Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.

ವಿವಾದಗಳ ನಿರ್ಮಾಪಕರಾಗದೆ ನಿವಾರಕರಾಗೋಣ

✍️ *ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ*

ಕೆಲವರಿಗೆ ವಿವಾದಗಳೇ ಬೇಕು.ವಿವಾದಗಳಿಲ್ಲದೆ ಅವರಿಗೆ ಜೀವನವೇ ಇಲ್ಲ.


ಊಟದಲ್ಲಿ ಕಲ್ಲು ಸಿಕ್ಕರೆ ಕಲ್ಲನ್ನು ಬೀಸಾಡಿ ಊಟ ಮುಂದುವರಿಸ ಬೇಕು.ಇದು ಬುದ್ಧಿ ವಂತಿಕೆ.

ಅಲ್ಲದೆ ಊಟದ ಮುಂದೆ ಕುಳಿತು ಕಲ್ಲನ್ನೇ ಹುಡುಕುವವನಿಗೆ ಊಟ ಮಾಡಲು ಸಾಧ್ಯವಿಲ್ಲ.

ಅವನ ಸಮಯಗಳನ್ನೆಲ್ಲಾ 

ಕಲ್ಲು ಹುಡುಕುವುದರಲ್ಲೇ ಕಳೆಯಬೇಕಾಗುತ್ತದೆ.

ಇದೇ ರೀತಿ ಇಂದು 

ಮುಸ್ಲಿಂ ಸಮುದಾಯದ ಹೆಸರಿನಲ್ಲಿ  ಕೆಲವರು ವಿವಾದಗಳನ್ನೇ ಹುಡುಕಿ

ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ಇಲ್ಲಸಲ್ಲದ ಅಂತೆಕಂತೆಗಳನ್ನು ಸೃಷ್ಟಿಸಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕಿ ಬಿಡುತ್ತಾರೆ. ಇದರಿಂದ ಮುಸ್ಲಿಮರ ವಿರುದ್ಧ ಸದಾ ಸಂಘರ್ಷವನ್ನೇ ಬಯಸುವ ವಿಚಿದ್ರಕಾರಿ ಮನೋಭಾವದವರಿಗೆ ಆಹಾರವನ್ನು ನೀಡುತ್ತಾರೆ.

ಸಾವಿರಾರು ವರ್ಷಗಳಲ್ಲಿ ಈ ಭಾರತದಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ.

ಈ ಸುದೀರ್ಘ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ.

ಆದರೆ ಯಾವತ್ತೂ ಅನಾವಶ್ಯಕ ವಿಚಾರವಿವಾದಗಳಲ್ಲಿ ಏರ್ಪಡುತ್ತಿರಲಿಲ್ಲ.

ಯಾಕೆಂದರೆ ಇಲ್ಲಿ ಎಷ್ಟು ವಿವಾದಗಳು ಸೃಷ್ಟಿಯಾಗುತ್ತಿದೆಯೋ ಅಷ್ಟೇ ಲಾಭವನ್ನು ಇಲ್ಲಿನ ಕೋಮುವಾದಿ ಶಕ್ತಿಗಳು  ಪಡೆಯುತ್ತವೆ.

ಆದರೂ ಈ ದೇವಾಸಿಗಳಲ್ಲಿ ಬಹುತೇಕರು ಅವರು ಯಾವುದೇ ಜಾತಿ ಧರ್ಮ ವರ್ಗ ವರ್ಣ ಗಳಿಗೆ ಸೇರಿದವರಾದರೂ ಅವರೆಲ್ಲರೂ ನೆಮ್ಮದಿಯ ವಾತಾವರಣ ವನ್ನು ಬಯಸುತ್ತಾರೆ ಯೇ ಹೊರತು ಸಂಘರ್ಷವನ್ನು ಇಷ್ಟ ಪಡುವುದೇ ಇಲ್ಲ.

ಹೀಗಿರುವಾಗ ಸಣ್ಣ ಪುಟ್ಟ ಕಾರ್ಯಗಳನ್ನು ವೈಭವೀಕರಿಸಿ ವಿವಾದಗಳನ್ನು ಸೃಷ್ಟಿಸುವುದರಿಂದ ಮುಸಲ್ಮಾನರು ಇಲ್ಲಿ ಎಲ್ಲರಿಗೂ ಎಲ್ಲದರಲ್ಲೂ ಸಮಸ್ಯೆ ಎಂಬ ವಿರೋಧಿಗಳ ಅಪಪ್ರಚಾರ ಕ್ಕೆ ಪುಷ್ಠಿ ದೊರೆತಂತಾಗುತ್ತದೆ.

ಇದರಿಂದ ಮತ್ತಷ್ಟು ಉತ್ತಮ ಮನಸ್ಸುಗಳು ಮುಸ್ಲಿಮರಿಂದ ದೂರವಾಗುವ ಸಾಧ್ಯತೆ ಇದೆ.

ಇದು ಮುಸ್ಲಿಂ ವಿರೋಧಿಗಳಿಗೆ ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೂ ಹಾಲು ಎಂಬ ಗಾದೆಯಂತಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದರಿಂದಾಗಿ ಮುಸ್ಲಿಮರು ಇಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿದೆ.

ಅನೇಕ ವರ್ಷಗಳಿಂದ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳಿಗೆ ಸೊಪ್ಪು ಹಾಕದ ಉದಾತ್ತ ಮನಸ್ಸಿನ ವಕ್ತಾರರ ಒಂದು ದೊಡ್ಡ ವಿಭಾಗ ಇವತ್ತೂ ಸಹ ಈ ಭಾರತದ ಮಣ್ಣಿನಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು.

ಮೊನ್ನೆ ಪಡುಬಿದ್ರಿ ಬೀಚಿನಲ್ಲಿ ನಡೆದ ಒಂದು ನಮಾಝಿನ ವಿವಾದದ ವೀಡಿಯೋ ನೋಡಿದಾಗ ಹೀಗೆ ಗೀಚಬೇಕೆಂದನಿಸಿತು.

Comments

Popular Posts