Skip to main content

Featured

ಮದೀನಾ ಹೆದ್ದಾರಿಯಲ್ಲಿ ಭಯಂಕರ ದುರಂತ

ಸೌದಿ ಅರೇಬಿಯಾದ ಮದೀನಾದಲ್ಲಿ ಸೋಮವಾರ ಬೆಳಿಗ್ಗೆ ಒಂದು ಭಯಂಕರ  ದುರಂತ ಅಪಘಾತ ಸಂಭವಿಸಿದ್ದು, ಭಾರತದ ಆನೇಕ ಯಾತ್ರಿಕರು ಮರಣ ಹೊಂದಿದ್ದಾರೆ. ಮೆಕ್ಕಾ-ಮದೀನಾ ಹೆದ್ದಾರಿಯಲ್ಲಿ ಮದೀನಾ ಯಾತ್ರಿಗಳ ಬಸ್ ತೈಲ ಟ್ಯಾಂಕರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿ ಅನೇಕ ಪ್ರಯಾಣಿಕರು ತಕ್ಷಣ ಅಲ್ಲಾಹನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ  ಈ ಘಟನೆಯ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಸೆರೆಹಿಡಿಯಲಾದ ಆಘಾತಕಾರಿ ದೃಶ್ಯಗಳ ನಡುವೆ ಅರಬ್ ಮತ್ತು ಜಾಗತಿಕ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಮರಣ ಹೊಂದಿದ ಜನರ ಸಂಖ್ಯೆ ಸೌದಿ ಅರೇಬಿಯಾ ಮತ್ತು ಭಾರತದಿಂದ ಅಧಿಕೃತ ಪ್ರತಿಕ್ರಿಯೆಗಳು ಮತ್ತು ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಡೆಯುತ್ತಿರುವ ತನಿಖೆಯ ನವೀಕರಣಗಳನ್ನು ಒಳಗೊಂಡಂತೆ ಮದೀನಾ ಅಪಘಾತದ ಸಂಪೂರ್ಣ ವಿವರಗಳನ್ನು ನಾವು ಪ್ರಸ್ತುತಪಡಿಸುತ್ತೇವೆ. ಸೌದಿ ಮತ್ತು ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಸುಮಾರು 46 ಭಾರತೀಯ ಯಾತ್ರಿಕರನ್ನು ಹೊತ್ತ ಬಸ್ ಮೆಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮಸೀದಿಗೆ ಭೇಟಿ ನೀಡಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 1:30 ಗಂಟೆಗೆ (ಸೌದಿ ಕಾಲಮಾನ ಸುಮಾರು 5:00 ಗಂಟೆಗೆ), ಬಸ್ ಹೆದ್ದಾರಿಯಲ್ಲಿ ...

ಮತ್ತೊಮ್ಮೆ ಮುಸಲ್ಮಾನರನ್ನು ಕೆಣಕಿಸುವ ಹುನ್ನಾರವೇ




ಇತ್ತೀಚಿಗೆ ನಡೆದ ಸಾಮೂಹಿಕ ಸಭೆಯಲ್ಲಿ ಮುಸಲ್ಮಾನ ಮಹಿಳೆಯರ ವಿರುದ್ಧ ಅಸಬ್ಯ ಮಾತುಗಳನ್ನು ಆಡಿ ಮತ್ತೊಮ್ಮೆ ಈ ದೇಶದ ಪ್ರಜ್ಞಾವಂತರ ಮನಸ್ಸಿಗೆ ತನ್ನ ಹರಿತವಾದ ನಾಲಿಗೆಯಿಂದ ವಿಶ ಕಾರಿದ ಕಲ್ಲಡ್ಕ ಪ್ರಬಾಕರ ಭಟ್ಟರು ಒಂದು ಪಂಗಡಕ್ಕೆ ಮಾತ್ರವಲ್ಲ ಇಡೀ ಮಾನವ ಸಮೂಹದ ತಲೆ ತಗ್ಗಿಸಿ ನಡೆಯಬೇಕಾದ ಪರಿಸ್ಥಿತಿ ಯನ್ನು ಶ್ರಸ್ಟಿಸಿದರು ಇಲ್ಲಿ ತಾನು ಇನ್ನೋಂದು ಸಮೂಹವನ್ನು ದೂರಿ ಎಷ್ಟು ಸಮಯ ತಾನು ಸುಖವಾಗಿರಲು ಸಾಧ್ಯ ಇಲ್ಲಿ ಒಬ್ಬ ಮಹಿಳೆಯನ್ನು ಅಸಬ್ಯ ಮಾತಿನಿಂದ ಗಾಯ ಗೊಳಿಸಿದ್ದು ಮಾತ್ರವಲ್ಲ ಆ ಮಹಿಳೆಯರಲ್ಲಿ ಒಬ್ಬ ತಾಯಿ ತಂಗಿ ಅಕ್ಕ ಮಡದಿ ಇಂತಹ ಅನೇಕ ಸಂಬದಗಳು ಅಡಗಿವೆ ತಾನೂ ಕೂಡ ಒಂದು ಮಹಿಳೆಯ ಮುಕಾಂತರವೇ ಈ ಲೋಖ ಪ್ರವೇಶಿಸಿದ್ದು ಎಂಬ ಜ್ನಾನ ಕೂಡ ಇರಬಾರದೇ ಇಲ್ಲಿ ಏನೇ ಮಾಡಿದರೂ ಸಹಿಸಿ ಕೊಳ್ಳುವ ಶಕ್ತಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಇರಬೇಕೆಂದೇನಿಲ್ಲ

ಸ್ವಾತಂತ್ರ ಭಾರತದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ನಮ್ಮ ಪದಗಳು ಇನ್ನೊಬ್ಬರ ಮನಸ್ಸಿಗೆ ಗಾಯವಾಗದಿರಲಿ ಇದೊಂದು ಟ್ರೇಲರ್ ಅಷ್ಟೇ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿವೆ ಬಹು ಸಂಖ್ಯಾತರ ಓಟು ಪಡೆಯಲು ಮಾಡುವ ಹುನ್ನಾರವೆ ಒಂದು ಸಮುದಾಯದ ಮಹಿಳೆಯನ್ನು ನಿಂದಿಸಿ ತನ್ನ ರಾಜಕೀಯ ಬೇಳೆಯಬೇಯಿಸಲು ಇದೂ ಒಂದು ಪ್ರಯೋಗ ಎಂದೇ ಹೇಳಬಹುದು ಇಲ್ಲಿ ಅಲ್ಪ ಸಂಖ್ಯಾತರಿಗೆ ಏನೇ ಹೇಳಿದರೂ ಜಾಮೀನು ರಹಿತ ಹೊರಬರಬಹುದು ಎಂಬ ದ್ರಡ ನಂಬಿಕೆ ಇಂತಹವರ ಮೂಲ ಶಕ್ತಿ ಇದಕ್ಕೆ ಸರ್ಕಾರ ತಕ್ಕದಾದ ಶಿಕ್ಷೆ ನೀಡಬೇಕು ಇಂತಹ ಅನಾಹುತಗಳು ಮತ್ತೆ ನಡೆಯದೇ ಇರಲಿಕ್ಕೆ ಜಾಗ್ರತಾ ಕ್ರಮ ನಡೆಯಬೇಕು

ABUYAMIN ALQADRI OFFICIAL

Comments

Popular Posts