Translate

Sunday, June 28, 2020

ಅಸೂಯೆಯಿಂದ ಬಸ್ಮವಾಗ ಬೇಡ ಮನುಜ-Don't be jealous

ದ್ವೇಷ ಅಹಂಕಾರ ಅಸೂಯೆ  ಯಿಂದ ನಮ್ಮ ಹ್ರದಯ ಶುದ್ಧ ವಾದರೆ ಈ ಹ್ರದಯದಲ್ಲಿ ಸಾಹೋದರ್ಯದ ಸೌಂದರ್ಯ ಕಾಣುತ್ತದೆ ಆದರೆ ನಾವು ಹ್ರದಯದ ಕಣ್ಣನ್ನು ಹಾಳುಮಾಡಿದೆವು ಬೆಳಗ್ಗಿನಿಂದ ಸಂಜೆಯವರೆಗೆ ಎಂತಹಾ ಅಸೂಯೆ ಗಳನ್ನು ಹೊತ್ತು ತಿರುಗಾಡುತ್ತೇವೆ ನಮ್ಮ ಶಿಷ್ಟಾಚಾರ ವಿಭಿನ್ನ ನಮ್ಮ ಕುಟುಂಬ ವಿಭಿನ್ನ ಜನರೊಂದಿಗೆ ದ್ವೇಷದ ಲೋಕವನ್ನು ಸ್ರಷ್ಟಿಸಿ ಜೀವಿಸುತ್ತಿದ್ದೇವೆ ನಾವು ನಮ್ಮ  ಜೀವನದಲ್ಲಿ ಕಹಿ ಯನ್ನು ಧಾರಾಳವಾಗಿ ಶೇಕರಿಸಿ ಇಟ್ಟಿದ್ದೇವೆ ಆ ಕಹಿ ಮೊದಲು ನಮ್ಮ ಜೀವನ ವನ್ನೇ ನಾಶ ಮಾಡುತ್ತದೆ ನಮ್ಮ ಜೀವನ ಸುಖವಾಗಿ ಬಾಳಬೇಕೆಂದರೆ ಯಾವ ಸಮಸ್ಯೆಗಳಿಗೆ ಅವಕಾಶ ಇರಬಾರದು ಎಂದಾದರೆ ಮೊಟ್ಟ ಮೊದಲಿಗೆ ನಮ್ಮ ಹ್ರದಯವನ್ನು ಅಸೂಯೆ ಗಳಿಂದ ಶುದ್ದಿ ಕರಿಸ ಬೇಕು ಹ್ರದಯದ ಕನ್ನಡಿಯನ್ನು ಶುದ್ಧ ಮಾಡಬೇಕು ನಮ್ಮ ಆಂತರಿಕ ಲೋಕವನ್ನು ಉತ್ತಮ ಮಾಡಬೇಕು ಮನೆಯಲ್ಲಿ ಶುಚಿತ್ವ ವನ್ನು ಕಾಪಾಡುತ್ತೇವೆ ಆದರೆ ಹ್ರದಯದಲ್ಲಿ ಮಸಿ ಉಳಿಯಲು ಸ್ವೀಕಾರವೇ ಒಬ್ಬ ಸತ್ಯ ವಿಶ್ವಾಸಿಗೆ ನಿಮ್ಮ ಹ್ರದಯದಲ್ಲಿ ಅನುಕಂಪ ಉಂಟಾದರೆ ನೋಡಿ ಅಲ್ಲಾಹನು ನಿಮ್ಮ ಮೇಲೆ ಎಷ್ಟು ಕರುಣಿಯ ನೋಟ ಬೀರುವನು ಹೇಳತೀರದು 
ارحم من في الارض يرحمك من في السماء   
ಭೂಮಿಯಲ್ಲಿ ಇರುವವರಿಗೆ ಕರುಣೆ  ತೋರಿಸಿ ಆಕಾಶದಲ್ಲಿ ಇರುವವರು ನಿಮಗೆ ಕರುಣೆ ತೋರುವನು ಎಂಬ ಮಾತಿಗೆ ನಾವೆಷ್ಟು ಬೆಲೆ ನೀಡುತ್ತಿದ್ದೇವೆ. 
ಮೊಟ್ಟ ಮೊದಲಿಗೆ ನಾವು ನಮ್ಮ ಹ್ರದಯದ ಮನಸ್ಸಿನ ಶುದ್ಧಿಯ ಕೆಲಸ ನಿರ್ವಹಿಸಬೇಕಾಗಿದೆ ನಮ್ಮ ಮನಸ್ಸು ಹ್ರದಯ ಅಸೂಯೆ ಯಿಂದ ಶುದ್ಧವಾದರೆ ನಮ್ಮ ಶರೀರವೂ ಶುದ್ಧ ವಾಗುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಹೇಳಿದರು ನಮ್ಮ ಶರೀರದಲ್ಲಿ ಮಾಂಸದ ಒಂದು ತುಂಡು ಇದೆ ಅದು ಸರಿಯಾದರೆ ಎಲ್ಲವೂ ಸರಿಯಾಗುವುದು ಅದು ಹಾಳಾದರೆ ಪೂರ್ಣ ಶರೀರ ಹಾಳಾಗುತ್ತದೆ ಆವಾಗ ಪ್ರವಾದಿ ಯವರು ಹೇಳಿದರು ಕೇಳಿರಿ ಅದು ಹ್ರದಯ ವಾಗಿದೆ ಹ್ರದಯದ ತಿದ್ದುಪಡಿ ಅದು ಶರೀರದ ತಿದ್ದುಪಡಿ ಯಾಗಿದೆ ಹ್ರದಯದ ತಿದ್ದುಪಡಿ ಯಿಂದ ಒಬ್ಬನ ತಿದ್ದುಪಡಿ
ಒಬ್ಬನ ತಿದ್ದುಪಡಿ ಯಿಂದ ಸಮಾಜದ ತಿದ್ದುಪಡಿ ಸಮಾಜದ ತಿದ್ದುಪಡಿ ಯಿಂದ ಒಂದು ಸುಂದರ ವಾದ ಜೀವನದ ಚಿತ್ರಗಳು ಉಕ್ಕಿ ಬರುತ್ತದೆ ಅದೇ ನಮ್ಮ ಉದ್ದೇಶ ವಾಗಿದೆ ಆದರೆ ನಾವು ನಮ್ಮ ಹ್ರದಯವನ್ನು ಅಸೂಯೆಯಿಂದ ಗಟ್ಟಿ ಯಾಗಿಸಿದ್ದೇವೆ ಯಾರಿಗಾದರು ಅಲ್ಲಾಹು ಸಂಪತ್ತು ಗೌರವ ಮತ್ತು ಅಧಿಕಾರ ಅಥವಾ ಒಳ್ಳೆಯ ಸಾಮರ್ಥ್ಯ ನೀಡಿದರೆ ನಾವು ಸುಮ್ಮನೆ ಅವರಿಂದ ಅಸೂಯೆಯ ಬೆಂಕಿಯಲ್ಲಿ ಬಸ್ಮವಾಗುತ್ತೇವೆ. ಆದರಿಂದ ಹ್ರದಯದಲ್ಲಿ ಶುಚಿತ್ವ ವನ್ನು ಕಾಪಾಡಲು ಇಸ್ಲಾಮ್ ನಮಗೆ ಆದೇಶ ನೀಡಿದೆ .
ISLAMIC KANNADA

Thursday, June 25, 2020

ಕಳ್ಳ ತ್ವರೀಕತ್ ನವರಿಂದ ಸತ್ಯದ ನಿಷೇಧವೆ?

ಒಂದು ವಿಷಯ ನೆನಪಿನಲ್ಲಿಡಬೇಕಾಗಿದೆ ಏನೆಂದರೆ ಅಲ್ಲಾಹು ಎಲ್ಲಾ ಕಾಲ ಘಟ್ಟಗಳಲ್ಲಿ ಪ್ರವಾದಿ ಗಳ ಶುದ್ಧ ಅಸ್ತಿತ್ವ ವನ್ನು ಹಾಗೂ ಅಲ್ಲಾಹನ ಇಷ್ಟ ದಾಸರಾದ ವಲಿಯ್ ಗಳ ಅಸ್ತಿತ್ವವನ್ನು ಕೂಡ ಸ್ರಷ್ಟಿಸಿದ್ದಾನೆ ಲೋಕ ಮಾನವರ ಸನ್ಮಾರ್ಗ ಕ್ಕಾಗಿ ಹಾಗೂ ಮಾರ್ಗದರ್ಶನ ಕ್ಕಾಗಿ ... ಪ್ರತೀ  ಕಾಲಘಟ್ಟಗಳಲ್ಲಿ ಸಜ್ಜನರು  ಅಲ್ಲಾಹನಇಷ್ಟ ದಾಸರಾಗಿ ಜನರ ಹಿತವನ್ನು ಬಯಸುವ ಜನರಿಗೆ ಸತ್ಯ ದರ್ಮದ ಕಡೆಗೆ ಸಂದೇಶ ನೀಡುವ ಜನರು ಹುಟ್ಟಿ ಬರುತ್ತಾ ಇದ್ದಾರೆ ಒಂದು ವಸ್ತುವನ್ನು ಮಳಿಗೆ ಯಲ್ಲಿ ತುಂಬಾ ಬೇಡಿಕೆ  ಇದ್ದರೆ  ಅದರ ನಕಲಿ  ಕೂಡ ಮಾರಾಟ ವಾಗಲು ತಯಾರಾಗುತ್ತಿದೆ ಇದರಿಂದ ಸತ್ಯ ವನ್ನು ನಿಷೇಧಿಸುವ  ಹಾಗಿಲ್ಲ ಇಂದು ಲೋಕದಲ್ಲಿ ಜನರು ತುಂಬಾ ಧೈರ್ಯದಿಂದ ಅವಲಿಯಾಗಳನ್ನು ನಿಷೇದಿಸುತ್ತಾರೆ ಅದರ ಉದಾಹರಣೆ ಯನ್ನು  ಸುಳ್ಳು  ತರೀಕತ್ ನ ಹೆಸರಿನಲ್ಲಿ ಒಂದು ವ್ಯಾಪಾರ ವನ್ನು ಕಾರ್ಯ ನಿರ್ವಹಿಸುತ್ತಿರುವ ಕಪಟ ವಿಶ್ವಾಸಿಗಳನ್ನು ತೋರಿಸಿ ಸತ್ಯ ವಲಿಯ್ ಯನ್ನು ನಿಷೇಧಿಸುವ  ತಂತ್ರ ಮುಗ್ಧ ಜನರ ಮುಂದೆ ಪ್ರಕಟಿಸುತ್ತಾರೆ ಕುತಂತ್ರ  ಕ್ವಾಕರಿ ಅಸ್ತವ್ಯಸ್ತತೆ ವಂಚನೆ ಯಿಂದ ಜನರ ಭಾವನೆಗಳಿಂದ ಆಟ ಆಡುವ ಜನರು ಈ ಕಾಲಘಟ್ಟದಲ್ಲಿಯೂ ಇದ್ದಾರೆ ಎಂದರೆ ಅದರರ್ಥ ಸತ್ಯ ವನ್ನು ನಿಷೇದಿಸುವುದು ಅಲ್ಲ. ಕಳ್ಳ ಪ್ರವಾದಿತ್ವವನ್ವು ವಾದಿಸುವವರು ಮುಂದಿನಿಂದಲೂ ಪ್ರಕಟವಾಗಿದ್ದಾರೆ ಎಂದಾದರೆ ಪ್ರವಾದಿತ್ವದ ಸತ್ಯತೆಯನ್ನು ನಿಷೇದಿಸಬೇಕೆ ಕಳ್ಳ ಪ್ರವಾದಿತ್ವ ವನ್ನು ವಾದಿಸುವವರಿಂದ ಪ್ರವಾದಿತ್ವ ವನ್ನು ನಿಷೇಧಿಸುವ ಹಾಗಿಲ್ಲ ಅದೇ ತರಹ ಕಳ್ಳ ತ್ವರೀಕತ್ ಗಳ ಕುತಂತ್ರದಿಂದ ಸತ್ಯ ವನ್ನು ಮರೆಮಾಚಲು ಸಾಧ್ಯವಿಲ್ಲ..ಯಾಕೆಂದರೆ ಪ್ರವಾದಿ ಗಳ ಅಸ್ತಿತ್ವ ಕಾಲ ಕಾಲಗಳಲ್ಲಿ ಜನರ ಸನ್ಮಾನ ಕ್ಕಾಗಿ ಉಪಯುಕ್ತ ವಾಗಿತ್ತು ವಿಭಿನ್ನ ಕಾಲಘಟ್ಟದಲ್ಲಿ ಪ್ರವಾದಿ ಯವರು ಬರುತ್ತಿದ್ದರು ಕೊನೆಯದಾಗಿ ನಮ್ಮ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ಬಂದರು ಅವರ ನಂತರ ಯಾವ ಪ್ರವಾದಿಯೂ ಬರುವ ಹಾಗಿಲ್ಲ 
ನಮ್ಮ ಪ್ರವಾದಿಯ ನಂತರ ಪ್ರವಾದಿತ್ವದ ಬಾಗಿಲು ಮುಚ್ಟಿದವು ಆದರೆ ವಲಿಯ್ ಗಳ ಆಗಮನ ಸಜೀವ ವಾಗಿದೆ ಎಲ್ಲಿಯ ವರೆಗೆ ಅಂದರೆ ಇಮಾಮ್ ಮಹ್ದಿ ಯವರ ಆಗಮನದ ವರೆಗೆ ಚಾಲನೆ ಯಲ್ಲಿರುತ್ತದೆ ಮತ್ತು ಅವರ ನಂತರ ಲೋಕದ ಎಲ್ಲಾ ಕಡೆ ಅಪನಂಬಿಕೆ ವ್ಯಾಪಕವಾಗಿ ಹರಡುತ್ತದೆ ಈ ವಲಿಯ್ ರವರ ಆಗಮನದ ಬಾಗಿಲು ಮುಚ್ಚಲ್ಪಡುತ್ತದೆ ಆದರೆ ಅವುಲಿಯಾ ಗಳು ವಿಭಿನ್ನ ಸಮಯ ಗಳಲ್ಲಿ ಜೀವಂತ ವಾಗಿದ್ದರು ಅದರ ಸಾಧ್ಯತೆಯೂ ಇದೆ ಇಂದು ಯಾವ ಕಾರ್ಯಗಳ ಸಾದ್ಯತೆ ಇರುತ್ತದೆ ಅದರ ನಕಲಿ  ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಪ್ರವಾದಿತ್ವದ ಬಾಗಿಲು ಮುಚ್ಚಿದರೂ ಪ್ರವಾದಿತ್ವ ವನ್ನು ವಾದಿಸುವವರೂ ಇಂದೂ ಇದ್ದಾರೆ ಅಂದರೆ ಅವುಲಿಯಾಗಳ ಆಗಮನದ ಬಾಗಿಲು ತೆರೆದಿರುವಾಗ ಅವರನ್ನು ವಾದಿಸುವವರು ಕಳ್ಳರು ಇದ್ದಾರೆ ಇದೊಂದು ಅವಸ್ಥೆ ಗಳನ್ನು ಎದುರಿಸುವುದಲ್ಲದೇ ಸತ್ಯ ಮತ್ತು ಅಸತ್ಯ ವನ್ನು ಮನದಟ್ಟು ಮಾಡಬೇಕಾಗಿದೆ ನಮಗೆ ರೋಗ ಬಾದಿಸಿದಾಗ ಅದರ ಔಷಧಿ ಯನ್ನು ತೆಗೆದು ಕೊಳ್ಳಲು ನಾವು ಅಂಗಡಿಗೆ ಹೋಗುತ್ತೇವೆ ಅಲ್ಲಿ ಅಸಲಿ ನಕಲಿ ಔಷದಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ನಾವು ಅಸಲಿ ಔಷದಿಯನ್ನೇ ಆಯ್ಕೆ ಮಾಡುತ್ತೇವೆ ಅದಲ್ಲದೆ ಬೇರೆ ಏನು ಪಡೆಯಲಾರೆವು ಎಂದಾದರೆ ಧರ್ಮದ ವಿಷಯದಲ್ಲಿಯೂ ಸತ್ಯ ವನ್ನು  ಅರಿತುಕೊಂಡು ಜೀವಿಸುವುದು ಮುಖ್ಯ ವಾಗಿದೆ.
ISLAMIC INFO

Wednesday, June 24, 2020

ಕೊರೋನ ಅಂದರೆ ಏನ-What is Corona

ಈ ಮಾತು ಸಂಭಾಷಣೆಯಾಗಿ ಹೇಳಲಾಗುತ್ತದೆ ಅಂದರೆ ಈ ರೋಗ ಎಲ್ಲಿಂದ ಬಂತು ಆದರೆ ಒಬ್ಬ ಸತ್ಯ ವಿಶ್ವಾಸಿಯ ನಂಬಿಕೆ   ಅಂದರೆ ಅದು ತಾನಾಗಿಯೇ ಹುಟ್ಟಿ ಬಂದ ಒಂದು ರೋಗವಲ್ಲ ಇದು ಅಲ್ಲಾಹನ ಬಳಿಯಿಂದ ಪರೀಕ್ಷೆ ಸಂಕಟ ಪ್ರಯೋಗ ವಾಗಿದೆ ಮತ್ತು ಎಚ್ಚರಿಕೆಯ ಗಂಟೆ ಯಾಗಿದೆ ನಮಗೆ ನಮ್ಮ ವ್ಯವಹಾರ ಗಳನ್ನು ಸರಿಪಡಿಸಲು ಉತ್ತಮ ರಾಗಿ ಬಾಳಲು ಇದರಲ್ಲಿ ವಿಶೇಷ ವಾದ ಒಂದು ಸಂದೇಶ ನೀಡಲಾಗಿದೆ  ಲೋಕವು ಅಸಹಾಯಕ ವಾಗಿದೆ ಲೋಕದ ಪ್ರತಿಯೊಂದು ವೈದ್ಯರ  ದಾವೆಗಳು ಮೂಕ ಪ್ರೇತವಾಗಿ ಬದಿಗೆ ಸರಿದವು ಅಲ್ಲಾಹನ ಕಾರ್ಯಗಳಲ್ಲಿ ತಲೆ ಹಾಕುವವರು ಇಂದು ತಮ್ಮ  ಪರಾಜಯ ವನ್ನು ಎದುರಿಸುತ್ತಿದ್ದಾರೆ ಇವತ್ತು ಒಂದು ಸಣ್ಣ ವಯರಸ್ ನಿಂದ ಕಠಿಣ ಸಂಕಟದಿಂದ ಅಸಹಾಯಕತೆಯ ಚಿತ್ರಣ ನಮ್ಮ ಮುಂದಿದೆ ಪ್ರತಿಯೊಬ್ಬರಿಗೂ ತನ್ನ ಹಲವಾರು ಹಕ್ಕು ಬಾದ್ಯತೆ ಗಳ ಮದ್ಯೆ ಪ್ರಾಣದ ಭಯವು ಕಾಡುತ್ತಿದೆ ನಮ್ಮ ಇಸ್ಲಾಮ್ ದರ್ಮ ಇಂತಹಾ ಸಂದರ್ಭದಲ್ಲಿ ಕಾಳಜಿ ಮತ್ತು ಎಚ್ಚರಿಕೆಯ ಉಪದೇಶ ನೀಡಲಾಗಿದೆ.  ಆರೋಗ್ಯ ಇಲಾಖೆಯಿಂದ ನೀಡಿದ      ಮುನ್ನಚ್ಚರಿಕೆಗಳು  ನಿಭಾಯಿಸಲು ಮುಂದಾಗಬೇಕು ತಮ್ಮ ಮಕ್ಕಳನ್ನು ಮನೆಯಲ್ಲಿ ಸುರಕ್ಷಿತವಾಗಿರಿಸಿ ಐದು ಸಮಯದ ನಮಾಝ್ ನ ವ್ಯವಸ್ಥೆ ಮಾಡಿದರೆ ಐದು ಸಲ (ವುಲೂ)ಅಂಗ ಶುದ್ದಿಯ ಸಮಯವು ಒದಗಿ ಬರುತ್ತದೆ ಸ್ಥಳ ಗಳನ್ನು ಶುದ್ಧ ವಾಗಿಡಿ ಕಸಗಳನ್ನು ಜನರು ಸಂಚರಿಸುವ ಸ್ಥಳಗಳಲ್ಲಿ ಎಸೆಯದೆ.ದೂರದಲ್ಲಿ ಇಡಿ ಈ ಕಾರ್ಯಗಳು ಕಷ್ಟ ಹಾಗು ಸಾಂಕ್ರಾಮಿಕ  ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ ಅಲ್ಲಾಹು ನಮ್ಮೆಲ್ಲರನ್ನು ಕಾಪಾಡಲಿ ಲೋಕದ ಶ್ರೀಮಂತ ದೇಶಗಳಲ್ಲಿ ಈ ರೋಗ   ಹರಡಿದಾಗ ಅಲ್ಲಿನ ಅಸಾಯಕತೆಯ ಚಿತ್ರ ನಿಮಗೆ ನೋಡಲು ಸಿಗಬಹುದು ನಿಜವಾಗಿ ಹ್ರದಯದಲ್ಲಿ ಬೂಕಂಪ ಉಂಟಾಗುತ್ತದೆ ನಾವು ಈ ಕಷ್ಟ ವನ್ನು ಹೊರೆಯಲು ಅಸಾಧ್ಯ ರಾಗದೆ ಇರಲು ಅಲ್ಲಾಹನಲ್ಲಿ ಪ್ರಾರ್ತಿಸಿ ಮತ್ತು ನಮ್ಮಲ್ಲಿ ಯಾರಾದರೂ ಒಬ್ಬ ರೋಗಿಯಾಗಿ ಅವನನ್ನು ಪರಿಗಣಿಸುವವರು ಇರಲಾರರು ಅದು ಎಷ್ಟೊಂದು ಭೀಕರವಾದ ಸನ್ನಿವೇಶ ಇರಬಹುದು ಇಲ್ಲಿ ಇನ್ನು ನಾವು ಸುಖವಾಗಿದ್ದೇವೆ ಏನಾಗಬಹುದು ಫೆಲಸ್ತೀನ್ ನಲ್ಲಿ ಗಾಯಾಳುವಾಗಿ ಚಡಪಡಿಸುವ ಆ ಮಕ್ಕಳ ವೇದನೆ ನೋವು ಕಠಿಣವಾಗಿರ ಬಹುದು ರಕ್ತ ಚೆಲ್ಲುತ್ತಿರಬಹುದು ತಾಯಂದಿರು ಪ್ರಜ್ನೆಯನ್ನು ಕಳೆದು ಕೊಂಡಿರಬಹುದು ಒಮ್ಮೆ  ಯೋಚಿಸಿ ನನ್ನ ಸಹೋದರರೆ ಆ ಫೆಲಸ್ತೀನ್ ಮಕ್ಕಳನ್ನು ಹಿಡಿದು ಹೊರಗೆ ಹೋಗಲು ಅಸಾಧ್ಯ ಕಾರಣ ಹೊರಗೆ ಗುಂಡುಗಳ ಸುರಿಮಳೆ ಆ ತಾಯಿಯು ಆ ಮಕ್ಕಳು ತಾಯಿಯ ಕಯ್ಯಲ್ಲೇ ಕೊನೆಯುಸಿರು ಎಳೆಯುವರು ಇವತ್ತು ಲೋಕಕ್ಕೆ ಅವರನ್ನು ನೋಡುವ ಸಮಯ ಇದೆಯೇ ಲೋಕದಲ್ಲಿ ಶಾಂತಿ ನೆಲೆಸುವ ಪ್ರಯತ್ನ ನಡೆಯುತ್ತಿದೆ ರೋಗಗಳು  ಇದಕ್ಕಿಂತ ಮುಂಚೆಯೂ  ಬರುತ್ತಿದ್ದವು 
ಮುಂದೆಯೂ ಬರುತ್ತದೆ ಅಲ್ಲಾಹನಲ್ಲಿ ನಮ್ಮ ಪಾಪದ ಕ್ಷಮೆ ಯಾಚಿಸಿ ಇವತ್ತು ನಾವೆಲ್ಲರೂ ಕೇಳುವ ಒಂದು ಮಾತು   ನಾವೆಲ್ಲರೂ ಸೇರಿ ಯುದ್ಧ ಮಾಡುತ್ತೇವೆ ಕೊರೋನ ಎಂಬ ಮಹಾಮಾರಿಯ ವಿರುದ್ಧ ನಿಜವಾಗಿ ಅಲ್ಲಾಹನು ಕಳುಹಿಸಿದ ಶ್ರಷ್ಟಿಯೊಂದಿಗೆ ಯುದ್ಧ ಸಾಧ್ಯವಿಲ್ಲ ಅವನಲ್ಲಿ ಕ್ಷಮೆ ಯಾಚಿಸಿ ಅದೊಂದೇ ದಾರಿಯಾಗಿದೆ ನಮ್ಮ ವಿಜಯಕ್ಕೆ ಅದಕ್ಕಾಗಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬಹುದು ಅದು  ನಮ್ಮ ದೀನಿನ ಒಂದು ಭಾಗವಾಗಿದೆ ಅಲ್ಲಾಹನಿಂದ ಯಾವಾಗಲೂ ನಿರಾಶೆ ಆಗಬೇಡಿ ರೋಗ ಕಷ್ಟ ಸಂಕಟ ಎಲ್ಲವು ಜೀವನದ ಅಂಗ ವಾಗಿದೆ ಅದರ ಪರಿಹಾರವೂ ಅಲ್ಲಾಹನೆ ಪರಿಹರಿಸುವನು 

وَإِذَا مَرِضْتُ فَهُوَ يَشْفِينِ

(ನಾನು ರೋಗಿಯಾದಾಗ ಅವನೇ ನನ್ನನ್ನು ಗುಣಪಡಿಸುವವನು.)
ಎಂಬ ಕುರ್ಆನ್ ವಚನಗಳು ನಮಗೆ ಸಾಕ್ಷಿ ಯಾಗಿದೆ .
ISLAMIC INFO

Tuesday, June 23, 2020

ನಿರಂತರ ಪ್ರತಿಫಲ ಸಿಗುವ ಮೂರು ಕಾರ್ಯಗಳು-There are three tasks that get continuous reward


ಒಬ್ಬ ಮರಣ ಹೊಂದಿದರೆ ಅವನ ಕ್ರಿಯೆಗಳ ಸರಣಿ  ಕೊನೆಗೊಳ್ಳುತ್ತದೆ ನಾವು ಜೀವಂತ ವಿರುವಾಗ ನಮಾಝ್ ನಿರ್ವಹಿಸುತ್ತಿದ್ದೇವೆ ನಮ್ಮ ಕ್ರಿಯೆಗಳ ಹೆಸರಿನಲ್ಲಿ ಅದರ ಪ್ರತಿಫಲವು ಬರೆಯಲಾಗುತ್ತಿತ್ತು ನಾವು ಈ  ಲೋಕದಿಂದ ವಿದಾಯ ವಾದಮೇಲೆ ಕ್ರಿಯೆಗಳ ಸರಣಿಯೂ ಮುಕ್ತಾಯ ವಾದವು ನಾವು ಧಾನ ಮಾಡುತ್ತಿರುವಾಗ ಅದರ ಫ್ರತಿಫಲ ಲಬಿಸುತ್ತಿತ್ತು ನಾವು ಮರಣ ಹೊಂದಿದರೆ ಆ ಕಾರ್ಯ ಮಾಡಲಾರೆವು ನಾವು ಜನರ ಸಹಾಯಕ್ಕೆ ಮುಂದಾಗುತ್ತಿದ್ದೇವೆ ಜನರಿಗೆ ದಾರಿ ತೊರಿಸುತ್ತಿದ್ದೇವೆ ದಾರಿಯಲ್ಲಿರುವ ವಸ್ತುಗಳನ್ನು ಸರಿದು ದೂರವಿಡುತ್ತಿದ್ದೇವೆ ಬಾಯಾರಿಕೆ ಯಾದವನಿಗೆ ನೀರು ನೀಡುತ್ತಿದ್ದೇವೆ ಹಸಿದವನಿಗೆ ಊಟ ನೀಡತ್ತಿದ್ದೇವೆ ಒಬ್ಬ ನಗ್ನ ಅವಸ್ಥೆಯಲ್ಲಿ ಇದ್ದವನಿಗೆ ಬಟ್ಟೆ ನೀಡಿದೆವು ಜನರ ದುಖ ವನ್ನು ಆಲಿಸುತ್ತಾ ಜನರ ಸಹಾಯ ಮಾಡುತ್ತಿದ್ದೇವೆ ನೀವು ಹಜ್ ಕರ್ಮ ನಿರ್ವಹಿಸಿದಿರಿ ಉಮ್ರಾ ಮಾಡಿದಿರಿ ಕುರಾನ್ ಪಠಣ ಮಾಡಿದಿರಿ ಎಷ್ಟೊಂದು ಉತ್ತಮ ಕಾರ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ನಿರ್ವಹಿಸುತ್ತಿದ್ಥರು ಆದರೆ ಮರಣ ಸಂಬವಿಸಿದಾಗ ಇವೆಲ್ಲವೂ ಮುಕ್ತಾಯ ವಾದವು ಆದರೆ ಮೂರು ಕ್ರಿಯೆಗಳ ಪ್ರತಿಫಲ ನಿಮ್ಮ 
ಕ್ರಿಯೆಗಳ ಹೆಸರಿನಲ್ಲಿ ಸೇರಿಸಿ ಇಡಲಾಗುತ್ತದೆ ಈ ಮೂರು ಕಾರ್ಯ ನಿಮ್ಮ ಜೀವನದಲ್ಲಿ ಸದಾ  ಜೀವಂತವಾಗಿರಿಸಿ .ಮೊಟ್ಟ ಮೊದಲನೆಯದು( صدقه جاريه )
ಸದಖಾ ಜಾರಿಯ  (ನಡೆಯುತ್ತಿರುವ ದಾನ)ಮಸೀದಿ ನಿರ್ಮಾಣ ದಲ್ಲಿ ಧನ ಸಹಾಯ ಮಾಡುವುದು ಅಥವಾ ಆಸ್ಪತ್ರೆ ಅಥವಾ ನೀರಿನ ವ್ಯವಸ್ಥೆ ಇನ್ನಿತರ ಜನರಿಗೆ ಪ್ರಯೋಜನ ವಾಗುವ ಕಾರ್ಯಗಳಲ್ಲಿ ಧನ ಸಹಾಯ ಮಾಡುವುದು ಕೆಲವು ಕಾರ್ಯ ನೀವು ಮರಣ ಹೊಂದಿದ ನಂತರವೂ ಜನರು ಅದರಿಂದ ಪ್ರಯೋಜನ ಪಡೆಯಲು ಸುಲಭ ವಾಗುವ ಕಾರ್ಯಗಳು..ಇನ್ನೊಂದು
 (وعلم ينتفع به)
ಜನರಿಗೆ ಉಪಕಾರವಾಗುವ ಜ್ನಾನ  (ಇಲ್ಮ್)  ಇದು ಯಾವಾಗಲೂ ಮುಕ್ತಾಯ ಗೊಳ್ಳದ ನಿರಂತರವಾಗಿ ಕಾರ್ಯ ನಿರ್ವಹಿಸುವ ಒಂದು ಖಾತೆ  ಯಾಗಿದೆ ನಾನು ಇವತ್ತು ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರ ಭೋದನೆಯನ್ನು ನಿಮ್ಮ ಮುಂದೆ ಪ್ರಕಟಿಸುತ್ತಿದ್ದೇನೆ ಎಂದರೆ ನೀವು ಅದನು ಓದಿ ಕಲಿತು ಅಲ್ಲಾಹನ ಅನುಗ್ರಹ ದಿಂದ ನೀವು ಜೀವನದಲ್ಲಿ ಇಂತಹಾ ಒಳ್ಳೆಯ ಕಾರ್ಯ ಮಾಡಲು ಪ್ರಚೋದಿತರಾದರೆ ನನಗೆ ಅದರ ಪ್ರತಿಫಲ ಸಿಗುತ್ತದೆ ನನಗೆ ಕಲಿಸಿದ ನನ್ನ ಗುರುವಿನ ಆ  ಜ್ನಾನ ನೀವೆಷ್ಟು ಜನರು ಓದುತ್ತಿದ್ದೀರಿ ಅದರ ಒಂದು ಅಂಶವು ನನ್ನ ಗುರುವಿಗೆ ತಲುಪುವುದು ನನ್ನಂತಹ ಹಲವಾರು ಶಿಷ್ಯರ ಉತ್ತಮ ಕೆಲಸಗಳ ಪ್ರತಿಫಲವು ಗುರುವಿನ ಹೆಸರಿನಲ್ಲಿ ಬರೆಯಲ್ಪಡುತ್ತದೆ ಆ ಗುರುಗಳ ಪ್ರತಿಫಲ ಅವರ ಗುರುವಿಗೂ ಸಿಗುತ್ತದೆ ಹೀಗೆ ನಡೆಯತ್ತಾ ಕೊನೆಯದಾಗಿ ಅಬೂ ಹುರೈರ(رضي الله عنه (
ರವರ   ಖಾತೆಗೆ ಎಲ್ಲಾ ಪ್ರತಿಫಲ ಗಳು ಬರೆಯಲ್ಪಡುತ್ತದೆ ಮತ್ತು ಅವರ ಪ್ರತಿಫಲ ಲೋಕ ನಾಯಕರಾದ ಮುಹಮ್ಮದ್ ಮುಸ್ತಫ (صلي الله عليه وسلم )
ರವರ ಖಾತೆಗೆ ಜಮಾ ಆಗುವುದು ಹೀಗೆ ನೀವು ಕೂಡ ಇಂತಹಾ ಸಂದೇಶ ಗಳನ್ನು ಅನ್ಯರಿಗೆ ತಿಳಿಸಿದರೆ ಸರಣಿ ಮುಂದುವರಿಯುವುದು .ಮೂರನೆಯದು (وولد صالح يدعوا له)
ತನ್ನ ತಂದೆ ತಾಯಿಗೆ ಪ್ರಾರ್ತಿಸುವ ಸಜ್ಜನರಾದ (ಸಂತಾನ)ಮಕ್ಕಳು ಮಕ್ಕಳಿಂದ ತಂದೆ ತಾಯಿಗೆ ಸಿಗುವ ಪ್ರಾರ್ಥನೆ ಅದು (ಸದಖಾ ಜಾರಿಯ)(ನಡೆಯುತ್ತಿರುವ)ಧಾನ ವಾಗಿದೆ ಸಜ್ಜನರಾದ ಮಕ್ಕಳು ಯಾವಾಗಲು ತನ್ನ ತಂದೆ ತಾಯಿಯಂದಿರಿಗೆ ಪ್ರಾರ್ತಿಸದೆ ಇರಲಾರರು ಮಕ್ಕಳು ಐದು ಸಮಯದ ನಮಾಝ್ ನಿರ್ವಹಿಸುವಾಗಲೇ ಸಜ್ಜನರಾಗುವುದು  (ربنا اغفر لي ولوالديه(
ಅಲ್ಲಾಹುವೆ ನನಗೂ ನನ್ನ ತಂದೆ ತಾಯಿಗೆ ಕ್ಷಮಿಸು ಎಂಬ ಪ್ರಾರ್ಥನೆ ಯಾಗಿದೆ ..ಯೌವನ ವಯಸ್ಕ ಮುದುಕ ಎಲ್ಲಾ ವಯಸ್ಸಿನಲ್ಲಿಯೂ ಪ್ರಾರ್ಥನೆ ಸದಾ ನಿರಂತರವಾಗಿ ಪ್ರಾರ್ತಿಸುವುದು ಈ ಮೂರು ಕಾರ್ಯಗಳು ಮುಕ್ತಾಯ ಗೊಳ್ಳುವುದಿಲ್ಲ ಅಲ್ಲಾಹು ನಮಗೆ ಈ ಮೂರು ಕಾರ್ಯಗಳು ಮಾಡಲು ಅನುಗ್ರಹ ಲಬಿಸಲಿ.
ISLAMIC INFO

Sunday, June 21, 2020

ನಾವು ತುಂಡು ತುಂಡು ಗಳಾಗಿ ಮುರಿದು ಹೋದೆವು -We broke up into pieces

ನಮ್ಮ ಜೀವನದ ಅತ್ಯಂತ ದೊಡ್ಡ ತಪ್ಪು ನಾವು ತುಂಡು  ತುಂಡು ಗಳಾಗಿ ಮುರಿದು ಹೋದೆವು ಅದರ ಪರಿಣಾಮ ಎಲ್ಲಾ ಉಮ್ಮತ್ತಿಗಳು ಗಾಯ ಗಳಾದರು ನಾವು  ಅಲ್ಲಾಹನ ಬಳ್ಳಿ ಯನ್ನು ಬಿಟ್ಟು ಬಿಟ್ಟರೆ ನಮ್ಮ ಗಾಳಿ ಹೊರ ಹೋಗುವುದು ಎಂದು ಪವಿತ್ರ ಗ್ರಂಥ ನಮಗೆ ಕಲಿಸುತ್ತದೆ ನಾವು ಪ್ರವಾದಿ ಯವರ ಹಿಡಿತವನ್ನು ಬಿಟ್ಟು ಬಿಟ್ಟೆವು ನಾವು ಗುಂಪು ವಿತರಣೆ ಯಲ್ಲಿ ವಿಶ್ವಾಸ ವಿಡುವವರಾದೆವು  ವಿಶಾಲವಾದ ಮಸೀದಿಯನ್ನು ನಿರ್ಮಿಸಿದೆವು ನಾವು ಛಿದ್ರ ಛಿದ್ರ ಆಗುತ್ತಾ ಹೋದೆವು ನಾವು ಉಮ್ಮತ್ತಿನಿಂದ ವಿಭಜನೆಯಾಗಿ ಗುಂಪುಗಳಾಗಿ ತದನಂತರ ಸಾಲು ಸಾಲಾಗಿ ಬೀಕರತೆಯ ದಾರಿಯಲ್ಲಿ ನಾವು ತುಂಡು ತುಂಡು ಗಳಾದೆವು

وَكَذَٰلِكَ جَعَلْنَاكُمْ أُمَّةً  

ನಿಮ್ಮನ್ನು ನಾವು ಒಂದು ಸಮುದಾಯವಾಗಿಸಿದ್ದೇವೆ. 
ನೀವು ಒಬ್ಬರಿಗೊಬ್ಬರು ಛಿದ್ರ ವಾಗಿ ವಿಭಜನೆ ಯಾದಿರಿ ಒಬ್ಬರಿಗೊಬ್ಬರು ಅವಹೇಳನ ಮಾಡಿದಿರಿ ನೀವು ಒಬ್ಬರಿಗೊಬ್ಬರು ಇನ್ನೊಬ್ಬರ ಬಟ್ಟೆ ಎಳೆದಿರಿ ನೀವು ಪರಸ್ಪರ ದ್ವೇಷಗಳ ಬೀಜ ಬಿತ್ತಿಸಿದಿರಿ ನಿಮ್ಮ ನಾಲಿಗೆ ಯಲ್ಲಿ ಬೆಂಕಿ ದಹನ ವಾದವು ನೀವು ಮಿಂಬರ್ ಹಾಗೂ ಮೆಹರಾಬಿನ ಗೌರವವನ್ನು ಚದುರಿಸಲು ಪ್ರಾರಂಭಿಸಿದಿರಿ ನೀವು ಆಸೆಗಳ ಗುಲಾಮ ಅದಿರಿ ಆಸೆಯ ಸೇವಕರಾದಿರಿ ನೀವು ನಿಮ್ಮ ಆತ್ಮದ ಗುಲಾಮ ರಾದಿರಿ ನೀವು ಲೋಕ ನಾಯಕರಾದ ಮುಹಮ್ಮದ್ ಮುಸ್ತಫ
صلي الله عليه وسلم 
ರವರ ಗುಲಾಮತ್ವವನ್ನು ಸ್ವೀಕರಿಸಿದವರು ಏನಾಯಿತು ನಮಗೆ ನಾವು ಆತ್ಮದ ಗುಲಾಮರಾಗದೆ ಪ್ರವಾದಿಯ ಉತ್ತಮ ಉಮ್ಮತ್ ಆಗಬೇಕಾಗಿದೆ ನಮ್ಮ ಮಾತಾಡುವ ಶೈಲಿ ತೋರಿಸಬೇಕು ನಾವು ಪ್ರವಾದಿ ಯವರ ಉಮ್ಮತ್ ಎಂದು ನಮ್ಮ ಜೀವನದ ಶೈಲಿ ತೋರಿಸಿ ನಾವು ಪ್ರವಾದಿ ಯವರ ಉಮ್ಮತ್ ಎಂದು ನಾವು ತಕಡಿಯಲ್ಲಿ ತೂಕ ಮಾಡುವಾಗ ಜನರು ಬೇರೆ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಾರೆ ಕಾರಣ ನಾವು  ಪ್ರವಾದಿ ಯವರ ಉಮ್ಮತ್ ಆಗಿದ್ದೇವೆ  ಎಂಬ ದ್ರಡ ವಿಶ್ವಾಸ. ನಮ್ಮ ಏಕತೆ ನಮ್ಮ ಭಲ ವಾಗಿದೆ ಇವತ್ತು ಪ್ರವಾದಿ ಯವರ ಮನಸ್ಸಿಗೆ ಏನು ಸಂಭವಿಸ ಬಹುದು ಶಾಮ್ ಸಿರಿಯಾ ಅಥವಾ ಇರಾಕಿನ ಫೆಲಸ್ತೀನ್ ನ ಮಕ್ಕಳ ಮುಖಕ್ಕೆ ಉಗಿಯುವಾಗ ಲೋಕದ ನಾನಾ ಕಡೆಗಳಲ್ಲಿ ಮುಸಲ್ಮಾನರ ಮಾರಣ ಹೋಮ ನಡೆಯುತ್ತದೆ ಗ್ರಾಮ ಗ್ರಾಮ ರಕ್ತದಲ್ಲಿ ಮುಳುಗಿದಾಗ ನಾವು ಇನ್ನೂ ಗಾಢವಾದ ನಿದ್ರೆ ಯಲ್ಲಿ ಮಗ್ನರಾಗಿದ್ದೇವೆ ಯಾವ ಯಾವ ಉಮ್ಮತಿಯ ದುಖ ವಿವರಿಸಲಿ ಎಲ್ಲಿ ನೋಡಿದರೂ ಮುಸಲ್ಮಾನ ಕೈಗೊಂಬೆಯಂತೆ ಆಟ ಆಡುತ್ತಾ ಹೋಗುತ್ತಿದ್ದಾನೆ ಇಂದು ಮುಸಲ್ಮಾನ ರಕ್ತ ರಕ್ತ ವಾಗಿದ್ದಾನೆ ಈ ಬ್ರಹ್ಮಾಂಡದಲ್ಲಿ ಅಕ್ರಮದ ಜ್ವಾಲೆ ಇಳಿಯದ ಒಂದಿಂಚು ಸ್ಥಳ ಸಿಗಲಾರವು ಎಲ್ಲಿ ರಕ್ತ ಚೆಮ್ಮುತ್ತದೆ ಅದು ಮುಸಲ್ಮಾನರ ಗ್ರಾಮ ವಾಗಿದೆ ಎಲ್ಲಿ ಶವ ಬೀಳುತ್ತದೆ ಆ ಮನೆ ಮುಸಲ್ಮಾರದ್ದಾಗಿರುತ್ತದೆ ಬಾಗ್ಯ ಚಧರಿದವು ನಮ್ಮ ಪಾಪದ ಶಿಕ್ಷೆ ಯಾಗಿದೆ ನಾವು ಸ್ವೀಕರಿಸಲು 
ಬಲವಂತವಾಗಿದ್ದೇವೆ ಎಲ್ಲಿಯವರೆಗೆ ನಾವು ಉಮ್ಮತಿಗಳಾಗಿ ಇರುವುದಿಲ್ಲವೋ ನಾಚಿಕೆ ನಮ್ಮ ಹಣೆಬರಹವಾಗಿರುತ್ತದೆ ಪ್ರವಾದಿ ಯವರನ್ನು ಬಿಗಿಯಾಗಿ ಹಿಡಿದು ಉಮ್ಮತಿಗಳ ಏಕತೆಯ ಕಲ್ಪನೆಗಳನ್ನು ಹೈಲೈಟ್ ಮಾಡಿ  ಪ್ರವಾದಿ ಯವರ ಶುದ್ದತೆಯ ಅಸ್ತಿತ್ವ ವನ್ನು ದ್ರಡಪಡಿಸಿ ಮುನ್ನುಗ್ಗಿ ಒಂದಾಗಿ ಬಾಳದಿದ್ದರೆ ನಾವು ಯಾವಾಗಲೂ ವಿಜಯಿಗಳಾಗಲು ಸಾಧ್ಯವಿಲ್ಲ ಸಾವಿರಾರು ಫಿಲಾಸಪಿ ಗಳನ್ನು ಕೆತ್ತಿದರೂ ಯಾವ ಫಲಿತಾಂಶವೂ ಸಿಗಲಾರವು ಯಾವಾಗ ಪ್ರವಾದಿಯ ಶುದ್ಧೀಕರಿಸಿದ ಹ್ರದಯದಲ್ಲಿ ಶಾಂತಿ ಸಿಗುವುದೋ ಆವಾಗಲೇ ಫಲಿತಾಂಶ ಸಿಗುವುದು ನಾವು ಉಮ್ಮತಿಗಳಾಗಿ ಪ್ರವಾದಿ ಅವರೊಂದಿಗೆ ಆತ್ಮೀಯತೆ ಜೀವನದ ಘೋಷಣೆ   ಮಾಡುತ್ತೇವೆ ಆವಾಗ ಜೀವನದಲ್ಲಿ ಪ್ರಕಾಶ ಹಾಗೂ ಉಮ್ಮತಿಗಳಾಗಿ ನಾವು ಜೀವಿಸಬಹುದು. 
وَأَنْتُمُ الْأَعْلَوْنَ إِنْ كُنْتُمْ مُؤْمِنِينَ
ISLAMIC INFO

Thursday, June 18, 2020

ಪ್ರೀತಿ ಬರೇ ಹಕ್ಕುಗಳ ಹೆಸರಲ್ಲ-Love is not the name of a claim

ಪ್ರೀತಿ ಬರೇ ಹಕ್ಕುಗಳ  ಹೆಸರಲ್ಲ ಅದು ಪುರಾವೆಗಳಿವೆ ಅವಕಾಶ ನೀಡುತ್ತದೆ ನಾವು ಪ್ರೇಮದ ಬಗ್ಗೆ ಕಲಿತಿದ್ದೇವೆ 
العشق نار يحرق ما سوا الحبيب 

ಪ್ರೇಮ ಪ್ರೇಮಿಯ ಹೊರತು ಎಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ಬಿಡುತ್ತದೆ ಯಾವ ಆಸೆ  ಆಕಾಂಶೆ ಗಳು ಇರುವುದಿಲ್ಲ ತಾನು ತಾನಾಗಿಯೂ ಇರಲ್ಲ ಪ್ರೀತಿ ಇದೆ ಆದರೆ ನಾನಿರಲ್ಲ ಎಲ್ಲವೂ ನೀನೆ ಇರುವುದು ಎಲ್ಲಿ ನೋಡಿದರೂ ನೀನೆ ಅದೇ ತರಹ ಎಲ್ಲವನ್ನೂ ಬಿಟ್ಟು ಲೋಕ ನಾಯಕರಾದ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ಚೌಕಟ್ಟಿನಲ್ಲಿ  ಇಳಿದು ಬಾ ಒಮ್ಮೆ ಪ್ರವಾದಿಯ ಗುಲಾಮನಾಗಿ ನೋಡು ಪ್ರೀತಿಯ ಅರ್ಥ ಪೂರ್ಣ ಗೊಳ್ಳುತ್ತದೆ ನಿನ್ನ ಪ್ರೀತಿ ನಿನ್ನ ಸ್ನೇಹ ನಿನ್ನಿಂದ ನಿನ್ನ ಪ್ರವರ್ತಿ ಕೇಳುತ್ತದೆ ನಿನ್ನಲ್ಲಿ ನಿನ್ನ ಹಬೀಬರ ಜೊತೆ ನಿಷ್ಠೆ  ಕೇಳುತ್ತದೆ ಯಾರನ್ನು ಪ್ರೀತಿಸುತ್ತೀರೋ ಅವರ ಅನುಸರಣೆ ಪ್ರಾಮುಖ್ಯ ವಾಗಿದೆ ನಾನು ಮತ್ತು ನೀವು ಪ್ರವಾದಿ ಯವರನ್ನು ಪ್ರೀತಿಸು ವವರಾದರೆ ನಿಜವಾಗಿಯೂ ಪ್ರೀತಿಸುತ್ತೇವೆ ಇದರಲ್ಲಿ ಯಾವ ಸಂದೇಹವೂ ಇಲ್ಲ ಆದರೆ ಪ್ರೀತಿಯ ವಾಸ್ತವದ ಫಲ ಯಾವಾಗ ತಲುಪುತ್ತದೆ ಆವಾಗಲೇ ಪ್ರೀತಿ ಪರಿಪೂರ್ಣ ವಾಗುವುದು ಯಾಕೆಂದರೆ ಹಬೀಬರ ಇತಾಅತ್ ನಲ್ಲಿ ಜೀವನ ನಡೆಸಬೇಕು ಜನ ನಿಮ್ಮಲ್ಲಿ ಕೇಳಿ ನೀವು ಯಾರೆಂದು ಉತ್ತರಿಸುವುದಕ್ಕಿಂತ ನಿಮ್ಮ ಹಾವ ಬಾವ ನಿಮ್ಮ ಜೀವನ ಶೈಲಿ ನೋಡಿ ಜನ ಹೇಳಬೇಕಾಗಿದೆ ಪ್ರವಾದಿಯ ಗುಲಾಮ ಅಶಿಕೇ ರಸೂಲ್ ಬರುತ್ತಿದ್ದಾರೆ ಎಂದು ಹೇಳಬೇಕಾಗಿದೆ ಪ್ರಕಾಶ ಕಣ್ಣಲ್ಲಿಯಾದರೆ ಬೆಳಕು ಮುಖದಲ್ಲಾಗಿದೆ ಪ್ರವಾದಿ ಯವರ ಅನುಯಾಯಿಯ ಸ್ವಬಾವ ಎಂಥಹಾ ಸುಂದರ ವಾಗಿದೆ ಇಹದಲ್ಲೂ ಅವರ ಕಾರಣದಿಂದ ಬಾಗ್ಯ ವಂತ ರಾದರು ಪರಲೋಕ ದಲ್ಲಿಯೂ ಅವರ ಕರುಣೆಯ ಮಡಿಲಲ್ಲಿರುವರು ನೀವು ಪ್ರೀತಿಸುವವರ ಆಲೋಚನೆಯನ್ನು 
ಆಯ್ಕೆ ಮಾಡಿ ಅವರ ಆಲೋಚನೆಯೊಂದಿಗೆ ನೀವು ಸಂಬಂಧ ಬೆಳೆಸುವಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಪ್ರೀತಿಯ ಸಂಕೇತ ಅದು ನಾವು ದೀನಿಗಾಗಿ ನಮ್ಮನ್ನು ನಾವು ಸಿದ್ಧ ಪಡಿಸಿ ಕೊಳ್ಳಬೇಕಾಗಿದೆ ತನ ಮನ ಧನ ಗಳಿಂದ ನಾವು ಅವರಿಗಾಗಿ ಅರ್ಪಿತ ನಾಗಬೇಕಾಗಿದೆ ತನ್ನ ಜೀವನದ ಪ್ರತಿಯೊಂದು ಸಮಯವನ್ನು ಪ್ರವಾದಿ ಯವರಿಗಾಗಿ ಮುಡಿಪಾಗಿಸಿ ದೂರದಿಂದಲೆ ನೀವು ಪ್ರವಾದಿಯವರ ಒಬ್ಬ ನಿಷ್ಠಾವಂತ ಅನುಯಾಯಿ ಎಂದು ಭಾಸವಾಗ ಬೇಕಾಗಿದೆ.
ISLAMIC KANNADA

Wednesday, June 17, 2020

ನಮಾಝ್ ಗುಲಾಮಗಿರಿಯ ಭಾವನೆ ನೀಡುತ್ತದೆ. -Namaz gives the feeling of slavery

(ನಮಾಝ್ )ಪ್ರಾರ್ಥನೆ ಮಾಡುವವರು ನಮಾಝಿನ ಆತ್ಮೀಯತೆಯಿಂದ ಬಾಗ್ಯಶಾಲಿ ಯಾದರೆ  ಇದೊಂದು ಕೇವಲ ಮೇಲಿಂದ ಕೆಳಗೆ ನಡೆದಾಡುವ ಒಂದು ಪ್ರವರ್ತಿ ಅಲ್ಲ. ಬದಲಾಗಿ ಅಲ್ಲಾಹನ ಸಾನಿದ್ಯ. ಹರಕೆ ನೀಡುವ ಒಂದು ಪ್ರಾರ್ಥನೆ  ಯಾಗಿದೆ. ಮತ್ತು ಅವರಿಗೆ ಈ ನಮಾಝ್. ಆ ಸ್ತಾನಮಾನ ನೀಡುತ್ತದೆ ಅಂದರೆ ನಮಾಝ್ ಮಾಡುವವನಿಗೆ ಭಾವನೆಯ ಗೌರವದ ಸ್ತಾನಮಾನ ನೀಡುತ್ತದೆ. ಮನುಷ್ಯನ ಪವಿತ್ರ ಅಂಗ ತಲೆಯಾಗಿದೆ.  ಮಾತಾಡುವ ಶಕ್ತಿ ನಾಲಿಗೆ ತಲೆಯಲ್ಲಿ ನೋಡುವ ಶಕ್ತಿ ಕಣ್ಣು ತಲೆಯಲ್ಲಿ .ಕೇಳುವ ಶಕ್ತಿ ಕಿವಿ ತಲೆಯಲ್ಲಿ ಆಲೋಚಿಸುವ ಶಕ್ತಿ ಮೆದುಳು ತಲೆಯಲ್ಲಿ. ಪರಿಮಳ ಆಸ್ವಾದಿಸುವ ಮೂಗು ತಲೆಯಲ್ಲಿ. ಮತ್ತು ಆ ತಲೆ ಜಗದೊಡೆಯನ ಸನ್ನಿದಿಯಲ್ಲಿ.   ಎಷ್ಟೊಂದು ಸುಂದರ ಮಹಿಮೆ.  ಸಾಷ್ಟಾಂಗದಲ್ಲಿ ನಾವು ಪ್ರಾರ್ತಿಸುವುದು 
ನಾಲಿಗೆಯಲ್ಲಿ ಪಠಿಸುವ ಆ ದುವಾ. (ಪ್ರಾರ್ಥನೆ) ಅಲ್ಲಾಹನನ್ನು ಪರಿಶುದ್ದನಾಗಿಸುವ ದುವಾ ಆಗಿದೆ.  ಮನುಷ್ಯನು  ಅಲ್ಲಾಹನ ಸನ್ನಿದಿಯಲ್ಲಿ ಯಾವ ಪುರಾವೆ  ನೀಡುತ್ತಾನೆ ಅಂದರೆ. ಅವನ ಮುಂದೆ ತಲೆಬಾಗಿ. ನಿನಗಿಂತ ಮೇಲೆಯಾದವನು ಬೇರೆ ಯಾರಿಲ್ಲ ನನಗಿಂತ ಕೀಳಾದವನೂ ಬೇರೆ ಯಾರಿಲ್ಲ ಎಂಬ ಬಾವನೆ ಯಾಗಿರುತ್ತದೆ. ಇನ್ನು ಅವನು ನಮಾಝಿನ ಆತ್ಮೀಯತೆಯಿಂದ ಬಾಗ್ಯಶಾಲಿ ಯಾದರೆ ಸಾಷ್ಟಾಂಗ ದಿಂದ ತಲೆ ಮೇಲಕ್ಕೆತ್ತುವ ಮುಂಚಿತವಾಗಿ ಅವನ ಎಲ್ಲಾ ಹೊರೆಗಳನ್ನು ಅಲ್ಲಾಹನು ಕೆಳಗಿಳಿಸುವನು.  ಅಂದರೆ ಅವನ ಎಲ್ಲಾ ಪಾಪಗಳನ್ನು      ಮನ್ನಿಸಲಾಗುವುದು.   ಅವನ ಮನಸ್ಸಿನಲ್ಲಿ ಪ್ರಕಾಶ ನೀಡುವನು ನಮಾಝ್ ಗುಲಾಮಗಿರಿಯ ಭಾವನೆ ನೀಡುತ್ತದೆ. ಅಲ್ಲಾಹನ ಮುಂದೆ ತಲೆಬಾಗುವುದರಿಂದ ದಾಸ ಒಬ್ಬ ಪರಿಪೂರ್ಣ ನಾದ ಸತ್ಯ ವಿಶ್ವಾಸಿಗನಾಗಿ. ಬೇರೆ ಯಾರ ಮುಂದೆಯೂ ತಲೆ ಬಾಗುವ ಅವಶ್ಯಕತೆ ಇರಲಾರದು. ತನ್ನ ಮಕ್ಕಳಿಗೆ ನಮಾಝಿನ ಪ್ರೀತಿ ನೀಡಿ. ಅಭ್ಯಾಸ ಮಾಡಿಸಿ ಕುತೂಹಲ. ನೀಡಿ ಮತ್ತು ಕಲ್ಪನೆ ನೀಡಿ. ನಮಾಝ್ ಮಕ್ಕಳಿಗೆ ಅಭ್ಯಾಸ ದಿಂದ ಪರಿಚಯ ವಾದರೆ ಯುವಕರಾಗುವಾಗ ಅವರಿಗೆ ಅದರ ಪರಿಪೂರ್ಣ ವಾಗಿ ಸ್ವೀಕರಿಸುವ ಮನಸ್ಸು. ಅವರ ಪ್ರಕ್ರತಿ ಯಲ್ಲಿ ನೆಲೆ ನಿಲ್ಲುವುದು. ಅವರ   ಆರೋಗ್ಯದ ಖಾತರಿ ಯಾಗುವುದು. ಅವರ ಆಂತರಿಕ ಶುದ್ದಿಯ ಕಾರಣ ವಾಗುವುದು ನಮಾಝ್ ನ  ಪರಿಚಯ ತನ್ನಿಂದ ತಾನೆ ಇದೆ ಅದು ನಮ್ಮನ್ನು ಶುದ್ದಗೊಳಿಸತ್ತದೆ. ಅಲ್ಲಾಹನ ಸಾಮಿಪ್ಯಕ್ಕೆ ಒಂದು ಪ್ರಯತ್ನ ವಾಗಿದೆ. ದಾಸ ಮತ್ತು ಒಡೆಯನ ಜಂಟಿ ಯಾಗಿದೆ. ನಮಾಝ್ ಅಂದರೆ  ಅಲ್ಲಾಹು  ನನ್ನನ್ನು ನೋಡುತ್ತಿದ್ದಾನೆ ಎಂಬ ಭಾವನೆ ಇರುವುದರಿಂದ. ಆತ್ಮೀಯ ಗೌರವ ನೀಡುತ್ತದೆ. ಇಂತಹಾ ಸಂದರ್ಭದಲ್ಲಿ ಮನುಷ್ಯನು ಜೀವನದಲ್ಲಿ  ತುಂಬಾ ಜಾಗರೂಕತೆ ಯಿಂದ ಹೆಜ್ಜೆ ಇಡುತ್ತಾನೆ. ನಮಾಝ್ ಮಾಡಲು ಬಾಗ್ಯ ಲಬಿಸಿದವನು ಧನ್ಯನು.
ISLAMIC KANNADA

Sunday, June 14, 2020

ನಿಮ್ಮ ಹೆಂಡತಿಯೊಂದಿಗಿನ ನಿಮ್ಮ ಸಂಬಂಧ

ಪ್ರತಿಯೊಂದು ಗಂಡ ಹೆಂಡತಿಯರು ಕೇಳಲೇಬೇಕಾದ ಒಂದು ಅದ್ಭುತ ವಾದ ಸಂದೇಶ ನಿಮ್ಮ ಮುಂದಿಡಲು ಬಯಸುವೆನು  ನೀವು ನನ್ನ ಈ ಮಾತನ್ನು ಶಾಂತವಾಗಿ ಕೇಳಿ ಪ್ರೀತಿಯ  ಸಲಹೆಯ ದ್ವಾರ ಗಳಿಂದ  ಸಂದೇಶ ನಿಮಗೂ ಕುಟುಂಬದವರಿಗೂ   ಯುವಕ ಯುವತಿಯರು ವಿಚ್ಛೇದನ ಪಡೆದವರು ಮದುವೆ ಯಾದವರು ತಂದೆ ತಾಯಿ ಅಜ್ಜ ಅಜ್ಜಿ ಯಾವರಿಗೂ ನನ್ನ ಸಲಹೆ ಗಳು ನಿಮಗೆ ಪ್ರಯೋಜನ ವಾದರೆ ನಿಮ್ಮ ಜೀವನದಲ್ಲಿ ಅಳವಡಿಸಿ ನೀವು ನನ್ನನ್ನು ತಿರಸ್ಕರಿಸಲೂ ಬಹುದು  ನಾನು ನನ್ನ ಮಾತು ಅದು ಕುರ್ಆನ್ ಎಂದು ವಾದಿಸುವುದಿಲ್ಲ  ಎಲ್ಲವೂ    ಸದಾಚಾರ ವಾಗಿದೆ ನಮ್ಮಲ್ಲಿ ಪ್ರತಿಯೊಬ್ಬರೂ ನಕ್ಷತ್ರ ಗಳ ಹಾಗೆ ಅದಕ್ಕೆ   ಗೋಚರಿಸುವ ಒಂದು  ಅಂಶವನ್ನು ಹೊಂದಿದ್ದಾರೆ . ಒಂಬತ್ತು ವೈರುಧ್ಯ    ಕಾರ್ಯಗಳು  ಪ್ರತಿಯೊಂದು  ಸಂಬಂಧ ಗಳಲ್ಲಿ  ಇರುತ್ತದೆ  ಯಾವತ್ತೂ ಮಾಡಬೇಡಿ    ಸ್ವರ್ಗೀಯ  ಜೀವನ ಸಿಗಲ್ಲ ಅದು ಬರೇ ಧಾರಾವಾಹಿ ಗಳಲ್ಲಿ ಮಾತ್ರ  ಲಭ್ಯವಿದೆ    ಅದರೆ ಸತ್ಯಾಂಶ ನಮ್ಮಲ್ಲಿ ನರಕ ಜೀವನವು ಸ್ವರ್ಗೀಯ ಜೀವನವು ಇದೆ ಮತ್ತು ಸ್ವಅಭಿಪ್ರಾಯ ಜೀವನ   ಬಹಳ ವಿದೆ    ಉದಾಹರಣೆಗೆ ಬೆಳಿಗ್ಗೆ ನಾವು ಮುಗುಳ್ನಗುತ್ತೇವೆ ಸಾಯಂಕಾಲ ಅಳುತ್ತೇವೆ ಯಾವ ಕಾರಣದಿಂದ ಬೆಳಿಗ್ಗೆ ನಗೆ ಆಡಿದೆವೆಯೋ ಅದಕ್ಕಾಗಿ ಅಳುತ್ತಿದ್ದೇವೆ ಇದಾಗಿರುತ್ತದೆ ಜೀವನ ಬೆಳಿಗ್ಗೆ ಬೆಲೆ ಬಾಳುವ ವಸ್ತು ಕರೀದಿಸಿ ಸಾಯಂಕಾಲ ಪಶ್ಚಾತ್ತಾಪ ಪಡುವುದುಂಟು ನಾವು ನಮ್ಮ ಮನಸ್ಸಿನೊಂದಿಗೆ ವಿಭಿನ್ನ ವಾಗಿದ್ದೇವೆ ಕೆಲವೊಮ್ಮೆ ಆಹಾರ ತಯಾರಿಸಿ ಊಟ ಮಾಡಲು ನಾವು ಸಿದ್ದರಿಲ್ಲ ಕಾರಣ ಮನಸ್ಸಿಲ್ಲ ಯಾರೂ ಹೇಳಲು ಸಾಧ್ಯವಿಲ್ಲ ನಾನು ವಿಭಿನ್ನ ಅಲ್ಲ ಎಂದು ಕೆಲವೊಮ್ಮೆ ವೇಗ ವಾಗಿ ನಡೆಯುತ್ತೇವೆ ಕೆಲವೊಮ್ಮೆ ನಿಧಾನ  ವಾಗುತ್ತೇವೆ    ಜೀವನದಲ್ಲಿ ಪತಿ ಪತ್ನಿಯರ ಮದ್ಯೆ ವೈರಾಗ್ಯ ಉಂಟಾದರೆ ಕೆಂಪು ಗೆರೆಯೊಂದು ಎಳೆದು ಬಿಡಿರಿ ಅದರ ಹತ್ತಿರ ಹೋಗದಿರಿ    ನಿಮ್ಮ ಹಾಗು ನಿಮ್ಮ ಪತ್ನಿಯ ರಲ್ಲಿ ಸಂಬವಿಸಿದರೆ ಅನಾಹುತ ಆಗ ಬಹುದು ನಿಮ್ಮ ಮದ್ಯೆ ಜಗಳ ಆಗುವ ಸಂದರ್ಭಗಳಲ್ಲಿ ಸೂಕ್ಷಿಸಿರಿ
ಗಂಡ ಹೆಂಡತಿ ಯರ ಮದ್ಯೆ ಜಗಳ ವಾದರೆ ಈ ಒಂಬತ್ತು ಕಾರ್ಯಗಳಿಂದ ದೂರವಿರಿ ಮೊಟ್ಟ ಮೊದಲಿಗೆ ವಿಚ್ಛೇದನ ನಿಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೆ ಅದನ್ನು ಮನಸ್ಸಿನಿಂದ ತೊಲಗಿಸಿ ಎರಡನೆಯದು ಒಡೆತ ಆಗಿದೆ ಇದರಿಂದ ಕೂಡ ತ್ಯಜಿಸಿರಿ ಮೂರನೆಯದು ಪ್ರತ್ಯೇಕವಾಗಿ ಹೆಂಗಸರಿಗೆ ಜಗಳ ಆದ ಸಮಯದಲ್ಲಿ ಪ್ರಾರ್ತಿಸಿರಿ ಇದು ಗಂಡಂದಿರಿಗೂ ಅನ್ವಯ ನಾಲ್ಕನೆಯದು ದಯವಿಟ್ಟು ಕಳೆದು ಹೋದ ವಿಷಯ ಗಳನ್ನು ಪುನಃ ಆವರ್ತಿಸಬೇಡಿ ಐದನೆಯದು ಮಕ್ಕಳನ್ನು ಗಂಡ ಹೆಂಡತಿ ಯರ ಜಗಳದ ಮದ್ಯೆ ತರಬೇಡಿ ಆರನೆಯದು ಪ್ರತ್ಯೇಕ ವಾದದ್ದು ನಿಮ್ಮ ಜಗಳವನ್ನು ನಿಮ್ಮ ಕುಟುಂಬದವರಿಗೆ ವಿಸ್ತರಿಸಬೇಡಿ ತಂದೆ ತಾಯಿ ಅಕ್ಕ ತಂಗಿಯರಿಗೆ ತಿಳಿಸಬೇಡಿ ಏಳನೆಯದು ಗಂಡ ಹೆಂಡತಿ ಯರು ಒಬ್ಬರಿಗೊಬ್ಬರು ಆರೋಪಿಸಬೇಡಿ ಆರೋಪಿಸು ವುದರಿಂದ ದೂರವಿರಿ ಎಂಟನೆಯದು ಪ್ರತೇಕ ವಾದದ್ದು ನೀವು ಪರಸ್ಪರ ತಪ್ಪು ಪದಗಳನ್ನು ಆಡಲೇ ಬೇಡಿ ದೂಷಿಸುವುದರಿಂದ ಜಗಳ ಜಾಸ್ತಿ ಆಗುವುದಲ್ಲದೇ ಕಮ್ಮಿ ಆಗುವುದಿಲ್ಲ ಒಂಬತ್ತನೆಯದು ಕೊನೆಯದು ಪ್ರತ್ಯೇಕ ವಾಗಿ ಹೆಂಗಸರಿಗೆ ಗಂಡ ಹೆಂಡತಿಯ ಜಗಳದ ಸಮಯದಲ್ಲಿ ಗಂಡನ ಮನೆಯಿಂದ ಹೊರಟು ಹೋಗಬೇಡಿ ಇದರಿಂದ ಪ್ರಶ್ನೆ ಗಳು ಜಾಸ್ತಿ ಆಗುವುದಲ್ಲದೆ ಕಡಿಮೆ ಆಗುವುದಿಲ್ಲ ಈ ಒಂಬತ್ತು ಕಾರ್ಯಗಳು ಜಗಳದ ಸಮಯದಲ್ಲಿ ಮಾಡಿದರೆ ದೊಡ್ಡ ಅನಾಹುತಕ್ಕೆ ಒಳಗಾಗುವಿರಿ 
ಸೂಕ್ಷಿಸಿ ಜೀವಿಸಿ ಜೀವನವನ್ನು ಸ್ವರ್ಗೀಯ ಜೀವನ ವಾಗಿರಿಸಿ
MUSTHAFA HASAN ALI KHAN ALQADRI...

Saturday, June 13, 2020

ತಂದೆ ತಾಯಿಯ ಸೇವೆ ಯಲ್ಲಿ ಜಗತ್ಪ್ರಸಿದ್ದ ರಾದ ಮಹಾನ್-:

ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم 
ರವರ ಬಳಿ ಒಬ್ಬರು ಬಂದು ಹೇಳಿದರು ರಸೂಲರೆ ನಾನು ಜಿಹಾದ್ ಮಾಡಲು ಹೊರಡ ಬೇಕೆಂದಿದ್ದೇನೆ ತಾವು ನನಗೆ ಅನುಮತಿ ನೀಡಿ ಎಂದರು ಆವಾಗ ಪ್ರವಾದಿ ಯವರು ಕೇಳಿದರು ನಿನ್ನ ತಂದೆ ತಾಯಿ ಜೀವಂತವಾಗಿ ಇದ್ದಾರೆಯೇ ಎಂದು ಕೇಳಿದಾಗ ಆ ಮನುಷ್ಯ ಹೌದು ಎಂದು ಉತ್ತರಿಸಿದರು ಆವಾಗ ಪ್ರವಾದಿ ಯವರು ಹೇಳಿದರು  ففيهنا فجاهد 
ಅವರಿಬ್ಫರ ಸೇವೆ ಮಾಡು ಅದು ನಿನ್ನ ಜಿಹಾದ್ ಆಗಿದೆ ಎಂದರು ತಂದೆ ತಾಯಿ ಯವರು ಕಷ್ಟ ದಿಂದಿರುವಾಗ ಅವರಿಗೆ ಸಹಾಯಿ ಆಗ ಬೇಕಾದವನು ದೀನಿ ಬೋಧನೆ ಅಥವಾ ಅವುಲಿಯಾ ಗಳ ಸನ್ನಿದಿಯಲ್ಲಿ ನೀನು ಕಾಲ ಕಳೆದರೆ ಅಲ್ಲಾಹನು ಯಾವಾಗಲೂ ತ್ರಪ್ತಿ ಪಡಲಾರನು ಪ್ರವಾದಿ ಯವರು  ಶ್ರೇಷ್ಠವಾದ  ಅಲ್ಲಾಹನ ದಾಸ ಆಗಿದ್ದಾರೆ ಅವರಲ್ಲದೆ  ಈ ಲೋಕದಲ್ಲಿ ಬೇರೆ ಯಾರಿದ್ದಾರೆ ಆದರೆ ಯಮನ್ ನಲ್ಲಿರುವ ಉವೈಸ್ ಕರ್ನಿ ಅಲ್ಲಾಹನ ರಸೂಲರ ಬಳಿ ಬರಲಿಲ್ಲ ಪ್ರವಾದಿ ಯವರು ತನ್ನ ಉಡುಪಿನ ಮೊದಲ ಬಟನ್ ಅನ್ನು ತೆರೆದಿಟ್ಟು ಹೇಳುತ್ತಾರೆ ಯಮನ್ ಕಡೆ ತನ್ನ ಮುಖವನ್ನು ತಿರುಗಿಸಿ ನೀಳವಾದ ಸ್ವಾಸವನ್ನು ಎಳೆದು ಹೇಳಿದರು ನಾನು ರಹ್ಭಾನ್ ನ ಸುಗಂಧ ಅಸ್ವಾದಿಸುತ್ತಿದ್ದೇನೆ  ಒಮ್ಮೆ ಪ್ರವಾದಿ ಯವರ ಅನುಯಾಯಿ ಗಳು ಕೇಳಿದರು ತಾವು ಯಾವಾಗಲೂ ಆ ಸುಗಂಧ ಗಾಳಿ ಅಸ್ವಾದಿಸುತ್ತೀರಿ ಆ ಮನುಷ್ಯನು ಕೂಡ ನಿಮ್ಮನ್ನು ತುಂಬಾ ಪ್ರೀತಿಸ ಬಹುದಲ್ಲವೆ ಎಂದು ಕೇಳಿದಾಗ ಪ್ರವಾದಿ ಯವರು ಹೇಳಿದರು ಹೌದು ನನ್ನನ್ನು  ತುಂಬಾ ಷ್ರೀತಿಸುತ್ತಾರೆ ಎಂದರು ಆವಾಗ ಅನುಯಾಯಿಗಳು ಹೇಳುತ್ತಾರೆ ರಸೂಲರೆ ನಿಮ್ಮ ಪ್ರೀತಿಯಲ್ಲಿ   ಬಿಲಾಲ್ ಆಫ್ರಿಕದ ಹಬಷಾ ದಿಂದ ಬಂದರು ಸಲ್ಮಾನ್  ಫಾರಿಸ್ ನಿಂದ ಬಂದರು ಶುಹೈಬ್ ರೋಮನ್ ನಿಂದ ಬಂದರು ಇವರು ಯಮನ್ ನಿಂದ ಬರಲು ಸಾದ್ಯ ವಾಗಲಿಲ್ಲವೇ ಆವಾಗ ಪ್ರವಾದಿ ಯವರು ಹೇಳಿದರು ಉವೈಸ್ ಗೆ ವಯಸ್ಸಾದ ಕುರುಡಿಯೂ ಆದ ಒಬ್ಬ ತಾಯಿ ಇದ್ದಾರೆ ಅವರ ಸೇವೆ ಅವರನ್ನು ಇಲ್ಲಿಗೆ ಬರುವುದನ್ನು ತಡೆಯುತ್ತದೆ ಎಂದರು ಉವೈಸ್ ಕರ್ನಿ   رضي الله عنه 
ಪ್ರವಾದಿ ಯವರನ್ನು ಕಾಣಲಾಗಲಿಲ್ಲ ಆದರೆ ಖೈರು ತಾಬಿಯೀನ್ ಎಂದೇ ಹೆಸರು ವಾಸಿ ಯಾದರು ಅವರು ಬರಲಿಲ್ಲ ಆದರೆ ಪ್ರವಾದಿ ಯವರು ಅವರ ನೆನಪಿನಲ್ಲಿ ದುಖಿತರಾಗಿದ್ದಾರೆ ಪ್ರವಾದಿ ಯವರು ಹೇಳುತ್ತಾರೆ ಯಾರಾದರು ಹೋಗಿ ಉವೈಸ್ ನನ್ನ ಭೇಟಿಯಾಗಿ ಈ ಉಮ್ಮತ್ತಿನ ಪಾಪ ವಿಮೋಚನೆ ಗಾಗಿ ಪ್ರಾರ್ತಿಸಲು  ತಿಳಿಸಿ ಎಂದರು ತಂದೆ ತಾಯಿಯ ಸೇವೆ ಯಲ್ಲಿ ತನ್ನನ್ನು ತಾನು ಪೂರ್ಣ ವಾಗಿ ಅರ್ಪಿತನಾದವನ ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಎಂದು ಇದರಿಂದ ಕಚಿತ ವಾಯಿತು  ಒಂದು ರಿಪೋರ್ಟಿನ ಪ್ರಕಾರ ಒಬ್ಬ ಪ್ರತೀದಿನ ತನ್ನ ತಂದೆ ತಾಯಿಯವರಿಗಾಗಿ ಪ್ರಾರ್ಥಿಸಿದರೆ ಜೀವಂತ ವಾಗಿದ್ದರೂ ಮರಣ ಹೊಂದಿದರೂ ಈ ಕೆಲಸ ವನ್ನು ರೂಡಿಯಾಗಿಸಿದರೆ ಅವನ ರಿಝ್ಕ್ ನಲ್ಲಿ ಯಾವಾಗಲು ಬರ್ಕತ್ ಇರುತ್ತದೆ ಸದಾ  ತಂದೆ ತಾಯಿಯವರಿಗೆ ಪ್ರಾರ್ಥಿಸದವನು ಅಲ್ಲಾಹನ ಅನುಗ್ರಹ ಗಳಿಂದ ವಂಚಿತ ನಾಗುತ್ತಾನೆ
ISLAMIC KANNADA

Friday, June 12, 2020

ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ-The Rights of Relatives and Neighbors

ನಮ್ಮ ಸಮಾಜದಲ್ಲಿ ಕೆಲವರ ಅಭಿಪ್ರಾಯ ಹೀಗಿರುತ್ತದೆ  ನಾನು ಅಲ್ಲಾಹನ ಸ್ರಷ್ಟಿಗಳ ಸಹಾಯ ಮಾಡುತ್ತಿದ್ದೇನೆ ಅವರ ಕಷ್ಟ ಸುಖಗಳಲ್ಲಿ ನಾನು ಎಡೆ ಇಲ್ಲದೆ ಕಾರ್ಯ ನಿರತ ನಾಗಿದ್ದೇನೆ ನಾನು ಹಜ್ ಕರ್ಮ ಕೂಡ ನಿರ್ವಹಿಸಲಿಲ್ಲ ಅದರ ಹಣವನ್ನು ಬಡವರಿಗೆ ಧಾನ ಮಾಡಿದೆನು. ಜನರ ಮಧ್ಯೆ ಪ್ರಚಾರ ಮಾಡುತ್ತಾರೆ ಏನೆಂದರೆ ಕುರ್ಬಾನಿ ಮಾಡುವ ಹಣ ಕೂಡ ಬಡವರಿಗೆ ನೀಡಿದರೆ ಬಡವರಿಗೆ ನೆರವಾಗ ಬಹುದು ಅವರು ಜನರಿಗೆ ಸಹಾಯ ಮಾಡುವ ಭರದಲ್ಲಿ  ಇಸ್ಲಾಮಿನ ಸ್ಥಂಭ ಗಳನ್ನು   ಶರೀಅತಿನ ನಿಯಮ ವನ್ನು  ಅವಹೇಳಿ ಸುವರು. ಅಲ್ಲಾಹನ ಆರಾದನೆ ಯಲ್ಲಿ ತೊಡಗಿ ಕೊಂಡವರಿಗೆ ತನ್ನ ನೆರೆ ಹೊರೆಯವರನ್ನು ನೋಡುವ ಅವಕಾಶ ಕೂಡ ದೊರಕುವುದಿಲ್ಲ ನಿಮಗೆ ತಿಳಿದಿದೆಯೇ ಅಲ್ಲಾಹನು ಒಂದು ಗ್ರಾಮ  ವನ್ನು ನಾಶ ಮಾಡಲು ಇಚ್ಚಿಸಿದಾಗ ಆವಾಗ ಮಲಕ್ ಗಳೊಡನೆ  ಹೇಳಲಾಯಿತು ಈ ಗ್ರಾಮದಲ್ಲಿ ಒಬ್ಬ ನನ್ನ ಆರಾಧಕ ಇದ್ದಾನೆ ಪ್ರತಿ ಸಮಯದಲ್ಲಿಯೂ ಅವನು ನನಗೆ    ಸಾಷ್ಟಾಂಗ ದಲ್ಲಿ  ಕಳೆಯುವವನಾಗಿದ್ದಾನೆ ಅಲ್ಲಾಹು ಹೇಳುತ್ತಾನೆ  ಅವನ ನೆರೆ ಮನೆಯ ರಲ್ಲಿ  ನನ್ನ ದಾಸರು ಕಷ್ಟ ಗಳಿಂದ ಜೀವಿಸುತ್ತಿರುವಾಗ ಅವರ ಕಡೆ ತಿರುಗಿ ಕೂಡ ನೋಡದೆ ಇವನಿಗೆ ಕಿಂಚಿತ್ತೂ ಅವರ ಬಗ್ಗೆ ಕಾಳಜಿ ಇಲ್ಲದೇ ಬರೇ ಆರಾಧನೆ ಯಲ್ಲಿಯೇ ಜೀವಿಸುತ್ತಾನೆ ಆವಾಗ ಅಲ್ಲಾಹನು ಹೇಳುತ್ತಾನೆ  ಆ ಗ್ರಾಮ ಸಮೇತ ಇವನನ್ನು ಕೂಡ  ನಾಶ ಗೊಳಿಸಿರಿ ಎಂದು ಮಲಕ್ ಗಳಿಗೆ ಆಜ್ಞೆ ನೀಡುವನು ಅಲ್ಲಾಹನಿಗೆ ಆರಾಧನೆ ಯಲ್ಲಿ ಮಗ್ನರಾದರೆ ತನ್ನ ನೆರೆ ಮನೆಯವರನ್ನು ಕೂಡ ವಿಚಾರಿಸಿರಿ ಪ್ರವಾದಿ ಮುಹಮ್ಮದ್ ಮುಸ್ತಫಾ صلي الله عليه وسلم  ರವರ ಪ್ರೀತಿಯಲ್ಲಿ ಅವರ ಅನುಯಾಯಿಗಳು ಹಲವು ತರಹದ ಪ್ರೀತಿಯನ್ನು ಪ್ರಕಟಿಸುತ್ತಿದ್ದರು ಅವರು ವುಲೂ (ಅಂಗಶುದ್ದಿ)ಮಾಡಿದ ನೀರನ್ನು ಕೂಡ ಬರ್ಕತ್ ಗಾಗಿ ಸೂಕ್ಷಿಸುತ್ತಿದ್ದರು ಆವಾಗ ಪ್ರವಾದಿ ಕೇಳಿದರು ನಿಮಗೆ ಹೀಗೆ ಮಾಡಲು ಯಾರು ಕಲ್ಪಿಸಿದರು ಆವಾಗ ಅನುಯಾಯಿಗಳು ಹೇಳುವರು ಓ ಪ್ರವಾದಿ ಯವರೆ  ಇದು ನಮ್ಮ ನಿಮ್ಮ ಮೇಲಿರುವ ಪ್ರೀತಿಯ ಸಂಕೇತ ವಾಗಿದೆ ಎಂದು. ಆದರೆ ಪ್ರವಾದಿ ಯವರು ಅದನ್ನು ನಿಶೇದಿಸಲಿಲ್ಲ      ಆವಾಗ ಪ್ರವಾದಿ ಯವರು ಹೇಳುತ್ತಾರೆ ನಿಮ್ಮಲ್ಲಿ ಯಾರಾದರೂ ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸಲು ಯೋಚಿಸಿದರೆ ಮತ್ತು ಅಲ್ಲಾಹು ಹಾಗು ಅವನ ರಸೂಲ್ ಅವರನ್ನು ಪ್ರೀತಿಸ ಬೇಕೆಂದರೆ ನೆರೆ ಮನೆಯವರ ಹಕ್ಕು ಬಾದ್ಯತೆ ಗಳನ್ನು ಪೂರೈಸಿರಿ ನಿಮ್ಮ ಮನೆಯಲ್ಲಿ ಪ್ರವಾದಿ ಯವರ ಗುಣಗಾನ ನಡೆಸಲಾಗುತ್ತದೆ ಆದರೆ ನೆರೆ   ಮನೆಯವನ ಮನೆಯಲ್ಲಿ ಕತ್ತಲೆ ಯಾಗಿದ್ದರೆ ನೀವು ಈ ವರ್ಷ ಸಮಾರಂಭ ಮಾಡಲಾಗದೆ ನೆರೆ ಮನೆಯವರ ವಿದ್ಯುತ್ ಬಿಲ್ ನೀವು ಪಾವತಿಸಿದರೆ ರಸೂಲರು ನಿಮ್ಮಿಂದ ಬಹಳ ಸಂತೋಷ ಪಡುವರು  ಆದರಿಂದ ಜೀವನದ   ಎರಡೂ   ಬಾಗ ವನ್ನು ಸಮಾನ ವಾಗಿರಿಸಿ ಬರೇ ಆರಾಧನೆಯ ನೆಪದಲ್ಲಿ ನೀವು ನೆರೆ ಮನೆಯವರ ಸಂಬಂಧಿಗಳ ಹಕ್ಕು ಬಾದ್ಯತೆ ಗಳನ್ನು ಮರೆಯದಿರಿ ಅಥವಾ ಜನರ ಸಹಾಯದ ಹೆಸರಿನಲ್ಲಿ ಶರೀಅತಿನ ನಿಯಮ ಗಳನ್ನು ಹಿಯಾಳಿಸಿರಿ )

وَكَذَٰلِكَ جَعَلْنَاكُمْ أُمَّةً وَسَطًا 
ನಿಮ್ಮನ್ನು ನಾವು ಒಂದು ಮಧ್ಯಮ ಸಮುದಾಯವಾಗಿಸಿದ್ದೇವೆ)
ನೀವು ನಿಮ್ಮ ಜೀವನವನ್ನು ಮಧ್ಯಮ ವರ್ಗದಲ್ಲಿಡಿ 
ನಿಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಅಲ್ಲಾಹು ಸ್ಪಂದಿಸುವನ
ISLAMIC KANNADA

Wednesday, June 10, 2020

ಪ್ರವಾದಿ ರವರ ಸೌಂದರ್ಯ-The Beauty of Prophet Muhammad

ಮಕ್ಕಳಿಗೆ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم 
ರವರ ಸೌಂದರ್ಯದ   ಆತ್ಮೀಯತೆಯ  ಉತ್ತಮ ವರ್ತನೆಯ  ಉಲ್ಲೇಖ ತಿಳಿಸಿರಿ ಮನುಷ್ಯನ ಪ್ರಕ್ರತಿ ಯಲ್ಲಿ ಇರುವ ವಿಷಯ ಅದು ಮನುಷ್ಯನು ಸೌಂದರ್ಯದ ಕಡೆಗೆ ಸೆಳೆಯುವನು ಅದು ಪುಷ್ಪ ಗಳ ದಯೆ ಯಾಗಲಿ ಕಥೆಗಾರನ ವರ್ಣನೆಗಳಾಗಲಿ ಬೇಸಿಗೆಯ ಕಾರ್ಮೋಡ ಗಳಾಗಲಿ ಅಥವಾ ಗರುಡನ ಚಿಮ್ಮಿದ ಕಣ್ಣು ಗಳಿಂದಾಗಲಿ ಕೋಗಿಲೆಯ ಮಧುರ ಕಂಟ ಕೂಗಿನಲ್ಲಾಗಲಿ ಸೌಂದರ್ಯ ಎಲ್ಲೇ ಇರಲಿ ಹೇಗೆಯೇ ಇರಲಿ ಮನಸ್ಸಿನಲ್ಲಿ ತ್ರಪ್ತಿ ಉಂಟಾಗುತ್ತದೆ ಮನುಷ್ಯನು ಸ್ವಾಭಾವಿಕ ವಾಗಿ ಸೌಂದರ್ಯದ ಕಡೆಗೆ ಎಸೆಯಲ್ಪಡುತ್ತಾನೆ ಎಂದರೆ ಅವನು ಲೋಕ ನಾಯಕ ರಾದ ಪ್ರವಾದಿ ಮಹಮ್ಮದ್ ಮುಸ್ತಫ صلي الله عليه وسلم 
ರವರ ಕಡೆಗೆ ತನ್ನ ಮನಸ್ಸನ್ನು ತಿರುಗಿಸಲಿ ಲೋಕದಲ್ಲಿ ಸೌಂದರ್ಯ ಎಲ್ಲಾ ಕಡೆ ಇರ ಬಹುದು ಆದರೆ ಪ್ರವಾದಿ ಯವರಿಗೆ ನೀಡಲ್ಪಟ್ಟ ಸೌಂದರ್ಯ ನಾನು ವರ್ಣಿಸಲಾರೆನು ಪ್ರವಾದಿ ಯವರ ಕಾಲಡಿ ಯಲ್ಲಿರುವ  ಸೌಂದರ್ಯ ಕಾಲಡಿಯ ದೂಳಿನಿಂದ ಹೊರಡುವ ಆ ಸೌಂದರ್ಯ ನಕ್ಷತ್ರಪುಂಜ ಗಳಲ್ಲಿಯೂ ಸಿಗಲಾರವು ಬೀವಿ ಮೈಮೂನ ಬಿಂತ್ ಕರ್ದಮ್ رضي الله عنها 
ವಿವರಿಸುತ್ತಾರೆ ನನಗೆ ಪ್ರವಾದಿ ಮುಹಮ್ಮದ್ ಮುಸ್ತಫ  صلي الله عليه و سلم 
ರವರನ್ನು ನೋಡಲು ಆಸೆ ಆಯಿತು ನಾನು ನನ್ನ ತಂದೆಯೊಡನೆ ಪ್ರವಾದಿ ಯವರನ್ನು ನೋಡಲು ಹೊರಟೆ ಪ್ರವಾದಿ ಯವರು ಒಂಟೆಯ ಮೇಲೆ ಸವಾರಿ ಯಾಗಿದ್ದರು ಅವರ ಮುಖದಲ್ಲಿ ಸೌಂದರ್ಯ ವನ್ನು ನೋಡುತ್ತಾ ನನ್ನ ಕಣ್ಣುಗಳು ನೋಡುತ್ತಲೇ ಇತ್ತು ನನಗೆ ಅವರ ಸೌಂದರ್ಯ ನೋಡಲು ಸಾದ್ಯ ವಾಗಲಾಲಿಲ್ಲ   ನಾನು ನನ್ನ ದ್ರಷ್ಟಿಯನ್ನು ಅದಬ್  (ಮರ್ಯಾದೆ) ನಿಂದ ಕೆಳಗಿಳಿಸಿದೆ ನಾನು ಪ್ರವಾದಿ ಯವರ ಸೌಂದರ್ಯ ವನ್ನು ನೋಡದೆ ನನ್ನ ಕಣ್ಣುಗಳು ಅವರ ಪಾದದ ಕಡೆ ಬೀಸಿದವು ಬೀವಿ ಮೈಮೂನ 
رضي الله عنها 
ಹೇಳುತ್ತಾರೆ ಪ್ರವಾದಿ ಯವರ  ಕಾಲಿನ  ಬೆರಳಿನ ಸೌಂದರ್ಯ ವನ್ನು ನೋಡುತ್ತಾ ನೋಡುತ್ತಾ ಇಂದಿಗೂ ಆ ದ್ರಷ್ಯ ನನ್ನ ಮನಸ್ಸಿನಿಂದ ಇಳಿಯಲಿಲ್ಲ ಇದುವರೆಗೂ ಆ ನೆನಪು ಸದಾ ಭಾಕಿಯಾಗಿದೆ ಅವರ ಬೆರಳಿನ ಸೌಂದರ್ಯ ಇದಾದರೆ ಅವರ ಮುಖದ ಸೌಂದರ್ಯ ಹೇಗಿರ ಬಹುದು ನಿಮ್ಮ ಮಕ್ಕಳಿಗೆ ಪ್ರವಾದಿ ಯವರ ಪ್ರೀತಿ ಕಲಿಸಿ ಅವರಿಗೆ ಪ್ರವಾದಿ ಯವರ ಸೌಂದರ್ಯ ವಿವರಿಸಿ ಇದು ಪ್ರವಾದಿ ಯವರ ಸೌಂದರ್ಯದ ಒಂದು ಅಂಶ ಮಾತ್ರ ವಾಗಿದೆ ಇದು ಬರೇ ಬೆರಳಿನ ಸೌಂದರ್ಯದ ವಿವರ ವಾಗಿತ್ತು ಆ ಪ್ರಕಾಶಿಸುವ ಮುಖದ ವರ್ಣನೆ ಇನ್ನೂ ಮಾಡಲಿಲ್ಲ ಕೇಶದ ವರ್ಣನೆ ಆಗಲಿಲ್ಲ ಅಂಗಾಂಗಗಳು ಇನ್ನೂ ಬಾಕಿ ಇವೆ ಇಷ್ಟು ಕೇಳುವಾಗಲೇ ನಿಮ್ಮ( ಈಮಾನ್)ವಿಶ್ವಾಸದ ಈ ಪರಿ ಆದರೆ ಇನ್ನು ಪ್ರವಾದಿ ಯವರ ಶರೀರದ ಸೌಂದರ್ಯದ ಆ ವರ್ಣನೆ ಹೇಗಿರಬೇಕು.
ISLAMIC KANNADA

Tuesday, June 9, 2020

ಬೀವಿ ಝೈನಬಾ ರವರ ಸಹಿಷ್ಣುತೆ ಯಾಗಿದೆ ಈ ಧುಖ ಬರಿತ ಕಾರವಾನ್ - Patience in Islam - The Story of Zainab bint Muhammad ...

ಕರ್ಬಲಾ ಯುದ್ಧ ಭೂಮಿಯಲ್ಲಿ ನಡೆದ ಒಂದು ಘಟನೆ ಮಹಿಳೆಯರಿಗೆ ಅತ್ಯಂತ ರೋಚಕ ವಾದ ಸಂದರ್ಭ ವಾಗಿದೆ ಅದು ಬೀವಿ ಝೈನಬಾ   رضي الله عنها   ರವರ ಸಹಿಷ್ಣುತೆ  ಯಾಗಿದೆ ಈ ಧುಖ ಬರಿತ ಕಾರವಾನ್ ವನ್ನು ಒಂದು ಗೂಡಿಸಿ ಕೂಫ ವರೆಗೂ ಮತ್ತು ಅಲ್ಲಿಂದ ಕಾದಿಸಿಯ್ಯ ಮತ್ತು ಅಲ್ಲಿಂದ ದಿಮಿಷ್ಕ್ ಮತ್ತು ಅಲ್ಲಿಂದ ಮದೀನತ್  ರಸೂಲುಲ್ಲಾಹ್ ವರೆಗೆ ತಲುಪುವುದು ಅವರಿಗೆ ನಾಯಕತ್ವ ನೀಡುವುದು ಅವರಿಗೆ ಅವಶ್ಯ ಸಾಮಾಗ್ರಿ ಗಳನ್ನು ಒದಗಿಸುವುದು ತುಂಬಾ ಕಷ್ಟ ಕರ ವಾದ ವಿಷಯ ವಾಗಿತ್ತು ಮಹಿಳೆಯರ ಸ್ತಾನಮಾನ ಇಸ್ಲಾಮಿನಲ್ಲಿ  ಮತ್ತು  ಮಹಾನ್  ಪುರುಷರ ಬಾಲ್ಯದಲ್ಲಿ ಅವರನ್ನು ಬೆಳೆಸುವ ಆ ಸಮಯ ತುಂಬಾ ವಿಶೇಷವಾದವು ಮೂಸಾ ನಬಿ عليه السلام 
ರವರ ಚರಿತ್ರೆಯನ್ನು ಓದಲು ಪ್ರಾರಂಭಿಸಿದರೆ ಮೊಟ್ಟ ಮೊದಲಿಗೆ ಅವರ ತಾಯಿಯಾದ  ಬೀವಿ  ಮರ್ಯಮ್ رضي الله عنها 
ರವರ ಹೆಸರು ಮುಂದೆ ಬರುತ್ತದೆ ಆ ಕಾಲದಲ್ಲಿ ಕ್ರೂರಿಯಾದ ಫಿರೋನ್ ಹುಟ್ಟಿದ ಮಕ್ಕಳನ್ನು ಕೊಂದು ಬಿಸಾಡುವ ಸಮಯ ದಲ್ಲಿ ಮೂಸಾ عليه السلام  ರವರ ಜೀವನ ಅಲ್ಲು ಚಲ್ಲಾಗಿರುತ್ತದೆ ಮೂಸಾ ರವರ ತಾಯಿಯಾದ ಮರ್ಯಮ್ ತನ್ನ ಕಂದಮ್ಮ ನನ್ನ ಒಂದು ಪೆಟ್ಟಿಗೆಯಲ್ಲಿ ಇಟ್ಟು ನೈಲ್ ನದಿಗೆ ಹಸ್ತಾಂತರಿಸುವ ಆ ದ್ರಷ್ಯ ಎಷ್ಟು ಕಠಿಣ ವಾಗಿರ ಬಹುದು ಮತ್ತೆ ನಂತರ ಮಗುವನ್ನು ತಾಯಿಯ ಮಡಿಲಿಗೆ ಕಳುಹಿಸಲ್ಪಡ ಲಾಗುತ್ತದೆ  ಈ  ಚರಿತ್ರೆಯನ್ನು ನೀವು ಅಲ್ಲಾಹನ ಪವಿತ್ರ ಗ್ರಂಥ ವಾದ ಕುರಾನ್ ನಲ್ಲಿ ಅನೇಕ ಸಲ ಓದಿರ ಬಹುದು ಅದೂ ಒಂದು ಮಹಿಳೆಯ ಸಾಧನೆ ಆಗಿತ್ತು .ಹಾಜರ ಬೀವಿ رضي الله عنها
ತನ್ನ ಪತಿಯನ್ನು ಬಿಟ್ಟು ಒಂಟಿಯಾಗಿದ್ದ ಸಮಯದಲ್ಲಿ ಯಾವ ತರಹ ತನ್ನ ಮಗನಾದ ಇಸ್ಮಾಯಿಲ್  عليه السلام 
ರವರನ್ನು ಬೆಳೆಸಿದರು ಆ ನಿರ್ಜನ ವಾದ ಕಾಡಿನೊಳಗೆ ಅವರ ಧೈರ್ಯಕ್ಕೆ ಸರಿ ಸಾಟಿ  ಇಂದಿಗೂ ಇಲ್ಲ ಅವರ ಆ ಚರಿತ್ರೆಯನ್ನು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚ ಅಕ್ಷರ ವಾಗಿ ಉಳಿದಿದೆ ಅವರೂ ಒಬ್ಬ ಮಹಿಳೆ ಯಾಗಿದ್ದರು ಆ ತಾಯಿ ಯಾಗಿದ್ದರು ತಂದೆಯ ಸ್ತಾನಮಾನ ವನ್ನು ಜಗಕ್ಕೆ ತಿಳಿಸಿ ಕೊಟ್ಟವರು ತಾಯಿ ತನ್ನ ಮಕ್ಕಳಿಗೆ ಗೌರವ ವನ್ನು ಕಲಿಸಿ ಕೊಟ್ಟಾಗ ಮಕ್ಕಳು ಲೋಕದ ನಾಯಕತ್ವ ವನ್ನು ಸ್ವೀಕರಿಸಲು ಮುಂದಾಗುವುದು ಈ ನನ್ನ ಮಾತನ್ನು ನೆನಪಿನಲ್ಲಿಡಿ ಮಹಿಳೆಯರ ಪಾತ್ರ ಇಸ್ಲಾಮಿನಲ್ಲಿ 
ಮರೆಯಲಾಗದ ಸವಿ ನೆನಪಾಗಿದೆ  ಪ್ರತಿಯೊಂದು ಸಫಲರಾದ ಪುರುಷರ ಹಿಂದೆ ಒಬ್ಬ ಮಹಿಳೆಯ ಕೈವಾಡ ಇದೆ ಎಂದು ಇಂದು ಹೇಳಲಾಗುತ್ತದೆ ಕರ್ಬಲಾ ಯುದ್ಧದ ಚರಿತ್ರೆ ಬೀವಿ    ಝೈನಬಾ   رضي الله عنها 
ರವರನ್ನು ನೆನೆಸದೆ ಆ ಚರಿತ್ರೆ ಪರಿಪೂರ್ಣ ವಾಗಲಾರವು  ಇಮಾಮ್ ಹುಸೈನ್ ಕರ್ಬಲಾ ಗೆದ್ದರು  ಝೈನಬಾ ರವರು ಶಾಮ್ ಗೆದ್ದರು ಝೈನಬಾ ರವರು ನಾಯಕತ್ವ ವನ್ನು ನಡೆಸಿದ ಆ ದ್ರಷ್ಯ ನಿಜಕ್ಕೂ ಅವರು ಅಲಿ ಯವರ ಪುತ್ರಿ ಯಾಗಿಯೂ  ಹಸನ್ ಹುಸೈನ್ ರವರ ಸಹೋದರಿಯಾಗಿಯೂ ನಿಭಾಯಿಸಿದರು ಪ್ರವಾದಿ صلي الله عليه وسلم 
ರವರ ರಕ್ತ
ವಾಗಿದೆ.  ಕರ್ಬಲಾ ಯುದ್ಧ ಭೂಮಿಯಲ್ಲಿ ನಡೆದ ಆ ಚರಿತ್ರೆಯನ್ನು ಯಾವಾಗಲೂ ನಾವು ಮರೆಯಕೂಡದು ಮಹಿಳೆಯರು ಯಾವಾಗ ವೆಲ್ಲ ತನ್ನ ಮುಂದಾಳುತ್ವ ವನ್ನು ಪ್ರದರ್ಶಿಸುತ್ತಾರೋ ಅಲ್ಲೆಲ್ಲ ಜನಾಂಗವೇ ಶ್ರಷ್ಟಿ ಯಾಗುವುದು ಕರ್ಬಲಾ ದಿಂದ ಮದೀನದ ವರೆಗೆ ಯಾವ ತರಹ ಜನರಿಗೆ ನಾಯಕಿ ಯಾಗಿ ತನ್ನ ಪರಿಚಯ ವನ್ನು ಲೋಕಕ್ಕೆ ಗುರುತು ಪಡಿಸಿ ಕೊಟ್ಟಿದ್ದು ಒಂದು ಸುಂದರ ವಾದ ಚರಿತ್ರೆಯಾಗಿದೆ.
ISLAMIC KANNADA

Monday, June 8, 2020

ನಾಲಿಗೆಯ ಹರಿತ ವಾದ ಮಾತಿನಿಂದಾಗುವ ಗಾಯ ಮಾಯ ವಾಗ ಲಾರವು.- Tongue Injury

ಶೈಖ್ ಸಹದಿ  رضي الله عنه   ಹೇಳುತ್ತಾರೆ  ಒಮ್ಮೆ  ನಾನು ನಿರ್ಜನ ವಾದ ಕಾಡಿನೊಳಗೆ ಇರುವಾಗ ಒಬ್ಬ ಚಿರತೆಯ ಮೇಲೆ ಸವಾರಿ ಯಾಗಿ ಕೈಯಲ್ಲಿ ಹಾವಿನ ಆಕಾರದ ಬೆತ್ತ ಹಿಡಿದುಕೊಂಡು  ನನ್ನ ಹತ್ತಿರ ಬಂದು ಒಮ್ಮೇಲೆ ನಿಂತು ಬಿಟ್ಟರು ನಾನು ಆಶ್ಚರ್ಯದಿಂದ ನೋಡಿದಾಗ ಆ ಮನುಷ್ಯ ಕೇಳಿದರು ಶೈಕ್ ಅವರೇ ನೀವು ಭಯ ಭೀತ ರಾಗಿದ್ದೀರ ಎಂದು  ಕೇಳಿದಾಗ ಶೈಕ್ ಸಹದಿ ಹೇಳಿದರು ನೀವು ಚಿರತೆ ಯಲ್ಲಿ ಸವಾರಿ ಮಾಡಿ ಅದ್ಭುತ ವಾದ ಬೆತ್ತ ಹಿಡಿದು ಬಂದರೆ ಭಯ ಭೀತಿ ಉಂಟಾಗುವುದಲ್ಲವೇ ಎಂದು ಹೇಳಿದಾಗ ಆ ಮನುಷ್ಯ ಮುಗುಳ್ನಗುತ್ತ ಹೇಳಿದರು ಸಹದಿ ನೀನು ಅಲ್ಲಾಹನದಾಗು ಅಲ್ಲಾಹು ನಿನ್ನ ದಾಗುವನು ಎಂದರು ಪ್ರವಾದಿ  صلي الله عليه وسلم   ರವರು ಒಮ್ಮೆ ಒಂದು ಹಾವನ್ನು ನೋಡಿದರು ಅದು ತನ್ನ ಬಿಲದಿಂದ ಹೊರಗೆ ಬಂದು ಮತ್ತೋಮ್ಮೆ ಒಳಗೆ ನುಗ್ಗಲು ಪ್ರಯತ್ನ ಪಡುತ್ತಿತ್ತು ಆದರೆ ಅದರಿಂದ ಒಳಗೆ ನುಗ್ಗಲು  ಸಾಧ್ಯ ವಾಗಲಿಲ್ಲ  ಆವಾಗ ಪ್ರವಾದಿ ಯವರು ಅಲ್ಲಾಹನ   ದೇವ ದೂತರಾದ ಜಿಬರೀಲ್ عليه السلام   ರೊಂದಿಗೆ ಕೇಳಿದರು ಇದೇನು ಎಂದು ಆವಾಗ ಜಿಬರೀಲ್ ಹೇಳಿದರು ಇದು ಆ ಮನುಷ್ಯನ ಉದಾಹರಣೆ ಯಾಗಿದೆ ತನ್ನ ಹರಿತವಾದ  ನಾಲಿಗೆ ಯಿಂದ ಕೆಲವು ಮಾತು ಗಳನ್ನು ಆಡಿ ನಂತರ ಹಿಂಪಡೆಯಲು ಆತುರ ಪಡುತ್ತಾನೆ ಅವನು ಒಮ್ಮೆ ಆಡಿದ ಮಾತು ಹಿಂಪಡೆಯ ಲಾರನು ಆದರಿಂದ ಮಾತನಾಡುವ ಮೊದಲು ಚಿಂತಿಸ ಬೇಕಾಗಿದೆ ಕೆಲವರು ಆತುರ ದಿಂದ ಮಾತನಾಡುವು ದುಂಟು ಇದರಿಂದ ಅನ್ಯರ ಮನಸ್ಸಿಗಾಗುವ ನೋವು ಅರಿಯಲಾರರು ಕೆಲವರು ತನ್ನನ್ನು ತಾನು ಹೀಗೆ ವರ್ಣಿಸುವುದುಂಟು ಸತ್ಯ ಯಾವತ್ತೂ ಕಹಿಯಾಗುತ್ತದೆ ನಾನು ಯಾವತ್ತೂ ಕಹಿಯಾಗಿಯೇ ಇರುವೆನೆಂದು  ಇದ್ಯಾವ ನ್ಯಾಯ   ಪ್ರವಾದಿ ಯವರಿಗಿಂತ ಸತ್ಯ ವಂತ ಅವರ ಸಿಹಿ ಯಾದ ಮಾತಿಗಿಂತ ಸಿಹಿ ಬೇರೆ  ಯಾರಿದ್ದಾರೆ ಈ ಲೋಕದಲ್ಲಿ? ಇದು ಯಾವ ಲೋಜಿಕ್ ನಾನು ಸತ್ಯ ವಂತ ಸತ್ಯ ವನ್ನೇ ಹೇಳುವೆನೆಂದು ಸದಾ ಮಾತಿನಿಂದ ವಿಷ ಕಾರುತ್ತಿರುವುದು ಜನರ ಗೌರವ ವನ್ನು ಮಣ್ಣು ಪಾಲಾಗಿಸಿ ಹರಿತ ವಾದ ಮಾತುಗಳನ್ನು ಆಡಿ ಜನರ ಮನಸ್ಸಿನಲ್ಲಿ ವೈರಾಗ್ಯ ಉಂಟು ಮಾಡುವುದು ಸರಿಯಲ್ಲ ಮಾತಿನಲ್ಲಿ ಮಿತಿ ಇರಲಿ ನೀವು ಆಡುವ ಮಾತು ಸತ್ಯ ವಾದರೂ  ಅನ್ಯರ ಗೌರವಕ್ಕೆ ದಕ್ಕೆ ಆಗದ ರೀತಿಯಲ್ಲಿ ಮಾತನಾಡುವುದು ಇದು ಪ್ರವಾದಿ ಯವರ ಚರ್ಯೆ ಯಾಗಿದೆ ಕಷ್ಟ ತನ್ನ ಹೆಗಲ ಮೇಲೆ ಹೊತ್ತು ಕೊಳ್ಳಿ ಆದರೆ ಅನ್ಯರ ಮುಂದೆ ಕೀಳಾಗಿ ತನ್ನನ್ನು ತಾನು ವರ್ಣಿಸಬೇಡಿ ಪ್ರವಾದಿ ಯವರು ಸಿಟ್ಟು  ಗೊಂಡರೆ ಅವರ ಅನುಯಾಯಿಗಳು ಅವರ ಮುಖ ದಿಂದಲೇ ಕಂಡು ಹಿಡಿಯುವರು ಪ್ರವಾದಿ ಯವರು ಏನು ಆಡದೆ ಇರಲು ಪ್ರಯತ್ನ ಪಡುತ್ತಾರೆ ಒಂದೊಮ್ಮೆ ಏನಾದರು ಹೇಳಲು ಬಯಸಿದರೆ ಸಾಮೂಹಿಕವಾಗಿ ಹೇಳುತ್ತಾರೆ ನಮ್ಮಲ್ಲಿ ಕೆಲವರು ಸಾಮೂಹಿಕವಾಗಿ ಜನ ಸಂದಣಿಯಲ್ಲಿ  ಗುರಿ ಯಾಗಿಸುತ್ತಾರೆ ಈ ತರಹ ಮಾಡುವುದರಿಂದ ಅವರ ಗೌರವಕ್ಕೆ ದಕ್ಕೆ ಯಾಗುವದು ತಾನು ಸತ್ಯ ವಂತ ನೆಂದು ಜನರ ಮದ್ಯೆ ತನ್ನನ್ನು ತಾನು ವರ್ಣಿಸುತ್ತಾ ನಡೆಯ ಬೇಡಿ ಅಲ್ಲಾಹು ಬಲ್ಲವ ನಾಗಿದ್ದಾನೆ 


يَعْلَمُ خَائِنَةَ الْأَعْيُنِ وَمَا تُخْفِي الصُّدُورُ

ಅವನು (ಅಲ್ಲಾಹನು), ಕಣ್ಣುಗಳು ಮಾಡುವ ಮೋಸವನ್ನೂ ಮನಸ್ಸುಗಳಲ್ಲಿ ಅಡಗಿರುವ ವಿಷಯಗಳನ್ನೂ ಬಲ್ಲನು.
ಶರೀರದ ಅಂಗಾಂಗ ಗಳಿಗೆ ಆದ ಗಾಯ ಗುಣ ವಾಗುತ್ತದೆ ಆದರೆ ನಾಲಿಗೆಯ ಹರಿತ ವಾದ ಮಾತಿನಿಂದಾಗುವ ಗಾಯ ಮಾಯ ವಾಗ ಲಾರವು.
IslamicKannada

Saturday, June 6, 2020

ಇಸ್ಲಾಮಿನ ಆರೋಹಣದ ಸುಂದರ ಸತ್ಯ ಘಟನೆ-The Prophet's Ascension

(ಇಸ್ಲಾಮಿನ ಆರೋಹಣದ ಸುಂದರ ಸತ್ಯ ಘಟನೆ
)
ಪ್ರವಾದಿ ಮುಹಮ್ಮದ್ ಮುಸ್ತಫ
 صلي الله عليه وسلم 
ರವರು ಮಕ್ಕಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಲಿಕ ರಾದಾಗ ಪವಿತ್ರ ಕಾಬಾಲಯ ಮನ್ನೂರ ಅರವತ್ತು ವಿಗ್ರಹಗಳಿಂದ ತುಂಬಿತ್ತು ಲೋಕದ ಮೊಟ್ಟ ಮೊದಲ ಆರಾದನಾಲಯ ವಿಗ್ರಹಗಳ ಕೈವಶ ವಾಗಿತ್ತು ಪ್ರವಾದಿ ಯವರು ಕಾಬಾಲಯ ವನ್ನು ವಿಗ್ರಹಗಳಿಂದ ಶುದ್ಧೀಕರಿಸಿದರು ಪ್ರವಾದಿ ಯವರು ನುಬುವ್ವತ್ತಿನ ಹದಿಮೂರು ವರ್ಷಗಳ ನಂತರ ಮಕ್ಕಾದಿಂದ ಮದೀನ ದ ಕಡೆ ಪ್ರಯಾಣ ಬೆಳೆಸಿದಾಗ ಮುಸಲ್ಮಾನರ ಸಂಖ್ಯೆ ನೂರಕ್ಕಿಂತ ಅಧಿಕ ವಾಗಿರಲಿಲ್ಲ ಹಿಜ್ರಾ  ಎರಡನೆಯ ವರ್ಷದಲ್ಲಿ ಬದ್ರ್ ನ  ಯುದ್ಧ ಭೂಮಿಯಲ್ಲಿ ಸತ್ಯ ಹಾಗು ಅನೂರ್ಜಿತ ದ ಘರ್ಷಣೆ ಆಗುತ್ತದೆ ಮುಸಲ್ಮಾನರ ಸಂಖ್ಯೆ  ಬರೇ ಮುನ್ನೂರ ಹದಿಮೂರು ವಾಗಿತ್ತು ಮನೆಯಲ್ಲಿ ಇದ್ದವರು ಸೇರಿಸಿ ಸುಮಾರು ಆರು ನೂರು ಏಳುನೂರು ಮಕ್ಕಳು ಹೆಂಗಸರು ಸೇರಿಸಿ ವಾಗಿತ್ತು ಎಂಟನೇ  ಹಿಜರಿಯಲ್ಲಿ ಮಕ್ಕಾದ ವಿಜಯ ಲಭಿಸಿತು ಬದ್ರ್ ಯುದ್ಧದ ಆರು ವರ್ಷಗಳ ನಂತರ ವಾಗಿತ್ತು ಮಕ್ಕಾ( ಫತ್ಹ್)  ಆಗಿದ್ದು   ಅಂದು  ಮಕ್ಕಾ  ವಿಜಯದ ಸಮಯ ಯೋದರ ಸಂಖ್ಯೆ ಹತ್ತು ಸಾವಿರ ವಾಗಿತ್ತು ಮತ್ತು ಹತ್ತನೇ ಹಿಜರಿಯಲ್ಲಿ ಹಜ್ಜತುಲ್ ವಿದಾಹ್ ಸಂಬವಿಸಿತು ಹತ್ತನೆ ಹಿಜರಿಯಲ್ಲಿ ಪ್ರವಾದಿ ಯವರ ಮುಂದೆ ಕುಳಿತು (ಖುತುಬಾ) ಬಾಷಣ ಕೇಳಿದವರ ಸಂಖ್ಯೆ ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ವಾಗಿತ್ತು ಮನೆಯಲ್ಲಿ ಇದ್ದುವರನ್ನು ಸೇರಿಸಿದರೆ ಸಂಖ್ಯೆಆರು ಲಕ್ಷ ದಾಟಿದವು ಹಝ್ರತ್ ಸಿದ್ದೀಕ್ رضي الله عنه 
ರವರು ಎರಡು ವರ್ಷ ಎರಡು ತಿಂಗಳು ಮತ್ತು ಕೆಲವು ದಿನಗಳು ಉತ್ತರಾದಿ ಕಾರಿ ಯಾಗಿದ್ದರು ಅವರ ಅಧಿಕಾರ ದ ಸಮಯ ದಲ್ಲಿ ಪ್ರತಿ ದಿನ ಎಂಬತ್ತು ಮೈಲಿನಷ್ಟು ಉದ್ದಗಲ ಭೂಮಿಯನ್ನು ವಿಜಯಿ ಗೊಳಿಸುತ್ತಿದ್ದರು  ವೀರ ಶುರ ರಾದ ಉಮರ್ رضي الله عنه ರವರ ಆಡಳಿತ ಕಾಲದಲ್ಲಿ ಇಸ್ಲಾಮಿನ ಗಡಿ ಇಪ್ಪತ್ತ ಮೂರು ಲಕ್ಷಕ್ಕೂ ಅಧಿಕ ಮೈಲು ದಾಟಿದ್ದವು ಮುಹಮ್ಮದ್ ಬಿನ್ ಕಾಸಿಮ್ ಸಿಂದ್ ಪ್ರಾಂತ್ಯವನ್ನು ಪ್ರವೇಶಿಸಿದಾಗ ತೊಬ್ಫತ ಎರಡನೆ ಹಿಜರಿಯಲ್ಲಿ ಆಗಿತ್ತು ಆವಾಗ ಸಹಾಬಿ ಗಳು ಜೀವಂತ ವಾಗಿದ್ದರು ಉಂದಲೋಸ್ ನ ಬಾಗಿಲಿ ನಲ್ಲಿ ತಾರಿಕ್ ಬಿನ್ ಝಿಯಾದ್ ಪ್ರವೇಶಿಸಿದರು ಅವರು ಒಬ್ಬ ತಾಬಿ ಯಾಗಿದ್ದರು ಇದು ಹಿಜರಿ ತೊಂಬತ್ತ ಎರಡರ ಘಟನೆ ಯಾಗಿದೆ ಇಲ್ಲಿ ಸಹಾಬಿ ವರ್ಯರು ಸಿಂದ್ ಗೆ ಪ್ರವೇಶಿಸಿದರು ಅಲ್ಲಿ  ಸ್ಪೈನ್ ನಲ್ಲಿ ಇಸ್ಲಾಮ್ ಮೊಳಗಿದವು ಸಹದ್ ಇಬ್ನ್ ಅಬೀ ವಕ್ಕಾಸ್ ರ.ಅ ಚೈನ ಪ್ರವೇಶಿಸಿದರು ಅರಬ್ ಜಗತ್ತಿನಿಂದ ಅರೆಮೇನಿಯ ದ ವರೆಗೂ ಇಸ್ಲಾಮಿನ ಪ್ರಕಾಶ ಹರಡಿದವು ಕೆಲವೇ ಸಮಯದಲ್ಲಿ ನಡೆದ ಈ ಘಟನೆ ಗಳು ಇಸ್ಲಾಮಿನ ಚರಿತ್ರೆಯನ್ನು ಲೋಕದ ಮುಂದೆ ಬಿಳಿ ಹಾಳೆಯ ಹಾಗೆ ಪ್ರಚಲಿತ ಗೊಂಡಿತು.
ABUYAMIN ALQADRI

Thursday, June 4, 2020

The flames of fire-ನಮ್ರೂದ್ ತಯಾರಿಸಿದ ಬೆಂಕಿಯ ಜ್ವಾಲೆ

ನಮ್ರೂದ್ ತಯಾರಿಸಿದ   ಬೆಂಕಿಯ  ಜ್ವಾಲೆಯಿಂದ  ಖಲೀಲುಲ್ಲಾಹಿ ಇಬ್ರಾಹಿಮ್    عليه السلام 
ರವರ ಮುಖದಲ್ಲಿ ಯಾವ ಭಯ ವಾಗಲಿ ದುಃಖ ವಾಗಲಿ ಕಾಣಲಾಗಲಿಲ್ಲ ಅವರು ಅಲ್ಲಾಹನ ಹೆಸರಿನ ಪ್ರೀತಿಯ ಮಸ್ತಿನಲ್ಲಿ ಸಮಯ ಕಳೆಯುತಿದ್ದರು ಒಂದು ವೇಳೆ ಬೆಂಕಿ ನನ್ನ ಅಸ್ತಿತ್ವವನ್ನು ಬಸ್ಮ ವಾಗಿಸಿದರೂ ಇದು ನನ್ನ ಜಯವಾಗಿದೆ ಅಲ್ಲಾಹನ ಆಜ್ಞೆ ಯಾಗಿದೆ ಎಂಬುದಾಗಿತ್ತು ಅವರ ಮನಸ್ತಿತಿ   ಮುಗುಳ್ನಗುತ್ತ ಬೆಂಕಿಯತ್ತ ಧಾವಿಸಿದರು ಆವಾಗ ಹಝ್ರತ್ ಜಿಬಿರೀಲ್ ಅ.ಸ.ಪ್ರತ್ಯಕ್ಷ ಪಟ್ಟು ಹೇಳಿದರು ಓ ಇಬ್ರಾಹಿಮರೆ ತಾವು ಇಚ್ಚಿಸಿದರೆ ನಾನು ಅಲ್ಲಾಹನಲ್ಲಿ ಶಿಫಾರಿಸು ಮಾಡಲೇ ನಿಮ್ಮ ಪರವಾಗಿ ನಿಮಗೆ ಈ ಪರೀಕ್ಷೆ ಯಿಂದ ಮುಕ್ತಿ ಸಿಗಲಿಕ್ಕಾಗಿ ಹೇಳಿದಾಗ ಇಬ್ರಾಹಿಮ್ عليه السلام 
ಹೇಳಿದರು ನಾನು ಅದರ ಬಗ್ಗೆ ಏನೂ ಹೇಳಲಾರೆ ಆದರೆ ತಾವು ಅಲ್ಲಾಹನಲ್ಲಿ ಹೇಳಿ ಈ ಸತ್ಯ ನಿಷೇದಿಗಳ ಮನಸ್ಸಿನಲ್ಲಿ ಈ ಕಾರ್ಯ ವೆಸಗಲು ಅಲ್ಲಾಹನು ಇಚ್ಚಿಸಿದರೆ ನನ್ನ ಇಚ್ಚೆಯೂ ಅದೇ ಆಗಿದೆ ಎಂದರು  ಅಲ್ಲಾಹನ    ಇಚ್ಛೆ ನಾನು ಬೆಂಕಿಯಲ್ಲಿ ಬಸ್ಮ ಆಗ ಬೇಕೆಂದಿದ್ದರೆ ನಾನು  ಅಲ್ಲಾಹನ ಆಜ್ನೆಗೆ ಪರಿಪೂರ್ಣ ವಾಗಿ ಸಮರ್ಪಿತನು ಜಿಬಿರೀಲರೇ ಎಂದು ಹೇಳಿದರು ಒಂದು ಹಕ್ಕಿಯೂ ಅದರ ಹತ್ತಿರ ದಿಂದ ಹಾರಿ ಹೋದರೂ ಅದೂ ಸುಟ್ಟು ಬೂದಿಯಾಗುವುದು ಅಂತಹ ಭೀಕರವಾದ ಬೆಂಕಿ ಯಾಗಿದೆ
ಪ್ರವಾದಿ ಇಬ್ರಾಹಿಮ್ عليه السلام ರವರನ್ನು ಸುಡಲು ತಯಾರಿಸಿದ ಬೆಂಕಿ ಅವರು ತದ ನಂತರ ಅಲ್ಲಾಹನು ಅವರನ್ನು ತನ್ನ ಅಪಾರ ಅನುಗ್ರಹ ಗಳಿಂದ ರಕ್ಶಿಸಿದನು ನಂತರ ಬೀವೀ ಸಾರ ರವರನ್ನು ವಿವಾಹ  ವಾದರು ಸಂತಾನ ಬಾಗ್ಯ ಲಬಿಸಲಿಲ್ಲ ಇದೂ ಒಂದು ಪರೀಕ್ಷೆ ಯಾಗಿತ್ತು   ಸಂತಾನ ಬಾಗ್ಯ ಅಂದರೆ ಅದು  ಮಾತಾ ಫಿತರ ಆತ್ಮದ ಶಾಂತಿ ಯಾಗಿದೆ ಜೀವಿಸುವ ಗುರಿಯಾಗಿದೆ ಮುದ್ದು ಮಕ್ಕಳನ್ನು ನೋಡಿ ಮತ್ತೊಮ್ಮೆ ಯೌವ್ವನಕ್ಕೆ ಮರಳುತ್ತಾರೆ ತಂದೆ ತಾಯಿಯವರು ಜೀವನದಲ್ಲಿ ಕಷ್ಟ ಗಳು ಮಕ್ಕಳನ್ನು ನೋಡಿ ಮಾಯ ವಾಗುತ್ತದೆ ಇನ್ನು ಮಕ್ಕಳು ವಯಸ್ಕರಾದರೆ ಆ ಸಮಯ ವನ್ನು ತನ್ನ ವಯಸ್ಸಾದ ತಂದೆಗೆ ಇರುವ ಸಂತೋಷ ಅದು ಹೇಳತೀರದು ನನ್ನಲ್ಲಿ ಶಬ್ದ ಗಳಿಲ್ಲ ನಾನು ಆ ಸಮಯ ವನ್ನು ಹೇಗೆ ವರ್ಣಿಸಲಿ ಅದೇ ಸಮಯದಲ್ಲಿ ಇಬ್ರಾಹಿಮ್ ರವರಿಗೆ ಬೀವಿ ಹಾಜರ ರವರಿಂದ   ಇಸ್ಮಾಯಿಲ್ ಎಂಬ ಸಂತಾನ ಬಾಗ್ಯ ಲಬಿಸುತ್ತದೆ ಆ ಮಗನನ್ನು ನೋಡಿ ನೋಡಿ ಜೀವಿಸುತ್ತಿದ್ದರು ಆದರೆ ಅಲ್ಲಾಹನು ಮತ್ತೊಂದು ಪರೀಕ್ಷೆಗೆ ಆಜ್ಞೆ ನೀಡುತ್ತಾನೆ ನಿನ್ನ ಈ ಹೆಂಡತಿ ಮತ್ತು ಮಗುವನ್ನು ನಿರ್ಜನ ಪ್ರದೇಶ ಕಾಡಿನಲ್ಲಿ ಬಯ ಪಡುವ ಪ್ರದೇಶದಲ್ಲಿ ಬಿಟ್ಟು ಬಿಡಲು ಆಜ್ಞೆ ನೀಡಿದನು ಈ ಮಾತು ಹೇಳಲೋ ಕೇಳಲೋ ಸುಲಭ ಆಗ ಬಹುದು ಆದರೆ ಮಾಡಲು ಎಷ್ಟು  ಕಷ್ಟ ವಾಗಿದೆ ಅಂದರೆ  ದಿನದ ಸಮಯದಲ್ಲಿ ನಕ್ಷತ್ರ ನೋಡುವುದು ಆದರೆ ಅಲ್ಲಾಹನ ಆಜ್ಞೆ ಯಂತೆ ತನ್ನ ಪತ್ನಿ ಹಾಗು ಮುದ್ದು ಕಂದಮ್ಮ ನನ್ನ ಹಿಡಿದು ವಾದಿ ಗೈರ್ ಝೀಝ್ರ ರವಾನೆ ಯಾದರು ಇಂದು ಮಕ್ಕಾ ಎಂಬ  ವಿಶಾಲ ವಾದ  ನಗರ ವಾಗಿದೆ  ಇಂದು ಅಲ್ಲಿ ಗಗನಕ್ಕೇರಿದ ಕಟ್ಟಡ ಗಳಿವೆ ಅಂದು ಬರೇ ನಿರ್ಜನ ಭಯಾನಕ ವಾದ ಕಾಡು ಆಗಿತ್ತು ಬೆಳಗ್ಗಿನ ಜಾವ ಅಲ್ಲಾಹನಲ್ಲಿ ಪ್ರಾರ್ತಿಸಿ ತನ್ನ ಹೆಂಡತಿ ಹಾಗು ಕಂದಮ್ಮ ನನ್ನ ಅಲ್ಲೇ ಬಿಟ್ಟು ತೊಲಗಲು ರಡಿಯಾದರು ಮುಂದೆ ನಡೆಯುತ್ತಿದ್ದ ವರು ತಿರಿಗಿ ನೋಡುವಾಗ ಅವರ ಪತ್ನಿ ಕೈ ಹಿಡಿದು ಕೇಳಿಯೇ ಬಿಟ್ಟರು ಓ ನನ್ನ ಪತಿಯವರೇ ಈ ನಿರ್ಜನ ಪ್ರದೇಶದಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೊರಡುತ್ತಿದ್ದೀರಿ ಅವರು ಏನೂ ಉತ್ತರ ನೀಡಲಿಲ್ಲ ನಿಶಬ್ದ ವಾದರು ಎರಡನೆ ಸಲ ನಡೆಯಲು ಮುಂದಾದಾಗ ಪತ್ನಿ ಮತ್ತೋಮ್ಮೆ ಕೈ ಹಿಡಿದರು ಅದೇ ಪ್ರಶ್ನೆ ಕೇಳಿದಾಗ ಯಾವ ಉತ್ತರವೂ ಇಬ್ರಾಹಿಮ್ عليه السلام 
ರವರು ನೀಡಲಿಲ್ಲ ಮೂರನೆ ಸಲ ಮತ್ತೊಮ್ಮೆ ನಡೆಯಲು ಮುಂದಾದಾಗ ಕೇಳಿದಾಗ ಯಾವ ಉತ್ತರವೂ ನೀಡಲಿಲ್ಲ ಆದರೆ ಆವಾಗ ಪತ್ನಿ ಕೇಳಿದರು ಇದು ಅಲ್ಲಾಹನ ಆಜ್ಞೆಯೇ ಆವಾಗ ಇಬ್ರಾಹಿಮ್ ಹೇಳಿದರು ಹೌದು ಅಲ್ಲಾಹನ ಆಜ್ಞೆ ಆಗಿದೆ ಆವಾಗ ಪತ್ನಿ ತನ್ನ ಕೈಯ್ಯನ್ಧು ಬಿಟ್ಟು ಹೇಳಿದರು ನಡೆಯಿರಿ ಅ ಅಲ್ಲಾಹನ ಆಜ್ಞೆ ಆದರೆ ನನ್ನನ್ನು ನೋಡುವವನು ಆವನಾಗಿದ್ದಾನೆ ತಾವು ಭಯ ಪಡ ಬೇಡಿ ಎಂದರು ಬೀವಿ ಹಾಜರ ಅಲ್ಲೇ ಸಾಷ್ಟಾಂಗ ದಲ್ಲಿ ಅಲ್ಲಾಹನನ್ನು ಪ್ರಾರ್ತಿಸುತ್ತಿದ್ದರು ಇಂತಹಾ ತ್ಯಾಗ ಗಳನ್ನು ಸಮರ್ಪಿಸಿ ತಂದು ಕೊಟ್ಟ ಇಸ್ಲಾಮ್ ನಲ್ಲಿ ಪರಿಪೂರ್ಣ ವಾಗಿ ಪ್ರವೇಶಿಸಿ 
يَا أَيُّهَا الَّذِينَ آمَنُوا ادْخُلُوا فِي السِّلْمِ كَافَّةً وَلَا تَتَّبِعُوا خُطُوَاتِ الشَّيْطَانِ ۚ إِنَّهُ لَكُمْ عَدُوٌّ مُبِينٌ

ವಿಶ್ವಾಸಿಗಳೇ, ಇಸ್ಲಾಮಿನೊಳಗೆ ಪೂರ್ಣವಾಗಿ ಪ್ರವೇಶಿಸಿರಿ ಮತ್ತು ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ. ಅವನು ನಿಮ್ಮ ಬಹಿರಂಗ ಶತ್ರು ಆಗಿದ್ದಾನೆ
S.M.MUSTHAFA SASTHANA

Tuesday, June 2, 2020

Confessions of a Spent Youth-ಯೌವ್ವನದಲ್ಲಿ ನೀನು ಕಳೆದ ಸಮಯ

 
ಯೌವ್ವನ ಮಸ್ತಾನಿ ಯಾಗಿದೆ ಎಂದು ಹೇಳ ಲಾಗುತ್ತದೆ ಈ ಯೌವ್ವನದ ಸಮಯ ಅಂದರೆ  ಹಾರಾಟದಲ್ಲಿ  ಮಿತಿ ಇಲ್ಲದ ಹಕ್ಕಿಯ ಹಾಗೆ ಮನುಷ್ಯನು ತನ್ನನ್ನು ತಾನು ನಿಯಂತ್ರಣ ಮೀರಿ ಜೀವಿಸು ವವನು ಆಗಿದ್ದಾನೆ ಆದರೆ ಅಲ್ಲಾಹನ ಭಯ ಅವನ ಮನಸ್ಸಿನಲ್ಲಿದ್ದರೆ ಅವನ ಪ್ರೀತಿ ಅವನ ಆತ್ಮೀಯತೆ ಯಿಂದ ತನ್ನನ್ನು ಮೈ ಗೂಡಿಸಿ ಕೊಂಡರೆ ಯೌವ್ವನದಲ್ಲಿ ಪಶ್ಚಾತಾಪ ಪಡುವವರು ಯೌವ್ವನದಲ್ಲಿ ಅಲ್ಲಾಹನ ಸಂತ್ರಪ್ತಿಗೆ ಪಾತ್ರ ರಾಗುವವರು ಅಲ್ಲಾಹನ ಪ್ರತ್ಯೇಕ ವಾದ  ಅನುಗ್ರಹ ಗಳಿಂದ ಸದಾ ಸುಖ ಸಂಪತ್ತು ಪಡೆಯುವರು ಆಗಿದ್ದಾರೆ  ಪರಲೋಕ ದಲ್ಲಿ ಅವನ ಯೌವ್ವನದ ಕುರಿತು ಕೇಳಲಾಗತ್ತದೆ ನಿನ್ನ ಯೌವ್ವನ ವನ್ನು ಎಲ್ಲಿ ಕಳೆದೆ?ಕೆಲವು ಇಮಾಮರು ಇಬ್ನು ಹಬ್ಬಾನ್ ಹಾಗು ತಿರ್ಮಿದಿ ಯವರು ಉಲ್ಲೇಕಿಸಿದ ಹಾಗೆ ಶರೀರದ ಬಗ್ಗೆ ಪ್ರಶ್ನೆ ಕೇಳಲ್ಪಡುತ್ತದೆ  ಶರೀರದ ಪ್ರತಿಯೊಂದು ಅಂಗ ಗಳನ್ನು ಪ್ರಶ್ನಿಸ ಲಾಗುವುದು ನಿಮ್ಮ ಕೈ ಗಳು ಏನು ಮಾಡಿದವು ನಿಮ್ಮ ಕಾಲು ಎಲ್ಲಿ ಹೋಗಿದವು ನಿಮ್ಮ ಕಿವಿ ಯಿಂದ
ಏನು ಕೇಳುತ್ತಿದ್ದೀರಿ ನಿಮ್ಮ ಬಾಯಿಯಿಂದ ಏನನ್ನೂ ನುಡಿಯುತ್ತಿದ್ದೀರಿ ಪ್ರತಿಯೊಂದು ಅಂಗಾಗ ಗಳು ನಾಳೆ ಪರಲೋಕ ದಲ್ಲಿ ಪ್ರಶ್ನಿಸ ಪಡುತ್ತದೆ ವಯಸ್ಸಿನ ಹಾಗೂ ಯೌವ್ವನದ ಬಗ್ಗೆ ಕೇಳಲಾಗುವುದು ವಯಸ್ಸಿನ ಬಗ್ಗೆ ಕೇಳುವಾಗ ಪ್ರತ್ಯೇಕ ವಾಗಿ ಯೌವ್ವನದ ಬಗ್ಗೆ ಯಾಕೆ ಕೇಳಲ್ಪಡುವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಬವಿಸಿದರೆ ಅದು ಯೌವ್ವನ ವಯಸ್ಸಿನ ಸಾರಾಂಶ  ವಾಗಿದೆ ಸಾಮೂಹಿಕವಾಗಿ ಪಾಪದ ಜೀವನ ಅದು ಯೌವ್ವನದ ಜೀವನ ವಾಗಿದೆ ಯಾರಾದರು ತನ್ನ ಯೌವ್ವನ ವನ್ನು ಸೂಕ್ಷಿಸಿದರೆ ಅವನ ಮುದುಕ ತನವು ಸುಂದರ ವಾಗುವುದು ಯೌವ್ವನ ವನ್ನು ಪಾಪ ಗಳಿಂದ ಸೂಕ್ಷಿಸ ದಿದ್ದರೆ ಮತ್ತೇನು ಸಾದಿಸಿಯಾನು ಅದಕ್ಕಾಗಿಯೇ ಅಲ್ಲಾಹನು ಪಾಶ್ಚಾತಾಪ ಪಡುವ ಯುವಕ ನನ್ನ ಇಷ್ಟ ಪಡುತ್ತಾನೆ ಯುವಕ ಪಶ್ಚಾತ್ತಾಪ  ಪಡುವಾಗ ಅಲ್ಲಾಹನ ಸಿಂಹಾಸನವು ಸಂತೋಷದಿಂದ ಮುತ್ತಿಕ್ಕುತ್ತದೆ ದೇವದೂತರೂ ಗುಣಗಾನ ಮಾಡಲು ತಯಾರಾಗುತ್ತಾರೆ ಅದಕ್ಕಾಗಿಯೆ ಯೌವ್ವನದ ಪಶ್ಚಾತ್ತಾಪ ಅಲ್ಲಾಹನು ಇಷ್ಟ ಪಡುವನು ನಾಳೆ ಪರಲೋಕ ದಲ್ಲಿ ಸುಡು ಬಿಸಿಲಿನಲ್ಲಿ ಇರುವಾಗ ಯೌವ್ವನದಲ್ಲಿ ಅಲ್ಲಾಹನ ಅನುಸರಣೆ ಗಳನ್ನು ಸ್ವೀಕರಿಸಿ ಪಶ್ಚಾತ್ತಾಪ ಪಟ್ಟು  ಜೀವಿಸುವವನಾಗಿದ್ದಾನೆ ಪರಲೋಕ ದಲ್ಲಿ  ವಿಜಯಿ ಯಾಗು ವವನು ಆದರಿಂದ ಯೌವ್ವನ ವನ್ನು ಕಾಪಾಡಿ ಕೊಳ್ಳಿ ನಾಳೆ ಪರಲೋಕ ದಲ್ಲಿ ಪ್ರಶಿಸಲ್ಪಡುವಾಗ ಅಲ್ಲಾಹುವೇ ನನ್ನ ಯೌವ್ವನ ನಿನ್ನ ಸಾಷ್ಟಾಂಗ ದಲ್ಲಿ ಕಳೆದೆ ಎಂದು ಹೇಳಲು ಸಾದ್ಯ ವಾಗ ಬೇಕು ನನ್ನ ಯೌವ್ವನ ಜನರ ಹಿತಕ್ಕಾಗಿ ಮುಡಿಪಾಗಿಸಿದೆ ಎಂದು ಹೇಳಲು ಸಾದ್ಯವಾಗ ಬೇಕು ದೀನೀ ಪ್ರಬೋದನೆ ಯಲ್ಲಿ ಕಳೆದೆ ಎಂದು ಹೇಳಲು ಸಾದ್ಯವಾಗ ಬೇಕು ಅಕ್ರಮಿಸಲ್ಪಟ್ಟವನ ಭುಜಕ್ಕೆ ತನ್ನ ಭುಜ ನೀಡಿ ಸಹಾಯಿ ಆದೆ ಎಂದು ಹೇಳಲು ಸಾಧ್ಯ ವಾಗ ಬೇಕು ನಿಮ್ಮ ಯೌವ್ವನ ವನ್ನು ನಾಳೆ ಪರಲೋಕ ದಲ್ಲಿ ನಾಚಿಕೆ ಪಡುವ ಸ್ಥಿತಿಯಲ್ಲಿ ಇರದೇ ಅದನ್ನು ಶುಚಿಯಾಗಿಸಿ
S.M.MUSTHAFA SASTHANA

Monday, June 1, 2020

Fasting in Islam-ಉಪವಾಸ

ಸರ್ವ ಶಕ್ತನಾದ ಅಲ್ಲಾಹನ ಹಬೀಬರಾದ ಪ್ರವಾದಿ ಮುಹಮ್ಮದ್ ಮುಸ್ತಫ صلي الله عليه وسلم  ರಿಂದ ಸಾಬೀತಾಗಿದೆ  
ಪ್ರವಾದಿ  صلي الله عليه    ಹೇಳಿದರು: 
ನಿಮ್ಮಲ್ಲಿ ಯಾರಾದರೂ   ರಂಜಾನ್ ತಿಂಗಳ    ಉಪವಾಸ ಮಾಡಿ ನಂತರ  ಶವ್ವಾಲ್  ತಿಂಗಳ ಆರು ಉಪವಾಸವನ್ನು    ಅನುಸರಿಸುತ್ತಾರೋ ಅವರು ಶಾಶ್ವತವಾಗಿ ಉಪವಾಸ ಮಾಡಿದವರಂತೆ ಎಂದು ತಿಳಿಸಿದರು  ಇಮಾಮ್ ಮುಸ್ಲಿಂ ತನ್ನ ಸಹೀಹ್ ಬುಖಾರಿ ಯಲ್ಲಿ  ಉಲ್ಲೇಖಿಸಿದ್ದಾರೆ    ಮತ್ತು ಈ ಆರು  ಉಪವಾಸ ಗಳಿಗೆ  ನಿರ್ದಿಷ್ಟವಾದ  ದಿನಗಳಿಲ್ಲ, ಆದರೆ ಸತ್ಯ ವಿಶ್ವಾಸಿಯಾದ ಮನುಷ್ಯ  ಅದನ್ನು    ತಿಂಗಳಿನ ಯಾವ ದಿವಸ ದಲ್ಲಿ  ಬೇಕಾದರೂ  ಆಯ್ಕೆ ಮಾಡಬಹುದು  ಆದ್ದರಿಂದ ಒಬ್ಬನು  ಆರಂಭದಲ್ಲಿ ಉಪವಾಸ ಮಾಡಲು ಬಯಸಿದರೆ  ಅಥವಾ   ತಿಂಗಳ   ಮದ್ಯೆ   ಅವಧಿಯಲ್ಲಿ  ಉಪವಾಸ ಮಾಡಲು ಬಯಸಿದರೆ, ಅಥವಾ  ಅವನು ಅದರ ಕೊನೆಯಲ್ಲಿ ಉಪವಾಸವನ್ನು ಅನು ಅನುಷ್ಟಿಸಲು   ಬಯಸಿದರೂ ಸಿಂದು ಆಗುವುದು  ಅಥವಾ ಇನ್ನು ಅವನು ತಿಂಗಳ ಕೊನೆಯಲ್ಲಿ ಕೆಲವು ಉಪವಾಸ ಗಳನ್ನು ಅನುಸರಿಸಿ    ಅದರ ಕೆಲವು ತಿಂಗಳ ಕೊನೆಯಲ್ಲಿ  ಅನುಷ್ಟಿಸಿದರೂ  ಯಾವ ಕೊರತೆಯೂ ಇಲ್ಲ  ಇನ್ನು    ಕೆಲವರು ಆರಂಭದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಕೆಲವರು ಅದರ ಮಧ್ಯದಲ್ಲಿ    ಅನುಷ್ಟಿಸುತ್ತಾರೆ    ಇವೆಲ್ಲವೂ ಅಲ್ಲಾಹನ ಮುಂದೆ ಪ್ರತ್ಯೇಕವಾಗಿ   ಪ್ರತಿಫಲ ಸಿಗುವ ಕಾರ್ಯ ವಾಗಿದೆ   ಇನ್ನು   ಅವನು ಅದನ್ನು  ತಿಂಗಳ ಆರಂಭದಲ್ಲಿ ಅನುಸರಿಸಿದರೆ, ಅದು ಉತ್ತಮ ವಾದ ಕಾರ್ಯಗಳಿಗೆ ಅತೀ ವೇಗವಾಗಿ ಧುಮುಕುವ ಹಾಗೆ ಯಾಗಿದೆ ಕಾರಣ ಒಳ್ಳೆಯ ಕಾರ್ಯ ಗಳನ್ನು ಜೀವನದಲ್ಲಿ ಮೊದಲ ಆದ್ಯತೆ ನೀಡ ಬೇಕಾಗಿದೆ    ಆದರೆ ಯಾವ ತರಹ ತಿಂಗಳ ಒಳಗೆ ಮಾಡಿ ತೀರಿಸಿದರೆ   ಯಾವುದೇ ತೊಂದರೆಯಿಲ್ಲ,  ಬದಲಿಗೆ, ಅದರಲ್ಲಿರುವ ವಿಷಯವು  ತುಂಬಾ   ವಿಶಾಲವಾಗಿದೆ,  ಅವನು ಕೆಲವು ವರ್ಷ ಉಪವಾಸ ಮಾಡಿ ಕೆಲವು ವರ್ಷಗಳ ಕಾಲ ಅವನ್ನು ತೊರೆದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅದು ಸುನ್ನತ್ತಾದ ಕಾರ್ಯ ವಾಗಿದೆ   ಕಡ್ಡಾಯವಲ್ಲ ,  ಒಬ್ಬ   ಅದನ್ನು ಕೆಲವು ವರ್ಷಗಳಲ್ಲಿ ಉಪವಾಸ ಮಾಡಿ ಕೆಲವು ವರ್ಷಗಳಲ್ಲಿ ಬಿಟ್ಟುಬಿಟ್ಟರೆ, ಅಥವಾ ಅವನು ಅದರಲ್ಲಿ ಕೆಲವನ್ನು ಉಪವಾಸ ಮಾಡಿ ಅದರಲ್ಲಿ ಕೆಲವನ್ನು ಬಿಟ್ಟರೆ, ಅವನಿಗೆ ಯಾವುದೇ ತಪ್ಪಿಲ್ಲ, ಅವನು  ಇದರಿಂದ ಸಿಕ್ಷಿಸ ಪಡಲಾಗುವುದಿಲ್ಲ ಪ್ರವಾದಿ صلي الله عليه وسلم ರವರ ಚರ್ಯೆಯನ್ನು ಜೀವಂತ ವಾಗಿರಿಸಿ
S.M.MUSTHAFA SASTHANA

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...