ಪ್ರೀತಿಗೆ ರೇಖೆಗಳಿಲ್ಲ ಅದೊಂದು ರೋಮಾಂಚಕ ಸತ್ಯ ಘಟಣೆ ದುರಂತಗಳು ಯಾವ ರೂಪದಲ್ಲೆಲ್ಲ ನಮ್ಮನ್ನು ಹಿಂಬಾಲಿಸುತ್ತಾ ಇದೆ ನಮ್ಮ ಊಹೆಗೂ ತಿಳಿಯದೇ ಇರುವ ವಿಷಯ ವಾಗಿದೆ ಪ್ರೀತಿ ಪ್ರೇಮ ಮನುಷ್ಯನಿಗೆ ಎಲ್ಲವನ್ನೂ ಕಲಿಸುತ್ತವೆ ನಾವು ಜೀವನದಲ್ಲಿ ಪ್ರತಿಯೊಬ್ಬರನ್ನೂ ಷ್ರೀತಿಸುತ್ತೇವೆ ತಂದೆ ತಾಯಿ ಅಣ್ಣ ತಂಮ್ಮಂದಿರ ಪ್ರೀತಿ ಅದು ಯಾವ ದಿಕ್ಕಿನಲ್ಲಿ ನೋಡಿದರೂ ನಿಭಾಯಿಸಲೇ ಬೇಕು ಆದರೆ ನಿಮ್ಮ ಒಡ ಹುಟ್ಟದ ಎಲ್ಲಿಂದಲೋ ತಂದೆ ತಾಯಿಯನ್ನು ಬಿಟ್ಟು ಒಬ್ಬಾಕೆ ತನ್ನ ಪತಿಯ ಸಹಬಾಗಿತ್ವದಲ್ಲಿ ಜೀವಿಸುತ್ತಾಳೆ ಎಂದರೆ ಅದು ಯಾರಿಂದಲೂ ವರ್ಣಿಸಲು ಸಾಧ್ಯವಾಗದ ಮಾತು ಪತ್ನಿಯನ್ನು ಪ್ರೀತಿಸಿದ ಅನೇಕ ಗಂಡಂದಿರ ಇತಿಹಾಸಗಳು ನಮ್ಮ ಮುಂದೆ ಸಾಕಷ್ಟು ಕಾಣ ಸಿಗುವುದು ಭಾರತದಲ್ಲಿ ಶಾಜಹಾನ್ ರವರು ತನ್ನ ಪತ್ನಿ ಮುಂತಾಝ್ ಗಾಗಿ ತಾಜ್ ಮಹಲ್ ಎಂಬ ಪ್ರೀತಿಯ ಗೋಪುರವನ್ನು ಕಟ್ಟಿ ಲೋಕದಲ್ಲಿ ಪ್ರತಿಯೊಬ್ಬರಿಗೂ ಆ ಪ್ರೇಮ ಸ್ಮಾರಕ ನೋಡಬೇಕೆಂಬ ಹಂಬಲ ಮೂಡಿಸಿದರು ಆದರೆ ಇದೊಂದು ಅದೇ ತರಹದ ಸತ್ಯ ಘಟಣೆ ನಮ್ಮ ನೆರೆಯ ದೇಶ ಪಾಕಿಸ್ತಾನದ ಉಮರ್ ಕೋಟ್ ನ ಒಬ್ಬ ಪ್ರಜೆ ತನ್ನ ಮರಣ ಹೊಂದಿದ ಪತ್ನಿಗಾಗಿ ತಾಜ್ ಮಹಲ್ ಕಟ್ಟಿಸಿದನು ಅವರ ಪತ್ನಿ ಮರ್ಯಮ್ ಅವರ ಮದುವೆ ಮನೆಯವರ ಸಮ್ಮತದಲ್ಲಿ ನಡೆದ ಮದುವೆ ಹದಿನೆಂಟನೇ ವಯಸ್ಸಿನ ಹದಿ ಹರೆಯದ ಹುಡುಗ ಮದುವೆ ಆಗಿದ್ದು ನಲವತ್ತು ವರ್ಷ ಪ್ರಾಯದ ಹೆಂಗಸು ನಲವತ್ತು ವರ್ಷಗಳ ಕಾಲ ಪ್ರೀತಿ ಪ್ರೇಮದಿಂದ ಜೀವನ ನಡೆಸಿ ಒಂದಾಗಿ ಬಾಳಿದ ಆ ದಂಪತಿಯ ದಾಂಪತ್ಯ ಜೀವನ ಅದ್ಭುತ ವಾದದ್ದು ಸರಳವಾದ ಜೀವನ ಜೀವಿಸಿದ ಉಮರ್ ರಾತ್ರಿ ತಡವಾಗಿ ಮನೆಗೆ ಬಂದರೆ ಯಾವತ್ತೂ ಆಹಾರದ ನೆಪದಲ್ಲಿ
ಪತ್ನಿಯನ್ನು ಪೀಡಿಸುತ್ತಿರಲಿಲ್ಲ ನಮ್ಮ ಮಧ್ಯೆ ಜಗಳವಾಗಿಲ್ಲ ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ ಎನ್ನುತ್ತಾರೆ ಅವಳಿಗೆ ಬಳೆ ಇಷ್ಟ ಇರುವುದರಿಂದ ನಾನು ಅದನ್ನು ಖರೀದಿಸುತ್ತಿದೆ ಒಮ್ಮೊಮ್ಮೆ ಅವಳನ್ನು ವರ್ಣಿಸುತ್ತಾ ಕವನ ಗಳನ್ನು ಹೇಳುತ್ತಿದ್ದೆ .1980 ರಲ್ಲಿ ಭಾರತ ಸಂದರ್ಶಿಸಿದೆ ಅಲ್ಲಿನ ತಾಜ್ ಮಹಲ್ ನೋಡಿದೆ ಅಲ್ಲಿಂದ ಹಿಂತಿರುಗಿ ಮನೆಗೆ ಬಂದೆ ರಾತ್ರಿ ಕನಸಿನಲ್ಲಿ ನೋಡಿದೆ ನಮ್ಮ ಖಬರ್ಸ್ತಾನದಲ್ಲಿ ಒಂದು ತಾಜ್ ಮಹಲ್ ನೆಲೆ ನಿಂತಿದೆ ನಾನು ನನ್ನ ಪತ್ನಿಯ ಮರಣದ ನಂತರ ಅವಳ ಸಮಾದಿಯಲ್ಲಿ ಒಂದು ಅದ್ಭುತ ತಾಜ್ ಮಹಲ್ ನಿರ್ಮಿಸಿದೆ ಅವಳು ಇಂದಿಗೂ ನನಗೆ ನೆನಪಾಗುತ್ತಾಳೆ
ದಂಪತಿಗಳು ತನ್ನ ದಾಂಪತ್ಯ ಜೀವನದಲ್ಲಿ ಹಲವು ಅಡೆ ತಡೆ ಗಳು ಬಂದರೂ ಯಾವತ್ತೂ ಒಂದಾಗಿ ಬಾಳುವ ಪ್ರತಿಜ್ಞೆ ಮಾಡಬೇಕು...
No comments:
Post a Comment