MUSTHAFA HASAN ALQADRI OFFICIAL : 2021

Translate

Tuesday, June 8, 2021

ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು


 ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು

ಒಮ್ಮೆ ಒಬ್ಬ ಬಾಲಕ ಹಸನುಲ್ ಬಸ್ರೀ (ರ.ಅ)ರವರ ಬಳಿ ಬಂದು ಹೀಗೆ ಕೇಳಿದನು 

ಓ ಶೈಖರೇ ನಾನು ಹಲವರಿಂದ ಕೇಳಿದೆ ಅಲ್ಲಾಹು ಎಲ್ಲಾ ಪಾಪಗಳಿಗೆ ಶಿಕ್ಷೆ ನೀಡಲಿದ್ದಾನೆ. ಆದರೆ ನಾನು ತುಂಬಾ ಪಾಪ  ಮಾಡಿದವನಾಗಿದ್ದೇನೆ ನನಗೇಕೆ ಶಿಕ್ಷೆ ಆಗಲಿಲ್ಲ. ಎಂದು ಕೇಳಿದ ತಕ್ಷಣವೇ ಹಸನುಲ್ ಬಸ್ರಿ ಹೇಳಿದರು. ಓ ಬಾಲಕ ಅಲ್ಲಾಹನು ಅನೇಕ ಸಲ ನಿನ್ನನ್ನು ಶಿಕ್ಷಿಸಿದ್ದಾನೆ ನಿನಗೆ ತಿಳಿಯಲಿಲ್ಲವೇ. 

ಬಾಲಕ ಕೇಳಿದ ಹೇಗೆ ಶೈಖರೇ ವಿವರಿಸಿ ಆವಾಗ ಹಸನುಲ್ ಬಸ್ರಿ ರ.ಅ ಹೇಳಿದರು. 

ನೀನು ಅಲ್ಲಾಹನನ್ನು ಶ್ರದ್ಧೆಯಿಂದ ಕೂಗಿ ಪ್ರಾರ್ಥಿಸುವ ಭಾಗ್ಯ ಇಲ್ಲವಾಗಿಸಲಿಲ್ಲವೇ. ಕುರ್ಆನ್ ಪಾರಾಯಣ ಮಾಡದೆ ಎಷ್ಟೋ ದಿವಸ ನೀನು ಕಳೆಯಲಿಲ್ಲವೇ. ರಾತ್ರಿಯಲ್ಲಿ ಎದ್ದು ಪ್ರಾರ್ಥಿಸುವುದರಿಂದ ವಂಚಿತನಾಗಲಿಲ್ಲವೇ. ಕಾಮ ಹಣದ ಆಸೆ ಎಂಬ ದುರಬ್ಯಾಸದ ಸಂಕೋಲೆಯಲ್ಲಿ ಸಿಲುಕಿ ಕೊಳ್ಳಲಿಲ್ಲವೇ. ನಿನ್ನ ಹ್ರದಯದಲ್ಲಿ ಅಲ್ಲಾಹನ ಸ್ಮರಣೆಯ ಅನುಗ್ರಹ ಬಾರವೆಂದು ಭಾವಿಸಿ ಅವನ ಸ್ಮರಣೆಯಿಂದ ವಂಚಿತನಾಗಲಿಲ್ಲವೇ.. ಸುಳ್ಳು ಫಿತ್ನ ಫಸಾದ್ ಪರದೂಷಣ ಗಳಿಂದ ನಿನ್ನ ನಾಲಿಗೆ ಕಾರ್ಯನಿರತ ಆಗಲಿಲ್ಲವೇ. ಪರಲೋಕ ವನ್ನು ಮರೆತು ಇಹ ಲೋಕದ ಆಡಂಬರದ ಜೀವನವನ್ನು ಮೈಗೂಡಿಸಿ ಕೋಳ್ಳಲಿಲ್ಲವೇ. ರಂಝಾನ್ ಶವ್ವಾಲ್ ಹಜ್ ಗಳಂತಹ ತಿಂಗಳು ಗಳ ಗೌರವವನ್ನು ಕಡೆಗಣಿಸಿ ನಡೆಯಲಿಲ್ಲವೇ. 

ನೆನಪಿಡು ಅಲ್ಲಾಹನ ಶಿಕ್ಷೆ ಅತೀ ಕಠೋರವಾದದ್ದು. 

ನೀನು ಊಹಿಸುವುದಕ್ಕಿಂತ  ಅದೇನಂದರೆ 

ನಿನಗೆ ಪರ ಲೋಕ ವನ್ನು ಮರೆತು ಬಿಡುವಂತಹ ಇಹಲೋಕ ದ ಸರ್ವ ಸಂಪತ್ತು ಗಳನ್ನು ಒದಗಿಸಿ ಕೊಡುವುದು. ಧಾರ್ಮಿಕ ವಿದ್ಯೆಗೆ ಬದಲಾಗಿ ಲೌಕಿಕ ವಿಧ್ಯೆ ಒದಗಿಸಿ ಕೊಡುವುದು. ನಿನಗೆ ಅಧಿಕ ಸಂಪತ್ತು ನೀಡುವುದು. ಆದರೆ ಅಲ್ಲಾಹನ ಅನುಸರಣೆ ಹಾಗು ಪ್ರಾರ್ಥನೆ ಯಿಂದ ವಂಚಿತನಾಗುವೆ. ಇದಾಗಿದೆ ಅಲ್ಲಾಹನ ಇಹ ಲೋಕದ ಅತೀ ಕಠೋರ ವಾದ ಶಿಕ್ಷೆ. ನಿನಗೆ ಅರಿವಿಲ್ಲದೆ ಹೇಗಲ್ಲ ಶಿಕ್ಷಿಸಿದ ಮಾನವ. ಎಚ್ಚೆತ್ತುಕೋ ನಿನ್ನ ಮರಣ ಸಮೀಪಿಸುವ ಮುನ್ನ...

Friday, May 21, 2021

ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?


 ಫೆಲಸ್ತೀನ್ ಬಿಕ್ಕಟ್ಟು; ಅರಬ್ ದೊರೆಗಳೇಕೆ ಮೌನ..?


~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

-------------------------

ಫೆಲೆಸ್ತೀನ್ ಬಿಕ್ಕಟ್ಟು ಮತ್ತೆ ಮುನ್ನಲೆಗೆ ಬಂದಿದೆ. ಕ್ರೌರ್ಯ ಮೆರೆದ ಇಸ್ರೇಲ್ ಈಗ ಕದನ ವಿರಾಮ ಘೋಷಿಸಿದೆ. ಭಾರತ ಸಮೇತ ಜಗತ್ತಿನ ಹಲವು ರಾಷ್ಟ್ರಗಳು ಫೆಲೆಸ್ತೀನ್ ಪರ ದನಿಯೆತ್ತಿದರೆ ಕೆಲವು ಹಿಂಸಾತ್ಮಕ ಸಿದ್ದಾಂತಿಗಳು ಇಸ್ರೇಲ್ ರಕ್ಕಸರಿಗೆ ಬೆಂಬಲ ಸೂಚಿಸಿದೆ. ಹಾಗೆ ನೋಡುವುದಾದರೆ ಈ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ನಮಗೆ ಹೊಸತಲ್ಲ. ಇಸ್ರೇಲ್ ಎಂಬ ಲಂಪಟ ದೇಶ ಜನ್ಮತಾಳಿದಾಗಲೇ ಜಗತ್ತಿನಲ್ಲಿ ನೆತ್ತರ ಭೂಪಟವೊಂದು ಅರಳಿ ನಿಂತಿತ್ತು. ಮಧ್ಯಪ್ರಾಚ್ಯದ ಸುದ್ದಿಗಳಲ್ಲಿ ಪ್ರಮುಖವಾಗಿ ತುಂಬಿ ನಿಲ್ಲುವುದೂ ಇದೇ ಭೂಪಟ‌. 


ಇಸ್ರೇಲ್-ಫೆಲಸ್ತೀನ್ ಸಂಘರ್ಷ ತಾರಕಕ್ಕೇರಿದಾಗಲೆಲ್ಲಾ ಸಾಮಾನ್ಯವಾಗಿಯೇ ಜಗತ್ತು ಅರಬ್ ರಾಷ್ಟ್ರಗಳತ್ತ ನೋಡುತ್ತದೆ. ಸೌದಿ ಪ್ರಭುಗಳೇ ಮೌನ ಮುರಿಯಿರಿ ಎಂದು ಫೆಲೆಸ್ತೀನ್‌ನ ಕಂದಮ್ಮಗಳು ಮೊರೆಯಿಡುತ್ತಿದ್ದಾರೆ. ಜಗತ್ತಿನ ಅತಿ ಸಾಮಾನ್ಯ ದೇಶಗಳು ಸಂಕಷ್ಟಗಳಿಗೆ ಸಿಲುಕಿದಾಗಲೂ ಅರಬ್ ಜಗತ್ತು ಸ್ಪಂದಿಸುತ್ತದೆ, ಮೊನ್ನೆಯಷ್ಟೇ ಆಮ್ಲಜನಕದ ಕೊರತೆಯಿಂದ ಭಾರತ ಬಳಲಿದಾಗ ಟನ್ ಗಟ್ಟಲೇ ಆಕ್ಷಿಜನ್‌ನ್ನು ಸರಬರಾಜು ಮಾಡಿದ್ದು ಇದೇ ಅರಬ್ ರಾಷ್ಟ್ರಗಳು. ಯುದ್ಧ, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಅನೇಕ ರಾಷ್ಟ್ರಗಳು ಬಸವಳಿದಾಗ ಅಲ್ಲಿನ ಹಸಿವು, ದಣಿವನ್ನು ಅರಬ್ ರಾಷ್ಟ್ರಗಳು ತಣಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಅಂತಹಾ ಅರಬ್ ಪ್ರಭುಗಳು ಫೆಲೆಸ್ತೀನ್ ವಿಚಾರದಲ್ಲಿ ಮಾತ್ರ ಅಲಿಪ್ತ ನೀತಿಯನ್ನು ತಾಳುತ್ತಾರೆ. ಮೊನ್ನೆಯಷ್ಟೇ ಸುಡಾನ್ ಆಫ್ರಿಕಾ ಶೃಂಗಸಭೆಯಲ್ಲಿ ಮಾತನಾಡಿದ್ದ ಸೌದಿ ಅರೇಬಿಯಾದ ವಿದೇಶ ಸಚಿವ ಫೈಝಲ್ ಬಿನ್ ಫರ್ಹಾನ್, ಫೆಲೆಸ್ತೀನ್- ಸಂಘರ್ಷ ಮಧ್ಯಪ್ರಾಚ್ಯವನ್ನು ತಪ್ಪು ದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂಬ ಉಢಾಫೆಯ ಮಾತನ್ನಾಡಿದ್ದರು. 


ಅಷ್ಟಕ್ಕೂ ಇವರ ತಟಸ್ಥ ನಿಲುವಿಗೆ ಕಾರಣವಾದರೂ ಏನು..?ಅಲ್ಲಿನ ನೋವು, ನರಳಾಟಗಳಿಗೆ ಅರಬ್ ಜಗತ್ತು ನೀಡಿದ ಕನಿಷ್ಟ ಸಾಂತ್ವನವಾದರೂ ಯಾವುದು..? ಅಲ್ಲಿನ ಆಕ್ರಂಧನ, ರೋಧನೆಗಳು ಇನ್ನೂ ಯಾಕೆ ಅರಬ್ ಪ್ರಭುಗಳನ್ನು ಎಚ್ಚರಿಸುತ್ತಿಲ್ಲ.?  ಈ ಪ್ರಶ್ನೆಗಳ ಜಾಡು ಹಿಡಿದು ಹೊರಟರೆ ಎರಡು ರೀತಿಯಲ್ಲಿ‌ ಉತ್ತರ ಲಭಿಸುತ್ತದೆ. ಒಂದು ಮಹಾಯುದ್ಧದ ಸಂಧರ್ಭದಲ್ಲಿ ತುರ್ಕಿಯ ಪತನಕ್ಕಾಗಿ ಬ್ರಿಟನ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ಎರಡನೇಯದ್ದು ಇರಾನ್ ವಿರುದ್ದವಾಗಿ ಇಸ್ರೇಲ್‌ನೊಂದಿಗೆ ಯು‌ಎಇ ಮಾಡಿಕೊಂಡ ಒಪ್ಪಂದ.

* * *

ಅದು ಹತ್ತೊಂಬತ್ತನೇ ಶತಮಾನ. ಅರಬ್ ದೊರೆಗಳು ಅಧಿಕಾರದ ಲಾಲಸೆಗೆ ಜೋತು ಬಿದ್ದ ಸಮಯ. ಉಸ್ಮಾನಿಗಳ ಕೈಯ್ಯಲ್ಲಿದ್ದ ಅಧಿಕಾರವನ್ನು ಕಿತ್ತುಕೊಳ್ಳಲು ಹವಣಿಸಿದ ಈ ದೊರೆಗಳು ನಂಟು ಸ್ಥಾಪಿಸಿಕೊಂಡದ್ದು ಮಾತ್ರ ಬ್ರಿಟನ್‌ನಂಥ ಅಪಾಯಕಾರಿ ರಾಷ್ಟ್ರಗಳೊಂದಿಗೆ. ಫೆಲೆಸ್ತೀನ್ ಮತ್ತು ಬೈತುಲ್ ಮುಖದ್ದಸ್ ಮುಸ್ಲಿಮರ ಕೈ ತಪ್ಪಲು, ಕೃತಘ್ನ ಜೂದರು ಫೆಲೆಸ್ತೀನ್‌ ಸೇರಲು ಸೌದಿ ದೊರೆಗಳು ಪ್ರಮುಖ ಕಾರಣಕರ್ತರಾದರು. ಬ್ರಿಟನ್‌ ಜತೆಗಿನ ನಿರಂತರ ಸಂಬಂಧ, ಸ್ವಾಮಿನಿಷ್ಠೆ, ದೂರಗಾಮಿ ಪರಿಣಾಮವನ್ನು ಅರಿಯದೇ ಮಾಡಿಕೊಂಡ ಒಪ್ಪಂದ, ಇವೆಲ್ಲದರ ನಿಮಿತ್ತ ಫೆಲೆಸ್ತೀನ್, ಲೆಬನಾನ್ ಸಮೇತ ಹಲವು ಮುಸ್ಲಿಂ ರಾಷ್ಟ್ರಗಳು ದಿನಬೆಳಗಾಗುವುದರೊಳಗೆ ಬ್ರಿಟನ್ ಪಾಲಾದವು. ಇಲ್ಲದಿದ್ದರೆ ಈ ಪವಿತ್ರ ಭೂಮಿ ಇನ್ನೂ ಮುಸ್ಲಿಮರ ಕೈಯ್ಯಲ್ಲಿ ಭಧ್ರವಾಗಿರುತ್ತಿತ್ತು. 


ಮುಸ್ಲಿಂ ರಾಷ್ಟ್ರಗಳ ಮೇಲೆ ಪಾರುಪತ್ಯ ಸ್ಥಾಪಿಸಲು ಹವಣಿಸಿದ್ದ ಬ್ರಿಟನ್‌ಗೆ ಅಲ್ಲಿನ ತುರ್ಕೀ ಕೇಂದ್ರೀಕೃತ ಪ್ರಾಂತೀಯ ಆಡಳಿತವನ್ನು ಬುಡಮೇಲುಗೊಳಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಸೌದೀ ದೊರೆಗಳನ್ನು ಬಗಲಿಗೆ ಹಾಕಿಕೊಂಡ ಬ್ರಿಟನ್ ಅರಬ್ ನಾಡಿನೆಲ್ಲೆಡೆ ಹಿಂಸಾಚಾರ ನಡೆಸಲು ಕುಮ್ಮಕ್ಕು ನೀಡಿತು. ಅಷ್ಟರಲ್ಲಿ ಅರಬರಲ್ಲಿ ದೇಶೀಯವಾದವೂ ಬೀಜಾಂಕುರವಾದವು. ದೂರದ ತುರ್ಕಿಗಳಿಂದ ಆಳಿಸಿಕೊಳ್ಳುವುದು ತಮ್ಮ ಪ್ರತಿಷ್ಟೆಗೆ ಭಂಗ ಎಂಬ ಮನೋಭಾವವನ್ನೂ ಬ್ರಿಟನ್ ಅರಬರಲ್ಲಿ ಮೂಡಿಸಿತು. ಭಾಷೆ, ಪ್ರಾದೇಶಿಕತೆ, ಸಂಸ್ಕೃತಿ, ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ಕಲಹಗಳು ಬುಗಿಲೆದ್ದವು. ತುರ್ಕಿಗಳ ವಿರುದ್ದ ದಂಗೆಯೇಳಲು ಮತ್ತು ಹಿಜಾಝ್‌ನಲ್ಲಿ ನರಮೇಧ ನಡೆಸಲೂ ಕೊನೆಯದಾಗಿ ಸ್ವತಂತ್ರವಾದ ಆಡಳಿತ ಸ್ಥಾಪಿಸಲು ಸರ್ವ ನೆರವನ್ನೂ ನೀಡಲಾಗುವುದೆಂದು ಬ್ರಿಟನ್‌ನ ಈಸ್ಟ್ ಇಂಡಿಯಾ ಕಂಪೆನಿ ಸೌದಿ ದೊರೆಗಳಿಗೆ ಆಶ್ವಾಸನೆಯನ್ನು ನೀಡಿತು. ತುರ್ಕಿಗಳ ವಿರುದ್ದ ನಡೆದ ದಂಗೆಯಲ್ಲಿ ಅರಬ್ ನಾಡಿನಾದ್ಯಂತ ಅಸ್ತಿತ್ವದಲ್ಲಿದ್ದ ಮುಹಮ್ಮದ್ ಪಾಶಾ ಸಾರಥ್ಯದ ಆಡಳಿತ ಕ್ಷಯಿಸತೊಡಗಿತು. ನಜ್ದ್, ಹಸ್ಸಾ ಮುಂತಾದ  ಪ್ರದೇಶಗಳನ್ನು ವಶಪಡಿಸಿಕೊಂಡ ಸೇನಾ ಮುಖ್ಯಸ್ಥನಾಗಿದ್ದ ಅಬ್ದುಲ್ ಅಝೀಝ್ ಬಿನ್ ಸುಊದ್ ಬಳಿಕ ಸೌದಿ ಅರೇಬ್ಯಾದ ಪ್ರಭುತ್ವಗಾದಿಗೆ ಹತ್ತಿದ.


 1915ರಲ್ಲಿ ಬ್ರಿಟನ್‌ನ ಪೊಲಿಟಿಕಲ್ ರಾಯಭಾರಿಯಾಗಿದ್ದ ಸರ್ ಫೆರ್ಸಿ ಮತ್ತು ಇಬ್ನು ಸುಊದ್ ನಡುವೆ ಒಂದು ಮಹತ್ವದ ಮಾತುಕತೆ ನಡೆಯುತ್ತದೆ. ಈ ಮಾತುಕತೆ ಪ್ರಕಾರ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಉಸ್ಮಾನಿಗಳ ವಿರುದ್ದ ಬ್ರಿಟಿಷರಿಗೆ ನೆರವಾಗಬೇಕು ಮತ್ತು ಫೆಲೆಸ್ತೀನ್‌ನಲ್ಲಿ ಜೂದರಿಗೆ ನೆಲೆಸಲು ಒಂದಷ್ಟು ನೆಲ ನೀಡಬೇಕೆಂಬುದಾಗಿತ್ತು. ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಸುಊದ್ ಫೆಲೆಸ್ತೀನ್ ತನ್ನ ಆಡಳಿತ ವ್ಯಾಪ್ತಿಗೊಳಪಡದ ಸ್ಥಳವೆಂದೂ, ಅಲ್ಲಿ ಜೂದರಿಗೆ ನೆಲೆ ಒದಗಿಸುವುದರಲ್ಲಿ ತನಗೆ ಯಾವುದೇ ಅಭ್ಯಂತರವಿಲ್ಲವೆಂದೂ ಲಿಖಿತ ರೂಪದಲ್ಲಿ ಧೃಢಪಡಿಸಿದ. (ಚಿತ್ರದಲ್ಲಿ ಪತ್ರವನ್ನು ಕಾಣಬಹುದು) ಅದೇ ರೀತಿ ಮಹಾ ಯುದ್ದ ಸಮಯದಲ್ಲಿ ತಟಸ್ಥ ನಿಲುವನ್ನು ತಾಳುವುದಾಗಿಯೂ ಬ್ರಿಟನ್‌ಗೆ ಮಾತು ಕೊಟ್ಟ. 


ಹತ್ತೊಂಬತ್ತನೇ ಶತಮಾನದವರೆಗೆ ಯುರೋಪ್‌ನಾದ್ಯಂತ ಹರಡಿ ಹೋದ ಜೂದನ್ನರು ಸಮಾಜದ ಆಯಕಟ್ಟಿನ ರಂಗಗಳಲ್ಲಿ ಗುರುತಿಸಿಕೊಳ್ಳತೊಡಗಿದರು. ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲೂ ಮೇಲುಗೈ ಸಾಧಿಸತೊಡಗಿದರು. ಇದು ಐರೋಪ್ಯನ್ನರ ಕಣ್ಣು ಕೆಂಪಾಗಿಸಿತು. ಜೂದ ವಿರೋಧಿ ಅಲೆಗಳು ಏಳತೊಡಗಿದವು. ಇದಕ್ಕೆ ಪ್ರತಿರೋಧ ಎಂಬಂತೆ ಜೂದ ಪತ್ರಕರ್ತನಾಗಿದ್ದ ಥಿಯೋಡರ್ ಹೆರ್ಸಲ್, ಯಹೂದ್ಯರ ಅಸ್ಮಿತೆಯನ್ನು ಎತ್ತಿ ಹಿಡಿಯಲು ಝಿಯೋನಿಸಂ ಎಂಬ ಹೊಸ ಪಂಥಕ್ಕೆ ರೂಪ ನೀಡುತ್ತಾನೆ. ಯಹೂದ್ಯರ ಮೇಲೆ ಶತಮಾನಗಳಿಂದ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆಯನ್ನು ಕೊನೆಗಾಣಿಸಬೇಕಾದರೆ ಒಂದು ಸ್ವತಂತ್ರ ರಾಷ್ಟ್ರ ಸ್ಥಾಪಿಸುವುದು ಅನಿವಾರ್ಯ ಎಂದು ಹೆರ್ಸೆಲ್ ಪ್ರತಿಪಾದಿಸುತ್ತಾನೆ. ಅದಕ್ಕೆಂದೇ ಆತ ಫೆಲೆಸ್ತೀನ್‌ನಲ್ಲಿ ಯಹೂದ್ಯನ್ನರಿಗೆ (ತೌರಾತ್‌ನಲ್ಲಿ) ವಾಗ್ದಾನ ಮಾಡಲ್ಪಟ್ಟ ಭೂಮಿಯೊಂದಿದೆ ಎಂಬ ವಿಚಿತ್ರ ಸುಳ್ಳೊಂದನ್ನು ಸೃಷ್ಟಿಸಿದ. ಒಂದು ಕಾಲಕ್ಕೆ ಧಿಕ್ಕಾರಿಗಳಾಗಿ ಫೆಲೆಸ್ತೀನ್‌ನಿಂದ ಹೊರದಬ್ಬಲ್ಪಟ್ಟ ಜೂದನ್ನರಿಗೆ ಮತ್ತೊಮ್ಮೆ ಆ ಪ್ರದೇಶವನ್ನು ಸೇರುವುದು ಕನಸಿನ ಮಾತಾಗಿತ್ತು. ಅವರಿಗೆ ಅಲ್ಲಿ ಯಾವುದೇ ಹಕ್ಕೂ ಇಲ್ಲವೆಂಬುದು ಅವರಿಗೆ ಖಾತರಿಯಿತ್ತು. ಆದರೆ ಬ್ರಿಟನ್‌ನ ಬೆಂಬಲದಿಂದಾಗಿ ಹೆರ್ಝಲ್‌ನ ಈ ವಾದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದವು‌. 


ಕೆಲವೇ ಸಮಯದ ಅಂತರದಲ್ಲಿ ವಿಶ್ವ ಮಹಾ ಯುದ್ದ ಆಸ್ಪೋಟಗೊಂಡಿತು. ಸೌದಿದೊರೆಗಳು ಬ್ರಿಟನ್ ಪರವಾಗಿ ನಿಂತುಕೊಂಡರು. ಅಸ್ಥಿರಗೊಂಡ ತುರ್ಕಿ ಆಡಳಿತವನ್ನು ಕಿತ್ತೆಸೆದ ಬ್ರಿಟನ್ ಖಲೀಫಾರನ್ನು ಪದಚ್ಯುತಗೊಳಿಸಿ ಫೆಲೆಸ್ತೀನ್ ಸಮೇತ ಹಲವು ಮುಸ್ಲಿಂ ಪ್ರಾಂತ್ಯಗಳ‌ ಮೇಲೆ‌‌ ಆಧಿಪತ್ಯ ಸ್ಥಾಪಿಸಿಕೊಂಡಿತು. ಫೆಲೆಸ್ತೀನ್‌ನಲ್ಲಿ ಒಂದು ಸ್ವತಂತ್ರ ಜೂದ ರಾಷ್ಟ್ರ ನಿರ್ಮಿಸುವುದಾಗಿ ಬ್ರಿಟಿಷ್ ವಿದೇಶ ಕಾರ್ಯಾಂಗ ಕಾರ್ಯದರ್ಶಿ ಬಾಲ್ಫರ್ ಘೋಷಿಸಿದ. 1930ರಲ್ಲಿ ಸರ್ ಪೆರ್ಸಿ ಕೊಕ್ಸ್‌ನೊಂದಿಗೆ ಕಥಾಕಥಿತ 'ವಾಗ್ದಾನ ಭೂಮಿ'ಯನ್ನು ಸೌದಿ ದೊರೆ ಅಬ್ದುಲ್ ಅಝೀಝ್ ಸಂದರ್ಶಿಸಿದ. (ಎರಡನೇ‌ ಚಿತ್ರದಲ್ಲಿದೆ) ಅಷ್ಟರಲ್ಲಿ ಯಹೂದ್ಯರ ವಲಸೆ ಆರಂಭವಾಯಿತು ನೋಡಿ. 1927ರಿಂದ 1945ರ ಅವಧಿಯಲ್ಲಿ ಫೆಲೆಸ್ತೀನ್‌ಗೆ ಠಳಾಯಿಸಿದ್ದು ಬರೋಬ್ಬರಿ 2,50,000 ಯಹೂದ್ಯರಾಗಿದ್ದರು.  ಬ್ರಿಟನ್‌ನ ಈ ಎಲ್ಲಾ ಹರಕತ್ತನ್ನು ಸೌದಿ‌ ಸರಕಾರ ಕೈಕಟ್ಟಿ ಬೆಂಬಲಿಸಿತು. ಇತಿಹಾಸದ ನಿರಾಕರಣೆ ಎಂಬಂತೆ ಇಸ್ರೇಲ್‌ ಫೆಲೆಸ್ತೀನನ್ನರ ಎದೆ ಮೇಲೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿಯೇ ಬಿಟ್ಟಿತು. ಇದರೊಂದಿಗೆ ಅಲ್ಲಿನ ಮೂಲ ನಿವಾಸಿಗಳ ಬದುಕಿಗೆ ಬೆಂಕಿ ಬಿತ್ತು. ಫೆಲೆಸ್ತೀನ್‌ ಜಗತ್ತಿನ ರಕ್ತ ರಂಜಿತ ಅಧ್ಯಾಯವಾಗಿ ಮಾರ್ಪಟ್ಟಿತು. ಇಡೀ ಜಗತ್ತೇ ಈ ಪುಟ್ಟ ದೇಶಕ್ಕಾಗಿ ಮಮ್ಮಲ ಮರುಗಿದರೆ ಅರಬ್ ದೊರೆಗಳ ಕನಿಷ್ಠ ಕನಿಕರವೂ ಫೆಲೆಸ್ತೀನ್‌ಗೆ ಸಿಗದೇ ಹೋದವು. 


ಇಸ್ರೇಲ್ ವಿರುದ್ದ ಅರಬ್ ಜಗತ್ತು ನಿರ್ಲಿಪ್ತವಾಗಿರಲು ಇನ್ನೊಂದು ಕಾರಣ ಸೆಮೆಟಿಕ್ ವಂಶೀಯ ನಂಟು. ಈ ವಿಕ್ಷಿಪ್ತ ವಂಶೀಯತೆ ಮುನ್ನಲೆಗೆ ಬಂದದ್ದೇ ಇರಾನ್ ಅರಬ್ ನಡುವೆ ಶೀತಲ ಸಮರ ಭುಗಿಲೆದ್ದಾಗ. ಈ ಸಮಯಕ್ಕೆ ಇರಾನ್ ವಿರುದ್ಧವಾಗಿ ಇಸ್ರೇಲ್‌ನೊಂದಿಗೆ ಯು‌.ಎ.ಇ ಅಬ್ರಹಾಂ ಎಂಬ ಹೆಸರಲ್ಲಿ ಒಪ್ಪಂದವೊಂದನ್ನು ಮಾಡುತ್ತದೆ. ಇರಾನನ್ನರು ಮುಸ್ಲಿಮರಾದರೂ ಜನಾಂಗೀಯವಾಗಿ ಆರ್ಯನ್ನರು.  ಅರಬರು ಮತ್ತು ಜೂದನ್ನರು ಮೂಲತಃ ಇಬ್ರಾಹಿಂ ನಬಿಯವರ ವಂಶಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಸೆಮೆಟಿಕ್ ಪರಂಪರೆಯಿತ್ತು.


ಒಂದು ಕಡೆ ಬಲಿಷ್ಠ ಅಮೇರಿಕಾವನ್ನೇ ಕೊಡವಿ ಹಾಕುವ ಮಟ್ಟಿಗೆ ಇರಾನ್ ಬೆಳೆದು ನಿಂತಿದೆ. ಮುಂದೊಂದು ದಿನ ಅರಬ್ ರಾಷ್ಟ್ರಗಳೂ ಫೆಲೆಸ್ತೀನ್‌ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ಇಂಥದ್ದೊಂದು ಪ್ರಕ್ರಿಯೆ ನಡೆದೇ ಹೋದರೆ ಇಸ್ರೇಲ್ ಏಕಾಂಗಿಯಾಗುವ ಭೀತಿ ಅವರನ್ನು ಕಾಡತೊಡಗಿದವು. ಈ ಕಾರಣಕ್ಕೆ ಇಸ್ರೇಲ್, ನಾವು ಒಂದೇ ಜನಾಂಗಕ್ಕೆ ಸೇರಿದವರಾಗಿದ್ದು ಜಾಗತಿಕವಾಗಿ ಒಂದು ಶಕ್ತಿಯಾಗಿ ನಿಲ್ಲಬೇಕೆಂದು ಯು‌ಎಇಯ ಕಿವಿಯೂದಿತು. ಪರಿಣಾಮ ನಡೆದ ಒಪ್ಪಂದವೇ ಅಬ್ರಹಾಂ ಒಪ್ಪಂದ. ಜನಾಂಗೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದ ಈ ಒಪ್ಪಂದ ಅರಬ್ ಜೂದರ ನಡುವೆ ಮತ್ತೆ ಮೈತ್ರಿ ಸ್ಥಾಪನೆಯಾಗಲು ಪ್ರೇರಣೆಯಾದವು. ಬಳಿಕ ನಡೆದ ವಿದ್ಯಾಮಾನಗಳೆಲ್ಲಾ ಇಸ್ರೇಲ್ ವಿರುದ್ಧ ಕಠಿಣ ನಿರ್ಣಯವನ್ನು ತೆಗೆದುಕೊಳ್ಳಲು ಯು‌ಎಇಗೆ ತೊಡಕಾಯಿತು. ಫೆಲೆಸ್ತೀನ್ ವಿಚಾರದಲ್ಲಿ ಅರಬ್ ದೊರೆಗಳು ತಟಸ್ಥ ನಿಲುವು ತಾಳಲು ಈ ಎರಡು ಒಪ್ಪಂದಗಳೇ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ.

ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ


 ಹದಿನಾಲ್ಕು ಶತಮಾನಗಳ ಹಿಂದಿನ ಅನ್ಸಾರ್ ಗಳನ್ನು ನೆನಪಿಸುವ ಸಹಾಯ್ ತಂಡ

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

ಮುಹಮ್ಮದುರ್ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸಹಾಬಿಗಳ ಪದವಿಗೆ ಯಾರನ್ನೂ ಹೋಲಿಕೆ ಮಾಡುವಂತಿಲ್ಲ.

ಅದು ಪ್ರವಾದಿಗಳ ನಂತರದ ಪರಮೋನ್ನತ ಪದವಿ ಯಾಗಿರುತ್ತದೆ.

لو أن أحدكم أنفق مثل أحد ذهبا ما أدرك مُدّ أحدهم ولا نصيفه

ನಿಮ್ಮಲ್ಲಿ ಯಾರಾದರೊಬ್ಬರು ಒಬ್ಬರು ಉಹ್ದು ಎಂಬ ಪರ್ವತ ಸಮಾನವಾದ ಚಿನ್ನವನ್ನು ದಾನ ಮಾಡಿದರೆ ನನ್ನ ಸ್ವಹಾಬಿಗಳಲ್ಲಿ ಒಬ್ಬರು ಮಾಡುವ ಒಂದು ಹಿಡಿ ಅಥವಾ ಅರ್ಧ ಹಿಡಿ ದಾನಕ್ಕೆ ಸಮಾನವಾಗಲು ಸಾಧ್ಯವಿಲ್ಲ.


ಸತ್ಯವಿಶ್ವಾಸಿಯಾಗಿ ಒಂದು ಸೆಕೆಂಡು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಯಲ್ಲಿ ಭಾಗವಹಿಸುವ ಮೂಲಕ ಪ್ರಾಪ್ತವಾಗುವ ಸ್ವಹಾಬಿ ಎಂಬ ಮಹೋನ್ನತ ಪದವಿಯನ್ನು ತಲುಪಲು ಸ್ವಹಾಬಿಯಲ್ಲದವರು ತಮ್ಮ ಜೀವನಪೂರ್ತಿ ಹಿಮಾಲಯ ಸಮಾನವಾದ ಸತ್ಕರ್ಮಗಳನ್ನು ಮಾಡಿದರೂ ಸಾಧ್ಯವಿಲ್ಲ ಎಂದಾಗಿದೆ ಇದರ ತಾತ್ಪರ್ಯ.


ಅದರಲ್ಲೂ ಸ್ವಹಾಬಿಗಳಲ್ಲಿ ಅನ್ಸಾರುಗಳು ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಮದೀನಾ ನಿವಾಸಿಗಳಾದ ಸ್ವಹಾಬಿಗಳು ಸ್ವಹಾಬಿಗಳಲ್ಲಿ ವಿಶೇಷ ಸ್ಥಾನಮಾನ ವನ್ನು ನೀಡಲ್ಪಟ್ಟವರೂ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅತ್ಯಂತ ಪ್ರೀತಿಯಿರುವವರೂ ಆಗಿದ್ದರು.

ಇದಕ್ಕೆ ಕಾರಣ ಅವರ ಅಸಾಮಾನ್ಯ ಕಾರುಣ್ಯ ಸೇವೆ ಹಾಗೂ  ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅಪಾರ ಪ್ರೀತಿಯಾಗಿತ್ತು.

ಮಕ್ಕಾದಿಂದ ಸತ್ಯಪ್ರಚಾರಕ್ಕಾಗಿ ತಮ್ಮದೆಲ್ಲವನ್ನು, ತಮ್ಮವರೆಲ್ಲರನ್ನು ಉಪೇಕ್ಷಿಸಿ ಮದೀನಾಕ್ಕೆ ಹಿಜ್ರಾ ಬಂದಿದ್ದ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಮತ್ತು ಮುಹಾಜಿರ್ ಗಳಾದ ಸಹಾಬಿಗಳನ್ನು ಮದೀನಾ ನಿವಾಸಿಗಳಾದ ಈ ಅನ್ಸಾರ್ ಗಳು ಉಪಚರಿಸಿದ ರೀತಿ ಮಾತ್ರ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ್ದಾಗಿತ್ತು.

ತಮಗಿಂತಲೂ ತಮ್ಮ ಕುಟುಂಬದ ಸದಸ್ಯರಿಗಿಂತಲೂ ಪ್ರಾಧಾನ್ಯತೆ ಹಾಗೂ ಮಹತ್ವವನ್ನು ಎಲ್ಲಾ ವಿಷಯಗಳಲ್ಲಿ ಇವರಿಗೆ ನೀಡುತ್ತಿದ್ದರು.ಮಾತ್ರವಲ್ಲ ತಮ್ಮ ಪತ್ನಿಯರನ್ನು ತ್ವಲಾಖ್ ಹೇಳಿ ಪತ್ನಿಯರಿಲ್ಲದ ಮುಹಾಜಿರ್ ಗಳಾದ ಸಹಾಬಿಗಳಿಗೆ ವಿವಾಹ ಮಾಡಿಕೊಡಲೂ ಸಿದ್ಧರಾಗುತ್ತಿದ್ದರು ಎಂದು ಚರಿತ್ರೆಯಿಂದ ಯಾರಿಗೂ ತಿಳಿಯಬಹುದಾದ ಸತ್ಯ ಸಂಗತಿ ಯಾಗಿದೆ. 

ಇವರ ಇಂತಹ ಅಸಾಮಾನ್ಯ ಕಾರುಣ್ಯ ಸೇವೆಯ ಕಾರಣದಿಂದಲೇ ಇವರಿಗೆ ಈ ಸಹಾಯಿಗಳು (ಅನ್ಸಾರ್ ಗಳು) ಎಂಬ ವಿಶೇಷ ನಾಮ ಲಭಿಸುವಂತಾಯ್ತು.


ಇದಿಷ್ಟು ಬರೆಯಲು ಕಾರಣ ಮೊನ್ನೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಹೆಂಗಸಿಗೆ ಅನಾರೋಗ್ಯ ಕಾರಣ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು.ನಂತರ ವಿಷದವಾಗಿ ಅರಿತಾಗ ಅವರಿಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದು

ಎರಡು ದಿನಗಳ ಹಿಂದೆ ಬಹಳ ಸೀರಿಯೆಸ್ ಆಗಿತ್ತು. 

ಆ ಸಮಯದಲ್ಲಿ ರಾತ್ರೋ ರಾತ್ರಿ ಅವರಿಗೆ ಬೇಕಾದ ಚಿಕಿತ್ಸೆಯ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಿದ್ದು ಮೂಡುಬಿದಿರೆ,ಕೈಕಂಬ ಸರ್ಕಲ್ ಕರ್ನಾಟಕ ಮುಸ್ಲಿಂ ಜಮಾಅತ್ ನ ಸಹಾಯಿ ತಂಡದ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್  ಸಂಘಟನೆಯ ಕಾರ್ಯಕರ್ತರು ಎಂದು ತಿಳಿದಾಗ ನನಗೆ ಬಹಳ ಅಚ್ಚರಿಯಾಯಿತು.

ಯಾಕೆಂದರೆ ನಮ್ಮ ಅಕ್ಕ ಪಕ್ಕದಲ್ಲೇ ನಡೆದ ಈ ಘಟನೆಯಲ್ಲಿ ನಾನೂ ಸೇರಿದಂತೆ ಯಾರಿಗೂ ತಿಳಿಯದ ರೀತಿಯಲ್ಲಿ ಬಹಳ ಆತ್ಮಾರ್ಪಣೆ ಯಿಂದ ಇಂತಹ ಸೇವೆ ಮಾಡುವುದೆಂದರೆ ಅದು ಹಿಂದಿನ ಮದೀನಾದ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಇದು ಒಂದು ಎರಡು ಉದಾಹರಣೆಗಳಲ್ಲ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ಸೇವೆಯು ಸದ್ದಿಲ್ಲದೆ ಮುಂದುವರಿಯುತ್ತಲೇ ಇದೆ.

ಕೋವಿಡ್ ರೋಗಿಗಳ ಶಿಸ್ರೂಸೆ ಮಾತ್ರವಲ್ಲದೆ ಈ ಲಾಕ್ ಡೌನ್ ಅವಧಿ ಯಲ್ಲಿ ಕರ್ನಾಟಕದ ಉದ್ದಗಲಕ್ಕೂ ಕಷ್ಟ ಅನುಭವಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮುಸ್ಲಿಂ ಜಮಾಅತ್ ನ ಸಹಾಯ್,ಎಸ್ವೈಎಸ್ ನಾ ಇಸಾಬ, ಎಸ್ಸೆಸ್ಸೆಫ್ ಗಳ ಮುಖಾಂತರ ಆಹಾರ ಕಿಟ್ ಗಳನ್ನು ಸದ್ದಿಲ್ಲದೆ ವಿತರಿಸಲಾಗಿದೆ. 

ವಿವರಿಸುತ್ತಾ ಹೋದರೆ ಇದರ ಪಟ್ಟಿ ದೀರ್ಘವಾಗಿ ಬಿಡಬಹುದು


ಇದರಲ್ಲಿರುವ ವಿಶೇಷತೆ ಏನೆಂದರೆ ಈ ಕಾರ್ಯಕರ್ತರಲ್ಲಿರುವ ನಿಷ್ಕಳಂಕತೆಯಾಗಿದೆ.

ಸೇವೆಗಳು ಇವತ್ತು ಅನೇಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ಮಾಡುತ್ತವೆ.

ಆದರೆ ಆ ಸೇವೆಗಳು ಆಕಾಂಕ್ಷಿ ಗಳಿಗೆ ತಲುಪುವ ಮೊದಲೇ ಅದರ ಫೋಟೋಗಳು ಅಥವಾ ಅದರ ನಾಯಕರ ಫೋಟೋಗಳು ಪತ್ರಿಕೆಗಳಲ್ಲಿ,ಜಾಲತಾಣ ಗಳಲ್ಲಿ ವೈರಲಾಗಿ ಬಿಡುತ್ತವೆ.

ಇದರಿಂದಾಗಿ ಇವರ ಉದ್ದೇಶದಲ್ಲಿ ಸಂಶಯ ಮೂಡುತ್ತದೆ.

ಇವರ ಉದ್ದೇಶ ಕೇವಲ ಸೇವೆಯಾಗಿರದೆ ಗ್ರಾಮ,ಜಿಲ್ಲಾ ಪಂಚಾಯತ್ ಗಳೋ ಅಥವಾ ಅಸಂಬ್ಲಿ,ಪಾರ್ಲಿಮೆಂಟ್ ಗಳೋ ಅಥವಾ ಇತರ ಐಹಿಕ ಲಾಭಗಳು ಆಗಿರಲಿಕ್ಕೆ ಸಾಧ್ಯತೆ ಹೆಚ್ಚು.


ಆದರೆ ಇದು ಹಾಗಲ್ಲ.ಇದರಲ್ಲಿ ಯಾವುದೇ ರಾಜಕೀಯ ಪದವಿಗಳೋ ಐಹಿಕ ಲಾಭಗಳೋ ಉದ್ದೇಶವಾಗಲು ಸಾದ್ಯವೇ ಇಲ್ಲ.

ಈ ಸಂಘಟನೆಗಳ ರೂಪೀಕರಣದ ಉದ್ದೇಶವೇ ಐಹಿಕ ಸೇವೆಯ ಮೂಲಕ ಪಾರತ್ರಿಕ ಮೋಕ್ಷ ಪಡೆಯುವುದು ಮಾತ್ರವಾಗಿದೆ.

ಅದರಿಂದಾಗಿಯೇ ಇದು ಮದೀನಾ ಅನ್ಸಾರ್ ಗಳ ಸೇವೆಯನ್ನು ಸ್ವಲ್ಪ ಮಟ್ಟಿಗೆ ನೆನಪಿಸುವಂತಿದೆ ಎಂದು ಹೇಳಲು ಕಾರಣ. 

ಇವರ ಮಾದರೀ ನಾಯಕರು ಆ ಮದೀನಾದ ಅನ್ಸಾರ್ ಗಳೆಂಬ ಸಹಾಯಿಗಳಾಗಿರುತ್ತಾರೆ.


ಇದರಲ್ಲಿ ತನ್ನೆಲ್ಲಾ ಸಮಯವನ್ನು ತೊಡಗಿಸಿ ಕೊಂಡಿರುವ ಸುನ್ನೀ ಸಂಘ ಕುಟುಂಬದ ಸಕ್ರಿಯ ನಾಯಕ ಮಂಗಳೂರು ಅಶ್ರಫ್ ಕಿನಾರ ರವರು ಈದ್ ಶುಭಾಶಯ ಹೇಳಲು ಫೋನ್ ಮಾಡಿದ್ದರು.


ಸೇವೆಯ ಬರದಲ್ಲಿ ರೋಗಿಗಳ ಮಧ್ಯೆ ಓಡಾಡುವಾಗ ನಿಮ್ಮ ಸ್ವಶರೀರಗಳನ್ನು ಸಂಪೂರ್ಣ ಕಡೆಗಣಿಸದೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ  'ಹೆದರಬೇಕಾಗಿಲ್ಲ ನಾವು ನಿಸ್ವಾರ್ಥ ಸೇವೆ ಮಾಡುವಾಗ ನಮಗೆ ಅಲ್ಲಾಹನ ಪ್ರತ್ಯೇಕ ಸಹಾಯ ಇದ್ದೇ ಇರುತ್ತದೆ' ಎಂದಾಗಿತ್ತು


ಇದರಿಂದೆಲ್ಲಾ ಇವರ ಉದ್ದೇಶ ಶುದ್ಧಿ ಯಾರಿಗೂ ಸ್ಪಷ್ಟವಾಗುವತಂದ್ದೇ ಆಗಿರುತ್ತದೆ.


ಕರ್ನಾಟಕದ ಮುಸ್ಲಿಂ ಜಮಾಅತ್ ರೂಪೀಕರಿಸುವಾಗ ಹಲವರು ಹಲವಾರು ಸಂಶಯಗಳನ್ನು ವ್ಯಕ್ತಪಡಿಸಿದ್ದರು.

ಇದೇನು ರಾಜಕೀಯ ಪಕ್ಷವೋ ಅಥವಾ ಬೇರೇನಾದರೂ ಐಹಿಕ ಗುರಿಯಿದೆಯೇ...

ಎಂದೆಲ್ಲಾ.

ಅವರಿಗೆಲ್ಲಾ ಈಗ ಉತ್ತರ ಸಿಕ್ಕಿರ ಬಹುದು ತಾನೇ.


ಅಲ್ಲಾಹು ಈ ಸಹಾಯಿ ತಂಡ ಮತ್ತು ನಮ್ಮೆಲ್ಲಾ ಸಂಘಟೆನೆಗಳ ಕಾರ್ಯಕರ್ತರು,ನಾಯಕರ ಸೇವೆಗಳನ್ನು ಸ್ವೀಕರಿಸಿ ದೀರ್ಘಾಯುಷ್ಯ ಆಫಿಯತ್ತನ್ನು ಕರುಣಿಸಲಿ. ಅಮೀನ್

Monday, May 17, 2021

ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು


ಮರೆಯಾಗುತ್ತಿರುವ ಸ್ಫೂರ್ತಿದಾಯಕ ನಾಯಕರು

✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

1990-92ನೇ ಇಸವಿಯ ಆಸುಪಾಸು.

ವಿನೀತನಾದ ನಾನು ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿ ಸೇವಾ ರಂಗಕ್ಕೆ ಪ್ರವೇಶಿಸಿ ಕನ್ನಂಗಾರಿನಲ್ಲಿ ಸೇವೆಯನ್ನು ಪ್ರಾರಂಭಿಸಿದ ಆರಂಭದ ದಿನಗಳದು.

ಅಂದಿನ ಯುವ ವಿದ್ವಾಂಸರಲ್ಲಿ ಹೊಸ ಚಳುವಳಿಯ ಮನೋಭಾವ ಹುಟ್ಟಿಕೊಂಡು

ಕನ್ನಡ ಮಣ್ಣಿನಲ್ಲಿ ಏನಾದರೂ ಸಂಘಟನಾ ಚಾಲನೆ ಸೃಷ್ಟಿ ಮಾಡಬೇಕೆಂಬ ಆವೇಶ ಗರಿಗೆದರಿದ ಕಾಲವದು.


ವರ್ಷಗಟ್ಟಲೆ ಕೇರಳದ ವಿವಿಧ ವಿದ್ಯಾಲಯಗಳಲ್ಲಿ ಕಲಿತು ಅಲ್ಲಿನ ಸಂಘಟನಾ ಚೈತನ್ಯವನ್ನು ಕಂಡು ಪ್ರಚೋದನೆಗೊಂಡು ಈ ಚಳುವಳಿಯ ಮನೋಭಾವ ಅವರಲ್ಲಿ ಹುಟ್ಟಿಕೊಂಡಿತ್ತು. 

ನಮ್ಮ ನೆಲದಲ್ಲಿ ಏನಾದರೂ ಮಾಡಲೇಬೇಕು ಎಂಬ ಹಂಬಲ ಒಂದು ಕಡೆಯಾದರೆ ಏನು,ಹೇಗೆ ಎಲ್ಲಿಂದ ಪ್ರಾರಂಭಿಸುವುದು ಎಂಬಿತ್ಯಾದಿ ಕುತೂಹಲಗಳು ಮತ್ತೊಂದೆಡೆಯಾಗಿತ್ತು.

ಆದರೆ ಮೊದಲ ಆಯ್ಕೆ ಮದ್ರಸಾ ಸುಧಾರಣಾ ಚಳುವಳಿಯಾಗಿತ್ತು. 


ಇದರ ಭಾಗವೆಂಬಂತೆ 

ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಇದರ ಮದ್ರಸಾ ಹಾಗೂ ರೇಂಜ್ ಗಳು ಮಂಗಳೂರಿನ ಆಸುಪಾಸಿನಲ್ಲಿ ಅನೇಕ ಕಡೆಗಳಲ್ಲಿ ಆಗಲೇ ಕಾರ್ಯಾಚರಿಸುತ್ತಿತ್ತು.

ಆದರೆ ಅದು ಕರಾವಳಿಯ ಭಾಗದಲ್ಲಿ ಮಾತ್ರ ಸುರತ್ಕಲ್ ನಲ್ಲಿ ಕೊನೆಗೊಂಡಿತ್ತು.

ಅಂದು ಉಡುಪಿ ಜಿಲ್ಲೆಯಾಗಿರಲಿಲ್ಲ.

ಕುಂದಾಪುರ, ಕಾರ್ಕಳ,ಉಡುಪಿ ಈ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸೇರಿತ್ತು.


ನೂತನ ಕಾರ್ಯಾಚರಣೆಯನ್ನು ಇಲ್ಲಿಂದಲೇ ಪ್ರಾರಂಭಿಸುವ ಉದ್ದೇಶದಿಂದ ಮದ್ರಸಾ ಸುಧಾರಣೆ ಎಂಬ ಪದ್ದತಿಯನ್ನು ಕೈಗೆತ್ತಿಕೊಂಡು ಹಿರಿಯ ಮುತ್ಸದ್ದಿಯಾಗಿದ್ದ ಕನ್ನಂಗಾರು ಮುಕ್ರಿ ಹಾಜಿ ಯವರೊಂದಿಗೆ ಮಾತನಾಡಿ ಒಂದು ಗಾಡಿ ಹಿಡಿದು ಉಡುಪಿ, ಕುಂದಾಪುರ ಕಾರ್ಕಳ ತಾಲೂಕುಗಳಲ್ಲಿನ ವಿವಿಧ ಮೊಹಲ್ಲಾಗಳಲ್ಲಿ ಸಂಚರಿಸಿ ಎಲ್ಲಾ ಮದರಸಗಳನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಅಂಗೀಕರಿಸಿ ಕನ್ನಂಗಾರ್ ರೇಂಜ್ ರೂಪೀಕರಿಸಲಾಯ್ತು.


ಇದರಲ್ಲಿ ಕನ್ನಂಗಾರು ಮುಕ್ತಿ ಹಾಜಿಯವರ ಪ್ರಭಾವ ಹಾಗೂ ಶ್ರಮ ತುಂಬಾ ಕೆಲಸ ಮಾಡಿದೆ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ.


ಯಾಕೆಂದರೆ ಅವರು ಅಂದು ಆ ಭಾಗದಲ್ಲಿ ಅಷ್ಟು ಪ್ರಭಾವೀ ವ್ಯಕ್ತಿ ಮಾತ್ರವಲ್ಲದೆ ಬಹಳ ಹಿಂದಿನಿಂದಲೇ ಬಹು ತಾಜುಲ್ ಉಲಮಾ (ನ.ಮ) ಸೇರಿ ಕೇರಳದ ಬಹುತೇಕ ವಿದ್ವಾಂಸರೊಂದಿಗೆ ಅತಿಯಾದ ಗೌರವ ಹಾಗೂ ನಿಕಟ ಸಂಪರ್ಕ ಹೊಂದಿದವರಾಗಿದ್ದರು.


ಹೀಗೆ ಸುರತ್ಕಲ್ ನಲ್ಲಿ ಕೊನೆಗೊಂಡಿದ್ದ ಸುನ್ನೀ ರೇಂಜ್ ಕಾರ್ಯಾಚರಣೆಯನ್ನು ಕನ್ನಂಗಾರ್ ರೇಂಜ್ ನ ಮೂಲಕ ಮತ್ತೆ ತನ್ನ  ಜೈತ್ರಯಾತ್ರೆ ಯನ್ನು ಮುಂದುವರಿಸಲಾಯಿತು.


ಅಂದಿನ ಕನ್ನಂಗಾರ್ ರೇಂಜ್ ಅಂದರೆ ಹೊನ್ನಾವರ,ಸಾಗರ,ತೀರ್ಥಹಳ್ಳಿ,ಕಾರ್ಕಳ, ಮೂಡಬಿದ್ರೆ ಮುಂತಾದ ಪ್ರದೇಶಗಳಿಗೆಲ್ಲಾ ಇದೇ ಒಂದು ರೇಂಜಾಗಿತ್ತು.

ಅಂದು ಆ ಭಾಗದ ಬಹುತೇಕ ಮದ್ರಸಗಳೆಲ್ಲಾ ಈ ರೇಂಜಿನಲ್ಲಿ ಸೇರಿದ್ದವು.

ಆದರೆ ಆ ಎಲ್ಲಾ ಮದ್ರಸಗಳು ಅದುವರೆಗೆ ಯಾವುದೇ ಬೋರ್ಡಿನಲ್ಲಿ ಅಂಗೀಕಾರ ಪಡೆದ ಮದ್ರಸಗಳಾಗಿರಲಿಲ್ಲ.

ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ಮದ್ರಸಗಳಾಗಿದ್ದವು.


ಆದರೆ ಇವತ್ತು ಆ ಒಂದು ರೇಂಜಿನ ಕಾರಣದಿಂದ ಅದೆಷ್ಟೋ ರೇಂಜ್ ಗಳು ಹುಟ್ಟಿ ಅದೆಷ್ಟೋ ಮದ್ರಸಗಳಾಗಿ ಪರಿವರ್ತನೆ ಗೊಂಡು ಸಕ್ರಿಯವಾಗಿ ಮುಂದುವರಿಯುತ್ತಿವೆ.

ಅಲ್ಹಮ್ದುಲಿಲ್ಲಾಹ್ ಸುಮ್ಮ ಅಲ್ಹಮ್ದುಲಿಲ್ಲಾಹ್.


ಇನ್ನು ಸಂಘಟನಾ ಚಳುವಳಿಯ ವಿಷಯಕ್ಕೆ ಬರುವುದಾದರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸೀಮಿತಗೊಂಡಿದ್ದ ಎಸ್ಸೆಸ್ಸೆಫ್ ಎಸ್ವೈಎಸ್ ಸಹಿತವಿರುವ ನಮ್ಮೆಲ್ಲಾ ಸಂಘಟನೆಗಳನ್ನು ಕರ್ನಾಟಕದ ಇತರ ಪ್ರದೇಶಗಳಿಗೆ ವ್ಯಾಪಿಸುವುದರಲ್ಲಿ ಅಂದಿನ ಸಂಘಟನಾ ಚಳುವಳಿಯೇ ಮುಖ್ಯ ಪಾತ್ರ ವಹಿಸಿತ್ತು.


ನಾನಿದಿಷ್ಟು ಬರೆಯಲು ಕಾರಣ ಅಂದಿನ ಯುವ ವಿದ್ವಾಂಸರಿಗೆ ಹಾಗೂ ಯುವ ನಾಯಕರಿಗೆ ಈ ಚಳುವಳಿಯಲ್ಲಿ ಸ್ಫೂರ್ತಿ ನೀಡುತ್ತಿದ್ದ ಅನೇಕ ಉಲಮಾ ಉಮರಾ ನಾಯಕರು ಇಂದು ನಮ್ಮೊಂದಿಗಿಲ್ಲ.

ಅವರೆಲ್ಲಾ ಜೀವನ ಪಯಣ ಮುಗಿಸಿ

ಇನ್ನೊಂದು ಲೋಕದ ಖಬ್ರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.


ಅವರಲ್ಲಿ ಪ್ರಮುಖರಾಗಿದ್ದ ಹಿರಿಯ ವಿದ್ವಾಂಸರೂ ಸುನ್ನೀ ಜಗತ್ತಿನ ಅಭಿಮಾನವೂ ಆಗಿದ್ದ  ತಾಜುಲ್ ಫುಖಹಾ,ಶರಫುಲ್ ಉಲಮಾ,ಬಹು ಟಿ.ಹೆಚ್ ಉಸ್ತಾದ್ ಮುಂತಾದ ಅಗ್ರಗಣ್ಯ ಉಲಮಾಗಳು ನಾಯಕತ್ವ ನೀಡುತ್ತಿದ್ದರು.

ಅದೇ ರೀತಿ ಇದಕ್ಕಾಗಿ ಬಿಡುವಿಲ್ಲದೆ ಓಡಾಡುತ್ತಿದ್ದ ಬಹು ಆತೂರು ಸಅದ್ ಮುಸ್ಲಿಯಾರ್,ನೆಕ್ಕಿಲಾಡಿ ಇಸ್ಮಾಈಲ್ ಮದನಿ,ಸೂರಿಂಜೆ ಅಬ್ದುರ್ರಹ್ಮಾನ್ ಮುಸ್ಲಿಯಾರ್,ಇಂಜಿನಿಯರ್ ಎಸ್.ಅಬ್ದುರ್ರಹ್ಮಾನ್ ಸರ್,ಕಾಬೆಟ್ಟು ಆಹ್ಮದ್ ಮುಸ್ಲಿಯಾರ್.

ಅತ್ತ ಕೇರಳದಿಂದ ಈ ಚಳುವಳಿಯಲ್ಲಿ ಭಾಗಿಯಾಗಿದ್ದ ಶಾಹುಲ್ ಹಮೀದ್ ಬಾಖವಿ ಶಾಂತಪುರಂ,ಪಿ,ಪಿ, ಉಸ್ತಾದ್ ಪಾರನ್ನೂರು,ಪಡಿಞಾರತ್ತರ ಉಸ್ತಾದ್, ಮುಂತಾದವರಾಗಿದ್ದರು.

ಇಲ್ಲಿನ ಮದ್ರಸಾ ಚಳುವಳಿಯಲ್ಲಿ ನೆಕ್ಕಿಲಾಡಿ ಮತ್ತು ಆತೂರು ಉಸ್ತಾದರು ಗಳ ಹೆಸರು ಪ್ರಸ್ತಾಪಿಸದೆ ಪೂರ್ಣವಾಗಲು ಸಾಧ್ಯವಿಲ್ಲ.


ಅವರೆಲ್ಲಾ ಇಂದು ಒಬ್ಬರ ಹಿಂದೆ ಒಬ್ಬರಾಗಿ ಮರೆಯಾಗಿ ನಮ್ಮ ಸಂಘಟನಾ ವಲಯದಲ್ಲಿ ಶೂನ್ಯತಾ ಮನೋಭಾವಕ್ಕೆ ಕಾರಣರಾಗಿದ್ದಾರೆ. 


ಕೊನೆಯದಾಗಿ ಇದೀಗ ಮಂಗಳೂರು ಬಹು ಇಬ್ರಾಹಿಮ್ ಬಾವಾ ಹಾಜಿಯವರು.(ನವರಲ್ಲಾಹು ಮರಾಖಿದಹುಮ್),


ಇಲ್ಲಿ ಚಿಂತೆಗೀಡು ಮಾಡುವ ವಿಷಯವೇನೆಂದರೆ ಇವರೆಲ್ಲರ ನಿರ್ಗಮನವು ಶೂನ್ಯತೆಯನ್ನು ಸೃಷ್ಟಿ ಮಾಡುತ್ತದೆಯೇ ಹೊರತು ಅವರ ಜಾಗವನ್ನು ತುಂಬುವ ಮತ್ತೊಬ್ಬರ ಸೃಷ್ಟಯಾಗುವುದಿಲ್ಲ ಎಂಬುದಾಗಿದೆ.


ಬಹು ಬಾವಾ ಹಾಜಿಯವರು ಮಂಗಳೂರಿನಲ್ಲಿ ಅಜಾತ ಶತ್ರುವಾಗಿ ಜೀವಿಸಿ ಎಲ್ಲರ,ಎಲ್ಲಾ ವಿಭಾಗದ ಜನರ ಅಚ್ಚು ಮೆಚ್ಚಿನ ಉಮರಾ ನಾಯಕರಾಗಿದ್ದರು. 


ಆದರೆ ಸುನ್ನಿಯತ್ತಿನ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಸಿದ್ದರಿಲ್ಲದ ಅಪ್ರತಿಮ ನಾಯಕರಾಗಿದ್ದರು.

ಅದೂ ಅಲ್ಲದೆ ಇಲ್ಲಿನ ಎಲ್ಲಾ ಸುನ್ನೀ ಸಾಹಿತ್ಯ,ಸಂಘಟನೆ,

ಸಂಸ್ಥೆಗಳ ಬೆಳವಣಿಗೆಗಳಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗಲ್ಲದೆ ತಿಳಿದಿರಲು ಸಾಧ್ಯವಿಲ್ಲ.


ಅದೂ ಅಲ್ಲದೆ ಸುನ್ನಿಯತ್ತಿಗೆ ಎಲ್ಲಿಯಾದರೂ ಏನಾದರೂ ಯಾರಿಂದಲಾದರೂ ಒಂದು ನ್ಯೂನತೆ ಸಂಭವಿಸುವುದನ್ನು ಅವರು ಸಹಿಸುತ್ತಿರಲಿಲ್ಲ. ಅಂತಹ ಅಪಾಯ ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚೆತ್ತು ಕೊಂಡು ಬೇಕಾದುದನ್ನು ಮಾಡುತ್ತಿದ್ದರು ಸಂಬಂಧ ಪಟ್ಟವರಿಂದ ಮಾಡಿಸುತ್ತಿದ್ದರು.


ಮಾತ್ರವಲ್ಲ ಇಲ್ಲಿನ ಸುನ್ನೀ ಚಳುವಳಿಗೆ ಬೇಕಾದ ಆರ್ಥಿಕ ನೆರವು ನೀಡುವುದರಲ್ಲಿ ಮತ್ತು ಮಂಗಳೂರು ಮರ್ಹೂಮ್ ಹಸನ್ ಹಾಜಿ ಫ್ಯಾಮಿಲಿ ಸೇರಿ ಅನೇಕ ಶ್ರೀಮಂತರಿಂದ ಆರ್ಥಿಕ ನೆರವು ದೊರಕಿಸಿಕೊಡುವುದರಲ್ಲಿ ಮುಖ್ಯ ಪಾತ್ರ ವಹಿಸಿ ಇಂದಿನ ಎಲ್ಲಾ ಬೆಳವಣಿಗೆಗಳಲ್ಲಿ ಅವರೂ ಕಾರಣ ಕರ್ತರಾಗಿದ್ದಾರೆ.


ಆದ್ದರಿಂದ ಇಂದಿನ ಸಂಪತ್ಬರಿತ ತಲೆಮಾರಿನ ಯುವ ವಿದ್ವಾಂಸರು, ಲೇಖಕರು, ಭಾಷಣ ಗಾರರು,ಸಂಘಟನಾ ನಾಯಕರು, ಕಾರ್ಯಕರ್ತರೆಲ್ಲರೂ ಇವರು ನಡೆದು ಹೋದ ಹೆಜ್ಜೆ ಗುರುತುಗಳಲ್ಲಿ ನಿಸ್ವಾರ್ಥತೆಯಿಂದ ಹೆಜ್ಜೆಯಿಟ್ಟು ಮುಂದುವರಿಯ ಬೇಕಾಗಿದೆ.

ಅಲ್ಲದೆ ಈ ಕಳೆದು ಹೋಗುತ್ತಿರುವ ತಲೆಮಾರಿನ ಕುರುಹುಗಳನ್ನು ನಂತರದ ತಲೆಮಾರಿಗೆ ತಿಳಿಸಿ ಕೊಡುವ ಪ್ರಯತ್ನವನ್ನೂ ಮಾಡಬೇಕಾಗಿದೆ.


ಮರೆಯಾದ ನಮ್ಮ ಪೂರ್ವಿಕರ ಪದವಿಗಳನ್ನು ಅಲ್ಲಾಹು ಉನ್ನತಿಗೇರಿಸಲಿ.

ಅವರನ್ನೂ ನಮ್ಮನ್ನೂ ಸ್ವರ್ಗದಲ್ಲಿ ಒಟ್ಟು ಸೇರಿಸಲಿ.ಅವರ ಮಾರ್ಗದಲ್ಲಿ ಸಂಚರಿಸಲು ತೌಫೀಖ್ ನೀಡಲಿ. ಅಮೀನ್.

Wednesday, May 12, 2021

ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಬಾವಾ ಹಾಜಾರ್ ಎಂಬ ಕ್ರಾಂತಿ ಪುರುಷ


ಪಿ.ಪಿ.ಅಹ್ಮದ್ ಸಖಾಫಿ, ಕಾಶಿಪಟ್ಣ

********************

ಅಂದು 1990 ಇಸವಿ. ಕನ್ನಡ ಮಣ್ಣಿನಲ್ಲಿ ಯಾವುದೇ ಸಂಘಟನೆ ಸಕ್ರಿಯವಾಗಿಲ್ಲ.

ಒಂದೇ ಒಂದು ವಿದ್ಯಾ ಸಂಸ್ಥೆ ಜನ್ಮ ತಾಳಿರಲಿಲ್ಲ.

ಸುನ್ನೀ ಸಾಹಿತ್ಯ ರಂಗದಲ್ಲಿ ಹುಟ್ಟಿದ  ಪತ್ರಿಕೆಗಳು ಹೆಚ್ಚು ಕಾಲ ಬಾಳಿಕೆ ಬಂದಿಲ್ಲ.


ಕೇರಳದ ಸಂಘಟನಾ ಸಕ್ರಿಯತೆಯಿಂದ ಪ್ರಚೋದನೆಗೊಂಡ 

ನವ ಬಿರುದುದಾರಿ ಯುವ ವಿದ್ವಾಂಸರು ಕನ್ನಡ ಮಣ್ಣಿನಲ್ಲಿ ಸಂಘಟನೆಯನ್ನು 

ಕಟ್ಟಿ ಬೆಳೆಸಲೇ ಬೇಕೆಂದು  ಪಣ ತೊಟ್ಟು ಕಾರ್ಯರಂಗಕ್ಕಿಳಿದಿದ್ದರು.


ಆದರೆ , ಅಂದು ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಏಕೆಂದರೆ, ಸಂಘಟನೆಯ ಪರಿಜ್ಞಾನದ ಕೊರತೆ, ಕಾರ್ಯಕರ್ತರ ಅಭಾವ, ಆರ್ಥಿಕ ಮುಗ್ಗಟ್ಟು ಇವೆಲ್ಲವೂ ಬಹಳವಾಗಿ ಕಾಡುತ್ತಿದ್ದ ಕಾಲವಾಗಿತ್ತದು. 

ಆದ್ದರಿಂದಲೇ ಹಲವು ಯುವ ವಿದ್ವಾಂಸರು ಮತ್ತು ನಾಯಕರು ಈ ಶೂನ್ಯತೆಯನ್ನು ತುಂಬುವ ಪ್ರಯತ್ನಕ್ಕೆ ಕೈ ಹಾಕಿ ವಿಫಲತೆಯನ್ನು ಕಂಡ ಅನುಭವಗಳೂ ಇವೆ. 


ಇಂತಹ ಸಂದರ್ಭದಲ್ಲಿ ಇಲ್ಲಿನ ಯುವ ವಿದ್ವಾಂಸರಲ್ಲಿ ದೈರ್ಯ ತುಂಬಿ ಪ್ರಥಮ ವಿದ್ಯಾಸಂಸ್ಥೆ ಎಂಬ ನೆಲೆಯಲ್ಲಿ ಝೀನತ್ ಬಕ್ಷ್ ಯತೀಂಕಾನ,ಅಲ್ ಅನ್ಸಾರ್ ವಾರಪತ್ರಿಕೆ ಹಾಗೂ ಎಸ್ಸೆಸ್ಸೆಫ್, SYS ಸಂಘಟನೆಗಳಿಗೆ ಅಡಿಪಾಯ ಹಾಕಿಸಿ ಕೊಟ್ಟವರಲ್ಲಿ ಬಾವ ಹಾಜಿಯೂ ಒಬ್ಬರು. ಯುವ ವಿದ್ವಾಂಸರು ಮುನ್ನುಗ್ಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದುದರ ಹಿಂದೆ ಮರ್ಹೂಮ್ ಬಾವಾ ಹಾಜಾರ್ ರವರ ಪಾತ್ರವೂ ಇತ್ತು. ಆ ಬೆಂಬಲ ಸಣ್ಣದೇನೂ ಆಗಿರಲಿಲ್ಲ.    


ಅಲ್ ಅನ್ಸಾರ್ ಪತ್ರಿಕೆ ತನ್ನ ಈ ಸುದೀರ್ಘವಾದ ಜೈತ್ರ ಯಾತ್ರೆಯನ್ನು ಮುಂದುವರಿಸಿದ್ದರೆ ಅದು ಅನೇಕಾರು ಏಳು ಬೀಳುಗಳನ್ನು ಕಂಡಿದೆ ಎಂಬುದು ಅದರಲ್ಲಿ ದುಡಿದವರಿಗೆ ಮಾತ್ರ ಗೊತ್ತು. 

 

 ಆದರೆ, ಈ ಎಲ್ಲಾ ಏಳು ಬೀಳುಗಳನ್ನು ಸಮರ್ಥವಾಗಿ ಎದುರಿಸಿ ಪತ್ರಿಕೆ ಯನ್ನು ಉಳಿಸಿ ಬೆಳಿಸಿದ ವ್ಯಕ್ತಿಯಾಗಿದ್ದರು ಬಾವಾ ಹಾಜಾರ್.


ಎಸ್ಸೆಸ್ಸೆಫ್ ಸಂಘಟನೆಯ ಆದಿಯಿಂದ ಇಂದಿನವರೆಗೂ ಸಂಪೂರ್ಣ ಬೆನ್ನೆಲುಬಾಗಿ ನಿಂತ ಮಾದರೀ ಉಮರಾ ನಾಯಕರಾಗಿದ್ದರು.

ಅನೇಕ ಸಂದರ್ಭಗಳಲ್ಲಿ ಅವರು ನೀಡಬೇಕಾದ ಎಲ್ಲಾ ಸಹಾಯಗಳ ಹೊರತಾಗಿಯೂ ಅಗತ್ಯ ಬಿದ್ದಾಗ ಸಾವಿರಾರು ರೂಪಾಯಿ ಸಾಲದ ರೂಪದಲ್ಲಿ ನೀಡಿ ಸಹಕರಿಸಿದ್ದರು. ಎಸ್ಸೆಸ್ಸೆಫ್ ಸಂಘಟನೆಯನ್ನು  ಕಟ್ಟಿ ಬೆಳೆಸುವುದಲ್ಲಿ ಅವರ ಶ್ರವ ಇದೆ ಎಂಬ ಸತ್ಯವು ಇಂದಿನ ತಲೆಮಾರಿನ ಅನೇಕರಿಗೆ ತಿಳಿದಿರಬೇಕೆಂದಿಲ್ಲ.

ಅವರ ಶೈಲಿ ಹಾಗಾಗಿತ್ತು.

ಯಾವು ವೇದಿಕೆ, ಪ್ರಚಾರ, ಪ್ರಶಸ್ತಿ ಬಯಸದೆ ಅತ್ಯಂತ ನಿಸ್ವಾರ್ಥ ಸೇವೆ ಗೈದಿದ್ದರು. ನಿಸ್ವಾರ್ಥ ಸೇವೆಯ  ಇನ್ನೊಂದು ಹೆಸರೇ ಬಾವಾ ಹಾಜಿ ಎಂದರೆ ಅತಿಶಯೋಕ್ತಿಯಾಗಲಾರದು.


ಅನೇಕ ಸಂದರ್ಭಗಳಲ್ಲಿ ಅವರಿಂದ ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ಅಂದಿನ ಪರಿಸ್ಥಿತಿಯ ಒತ್ತಡಗಳಿಂದ ಸಾಧ್ಯವಾಗದೇ ಅವರನ್ನು ಬೇಟಿಯಾಗಲು ಮುಜುಗುರ ಪಟ್ಟಿದ್ದ ಸಂದರ್ಭಗಳೂ ಉಂಟಾಗಿತ್ತು. 

ಅದನ್ನು ಅರ್ಥಮಾಡಿಕೊಂಡು ಕೆಲವೊಮ್ಮೆ ಅವರೇ ನಮ್ಮನ್ನು ಸಂಪರ್ಕಿಸಿ ಸಮಾಧಾನ ಪಡಿಸುತ್ತಿದ್ದರು.


ಒಂದು ಸಂದರ್ಭದಲ್ಲಿ ಸಂಘಟನೆಗೆ ಬೇಕಾಗಿ ಅವರಿಂದ ಪಡೆದ ಸಾಲದ ಒಂದು ಮೊತ್ತವನ್ನು ಒಂದು ಅವಧಿಗೆ ನೀಡಬೇಕಾಗಿತ್ತು.


ಕೊಟ್ಟ ಮಾತನ್ನು ಪಾಲಿಸಬೇಕೆಂಬ ಏಕೈಕ ಉದ್ದೇಶದಿಂದ ಬಹಳ ಕಷ್ಟಪಟ್ಟು ಎಲ್ಲಿಂದೆಲ್ಲಾ ಹಣವನ್ನು ಸರಿಹೊಂದಿಸಿ ಆ ಅವಧಿಗೆ  ಅವರಿಗೆ ನೀಡಿದೆವು.


ನೀಡಿದ ನಂತರ ಹಣ ಹೊಂದಿಸಿದ ಕಷ್ಟಪಾಡುಗಳ ಬಗ್ಗೆ ಅವರು ಅರಿತಾಗ ಅವರೇ ಆ ಹಣದ ಕಟ್ಟನ್ನು ಹಿಂತಿರುಗಿಸಿ ನೀವು ಸರಿಯಾಗಿ ಅನುಕೂಲವಾದ ನಂತರ ಕೊಟ್ಟರೆ ಸಾಕೆಂದು ಹೇಳಿ ಕಳುಹಿಸಿದರು.

ಇಂತಹ ಅದೆಷ್ಟೋ ಅವರ ಉದಾರತೆಯ ಉದಾಹರಣೆಗಳಿವೆ.

ಬರೆಯುತ್ತಾ ಹೋದರೆ ಮುಗಿಯದು.


ತನ್ನ ಖಾಸಗಿ ಜೀವನದಲ್ಲಿ ಶರೀಅತ್‌ನ ನಿಯಮಗಳನ್ನು ಬಹಳ ಎಚ್ಚರಿಕೆಯಿಂದ ಪಾಲಿಸುವುದರಲ್ಲಿ ಸಾಮಾನ್ಯ ವಿದ್ವಾಂಸರನ್ನೂ ನಾಚಿಸುವ ರೀತಿಯಲ್ಲಿ ಅತಿ ದೊಡ್ಡ ಮಾದರೀ ಜೀವನದ ವಕ್ತಾರರಾಗಿ ಎಲ್ಲಾ ಉಮರಾಗಳಿಗೂ ಅದ್ಬುತ ಮಾದರಿಯಾಗಿ ಜೀವಿಸಿದ ವರಾಗಿದ್ದರು ಬಾವಾ ಹಾಜಿಯವರು.


ಅವರ ಅಗಲಿಕೆಯು ನಮ್ಮನ್ನು ಅತ್ಯಂತ ದುಃಖ ತಪ್ತ ರನ್ನಾಗಿ ಮಾಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ , ಅಲ್ಲಾಹು ಅವರ ರೂಹನ್ನು ಹಿಡಿಯಲು ಆಯ್ಕೆ ಮಾಡಿದ ತಿಂಗಳು ಮತ್ತು ದಿನದ ಬಗ್ಗೆ ಚಿಂತಿಸುವಾಗ ನಮಗೆ ಸಮಾಧಾನವಾಗುತ್ತದೆ.ರಂಝಾನಿನ ಪವಿತ್ರ ಮುಸ್ಸಂಜೆಯ ಹೊತ್ತು ಅವರ ಪ್ರಾಣ ಪಕ್ಷಿ ಹೊರಟು ಹೋದ ಸಮಯ.


ಯಾ ಅಲ್ಲಾಹ್ ! ನಮ್ಮನ್ನೂ ,ನಮ್ಮ ಬಾವ ಹಾಜಿಯವರನ್ನು ಶೈಖುನಾ ತಾಜುಲ್ ಉಲಮಾರೊಂದಿಗೆ  ಸ್ವರ್ಗದಲ್ಲಿ ಒಟ್ಟು ಸೇರಿಸು.ಆಮೀನ್.

Thursday, May 6, 2021

ವಿಷ ಕಾರುವ ತೇಜಸ್ವಿ ಸೂರ್ಯ


ವಿಷ ಕಾರುವ  ತೇಜಸ್ವಿ ಸೂರ್ಯ

ತನ್ನನ್ನು ತಾನು ಸತ್ಯ  ಹರಿಶ್ಚಂದ್ರ ವೆಂಬಂತೆ ಬಿಂಬಿಸಿ

ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ  ಯುವ ಸಂಸದ! ತನ್ನವರು ಮಾಡಿದ ಕ್ರತ್ಯವನ್ನು ಮರೆಮಾಚಿ ಇನ್ನೊಬ್ಬರ ತಲೆಯ ಮೇಲೆ ಗೂಬೆ ಕೂರಿಸುವ ಕ್ರತ್ಯ ಹೊಸದೇನಲ್ಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದವನು ಜನರ ಆಯ್ಕೆಯಿಂದ ಚುನಾಯಿತನಾಗಿ ಆರಿಸಲ್ಪಟ್ಟವನು ಮಾರಣ ಹೋಮ ಕ್ರತ್ಯಕ್ಕೆ ಉತ್ತರಿಸಲಾಗದೆ ಚಡಪಡಿಸುವ ಚೇಳಿನ ಹಾಗೆ ಪ್ರೆಸ್ ಕಾಂಫ್ರೆನ್ಸ್ ನಡೆಸಿದ ಮಾತ್ರಕ್ಕೆ 

ಈ ರಾಜ್ಯದ ಜನರು ಯಾವತ್ತೂ ನೀ ಮಾಡಿದ ಕ್ರತ್ಯ  ಮರೆಯಲಾರರು

ಒಬ್ಬ ಸಂಸದನ  ಕರ್ತವ್ಯ ಏನು ಯಾವ ತರಹ ಜನರ ಅವಶ್ಯಕತೆ ಗಳನ್ನು ಪೂರೈಸಬೇಕು ಎಂಬ ಪ್ರಧಾನ ಜ್ನಾನ ಇರಬೇಕು ಎಲುಬಿಲ್ಲದ ನಾಲಿಗೆಯನ್ನು ಹರಿಯ ಬಿಡುವ ಮುನ್ನ ಚಿಂತಿಸಬೇಕು ಮಾನವನು ಯಾರೇ ಆಗಿರಲಿ ಮಾನವನನ್ನು ಗೌರವಿಸುವುದು ಒಬ್ಬ ಉತ್ತಮ ಪುರುಷನ ಗುರುತು ಸುಮಾರು ಇನ್ನೂರು ಕಾರ್ಮಿಕರಲ್ಲಿ ಬರೇ ಹದಿನೈದು ಜನರು ಮುಸಲ್ಮಾನರು ಎಂಬ ಕಾರಣಕ್ಕೆ ಭಯೋತ್ಪಾದಕರ ಹಾಗೆ ಬಿಂಬಿಸಿದ ದ್ರಷ್ಯ ನೋಡಿದರೆ ಉಪ್ಪಿನಲ್ಲಿ ಕಲ್ಲು ಹುಡುಕಿದವನ ಹಾಗೆ ಈ ರಾಜ್ಯದ ಜನರ        ಮನಸ್ಸಿನಲ್ಲಿ   ನೀನು  ಕಪ್ಪು ಚುಕ್ಕೆ ಸ್ರಷ್ಟಿಸಿದೆ   ಇನ್ನಾದರು ಜನರ   ಅವಶ್ಯಕತೆ ಗಳಿಗೆ ಸ್ಪಂದಿಸಲು ಪ್ರಯತ್ನದಲ್ಲಿ  ತೊಡಗಿ ಕೊಂಡರೆ ಉತ್ತಮ!

Tuesday, May 4, 2021

ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.

 


ದ್ವೇಷಭರಿತ ಚಾಳಿ ನೀತಿ  ನಿಯಮಗಳನ್ನು ಉಲ್ಲಂಘಿಸಿದ  ಅನಾಗರಿಕತೆಯ ಟ್ವೀಟ್‌ಗಳ ನಂತರ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು 'ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ'


ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಂತರ ನಟಿ ಕಂಗನಾ ರನೌತ್ ಅವರ ಟ್ವಿಟ್ಟರ್ ಖಾತೆಯನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.  ಖಾತೆಯ  ನಿಯಮಗಳನ್ನು ಅವಳು ಪದೇ ಪದೇ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ ಎಂದು ಟ್ವಿಟರ್ ಹೇಳಿದೆ

ಭಯದ ವಾತಾವರಣ ದಲ್ಲಿ ನಾವೆಲ್ಲರು


ಈ ಭೂಮಿಯ ಮೇಲೆ ಹುಟ್ಟಿ ಬಂದ ಪ್ರತಿಯೊಬ್ಬ  ಮನುಷ್ಯನು ಸಾವಿನ ರುಚಿ ನೊಡಲೇ ಬೇಕು. ಇದು ನೂರಕ್ಕೆ  ನೂರು ಸತ್ಯ.

ಆದರೆ ಇಂದಿನ ನಮ್ಮ ರಾಜ್ಯದ ಭಯ ಭೀತಿ ವಾತಾವರಣ ವನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಯಾರಿಗೂ ಇಲ್ಲ ವೆಂದು ಹೇಳಬಹುದು. ಇಂದು  ಅಸ್ತಿತ್ವ ದಲ್ಲಿರುವ ಸರ್ಕಾರ ಪ್ರಜೆಗಳ ಕಷ್ಟ ಸುಖ ಗಳಿಗೆ ಎಷ್ಟು ಸ್ಪಂದಿಸುತ್ತಿದೆ. ಬಡವರ ಪಾಡೇನು . ಸಾಧಾರಣ ಕೆಮ್ಮು  ಜ್ವರ ಬಂದವರು ಆಸ್ಪತ್ರೆ ಗಳಿಗೆ ಬೇಟಿ ಕೊಡಲು ನೂರು ಸಲ ಯೋಚಿಸಬೇಕಾಗಿದೆ. ಹೋಗಬೇಕಾ ಬೇಡವೆ  ಎಂಬ ಭ್ರಮೆ   ಹೋದರೆ ನಮ್ಮನು ಕೊರೊನ ಎಂಬ ಸಾಂಕ್ರಾಮಿಕ   ರೋಗ  ಬೆನ್ನು ಹಿಡಿಯುವುದೇ ಅಥವಾ  ಹರಡುವ  ಭಯ ಇದಕ್ಕೆಲ್ಲ ಕಾರಣ ಕರ್ತ ರು ಯಾರು ಇಂತಹ ಪರಿಸ್ಥಿತಿ ಯನ್ನು  ಶ್ರಷ್ಟಿಸಿದವರು   ಯಾರು ಪ್ರಸ್ತುತ  ಸರಕಾರ ಉತ್ತರಿಸುವರೇ ನಾನು    ಮೂರು ದಿವಸ ಸರಕಾರಿ ಆಸ್ಪತ್ರೆ ಹೊರವಲಯದಲ್ಲಿ  ತೇಲಾಡಿದೆ ಅಲ್ಲಿನ ವಾತಾವರಣ ನಿಜಕ್ಕೂ ಭಯಭೀತ ಇಂದು ನಮ್ಮ ದಕ್ಷಿಣ ಕನ್ನಡ ಒಂದು ಲೆಕ್ಕದ ಮಟ್ಟಿಗೆ  ಸರಿ ಇದೆ ಎಂದು ಹೇಳಬಹುದು ಆದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಈ ಸರಕಾರ ಎಷ್ಟು ಸಂದಿಸಬಹುದು ಯಾವ ಮುಂಜಾಗ್ರತೆ ಯಾವ ಅನೂಕೂಲತೆಯನ್ನು ಈಗಾಗಲೆ ತಯಾರಿಸಿ ಇಟ್ಟಿವೆ ಎಂಬ ಪ್ರಶ್ನೆ   ಕಾಡುತ್ತಿದೆ  ಭಯ ಭೀತದಲ್ಲಿ ನಮ್ಮ ದಕ್ಷಿಣ ಕನ್ನಡ ಕೂಡ ಸೇರಿದೆ. ಈಗಾಗಲೇ ಆಸ್ಪತ್ರೆ ಗಳಲ್ಲಿ  ಬೆಡ್ಡಿನ  ಕೊರತೆ,ಆಕ್ಷಿಜನ್  ಕೊರತೆ ವೈದ್ಯ ರುಗಳ ಕೊರತೆ ಇದಕ್ಕೆಲ್ಲ   ಹೊಣೆ ಯರು ನಾವು ಓಟು ಹಾಕಿ ಆರಿಸಿದ ಜನ ಪ್ರತಿ ನಿದಿಗಳು ಏನು ಮಾಡುತಿದ್ದಾರೆ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಜವಾಬ್ದಾರಿ ಅವರದ್ದಲ್ಲವೆ  ? ಇಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ

ಈ ವ್ಯತ್ಯಾಸ    ಯಾವಾಗ ಸಮಾನತೆಯ ಮೆಟ್ಟಿಲೇರಬಹುದು   ಇಂದೇ ಪೃತಿಯೊಬ್ಬ. ನಾಗರಿಕರು  ಚಿಂತಿಸ ಬೇಕು ಇನ್ನು ಮುಂದಿನ ದಿನಗಳಲ್ಲಿ

ನಾವು ಯಾರನ್ನು  ನಮ್ಮ ಪತಿನಿಧಿ ಯಾಗಿ ಆರಿಸಬೇಕು ನಮ್ಮ  ಜೀವ ದೊಂದಿಗೆ ಆಟ ಆಡುವವರು ನಮಗೆ ಬೇಕೆ ಅಥವಾ ನಮ್ಮ ಕಷ್ಟಗಳಿಗೆ ಸ್ಪಂದಿಸುವ ನಾಯಕರು ಬೇಕೆ ಎಂದು ಚಿಂತಿಸ ಬೇಕು ಸಮಯ  ಸಂದರ್ಬ ಮಿತಿ ಮೀರುವ ಮುನ್ನ ಎಚ್ಚೆತ್ತು ಗೊಳ್ಳಬೇಕು  ಪ್ರತಿಯೊಂದು ಮನೆಯಲ್ಲಿ  ಮುದುಕರಿದ್ದಾರೆ ಪತಿಯೊಂದು ಮನೆಯ ಪ್ರತಿಯೊಬ್ಬ ಪಜೆಯು ಚಿಂತಿಸಬೇಕು ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು ನಾವು ನಮ್ಮ ಮುಂದಿನ ಜನಾಂಗವನು ನರಕ ವನ್ನಾಗಿಸಿ ಬಿಟ್ಟುಹೊಗುವುದೇ .ಉತ್ತಮ ಭಾರತ ಕಟ್ಟಲು ಯಾವ ಪ್ರತಿನಿದಿ ಬೇಕಾಗಿದೆ ಎಂದು ಚಿಂತಿಸಬೇಕು .

ಎಸ್ |ಎಮ್ ಮುಸ್ತಫಾ ಸಾಸ್ತಾನ 

Saturday, May 1, 2021

ಶೋಷಣೆಗಳಿಂದ ಮುಕ್ತಿ ಹೇಗೆ ?.*

 *ಶೋಷಣೆಗಳಿಂದ ಮುಕ್ತಿ ಹೇಗೆ ?.*

 ✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

*


***************"****

*ಭಾಗ 1*

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ 

ವಸಲ್ಲಮರ ಕಾಲದಲ್ಲಿ 

ಒಂದು ದಿನ ಸೂರ್ಯ 

ಗ್ರಹಣ ಸಂಭವಿಸಿತ್ತು.

ಅದೇ ದಿನ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪುಟ್ಟ ಮಗು ಇಬ್ರಾಹೀಮ್ ಕೂಡಾ ವಫಾತಾಗಿದ್ದರು.

ಕೆಲವು ಮುಗ್ದ ಮನಸ್ಸುಗಳು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗಿನ ಅತಿಯಾದ ಗೌರವದ ಕಾರಣದಿಂದ ಈ ಗೃಹಣ ಸಂಭವಿಸಿರುವುದು ಅವರ ಮಗು ವಫಾತಾಗಿರುವುದಕ್ಕೆ ಎಂದು ಭಾವಿಸಿ ಬಿಟ್ಟವು.


ಇದನ್ನರಿತ ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಕ್ಷಣ ಈ ಭಾವನೆಯನ್ನು ತಿದ್ದಿ ನಿಜಾಂಶವನ್ನು ತಿಳಿಸಿ ಕೊಡುವ ಪ್ರಯತ್ನ ಮಾಡಿದರು.

ಗೃಹಣದ ನೈಜತೆ ಬಗ್ಗೆ ತನ್ನ ಸುದೀರ್ಘವಾದ ಉಪದೇಶದಲ್ಲಿ ಈ ರೀತಿ ಹೇಳಿದರು.


*إِنَّ الشَّمْسَ وَالْقَمَرَ آيَتَانِ مِنْ آيَاتِ اللهِ، لَا يَخْسِفَانِ لِمَوْتِ أَحَدٍ، وَلَا لِحَيَاتِهِ*


ನಿಶ್ಚಯವಾಗಿಯೂ ಸೂರ್ಯ ಚಂದ್ರ ರು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ ಎರಡು ದೃಷ್ಟಾಂತಗಳಾಗಿವೆ.

ಯಾವ ವ್ಯಕ್ತಿಯ ಮರಣ ಅಥವಾ ಜೀವನಕ್ಕೆ ಬೇಕಾಗಿ ಅವುಗಳಿಗೆ ಗೃಹಣ ವುಂಟಾಗುವುದಿಲ್ಲ ಎಂದು ಸವಿಸ್ತಾರವಾಗಿ ವಿವರಿಸಿ 

ಮುಗ್ಧ ಮನಸ್ಸುಗಳ ತಪ್ಪು ಭಾವನೆಗಳನ್ನು ತಿದ್ದುವ 

ಪ್ರಯತ್ನ ಮಾಡಿದರು.


ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅನೇಕ ವಿಚಾರಗಳಿವೆ.  


ಅದೇನೆಂದರೆ ತನ್ನ ಪ್ರವಾದಿತ್ವವನ್ನು ನಖಶಿಖಾಂತ ವಿರೋಧಿಸುವ ಒಂದು ದೊಡ್ಡ ಸಮೂಹದ ಮುಂದೆ ತಾನೊಬ್ಬ ಸಾಮಾನ್ಯನಲ್ಲ ಎಂದು 

ತೋರಿಸಿ ಕೊಡಬೇಕಾದ ಅನಿವಾರ್ಯತೆಯ ಈ ಕಠಿಣ ಸವಾಲಿನ ಸಮಯದಲ್ಲೂ ಈ ಸುಸಂದರ್ಭವನ್ನು ಬಳಸಿ ಕೊಳ್ಳಬಹುದಾದ ಎಲ್ಲಾ ಅವಕಾಶಗಳಿದ್ದರೂ 

ಕೂಡಾ ಪ್ರವಾದಿಯವರು ಅದನ್ನು ಬಳಸಿಕೊಳ್ಳದೇ ಅಲ್ಲಿ ನೈಜತೆಯನ್ನು ಮಾತ್ರ ಅನಾವರಣ ಮಾಡಿದರು.


ಮುಗ್ಧ ಜನರಲ್ಲಿ ತಪ್ಪು ಭಾವನೆಗಳನ್ನು ತುಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ದೊಡ್ಡ ಶೋಷಣೆಯಾಗಿದ್ದು ಇಂತಹ ಪ್ರಯತ್ನ ಯಾವತ್ತೂ ಯಾರಿಂದಲೂ ಸಲ್ಲದು ಎಂಬ ಉದಾತ್ತ ತತ್ವವನ್ನು ಸಾರಲಿಕ್ಕೆ ಮಾತ್ರವಾಗಿತ್ತು ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಇಲ್ಲಿ ಪ್ರಯತ್ನ ಪಟ್ಟಿರುವುದು.


ಆದರೆ ಇವತ್ತಿನ ಪರಿಸ್ಥಿತಿ ಏನಾಗಿದೆ ಅಂದರೆ ಅವಕಾಶಗಳು,ಸಂದರ್ಭಗಳು ಸಿಗಬೇಕಾಗಿಲ್ಲ. 

ಇಲ್ಲಸಲ್ಲದ ಯೋಗ್ಯತೆಗಳ ಅಂತೆಕಂತೆಗಳನ್ನು ಸೃಷ್ಟಿಸಿ ಅದನ್ನು ವೈಭವೀಕರಿಸಿ ಜನರನ್ನು ಮೂಡ ನಂಬಿಕೆಗಳ ಗುಲಾಮರನ್ನಾಗಿ ಮಾಡಲು ಸಾಧ್ಯವಾದ ಎಲ್ಲಾ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿದೆ.


ಇದು ಇಂದು ಮನುಷ್ಯ ಜೀವನದ ಎಲ್ಲಾ ವಲಯಗಳಲ್ಲೂ ದಾರಾಳವಾಗಿ ಕಾಣಬಹುದು.

ಇದಕ್ಕೆಲ್ಲಾ ಕಡಿವಾಣ ಹಾಕದೇ ಹೋದಲ್ಲಿ ಇಸ್ಲಾಮಿನ ಪೂರ್ವ ಕಾಲದ ಎಲ್ಲಾ ಅನಾಚಾರಗಳು ಮತ್ತೆ ಮರಳುವುದರಲ್ಲಿ ಯಾವ ಅನುಮಾನವೂ ಇಲ್ಲ.

ಆದ್ದರಿಂದಲೇ ಶೋಷಣೆ ಬಗ್ಗೆ ಚರ್ಚಿಸುವಾಗ ಅದರ ಹತ್ತು ಹಲವು ಮುಖಗಳು ಕಣ್ಮುಂದೆ ಅನಾವರಣ ಗೊಳ್ಳುತ್ತದೆ.

ಆದ್ದರಿಂದ ಎಲ್ಲಿಂದ ಪ್ರಾರಂಭಿಸಬೇಕು ಎಂದು ಅರ್ಥವಾಗುವುದೇ ಇಲ್ಲ.

ಮುಗ್ಧ ಮನುಷ್ಯ ಮನಸ್ಸುಗಳ ನಿಸ್ವಾರ್ಥತೆಯನ್ನು ದುರುಪಯೋಗ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಅನೇಕರು ಅಂತ್ಯ ದಿನ ಹತ್ತಿರವಾಗುವಾಗ ಪ್ರತ್ಯಕ್ಷ ಗೊಳ್ಳಲಿದ್ದಾರೆ ಎಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮುನ್ನೆಚ್ಚರಿಕೆಯೂ ನೀಡಿರುತ್ತಾರೆ.

*يَكُونُ فِي آخِرِ الزَّمَانِ دَجَّالُونَ كَذَّابُونَ، يَأْتُونَكُمْ مِنَ الْأَحَادِيثِ بِمَا لَمْ تَسْمَعُوا أَنْتُمْ، وَلَا آبَاؤُكُمْ، فَإِيَّاكُمْ وَإِيَّاهُمْ، لَا يُضِلُّونَكُمْ، وَلَا يَفْتِنُونَكُمْ*

ಇಲ್ಲಿ ಈ ಹದೀಸಿನಲ್ಲಿ ಉಪಯೋಗಿಸಲ್ಪಟ್ಟ"ದಜ್ಜಾಲೂನ" ಎಂಬ ಪದ ಗಮನಾರ್ಹ.

ಯಾಕೆಂದರೆ ಅದರ ಅರ್ಥವೇ ಸತ್ಯ ಮತ್ತು ಮಿತ್ಯೆಗಳ ಬಗ್ಗೆ ಮುಗ್ಧ ಮನಸ್ಸುಗಳಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡುವವರು ಎಂದಾಗಿದೆ ಅರ್ಥ.

ಇನ್ನು ಶೋಷಣೆಯು ತೌಹೀದ್, ಧಾರ್ಮಿಕ ವಿದ್ಯೆ,ಧಾರ್ಮಿಕ ಮಜ್ಲಿಸ್,ಮಂತ್ರವಾದ, ವೈದ್ಯಕೀಯ ಚಿಕಿತ್ಸೆ,ಆರಾಧನಾ ಕಾರ್ಯಗಳು ಹೀಗೆ ವಿಭಿನ್ನ ಮುಖಗಳಿವೆ.


ಒಂದೊಂದೇ ಚರ್ಚಿಸುತ್ತಾ ಹೋಗುವ.

ಮೊದಲು ತೌಹೀದ್ ನಲ್ಲಿರುವ ಶೋಷಣೆ ತೆಗೆದು ಕೊಳ್ಳೋಣ.


*1)* 

*ತೌಹೀದ್ ನಲ್ಲಿರುವ ಶೋಷಣೆ*


*ಮುಂದುವರಿಯುವುದು*

Friday, April 30, 2021

ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು

 


*ಆ ಜ್ಯೋತಿ ಎಂದೂ ನಂದದು ನಂದಿಸಲೂ ಆಗದು*


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

************************************


ಇತ್ತೀಚೆಗೆ ಸಾಮಾಜಿಕ  ಜಾಲ ತಾಣಗಳಲ್ಲಿ ಕೆಲವು ಬೆಳವಣಿಗೆಗಳನ್ನು ಕಂಡು ಆಶ್ಚರ್ಯವಾಯಿತು ಮತ್ತು ನಂಬಲೂ ಕಷ್ಟವಾದಂತೆ ಅನಿಸಿತು.

ಯಾಕೆಂದರೆ ಯಾವಾಗಲೂ ಕಟ್ಟಾ ಮುಸ್ಲಿಂ ವಿರೋಧವನ್ನೇ ಮೈಗೂಡಿಸಿಕೊಂಡು ಕಿಡಿಕಾರುತ್ತಿದ್ದ ಕೆಲವು ಶಕ್ತಿಗಳು ಸಂಪೂರ್ಣವಾಗಿ ಬದಲಾದ ವರ್ತಮಾನಗಳು.

ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಇಲ್ಲಿಯವರೆಗೆ ತಾವು ತಾಳಿದ್ದ ಕುರುಡು ನಿಲುವುಗಳ ಬಗ್ಗೆ ಪಶ್ಚಾತಾಪ ಪಡುತ್ತಿದ್ದವು.


ಕಾರಣವೇನೆಂದು ಪರಾಮರ್ಶಿಸಿ ನೋಡಿದಾಗ ಜಗತ್ತು ಇಂದು ಎದುರಿಸುವ ಸಂಕೀರ್ಣ ಸಂಕಷ್ಟ ಸಮಯದಲ್ಲಿ ಮುಸ್ಲಿಮರು, ಮುಸ್ಲಿಂ ರಾಷ್ಟ್ರಗಳು ಹಾಗೂ ಮುಸ್ಲಿಂ ಸಂಘಟನೆಗಳು ಕೈಗೊಂಡ ಕಾರ್ಯಕ್ರಮಗಳು ಎಂತಹ ಕಲ್ಲು ಮನಸ್ಸುಗಳನ್ನು ಕೂಡಾ ಕರಗಿಸುವಂತಿತ್ತು.


ಹಣ್ಣು ತುಂಬಿದ ಮಾವಿನ ಮರಕ್ಕೆ ಎಲ್ಲರೂ ಸೇರಿ ಎಷ್ಟೇ ಬಲಪ್ರಯೋಗಿಸಿ ಕಲ್ಲು ತೂರಿದರೂ ಕರುಣಾಮಯಿ  ಮಾವಿನ ಮರವು ಎಲ್ಲಾ ಏಟುಗಳನ್ನು ಶಾಂತಚಿತ್ತವಾಗಿ ಸಹಿಸುತ್ತಲೇ ರುಚಿಯಾದ ಹಣ್ಣುಗಳನ್ನು 

ಕಲ್ಲು ತೂರಿದವರಿಗೇ ತುರುತುರಾ ಸುರಿಯುತ್ತಲೇ ಇರುತ್ತದೆ.


ಇದೇ ರೀತಿ ಇಸ್ಲಾಮ್ ಎಂಬ ಕರುಣಾಮಯಿ ಧರ್ಮದ ಆಶಯ ಆದರ್ಶಗಳನ್ನು ನೇರಾನೇರ ಎದುರಿಸಲು ಸಾಮರ್ಥ್ಯವಿಲ್ಲದ ಕೆಲವು ಶಕ್ತಿಗಳು ಅಥವಾ ಇಸ್ಲಾಮಿನ ಮತ್ತು ಮುಸ್ಲಿಮರ ಬಗ್ಗೆ ತಪ್ಪು ಗ್ರಹಿಕೆಗಳಿಗೊಳಗಾದವರು ಎಲ್ಲರೂ ಒಗ್ಗೂಡಿ ತಮ್ಮ ಜೀವನದುದ್ದಕ್ಕೂ ಇಲ್ಲಸಲ್ಲದ ಅಪಪ್ರಚಾರ ಹಾಗೂ ಆರೋಪಗಳ ಮೂಲಕ ಕಸರೆರಚಿ ಇಸ್ಲಾಮ್ ಎಂಬ ಜ್ಯೋತಿಯನ್ನು ನಂದಿಸಲು ವಿಫಲ ಪ್ರಯತ್ನ ಪಟ್ಟರೂ ಕರುಣಾಮಯಿ ಇಸ್ಲಾಮ್ ಮಾತ್ರ ತನ್ನ ಕಾರುಣ್ಯದ ಕೈಗಳನ್ನು ಚಾಚುತ್ತಾ ಇರುತ್ತದೆಯೇ ಹೊರತು ಯಾವುದೇ ಪ್ರತೀಕಾರದ ಗೋಜಿಗೇ ಹೋಗುವುದಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರು ಗೊಂಡಿದೆ.


ಇಸ್ಲಾಂ ಪ್ರತಿಪಾದಿಸುವ ಏಕ ದೇವನಾದ ಅಲ್ಲಾಹು (ಅರ್ಹಮುರ್ರಾಹಿಮೀನ್) ಕರುಣಾಮಯಿಗಳಲ್ಲಿ 

ಅತ್ಯಂತ ದೊಡ್ಡ ಕರುಣಾಮಯಿಯಾಗಿರುತ್ತಾನೆ.

ಅದರ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು (ರಹ್ಮತುನ್ ಲಿಲ್ ಆಲಮೀನ್) ಇಡೀ ಪ್ರಪಂಚಕ್ಕೇ ಕಾರುಣ್ಯರಾಗಿರುತ್ತಾರೆ.


ಅಲ್ಲದೆ ಇಸ್ಲಾಮಿನ ಪ್ರತಿಯೊಂದು ತತ್ವಾದರ್ಶಗಳು ಮಾನವನ ಒಳಿತಿಗೆ ಹಾಗೂ ಮನುಷ್ಯ ಸ್ನೇಹಿಯಾಗಿರುತ್ತದೆ.

ಮಾನವ ಸಮೂಹದ ಇಹ ಪರ ವಿಜಯವನ್ನು ಗುರಿಯಾಗಿಟ್ಟು ಕೊಂಡು ಮಾತ್ರವಾಗಿದೆ ಸಾವಿರಾರು ವರ್ಷಗಳಿಂದ ಇಸ್ಲಾಂ ಈ ಭೂಮಿಯಲ್ಲಿ ಕಾರ್ಯಾಚರಿಸುವುದು.

ಅದರಲ್ಲಿ ಪರಸ್ಪರ ವೈರಾಗ್ಯ,ಹಗೆತನ, ಸಂಘರ್ಷ,ಕಚ್ಚಾಟ ಮುಂತಾದ ಮನುಷ್ಯನ ಸುಗಮ ಜೀವನಕ್ಕೆ ಮಾರಕವಾದ ಗುಣಗಳಿಗೆ ಅವಕಾಶವೇ ಇಲ್ಲ ಎಂದು ಅದನ್ನು ನಿಷ್ಪಕ್ಷಪಾತ ಪರಾಮರ್ಶೆ ಮಾಡುವವರಿಗೆ ಮನದಟ್ಟಾಗದಿರಲು ಸಾದ್ಯವೇ ಇಲ್ಲ.


ಆದ್ದರಿಂದಲೇ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಜಗತ್ತಿನಿಂದಲೇ ಕಿತ್ತೊಗೆಯ ಹೊರಟವರು,

ದೇಶಗಳಿಂದ ಗಡೀಪಾರು ಮಾಡಬೇಕೆಂದವರು, ಮುಸ್ಲಿಮರನ್ನು ದೇಶದ್ರೋಹಿಗಳೆಂದು ಭಾಷಣ ಬಿಗಿದು ಮುಗ್ಧ ಮನಸ್ಸುಗಳನ್ನು  ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಪರಸ್ಪರ ಕಚ್ಚಾಡಿಸಿ ಆನಂದ ಪಟ್ಟವರು, ನಡುರಸ್ತೆಯಲ್ಲಿ ಮುಸ್ಲಿಮರನ್ನು ಅತ್ಯಂತ ಹೀನವಾಗಿ ಹಿಂಸಿಸಿ ಮಾರಣಹೋಮ ನಡೆಸಿ ಕ್ರೂರತೆ ಮೆರೆದವರು ಎಲ್ಲರೂ ನಿಬ್ಬೆರಗಾಗ ಬೇಕಾಯ್ತು. 


ಜಗತ್ತಿನ ಸುಮಾರು 40 ರಷ್ಟು ಮುಸ್ಲಿಂ ರಾಷ್ಟ್ರಗಳು ಜಾತಿ,ಧರ್ಮ,ಭಾಷೆ,ಬಣ್ಣ,

ವರ್ಣ ವರ್ಗ ಯಾವುದೂ ನೋಡದೆ ಕೇವಲ ಮಾನವೀಯ ದೃಷ್ಟಿಯಲ್ಲಿ ಮಾತ್ರ ಭಾರತಕ್ಕೆ ತಮ್ಮ ಉದಾರ ಸಹಾಯ ಹಸ್ತ ಚಾಚಿದೆ.


ಅಲ್ಲದೆ ಭಾರತೀಯ ಮುಸ್ಲಿಮರು, ಮುಸ್ಲಿಂ ಸಂಘಟನೆಗಳು ಹಿಂದೆ ತಮಗುಂಟಾದ ಎಲ್ಲಾ ಕಹಿ ಅನುಭವಗಳನ್ನು ಮರೆತು ಬಿಟ್ಟು ತಮ್ಮ ಅಸಾಮಾನ್ಯ ಮಾನವೀಯತೆಯ ಮೂಲಕ ತಮ್ಮ ಮಸ್ಜಿದ್ಗಳನ್ನು, ಮದ್ರಸಗಳನ್ನು ಕಾರಂಟೈನ್ ಮತ್ತು ಆಸ್ಪತ್ರೆಗಳಾಗಿ ಪರಿವರ್ತಿಸಿಕೊಟ್ಟರು.

ರಕ್ತ ಬೇಕಾದವರಿಗೆ ರಕ್ತ ಅನ್ನಪಾನೀಯ ಬೇಕಾದವರಿಗೆ ಅನ್ನಪಾನೀಯ ಶಿಸ್ರೂಶೆ ಬೇಕಾದವರಿಗೆ ಶಿಸ್ರೂಶೆ ಆಕ್ಸಿಜನ್ ಬೇಕಾದವರಿಗೆ ಆಕ್ಸಿಜನ್ ನೀಡಿ ಸಮಾನತೆಯಿಲ್ಲದ ಮಾದರಿಯಾದರು.

ಎಲ್ಲಿಯ ತನಕ ವೆಂದರೆ ಸತ್ತ ಹೆಣಗಳ ಅಂತ್ಯ ಸಂಸ್ಕಾರ ನಡೆಸಲು ತಮ್ಮವರು,ತಮ್ಮ ಜಾತಿಯವರು,ಕುಟುಂಬಸ್ಥರು ಹತ್ತಿರ ಸುಳಿಯದೆ ದೂರ ಸರಿದು ಅನಾಥವಾದ ಶವಶರೀರಗಳಿಗೆ ಹೆಗಲು ಕೊಟ್ಟು ಶವಸಂಸ್ಕಾರ ವನ್ನು ಅವರವರ ರೀತಿ ರಿವಾಜುಗಳಂತೆ ನಡೆಸಿ ಕೊಟ್ಟು ಅಚ್ಚರಿ ಮೂಡಿಸಿದರು.


ಇದೆಲ್ಲಾ ನೋಡುವಾಗ ನೆನಪುಗಳು ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದ ಘಟನೆಗಳಿಗೆ ಕೊಂಡೊಯ್ಯುತ್ತದೆ.


ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಭೂಮಿಗೆ ಹುಟ್ಟಿ ಬರುವಾಗ ತನ್ನ ತಂದೆಯ ಮುಖವನ್ನು ನೋಡುವ ಭಾಗ್ಯ ಲಭಿಸಿರಲಿಲ್ಲ. 

ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಬ್ದುಲ್ಲಾ ರವರು ಮರಣ ಹೊಂದಿದ್ದರು.

ತಾತ,ದೊಡ್ಡಪ್ಪ,ಚಿಕ್ಕಪ್ಪಂದಿರನ್ನು ಮಾತ್ರವಾಗಿತ್ತು ನೋಡಿರುವುದು.

ಆದ್ದರಿಂದಲೇ ಪ್ರವಾದಿಯವರಿಗೆ ಅವರೊಂದಿಗೆ ಅತಿಯಾದ ಪ್ರೀತಿ ಮತ್ತು ಸ್ನೇಹ ಇದ್ದಿದ್ದು.


ಅವರಲ್ಲೊಬ್ಬ ಚಿಕ್ಕಪ್ಪ ರಾಗಿದ್ದರು ಬಹು ಹಂಝತಿಬಿನ್ ಅಬ್ದುಲ್ ಮುತ್ತಲಿಬ್ ರವರು.

ತನ್ನ ಚಿಕ್ಕಪ್ಪ ರಾಗಿದ್ದು ಕೊಂಡೇ ಹತ್ತಿರದ ಒಡನಾಡಿಯಾಗಿ ತನ್ನೆಲ್ಲಾ ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ಜೀವಿಸಿದ್ದ ಹಂಝ ರಳಿಯಲ್ಲಾಹು ಅನ್ಹುರವರು ಉಹ್ದು ಯುದ್ಧದಲ್ಲಿ ಅತ್ಯಂತ ನಿಕೃಷ್ಟವಾಗಿ ನಿಷ್ಟೂರವಾಗಿ ಶತ್ರುಗಳಿಂದ ವದಿಸಲ್ಪಟ್ಟಿದ್ದರು.


ವಹ್ಶೀ ಎಂಬ ವ್ಯಕ್ತಿಯ ಮೂಲಕ ಹಿಂದ್ ಎಂಬ ಮಹಿಳೆಯ ಆಜ್ಞೆಯಂತೆ ಕೊಲೆಮಾಡಲ್ಪಟ್ಟಿದ್ದರು.

ಆದರೆ ಅತ್ಯಂತ ವಿಕೃತವಾಗಿ ಕೊಲೆ ಮಾಡಲ್ಪಟ್ಟು ಚಿತ್ರ ಹಿಂಸೆ ನೀಡಲ್ಪಟ್ಟ ತನ್ನ ಚಿಕ್ಕಪ್ಪರ ಮೃತ ಶರೀರವನ್ನು ಕಂಡ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಜೀವನದಲ್ಲಿ ಅತ್ಯಂತ ನೋವನುಭವಿಸಿದ ದಿನವಾಗಿತ್ತದು.


ಆದರೆ ಸ್ವಲ್ಪ ಸಮಯಗಳ ನಂತರ ತನ್ನ ಚಿಕ್ಕಪ್ಪರನ್ನು ಅತ್ಯಂತ ನಿಕೃಷ್ಟವಾಗಿ ಕೊಲೆ ಮಾಡಿದ ಅದೇ ವಹ್ಶೀ ಎಂಬ ವ್ಯಕ್ತಿಯು ಪಶ್ಚಾತಾಪ ಪಟ್ಟು ಪ್ರವಾದಿಯವರ ಸನ್ನಿಧಿಗೆ ಬಂದಾಗ ಕಾರುಣ್ಯದ ಸಾಗರವಾದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅವರನ್ನು ಕ್ಷಮಿಸಿ ಇಸ್ಲಾಮಿನ ಸದಸ್ಯರಾಗಿ 

ಸ್ವೀಕರಿಸಿ

ವಹ್ಶೀರವರಲ್ಲಿ ಹೇಳಿದರು. ಸ್ವಲ್ಪ ಸಮಯ ನೀನು ನನ್ನ ಹತ್ತಿರ ಬರಬೇಡ.ಯಾಕೆಂದರೆ ನಿನ್ನನ್ನು ನೋಡುವಾಗ ಯುದ್ಧ ಭೂಮಿಯಲ್ಲಿ ಅತ್ಯಂತ ವಿಕೃತಗೊಳಿಸಲ್ಪಟ್ಟ ನನ್ನ ಚಿಕ್ಕಪ್ಪ ಹಂಝರವರ ಮೃತಶರೀರವು ನನ್ನ ಕಣ್ಣಮುಂದೆ ತೇಲಿ ಬರುತ್ತದೆ. 

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಈ ಮಾತಿನಿಂದ ಈ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಅದೆಷ್ಚು ನೋವು ಅನುಭವಿಸಿದ್ದರೆಂದು ಅರ್ಥ ಮಾಡಿಕೊಳ್ಳಬಹುದು.


ಹೀಗಿದ್ದೂ ಪಶ್ಚಾತಾಪ ಪಟ್ಟು ಬಂದ ವಹ್ಶೀರವರನ್ನು ಕ್ಷಮಿಸಿದ ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಘಟನೆಯು ಇಲ್ಲಿ ಸ್ಮರಣೀಯ ವಾಗಿದೆ.

ಈ ಮಾದರಿಯಾಗಿದೆ ಮುಸ್ಲಿಮರಿಗಿರುವುದು.

ಇದು ಜಗತ್ತಿನಲ್ಲಿ ಪುಣರಾವರ್ತನೆಯಾಗಿದೆ ಆಗುತ್ತಲೇ ಇದೆ.


*يُرِيدُونَ لِيُطْفِئُوا نُورَ اللَّهِ بِأَفْوَاهِهِمْ وَاللَّهُ مُتِمُّ نُورِهِ وَلَوْ كَرِهَ الْكَافِرُونَ*


ಮಾನವೀಯತೆ ಉಳಿಯಲಿ ಅಮಾನವೀಯತೆ ಅಳಿಯಲಿ

Tuesday, April 27, 2021

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

ಆರಾಧನಾ ಲಯಗಳನ್ನು ಮುಚ್ಚಿಸಲು ಪೈಪೋಟಿ ನಡೆಸುವವರೊಂದಿಗೆ ಒಂದು ನಿಮಿಷ

************************************


✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

******************************

ಮೊನ್ನೆ ಎರಡನೇ ಹಂತದ ಕೊವಿಡ್ ಪ್ರತಿರೋದಕ್ಕೆ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿತ್ತು.ಆರಾಧನಾಲಯಗಳನ್ನು ಸಂಪೂರ್ಣವಾಗಿ ಮುಚ್ಚಿಸು ತಯಾರಿ ನಡೆಸುತ್ತಿತ್ತು.ಸರಕಾರೀ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು ಅಷ್ಟೆ.

ಆದರೆ ನಿಷ್ಕಳಂಕ ಮನುಷ್ಯ ಮನಸ್ಸುಗಳು ಒಳಗಿಂದೊಳಗೇ ಆರಾಧನಾ ಲಯಗಳು ಮುಚ್ಚಲ್ಪಡದಿರಲಿ ಎಂದು ಪ್ರಾರ್ಥಿಸುತ್ತಲೇ ಇದ್ದವು.

ಇತ್ತ ಬೆಂಗಳೂರಿನಲ್ಲಿ ನಮ್ಮ ಸುನ್ನೀ ವಿದ್ವಾಂಸರು,ನಾಯಕರು ಆರಾಧನಾಲಯಗಳು ಮುಚ್ಚದಂತೆ ಕೋವಿಡ್ ನ ಎಲ್ಲಾ ಪ್ರೋಟೋಕಾಲ್ ಪಾಲಿಸಿ ಕೊಂಡೇ ಆರಾಧನಾಲಗಳು ಸುಗಮವಾಗಿ ಕಾರ್ಯಾಚರಿಸಲು ಅವಕಾಶ ನೀಡುವಂತೆ ಸರಕಾರದ ಮನವೊಲಿಸುವ ಶತಪ್ರಯತ್ನ ಲ್ಲಿದ್ದರು.

ಆದರೆ ಇದರ ಮದ್ಯೆ ಕೆಲವು ಸ್ವಯಂಘೋಷಿತ ಮರಿ ಪುಡಾರಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಧಿಕಪ್ರಸಂಗದ ಭಾಗವಾಗಿ ಆರಾಧನಾ ಲಯಗಳನ್ನು ಮುಚ್ಚುವ ತೀರ್ಮಾನಗಳನ್ನು ಪ್ರಕಟಿಸಲು ತಾಮುಂದು ನಾಮುಂದು ಎಂದು ಪೈಪೋಟಿ ನಡೆಸುತ್ತಿದ್ದಂತೆ ಭಾಸವಾಯಿತು.

ಮಾತ್ರವಲ್ಲ ಅವರಿಗೆ ಅದರಲ್ಲಿ 

ಒಂದು ರೀತಿಯ ಸಂತೋಷವಿದ್ದಂತೆಯೂ ಅನಿಸಿತು.

ಮಾತ್ರವಲ್ಲ ನಿಸ್ವಾರ್ಥ ಮನಸ್ಸುಗಳಿಗೆ ಇದರಿಂದ ಇವರ ಈ ಅಧಿಕಪ್ರಸಂಗದಲ್ಲಿ ಒಂದು ರೀತಿಯ ಮರುಕವೂ ಉಂಟಾಗಿತ್ತು.

ಯಾಕೆಂದರೆ  

ಇವರೆಂದೂ ಆರಾಧನಾಲಗಳಿಗೆ   ಹೋಗುವವರೋ ಆರಾಧನೆ ಮಾಡುವವರೋ ಇಲ್ಲಿನ ಅಸ್ತವ್ಯಸ್ತಗಳ ಬಗ್ಗೆ ಮಾತೆತ್ತುವವರೋ ಸಮುದಾಯದ ಬಗ್ಗೆ ಕಾಳಜಿ ಇರುವವರು ಖಂಡಿತ ಅಲ್ಲ.

ವಾಸ್ತವದಲ್ಲಿ ಇವರು ಒಂದು ರೀತಿಯ ಪ್ರಚಾರ ಪ್ರಿಯರು ಮಾತ್ರ. 

ಯಾರದೋ ಶಿಫಾರಸ್ಸಿನಿಂದ ಯಾವುದೋ ಒಂದು ಇಲಾಖೆ ಅಥವಾ ಪಕ್ಷದ 

ಆಯಾಕಟ್ಟಿನ ಜಾಗಗಳಲ್ಲಿ ಪ್ರತಿಸ್ಟಾಪಿಸಲ್ಪಟ್ಟಿರುತ್ತಾರೆ.

ಇವರಿಗೆ ಒಟ್ಟಾರೆಯಾಗಿ ತಮ್ಮ ಅಸ್ತಿತ್ವ ಹಾಗೂ ನಾವು ಸಮುದಾಯದ ನಾಯಕರೆಂದು ಬಿಂಬಿಸಬೇಕು.ಅದಕ್ಕೆ ಇಂತಹ ಸಮಯಗಳನ್ನು ಕಾಯುತ್ತಾ ಇರುತ್ತಾರೆ.

ಕೆಲಸವಿಲ್ಲದ..........ಮಗುವಿನ.......ಎಂಬ ಗಾದೆ ಮಾತಿನಂತೆ ಇವರ ಪಕ್ಷದ ಅಥವಾ ಇವರಿಗೆ ನೀಡಲ್ಪಟ್ಟ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿ ಸುಮ್ಮನಿರಬೇಕೇ ಹೊರತು ಇಂತಹ ಅಧಿಕಪ್ರಸಂಗ ಗಳಿಗೆ ಬರಬಾರದು.

ಆರಾಧನಾಲಯಗಳ ಬಗ್ಗೆ ಹಾಗೂ ಸರಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಬಗ್ಗೆ ಸಮುದಾಯಕ್ಕೆಎಲ್ಲಾ ರೀತಿಯ ಮಾರ್ಗದರ್ಶನ ನೀಡಲು ಧಾರ್ಮಿಕ ವಿದ್ವಾಂಸರು,ಖಾಝಿಗಳು ಧಾರಾಳವಾಗಿ ಇದ್ದಾರೆ.

ಮಾತ್ರವಲ್ಲ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಲೂ ಇದ್ದಾರೆ.

ಆರಾಧನೆಗಳ ಮುಚ್ಚುವಿಕೆ ಅನಿವಾರ್ಯವಾದರೆ ಅದರಲ್ಲೂ ಸರಕಾರದೊಂದಿಗೆ ಸಂಪೂರ್ಣವಾಗಿ ಕೈಜೋಡಿಸಲೂ ಸಿದ್ಧರಿದ್ದಾರೆ.

ಇದರಲ್ಲಿ ಈ ಮರಿ ಪುಡಾರಿಗಳು ಮಧ್ಯಪ್ರವೇಶ ಅನಗತ್ಯ ಮಾತ್ರವಾಗಿದೆ.   

ಅಲ್ಲದೆ ಆರಾಧನಾಲಯಗಳನ್ನು ಮುಚ್ಚುವುದು ಅಷ್ಟೊಂದು ಹಿತಕರವಾದ ವಿಷಯವೆಂದು ಯಾರೂ ಭಾವಿಸಬೇಕಾಗಿಲ್ಲ.

ಆರಾಧನೆ ಎಂಬುದು ಪ್ರಪಂಚದ ಸೃಷ್ಟಿ ಕರ್ತನಿಗೆ ಸಂಬಂಧಿಸಿದ್ದಾಗಿದೆ.

ಆದ್ದರಿಂದ ವಿಪತ್ತುಗಳು ಮತ್ತು ಮಹಾಮಾರಿ ಗಳು ವಿಪರೀತ ಗೊಂಡು ಸರಕಾರ, ಇಲಾಖೆ, ಅಧಿಕಾರಸ್ಥರೆಲ್ಲರ ಕೈಮೀರತ್ತಿರುವ ಹಾಗೂ ಅವರು ಕೈಚೆಲ್ಲುತ್ತಿರುವ ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ವಿಪತ್ತುಗಳನ್ನು ನೀಡುವ ಹಾಗೂ ನಿಯಂತ್ರಿಸುವ

ಸೃಷ್ಟಿ ಕರ್ತನಲ್ಲಿ ಅಭಯ ಪಡೆಯುವುದು ಮಾತ್ರ ಪರಿಹಾರ ಮಾರ್ಗವಾಗಿ ಉಳಿಯುತ್ತದೆ. 

ಆದ್ದರಿಂದ ಇಂತಹ ಸಮಯಗಳಲ್ಲಿ ಆರಾಧನೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯಬೇಕು.

ಅನಿವಾರ್ಯ ಸಂದರ್ಭಗಳಲ್ಲಿ ಆರಾಧನಾ ಲಯಗಳ ಮುಚ್ಚುವಿಕೆ ಕೊನೆಯ ಅಸ್ತ್ರವಾಗಬೇಕೇ ಹೊರತು ಮೊದಲ ಅಸ್ತ್ರವಾಗಬಾರದು. 

ಅಲ್ಲದೆ ವಿಪತ್ತುಗಳು ಹರಡಲು ಹೆಚ್ಚು ಸಾಧ್ಯತೆಯಿರುವ ಎಲ್ಲಾ ವಲಯಗಳನ್ನು ಮುಕ್ತಗೊಳಿಸಿ ಸಾಂಕ್ರಾಮಿಕ ರೋಗಗಳು ಕೇವಲ ಆರಾಧನಾಲಯಗಳಲ್ಲಿ ಮಾತ್ರ ತಂಗಿ ನೆಲೆಯೂರಿದೆ ಎಂದು ಬಿಂಬಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಅಲ್ಲದೆ ಜಗತ್ತಿನ ಅತ್ಯಂತ ದೊಡ್ಡ ಆರಾಧನಾ ಕೇಂದ್ರವಾದ ಪವಿತ್ರ ಮಕ್ಕಾದಲ್ಲಿಹಾಗೂ ಮದೀನಾದಲ್ಲಿರುವ ಹರಂ ಶರೀಫ್ ಗಳು ಪ್ರೋಟೋಕಾಲ್ ಗಳನ್ನು ಸರಿಯಾಗಿ ಪಾಲಿಸಿಕೊಂಡೇ ಆರಾಧನಾಲಯಗಳಲ್ಲಿ ಆರಾಧನೆಗಳನ್ನು ಹೇಗೆ ನಡೆಸಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿ ಕಾಣುತ್ತದೆ.

ದಿನನಿತ್ಯ ಲಕ್ಷಾಂತರ ಜನರು ಅಲ್ಲಿ ಆರಾಧನೆ ನಡೆಸುವ ಆ ಸುಂದರ ದೃಶ್ಯವೇ ಒಂದು ವಿಸ್ಮಯ.ಇದರಿಂದ ಯಾವುದೇ ರೀತಿಯ ರೋಗ ಹರಡಿದ ಅನುಭವವೇ ಇಲ್ಲ.

ಎಲ್ಲದಕ್ಕೂ ಇಚ್ಚಾಶಕ್ತಿ ಬಹಳ ಮುಖ್ಯವೆನಿಸುತ್ತದೆ.

ಅದೂ ಅಲ್ಲದೆ ಎಷ್ಟರ ವರೆಗೆ ಈ ಪ್ರಪಂಚದಲ್ಲಿ ಸೃಷ್ಟಿಕರ್ತನ ಆರಾಧನೆಗಳು ಮುಕ್ತವಾಗಿ ನಡೆಯುತ್ತದೋ ಅಲ್ಲಿಯವರೆಗೆ ಈ ಪ್ರಪಂಚ ಸುಗಮವಾಗಿ ಸುಸೂತ್ರವಾಗಿ ಮುಂದುವರಿಯಬಹುದೇ ಹೊರತು

ಆರಾಧನೆಗಳು,ಆರಾಧನಾ ಲಯಗಳು ಯಾವಾಗ ಸ್ತಬ್ಧ ವಾಗುತ್ತದೋ ಅವಾಗ ಪ್ರಪಂಚವೂ ನಾಶವಾಗಿಬಿಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. 

ಕೇವಲ ವ್ಯಭಿಚಾರಿಗಳು, ಭ್ರಷ್ಟಾಚಾರಿಗಳು,ಮಧ್ಯಪಾನಿಗಳು,ದರೋಡೆಕೋರರು ಮುಂತಾದ ಕೆಟ್ಟ ಜನರು ಮಾತ್ರ ಉಳಿಯುವ ಸಮಯದಲ್ಲಾಗಿದೆ ಈ ಪ್ರಪಂಚದ ಅಂತ್ಯ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹದಿನಾಲ್ಕು ಶತಮಾನಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿರುತ್ತಾರೆ.

*لا تقوم الساعة إلا على شرار الخلق*

ಆದ್ದರಿಂದ ಯಾವುದೇ ಸಂದಿಗ್ಧ ಸಂದರ್ಭಗಳಲ್ಲಿಯೂ ಸಾಧ್ಯವಾದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಆರಾಧನಾಲಯಗಳು ಮೊಟಕು ಗಳ್ಳದಂತೆ ಎಚ್ಚರಿಕೆ ವಹಿಸುವುದು ಪ್ರಜೆಗಳಿಗೂ ಸರ್ಕಾರಗಳಿಗೂ ಒಳಿತು ಎಂದು ಅರಿತಿರಬೇಕು.

Tuesday, March 16, 2021

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.

ವಿವಾದಗಳ ನಿರ್ಮಾಪಕರಾಗದೆ ನಿವಾರಕರಾಗೋಣ

✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.


ಊಟದಲ್ಲಿ ಕಲ್ಲು ಸಿಕ್ಕರೆ ಕಲ್ಲನ್ನು ಬೀಸಾಡಿ ಊಟ ಮುಂದುವರಿಸ ಬೇಕು.ಇದು ಬುದ್ಧಿ ವಂತಿಕೆ.

ಅಲ್ಲದೆ ಊಟದ ಮುಂದೆ ಕುಳಿತು ಕಲ್ಲನ್ನೇ ಹುಡುಕುವವನಿಗೆ ಊಟ ಮಾಡಲು ಸಾಧ್ಯವಿಲ್ಲ.

ಅವನ ಸಮಯಗಳನ್ನೆಲ್ಲಾ 

ಕಲ್ಲು ಹುಡುಕುವುದರಲ್ಲೇ ಕಳೆಯಬೇಕಾಗುತ್ತದೆ.

ಇದೇ ರೀತಿ ಇಂದು 

ಮುಸ್ಲಿಂ ಸಮುದಾಯದ ಹೆಸರಿನಲ್ಲಿ  ಕೆಲವರು ವಿವಾದಗಳನ್ನೇ ಹುಡುಕಿ

ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ಇಲ್ಲಸಲ್ಲದ ಅಂತೆಕಂತೆಗಳನ್ನು ಸೃಷ್ಟಿಸಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕಿ ಬಿಡುತ್ತಾರೆ. ಇದರಿಂದ ಮುಸ್ಲಿಮರ ವಿರುದ್ಧ ಸದಾ ಸಂಘರ್ಷವನ್ನೇ ಬಯಸುವ ವಿಚಿದ್ರಕಾರಿ ಮನೋಭಾವದವರಿಗೆ ಆಹಾರವನ್ನು ನೀಡುತ್ತಾರೆ.

ಸಾವಿರಾರು ವರ್ಷಗಳಲ್ಲಿ ಈ ಭಾರತದಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ.

ಈ ಸುದೀರ್ಘ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ.

ಆದರೆ ಯಾವತ್ತೂ ಅನಾವಶ್ಯಕ ವಿಚಾರವಿವಾದಗಳಲ್ಲಿ ಏರ್ಪಡುತ್ತಿರಲಿಲ್ಲ.

ಯಾಕೆಂದರೆ ಇಲ್ಲಿ ಎಷ್ಟು ವಿವಾದಗಳು ಸೃಷ್ಟಿಯಾಗುತ್ತಿದೆಯೋ ಅಷ್ಟೇ ಲಾಭವನ್ನು ಇಲ್ಲಿನ ಕೋಮುವಾದಿ ಶಕ್ತಿಗಳು  ಪಡೆಯುತ್ತವೆ.

ಆದರೂ ಈ ದೇವಾಸಿಗಳಲ್ಲಿ ಬಹುತೇಕರು ಅವರು ಯಾವುದೇ ಜಾತಿ ಧರ್ಮ ವರ್ಗ ವರ್ಣ ಗಳಿಗೆ ಸೇರಿದವರಾದರೂ ಅವರೆಲ್ಲರೂ ನೆಮ್ಮದಿಯ ವಾತಾವರಣ ವನ್ನು ಬಯಸುತ್ತಾರೆ ಯೇ ಹೊರತು ಸಂಘರ್ಷವನ್ನು ಇಷ್ಟ ಪಡುವುದೇ ಇಲ್ಲ.

ಹೀಗಿರುವಾಗ ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ವಿವಾದಗಳನ್ನು ಸೃಷ್ಟಿಸುವುದರಿಂದ ಮುಸಲ್ಮಾನರು ಇಲ್ಲಿ ಎಲ್ಲರಿಗೂ ಎಲ್ಲದರಲ್ಲೂ ಸಮಸ್ಯೆ ಎಂಬ ವಿರೋಧಿಗಳ ಅಪಪ್ರಚಾರ ಕ್ಕೆ ಪುಷ್ಠಿ ದೊರೆತಂತಾಗುತ್ತದೆ.

ಇದರಿಂದ ಮತ್ತಷ್ಟು ಉತ್ತಮ ಮನಸ್ಸುಗಳು ಮುಸ್ಲಿಮರಿಂದ ದೂರವಾಗುವ ಸಾಧ್ಯತೆ ಇದೆ.

ಇದು ಮುಸ್ಲಿಂ ವಿರೋಧಿಗಳಿಗೆ ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು ಎಂಬ ಗಾದೆಯಂತಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದರಿಂದಾಗಿ ಮುಸ್ಲಿಮರು ಇಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿದೆ.

ಅನೇಕ ವರ್ಷಗಳಿಂದ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳಿಗೆ ಸೊಪ್ಪು ಹಾಕದ ಉದಾತ್ತ ಮನಸ್ಸಿನ ವಕ್ತಾರರ ಒಂದು ದೊಡ್ಡ ವಿಭಾಗ ಇವತ್ತೂ ಸಹ ಈ ಭಾರತದ ಮಣ್ಣಿನಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು.

ಮೊನ್ನೆ ಪಡುಬಿದ್ರಿ ಬೀಚಿನಲ್ಲಿ ನಡೆದ ಒಂದು ನಮಾಝಿನ ವಿವಾದದ ವೀಡಿಯೋ ನೋಡಿದಾಗ ಹೀಗೆ ಗೀಚಬೇಕೆಂದನಿಸಿತು.

Wednesday, March 3, 2021

ಮರಣ ಹೊಂದಿದ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದ


ಪ್ರೀತಿಗೆ ರೇಖೆಗಳಿಲ್ಲ   ಅದೊಂದು ರೋಮಾಂಚಕ ಸತ್ಯ ಘಟಣೆ ದುರಂತಗಳು ಯಾವ ರೂಪದಲ್ಲೆಲ್ಲ ನಮ್ಮನ್ನು ಹಿಂಬಾಲಿಸುತ್ತಾ ಇದೆ ನಮ್ಮ ಊಹೆಗೂ ತಿಳಿಯದೇ ಇರುವ ವಿಷಯ ವಾಗಿದೆ  ಪ್ರೀತಿ ಪ್ರೇಮ ಮನುಷ್ಯನಿಗೆ ಎಲ್ಲವನ್ನೂ ಕಲಿಸುತ್ತವೆ ನಾವು ಜೀವನದಲ್ಲಿ ಪ್ರತಿಯೊಬ್ಬರನ್ನೂ ಷ್ರೀತಿಸುತ್ತೇವೆ ತಂದೆ ತಾಯಿ ಅಣ್ಣ ತಂಮ್ಮಂದಿರ ಪ್ರೀತಿ ಅದು ಯಾವ ದಿಕ್ಕಿನಲ್ಲಿ ನೋಡಿದರೂ ನಿಭಾಯಿಸಲೇ ಬೇಕು ಆದರೆ ನಿಮ್ಮ ಒಡ ಹುಟ್ಟದ ಎಲ್ಲಿಂದಲೋ ತಂದೆ ತಾಯಿಯನ್ನು ಬಿಟ್ಟು ಒಬ್ಬಾಕೆ ತನ್ನ ಪತಿಯ ಸಹಬಾಗಿತ್ವದಲ್ಲಿ ಜೀವಿಸುತ್ತಾಳೆ ಎಂದರೆ ಅದು ಯಾರಿಂದಲೂ ವರ್ಣಿಸಲು ಸಾಧ್ಯವಾಗದ ಮಾತು ಪತ್ನಿಯನ್ನು ಪ್ರೀತಿಸಿದ  ಅನೇಕ ಗಂಡಂದಿರ ಇತಿಹಾಸಗಳು ನಮ್ಮ ಮುಂದೆ ಸಾಕಷ್ಟು ಕಾಣ ಸಿಗುವುದು ಭಾರತದಲ್ಲಿ ಶಾಜಹಾನ್ ರವರು ತನ್ನ ಪತ್ನಿ ಮುಂತಾಝ್ ಗಾಗಿ ತಾಜ್ ಮಹಲ್ ಎಂಬ ಪ್ರೀತಿಯ ಗೋಪುರವನ್ನು ಕಟ್ಟಿ ಲೋಕದಲ್ಲಿ ಪ್ರತಿಯೊಬ್ಬರಿಗೂ ಆ ಪ್ರೇಮ ಸ್ಮಾರಕ ನೋಡಬೇಕೆಂಬ ಹಂಬಲ ಮೂಡಿಸಿದರು   ಆದರೆ ಇದೊಂದು ಅದೇ ತರಹದ ಸತ್ಯ ಘಟಣೆ ನಮ್ಮ ನೆರೆಯ ದೇಶ ಪಾಕಿಸ್ತಾನದ ಉಮರ್ ಕೋಟ್ ನ  ಒಬ್ಬ ಪ್ರಜೆ ತನ್ನ ಮರಣ ಹೊಂದಿದ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದನು ಅವರ ಪತ್ನಿ ಮರ್ಯಮ್ ಅವರ ಮದುವೆ ಮನೆಯವರ ಸಮ್ಮತದಲ್ಲಿ ನಡೆದ ಮದುವೆ ಹದಿನೆಂಟನೇ ವಯಸ್ಸಿನ ಹದಿ ಹರೆಯದ ಹುಡುಗ ಮದುವೆ ಆಗಿದ್ದು ನಲವತ್ತು ವರ್ಷ ಪ್ರಾಯದ ಹೆಂಗಸು ನಲವತ್ತು ವರ್ಷಗಳ ಕಾಲ ಪ್ರೀತಿ ಪ್ರೇಮದಿಂದ ಜೀವನ ನಡೆಸಿ ಒಂದಾಗಿ ಬಾಳಿದ ಆ ದಂಪತಿಯ ದಾಂಪತ್ಯ ಜೀವನ ಅದ್ಭುತ ವಾದದ್ದು  ಸರಳವಾದ ಜೀವನ ಜೀವಿಸಿದ ಉಮರ್ ರಾತ್ರಿ ತಡವಾಗಿ ಮನೆಗೆ ಬಂದರೆ ಯಾವತ್ತೂ ಆಹಾರದ ನೆಪದಲ್ಲಿ

ಪತ್ನಿಯನ್ನು ಪೀಡಿಸುತ್ತಿರಲಿಲ್ಲ   ನಮ್ಮ ಮಧ್ಯೆ ಜಗಳವಾಗಿಲ್ಲ ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಎನ್ನುತ್ತಾರೆ ಅವಳಿಗೆ ಬಳೆ ಇಷ್ಟ ಇರುವುದರಿಂದ ನಾನು ಅದನ್ನು ಖರೀದಿಸುತ್ತಿದೆ ಒಮ್ಮೊಮ್ಮೆ ಅವಳನ್ನು ವರ್ಣಿಸುತ್ತಾ ಕವನ ಗಳನ್ನು ಹೇಳುತ್ತಿದ್ದೆ .1980  ರಲ್ಲಿ ಭಾರತ ಸಂದರ್ಶಿಸಿದೆ ಅಲ್ಲಿನ ತಾಜ್ ಮಹಲ್ ನೋಡಿದೆ ಅಲ್ಲಿಂದ ಹಿಂತಿರುಗಿ ಮನೆಗೆ ಬಂದೆ ರಾತ್ರಿ ಕನಸಿನಲ್ಲಿ ನೋಡಿದೆ ನಮ್ಮ ಖಬರ್ಸ್ತಾನದಲ್ಲಿ ಒಂದು ತಾಜ್ ಮಹಲ್ ನೆಲೆ ನಿಂತಿದೆ    ನಾನು ನನ್ನ ಪತ್ನಿಯ ಮರಣದ ನಂತರ  ಅವಳ  ಸಮಾದಿಯಲ್ಲಿ ಒಂದು ಅದ್ಭುತ ತಾಜ್ ಮಹಲ್ ನಿರ್ಮಿಸಿದೆ ಅವಳು ಇಂದಿಗೂ ನನಗೆ ನೆನಪಾಗುತ್ತಾಳೆ   

ದಂಪತಿಗಳು ತನ್ನ ದಾಂಪತ್ಯ ಜೀವನದಲ್ಲಿ ಹಲವು ಅಡೆ ತಡೆ ಗಳು ಬಂದರೂ ಯಾವತ್ತೂ ಒಂದಾಗಿ ಬಾಳುವ ಪ್ರತಿಜ್ಞೆ ಮಾಡಬೇಕು...

Monday, March 1, 2021

ವೈವಾಹಿಕ ಜೀವನದ ರಹಸ್ಯ ಗಳು

 ವೈವಾಹಿಕ ಜೀವನದ  ರಹಸ್ಯ ಗಳು 


ಮದುವೆಯ ರಾತ್ರಿಯ  ಪ್ರಾರ್ಥನೆ ಗಳು 

ನಮಾಝ್  ಮತ್ತು ಸ್ವಲಾತ್ ಗಳನ್ನು     ಮದುಮಗ  ಹಾಗೂ ಮದುಮಗಳು  ಮದುವೆಯ ರಾತ್ರಿಯಲ್ಲಿ  ಮಾಡುವುದು ಅಪೇಕ್ಷಣೀಯವಾಗಿದೆ, ಅವುಗಳೆಂದರೆ: ಎರಡು ರಕ್ಅತ್  ನಮಾಝ್ ಮಾಡುವುದು  


ಮದುವೆಯ ರಾತ್ರಿ ಪ್ರಾರ್ಥಿಸುವುದು   ಕೆಲವು ವಿದ್ವಾಂಸರ  ಅಭಿಪ್ರಾಯ ಪ್ರಕಾರ  ಅಪೇಕ್ಷಣೀಯ  ವಾಗಿದೆ  ಮತ್ತು ಹೆಂಡತಿಯೊಂದಿಗೆ ಸಂಬೋಗ     ನಡೆಸುವ   ಮೊದಲು ಈ ಪ್ರಾರ್ಥನೆಯನ್ನು ನಡೆಸಲಾಗುತ್ತದೆ, ಮತ್ತು ಇದನ್ನು ಕೆಲವು ಸಹಾಬಿಗಳೂ ಮಾಡಿದ ವರದಿಗಳು ಹದೀಸ್ ಗಳಲ್ಲಿ ಕಾಣಬಹುದು   

ಈ ಕಾರ್ಯ ಮಾಡುವುದರಲ್ಲಿ     ಯಾವುದೇ ತಪ್ಪಿಲ್ಲ, 

ಮತ್ತು ಅದನ್ನು ನಿರ್ವಹಿಸದವನ  ಮೇಲೆ ಯಾವುದೇ ದೋಷ ಖಂಡಿತ ಇಲ್ಲ 

ಎಂದು ಅಬು ಸಯೀದ್(ರ)   ಮಾಡಿದ ವರದಿಗಳಲ್ಲಿ    ಕಾಣಬಹುದು 

  (تزوَّجتُ وأَنا مَملوكٌ فدعوتُ نفرًا مِن أصحابِ النَّبيِّ صلَّى اللَّهُ علَيهِ وسلَّمَ فيهمُ ابنُ مسعودٍ، وأبو ذرٍّ وحُذَيْفةُ قال: وأقيمتِ الصَّلاةُ قالَ: فذَهَبَ أبو ذرٍّ ليتقدَّمَ فقالوا: إليكَ، قالَ: أوَ كذلِكَ؟ قالوا: نعَم، قالَ: فتقدَّمتُ بِهِم وأَنا عبدٌ مملوكٌ وعلَّموني فقالوا: إذا دخلَ عليكَ أَهْلُكَ فصلِّ رَكْعتينِ ثمَّ سلَ اللَّهَ مِن خيرِ ما دخلَ عليكَ وتعوَّذ بهِ من شرِّهِ، ثمَّ شأنَكَ وشأنَ أَهْلِكَ


ಈ ಪ್ರಾರ್ಥನೆಯು ಜಮಾತ್  ಆಗಿ ಮಾಡಲಾಗುತ್ತದೆ  . ಹೆಂಡತಿ ತನ್ನ ಗಂಡನ ಹಿಂದೆ ನಿಲ್ಲಬೇಕು 

ಮತ್ತು ಇದು ಎರಡು ರಕಾತ್  ಒಳಗೊಂಡಿರುತ್ತದೆ, ಇದನ್ನು ಇತರ ಎಲ್ಲ ಪ್ರಾರ್ಥನೆಗಳ ರಕಾತ್ ಗಳಂತೆ  ನಿರ್ವಹಿಸಲಾಗುತ್ತದೆ, 


 ರಾತ್ರಿಯ ಸಮಯದಲ್ಲಿ ಜೋರಾಗಿಯೂ    ಹಗಲಿನ ವೇಳೆಯಲ್ಲಿ ಕಾರ್ಯಕ್ಷಮತೆ ಸ್ಥಿತಿಯಲ್ಲಿ ನಿರ್ವಹಿಸತಕ್ಕದ್ದು 


ನ್ಯೂನತೆಗಳಿಲ್ಲದೆ ತಮ್ಮ ಮದುವೆ ಯಶಸ್ವಿಯಾಗಲು,  ಇಸ್ಲಾಮಿಕ್ ಕಾನೂನಿನ ಪ್ರಕಾರ  ಹಲವಾರು ಕೌಶಲ್ಯ  ಕಾರ್ಯಗಳನ್ನು ಮಾಡಬಹುದು.ಈ ಕೆಲವು ಮಾಡಬಹುದಾದ ಕಾರ್ಯ   ಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:


ವಾತ್ಸಲ್ಯ, ಗೌರವದ ಅಭಿವ್ಯಕ್ತಿಗಳು,ಪ್ರೀತಿ ಪ್ರೇಮ  ಮತ್ತು ಪತಿ ಪತ್ನಿಯರು ಪರಸ್ಪರ  ಕರೆಯಲು  ಇಷ್ಟಪಡುವ ಹೆಸರುಗಳನ್ನು ಚಾಲ್ತಿಗೆ ತರುವುದು 

ಇಬ್ಬರ  ನಡುವಿನ ವೈವಾಹಿಕ ಸಂಬಂಧವನ್ನು ಕಾಪಾಡುತ್ತದೆ ಮತ್ತು ಅದನ್ನು ಸ್ಥಿರಗೊಳಿಸಲು ಕೆಲಸ ಮಾಡುತ್ತದೆ. ಯಾವಾಗಲೂ ಮುಖದ ಮೇಲೆ ನಗು ಇಟ್ಟುಕೊಳ್ಳುವುದು, ದಯೆ ತೋರಿಸುವುದು ಮತ್ತು ಕೆಲವೊಮ್ಮೆ ಹಾಸ್ಯವನ್ನು ಬಳಸುವುದು. ಏಕೆಂದರೆ ಇವೆಲ್ಲವೂ ಜೀವನಕ್ಕೆ ಸಂತೋಷದ ವೈಭವವನ್ನು ನೀಡುತ್ತದೆ, ಬದಲಾವಣೆ ಮತ್ತು ಚಿಂತೆ, ದುಃಖ ಮತ್ತು ಒತ್ತಡಗಳನ್ನು ತೆಗೆದುಹಾಕುತ್ತದೆ. ಪ್ರತಿಯೊಬ್ಬರೂ    ಇನ್ನೊಬ್ಬರ ಬಗ್ಗೆ ಹೊಂದಿರುವ ಪ್ರೀತಿ ಮತ್ತು ಹಂಬಲವನ್ನು ವ್ಯಕ್ತಪಡಿಸುತ್ತಾ, ವಿಶೇಷವಾಗಿ ಮಹಿಳೆಯರು ತಮ್ಮ ಭಾವನೆಗಳನ್ನು ಹೆಚ್ಚಿಸುವ ಮತ್ತು ಬಲಪಡಿಸುವ ಈ ಅಭಿವ್ಯಕ್ತಿಗಳನ್ನು ಇಷ್ಟ ಪಡುತ್ತಾರೆ .

ಇಬ್ಬರೂ ಪರಸ್ಪರ  ಪ್ರತಿಪಾದಿಸಿದ ಭಾವನೆಗಳು ಮತ್ತು ಆಲೋಚನೆಗಳನ್ನು ಗೌರವಿಸುವುದು ಸೇರಿದಂತೆ ಇಬ್ಬರ  ನಡುವೆ ಗೌರವವನ್ನು ಕಾಪಾಡಿಕೊಳ್ಳುವುದು, ಅವುಗಳು ವಿರೋಧಾಭಾಸದಲ್ಲಿದ್ದರೂ ಸಹ ಅವರನ್ನು ಗೌರವಿಸಬೇಕು ಮತ್ತು ತೃಪ್ತಿದಾಯಕ ಫಲಿತಾಂಶವನ್ನು ತಲುಪುವವರೆಗೆ ಉತ್ತಮ ಸಂಭಾಷಣೆ ಇರಬೇಕು. ಉಡುಗೊರೆಗಳನ್ನು ಕೊಡುವುದು ಮತ್ತು ಅವುಗಳನ್ನು ಇಬ್ಬರ  ನಡುವೆ ವಿನಿಮಯ ಮಾಡಿಕೊಳ್ಳುವುದು, ಏಕೆಂದರೆ ಉಡುಗೊರೆಗಳು ಹೃದಯಗಳನ್ನು ತಲುಪುವ ಕೀಲಿಗಳಲ್ಲಿ ಒಂದಾಗಿದೆ, ವಾತ್ಸಲ್ಯವನ್ನು ಹೆಚ್ಚಿಸುತ್ತದೆ ಮತ್ತು ದ್ವೇಷವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಅವುಗಳು ಪ್ರತಿಯೊಬ್ಬರ  ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ,     ಉಡುಗೊರೆ ಹೂವುಗಳ ಪುಷ್ಪಗೊಂಚಲು    ಅಥವಾ ಗಿಫ್ಟ್  ಕಾರ್ಡ್ ಕೊಡಬಹುದು  ಅದರ     ಒಳಗೆ ಒಂದು ಸುಂದರವಾದ ಸಂದೇಶವನ್ನು  ಬರೆಯುವುದು ಸಹ ಸುಖ ದಾಂಪತ್ಯದ  ರಹಸ್ಯ ಗಳು     ಹೆಂಡತಿ ತನ್ನ ಗಂಡನ ಕುಟುಂಬವನ್ನು ಗೌರವಿಸುತ್ತಾಳೆ ಮತ್ತು ಪತಿ ತನ್ನ ಹೆಂಡತಿಯ ಕುಟುಂಬವನ್ನು ಗೌರವಿಸುತ್ತಾನೆ ಎಂದು ಖಚಿತಪಡಿಸಿಕೊಳ್ಳಿ 

ಅವರೊಂದಿಗೆ ಮಾತು ಸದಾ  ಮುಂದುವರಿಸುವುದು, ಅವರೊಂದಿಗೆ ಕುಳಿತುಕೊಳ್ಳುವಾಗ ಅಥವಾ ಮಾತನಾಡುವಾಗ ಸಂತೋಷ ಮತ್ತು ಹಿತಕರ ಭಾವನೆ, ಮತ್ತು ಯಾರ ಮುಂದೆ ಕೆಟ್ಟದಾಗಿ ಪ್ರಸ್ತಾಪಿಸಬಾರದು. ಹೆಚ್ಚಿನ ಸಮಯ ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣಿಸಿಕೊಳ್ಳಲು, ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಉತ್ಸುಕರಾಗಿರಬೇಕು ಮತ್ತು ಸುಗಂಧ  ಪರಿಮಳ . ಸಾಧ್ಯವಾದಷ್ಟು ಹಚ್ಚಲು  ಪ್ರಯತ್ನಿಸಿ ಕೆಲವೊಮ್ಮೆ ತಪ್ಪಾಗಿ ಮಾಡುವ ಸ್ವಯಂಪ್ರೇರಿತ ತಪ್ಪುಗಳನ್ನು ನಿರ್ಲಕ್ಷಿಸಿ.  ವೈವಾಹಿಕ ಜೀವನವು ಯಶಸ್ವಿಯಾಗಲು ಎರಡು ಪಕ್ಷಗಳು   ಪರಸ್ಪರ ಸಮಾನತೆ  ಹೊಂದಿರಬೇಕು. ಇಸ್ಲಾಂನಲ್ಲಿ ವಿವಾಹದ ಉದ್ದೇಶಗಳು, ಸರ್ವಶಕ್ತ ನಾದ ಅಲ್ಲಾಹು  ಹಲವಾರು ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಮದುವೆಯನ್ನು ಸೂಚಿಸಿದ್ದಾನೆ, ಮತ್ತು ಅವುಗಳಲ್ಲಿ ಕೆಲವು ಕೆಳಗೆ ಉಲ್ಲೇಖಿಸಲಾಗಿದೆ: 


ಮಾನವ ಸಂತತಿಯ ನಿರಂತರತೆಯನ್ನು ಕಾಪಾಡಿಕೊಳ್ಳುವುದು. ಪತಿ ಪತ್ನಿಯರಿಗೆ  ಸಂತೋಷದ ಸಂಭವ, ಮತ್ತು ಈ ಆನಂದವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಮೊದಲ ಭಾಗ: ನೆಮ್ಮದಿ, ವಿಶ್ರಾಂತಿ ಮತ್ತು ಮಾನಸಿಕ ಧೈರ್ಯವನ್ನು ಸಾಧಿಸುವುದು, ಮತ್ತು ಎರಡನೇ ಭಾಗ: ಲೈಂಗಿಕ ಪ್ರವೃತ್ತಿಯನ್ನು ತೃಪ್ತಿಪಡಿಸುವುದು. ಸಂಗಾತಿಯ ನಡುವೆ ವಾತ್ಸಲ್ಯ ಮತ್ತು ಸಹಾನುಭೂತಿ ಮತ್ತು ಅವರ ನಡುವೆ ನೆಮ್ಮದಿ ಉಂಟಾಗುತ್ತದೆ. ಸಮಾಜವನ್ನು ನಿರ್ಮಿಸಲು ಕುಟುಂಬವು ಆಧಾರವಾಗಿರುವುದರಿಂದ ಮತ್ತು ಅದರ ಒಳ್ಳೆಯತನದಿಂದ ಸಮಾಜಗಳು ಸುಧಾರಣೆಯಾಗುತ್ತವೆ,  ಅನೈತಿಕತೆಯನ್ನು ಅಭ್ಯಾಸ ಮಾಡುವುದರ ಪರಿಣಾಮವಾಗಿ ಹರಡುವ ರೋಗಗಳಿಂದ ಸಮಾಜವನ್ನು ರಕ್ಷಿಸಿ. ಸಮಾಜದಲ್ಲಿ ಸುರಕ್ಷತೆಯನ್ನು ಸಾಧಿಸುವುದು. ವ್ಯಕ್ತಿಗಳ ನಡುವೆ ಸಹಯೋಗ ಸಂಭವಿಸುತ್ತದೆ

ABUYAMIN ALQADRI

Saturday, February 27, 2021

ಆಲೋಚನೆ ಮಾಡಿ ಮದುವೆ ಯಾದರೆ ಅಲ್ಲಿ ಸಂಬಂಧಗಳು ಬೆಟ್ಟಗಳ ಹಾಗೆ ಬೇರೂರಿ ನಿಲ್ಲುತ್ತವೆ…...

 

ಮದುವೆ ಆಗಲು ಜೀವನ ಸಂಗಾತಿಯನ್ನು  ಆಯ್ಕೆಮಾಡುವಾಗ ಕೆಲವು ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು, 


ವೈಯಕ್ತಿಕವಾಗಿ  ಅಭಿವೃದ್ಧಿ ಹೊಂದಲು  ಬದ್ಧತೆಯಾಗಿರಬೇಕು, ಹುಡುಗಿ ಒಬ್ಬ  ಉತ್ತಮ ವ್ಯಕ್ತಿಯಾಗಲು ಬಯಸುತ್ತಾಳೆ ಮತ್ತು ಸ್ವ-ಅಭಿವೃದ್ಧಿಗೆ ವೈಯಕ್ತಿಕ ಗುರಿಗಳನ್ನು ಹೊಂದಿದ್ದಾಳೆ, ಭಾವನಾತ್ಮಕ ಮುಕ್ತತೆ:  ತನ್ನ ಗಂಡನಿಗೆ   ಸ್ವಂತ ಭಾವನೆಗಳ ಅರಿವು ಮೂಡಿಸುವುದು ತನ್ನನ್ನು ತಾನು ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರಬೇಕು  ಅದನ್ನು ಗಂಡನೊಂದಿಗೆ ಹೇಗೆ ಹಂಚಿಕೊಳ್ಳಬೇಕು. ಎಂಬುವುದು ಅರಿವಿರಬೇಕು,   ಸಮನ್ವಯ  ಹುಡುಗಿ ತನ್ನ ಗಂಡನೊಂದಿಗೆ ಮತ್ತು ಇತರರೊಂದಿಗೆ ಪ್ರಾಮಾಣಿಕವಾಗಿರುತ್ತಾಳೆ ಮತ್ತು ಅವರ ಭಾವನೆಗಳನ್ನು ಕುಶಲತೆಯಿಂದ ನಿರ್ವಹಿಸಲು ಅವಳು ಪ್ರಯತ್ನಿಸುವುದಿಲ್ಲ. ಜವಾಬ್ದಾರಿ: ಮನೆಯನ್ನು ಸುಂದರವಾಗಿ  ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವುದು ಮತ್ತು ಗಂಡನ  ಹದ್ದು  ಸಮಯ ಮತ್ತು ಭಾವನೆಗಳನ್ನು ಗೌರವಿಸುವುದು, ನಿಷ್ಕಳಂಕ  ಸ್ವಾಭಿಮಾನ: ತನ್ನ ಬಗ್ಗೆ ಹೆಮ್ಮೆ ಪಡಬೇಕೇ ಹೊರತು   ದುರಹಂಕಾರವಾಗಬಾರದು. ಗಂಡಸರು ತನ್ನ ಪತ್ನಿಯ   ಆರೋಗ್ಯ ಮತ್ತು ಅವಳ  ಖರ್ಚು ವೆಚ್ಚಗಳನ್ಧು  ಸರಿಯಾಗಿ ನಿಭಾಹಿಸಹೇಕು,  ಮತ್ತು ಅವಳನ್ನು ನಿಂದಿಸಲು ಯಾರಿಗೂ ಅವಕಾಶ ನೀಡಬೇಡಿ. ಗಂಡನಾದವನು   ಜೀವನದ ಕಡೆಗೆ ಸಕಾರಾತ್ಮಕವಾಗಿ ಚಿಂತಿಸಬೇಕು,  ಗಂಡ ಅದವನು ಅವಳ  ಪರಿಹಾರಗಳತ್ತ ಗಮನ ಹರಿಸಬೇಕಾಗಿದೆ, ತನಗೆ ಒದಗಿ ಬರುವ  ಸಮಸ್ಯೆಗಳನ್ನು , ಮತ್ತು ಅಡೆತಡೆಗಳನ್ನು ಅವಕಾಶಗಳಾಗಿ ಪರಿವರ್ತಿಸಲು  ಜನರಲ್ಲಿ ಒಳ್ಳೆಯದನ್ನು ನೋಡಲು  ಬಧ್ಧರಾಗಿರಬೇಕು, ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಎಚ್ಚರದಿಂದಿರಬೇಕಾದ  ಕೆಲವು ಅಂಶಗಳು   ಅವುಗಳೆಂದರೆ:  ಪ್ರಣಯ ಪ್ರೀತಿ ಪ್ರೇಮ ಸ್ನೇಹ  ಇವೆಲ್ಲವೂ ಒಂದೇ ನಾಣ್ಯದ ಹಲವು ಮುಖಗಳು : ಪ್ರೀತಿ ಎಂಬುವುದು    ಪತಿ ಪತ್ನಿ ಯರ  ನಡುವಿನ ಸಂಬಂಧದ ಒಂದು ದೊಡ್ಡ ಭಾಗವಾಗಿದೆ, ಮತ್ತು ಸಂತೋಷದ ದಾಂಪತ್ಯವನ್ನು ಪಡೆಯುವ ಪ್ರಮುಖ ಅಂಶವಾಗಿದೆ, ಆದರೆ ಅದು ಇತರ ಪ್ರಮುಖ ಅಂಶಗಳಿಲ್ಲದೆ ಸಾಕಾಗುವುದಿಲ್ಲ.ಇದನ್ನು ಮೂಲತಃ ಅಳವಡಿಸಿಕೊಳ್ಳಬಹುದು. ಭಯ:ಹೆದರಿಕೆ ತನ್ನ  ಜೀವನ ಸಂಗಾತಿಯನ್ನು  ಆಯ್ಕೆ ಮಾಡುವ ಸಮಯದಲ್ಲಿ  ಪರಿಣಾಮ ಬೀರುವ ಕೆಟ್ಟ ಅಂಶಗಳಲ್ಲಿ ಭಯವು ಒಂದು, ಏಕೆಂದರೆ ಸಮಾಜವನ್ನು ಬೆಳೆಸುವ ವಿಧಾನವು ಕಲ್ಪನೆಯಲ್ಲಿ ಬೇರೂರಿದೆ, ಉದಾಹರಣೆಗೆ ಮದುವೆಯಿಲ್ಲದೆ ವಯಸ್ಸನ್ನು ಮುಂದುವರೆಸುವ ಭಯ, ಅಥವಾ ವ್ಯಕ್ತಿಯು ತನ್ನ ಸ್ನೇಹಿತರಲ್ಲಿ ಹಾಗೂ ಪರಿಚಯಸ್ತರಲ್ಲಿ  ಒಬ್ಬಂಟಿಯಾಗಿರುವ ಭಯ , ಆದರೆ ರೀತಿಯ ಭಯವು ಅಭಾಗಲಬ್ಧವಾಗಿದೆ,  ಒಬ್ಬ ವ್ಯಕ್ತಿಯು ತನ್ನ ಜೀವನದ  ಕೊನೆಯ  ಮೂರನೇ ಎರಡರಷ್ಟು ಭಾಗವನ್ನು ತಪ್ಪು ವ್ಯಕ್ತಿಯೊಂದಿಗೆ ಕಳೆಯಲು ಕಾರಣವಾಗುತ್ತಾನೆ    ಏಕೆಂದರೆ ಸಂಬಂಧವು ಜೀವನದುದ್ದಕ್ಕೂ ಇರುತ್ತದೆ. ನಿಮ್ಮ ಜೀವನ ಸಂಗಾತಿ   ಮೌಖಿಕ ಅಥವಾ ದೈಹಿಕ ಕಿರುಕುಳವನ್ನು ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಆದ್ಯತೆಗಳನ್ನು ನಿರ್ಧರಿಸುವುದು, ಇದರ ಮೂಲಕ: ಮಕ್ಕಳನ್ನು ಹೊಂದುವ ಬಯಕೆ ಅಥವಾ ಮಗುವನ್ನು ಹೊಂದುವ ಸಮಯವನ್ನು ನಿರ್ಧರಿಸುವುದು. ಪದ್ಧತಿಗಳು, ಸಂಪ್ರದಾಯಗಳು ಮತ್ತು ಧರ್ಮದ ಪ್ರಾಮುಖ್ಯತೆ ಮತ್ತು ಸಂಬಂಧದ ಮೇಲೆ ಅವುಗಳ ಪ್ರಭಾವವನ್ನು ನಿರ್ಧರಿಸಿ. ಹಣವನ್ನು ಖರ್ಚು ಮಾಡುವ ವಿಧಾನ ಮತ್ತು ವ್ಯಾಪ್ತಿಯನ್ನು ನಿರ್ಧರಿಸಿ. ಸಮಯವನ್ನು ತೆಗೆದುಕೊಳ್ಳುವುದು ಮತ್ತು ತಾಳ್ಮೆಯಿಂದಿರುವುದು, ಸಂಬಂಧವನ್ನು ಪ್ರಾರಂಭಿಸುವ ಮೊದಲು ಮೌಲ್ಯಗಳು, ಆಸೆಗಳು ಮತ್ತು ವಿಶೇಷ ಅಗತ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಆದ್ದರಿಂದ ಜೀವನ ಸಂಗಾತಿಯ  ವ್ಯಕ್ತಿತ್ವ, ಆಲೋಚನೆಗಳು ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕು...ಆಲೋಚನೆ ಮಾಡಿ ಮದುವೆ ಯಾದರೆ ಅಲ್ಲಿ ಸಂಬಂಧಗಳು ಬೆಟ್ಟಗಳ ಹಾಗೆ ಬೇರೂರಿ ನಿಲ್ಲುತ್ತವೆ...

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...