Featured
- Get link
- X
- Other Apps
ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು
ಸುಪ್ತಾವಸ್ತೆಯ ಶಿಕ್ಷೆಯಿಂದ ಜಾಗ್ರತರಾಗಿರು
ಒಮ್ಮೆ ಒಬ್ಬ ಬಾಲಕ ಹಸನುಲ್ ಬಸ್ರೀ (ರ.ಅ)ರವರ ಬಳಿ ಬಂದು ಹೀಗೆ ಕೇಳಿದನು
ಓ ಶೈಖರೇ ನಾನು ಹಲವರಿಂದ ಕೇಳಿದೆ ಅಲ್ಲಾಹು ಎಲ್ಲಾ ಪಾಪಗಳಿಗೆ ಶಿಕ್ಷೆ ನೀಡಲಿದ್ದಾನೆ. ಆದರೆ ನಾನು ತುಂಬಾ ಪಾಪ ಮಾಡಿದವನಾಗಿದ್ದೇನೆ ನನಗೇಕೆ ಶಿಕ್ಷೆ ಆಗಲಿಲ್ಲ. ಎಂದು ಕೇಳಿದ ತಕ್ಷಣವೇ ಹಸನುಲ್ ಬಸ್ರಿ ಹೇಳಿದರು. ಓ ಬಾಲಕ ಅಲ್ಲಾಹನು ಅನೇಕ ಸಲ ನಿನ್ನನ್ನು ಶಿಕ್ಷಿಸಿದ್ದಾನೆ ನಿನಗೆ ತಿಳಿಯಲಿಲ್ಲವೇ.
ಬಾಲಕ ಕೇಳಿದ ಹೇಗೆ ಶೈಖರೇ ವಿವರಿಸಿ ಆವಾಗ ಹಸನುಲ್ ಬಸ್ರಿ ರ.ಅ ಹೇಳಿದರು.
ನೀನು ಅಲ್ಲಾಹನನ್ನು ಶ್ರದ್ಧೆಯಿಂದ ಕೂಗಿ ಪ್ರಾರ್ಥಿಸುವ ಭಾಗ್ಯ ಇಲ್ಲವಾಗಿಸಲಿಲ್ಲವೇ. ಕುರ್ಆನ್ ಪಾರಾಯಣ ಮಾಡದೆ ಎಷ್ಟೋ ದಿವಸ ನೀನು ಕಳೆಯಲಿಲ್ಲವೇ. ರಾತ್ರಿಯಲ್ಲಿ ಎದ್ದು ಪ್ರಾರ್ಥಿಸುವುದರಿಂದ ವಂಚಿತನಾಗಲಿಲ್ಲವೇ. ಕಾಮ ಹಣದ ಆಸೆ ಎಂಬ ದುರಬ್ಯಾಸದ ಸಂಕೋಲೆಯಲ್ಲಿ ಸಿಲುಕಿ ಕೊಳ್ಳಲಿಲ್ಲವೇ. ನಿನ್ನ ಹ್ರದಯದಲ್ಲಿ ಅಲ್ಲಾಹನ ಸ್ಮರಣೆಯ ಅನುಗ್ರಹ ಬಾರವೆಂದು ಭಾವಿಸಿ ಅವನ ಸ್ಮರಣೆಯಿಂದ ವಂಚಿತನಾಗಲಿಲ್ಲವೇ.. ಸುಳ್ಳು ಫಿತ್ನ ಫಸಾದ್ ಪರದೂಷಣ ಗಳಿಂದ ನಿನ್ನ ನಾಲಿಗೆ ಕಾರ್ಯನಿರತ ಆಗಲಿಲ್ಲವೇ. ಪರಲೋಕ ವನ್ನು ಮರೆತು ಇಹ ಲೋಕದ ಆಡಂಬರದ ಜೀವನವನ್ನು ಮೈಗೂಡಿಸಿ ಕೋಳ್ಳಲಿಲ್ಲವೇ. ರಂಝಾನ್ ಶವ್ವಾಲ್ ಹಜ್ ಗಳಂತಹ ತಿಂಗಳು ಗಳ ಗೌರವವನ್ನು ಕಡೆಗಣಿಸಿ ನಡೆಯಲಿಲ್ಲವೇ.
ನೆನಪಿಡು ಅಲ್ಲಾಹನ ಶಿಕ್ಷೆ ಅತೀ ಕಠೋರವಾದದ್ದು.
ನೀನು ಊಹಿಸುವುದಕ್ಕಿಂತ ಅದೇನಂದರೆ
ನಿನಗೆ ಪರ ಲೋಕ ವನ್ನು ಮರೆತು ಬಿಡುವಂತಹ ಇಹಲೋಕ ದ ಸರ್ವ ಸಂಪತ್ತು ಗಳನ್ನು ಒದಗಿಸಿ ಕೊಡುವುದು. ಧಾರ್ಮಿಕ ವಿದ್ಯೆಗೆ ಬದಲಾಗಿ ಲೌಕಿಕ ವಿಧ್ಯೆ ಒದಗಿಸಿ ಕೊಡುವುದು. ನಿನಗೆ ಅಧಿಕ ಸಂಪತ್ತು ನೀಡುವುದು. ಆದರೆ ಅಲ್ಲಾಹನ ಅನುಸರಣೆ ಹಾಗು ಪ್ರಾರ್ಥನೆ ಯಿಂದ ವಂಚಿತನಾಗುವೆ. ಇದಾಗಿದೆ ಅಲ್ಲಾಹನ ಇಹ ಲೋಕದ ಅತೀ ಕಠೋರ ವಾದ ಶಿಕ್ಷೆ. ನಿನಗೆ ಅರಿವಿಲ್ಲದೆ ಹೇಗಲ್ಲ ಶಿಕ್ಷಿಸಿದ ಮಾನವ. ಎಚ್ಚೆತ್ತುಕೋ ನಿನ್ನ ಮರಣ ಸಮೀಪಿಸುವ ಮುನ್ನ...
Popular Posts
ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?
- Get link
- X
- Other Apps
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?
- Get link
- X
- Other Apps
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ
- Get link
- X
- Other Apps
ಅನೈತಿಕತೆ ಹಾಗೂ ಕೆಟ್ಟದ್ದನ್ನು ನಿಷೇಧಿಸುವ ವಿಶೇಷ ಪ್ರಾರ್ಥನೆ ಗಳಲ್ಲಿ ಒಂದಾಗಿದೆ
- Get link
- X
- Other Apps
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen
- Get link
- X
- Other Apps
ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ
- Get link
- X
- Other Apps
Comments