್ತ್ರ ಕಟ್ಟುವುದರಿಂದ ಮೌನಿ ಯಾಗಿರುವುದರಿಂದ ಯಾವ ವ್ಯತ್ಯಾಸ ಇರಲಾರದು ಇಂದು ನಮ್ಮ ನ್ಯಾಯಾಲಯ ನೀತಿ ಮಾಡದೆ ಸುಮ್ಮನಿದೆ ನಾವು ನಮ್ಮ ಸಂಘಟನೆ ನಮ್ಮ ಸಮಾಜ ಮುಂದೆ ನಡೆಯಬೇಕಾದರೆ ನ್ಯಾಯ ಪಾಲಿಸಬೇಕು 
ان الله بأمر بالعدل 
ನಿಸ್ಸಂದೇಹವಾಗಿಯೂ   ಅಲ್ಲಾಹನು ನ್ಯಾಯ ಪಾಲಿಸಲು ಆದೇಶಿಸುತ್ತಾನೆ ... ಎಂಬ ಮಾತು ಪ್ರತೀ ಶುಕ್ರವಾರ ಮಿಂಬರಿನಲ್ಲಿ ನಿಂತು ದರ್ಮ ಗುರುಗಳು ಸಾರಿ ಸಾರಿ ಹೇಳುವ ಮಾತು ನಾವು ಕೇಳದೆ ಹೋದೆವು ವಿಪರ್ಯಾಸ.
ISLAMIC KANNADA

Saturday, July 4, 2020

ಕಾಲಚಕ್ರ ಉರುಳಿದ ವೇಗವೇ-The speed at which the wheel is rolling


 
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ  
ಸುಮಾರು 28 ವರ್ಷಗಳ ಹಿಂದೆ ಮರ್ಕಝ್ ಎಂಬ ಜ್ಞಾನ ಕೇಂದ್ರದಿಂದ ಬಿರುದು ಪಡೆದು ಮುದರ್ರಿಸಾಗಿ ಸೇವೆಗೆ ಸೇರಿದ ಪ್ರಾರಂಭದ ವರ್ಷಗಳ ಅನುಭವಗಳಿಂದ ಹೆಕ್ಕಿದಾಗ ನೆನಪಿಗೆ ಬಂದ ಒಂದು ಅನುಭವ.
ಒಂದು ದಿನ ಮಸೀದಿ ಪಕ್ಕದಲ್ಲಿದ್ದ ನನ್ನ ಕೊಠಡಿಯ ಬಾಗಿಲು ತೆರೆದಿದ್ದರೂ ಹೊರಗೆ ಬಾಗಿಲ ಹತ್ತಿರ ಯಾರೋ ಅತ್ಯಂತ ವಿನಯಾಶೀಲರಾಗಿ ಒಳಗೆ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿದ್ದಂತೆ ಭಾಸವಾಯಿತು.
ನೋಡುವಾಗ ನಾಲ್ಕೈದು ಹಿರಿಯರು ಹಾಗೂ ಯುವಕರು.
ಹಣೆಯಲ್ಲಿ ಸುಜೂದಿನ ನಿಶಾನಿಯಿದೆ.ಮುಖದಲ್ಲಿ ದಾಡಿಯಿದೆ.ತಲೆಯಲ್ಲಿ ಪೇಟ ಮತ್ತು ಟೋಪಿಗಳಿವೆ.ಮುಖಬಾವದಲ್ಲಿ ಈಮಾನಿನ ಪ್ರಭೆ ಪ್ರಕಾಶಿಸುತ್ತಿದೆ.
ಅಪ್ಪಣೆ ಪಡೆದು ಬಹಳ ಶಿಸ್ತಿನಿಂದ ಒಳಪ್ರವೇಶಿಸಿದ ಅವರು ವಿನೀತನಾದ ನನ್ನ ಮುಸಾಫಹತ್ ಮಾಡಿ ಎಷ್ಟೇ ತಪ್ಪಿಸಿ ಕೊಳ್ಳಲು ಪ್ರಯತ್ನ ಪಟ್ಟರೂ ನನ್ನ ಕೈಗಳನ್ನು ಚುಂಬಿಸಿಬಿಟ್ಟರು. 
ಪಕ್ಕದಲ್ಲಿದ್ದ ಕುರ್ಚಿಗಳಲ್ಲಿ ಕೂರಲು ಒತ್ತಾಯ ಮಾಡಿದರೂ ಕೆಳಗೆ ಚಾಪೆಯ ಮೇಲೆಯೇ ಕುಳಿತು ಕೊಂಡರು.ನನಗೂ ಮುಜುಗರವಾಯಿತು.ಈ ಹಿರಿಯ ಮುತ್ಸದ್ದಿಗಳು ಕೆಳಗೆ ಕೂರುವಾಗ ನಾನೂ ನನ್ನ ಕುರ್ಚಿ ಬಿಟ್ಟು ಕೆಳಗೆ ಅವರೊಟ್ಟಿಗೆ ಕೂತು ಬಿಟ್ಟೆ.
ಅವರು ಅಲ್ಲಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾಗಿದ್ದರು.
ಸಮಿತಿಯಲ್ಲಿ ತೆಗೆದು ಕೊಳ್ಳಬೇಕಾದ ಏನೋ ಒಂದು ತೀರ್ಮಾನದ ಬಗ್ಗೆ ಚರ್ಚಿಸಲು ಬಂದಿರುವುದಾಗಿತ್ತು.
ಅವರ ವಿನಯ,ವಿನಮ್ರತೆ ಹಾಗೂ ಇಲ್ಮ್ ಮತ್ತು ಇಲ್ಮಿನ ವಕ್ತಾರರೊಂದಿಗೆ ಅವರಿಗಿದ್ದ ಪ್ರೀತಿ,ಗೌರವಗಳನ್ನು ಕಂಡು ಅಚ್ಚರಿಯಾಯಿತು.
ಆಡಳಿತ ಸಮಿತಿಯಲ್ಲಿ ಅನೇಕ ವರ್ಷಗಳ ಅನುಭವ ಅವರಿಗಿದ್ದರೂ ತೀರ್ಮಾನಗಳನ್ನು ಕೈಗೊಳ್ಳುವಾಗ ಅವರಿಗಿದ್ದ ಜಾಗ್ರತೆ,ಕಾಳಜಿಗಳು ಆಶ್ಚರ್ಯಪಡಿಸುತ್ತಿತ್ತು.

ಎಷ್ಟೇ ಅನುಭವ,ಹಿರಿತನಗಳಿದ್ದರೂ ಇದು ಗ್ರಾಮ, ತಾಲೂಕು,ಜಿಲ್ಲಾ ಪಂಚಾಯತ್ ಗಳಲ್ಲ.ಅಸಂಬ್ಲಿ, ಪಾರ್ಲಿಮೆಂಟ್ ಗಳೂ ಅಲ್ಲ. ಇದು ಅಲ್ಲಾಹನ ಭವನಗಳ  ಖಿದ್ಮತ್ ಎಂಬ ಸಂಪೂರ್ಣ ಪರಿಜ್ಞಾನ ಹಾಗೂ ಅದಕ್ಕೆ ಬೇಕಾದ ಖುರ್ಆನ್ ಹೇಳಿದ ಯೋಗ್ಯತೆಗಳೂ ಅವರಲ್ಲಿ ಎದ್ದು ಕಾಣುತ್ತಿತ್ತು.

ಇದು ಅಂದಿನ ಕಾಲದ ಮಸೀದಿ ಮೊಹಲ್ಲಾ ಆಡಳಿತ ಸಮಿತಿಗಳ ಭಯಭಕ್ತಿ,ವಿನಯ ವಿನಮ್ರತೆ ಅರ್ಹತೆ ಯೋಗ್ಯತೆಗಳ ಒಂದು ಸಣ್ಣ ಉದಾಹರಣೆ ಮಾತ್ರ.

ಲಾಕ್ ಡೌನ್ ಎಂಬ ನೆಪವೊಡ್ಡಿ ಕೆಲವು ಕಡೆಗಳಲ್ಲಿ ಕೆಲವು ಜಪ್ಪಯ್ಯ ಆಡಳಿತ ಸಮಿತಿಗಳು ಇಲ್ಮಿನ ವಕ್ತಾರರಾದ ಉಸ್ತಾದರು ಗಳೊಂದಿಗೆ ನಡೆದು ಕೊಂಡ ಮೃಗೀಯ ರೀತಿ ನೋಡಿದಾಗ ಈ ಹಳೆಯ ಅನುಭವಗಳು ನೆನೆಪಿಗೆ ಬಂದವು.
ಕಾಲಚಕ್ರ ಸಂಚರಿಸಿದ ವೇಗವೇ ಎಂದನಿಸಿತು.

ನೌಕರನ ವೇತನವನ್ನು ಅವನ ಬೆವರು ಆರುವ ಮೊದಲು ಕೊಟ್ಟು ತೀರಿಸಬೇಕು ಎಂದು ಜಗತ್ತಿನಲ್ಲಿ ಮೊದಲ ಬಾರಿ ಆಜ್ಞಾಪಿಸಿ ವೇತನಾ ವ್ಯವಸ್ಥೆಗೆ ಉತ್ತಮ ರೂಪುರೇಷೆಗಳನ್ನು ಹಾಕಿ ಕೊಟ್ಟ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳೆಂದು ಹೇಳುವವರಿಗೆ ಈ ಅಮಾನವೀಯ ವರ್ತನೆ ಹೇಗೆ ಸಾಧ್ಯ ಎಂಬುದೇ ಅರ್ಥವಾಗದ ಸಂಗತಿ.

ನೌಕರರ ವೇತನಕ್ಕೆ ಸಂಬಂಧಿಸಿದಂತೆ ಶರೀಅತಿನಲ್ಲೂ ಕಾನೂನಿನಲ್ಲೂ ಬೇಕಾದ ರೀತಿ,ರಿವಾಜು,ನಿಬಂಧನೆಗಳಿವೆ. ಅದ್ಯಾವುದನ್ನೂ ಪರಿಗಣಿಸದೆ ಆಡಳಿತ ಸಮಿತಿಯಲ್ಲಿ ಸಭೆ ನಡೆಸದೆ,ಮೊಹಲ್ಲಾ ನಿವಾಸಿಗಳಲ್ಲಿ ಸಮಾಲೋಚಿಸದೆ ಯಾವುದೇ ಆಗುಹೋಗುಗಳ ಬಗ್ಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗೂ ತಯ್ಯಾರಾಗದೆ ಒಂದಿಬ್ಬರು ಮಾತ್ರ ಸೇರಿ ಲಾಕ್ ಡೌನ್ ಎಂಬ ಏಕೈಕ ಕಾರಣ ಹೇಳಿ ಉಸ್ತಾದರುಗಳ ಹಕ್ಕುಗಳನ್ನು ನಿಷೇದಿಸುವ ವರ್ತನೆ ಅಕ್ಷಮ್ಯ ಅಪರಾಧವೆನ್ನದೆ ವಿಧಿಯಿಲ್ಲ.

ಇಲ್ಲಿ ಜಪ್ಪಯ್ಯ ಆಡಳಿತ ಸಮಿತಿಯಗಳು ಎಂಬ ಪದ ಪ್ರಯೋಗಿಸಿರುವುದು ಮನಃಪೂರ್ವಕವೇ. 
ಯಾಕೆಂದರೆ ಈಗಿನ ಬಹುತೇಕ ಆಡಳಿತ ಸಮಿತಿಗಳು ನಿಜವಾಗಿಯೂ ಜಪ್ಪಯ್ಯಗಳೇ. 
ಇದನ್ನು ಬಿಚ್ಚಿ ಹೇಳುವುದರಲ್ಲಿ ಯಾವುದೇ ಮುಲಾಜಿ ತೋರಬೇಕಾದ ಅಗತ್ಯವಿಲ್ಲ.
ಅವರಿಗೆ ಅವರ ಸೇವೆಯ ಜವಾಬ್ದಾರಿಗಳ ಬಗ್ಗೆ ಯಾವುದೇ ಪ್ರಾಥಮಿಕ ಅರಿವೂ ಇಲ್ಲ.
ತಮ್ಮ ಜವಾಬ್ದಾರಿಗಳು ಮೊಹಲ್ಲಾ ನಿವಾಸಿಗಳು ನೀಡುವ ಚಂದಾವಗೈರೆಗಳನ್ನು ಪಡೆದು ಅದನ್ನು ಖರ್ಚು ಮಾಡುವುದಕ್ಕೆ ಮಾತ್ರ ಸೀಮಿತ ಎಂದು ಭಾವಿಸಿರುತ್ತಾರೆ.

ಯಾವುದೇ ಒಂದು ಸಮಿತಿ ಅಥವಾ ಸಂಸ್ಥೆಯಲ್ಲಿ ಸಂಪತ್ತು ಕ್ರೋಡೀಕರಣ ದೊಡ್ಡ ಜವಾಬ್ದಾರಿಯ ಕೆಲಸ.
ಅದಿಲ್ಲದೆ ಯಾವುದೇ ಕೆಲಸಗಳು ಮಾಡಲು ಸಾಧ್ಯವಿಲ್ಲ.
ಆದರೆ ಮೊಹಲ್ಲಾ ಆಡಳಿತ ಸಮತಿಗಳಲ್ಲಿ ಇದು ಬಹಳ ಸುಲಭ.
ಯಾಕೆಂದರೆ ಯಾವುದೇ ಒಂದು ಬೀಡಿ ಕಟ್ಟಿ ಜೀವನ ಸಾಗಿಸುವ ಕಡು ಬಡತನದ ಕುಟುಂಬವಾಗಿದ್ದರೂ ಮಸೀದಿ,ಮದ್ರಸ,ಉಸ್ತಾದರುಗಳ ವಿಷಯಗಳಿಗೆ ಸಂಬಂಧಿಸಿದಂತೆ ತಿರುಗಿ ನೋಡುವುದೇ ಇಲ್ಲ.
ತಮ್ಮಿಂದಾಗುವ ಕನಿಷ್ಠ ಸಹಾಯವನ್ನಾದರೂ ನೀಡಲು ಮುಂದಾಗುತ್ತಾರೆ.ಉಳಿದವರ ವಿಷಯ ಹೇಳಬೇಕಾಗಿಲ್ಲ.

ಇದರಿಂದಾಗಿಯೇ ಅನೇಕ ಮೊಹಲ್ಲಾಗಳಲ್ಲಿ ಲಾಕ್ ಡೌನಿನ ಕೆಲಸಕಾರ್ಯಗಳು ಇಲ್ಲದ ಅತಿ ಸಂಕಷ್ಟದ ಈ ರಂಝಾನಿನಲ್ಲಿ ಕೂಡಾ ಇತರ ರಂಝಾನುಗಳಿಗಿಂತ ಹೆಚ್ಚು ಹಣ ಸಂಗ್ರಹ ಮಾಡಿ ಉಸ್ತಾದರುಗಳ ಕಷ್ಟಗಳಿಗೆ ಸ್ಪಂದಿಸಿದ ಉದಾಹರಣೆಗಳಿವೆ.
ವಾಸ್ತವದಲ್ಲಿ ರಂಝಾನಿನಲ್ಲಿ ಉಸ್ತಾದರುಗಳಿಗೆ ನೀಡುವುದು ಒಂದು ಗೌರವ ಧನವಾಗಿದೆ.ಅದಕ್ಕೆ ಅವರು ರಂಝಾನಿನಲ್ಲಿ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬ ಮಾನದಂಡವಿಲ್ಲ.

ಆದರೆ ಇದಕ್ಕೆಲ್ಲಾ ವಿಶಾಲ ಮನಸ್ಸು ಹಾಗೂ ಇಚ್ಚಾಶಕ್ತಿ ಆಡಳಿತ ಸಮಿತಿಗಳಿಗೆ ಬೇಕು.
ಆಡಳಿತಗಾರರು ಎಂಬ ಹಂಗಿನಲ್ಲಿ ಕಚೇರಿಗಳಲ್ಲಿ ಜಪ್ಪಯ್ಯಗಳಾದರೆ ಇದು ನಡೆಯಲು ಸಾಧ್ಯವಿಲ್ಲ. ಕಚೇರಿಗಳಿಂದ ಹೊರ ಬಂದು ಮೊಹಲ್ಲಾಗಳಲ್ಲಿ ಇಳಿದು ಸುತ್ತಾಡಿ ಕಾರ್ಯಪ್ರವರವೃತ್ತರಾಗಬೇಕು.
ವಿಷಯಗಳನ್ನು ಮನಸ್ಸುಗಳಿಗೆ ಮನದಟ್ಟು ಮಾಡಿಕೊಡಬೇಕು.
ಆಗ ಮಾತ್ರ ಅವರು ನಿಜವಾದ ಖಾದಿಮ್ ಸೇವಕರಾಗುವುದು.

ಹಿಂದಿನ ಕಾಲದಲ್ಲಿ ಮಾತ್ರವಲ್ಲ ಈಗಿನ ಕಾಲದಲ್ಲೂ ಅನೇಕ ಮೊಹಲ್ಲಾಗಳಲ್ಲಿ ಹಾಕಿದ ಪದ್ಧತಿಗಳಲ್ಲಿ ಮೊಹಲ್ಲಾಗಳ ಪಾತ್ರವೇ ಮೇಲು. 
ರಂಝಾನಿನಲ್ಲಿ ಉಸ್ತಾದರುಗಳಿಗೆ ನೀಡುವ ಸಹಾಯ ನಿಧಿಯಾಗಲೀ ಇತರ ಯಾವುದೇ ಪದ್ಧತಿಯಾಗಲಿ ಮೊಹಲ್ಲಾದ ನಾಯಕತ್ವ ಮೊಹಲ್ಲಾದಲ್ಲಿ ಒಂದು ಸುತ್ತು ಹಾಕಿದರೆ ಯಶಸ್ವಿಯಾಗದ ಯಾವುದೇ ಪದ್ದತಿಗಳಿಲ್ಲ.
ಯಾಕೆಂದರೆ ಮುಸ್ಲಿಮ್ ಉಮ್ಮತ್ತಿನ ಮನಸ್ಸು ಅತ್ಯಂತ ಕರುಣಾಮಯಿ ಹಾಗೂ ವಿಶಾಲವಾದದ್ದಾಗಿರುತ್ತದೆ.

ಇದಕ್ಕೆಲ್ಲಾ ಆಡಳಿತಗಾರರು ಎಂಬ ಅಹಂನಿಂದ ಮುಕ್ತವಾಗಿ ನಾವು ಅಲ್ಲಾಹನ ಭವನದ ಹಾಗೂ ಸಮಾಜದ ಸೇವಕರು ಎಂಬ ಮನೋಭಾವವಿರುವ ಆಡಳಿತ ಸಮಿತಿಗಳು ಬೇಕು.
ಅನ್ಯಾಯ ಅನೀತಿಗಳು ಇಲ್ಲಿ ಒಂದು ವೇಳೆ ಮೇಳೈಸ ಬಹುದು.ಆದರೆ ಎಲ್ಲಾ ಸತ್ಯಾಸತ್ಯತೆ ಗಳು ಪ್ರತ್ಯಕ್ಷವಾಗುವ ಇನ್ನೊಂದು ಭಯಾನಕ ಲೋಕವಿದೆ ಎಂಬ ನೆನಪು ಮಾತ್ರ ಎಲ್ಲರಿಗೂ ಇರುವುದು ಅತಿ ಅನಿವಾರ್ಯವಾಗಿದೆ.

ಯಾಕೆಂದರೆ ಈ ಅನಿರೀಕ್ಷಿತ ಲಾಕ್ ಡೌನ್ ಕಾಲದಲ್ಲಿ ಕೆಲವು ಉಸ್ತಾದರುಗಳು ಅನುಭವಿಸಿದ ಯಾತನೆಗಳು ಕೇಳಿದರೆ ಕಣ್ಣೀರು ಸುರಿಸದಿರಲು ಸಾಧ್ಯವಿಲ್ಲ.
ಈ ಆಡಳಿತ ಸಮಿತಿಯವರ ನಿಷ್ಟೂರ ವರ್ತನೆ ಒಂದು ಕಡೆಯಾದರೆ ಜಮಾಅತರಲ್ಲಿ ಹೇಳುವುದೋ ಬಿಡುವುದೋ ಹೇಳಿದರೆ ಜಮಾಅತಿನಲ್ಲಿ ಬಿನ್ನತೆಯುಂಟಾಗ ಬಹುದೋ ಎಂಬ ಭಯ ಮತ್ತೊಂದು ಕಡೆ. 
ಖರ್ಚಿಗೆ ಕಾಸಿಲ್ಲದೆ ಎಲ್ಲಿಗಾದರೂ ಹೋಗಿ ಯಾರತ್ರವಾದರೂ ಸಹಾಯ ಪಡೆಯಬಹುದು ಎಂದರೆ ಮನೆಯಿಂದ ಹೊರಡಲಾಗದೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವನ ಸಾಗಿಸ ಬೇಕಾದ ದುಸ್ಥಿಯಲ್ಲಿರುವುದನ್ನು ಕಂಡೂ ಕಾಣದಂತೆ ನಟಿಸಿದರೆ ಅದರ ಪರಿಣಾಮ ಫಲ ಜಮಾಅತರೆಲ್ಲರಿಗೂ ತಟ್ಟದಿರಲಿ ಎಂಬುದೇ ಎಲ್ಲರ ಅಭಿಲಾಷೆ.
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

Friday, July 3, 2020

ಸ್ವರ್ಗೀಯ ಪ್ರೋಟೋಕೂಲ್ ಕಾರ್ಪೆಟ್ ನಲ್ಲಿ ನಡೆಯಬೇಕೆ-Whether to walk on the heavenly carpet

ಮೊತಾ ಇಮಾಮ್ ಮಾಲಿಕ್ رضي الله عنه 
ರವರ ಹೆಸರು ದೇಶದಲ್ಲಿ ವ್ಯಾಪಕ ವಾಗುತ್ತಿದ್ದಂತೆ ಬಗ್ದಾದ್ ನಿಂದ ಹಾರೂನ್ ರಷೀದ್ ರವರು ಕಾಗದ ಬರೆದರು ಇಮಾಮ್ ಮಾಲಿಕ್ ರವರಿಗೆ ನಾನು ನಿಮ್ಮಿಂದ  ಹದೀಸ್ ಗಳನ್ನು ಕಲಿಯಲು ಇಚ್ಚಿಸುತ್ತಿದ್ದೇನೆ ನಾನು ಬಗ್ದಾದ್ ನಲ್ಲಿ ಇದ್ದೇನೆ ನನಗೆ ನಿಮ್ಮಲ್ಲಿ ಬರಲು ಅನಾನುಕೂಲ ವಾದರಿಂದ ತಾವು ನನ್ನ ಬಳಿ ಬರಬಹುದೇ ಎಂದು ಕೇಳಿದರು ನಾನು ನನ್ನ ರಾಜ ಮಹಲ್ ನಲ್ಲಿ ನಿಮಗೆ ಹಾಗೂ ನಿಮ್ಮ ಶಿಷ್ಯರಿಗೆ ಉತ್ತಮ ವ್ಯವಸ್ಥೆಯನ್ನು ಮಾಡಿಸುತ್ತೇನೆ ಇಲ್ಲಿ ನಿಮ್ಮ ಶಿಷ್ಯರೊಂದಿಗೆ ನಾನೂ ನಿಮ್ಮ ಬಳಿ ಕಲಿಯಲು ಪ್ರಾರಂಬಿಸುವೆ ಎಂದರು ಆ ಕಾಗದ ಬಂದು ಇಮಾಮ್ ಮಾಲಿಕ್ ರವರಿಗೆ ತಲುಪಿದಾಗ ಅದನ್ನು ತೆರೆದ ನೋಡುವಾಗ ಅವರ ಮುಖವು ಕೆಂಡಾಮಂಡಲ ವಾಯಿತು ಇಮಾಮ್ ಮಾಲಿಕ್   ಹೇಳಿದರು ನಿನಗೆ ಗೊತ್ತಿಲ್ಲವೇ ನಾನು ರಸೂಲರಾದ  ಮುಸ್ತಫಾ صلي الله عليه وسلم 
ರವರ ಗುಲಾಮನೆಂದು ನಾನು ನಿನ್ನ ಬಳಿ ಬರಲಾರೆನು ನಿನಗೆ ಪ್ರವಾದಿ ಯವರ ಹದೀಸ್ ಕಲಿಯಬೇಕೆಂದರೆ ಮದೀನ ಬರಬೇಕಾಗಿದೆ ಪ್ರವಾದಿ ಯವರ ಹದೀಸ್ ಹಿಡಿದು ನಿನ್ನ ಬಳಿ ಬರುವ ಯಾವ ಉದ್ದೇಶವೂ ಇಲ್ಲ ಅಂದರು ಅಲ್ಲಾಹು ಅಕ್ಬರ್ ಎಂಥಹಾ ಕಾಲ ಅದು. ಕಲಿಯುವವರಿಗೆ ಯಾವ ಸಮಯದ ಗೋಡೆಯನ್ನು ನಿಗದಿ ಪಡಿಸಲಾಗುವುದಿಲ್ಲ ನಾವು ವಾರಕ್ಕೊಮ್ಮೆ ನಮ್ಮ ಗುರುಗಳಿಂದ ಕೆಲವೊಂದು (ಇಲ್ಮ್)  ಜ್ನಾನ ಕಲಿತರೆ ಅದೇ ಉತ್ತಮ ನಾವು ವಯಸ್ಸಾದರೂ ಕಲಿಯುವ ತವಕ ಬಿಡಬಾರದು ಪ್ರವಾದಿ ಯವರು ಹೇಳುತ್ತಾರೆ ಇಲ್ಮಿನ ಪ್ರಯಾಣ ಬೆಳೆಸಿದವನು ಇನ್ನು ಪೂರ್ತಿಯಾಗದೆ ಮರಣ ಹೊಂದಿದರೆ ನಾಳೆ ಅಂತ್ಯ ದಿವಸದಲ್ಲಿ ಪ್ರವಾದಿ ಗಳ ಮತ್ತು ಅವನ ಮದ್ಯೆ  ಬರೇ   ಒಂದು ಮೆಟ್ಟಲಿನ ವ್ಯತ್ಯಾಸ ಇರುವುದು ಅಷ್ಟು ಎತ್ತರಕ್ಕೆ ಏರುವನು ಅವನು ಅಂದರೆ ದೀನ್ ಕಲಿಯಲು ತನ್ನ ಜೀವನವನ್ನು ಮುಡಿಪಾಗಿಸಿದವನು ಇಲ್ಮ್ ಕಲಿಯಲು ಮನೆಯಿಂದ ಹೊರಡುವವನಿಗೆ ಅಲ್ಲಾಹನ ದೂತರು  (ಮಲಕ್ ಗಳು)ಅವನ ಕಾಲಡಿಯಲ್ಲಿ ತನ್ನ ರೆಕ್ಕೆಗಳನ್ನು ಬಿಡಿಸಿ ಕೊಡುವರು ಇಂದಿನ ಕಾಲದಲ್ಲಿ ರಾಜರಿಗೆ ಅಥವಾ ರಾಜಕೀಯ ವ್ಯಕ್ತಿ ಗಳಿಗೆ ಪ್ರೋಟೋಕೂಲ್ ನ ಅಂಗವಾಗಿ ರೆಡ್ ಕಾರ್ಪೆಟ್ ಬಿಡಿಸಲಾಗುವುದು ಈ ತರ ನಮ್ಮನ್ನು ಯಾರಾದರೂ ರೆಡ್ ಕಾರ್ಪೆಟ್ ನಲ್ಲಿ ಸ್ವಾಗತಿಸಿದರೆ ಎಷ್ಟೊಂದು ಸಂತೋಷ ಪಡುತ್ತೇವೆ  ಬ್ರಿಟಾನಿಯ ದಲ್ಲಿ ಇದು ರಾಜ ಪರಂಪರೆ ಯಾಗಿದೆ ತಮ್ಮ ಅತಿಥಿಗಳಿಗೆ ನೀಡಲಾಗುವ ಒಂದು ಪ್ರಯೋಗ ರೆಡ್ ಕಾರ್ಪೆಟ್. ಈ ಲೋಕದ ಕಾರ್ಪೆಟ್ ಎಷ್ಟು ದೊಡ್ಡದು ಹಾಗೂ ಎಷ್ಟು ಸಮಯ ಇರಬಹುದು ಆದರೆ ಅಲ್ಲಾಹನ ಮಲಕ್ ಗಳು ಒಬ್ಬ ಇಲ್ಮ್ ಕಲಿಯುವ ವಿದ್ಯಾರ್ಥಿಗಾಗಿ ನೀಡುವ ಕಾರ್ಪೆಟ್ ಅದು ಹೇಗಿರಬಹುದು ಒಮ್ಮೆ ಯೋಚಿಸಿ  
ದೀನಿ ವಿದ್ಯಾರ್ಥಿಗಳಿಗೆ ಸಿಗುವ ಪ್ರತಿಫಲ ಬೇರೆ ಯಾರಿಗೂ ಸಿಗಲಾರವು ಎಲ್ಲಕ್ಕಿಂತ ವಿಷೇಷ ವಾದದ್ದು ಪ್ರವಾದಿ ಯವರು ಉಲಮಾಗಳಿಗೆ ತನ್ನ ವಾರಿಸು ದಾರರಾಗಿ ನೇಮಿಸಿದ್ದಾರೆ ಪ್ರವಾದಿ ಯವರ ವಾರಿಸು ಹಣ ಸಂಪತ್ತು ಅಲ್ಲವೇ ಅಲ್ಲ ಆದರಿಂದ ಜ್ನಾನ ಹುಡುಕುವ ಆದೇಶ ನಮಗೆ ನೀಡಲಾಗಿದೆ ಅದು ಬಾನೆತ್ತರದ ಪರ್ವತದ ಮೇಲೆ ಇದ್ದರೂ  ನದಿ ಸರೋವರ ಗಳನ್ನು ದಾಟ ಬೇಕಾದರೂ   ಚೀನಾ ದೇಶಕ್ಕೆ ಹೋಗಬೇಕಾದರೂ    ಸರಿ ದಾರ್ಮಿಕ ವಿಧ್ಯೆ ಕಡ್ಡಾಯವಾಗಿ ಕಲಿಯಬೇಕು ಅಲ್ಲಾಹು ನಮಗೆ ಕಲಿಯಲು ಅನುಗ್ರಹಿಸಲಿ ಆಮೀನ್!

Wednesday, July 1, 2020

ಅಳುವಿನಿಂದ ಜೀವನವೇ ಬದಲಾಗಬಹುದು-Weeping can change lives

ಒಬ್ಬ ಫಕೀರ ದರ್ವೇಶ್ ತನ್ನ ಮನೆಯಂಗಳದಲ್ಲಿ ಹಾದು ಹೋಗುವ ಪ್ರತಿಯೊಬ್ಬರಿಗೂ ಆಹಾರ ಧಾನ ವಾಗಿ ನೀಡುತ್ತಿದ್ದ ಜನರ ಅವಶ್ಯ ಗಳನ್ನು ಪೂರೈಸುತ್ತಿದ್ದ ಆದರೆ ಶ್ರೀಮಂತ ಆಗಿರಲಿಲ್ಲ ಕೆಲವೊಮ್ಮೆ ಸಾಲ ಮಾಡಿ ಜನರಿಗೆ ಉಟ ನೀಡುತ್ತದ್ದ ದರ್ವೇಶ್ ಗಳ ಒಂದು ಪ್ರತ್ಯೇಕತೆ ಅಂದರೆ ಅವರ ಆಶ್ರಮಕ್ಕೆ ಜನರು ಉಟ ಮಾಡಲೆಂದೇ ಬರುತ್ತಾರೆ ಒಂದು ಸಮಯ ಆ ದರ್ವೇಶ್ ಜನರ ಸೇವೆಗಾಗಿ ಮಾಡಿದ ಸಾಲವನ್ನು ಕೇಳಲು ಸಾಲಗಾರರು     ಅವರ ಮನೆಯತ್ತ ಧಾವಿಸಿದರು ಆವಾಗ ಒಬ್ಬ ಹುಡುಗ ಪಕ್ಕದಲ್ಲಿ  ಕೆಲವು ವಸ್ತುಗಳನ್ನು ಮಾರುತ್ತಿದ್ದನು ಆವಾಗ ಆ ದರ್ವೇಶ್ ಹುಡುಗನನ್ನು ಕರೆದು ಹೇಳಿದರು ನಿನ್ನ ಈ ಸರಕು ನನ್ನ ಜನರಿಗೆ ನೀಡು ಎಂದು ಹೇಳಿದಾಗ ಆ ಹುಡುಗ ತುಂಬಾ ಸಂತೋಷದಿಂದ ಆ ಸರಕು ಮಾರಲು ತಯಾರಾದನು ಎಲ್ಲಾ ಸರಕು ಅಲ್ಲಿ ನೆರೆದ ಜನರಿಗೆ ನೀಡಿ ದರ್ವೇಶ್ ಅವರಲ್ಲಿ ಅದರ ದುಡ್ಡು ಕೇಳಿದನು ಆವಾಗ ಅವರು ಹೇಳಿದರು ಕುಳಿತುಕೋ ನಿನ್ನ ಹಣ ನೀಡುವೆ ಎಂದು ಹತ್ತು ನಿಮಿಷ ಗಳ ನಂತರ ಎದ್ದು ಮತ್ತೆ ಕೇಳಿದಾಗ ದರ್ವೇಶ್ ಹೇಳಿದರು ಕುಳಿತುಕೊ ಅವರಿಗೆ ಹಣ ಸಿಕ್ಕರೆ ನಿನಗೆ ನೀಡುವೆ ಎಂದು  ಮತ್ತು ಕೆಲವು ನಿಮಿಷಗಳ ನಂತರ ಎದ್ದು ಕೇಳಿದ ಬಾಬಾ ಹಣ ಎಲ್ಲಿ ನನ್ನ ತಾಯಿ ನನ್ನ ಬರವನ್ನು ಕಾಯುತ್ತಿದ್ದಾರೆ ನನಗೆ ಮನೆಗೆ ಹೋಗಬೇಕು ಆಹಾರ ತಯಾರು ಮಾಡಬೇಕು ನೀವು ನೀಡುವ ಹಣದಿಂದ ಮನೆಯಲ್ಲಿ  ಉಟ ತಯಾರಾಗುತ್ತದೆ  ಬಾಬಾ ಹಣ ಎಲ್ಲಿ ಎಂದು ಮತ್ತೊಮ್ಮೆ ಕೇಳಿದನು ಆವಾಗ ದರ್ವೇಶ್ ಅದೇ ಉತ್ತರ ನೀಡಿದರು ಆ ಹುಡುಗ ಒಬ್ಬ ಯತೀಮ್ ಆಗಿದ್ದನು ಅಳಲು ಪ್ರಾರಂಬಿಸಿದನು ಆ ಹುಡುಗ ಅಳುವಾಗ ಅಲ್ಲಾಹನ ಅನುಗ್ರಹ ಗಳು ಸುರಿದವು ಅಂದರೆ ಒಬ್ಬ ದಾರಿಯಲ್ಲಿ ಹೋಗುವವರು ಬಂಗಾರದ ನಾಣ್ಯಗಳ ಚೀಲವನ್ನು ಆ ದರ್ವೇಶ್ ರವರಿಗೆ ನೀಡಿದನು  ಆ ನಾಣ್ಯಗಳನ್ನು ಅಲ್ಲಿ ನೆರೆದ ಜನರಿಗೂ ಸಾಲಗಾರಿಗೂ ಆ ಹುಡುಗನಿಗೂ ನೀಡಿ ಹೇಳಿದರು ಹೋಗಿ ನಿಮ್ಮ ಮನೆಗೆ ತೆರಳಿರಿ ನೀವೆಲ್ಲರೂ ಎಂದರು ಆವಾಗ ಆ ಸಾಲಗಾರರು ಕೇಳಿದರು ಓ ಬಾಬ ರವರೆ ನಾವು ಬೆಳಿಗ್ಗೆ ಯಿಂದ ಇಲ್ಲಿ ಕುಳಿತಿದ್ದೇವೆ ಯಾರು ಬರಲಿಲ್ಲ ಈವಾಗ ಹೇಗೆ ಬಂದರು ಆವಾಗ ಆ  ಬಾಬ ದರ್ವೇಶ್ ಹೇಳಿದ ಮಾತು ನಿಜಕ್ಕೂ ಆಲೋಚಿಸುವಂತಹದು ಹೇಳಿದರು ಬೆಳಿಗ್ಗೆ ಯಿಂದ ಅಳುವ ಯಾರೂ ಇಲ್ಲಿ ಇರಲಿಲ್ಲ ಎಂದು. ಸಮೂಹಿಕ ವಾಗಿ ಒಬ್ಬ ಹುಡುಗ ಅಳುವ ಕಾರಣ ದಿಂದ ಎಲ್ಲರ ಅವಶ್ಯ ಗಳು ಪೂರ್ತಿಯಾದವು ಕೆಲವೊಮ್ಮೆ ಒಬ್ಬರ ಪಶ್ಚಾತ್ತಾಪ ದಿಂದ ಎಲ್ಲರ ಪಾಪವೂ ಮನ್ನಿಸಲಾಗುವುದು ಇವತ್ತು ನಾವು ಸಾಮೂಹಿಕವಾಗಿ ಅಲ್ಲಾಹನ ಸನ್ನಿದಿಯಲ್ಲಿ ನಮ್ಮ ಪಾಪಗಳನ್ನು ಅವನ ಮುಂದೆ ಇಟ್ಟು ಅವನಲ್ಲಿ ಬರವಸೆ ಇಡುತ್ತೇವೆ ಒಬ್ಬನ ಕಾರಣ ವಾಗಿಯಾದರು ನಿನ್ನ ಅನುಗ್ರಹ ಗಳ ಸುರಿಮಳೆ ನೀನು ವಿತರಿಸು  ಯಾ ಅಲ್ಲಾಹ್ ಅವರ ಕಾರಣ ದಿಂದ ನಮ್ಮ ಪಾಪವನ್ನು ಮನ್ನಿಸು ಪ್ರಬುವೇ ಎಂದಾಗಿರುತ್ತದೆ ನಮ್ಮೆಲ್ಲರ ಪ್ರಾರ್ಥನೆ ಒಬ್ಬ ಅಳುವವನ ಕಾರಣದಿಂದ ನನ್ನ ಪಾಪ ಮನ್ನಿಸು ಅಲ್ಲಾಹುವೆ  ಎಂದು ಸದಾ ಪ್ರಾರ್ತಿಸಬೇಕು ನಾವು ಜೀವನದಲ್ಲಿ ತುಂಬಾ ಪಾಪಗಳನ್ನು ಮಾಡಿದ್ದೇವೆ ತುಂಬಾ ಸಮಯ ಜೀವಿಸಿದ್ದೇವೆ ನಾನು ಒಮ್ಮೆ ನನ್ನ ಅಂತರಾಳ ವನ್ನು ಇಣುಕಿ ನೋಡಿದರೆ ಅನೇಕ ಪಾಪ ಗಳು ಕಾಣ ಸಿಗುವುದು ಜೀವನ ವೇಗವಾಗಿ ಮುನ್ನಡೆಯುತ್ತಿದೆ ನಮ್ಮ ನಲವತ್ತು ವರ್ಷಗಳು ಒಂದು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋದವು ಇನ್ನು ಒಂದ ನಿಮಿಷ ನಾವು ಬದುಕುತ್ತೇವೆ ಎಂದು ಹೇಳಲು ನಮ್ಮಿಂದ ಸಾಧ್ಯವೇ? ಫಜರ್ ನಮಾಝ್ ಮಾಡಿ ಲುಹರ್ ಮಾಡಲು ಸಾಧ್ಯವೆ ಗೊತ್ತಿಲ್ಲ  ಮರಣ ಯಾವಾಗಲೂ ಸಂಭವಿಸಬಹುದು ಮರಣ ನಮ್ಮ ತುಂಬಾ ಸಮೀಪ ಇದೆ ಬನ್ನಿ ನನ್ನ ಸಹೋದರರೆ ನಮ್ಮ ಜೀವನವನ್ನು ಅಲ್ಲಾಹು ಹಾಗು ಅವನ ರಸೂಲರ ಪಾಲನೆಯಲ್ಲಿ ನಮ್ಮನ್ನು ನಾವು ತೊಡಗಿ ಕೊಳ್ಳುವ ಇವತ್ತು ಸಮಯ ಇದೆ ಇವತ್ತು ಪಶ್ಚಾತ್ತಾಪದ ಬಾಗಿಲು ತೆರೆದಿದೆ ಇವತ್ತು ಅಲ್ಲಾಹನ ಅನುಗ್ರಹ ಗಳು ನಮ್ಮನ್ನು ಕರೆದು ಹೇಳುತ್ತಿದೆ ಬನ್ನಿ ಅಲ್ಲಾಹನ ಕಡೆಗೆ ಆದರೆ ನಾವೂ ಇನ್ನೂ ಮಲಗಿದ್ದೇವೆ....ಅಲ್ಲಾಹನ ಕಡೆಗೆ ಧಾವಿಸಿ ನಾಳೆ ಯಾರೂ ನೋಡಲಿಲ್ಲ!!!ನಾಳೆಯ ಪರಲೋಕದ ಸುಂದರ ಜೀವನಕ್ಕೆ ಇಂದು ಸ್ವಲ್ಪ ಪ್ರಯತ್ನ ಪಡಬೇಕಾಗಿದೆ...ಅದುವೇ ಜೀವನ.
ISLAMIC KANNADA

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...