Featured
- Get link
- X
- Other Apps
SYS ಸಮ್ಮೇಳನ ವಿಜಯಗೊಳಿಸಿ.
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ.........
ಕಳೆದ 30 ವರ್ಷಗಳಿಂದ ಕರುನಾಡ ಮಣ್ಣಿನಲ್ಲಿ ಅತ್ಯಂತ ಶಿಸ್ತು ಬದ್ಧ ಸಂಘಟನೆಯಾಗಿ ಉಲಮಾ ಉಮರಾ ಸಮೂಹವನ್ನು ಒಗ್ಗೂಡಿಸಿ ಇಸ್ಲಾಮಿನ ನೈಜ ತತ್ವಾದರ್ಶಗಳನ್ನು ಸಂರಕ್ಷಣೆ ಮಾಡುತ್ತಾ ಕಾರ್ಯಾಚರಿಸುವ ಮಾದರೀ ಸಂಘಟನೆಯಾಗಿದೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ).
ಶಿಕ್ಷಣ,ಸಾಂತ್ವನ,ಸಾಂಸ್ಕೃತಿಕ,ಸಾಮಾಜಿಕ,ಧಾರ್ಮಿಕ ಮುಂತಾದ ವಲಯಗಳಲ್ಲಿ ಶ್ಲಾಘನೀಯ ಸೇವೆಗಳನ್ನು ಮಾಡುತ್ತಾ ಜನಶ್ರದ್ಧೆಯನ್ನು ಪಡೆದು ಇದೀಗ ಮೂವತ್ತರ ಸಂಬ್ರಮದಲ್ಲಿದೆ SYS.
ಕಳೆದ ಒಂದು ವರ್ಷವನ್ನು ಮೂವತ್ತನೇ ವಾರ್ಷಿಕ ವರ್ಷವೆಂದು ಘೋಷಿಸಿ ವಿವಿಧ ಗಮನಾರ್ಹ ಕಾರ್ಯಕ್ರಮಗಳ ಮೂಲಕ ಆಚರಿಸಿ ಇದೀಗ ಜನವರಿ 24 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾರೋಪ ಮಹಾ ಸಮ್ಮೇಳನ ನಡೆಯಲಿದೆ.
ಕಳೆದ ಹಲವು ದಿನಗಳಿಂದ ಇದರ ರಾಜ್ಯಾಧ್ಯಕ್ಷ ಬಹು ಹಫೀಳ್ ಸಅದಿ, ಪ್ರಧಾನ ಕಾರ್ಯದರ್ಶಿ ಸಾದಿಖ್ ಮಾಸ್ಟರ್ ಮಲಬೆಟ್ಟು, ಕೊಶಾಧಿಕಾರಿ ಅಡ್ವೊಕೇಟ್ ಹಂಝತ್ ಹಾಗೂ ಸ್ವಾಗತ ಸಮಿತಿ ಚೇರ್ಮನ್ ಮುಂತಾಝಲಿ ಹಾಜಿ ಕನ್ವೀನರ್ ಶಕೀರ್ ಹಾಜಿ ಟ್ರಶರರ್ ಶಾಫಿ ಸಅದಿ ಮುಂತಾದವರ ನಾಯಕತ್ವದಲ್ಲಿ ಭರ್ಜರಿ ಸಿದ್ದತೆಗಳು ಬರದಿಂದ ನಡೆಯುತ್ತಿದೆ.
ಜಾಗತಿಕ ವಿದ್ವಾಂಸ ಇಂಡಿಯನ್ ಗ್ರಾಂಡ್ ಮುಫ್ತಿ ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಾಯಕತ್ವದಲ್ಲಿ ನಡೆಯುವ ಪ್ರಸ್ತುತ ಐತಿಹಾಸಿಕ ಸಮ್ಮೇಳನದಲ್ಲಿ ಲಕ್ಷಾಂತರ ಜನ ಬಾಗವಹಿಸುವ ನಿರೀಕ್ಷೆಯಿದೆ.
ಎಲ್ಲಾ ಸಹೋದರರು ಪ್ರಸ್ತುತ ಸಮ್ಮೇಳನದಲ್ಲಿ ಬಾಗವಹಿಸಿ ಸಂಪೂರ್ಣ ಯಶಸ್ವಿಗೊಳಿಸಿ ದನ್ಯರಾಗಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಹು ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಕರೆ ನೀಡಿರುತ್ತಾರೆ.
ವರದಿ: ಅಬ್ದುಸ್ಸಲಾಮ್ ಮದನಿ ಗುಂಡುಕಲ್ಲು...
Popular Posts
ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?
- Get link
- X
- Other Apps
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?
- Get link
- X
- Other Apps
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ
- Get link
- X
- Other Apps
ಅನೈತಿಕತೆ ಹಾಗೂ ಕೆಟ್ಟದ್ದನ್ನು ನಿಷೇಧಿಸುವ ವಿಶೇಷ ಪ್ರಾರ್ಥನೆ ಗಳಲ್ಲಿ ಒಂದಾಗಿದೆ
- Get link
- X
- Other Apps
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen
- Get link
- X
- Other Apps
ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ
- Get link
- X
- Other Apps
Comments